Author: AIN Author

ಕಂಪ್ಲಿ:- ತಾಲೂಕಿನ ಎಮ್ಮಿಗನೂರು ಸಮೀಪದ ಎಚ್ ವೀರಾಪುರ ಗ್ರಾಮದ ಶ್ರೀ ಜ್ಞಾನಜ್ಯೋತಿ ಜಡೇಶ ಶಿವಲಿಂಗ ಮಂದಿರದಲ್ಲಿ ಕರ್ನಾಟಕ ರತ್ನ ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 117 ಜಯಂತಿಯನ್ನು ಆಚರಿಸಲಾಯಿತು. https://ainlivenews.com/voters-bless-kumaranna-with-a-majority/#google_vignette ಈ ಸಂದರ್ಭದಲ್ಲಿ ಜಡೇಶ ತಾತನವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಅಕ್ಷರ ಅನ್ನ ಆಶ್ರಯದ ಮೂಲಕ ನಾಡಿನ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಆಸರೆಯಾದ ಮಹಾನ್ ಚೇತನ ಅವರ ಆದರ್ಶಗಳನ್ನ ಪ್ರಸ್ತುತ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಪ್ರಸ್ತುತ ಕೇಂದ್ರ ಸರ್ಕಾರ ಶ್ರೀಗಳ ಸೇವೆಯನ್ನು ಪರಿಗಣಿಸಿ ಮರಣ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸ್ಥಳ ದನಿ ಗೋಡೆ ವಿರೇಶಪ್ಪ, ದೈಹಿಕ ಶಿಕ್ಷಕ ಶಿವಕುಮಾರ್, ಪ್ರಮುಖರಾದ ರಾಜಸಾಬ್, ಬಸವರಾಜ ಆಚಾರಿ ಬಡಗಿ ವೀರೇಶ್, ಹಂಚಿನಾಳ್ ಪೀರಸಾಬ್, ಬಸರಾಜ್ ಬಾನಟ್ಟಿ ಶಿವರಾಮಪ್ಪ , ಸೇರಿದಂತೆ ಶ್ರೀಮಠದ ಸದ್ಭಕ್ತರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Read More

ಮಂಡ್ಯ:- ಜಿಲ್ಲೆಯ ಮದ್ದೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳ ಸಮನ್ವಯ ಸಭೆ ಜರುಗಿದೆ. ಮದ್ದೂರು ಪಟ್ಟಣದ ಹೊರ ವಲಯದ ಖಾಸಗಿ ಭವನದ ಪ್ರಚಾರದ ಸಭೆಯಲ್ಲಿ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಭಾಗಿಯಾಗಿ ಮಾತನಾಡಿದರು. https://ainlivenews.com/negligence-of-the-doctor-the-death-of-the-person/#google_vignette ಲೋಕಸಭಾ ಚುನಾವಣೆ ಒಬ್ಬ ಹಣವಂತ, ಒಬ್ಬ ಗುಣವಂತನ ಮೇಲೆ ನಡೆಯುತ್ತಿದೆ. ಮತದಾರರು ಕುಮಾರಣ್ಣನಿಗೆ ಬಹುಮತದಿಂದ ಆಶೀರ್ವಾದ ಮಾಡಬೇಕು. ಲೋಕಸಭಾ ಚುನಾವಣಾ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರನ್ನ ಭೇಟಿ ಮಾಡಿ ನೀವು ಕೇಳುವ ಕ್ಷೇತ್ರ ಬಿಟ್ಟುಕೊಡುವ ಬಗ್ಹೆ ಹೇಳಿದ್ರು. ಕೋಲಾರ, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಿಂದ ಜೆಡಿಎಸ್ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಮೂವರು ಅಭ್ಯರ್ಥಿಗಳು ಜಯಭೇರಿ ಭಾರಿಸುವಲ್ಲಿ ಯಾವುದೇ ಅನುಮಾನವಿಲ್ಲ. ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ರೈತರಿಗೆ ಯಾವುದೇ ಅನುಮಾನ ಬೇಡ. ಮೈತ್ರಿ ಅಭ್ಯರ್ಥಿಗೆ ತಳಮಟ್ಟದಿಂದ ಕೆಲಸ ಮಾಡಬೇಕಿದೆ. 62 ವರ್ಷಗಳ ಸುದೀರ್ಘ ಸಮಯದಿಂದ ಪಕ್ಷವನ್ನು ಕಟ್ಟಲಾಗಿದೆ. ದೇಶದ…

Read More

ಕೋಲಾರ:- ನಗರದ ಹೋಪ್ ಹೆಲ್ತ್ ಕೇರ್ ಆಸ್ಪತ್ರೆ ವೈದ್ಯರ ನಿರ್ಲ್ಯಕ್ಷದಿಂದ ಶ್ರೀನಿವಾಸಪುರ ತಾಲ್ಲೂಕಿನ ಕಮ್ಮತಮ್ಮಪಲ್ಲಿ‌ ಗ್ರಾಮದ ವೆಂಕಟರಮಣಪ್ಪ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/more-than-15-children-are-seriously-ill-after-eating-hot-lunch/ ಹೊಟ್ಟೆ ನೋವು, ಹೊಟ್ಟೆ ಉಬ್ಬಸ ಎಂದು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಬಂದ ಕೆಲವೇ ಹೊತ್ತಿನಲ್ಲಿ ರೋಗಿ ಸಾವನ್ನಪ್ಪಿದ್ದಾನೆ. ವೈದ್ಯರು ನೀಡಿದ್ದ ಇಂಜೆಕ್ಷನ್ ನಿಂದಲೇ ಸಾವನ್ನಿಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರಿಂದ ಆಸ್ಪತ್ರೆಯಲ್ಲಿನ ಕಿಟಕಿ ಗಾಜು ಹೊಡೆದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ವ್ಯದ್ಯರ ಮೇಲೆ ಮೃತರ ಸಂಬಂಧಿಕರು ಹಲ್ಲೆಗೆ ಮುಂದಾಗಿದ್ದರು. ಸ್ಥಳಕ್ಕೆ ಕೋಲಾರ ನಗರ ಠಾಣೆ ಪೋಲೀಸರ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯರ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆ ಹೋಪ್​ ಆಸ್ಪತ್ರೆ ವೈದ್ಯ ಯಶವಂತ್ ಅವರಿಂದ ದೂರು ನೀಡಲಾಗಿದೆ. ಕೋಲಾರ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

Read More

ಕೊಪ್ಪಳ:- ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಜರುಗಿದೆ. https://ainlivenews.com/like-custard-apple-its-leaf-is-very-beneficial-for-health/ ಸಂಗಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದರು. ಮಧ್ಯಾಹ್ನ ಊಟಕ್ಕೆ ಚಿತ್ರಾನ್ನ ಸೇವಿಸಿದ ನಂತರ ಕೆಲಹೊತ್ತಿನಲ್ಲಿ ವಾಂತಿ ಭೇದಿಯಿಂದ ವಿದ್ಯಾರ್ಥಿಗಳು ಬಳಲಿದ್ದಾರೆ. ಕೂಡಲೇ ಅಸ್ವಸ್ಥ ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಿಹೆಚ್​ಸಿಗೆ ಡಿಹೆಚ್​ಒ ಡಾ.ಲಿಂಗರಾಜ್​ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಸುದ್ದಿ ತಿಳಿದು ಪ್ರಾಥಮಿಕ ಆರೋಗ್ಯ ಪೋಷಕರು ಕೇಂದ್ರಕ್ಕೆ ಆಗಮಿಸಿದ್ದಾರೆ.

Read More

ಸೀತಾಫಲ ಮಾತ್ರವಲ್ಲದೆ ಅದರ ಎಲೆಗಳು ಸಹ ಹಲವಾರು ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಆಯುರ್ವೇದದಲ್ಲಿ ಸೀತಾಫಲ ಎಲೆಗಳನ್ನು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಸೀತಾಫಲದ ಎಲೆಗಳನ್ನು ಜ್ಯೂಸ್, ಕಷಾಯ ಅಥವಾ ಚಹಾದ ರೂಪದಲ್ಲಿ ನೀವು ಸೇವಿಸಬಹುದು. ಇದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತದೆ ಮತ್ತು ನೀವು ಅನೇಕ ಆರೋಗ್ಯ ಲಾಭವನ್ನು ಪಡೆಯಬಹುದು. ಹಾಗಿದ್ದರೆ ಸೀತಾಫಲ ಎಲೆಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂಬುದನ್ನು ತಿಳಿಯೋಣ. ಸೀತಾಫಲ ಎಲೆಗಳಲ್ಲಿ ಹಲವು ಪೋಷಕಾಂಶಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ವಿಟಮಿನ್ ಎ ಜೊತೆಗೆ ವಿಮಿನ್ ಬಿ, ವಿಟಮಿನ್ ಸಿ, ಕಬ್ಬಿಣ, ಫೈಬರ್ ಮತ್ತು ಕ್ಯಾಲ್ಸಿಯಂ ಸಹ ಇದರಲ್ಲಿ ಕಂಡುಬರುತ್ತದೆ. ಅಲ್ಲದೆ ಇದರಲ್ಲಿ ಅನೇಕ ಆಂಟಿಆಕ್ಸಿಡೆಂಟ್ ಅಂಶಗಳಿದ್ದು, ಇದು ದೇಹದಲ್ಲಿರುವ ಫ್ರೀ ರಾಡಿಕಲ್ ವಿರುದ್ಧ ಹೋರಾಡಿ ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಊತ ಮತ್ತು ನೋವಿನಿಂದ…

Read More

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್​-17 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಹ್ಯಾಟ್ರಿಕ್ ಸೋಲಿನ ನಡುವೆ ಎಂಬುದು ವಿಶೇಷ. https://ainlivenews.com/are-you-making-this-mistake-while-drinking-water/ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್​ನಲ್ಲಿ 250 ಪಂದ್ಯಗಳನ್ನು ಪೂರೈಸಿದೆ. ಈ ಮೂಲಕ ಐಪಿಎಲ್​ನಲ್ಲಿ 250 ಪಂದ್ಯಗಳನ್ನಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾತ್ರವಾಗಿದೆ 2008 ರಿಂದ 2024 ರವರೆಗೆ 250* ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗೆಯೇ 138 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, 108 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳು ಫಲಿತಾಂಶರಹಿತವಾಗಿತ್ತು. ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ತಂಡಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಆರ್​ಸಿಬಿ ಇದುವರೆಗೆ 244 ಪಂದ್ಯಗಳನ್ನಾಡಿದ್ದು, ಈ ಬಾರಿಯ ಐಪಿಎಲ್​ ಮೂಲಕ 250…

Read More

ಮಾನವನ ಜೀವನದಲ್ಲಿ ನೀರು ಅಮೃತವಿದ್ದಂತೆ. ನೀರಿನ ಕೊರತೆಯಿಂದಾಗಿ, ಆಮ್ಲಜನಕ ಮತ್ತು ಪೋಷಣೆ ಜೀವಕೋಶಗಳಿಗೆ ಸರಿಯಾಗಿ ತಲುಪುವುದಿಲ್ಲ. ನೀರು ಮಾನವನ ಜೀವನದಲ್ಲಿ ಒಂದು ಜೀವಸೆಲೆ ಇದ್ದಂತೆ ಆದರೆ ಅದರ ದುರುಪಯೋಗವು ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು. ವಾಸ್ತವವಾಗಿ, ಇತ್ತೀಚೆಗೆ ಒಂದು ವರದಿಯು ಹೊರಬಿದ್ದಿದೆ, ಅದು ತಪ್ಪು ರೀತಿಯಲ್ಲಿ ನೀರು ಕುಡಿಯುವುದರಿಂದ ಗಂಟಲು ಕ್ಯಾನ್ಸರ್ ಉಂಟಾಗುತ್ತದೆ ಎಂದು ಬಹಿರಂಗಪಡಿಸಿದೆ. https://ainlivenews.com/the-oppression-of-dk-brothers-must-end-cp-yogeshwar/#google_vignette ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯಬಾರದು. ಅಧ್ಯಯನದ ಪ್ರಕಾರ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತದೆ ಶೇ.80ರಷ್ಟು ಜನರ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ ಕಂಡು ಬರುತ್ತದೆ. ಇದರಿಂದ ಅಂಗಾಂಗಕ್ಕೆ ಹಾನಿಯಾಗಬಹುದು. ಮತ್ತು ಇದು ಕ್ಯಾನ್ಸರ್​ಗೆ ಕಾರಣವಾಗಬಹುದು. ಸಾಕಷ್ಟು ನೀರು ಕುಡಿಯದಿರುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಜನರು ಕೆಲಸದ ಕಾರಣ ನೀರು ಕುಡಿಯುವುದನ್ನು ಮರೆಯುತ್ತಿದ್ದಾರೆ. ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ವಯಸ್ಕರು ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎಂದು ತಜ್ಞರು ನಂಬುತ್ತಾರೆ. ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬೇಡಿ,…

Read More

ರಾಮನಗರ:- ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸೋದರರ ದಬ್ಬಾಳಿಕೆ ಕೊನೆಯಾಗ್ಬೇಕು ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ. https://ainlivenews.com/ipl-2024-rcb-win-the-toss-opt-to-bowl-lsg-bat/#google_vignette ಈ ಸಂಬಂಧ ಮಾತನಾಡಿದ ಅವರು,ಜನ ಮತ್ತು ಅಧಿಕಾರಿಗಳೊಂದಿಗೆ ಸುರೇಶ್ ನಡೆದುಕೊಳ್ಳುವ ರೀತಿ, ಸಂಸತ್ತಿನ ಒಳಗೆ ಮಮತ್ತು ಹೊರಗೆ ಅವರ ವರ್ತನೆ, ದೇಶವಿರೋಧಿ ಹೇಳಿಕೆ ಕ್ಷೇತ್ರದಲ್ಲಿ ಅವರ ವಿರೋಧಿ ಅಲೆಯನ್ನು ಸೃಷ್ಟಿಸಿವೆ ಎಂದರು. ಅವರ ವರ್ತನೆಗೆ ತದ್ವಿರುದ್ಧವಾಗಿ ಡಾ ಮಂಜುನಾಥ್ ಸಜ್ಜನ, ವಿದ್ಯಾವಂತ ಮತ್ತು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಒಬ್ಬ ವೈದ್ಯನಾಗಿ 4 ದಶಕಗಳಿಗೂ ಹೆಚ್ಚು ಕಾಲ ಜನ ಸೇವೆ ಮಾಡಿದ್ದಾರೆ. ಇಂಥವರನ್ನು ಜನ ತಮ್ಮ ಪ್ರತಿನಿಧಿಯಾಗಿ ಹೊಂದಲು ಇಷ್ಟಪಡುತ್ತಾರೆ ಎಂದು ಯೋಗೇಶ್ವರ್ ಹೇಳಿದರು. ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಮಾತಾಡಿದ ಅವರು, ರಾಜಕೀಯದಲ್ಲಿ ನಿರ್ಧಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾಗುತ್ತದೆ. ಕಳೆದ ಸಲ ಮೈತ್ರಿ ಇಲ್ಲದೆ 25 ಸ್ಥಾನ ಸಿಕ್ಕಿದ್ದವು, ಈ ಬಾರಿ ಎಲ್ಲ 28 ಸ್ಧಾನಗಳನ್ನು ಗೆಲ್ಲುವ ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಯೋಗೇಶ್ವರ್ ಹೇಳಿದರು.

Read More

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೊದಲು ಟಾಸ್ ಗೆದ್ದ RCB ತಂಡವು ಬೌಲಿಂಗ್ ಆಯ್ದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ. https://ainlivenews.com/bolero-collision-20-sheep-died-along-with-three-people-in-the-vehicle/#google_vignette ಇಂದಿನ ಪಂದ್ಯದಲ್ಲಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಅದರಂತೆ ಅಲ್ಝಾರಿ ಜೋಸೆಫ್ ಸ್ಥಾನದಲ್ಲಿ ಎಡಗೈ ವೇಗಿ ರೀಸ್ ಟೋಪ್ಲಿ ಕಣಕ್ಕಿಳಿದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನ​ (IPL 2024) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಅದರಂತೆ ಅಲ್ಝಾರಿ ಜೋಸೆಫ್ ಸ್ಥಾನದಲ್ಲಿ ಎಡಗೈ ವೇಗಿ ರೀಸ್ ಟೋಪ್ಲಿ ಕಣಕ್ಕಿಳಿದಿದ್ದಾರೆ. ಉಭಯ ತಂಡಗಳು ಇದುವರೆಗೆ 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ…

Read More

ಹಾವೇರಿ:- ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿ ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಕುರಿ ತುಂಬಿದ್ದ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ವ್ಯಕ್ತಿಗಳು ಸೇರಿದಂತೆ 20 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. https://ainlivenews.com/devegowdas-family-did-not-thank-the-people-after-winning-dk-suresh/ ಗುಡ್ಡಪ್ಪ ಕೈದಾಳಿ ಮೈಲಾರಪ್ಪ ಕೈದಾಳಿ, ಶಿವರಾಜ್ ಹೊಳೆಪ್ಪನವರ ಮೃತರು ಎಂದು ಗುರುತಿಸಲಾಗಿದೆ. ಕಾಕೋಳ ಗ್ರಾಮಕ್ಕೆ ಬರುವಾಗ ಮಾರ್ಗಮಧ್ಯೆ ದುರಂತ ಸಂಭವಿಸಿದೆ. ಬೀರಪ್ಪ ದೊಡ್ಡಚಿಕ್ಕಣ್ಣನವರ, ನಿಂಗರಾಜ್ ಹಿತ್ತಲಮನಿ ಮತ್ತಯ ನಿಂಗಪ್ಪ ಕೊರಗುಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಮತ್ತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Read More