Author: AIN Author

ಬೆಂಗಳೂರು:  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಜೋರಾಗಿದೆ.. ಎಲೆಕ್ಷನ್ ಸಮರಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳಿಂದ ಪ್ರಚಾರ ಬಿರುಸುಗೊಂಡಿದ್ದು, ನಾನಾ ಪಕ್ಷಗಳ ಕಾರ್ಯಕರ್ತರು ಮತದಾರರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಆದರೆ, ಪ್ರತಿವರ್ಷ ನಾನಾ ಕಾರಣಗಳಿಂದ ನೀರಿಕ್ಷೆಯಷ್ಟು ಮತದಾನ ಮಾತ್ರ ಆಗ್ತೀಲ್ಲ ಹೀಗಾಗಿ ಚುನಾವಣಾ ಆಯೋಗ ಈ ವರ್ಷ ಮತದಾನ ಪ್ರಮಾಣ ಏರಿಕೆಗೆ ಹೊಸ ಪ್ಲಾನ್ ಮಾಡಿದೆ ಈಗಾಗಲೆ ಎಲ್ಲ ಪಕ್ಷಗಳಿಂದ ಬಹುತೇಕ ಟಿಕೇಟ್ ಅನೌನ್ಸ್ ಆಗಿದ್ದು ಬಿ ಪಾರ್ಮ್ ಕೂಡಾ ಪಡೆದುಕೊಂಡಿದ್ದಾರೆ. ಸಕಲ ರೀತಿಯಲ್ಲೂ ರಾಜಕೀಯ ನಾಯಕರು ಚುನಾವಣೆ ಆಖಾಡಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣಾ ಆಯೋಗ ಮತ ಸಮರಕ್ಕೆ ಸಕಲ ಸಿದ್ಧತೆ ಶುರು ಮಾಡಿದೆ.. ಈ ವರ್ಷ ಮತದನಾ ಪ್ರಮಾಣ ಏರಿಕೆಗೆ ಆಯೋಗ ಹೊಸ ಹೊಸ ಪ್ಲಾನ್ ಮಾಡ್ತೀದ್ದು ಈ ವರ್ಷ ಮತದಾರರ ಗುರುತಿನ ಚೀಟಿಗೆ ಕಲರ್ ಪುಲ್ ಟಚ್ ಕೊಟ್ಟಿದೆ. ದೇಶದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಕರ್ನಾಟಕ ಚುನಾವಣಾ ಆಯೋಗ ಮುಂದಾಗಿದೆ.…

Read More

ಬೆಂಗಳೂರು: ಪಕ್ಷದಲ್ಲಿ ಟಿಕೆಟ್ (BJP Ticket) ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದೇವೆ, ಎಲ್ಲಾ ಮಾಹಿತಿ ನಮ್ಮ ಬಳಿಯಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಪಕ್ಷದಲ್ಲಿ ಅಸಮಾಧಾನಿತ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ (Bengaluru Palace Grounds) ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಸೇರಿದಂತೆ ಪ್ರಮುಖರು ಗೈರಾಗಿದ್ದರು. ಇದರಿಂದ ಆರಂಭದಲ್ಲೇ ಪಕ್ಷದ ಅಸಮಾಧಾನಿತ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. https://ainlivenews.com/sumalatha-ambarish-will-tell-about-her-next-move-in-mandya-tomorrow/ ಟಿಕೆಟ್ ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದು ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ಟಿಕೆಟ್ ಅನ್ನು ಸಂಸದೀಯ ಮಂಡಳಿ ಸಭೆ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ. ಸಂಸದೀಯ ಮಂಡಳಿಯಲ್ಲಿ ಮೋದಿ ಮತ್ತು ನಾನು ಸೇರಿದಂತೆ ಎಲ್ಲರೂ ಚರ್ಚೆ ಮಾಡಿ ತಿರ್ಮಾನ ಮಾಡಿದ್ದೇವೆ. ಟಿಕೆಟ್ ಘೋಷಣೆಯಾಗಿದೆ ಎಲ್ಲರೂ ಒಪ್ಪಿ…

Read More

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಅಂಬರೀಶ್, ಈ ಬಾರಿ ಕಮಲ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಬಿಜೆಪಿಯ ಟಿಕೆಟ್​ಗಾಗಿ ಹೈಕಮಾಂಡ್ ಮಟ್ಟದಲ್ಲಿಯೂ ಸುಮಲತಾ ಅಂಬರೀಶ್ ಲಾಬಿ ಸಹ ಮಾಡಿದ್ದರು. ನೇರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೇ ಭೇಟಿಯಾಗಿ ಚರ್ಚೆ ನಡೆಸಿದ್ದರು. ಜೆಪಿ ನಗರ ನಿವಾಸದ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸುಮಲತಾ ಅಂಬರೀಶ್, ಎಲ್ಲಿಯೂ ಮುಂದಿನ ನಡೆ ಏನು ಎಂಬುದರ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಏಪ್ರಿಲ್ 3ರಂದು ಮಂಡ್ಯಕ್ಕೆ ಬಂದು, ಅಲ್ಲಿಯೇ ಚರ್ಚಿಸಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದರು. ಈ ಬಗ್ಗೆ ಇಂದು ತಮ್ಮ  ಫೇಸ್‌ ಬುಕ್‌ ಪೇಜ್‌ ನಲ್ಲಿ ತಮ್ಮ ಮುಂದಿನ ನಡೆ ಏನು ಎಂದು ಬರೆದುಕೊಂಡಿದ್ದಾರೆ . ನಾಳೆ ಬೆಳಗ್ಗೆ 10.30ಕ್ಕೆ ನನ್ನ ನಿರ್ಧಾರ ತಿಳಿಸುತ್ತೇನೆ ನಿಮ್ಮ ನಡೆಯೇ ನನ್ನ ನಡೆ ಎಂದು ಬರೆದುಕೊಂಡಿದ್ದಾರೆ.‌ https://www.facebook.com/share/p/oJ5zsLesVA9d1uKS/?mibextid=qi2Omg ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ…

Read More

ತುಮಕೂರು: ರಾಜಕಾರಣಿಗಳ ಮಕ್ಕಳು ಮಾತ್ರ ರಾಜಕೀಯ ಮಾಡಬೇಕಾ? ಬೇರೆಯವರ ಮಕ್ಕಳು ರಾಜಕೀಯಕ್ಕೆ ಬರೋದು ಬೇಡ್ವಾ? ನನ್ನ ಉಸಿರು ಇರೋವರೆಗೂ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರಲ್ಲ ಎಂದು ಮಾಜಿ ಸಚಿವ, ತುಮಕೂರು ಲೋಕಸಭೆ ಅಭ್ಯರ್ಥಿ ವಿ ಸೋಮಣ್ಣ ಹೇಳಿದರು. ಸೋಮಣ್ಣ ತುಮಕೂರಿಗೆ ಬಂದ್ರೆ ಮಗನನ್ನೂ ಕರೆತರುತ್ತಾರೆ ಅನ್ನೋರಿಗೆ ಟಾಂಗ್ ಕೊಟ್ಟಿದ್ದಾರೆ. ಸೋಮಣ್ಣನ ಮಗ ಒಬ್ಬ ವೈದ್ಯ. ಇನ್ನೊಬ್ಬ ಮಗ ಡಬಲ್ ಗ್ರಾಜುಯೇಟ್. https://ainlivenews.com/big-update-for-credit-card-holders-change-in-rule-from-april-1/ ನನ್ನ ಮಗಳು ಇಂಜಿನಿಯರ್. ನಾನು ಬುದ್ದಿವಂತನಾಗಿ ರಾಜಕೀಯ ಮಾಡಿಕೊಂಡು ಬಂದವನು. ಬೇರೆಯವರ ಹಾಗೇ ನಾನು ಎಲ್ಲೂ ಮೂತಿ ತೂರಿಸುವ ಕೆಲಸ ಮಾಡಿಲ್ಲ, ರಾಜಕಾರಣಿಗಳ ಮಕ್ಕಳು ಮಾತ್ರ ರಾಜಕೀಯ ಮಾಡಬೇಕು?, ಬೇರೆಯವರ ಮಕ್ಕಳು ರಾಜಕೀಯಕ್ಕೆ ಬರೋದು ಬೇಡ್ವಾ?, ಆ ತರ ನಮ್ಮ ತಲೆಯಲ್ಲೂ ಇಲ್ಲ. ಯೋಚನೆಯನ್ನು ಮಾಡಿಲ್ಲ ಎಂದು ಹೇಳಿದರು. ನನ್ನ ಉಸಿರು ಇರುವ ತನಕ ನನ್ನ ಮಗ ತುಮಕೂರು ರಾಜಕಾರಣಕ್ಕೆ ಬರಲ್ಲ ಎಂದರು.

Read More

ಯಾದಗಿರಿ: ಯಾದಗಿರಿ ತಾಲೂಕಿನ ಬೊಮ್ಮರಾಲದೊಡ್ಡಿಯಲ್ಲಿ ತಮ್ಮನಿಂದಲೇ ಅಕ್ಕನ ಬರ್ಬರ ಕೊಲೆಯಾಗಿರುವ ಘಟನೆ ನಡೆದಿದೆ. ನರಸಮ್ಮ(65) ಕೊಲೆಯಾದ ಸಹೋದರಿಯಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ತಮ್ಮನಿಂದ ಸಹೋದರಿಯ ಕೊಲೆಯಾಗಿದೆ.  ಮಾನಸಿಕ ಅಸ್ವಸ್ಥನಾಗಿದ್ದ ಸೂಗುರಪ್ಪನನ್ನು ನಸರಮ್ಮಳೇ ನೋಡಿಕೊಳ್ಳುತ್ತಿದ್ದರು. ಇನ್ನೂ ಮನೆಯಲ್ಲಿ ಕೈ-ಕಾಲು ಕಟ್ಟಿ ಕೂರಿಸುತ್ತಿದ್ದರು. ಕೋಪದಲ್ಲಿ ಸರಪಳಿ ಬಿಚ್ಚಿಕೊಂಡು ಕಬ್ಬಿಣ್ಣದ ಸುತ್ತಿಗೆಯಿಂದ ಹೆಂಡತಿಗೆ ಹಾಗೂ ಸಹೋದರಿಗೆ ನರಸಮ್ಮನಿಗೆ ಹೊಡೆದಿದ್ದಾನೆ. https://ainlivenews.com/big-update-for-credit-card-holders-change-in-rule-from-april-1/ ನರಸಮ್ಮ ಈತನಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೂ ಬಿಡದ ಸೂಗುರಪ್ಪ ನಡು ರಸ್ತೆಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Read More

ಬೆಂಗಳೂರು: ಹಲವು ರಾಜ್ಯಗಳಲ್ಲಿ ಆಡಳಿತಾತ್ಮಕ, ಭದ್ರತೆ ಮತ್ತು ವೆಚ್ಚದ ಮೇಲ್ವಿಚಾರಣೆ ಉದ್ದೇಶಗಳಿಗಾಗಿ ವಿಶೇಷ ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ. https://ainlivenews.com/muhurta-fix-for-second-pu-result/ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣ, ತೋಳ್ಬಲ, ಸುಳ್ಳು ಮಾಹಿತಿ ವಿರುದ್ಧವಾಗಿ ಚುನಾವಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾದ ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡುವ ಕಾರ್ಯಕ್ಕಾಗಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಚುನಾವಣಾ ಸಮಿತಿ ಹೇಳಿದೆ. ಏಳು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಲೋಕಸಭೆ ಜೊತೆಗೆ ವಿಧಾನಸಭಾ ಚುನಾವಣೆ ನಡೆಯಲಿರುವ ಓಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ವಿಶೇಷ ವೀಕ್ಷಕರನ್ನು (ಜನರಲ್ ಮತ್ತು ಪೊಲೀಸ್) ನಿಯೋಜಿಸಲಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಒಡಿಶಾದಲ್ಲೂ ವಿಶೇಷ ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Read More

ನವದೆಹಲಿ: ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ (Acharya Balkrishna) ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಕೋರಿದ ಕ್ಷಮೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಭಾರತೀಯ ವೈದ್ಯಕೀಯ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮಕೊಹ್ಲಿ (Hima Kohli) ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಮಂಗಳವಾರವಾದ ಇಂದು ಕೋರ್ಟ್ ಮುಂದೆ ಹಾಜರಾಗಿದ್ದ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದೆ. ಕಳೆದ ನವೆಂಬರ್‌ನಲ್ಲಿ ಪತಂಜಲಿ ಸಂಸ್ಥೆ ಪರ ವಕೀಲರು ನ್ಯಾಯಾಲಯದ ಮುಂದೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಡೆಯುವುದಾಗಿ ಭರವಸೆ ನೀಡಿದ ಹೊರತಾಗಿಯೂ ಪತಂಜಲಿ ಸಂಸ್ಥೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿತ್ತು. ಈ ಹಿನ್ನಲೆ ಕೋರ್ಟ್ ಫೆಬ್ರವರಿ 27 ರಂದು ಪತಂಜಲಿ ಸಂಸ್ಥೆ ಮತ್ತು ಅದರ…

Read More

ಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು ಏಪ್ರಿಲ್​ 10ಕ್ಕೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.ರಾಜ್ಯದ 1,124 ಕೇಂದ್ರಗಳಲ್ಲಿ ಮಾರ್ಚ್‌ 1ರಿಂದ 22ರವರೆಗೆ ನಡೆದಿದ್ದ ಪರೀಕ್ಷೆಗಳು ಸುಮಾರು 6.98 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. https://ainlivenews.com/good-news-for-motorists-the-toll-rate-will-be-raised-for-the-time-being/ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶ ನೀಡಬೇಕಿದೆ. ಹೀಗಾಗಿ ಸರ್ಕಾರಿ, ಅನುದಾನಿತ‌ ಕಾಲೇಜುಗಳ 40 ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು ಈಗಾಗಲೇ ಕಲಾ, ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದೆ. ಬೆಂಗಳೂರು ಕೇಂದ್ರಗಳಲ್ಲಿ ನಡೆಯುತ್ತಿರುವ ವಿಜ್ಞಾನ ವಿಷಯಗಳ ಮೌಲ್ಯಮಾಪನ ಏ.5ರ ಒಳಗೆ ಪೂರ್ಣವಾಗುವ ಸಾಧ್ಯತೆ ಇದೆ. ಹೀಗಾಗಿ ಇದೇ ಏಪ್ರಿಲ್ 10ಕ್ಕೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಸಿದ್ಧತೆ ಮಾಡಿಕೊಂಡಿದೆ.

Read More

ಧಾರವಾಡ: ದಿನಕಳೆದಂತೆ ಧಾರವಾಡದಲ್ಲಿ ಲೋಕಸಭಾ ಚುನಾವಣೆ ಕಾವು ಏರುತ್ತಿದೆ. ಅಭ್ಯರ್ಥಿಗಳು ಈಗಾಗಲೇ ಚುನಾವಣೆ ತಯಾರಿಲ್ಲಿದ್ದು, ಆದರೆ ಕೇಂದ್ರ ಸರಕಾರದ ಹಾಲಿ ಸಚಿವರಾಗಿರುವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರ ಬದಲಾವಣೆಗೆ ಪಟ್ಟು ಹಿಡಿದಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಇಂದು ಧಾರವಾಡದಲ್ಲಿ ಭಕ್ತರ ಸಭೆ ಕರೆದಿದ್ದು, ಸಭೆಗೆ ಈಗ ಆರಂಭವಾಗಿದೆ.  ಧಾರವಾಡದ ಸೇವಾಲಯದಲ್ಲಿ ಶ್ರೀಗಳು ಭಕ್ತರ ಸಭೆ ಕರೆದಿದ್ದು, ಈಗಾಗಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ.‌ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಭೆ ಈಗ ಆರಂಭವಾಗಿದೆ. ವೇದಿಕೆಯಲ್ಲಿ ಒಂದೇ ಒಂದು ಆಸನವನ್ನ ಹಾಕಲಾಗಿದ್ದು, ಬೇರೆ ಯಾವುದೇ ಮಠದ ಸ್ವಾಮಿಗಳು ಭಕ್ತರ ಸಭೆಯಲ್ಲಿ ಭಾಗವಹಿಸಿಲ್ಲ. https://ainlivenews.com/big-update-for-credit-card-holders-change-in-rule-from-april-1/ ಇನ್ನೂ ಶ್ರೀಗಳು ತಾವು ತೆಗೆದುಕೊಂಡ ಧಾರವಾಡ ಲೋಕಸಭಾ ಅಭ್ಯರ್ಥಿ ಜೋಶಿ ಬದಲಾವಣೆ ನಿರ್ಧಾರ ಹಾಗೂ ಬಿಜೆಪಿ ನಾಯಕರ ನಡೆಯ ಬಗ್ಗೆ ಭಕ್ತರ ಮುಂದೆ ತೆರೆದಿಟ್ಡು, ಭಕ್ತರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಬಳಿಕ ಸಭೆಯಲ್ಲಿ ಕೆಲವು ನಿರ್ಣಯ ತೆಗೆದುಕೊಳ್ಳಲಿದ್ದು, ಮಾಧ್ಯಮಕ್ಕೆ ಪ್ರತಿಕ್ರಿಯೆ…

Read More

ಬೆಂಗಳೂರು: ಮುಂದೆ JDS ಇರುತ್ತೆ ಎಂಬುದೇ ಅನುಮಾನ ಎಂದು ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮುಂದೆ JDS ಇರುತ್ತೆ ಎಂಬುದೇ ಅನುಮಾನ. ಬಿಜೆಪಿ ಏನು ಅಂತ ಮುಂದೆ ಜೆಡಿಎಸ್​ಗೆ ಗೊತ್ತಗುತ್ತೆ. https://ainlivenews.com/there-is-no-jds-party-anymore-leave-the-party-and-join-the-congress-dks-explosive-statement/ ಬಿಜೆಪಿಯವರು ಹಾಗೇ ಅಡ್ಡಡ್ಡ ಎಳೆದು ಜೆಡಿಎಸ್​ನವರನ್ನು ನೇತಾಕ್ತಾರೆ. ಹಂಗಂಗೆ ಗುಳುಂ.. ಗುಳುಂ ಅಂತ ಬಿಜೆಪಿಯವರು ನುಂಗಿ ಹಾಕ್ತಾರೆ ಎಂದು ಲೇವಡಿ ಮಾಡಿದ್ದರು. ಬಿಜೆಪಿಗೆ ಜೆಡಿಎಸ್​​ನ ಕುಮಾರಣ್ಣ ಸರೆಂಡರ್ ಮಾಡಿಬಿಟ್ಟವ್ರೆ.ಯಾಕೆ ಕುಮಾರಣ್ಣ ಹಾಗೆ ಮಾಡಿದ್ರೋ ಗೊತ್ತಾಗ್ತಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ ಗೆ 9 ಸೀಟು ಬಿಟ್ಟು ಕೊಟ್ಟಿದ್ವಿ.ಈಗ ನೋಡಿದ್ರೆ ಜೆಡಿಎಸ್​ಗೆ ಬರೀ 3 ಸೀಟು ಕೊಟ್ಟವ್ರೆ. ಮೂರು ಕಡೆ ಅವರೇ, ಮೊಮ್ಮಗ, ಮಗ, ಅಳಿಯನೇ ಕ್ಯಾಂಡಿಡೇಟು ಅಂತಾ ಹೇಳಿ ವ್ಯಂಗ್ಯ ಮಾಡಿದ್ದರು.

Read More