Author: AIN Author

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ . ಸೋಮಶೇಖರ್ ಗುರೂಜಿB.Sc Mob. 9353488403 ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. ಕೇಂದ್ರ ತ್ರಿಕೋನ ರಾಜ ಯೋಗದಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಆಸ್ತಿ, ಯಶಸ್ಸು, ಸಂತೋಷ, ಐಷಾರಾಮಿ ಜೀವನ, ಉನ್ನತ ಶಕ್ತಿ, ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ, ಉತ್ತಮ ವೃತ್ತಿ, ಉನ್ನತ ಸ್ಥಾನ, ಸಂತೃಪ್ತಿ ಹೆಸರು ಮತ್ತು ಖ್ಯಾತಿಯನ್ನು ಅನುಭವಿಸುವನು. ಜೀವನದಲ್ಲಿ ಸದಾ ಸುಖ ಸಂತೋಷದಿಂದ ಉತ್ತಮ ಜೀವನವನ್ನು ನಡೆಸುವನು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಈ ಯೋಗದಲ್ಲಿ ಅದೃಷ್ಟವು ಒಂಬತ್ತನೇ ಮನೆಯನ್ನು ಪ್ರತಿನಿಧಿಸುತ್ತಿದ್ದರೆ ಅದು ಅತ್ಯಂತ ಮಹತ್ವ ಹಾಗೂ ಉತ್ತಮವಾದ ಯೋಗಗಳಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ರೇಖೆಯ ರೂಪದಲ್ಲಿ ಕೇಂದ್ರ ತ್ರಿಕೋನ ಯೋಗವು ನಿರ್ಧಾರವಾಗುತ್ತದೆ. ಕುಂಡಲಿಯಲ್ಲಿ ಕೇಂದ್ರ ತ್ರಿಕೋನ ಯೋಗ ಕುಂಡಲಿ ಅಥವಾ ಜಾತಕದಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಪ್ರತಿಯೊಂದು ವಿಭಾಗವು ಎರಡು ಕೋನಗಳಿಂದ ಸುತ್ತುವರಿದಿರುತ್ತದೆ. ಈ ಕೋನಗಳು ಒಂದು ಕೇಂದ್ರದಲ್ಲಿ (1, 4, 7 ಮತ್ತು 10ನೇ ಮನೆಯಲ್ಲಿ) ಅಥವಾ ತ್ರಿಕೋನವು (1,…

Read More

ಸೂರ್ಯೋದಯ: 06:12, ಸೂರ್ಯಾಸ್ತ : 06:26 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ,ಕೃಷ್ಣ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ನವಮಿ, ನಕ್ಷತ್ರ: ಉತ್ತರಾಷಾಢ, ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ಮ.3:40 ನಿಂದ ಸಂ.5:11 ತನಕ ಅಭಿಜಿತ್ ಮುಹುರ್ತ:ಇಲ್ಲ ಮೇಷ ರಾಶಿ: ಗಂಡ ಹೆಂಡತಿ ಲವಲವಿಕೆಯ ದಿನ,ಉದ್ಯಮ ಉತ್ಪನ್ನಗಳ ಮಾರಾಟ ಜಾಲದಲ್ಲಿ ಮೋಸ ಸಂಭವ, ಗೃಹಿಣಿಯರ ಸ್ವಂತ ವ್ಯಾಪಾರಗಳಿಂದ ಧನ ಲಾಭ ಹಾಗೂ ಮುನ್ನಡೆ ಸಾಧಿಸಲಿದ್ದೀರಿ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ…

Read More

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಗೆದ್ದು ಸಂಸದರಾದರೂ ಕೂಡ ಜೆಡಿಎಸ್‌ನವರು ಸಂಸದೆ ಸುಮಲತಾ (Sumalatha Ambareesh) ಅವರಿಗೆ ಯಾವುದೇ ಸಹಕಾರ ನೀಡದೆ ಪ್ರತಿ ಹಂತದಲ್ಲೂ ಸುಮಲತಾ ವರ್ಸಸ್ ದಳಪತಿಗಳ ನಡುವೆ ವಾಕ್ಸಮರ ನಡೆಯುತ್ತಿತ್ತು. ಸದ್ಯ ಮಂಡ್ಯ (Mandya) ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಗಿದ್ದು, ನಿತ್ಯವೂ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿತ್ತು. ಕಾರಣ, ಅಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಕ್ಷೇತ್ರದಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಿದ್ದರು. ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವೇ ಮಂಡ್ಯದಲ್ಲಿ ಬೀಡುಬಿಟ್ಟರೂ ಸ್ವಾಭಿಮಾನದ ಅಲೆಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ. ಸ್ವಾಭಿಮಾನದ ಸೆರಗೊಡ್ಡಿ ಮತ ಭಿಕ್ಷೆ ಬೇಡಿದ ಪರಿಣಾಮ ಸುಮಲತಾ ಅಂಬರೀಶ್ ಗೆದ್ದು, ಅಂದಿನ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋಲಬೇಕಾಯಿತು. https://ainlivenews.com/such-students-will-get-rs-12400-per-month-scholarship-apply-today/ ಅತ್ತ ಸುಮಲತಾ ಅಂಬರೀಶ್ ಸಂಸದರಾದ ನಂತರ ಬಿಜೆಪಿ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದರು. ಇತ್ತ ಕಳೆದ…

Read More

ಧಾರವಾಡ: ಲೋಕಸಭಾ ಚುನಾವಣೆಗೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಎಂಬ ವಿಚಾರವಾಗಿ ಧಾರವಾಡದ ಸೇವಾಲಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಭಕ್ತರ ಸಭೆ ಕರೆದಿದ್ದರು. ಸ್ವಾಮೀಜಿಗಳು ಸೇವಾಲಯಕ್ಕೆ ಬರುತ್ತಿದ್ದಂತೆ ಭಕ್ತಗಣ ಹೂವಿನ ಹಾಸಿಗೆ ಮೇಲೆ ಅವರನ್ನು ಬರಮಾಡಿಕೊಂಡರು. ನಾನು ಒಂದು ಗುರಿ ಇಟ್ಟುಕೊಂಡಿದ್ದು, ಆ ಗುರಿ ಮುಟ್ಟುವ ತನಕ ಕೊರಳಲ್ಲಿ ಮಾಲೆ ಹಾಕಿಕೊಳ್ಳುವುದಿಲ್ಲ ಎಂದು ಭಕ್ತರಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಕ್ತರೊಂದಿಗೆ ಮಾತುಕತೆ ನಡೆಸಿದ ದಿಂಗಾಲೇಶ್ವರ ಸ್ವಾಮೀಜಿ, ಭಕ್ತರ ಅಭಿಪ್ರಾಯ ಸಂಗ್ರಹಿಸಿದರು. ಸಭೆಯಲ್ಲಿ ಎಲ್ಲ ಭಕ್ತರು, ದಿಂಗಾಲೇಶ್ವರ ಸ್ವಾಮೀಜಿಗಳು ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕು ಎಂಬ ನಿರ್ಣಯ ಮಂಡಿಸಿದರು. ಅಲ್ಲದೇ ಚುನಾವಣೆ ಸಂಬಂಧ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರ ಹಿತರಕ್ಷಣಾ ಸಮಿತಿ ರಚನೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಂಡರು. https://ainlivenews.com/such-students-will-get-rs-12400-per-month-scholarship-apply-today/ ಅಂತಿಮವಾಗಿ ಭಕ್ತರ ಅಭಿಪ್ರಾಯ ಮತ್ತು ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ, ನಾನು ಯಾವುದೇ ಒತ್ತಡ ಮತ್ತು ಆಮಿಷಕ್ಕೆ…

Read More

ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಉತ್ತರಕಾಂಡ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಘೋಷಣೆಯ ಮೂಲಕ ಬಹು ನಿರೀಕ್ಷಿತ ಹಾಗೂ ತಾರಾಗಣದ ಚಿತ್ರ “ಉತ್ತರಕಾಂಡ” ಎಲ್ಲೆಡೆ ಸದ್ದು ಮಾಡುತ್ತಿದೆ. ಅಂತರ ರಾಷ್ಟ್ರೀಯ ಖ್ಯಾತಿಯ ಸಂಗೀತ ಸಂಯೋಜಕ ಅಮಿತ್ “ಉತ್ತರಕಾಂಡ”ಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ. ಅಮಿತ್ ತ್ರಿವೇದಿ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ಸಂಗೀತ ಸಂಯೋಜಕ ಹಾಗೂ ಗಾಯಕ. ಕೇವಲ ಹಿಂದಿ ಚಿತ್ರಗಳಷ್ಟೇ ಅಲ್ಲದೆ,‌ ತೆಲುಗು, ಮಲಯಾಳಂ ಚಿತ್ರಗಳಲ್ಲಿ ತಮ್ಮ ವಿಭಿನ್ನ ಸಂಗೀತ ಸಂಯೋಜನೆ ಶೈಲಿಯ ಮೂಲಕ ಛಾಪನ್ನು ಮೂಡಿಸಿದ್ದಾರೆ. ದೇವ್ ಡಿ, ಕ್ವೀನ್, ವೇಕ್ ಅಪ್ ಸಿಡ್, ಇಂಗ್ಲಿಷ್ ವಿಂಗ್ಲಿಷ್, ಕೈ ಪೋ ಚೆ, ಲೂಟೇರಾ, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ಸಿಕ್ರೆಟ್ ಸೂಪರ್ ಸ್ಟಾರ್, ಮನ್ಮರ್ಜಿಯಾನ್, ಅಂಧಾದುನ್, ಸೈ ರಾ‌ ನರಸಿಂಹ ರೆಡ್ಡಿ, ಜೂಬಿಲಿ ಎಂಬ ವೆಬ್ ಸೀರಿಸ್ ಮತ್ತು ಇತ್ತೀಚಿನ ಶೈತಾನ್ ಮುಂತಾದವುಗಳು ಇವರು ಸಂಗೀತ ಸಂಯೋಜನೆ…

Read More

ಖಾನಾಪುರ:- ರಾಜ್ಯದಲ್ಲಿ ಲೋಕಸಭಾ ಚುನಾವಣೆ ತುಂಬಾನೇ ರಂಗೇರಿದೆ. ರಾಜ್ಯದಲ್ಲಿ ಹೈ ವೋಲ್ಟೇಜ್ ಲೋಕಸಭಾ ಕ್ಷೇತ್ರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಪರ ಖಾನಾಪುರ ತಾಲ್ಲೂಕಿನ ಪಾರೀಶ್ವಾಡ ಗ್ರಾಮಕ್ಕೆ ಮತ ಯಾಚನೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ಹಾಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಆರ್.ವಿ ದೇಶಪಾಂಡೆ ಅವರೊಂದಿಗೆ ಪತ್ರಕರ್ತರ ಸಂದರ್ಶನದಲ್ಲಿ ಮಾತನಾಡಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಡಾ. ಅಂಜಲಿ ಗೆದ್ದು Mp ಆಗೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. https://ainlivenews.com/death-threat-bitcoin-scam-accused-sriki-is-the-gunman/ ಈ ಸಂದರ್ಭದಲ್ಲಿ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಮಲ್ಲಿಕಾರ್ಜುನ ವಾಲಿ, ಅಶೋಕ್ ಅಂಗಡಿ, ಹಬೀಬ್ ಶಿಲೆದಾರ, ಎಂ.ಎಫ್ ಕೋಳಿ, Mm ಸಾಹುಕಾರ, ಮೋಹನ್ ಬಸರಗಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಬೆಂಗಳೂರು:- ಕೊಲೆ ಬೆದರಿಕೆ ಹಿನ್ನೆಲೆ ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್ ನೀಡಲಾಗಿದೆ. ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿ ನೀಡಿದ್ದ ಶ್ರೀಕಿಗೆ ಈಗ ಕೊಲೆ ಬೆದರಿಕೆ ಇದೆ. ಅಷ್ಟೇ ಅಲ್ಲದೇ ಶ್ರೀಕಿ ಪೊಲೀಸರ ಕೈಯಲ್ಲಿ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಾಗಿ ಎಸ್‌ಐಟಿ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ. https://ainlivenews.com/have-you-booked-app-auto-in-bangalore-be-careful-read-this-story-missed/ ವಿಧಾನಸಭಾ ಚುನಾವಣೆಯಲ್ಲಿ ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಆ್ಯಪ್ ಆಟೋ ಬುಕ್ ಮಾಡ್ತಿದ್ದೀರಾ..!? ಹಾಗಿದ್ರೆ ನೀವು ಈ ಸ್ಟೋರಿ ನೋಡಲೇಬೇಕು. ಹೌದು ಆ್ಯಪ್ ಆಟೋ ಬುಕ್ ಮಾಡೋ ಮುನ್ನ ಸ್ವಲ್ಪ ಎಚ್ಚರದಿಂದ ಇದ್ದರೆ ಒಳಿತು. ಇಲ್ಲವಾದರೆ ಕೋಟಿ ಕೋಟಿ ದುಡ್ಡು ಕಟ್ಟಬೇಕಾದಿತು ಹುಷಾರ್. ಊಬರ್ ಆಟೋ ಬುಕ್ ಮಾಡಿದ ಪ್ರಯಾಣಿಕನಿಗೆ ಊಬರ್ ಆ್ಯಪ್ ಒಂದು ಕೋಟಿ ಬಿಲ್ ಕಳಿಸಿದ್ದಾರೆ. https://ainlivenews.com/barbaric-murder-of-a-person-late-at-night-after-being-attacked-with-weapons/ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಆಂದ್ರಪ್ರದೇಶದ ವ್ಯಕ್ತಿಯೊಬ್ಬ ಆಟೋ ಬುಕ್ ಮಾಡಿದ್ದ. ಪ್ರಯಾಣದ ಬಳಿಕ ಊಬರ್ ಆ್ಯಪ್ ಬರೊಬ್ಬರಿ ಒಂದು ಕೋಟಿ ಬಿಲ್ ತೋರಿಸಿದೆ. ₹1,03,11,055 ಆಟೋ ಚಾರ್ಜ್ ನೋಡುತ್ತಿದ್ದಂತೆ ಪ್ರಯಾಣಿಕ ಶಾಕ್ ಗೆ ಒಳಗಾಗಿದ್ದಾನೆ. 207 ರೂ ಆಗ್ತಿದ್ದ ಜಾಗದಲ್ಲಿ ಕೋಟಿ ಕೋಟಿ ನೋಡ್ತಿದ್ದಂತೆ ಬೆಚ್ಚಿಬಿದ್ದ ಪ್ರಯಾಣಿಕ, ಬಿಲ್ ತೋರಿಸುತ್ತಿದ್ದ ಊಬರ್ ಆ್ಯಪ್ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಂತಹ ಆ್ಯಪ್ ಆಧಾರಿತ ಆಟೋಗಳನ್ನ ಬಳಕೆ ಮಾಡದಂತೆ ಮನವಿ ಮಾಡಿದ್ದು, ಅಲ್ಲದೇ ಕೂಡಲೇ ಇಂತಹ ಆ್ಯಪ್ ಗಳ ವಿರುದ್ಧ ಕ್ರಮಕ್ಕೆ ಒತ್ತಾಯ…

Read More

ಆನೇಕಲ್:- ಮಾರಕಾಸ್ತ್ರಗಳಿಂದ ಹಲ್ಲೆಗೈದು ತಡರಾತ್ರಿ ವ್ಯಕ್ತಿಯ ಬರ್ಬರ ಕೊಲೆಗೈದ ಘಟನೆ ಬೆಂಗಳೂರಿನ ಹೆಬ್ಬಗೋಡಿ ಟೌನ್ ಮುತ್ಯಾಲಮ್ಮ ದೇವಾಲಯದ ಬಳಿ ಜರುಗಿದೆ. https://ainlivenews.com/winning-the-next-matches-will-not-be-easy/ ಒರಿಸ್ಸಾ ಮೂಲದ ದೀಪ್ತಿರಂಜನ್(30) ಕೊಲೆಯಾದವ ಎಂದು ಹೇಳಲಾಗಿದೆ. ರಾತ್ರಿ 1 ಗಂಟೆ ಸುಮಾರಿಗೆ ನಡೆದಿರುವ ಘಟನೆ ಇದಾಗಿದ್ದು, ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹ ಆಕ್ಸ್‌ಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆ ಹೆಬ್ಬಗೋಡಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

IPL ಸೀಸನ್ 17 ರ ಆರಂಭಿಕ ಪಂದ್ಯಗಳಲ್ಲೇ ಆರ್​ಸಿಬಿ ಕಳಪೆ ಪ್ರದರ್ಶನ ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆರ್​ಸಿಬಿ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಈ ಸೋಲಿನೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ. ಇನ್ನು ಆರ್​ಸಿಬಿ ತಂಡವು ಗೆಲುವಿನ ಲಯಕ್ಕೆ ಮರಳು ಏಪ್ರಿಲ್ 6 ರ ತನಕ ಕಾಯಲೇಬೇಕು. https://ainlivenews.com/rcb-made-a-mistake-by-abandoning-kannadigar/ ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 6 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯ ನಡೆಯಲಿರುವುದು ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಎಂಬುದು ವಿಶೇಷ. ಅಂದರೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅವರ ತವರು ಮೈದಾನದಲ್ಲಿ ಆರ್​ಸಿಬಿ ಎದುರಿಸಬೇಕಿದೆ. ಈಗಾಗಲೇ ಬಲಿಷ್ಠ ಮುಂಬೈ ಇಂಡಿಯನ್ಸ್​, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಸೋಲುಣಿಸಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಎಲ್ಲಾ ರೀತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಕಡೆಯಿಂದ…

Read More