Author: AIN Author

ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ, ಆರೋಗ್ಯದ ಸುಧಾರಣೆಗೆ, ಕುರುಕಲು ಹಾಗೂ ಆಹಾರ ಪದಾರ್ಥಗಳ ತಯಾರಿಸಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಹೆಚ್ಚು ಪೋಷಕಾಂಶದ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಆಹಾರ ಪದಾರ್ಥಗಳಿಗೆ ಉತ್ತಮ ರುಚಿಯನ್ನು ನೀಡುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ, ಪೌಷ್ಠಿಕಾಂಶ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಶಕ್ತಿಯನ್ನು ಒಳಗೊಂಡಿದೆ. ತ್ವಚೆಯ ಮೇಲೆ ಹೊಳಪನ್ನು ತರಲು ಸಹಕಾರಿ: ಹೊಕ್ಕಳಲ್ಲಿ ಎಣ್ಣೆಯನ್ನು ಹಾಕುವುದರಿಂದ ಅದರ ಪರಿಣಾಮವು ನಿಮ್ಮ ಚರ್ಮದ ಮೇಲೆ ನೇರವಾಗಿ ಗೋಚರಿಸುತ್ತದೆ. ಹೌದು, ಇದು ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ನೀವು ಆಲಿವ್ ಎಣ್ಣೆಯಿಂದ ಹೊಕ್ಕಳನ್ನು ಮಸಾಜ್ ಮಾಡಿದರೆ, ಕೆಲವೇ ದಿನಗಳಲ್ಲಿ ಈ ಪರದೆಯ ಮೇಲೆ ವ್ಯತ್ಯಾಸವು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಯಾವುದೇ ಅಲರ್ಜಿಯ ಸೋಂಕು ಚರ್ಮಕ್ಕೆ ಸಂಬಂಧಿಸಿದೆ, ಅದು ಸಹ ಹೋಗುತ್ತದೆ. ಕೂದಲನ್ನು ಗಟ್ಟಿಯಾಗಿಸಿ: ಮಹಿಳೆಯರು ಸಾಮಾನ್ಯವಾಗಿ ತಮ್ಮ ಕೂದಲು ದುರ್ಬಲವಾಗಿದೆ, ದಪ್ಪವಾಗಿಲ್ಲ ಅಥವಾ ಹೆಚ್ಚು ಉದುರುತ್ತಿದೆ ಎಂದು ದೂರುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ, ತೆಂಗಿನಕಾಯಿ ಎಣ್ಣೆಯಿಂದ ಹೊಕ್ಕುಳನ್ನು ಮಸಾಜ್ ಮಾಡುವುದರಿಂದ ಕೂದಲು ಬಲಗೊಳ್ಳುತ್ತದೆ.…

Read More

ಬೆಂಗಳೂರು: ಮುಂದೆ ಜೆಡಿಎಸ್ ಪಾರ್ಟಿ ಇರುವುದಿಲ್ಲ,ಪಕ್ಷ ತೊರೆದು ನೀವೆಲ್ಲರೂ ಬನ್ನಿ ಎಂದು ಡಿ.ಕೆ ಶಿವಕುಮಾರ್ ಜೆಡಿಎಸ್​ ನಾಯಕರಿಗೆ ಕರೆ ನೀಡಿದ್ದಾರೆ. https://ainlivenews.com/cm-siddaramaiah-political-retirement-after-lok-sabha-elections-true/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆ ಗಾಳಿ ಬೀಸ್ತಿದೆ.ಅದಕ್ಕೆ ಬಿಜೆಪಿ ಹಲವರಿಗೆ ಟಿಕೆಟ್ ಕೊಟ್ಟಿಲ್ಲ.ಯಾರು ಕುಮಾರಸ್ವಾಮಿ ಸರ್ಕಾರ ತಗೆದ್ರು ಅವರಿಗೆನೇ ಕುಮಾರಸ್ವಾಮಿ ಸಪೋರ್ಟ್ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ಹೆಸರು ಪ್ರಸ್ತಾಪಿಸಿದ ಡಿಕೆಶಿ ಮಾತನಾಡಿದ್ದರು. ಕೆಪಿ‌ಬಚ್ಚೇಗೌಡರು ತುಚ್ಚವಾಗಿ ಕಂಡ್ರು ಅಂತ ಬಂದಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಬಂದಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ‌ಜಾತಿ ನೀತಿ ಅಂತ ಮಾಡ್ತಿದ್ದಾರೆ.ನಾವು ಎಂಟು ಮಂದಿ ಒಕ್ಕಲಿಗರಿಗೆ ಕೊಟ್ಟಿದ್ದೇವೆ. ಅಳಿಯನನ್ನೇ ಬೇರೆ ಪಾರ್ಟಿಯಲ್ಲಿ ನಿಲ್ಲಿಸಿದ್ದಾರೆ. ಮುಂದಕ್ಕೆ ದಳ ಇರೋದಿಲ್ಲ ನಾನು ಜೆಡಿಎಸ್ ಮಾಜಿ,ಹಾಲಿ ಶಾಸಕರಿಗೆ ಮನವಿ ಮಾಡ್ತೇನೆ ಜೆಡಿಎಸ್ ತೊರೆದು ನೀವೆಲ್ಲರೂ ಬನ್ನಿ.ಸಿಎಂ ಇಬ್ರಾಹಿಂ ಮಗ ಕೂಡ ಅರ್ಜಿ ಹಾಕಿದ್ದಾರೆ ಎಂದು ಜೆಡಿಎಸ್ ನಾಯಕರಿಗೆ ಡಿಕೆಶಿ ಕರೆ ನೀಡಿದ್ದರು.

Read More

ಬೆಂಗಳೂರು: ನಾನು ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. https://ainlivenews.com/another-good-news-for-consumers-a-slight-decrease-in-the-price-of-rice-which-had-skyrocketed/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನಗೆ ಆತಂಕ ಇದ್ದರೆ ತಾನೇ ಟೆನ್ಷನ್ ನನಗೆ ಯಾವ ಆತಂಕವೂ ಇಲ್ಲ ಹೀಗಾಗಿ ನಾನು ಕೂಲ್ ಆಗಿ ಇದ್ದೇನೆ.ಅದು ಕೂಡ ನನ್ನ ಆರೋಗ್ಯದ ಗುಟ್ಟು ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳಿದರು.ಆದರೆ ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ ಎಂದರು. ಮುಂದಿನ ನಾಲ್ಕು ವರ್ಷಕ್ಕೆ ನನಗೆ 79 ವಯಸ್ಸು ಆಗಿ ಬಿಡುತ್ತದೆ. 79 ವಯಸ್ಸು ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ.ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತೆ‌ ಇದಕ್ಕೆ ಚುನಾವಣಾ ರಾಜಕಾರಣ ಸಾಕು ಎಂದಿಕೊಂಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Read More

ಹಾಸನ: ಈವರೆಗೂ ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಯಾರು ಏನೇ ಕುತ್ರಂತ್ರ ಮಾಡಿದರು ಏನೇ ಹೋರಾಟ ಮಾಡಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, 1991ರಲ್ಲಿ ಲೋಕಸಭೆ ಗೆ ನಿಂತಾಗ ಎಲ್ಲ ಕಡೆ ದೇವೇಗೌಡರು ಸೋಲುತ್ತಾರೆ ಎಂಬ ಮಾತುಗಳು ಬಂದಾಗ ಜಿಲ್ಲೆಯ ಜನರು ನನಗೆ 33 ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದು ನಾನು ಎಂದಿಗೂ ಮರೆಯುವುದಿಲ್ಲ. https://ainlivenews.com/big-update-for-credit-card-holders-change-in-rule-from-april-1/ ಕಟ್ಟಾಯ ಹೋಬಳಿ ಒಂದರಲ್ಲೇ 15 ಸಾವಿರ ಲೀಡ್ ಕೊಟ್ಟ ಹಿನ್ನೆಲೆಯಲ್ಲಿ ಲೋಕಸಭೆಗೆ ಹೊಗಿ ಪ್ರಧಾನಿ ಆಗಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು. ಜಿಲ್ಲೆಯಲ್ಲಿ ಕೆಲವರು ಭಾಷಣ ಮಾಡಿದ್ದಾರೆ ಅವರ ಹೆಸರು ನಾನು ಹೇಳುವುದಿಲ್ಲ ಸೊತಿದ್ದವರನ್ನ ಗಂಡಸಿ ಕ್ಷೇತ್ರದಲ್ಲಿ ಬೆಳೆಸಿದ್ದು ರೇವಣ್ಣ. ಇನ್ನೊಬ್ಬರನ್ನು ರಾಜ್ಯಸಭೆ ಮೆಂಬರ್ ಮಾಡಿದೆ. ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹಾಗೂ ಎಚ್.ಕೆ ಜವರೇಗೌಡ ಅವರಿಗೆ ಕುಟುಕಿದರು.

Read More

ನವದೆಹಲಿ: ದೇಶದ ರಕ್ಷಣಾ ರಫ್ತು (Indian Defence Exports) ಅಭೂತಪೂರ್ವ ಎತ್ತರಕ್ಕೆ ಏರಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 21,083 ಕೋಟಿಗೆ ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿಗೆಯಾಗಿದೆ. ಈ ವಿಚಾರವನ್ನು ಭಾರತದ ಜನರಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. https://twitter.com/rajnathsingh/status/1774713827768361411?ref_src=twsrc%5Etfw%7Ctwcamp%5Etweetembed%7Ctwterm%5E1774713827768361411%7Ctwgr%5Ed57ca986487bea6dde1d952a242ef23daecc2858%7Ctwcon%5Es1_&ref_url=https%3A%2F%2Fpublictv.in%2Findias-defence-exports-cross-rs-21000-crore-mark-for-first-time%2F ಮೇ, 2023 ರಲ್ಲಿ ನೈಜೀರಿಯಾದಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ರಕ್ಷಣಾ ಸಚಿವರು ಆತ್ಮನಿರ್ಭರ್ ಭಾರತ್ (Aatmanirbharta) ಮತ್ತು ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ರಫ್ತು ಮಹತ್ವದ ಪ್ರಗತಿಯ ಗುರಿಯನ್ನು ಸಾಧಿಸುವ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಮೇಕ್ ಇನ್ ಇಂಡಿಯಾ‌ (Make in India), ಮೇಕ್ ಫಾರ್‌ ವರ್ಲ್ಡ್ ಎಂದು ಪ್ರತಿಪಾದಿಸಿದ್ದರು.

Read More

ನವದೆಹಲಿ: ಕೇಂದ್ರ ಚುನಾವಣಾ ಆಯೋಗದಲ್ಲಿ (Election Commission) ಸರ್ಕಾರವು ತನ್ನದೇ ಆದ ಜನರನ್ನು ಹೊಂದಿದೆ ಮತ್ತು ಇವಿಎಂ (EVM) ಇಲ್ಲದೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ ದೂರು ನೀಡಿದೆ. ಬಿಜೆಪಿ ಹಿರಿಯ ನಾಯಕ ಹರ್ದೀಪ್ ಸಿಂಗ್ ಪುರಿ (Hardeep Singh Puri) ನೇತೃತ್ವದ ನಿಯೋಗ ದೇಶ ವಿರೋಧಿ ಹೇಳಿಕೆ ಎಂದು ವ್ಯಾಖ್ಯಾನಿಸಿ ದೂರು ನೀಡಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಬಂಧನ ಖಂಡಿಸಿ ಭಾನುವಾರ ಇಂಡಿಯಾ ಒಕ್ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಐಪಿಎಲ್ ನಡೆಯುವಂತೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ಆಟಗಾರರನ್ನು ಬಂಧಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.ಸದ್ಯ ಈ ಹೇಳಿಕೆ ವಿರುದ್ಧ ಬಿಜೆಪಿ ದೂರು ನೀಡಿದ್ದು, https://ainlivenews.com/big-update-for-credit-card-holders-change-in-rule-from-april-1/ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಹರ್ದೀಪ್…

Read More

ಮಂಡ್ಯ: ರಾಜ್ಯದ ಜನರಿಗೆ ನಾವು ಹೇಳಿದಂತೆ ಮಾತು ಉಳಿಸಿಕೊಂಡಿದ್ದೇವೆ. ಮಂಡ್ಯದ ಜನತೆ ಸ್ವಾಭಿಮಾನಕ್ಕೆ ಮತಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ರಾಜಕಾರಣ ನೋಡಿದರೆ ನಾಚಿಗೆ ಆಗುತ್ತೆ. ಪುಟ್ಟರಾಜು ಅವರು ಟಿಕೆಟ್​ಗಾಗಿ ಕಾದು ಕುಳಿತಿದ್ದ, ಇದೀಗ ಗೋವಿಂದ. ಕುಮಾರಸ್ವಾಮಿ ಕಮಲದ ಧ್ವಜ ಹಾಕಿಕೊಂಡಿದ್ದಾರೆ. https://ainlivenews.com/big-update-for-credit-card-holders-change-in-rule-from-april-1/  ಬದುಕಿದ್ದು ಸತ್ತಂತೆ ಎಂದರು. ಅಲ್ಲದೆ, ಸ್ಥಳೀಯರನ್ನು ಆಯ್ಕೆ ಮಂಡ್ಯ ಗೌಡಿಕೆಯನ್ನು ಬೇರೆಯವರಿಗೆ ಕೊಟ್ಟಿಲ್ಲ. ಕಳೆದ ಬಾರಿ ಮೈತ್ರಿಯಂತೆ ಕುಮಾರಸ್ವಾಮಿ ಅವರಿಗೆ ಸಹಾಯ ಮಾಡಲು ಬಂದಿದ್ದೆ. ಆದರೆ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಆದರೆ ಈಗ ತಮ್ಮ ಅಧಿಕಾರ ತೆಗೆದವರ ಜೊತೆಯೇ ಕುಮಾರಸ್ವಾಮಿ ಹೋಗಿದ್ದಾರೆ ಎಂದರು.

Read More

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸ್ವತಃ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಕರೆ ಮಾಡಿ ನೀವು ಬಂಡಾಯ ಸ್ಪರ್ಧೆ ಮಾಡದಂತೆ ಸೂಚನೆ ನೀಡಿದ್ದಾರೆ. ಹೌದು ಅಮಿತ್ ಶಾ ದೆಹಲಿಗೆ ಬರುವಂತೆಯೂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಆಪ್ತರ ಜತೆ ಮಾಹಿತಿ ಹಂಚಿಕೊಂಡಿರುವ ಈಶ್ವರಪ್ಪ ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ. https://ainlivenews.com/big-update-for-credit-card-holders-change-in-rule-from-april-1/ ಆದರೆ, ಸ್ಪರ್ಧೆಯ ವಿಚಾರವಾಗಿ ನಿಲುವಿಗೆ ಬದ್ಧ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಅಮಿತ್ ಶಾ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೆಎಸ್ ಈಶ್ವರಪ್ಪ, ‘ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ. ಅವರ ಕೋರಿಕೆಯ ಮೇರೆಗೆ ದೆಹಲಿಗೆ ಹೋಗುತ್ತೇನೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

Read More

ಹುಬ್ಬಳ್ಳಿ: ವೀರ, ಧೀರ, ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯ ನಿಷ್ಠೆ ತೋರಿದ ಪೊಲೀಸ್‌ರನ್ನು ನೆನೆಯುವ ನಿಟ್ಟಿನಲ್ಲಿ ಪ್ರತಿ ವರ್ಷ ಏಪ್ರೀಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುವುದು. ಬೇರೆ ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನ ಇಲಾಖೆಯಾಗಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸರು ಬಹಳ ಪ್ರಮುಖ ಪಾತ್ರ ವಹಿಸಿರುತ್ತಾರೆ ಎಂದು ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಎಸ್.ಎಲ್. ಕಸ್ತೂರಿ ಹೇಳಿದರು. ಇಂದು ಗೋಕುಲ ರಸ್ತೆಯ ಹೊಸ ಸಶಸ್ತç ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಹಕಾರ ಹಾಗೂ ಮಾರ್ಗದರ್ಶನದಿಂದ ಉತ್ತಮ ಸೇವೆ ಸಲ್ಲಿಸಬಹುದಾಗಿದೆ. ನಾವು ನಮ್ಮ ಕರ್ತವ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಜನಸ್ನೇಹಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವುದು ಹೆಮ್ಮೆಯ ವಿಷಯವಾಗಿದೆ.…

Read More

ಕಲಬುರಗಿ: ಮನೆಯವರಿಗೆ ಟಿಕೆಟ್ ನೀಡೋ ಮೂಲಕ ರಾಜ್ಯ ಸರಕಾರವೂ ಸಹ ಕುಟುಂಬ ರಾಜಕಾರಣ ಮಾಡುತ್ತಿದೆ ಅಂತ ನಟ ಚೇತನ್ ಹೇಳಿದ್ದಾರೆ..ಕಲಬುರಗಿಯಲ್ಲಿಂದು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಚೇತನ್ ಪುತ್ರರಿಗೆ, ಪುತ್ರಿಯರಿಗೆ, ಸೊಸೆಯರಿಗೆ, ಅಳಿಯಂದಿರಿಗೆ ಟಿಕೆಟ್ ನೀಡಿದ್ದಾರೆ..ಇಂತಹ ನೀತಿ  ಪಕ್ಷಕ್ಕೂ ಒಳ್ಳೆಯದಲ್ಲ ರಾಜ್ಯಕ್ಕೂ ಒಳ್ಳೆಯದಲ್ಲ ಅಂದ್ರು.ಅಷ್ಟೇಅಲ್ಲದೇ ಟಿಕೆಟ್ ಗೆ ರೇಟ್ ಫಿಕ್ಸ್ ಮಾಡಿ ಕೋಟಿ ಕೋಟಿ ದುಡ್ ಕೊಟ್ಟೋರಿಗೆ ಮಾತ್ರ ಟಿಕೆಟ್ ಸಿಗುತ್ತೆ ಅಂತ ಕಿಡಿಕಾರಿದ್ರು..

Read More