Author: AIN Author

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. https://ainlivenews.com/what-could-be-the-political-future-of-rebel-lady ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024​ ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿ ದಾಖಲೆ ಮಾಡಿದ್ದಾರೆ. ಒಂದೇ ಮೈದಾನದಲ್ಲಿ ಬರೋಬ್ಬರಿ 100 ಟಿ20 ಪಂದ್ಯವನ್ನು ಆಡಿದ ಭಾರತದ ಮೊದಲ ಕ್ರಿಕೆಟರ್​ ಕೊಹ್ಲಿ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 80 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಸೇರಿದ್ದಾರೆ . ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್ ಧೋನಿ 69 ಪಂದ್ಯಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ 3,276 ರನ್​ ಗಳಿಸಿದ್ದಾರೆ. ಅದರಲ್ಲಿ 4 ಶತಕ 25 ಅರ್ಧಶತಕ ಸೇರಿವೆ.

Read More

ಕೇವಲ ಸರ್ಕಾರಿ ಉದ್ಯೋಗ, ಸಾಫ್ಟ್​ವೇರ್ ಉದ್ಯೋಗದಿಂದ ಮಾತ್ರ  ಒಳ್ಳೆಯ ಸಂಪಾದನೆ ಪಡೆಯಬಹುದು ಎಂದು ಕೆಲವರು ನಂಬುತ್ತಾರೆ. ಆದರೆ ಕೃಷಿಯ ಮೂಲಕವೂ ಸಾಧಿಸಬಹುದು. ಅದಕ್ಕೆ ಬೇಕಾಗಿರುವುದು ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಎಂಬುದನ್ನ ಅಮೇಥಿಯ ರೈತ ಅಜಯ್ ವರ್ಮಾ ಇದನ್ನು ಸಾಬೀತುಪಡಿಸಿದ್ದಾರೆ. ರೈತ ಅಜಯ್ ವರ್ಮಾ ಅವರ ಕುಟುಂಬಕ್ಕೆ ಪ್ರತಿ ಒಂದೊಂದು ರೂಪಾಯಿಗೂ ಕಷ್ಟಪಟ್ಟ ದಿನಗಳಿವೆ. ಆದರೆ, ಇಂದು ತರಕಾರಿ ಕೃಷಿ ಅವರ ಕೈ ಹಿಡಿದಿದೆ. ಕೃಷಿ ಅಧ್ಯಯನ ಮಾಡಿದ ನಂತರ, ಅಜಯ್‌ಗೆ ಉದ್ಯೋಗ ಸಿಗಲಿಲ್ಲ, ಆದ್ದರಿಂದ ಅವರು ಕೃಷಿಯನ್ನೇ ತನ್ನ ಸ್ವಂತ ಉದ್ಯೋಗವನ್ನಾಗಿ ಮಾಡಿಕೊಂಡರು. https://ainlivenews.com/green-tomato-cultivation-will-get-the-highest-income/ ರೈತ ಅಜಯ್ ವರ್ಮಾ ಅಮೇಥಿ ಜಿಲ್ಲೆಯ ಸಂಗ್ರಾಮಪುರ ಅಭಿವೃದ್ಧಿ ಬ್ಲಾಕ್‌ನ ಪುನ್ನಾಪುರ ಗ್ರಾಮದ ನಿವಾಸಿ. ಅಜಯ್ ವರ್ಮಾ ಅವರು ಸ್ನಾತಕೋತ್ತರ ಪದವಿವರೆಗೆ ಕೃಷಿ ಅಧ್ಯಯನ ಮಾಡಿದ್ದಾರೆ. ಆ ನಂತರವೂ ಕೆಲಸ ಸಿಗದ ಕಾರಣ ಸ್ವಯಂ ಉದ್ಯೋಗ ಮಾಡುವ ನಿರ್ಧಾರಕ್ಕೆ ಬಂದಿದ್ದು, ವಿವಿಧ ತರಕಾರಿಗಳನ್ನು ಬೆಳೆದು ಕೈತುಂಬಾ ಸಂಪಾದಿಸುತ್ತಿದ್ದಾರೆ. ಅಜಯ್ ವರ್ಮಾ ವಿವಿಧ ಕಾಲಕ್ಕೆ ತಕ್ಕ…

Read More

ಬೆಂಗಳೂರು: 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಸ್ಟಾರ್‌ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಅವರು ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ಭೇಟಿ ನೀಡಿದ್ದಾರೆ ಹಾಗೂ ದೀರ್ಘಾವಧಿ ಮೂತ್ರಪಿಂಡ ಕಾಯಿಲೆ ಬಗ್ಗೆ ಅರಿವು ಮೂಡಿಸಿದ್ದಾರೆ. https://ainlivenews.com/do-not-eat-these-foods-immediately-after-eating-ice-cream/ ಕ್ಯಾಮೆರಾನ್‌ ಗ್ರೀನ್ ಅವರು ದೀರ್ಘಾವಧಿ ಮೂತ್ರಪಿಂಡ ಕಾಯಲೆಯಿಂದ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಆಸೀಸ್‌ ಆಲ್‌ರೌಂಡರ್‌ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಗ್ರೀನ್‌ ಅವರು ಹುಟ್ಟಿನಿಂದಲೇ ಎರಡನೇ ಹಂತದ ಮೂತ್ರಪಿಂಡ ಕಾಯಿಲೆಯನ್ನು ಹೊಂದಿದ್ದರು. ಈ ಬಗ್ಗೆ ತಮ್ಮ ಬಾಲ್ಯದಲ್ಲಿಯೇ ಅವರಿಗೆ ಅರಿವಾಗಿತ್ತು. 12ನೇ ವಯಸ್ಸಿನಲ್ಲಿದ್ದಾಗ ಮೂತ್ರಪಿಂಡ ಕಾಯಿಲೆ ಇರುವ ಬಗ್ಗೆ ವೈದ್ಯರು ಆಸೀಸ್‌ ಆಟಗಾರನ ಪೋಷಕರಿಗೆ ತಿಳಿಸಿದ್ದರು. 2023ರ ವರೆಗೂ ಕ್ಯಾಮೆರಾನ್‌ ಗ್ರೀನ್ ಅವರು ಈ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಆಸ್ಟ್ರೇಲಿಯಾ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಗ್ರೀನ್‌ ಕಡ್ಡಾಯ ಆಹಾರ ಪದ್ದತಿಯನ್ನು ಪಾಲಿಸುತ್ತಿದ್ದಾರೆ.

Read More

ಮಂಡ್ಯ:- ಹಾಲಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. https://ainlivenews.com/manjunath-to-the-stage-to-answer-the-politics-of-iniquity/#google_vignette ಈ ಕುರಿತಂತೆ ಅವರು ಇಂದು ತಮ್ಮ ನಿರ್ಧಾರವನ್ನು ಪ್ರಕಟ ಮಾಡಲಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ. ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ…

Read More

ಇತ್ತೀಚೆಗೆ ಬಿಸಿಲ ಬೇಗೆಗೆ ಹೊರಗಡೆ ಹೋಗೋದೇ ಬೇಡ ಅನಿಸಿ ಬಿಡುತ್ತದೆ ಯಾಕಂದರೆ ಎಷ್ಟೇ ಚೆನ್ನಾಗಿ ಮೇಕಪ್‌ ಮಾಡಿಕೊಂಡು ಹೋದ್ರೂ ಈ ಬಿಸಿಲಿಗೆ ಮುಖದ ಕಾಂತಿ ಮಾಯವಾಗಿ ಹೋಗುತ್ತದೆ ಅದರಲ್ಲೂ ಹುಡುಗಿಯರಂತೂ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆ ಹಾಳಗದಂತೆ ಎಚ್ಚರವಹಿಸುತ್ತಾರೆ ಹಾಗಾದ್ರೆ ಬಿಸಿಲಿನ ನಡುವೆಯೂ   ಮುಖದ ಕಾಂತಿ ಹೆಚ್ಚಿಸಬೇಕೆ ಇಲ್ಲಿದೆ ನೋಡಿ ಮನೆ ಮದ್ದು ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೇ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚಾಗುತ್ತದೆ. https://ainlivenews.com/want-to-grow-lush-hair-on-your-head-use-sibe-tree-strands/ ಕಡಲೆ ಹಿಟ್ಟು ಕಡಲೆ ಹಿಟ್ಟಿಗೆ 2 ಚಮಚ ಮೊಸರು ಬೆರೆಸಿ ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಒಣಗಿದ ಬಳಿಕ ಮುಖ ತೊಳೆಯಿರಿ. ಹೀಗೆ 20 ಡೇಸ್ ಮಾಡಿದರೆ ತ್ವಚೆಯ ಕಾಂತಿಯನ್ನು ಕಾಪಾಡಬಹುದು. ನಿಂಬೆ ರಸ 2 ಚಮಚ ಜೇನುತುಪ್ಪದೊಂದಿಗೆ ನಿಂಬೆ ರಸ ಮಿಶ್ರಣ ಮಾಡಿ ಬಳಿಕ ಮುಖಕ್ಕೆ ಹಚ್ಚಿ. 15ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ…

Read More

ನಮ್ಮ ದೇಹಕ್ಕೆ ಬೇಸಿಗೆಯಲ್ಲಿ ನೀರು ಅಧಿಕವಾಗಿ ಬೇಕಾಗುತ್ತದೆ.ಯಾಕೆಂದರೆ ಬೇಸಿಗೆಯಲ್ಲಿ ನಮ್ಮ ದೇಹವು ಬೆವರಿನ ಮೂಲಕ ನಿರಂತರವಾಗಿ ನೀರನ್ನು ಕಳೆದುಕೊಳ್ಳುವುದರಿಂದ ಇದರಿಂದ ನಮ್ಮ ದೇಹಕ್ಕೆ ನೀರಿನ ಪೂರೆಕೈ ಸರಿಯಾಗಿ ಆಗುವುದಿಲ್ಲ. ನಾವು ಈ ಸೀಸನ್​ನಲ್ಲಿ ತೂಕ ಇಳಿಸಬೇಕಾದರೆ ನಾವು ಎಳೆನೀರಿನ್ನು ಕುಡಿಯಬೇಕು. ಹಾಗಿದ್ರೆ ಎಳುನೀರು ಕುಡಿಯುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳಿವೆ ಇದರಿಂದ ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯಮಾಡುತ್ತದೆ. https://ainlivenews.com/do-not-eat-these-foods-immediately-after-eating-ice-cream/ ಎಳೆನೀರು ತೂಕವನ್ನು ಇಳಿಸಲು ಯಾವ ರೀತಿ ಅನುಕೂಲವಾಗಿದೆ?  ಎಳೆನೀರು ಚಯಾಪಚಯವನ್ನು ಹೆಚ್ಚಿಸಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ತೂಕ ನಷ್ಟಕ್ಕೆ ಅಗತ್ಯವಿರುತ್ತದೆ. ಎಳೆನೀರು ಸೋಡಾಗಳು ಅಥವಾ ಹಣ್ಣಿನ ರಸಗಳಂತಹ ಇತರ ಅನೇಕ ಸಕ್ಕರೆ ಪಾನೀಯಗಳಿಗೆ ಹೋಲಿಸಿದರೆ,  ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಎಳೆನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಯಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಎಳೆನೀರು ಎಲೆಕ್ಟ್ರೋಲೈಟ್‌ಗಳ ನೈಸರ್ಗಿಕ ಮೂಲವಾಗಿದ್ದು, ದೇಹದಲ್ಲಿ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ಎಳೆನೀರು ಹಸಿವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ.…

Read More

ರಾಮನಗರ:- ಅಧರ್ಮದ ರಾಜಕಾರಣಕ್ಕೆ ಉತ್ತರ ಕೊಡಲು ಮಂಜುನಾಥ್ ಕಣಕ್ಕೆ ಇರಿಸಲಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ https://ainlivenews.com/bjp-must-be-defeated-to-survive-constitution-siddaramaiahs-call/ ಮಂಜುನಾಥ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ಅಮಿತ್ ಶಾ ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಒಂದೇ ದೇಹದ ಎರಡು ಕಣ್ಣುಗಳಿದ್ದ ಹಾಗೆ. ಕಳೆದ ಎರಡು ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದೀರಿ. ಇಡೀ ರಾಜ್ಯದಲ್ಲಿ ನಾನು ಚುನಾವಣೆಗೆ ಕೆಲಸ ಮಾಡ್ತಾ ಇದ್ದೀನಿ. ನನ್ನ ಹೃದಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿದೆ. ನಾನು ರಾಮನಗರ ಬಿಟ್ಟು ಹೋಗಲ್ಲ. ಇವತ್ತು ಅನಿವಾರ್ಯವಾಗಿ ಬಿಜೆಪಿ ಜೊತೆ ಅಭಿವೃದ್ಧಿಗಾಗಿ ಕೈ ಜೋಡಿಸಿದ್ದೇವೆ. ದಯಮಾಡಿ ನನ್ನ ಚನ್ನಪಟ್ಟಣದ ಜನರು ಕ್ಷಮಿಸಬೇಕು ಎಂದಿದ್ದಾರೆ. ಏ.4ಕ್ಕೆ ನಾನು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿ ಬಳಿಕ ಇಲ್ಲಿಗೆ ಬರುತ್ತೇನೆ. ಅಂದು ಮಂಜುನಾಥ್ ಅವರು ನಾಮಪತ್ರ ಸಲ್ಲಿಸುತ್ತಾರೆ. ಅಂದು ಎಲ್ಲಾ ವಿಚಾರವನ್ನು ಪ್ರಸ್ತಾಪ ಮಾಡಲಿದ್ದೇನೆ. ದೇಶದ ಜನರು ಮೋದಿಯವರನ್ನು ಬೆಂಬಲಿಸಿದ್ದಾರೆ. ರಾಜ್ಯದಲ್ಲಿ 28 ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು.…

Read More

ಮೈಸೂರು:- ಸಂವಿಧಾನ ಉಳಿಯಲು ಬಿಜೆಪಿ ಸೋಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಂವಿಧಾನ ಕೆಟ್ಟವರ ಕೈಯಲ್ಲಿ ಸಿಲುಕಿದೆ. ಸಂವಿಧಾನ ಉಳಿಯಬೇಕೆಂದರೆ ಬಿಜೆಪಿಯನ್ನು ಸೋಲಿಸಬೇಕು. https://ainlivenews.com/rcb-who-stumbled-again-at-home-super-win-by-28-runs-for-lucknow/ ದಲಿತರನ್ನು ದೇವರ ಗರ್ಭಗುಡಿ ಒಳಗಡೆಯೇ ಬಿಡುವುದಿಲ್ಲ. ಹೀಗಾಗಿ ದಲಿತರು ಮತ್ತೆ ಬಿಜೆಪಿಯವರ ಮುಖ ನೋಡಬೇಡಿ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿಯವರು ವಿರುದ್ಧವಾಗಿದ್ದಾರೆ. ಬಿಜೆಪಿ ಸಮಾಜಕ್ಕೆ ಡೇಂಜರ್. ಬಿಜೆಪಿ ಆರ್​ಎಸ್ಎಸ್​ನ ಮತ್ತೊಂದು ಮುಖ. ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ನಾನು ಸಾಯಲಾರೆ ಅಂತಾ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read More

ಡಿಜಿಟಲ್‌ ಯುಗದಲ್ಲಿ ಒತ್ತಡದ ಜೀವನವೇ ಹೆಚ್ಚು. ಪ್ರತಿದಿನ ನೂರೆಂಟು ಕೆಲಸ, ಮನೆಯಿಂದ ಹೊರಡುವ ಅವಸರದಲ್ಲಿ ಫೋನ್‌ ಚಾರ್ಜ್‌ ಮಾಡಲು ಮರೆತೇ ಹೋಗುತ್ತೆ. ಅಲ್ಲೇ ಹೊರಗೆ ಚಾರ್ಜ್‌ ಮಾಡಿಕೊಂಡರೆ ಆಯ್ತು ಅನ್ನೋದು ಅನೇಕರಿಗೆ ಅಭ್ಯಾಸ ಆಗಿಬಿಟ್ಟಿದೆ. ಪ್ರಯಾಣದ ವೇಳೆ ಅಥವಾ ಪ್ರಯಾಣಕ್ಕೂ ಮುನ್ನ ಚಾರ್ಜಿಂಗ್‌ ಪಾಯಿಂಟ್‌ಗಳಲ್ಲಿ (Charging Portals) ಫೋನ್‌ ಸಿಕ್ಕಿಸಿ ಬ್ಯಾಟರಿ ತುಂಬಿಸಿಕೊಳ್ಳುತ್ತಾರೆ. ಆದ್ರೆ ಇದು ಎಲ್ಲ ಸಂದರ್ಭದಲ್ಲೂ ಒಳ್ಳೆಯದಲ್ಲ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಚಾರ್ಜ್‌ ಮಾಡುವ ವೇಳೆ ಯುಸ್‌ಬಿ ಚಾರ್ಜರ್‌ (USB Charger) ಬಳಸಿಯೇ ನಿಮ್ಮ ಮೊಬೈಲ್‌ನಲ್ಲಿರುವ ಡೇಟಾಗಳನ್ನು ಕಳವು ಮಾಡುವ ಸೈಬರ್‌ ಖದೀಮರು ಹುಟ್ಟಿಕೊಂಡಿದ್ದಾರೆ. ಸೈಬರ್‌ ಖದೀಮರು ದುರುದ್ದೇಶಪೂರಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಯುಎಸ್‌ಬಿ ಚಾರ್ಜಿಂಗ್‌ ಪೋರ್ಟ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಅದಕ್ಕಾಗಿಯೇ ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಫೋನ್ ಚಾರ್ಜಿಂಗ್ ಪೋರ್ಟಲ್‌ಗಳನ್ನು ಬಳಸದಂತೆ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೇ ʻಯುಎಸ್‌ಬಿ ಚಾರ್ಜರ್‌…

Read More

ಬ್ಯಾಟಿಂಗ್‌ ವೈಫಲ್ಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ತವರಿನಲ್ಲೇ ಹೀನಾಯ ಸೋಲನುಭವಿಸಿದೆ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಲಕ್ನೋ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಕ್ರೀಸ್‌ಗಿಳಿದ ಲಕ್ನೋ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. 182 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಸರ್ವಪತನ ಕಂಡಿದ್ದು, ಸೋಲೊಪ್ಪಿಕೊಂಡಿತು. https://ainlivenews.com/good-news-for-gold-lovers-gold-price-decrease/ 182 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲಿ ಸ್ಪೋಟಕ ಪ್ರದರ್ಶನ ನೀಡಿದರೂ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 4.2 ಓವರ್‌ಗಳಲ್ಲಿ 40 ರನ್‌ ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿ ಮುಂದಿನ 18 ರನ್‌ ಗಳಿಸುಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್‌ ಲೋಮ್ರೋರ್‌ ಹಾಗೂ ರಜತ್‌ ಪಾಟೀದಾರ್‌ ಅವರ ಆಟವು ಗೆಲುವಿನ ಭರವಸೆ ಹೆಚ್ಚಿಸಿತ್ತು. ಇವರಿಬ್ಬರ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ…

Read More