Author: AIN Author

ಆನೇಕಲ್:- ಗೆದ್ದ ಮೇಲೆ ದೇವೇಗೌಡರ ಕುಟುಂಬ ಜನರಿಗೆ ಕೃತಜ್ಞತೆ ಸಲ್ಲಿಸಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ. https://ainlivenews.com/election-emergency-meeting-at-jds-bhavan/ ಜಿಲ್ಲೆಯ ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನ ಗೆಲ್ಲಿಸಿದ್ದಕ್ಕೆ ಬದಲಾಗಿ ಏನನ್ನೂ ಅವರಿಗೆ ನೀಡಲಿಲ್ಲ, ಒಂದೇ ಒಂದು ಸಭೆ ನಡೆಸಿ ಅವರ ಕಷ್ಟಸುಖ ವಿಚಾರಿಸಲಿಲ್ಲ ಎಂದು ಸುರೇಶ್ ಹೇಳಿದರು. ವೇದಿಕೆ ಮೇಲೆ ಮತ್ತು ನೆರೆದ ಜನರಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರಿಗಾಗಿ ಕೆಲಸ ಮಾಡಿದ ಜನರಿದ್ದಾರೆ, ಕ್ಷೇತ್ರಕ್ಕೆ ಆ ಕುಟುಂಬದಿಂದ ಆಗಿರುವ ಪ್ರಯೋಜನದ ಬಗ್ಗೆ ಅವರೇ ಹೇಳಲಿ ಎಂದು ಸುರೇಶ್ ಹೇಳಿದರು. ಆದರೆ, ಕಳೆದ 10 ವರ್ಷ ಮತ್ತು 8 ತಿಂಗಳ ಅವಧಿಯಲ್ಲಿ ತಾನು ಪ್ರತಿ ತಿಂಗಳು ಸಭೆ ನಡೆಸಿ ಜನರ ಕಷ್ಟಸುಖ ವಿಚಾರಿಸುವ ಪ್ರಯತ್ನ ಮಾಡಿದ್ದೇನೆ ಅಂತ ಹೆಮ್ಮಯಿಂದ ಹೇಳಿಕೊಳ್ಳುವುದಾಗಿ ಸುರೇಶ್ ಹೇಳಿದರು.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಇಂದು ಚುನಾವಣಾ ತುರ್ತು ಸಭೆ ಜರುಗಿದೆ. ಪರಿಷತ್ ಸದಸ್ಯ ಟಿಎ ಶರವಣ ಅವರು ಸಭೆಯಲ್ಲಿ ಭಾಗಿಯಾಗಿದ್ದು 2024 ರ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡಲಾಗಿದೆ. ಇನ್ನೂ ಸಭೆಯಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬಿಬಿಎಂಪಿ ಮಾಜಿ ಸದಸ್ಯರು, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಆಕಾಂಕ್ಷಿಗಳು ಹಾಗೂ ವಾರ್ಡ್ ಅಧ್ಯಕ್ಷರುಗಳು ಭಾಗಿಯಾಗಿದ್ದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಜೆಡಿಎಸ್ ಬಿಜೆಪಿ ಮೈತ್ರಿಯ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸಿ.ಎನ್.ಮಂಜುನಾಥ , ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಪಿ.ಸಿ. ಮೋಹನ್ ರವರು ಸಭೆಗೆ ಆಗಮಿಸಿದ್ದರು. ಬಳಿಕ ಸಭೆಯಲ್ಲಿ ಮಾತನಾಡಿದ ಟಿಎ ಶರವಣ ಅವರು, ಮುಂಬರುವ ಚುನಾವಣೆ ಕುರಿತು ಪಕ್ಷದ ಕಾರ್ಯಕರ್ತರ ಜೊತೆ ಚರ್ಚೆ ಮಾಡಿದರು.

Read More

ಕೊಪ್ಪಳ:- ಮುಂದಿನ ಎರಡು ತಿಂಗಳ ಕಾಲ ರಾಜ್ಯದ ಎಂಟು ಜಿಲ್ಲೆಯಲ್ಲಿನ ಅಂಗನವಾಡಿಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. ಬದಲಾದ ವೇಳಾಪಟ್ಟಿಯಂತೆ ಐಸಿಡಿಎಸ್ ಸೇವೆಗಳನ್ನು ನಿಯಮಾನುಸಾರ ಯಾವುದೇ ಅಡೆತಡೆಗಳಿಲ್ಲದೆ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್ ಅವರು ತಿಳಿಸಿದ್ದಾರೆ. https://ainlivenews.com/job-interview-tomorrow-in-bangalore-salary-lakhs-lakhs-per-month/ ಈ ಮೊದಲು ಅಂಗನವಾಡಿಗಳು ಮುಂಜಾನೆ 9.30 ರಿಂದ ಸಂಜೆ 4 ಗಂಟೆವರಗೆ ಕಾರ್ಯನಿರ್ವಹಿಸುತ್ತಿದ್ದವು. ಕೆಲ ಪಾಲಕರು ತಮ್ಮ ಮಕ್ಕಳನ್ನು ಮಧ್ಯಾಹ್ನ 1.30 ಕ್ಕೆ ಕರೆದುಕೊಂಡು ಹೋದರೆ, ಕೆಲ ಪಾಲಕರು ಸಂಜೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಕೊಪ್ಪಳ, ಬಳ್ಳಾರಿ, ಕಲಬುರಗಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ಇರೋದರಿಂದ ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಪರದಾಡುತ್ತಿದ್ದರು. ಹೀಗಾಗಿ ಅಂಗನವಾಡಿಗಳ ಸಮಯವನ್ನು ಬೇಸಿಗೆ ಕಾಲದಲ್ಲಿ ಬದಲಾವಣೆ ಮಾಡಬೇಕು ಅಂತ ಅನೇಕ ಪಾಲಕರು ಮತ್ತು ಅಂಗನವಾಡಿ ಸಿಬ್ಬಂದಿ ಆಗ್ರಹಿಸಿದ್ದರು.…

Read More

ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ಉದ್ಯೋಗಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ನಿಮ್ಹಾನ್ಸ್ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸೀನಿಯರ್ ರೆಸಿಡೆಂಟ್​ ಸೈಕಿಯಾಟ್ರಿ ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 3, 2024 ಅಂದರೆ ನಾಳೆ ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದು ಬಂಪರ್ ಅವಕಾಶವಾಗಿದೆ. ಶೈಕ್ಷಣಿಕ ಅರ್ಹತೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಡಿ, ಡಿಎನ್​​ಬಿ ಸೈಕಿಯಾಟ್ರಿ ಪೂರ್ಣಗೊಳಿಸಿರಬೇಕು. ವಯೋಮಿತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ವೇತನ: ಮಾಸಿಕ ₹ 1,10,000 ಉದ್ಯೋಗದ ಸ್ಥಳ: ಬೆಂಗಳೂರು ಸಂದರ್ಶನ ನಡೆಯುವ ಸ್ಥಳ: NBRC…

Read More

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಲಖನೌ ತಂಡಗಳು ಗೆಲುವಿಗಾಗಿ ಇಂದಿನ IPL ಪಂದ್ಯದಲ್ಲಿ ಸೆಣಸಾಡಲಿವೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಒಂದರಲ್ಲಿ ಗೆದ್ದು ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನದಲ್ಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಈ ಪಂದ್ಯ ಮಹತ್ವದಾಗಿದ್ದು, ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲಕ್ಕೇರಬೇಕೆಂದರೆ ಆರ್​ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. https://ainlivenews.com/he-killed-his-brother-with-an-ax-for-property-issues/ ಸಿಎಸ್​ಕೆ, ಪಂಜಾಬ್ ಮತ್ತು ಕೆಕೆಆರ್ ವಿರುದ್ಧ ಆರ್​ಸಿಬಿ ನೀಡಿದ ಪ್ರದರ್ಶನ ಬೌಲಿಂಗ್​ನಲ್ಲಿ ತೀರಾ ಕಳಪೆಯಾಗಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಆಗುವುದು ಖಚಿತ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿರುವ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ಸ್ವರೂಪವನ್ನು ಗಮನಿಸಿದರೆ, ಆರ್​ಸಿಬಿ ತಂಡಕ್ಕೆ ಬಲಿಷ್ಠ ಅನುಭವಿ ಬೌಲರ್ ಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಲ್ಝಾರಿ ಜೋಸೆಫ್​ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3.4 ಓವರ್​ಗಳಲ್ಲಿ…

Read More

ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊದ ವ್ಯಕ್ತಿ ಸಹೋದರನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಾಲಿಬೇರ ಗ್ರಾಮದಲ್ಲಿ ನಡೆದಿದೆ. ಜಾಲಿಬೇರ ಗ್ರಾಮದ 55 ವರ್ಷದ ಉತ್ತಮ ಯಾದವ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸಾಯಂಕಾಲ ಬೈಕ್‌ನಲ್ಲಿ ಹೊಲಕ್ಕೆ ಹೊರಟಿದ್ದ ಉತ್ತಮ್  ಕುತ್ತಿಗೆಗೆ ಕೊಡಲೆಯಿಂದ ಕೊಚ್ಚಿ ಕೋಲೆ ಮಾಡಲಾಗಿದೆ. ಇನ್ನು ಜಮೀನು ವಿಚಾರವಾಗಿ ಸಹೋದರ ಆನಂದ ಯಾದವ್ ನಡುವೆ ವಿವಾದ ನಡೆದಿತ್ತು. 15 ಎಕರೆ ಜಮೀನನ್ನ ಉತ್ತಮ್ ತಾನೇ ಉಳುಮೆ ಮಾಡುತ್ತಾ ಬಂದಿದ್ದ. ಇವರೆಗೂ ತಮ್ಮ ಆನಂದ್‌ಗೆ ಜಮೀನು ಒಅಲು ಕೊಡದೇ ದಬ್ಬಾಳಿಕೆ ನಡೆಸಿದ್ದ ಎನ್ನುವ ಆರೋಪ ಇದೆ. ಇದ್ರಿಂದ ಬೇಸತ್ತಿದ್ದ ಆನಂದ್  ಇಬ್ಬರ ನಡುವೆ ಆವಾಗವಾಗ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ. https://ainlivenews.com/big-update-for-credit-card-holders-change-in-rule-from-april-1/ ಅದೇ ದ್ವೇಷದ ಹಿನ್ನೆಲೆ ತನ್ನ ಅಣ್ಣನನ್ನೇ ಆನಂದ್ ಇವತ್ತು  ಕೊಡಲಿಯಿಂದ ಕೋಲೆಗೈದಿದ್ದು, ಆಶ್ತಿ ವಿವಾದ ಕೊಲೆಯಲ್ಲಿ ಅಂತ್ಯ ಕಂಡಂತಾಗಿದೆ. ಸ್ಥಳಕ್ಕೆ ಮುಧೋಳ ಪೊಲೀಸ್ರು ಭೇಟಿ ನೀಡಿ ಸ್ಥಳ ಮಹಜರು ಕಾರ್ಯ ನಡೆಸಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಗಿದ್ದಾರೆ.ಈ ಕುರಿತು…

Read More

ನವದೆಹಲಿ: ಹೊಸ ಮಧ್ಯ ನೀತಿಯಲ್ಲಿ (Delhi liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್‌ (Sanjay Singh) ಅವರಿಗೆ ಸುಪ್ರಿಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರ ಕಸ್ಟಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿತು. https://ainlivenews.com/big-update-for-credit-card-holders-change-in-rule-from-april-1/ ಇಡಿ ಬಂಧನ ಮತ್ತು ಜಾಮೀನು ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠ, ಜಾಮೀನು ನೀಡಲು ಆಕ್ಷೇಪಗಳಿವೆಯೇ ಎಂದು ಇಡಿಯನ್ನು ಪ್ರಶ್ನಿಸಿತು‌. ಇದಕ್ಕೆ ಉತ್ತರಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್-3 ಮತ್ತು 4ರ…

Read More

ಹುಬ್ಬಳ್ಳಿ: ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಹಂತವಾಗಿದೆ. ಶಿಕ್ಷಣ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ. ಅದು ಬಲವಾಗಿದ್ದರೆ ಮಾತ್ರ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಮೋಹನರಾಜ ಇಲ್ಲೂರ ಹೇಳಿದರು. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕೆಎಲ್ಇ ಕಾಲೇಜಿನಲ್ಲಿ ಎಸ್.ಜೆ.ಎಫ್.ಎಸ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ/ನಿಯರ ಸಂಘದ ಆಶ್ರಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಮಾರ್ಗಂ’ ಶೈಕ್ಷಣಿಕ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಓದಿದರೆ ಏನು ಉದ್ಯೋಗ ಪಡೆಯಬಹುದು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು ಆ ದಾರಿಯಲ್ಲಿ ಅಧ್ಯಯನ ಮುಂದುವರಿಸಬೇಕು. ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಚಿನ್ನದ ಜೀವನ ಎಂದು ತಿಳಿದಿರುತ್ತಾರೆ. ಆದರೆ ಚಿನ್ನದಂಥ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬುದ್ಧಿವಂತಿಕೆಯನ್ನು ದೇವರು ಎಲ್ಲರಿಗೂ ನೀಡಿರುತ್ತಾನೆ. ಅದನ್ನು ಬಳಸಿಕೊಳ್ಳಬೇಕಷ್ಟೆ. ಬುದ್ಧಿವಂತಿಕೆಯಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ನಾವು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ…

Read More

ಧಾರವಾಡ: ಧಾರವಾಡದಲ್ಲಿ ಭಕ್ತರ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಅವರೆಲ್ಲರೂ ಸೇರಿ ಒಂದು ತೀರ್ಮಾನ ಮಾಡಿದ್ದಾರೆ. ನಾನು ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ಇಂದು ಭಕ್ತರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿಯವರನ್ನು ಧಾರವಾಡ ಕ್ಷೇತ್ರದಿಂದ ಬದಲಾಯಿಸಬೇಕು ಎಂದು ಎಲ್ಲ ಮುಖಂಡರು ಭಾಗಿಯಾಗಿ ಸಭೆ ಕರೆದಾಗ ಕೆಲವರು ಬದಲಾವಣೆ ಬೇಡ ಎಂದರು.  ಅವರೆಲ್ಲರೂ ಸೇರಿ ಒಂದು ತೀರ್ಮಾನ ಮಾಡಿದ್ದಾರೆ. ನಾನು ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ಇಲ್ಲಿಯೂ ಬದಲಾವಣೆ ಆಗಬೇಕು ಎಂದಿದ್ದಾರೆ. ಮಠಗಳು ಬದಲಾಗಿವೆ. ಎಲ್ಲರೂ ಸಹ ನನಗೆ ಕರೆ ಮಾಡಿ ಮುಂದಿಟ್ಟ ಹೆಜ್ಜೆ ಹಿಂದಿಡದಂತೆ ಹೇಳಿದ್ದಾರೆ. ಯಾವುದೇ ಪಕ್ಷದ ವಿಚಾರ, ಜಾತಿ ವಿಚಾರ ನಮ್ಮಲ್ಲಿಲ್ಲ ಎಂದರು. https://ainlivenews.com/big-update-for-credit-card-holders-change-in-rule-from-april-1/ ನನ್ನ ಹಿಂದೆ ಪ್ರಮುಖರು ಇದ್ದಾರೆ. ಅತೀ ಶೀಘ್ರದಲ್ಲೇ ಬೆಂಗಳೂರಿನಲ್ಲಿ‌ ನನ್ನ ತೀರ್ಮಾನ ಹೇಳುತ್ತೇನೆ. ನಮ್ಮ ಗುರುಗಳ ಮತ್ತು ಭಕ್ತರ ನಿರ್ಣಯ ಪಡೆದು…

Read More

ಹುಬ್ಬಳ್ಳಿ; ನಗರದ ಪ್ರಸಿದ್ಧ ಆರ್ಥೊಪಿಡಿಶಿಯನ್ ಡಾ. ವಿವೇಕ ಪಾಟೀಲ ಇವರು ಟೈ-ಹುಬ್ಬಳ್ಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿವೇಕ ಅವರು60 ದೇಶಗಳಲ್ಲಿ ಕಾರ್ಯ ಪ್ರವರ್ತಿತರಾಗಿರುವ ಟೈ ಸಂಸ್ಥೆಯ ಜಾಗತಿಕ ಔದ್ಯೋಗಿಕ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಮೀಸಲಾಗಿದ್ದು, ಇದರ ಅಂಗ ಸಂಸ್ಥೆಯಾಗಿ ಟೈ- ಹುಬ್ಬಳ್ಳಿಯ ಸಹಿತ ಅನೇಕ ವರ್ಷಗಳಿಂದ ಈ ಭಾಗದ ಔದ್ಯೋಗಿಕ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಅನೇಕ ಉಪಕ್ರಮ ಕೈಗೊಂಡಿದೆ. ಹೊಸ ದೃಷ್ಠಿಕೋನ ಹಾಗೂ ಕ್ರಿಯಾತ್ಮಕ ಧ್ಯೇಯದೊಂದಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ವಿವೇಕ ಪಾಟೀಲ ಇವರು ಹುಬ್ಬಳ್ಳಿ ಧಾರವಾಡಅವಳಿ ನಗರಗಳ ಕೈಗಾರಿಕಾ ಬೆಳವಣಿಗೆ ಹಾಗೂ ಸ್ಮಾರ್ಟಅಪ್ ಉದ್ಯೋಗಕ್ಕೆ ಇನ್ನಷ್ಟು ಉತ್ತೇಜನ ನೀಡುವ ಪ್ರಾಶಸ್ತದ ಗುರಿ ಇಟ್ಟುಕೊಂಡಿದ್ದಾರೆ. ಟೈ-ಹುಬ್ಬಳ್ಳಿ ಸಂಸ್ಥೆಯು ಹುಬ್ಬಳ್ಳಿಯಲ್ಲಿ ಶಹರದ ಆರ್ಥಿಕ ಏಳಿಗೆಗಾಗಿ ಔದ್ಯೋಗಿಕ ಹಾಗೂ ವಾಣಿಜ್ಯ ಚಟುವಟಿಕೆಗಳ ಹೆಚ್ಚಿನ ವಿಸ್ತರಣೆಯ ದೃಷ್ಠಿಯಿಂದ ಬೃಹತ್ ವಿಚಾರ ಸಂಕಿರಣ ಹಾಗೂ ಗೋಷ್ಠಿ ವ್ಯವಸ್ಥೆ ಮೂಲಕ ದೇಶದ ಹೆಸರಾಂತ ವಾಣಿಜ್ಯೋದ್ಯಮಿಗಳನ್ನು ಆಹ್ವಾನಿಸುವ ಪರಂಪರೆಯನ್ನು ಹಾಕಿಕೊಂಡಿದ್ದು ಅದು ಫಲವನ್ನುಸಹ ನೀಡಿರುತ್ತದೆ. ಡಾ. ವಿವೇಕ ಪಾಟೀಲ ಅವರು…

Read More