Author: AIN Author

ನವದೆಹಲಿ: ತೃಣಮೂಲ ಕಾಂಗ್ರೆಸ್‌ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಅಕ್ರಮ ಹಣ ವರ್ಗಾವಣೆ ಕೇಸ್‌ (Money Laundering Case) ದಾಖಲಿಸಿದೆ. ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ (CBI) ದಾಖಲಿಸಿದ ಎಫ್‌ಐಆರ್‌ ಆಧರಿಸಿ, ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗಾಗಿ ತನ್ನ ದೆಹಲಿ ಕಚೇರಿಗೆ ಹಾಜರಾಗುವಂತೆ ನೀಡಿದ್ದ ಏಜೆನ್ಸಿಯ ಸಮನ್ಸ್ ಅನ್ನು ಮಹುವಾ ಮೊಯಿತ್ರಾ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಇ.ಡಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಪ್ರಕರಣದಲ್ಲಿ ವಿಚಾರಣೆಗಾಗಿ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಈ ಸಮನ್ಸ್‌ ಅನ್ನು ಮೊಯಿತ್ರ ನಿರಾಕರಿಸಿದ್ದರು ಎಂದು ಹೇಳಲಾಗಿದೆ. https://ainlivenews.com/such-students-will-get-rs-12400-per-month-scholarship-apply-today/ ಏನಿದು ಕೇಸ್‌? ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಪ್ರಶ್ನೆಗಾಗಿ ಹಣ ಪಡೆದ ಆರೋಪ ಮಾಡಿದ್ದರು. ನಂತರ ಮೊಯಿತ್ರಾ ವಿರುದ್ಧ ಲೋಕಪಾಲ್ ನಿರ್ದೇಶನದ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿತ್ತು. ಪ್ರಶ್ನೆಗಾಗಿ ಹಣ ಪಡೆದ ಆರೋಪದ ಮೇಲೆ ದಾಖಲಾದ…

Read More

ಬೆಂಗಳೂರು: ಮಾಜಿ ಸಚಿವ, ಹಾಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್‌ (Sudhakar) ಮತ್ತು ಬಿಜೆಪಿಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ (Radha Mohan Das) ಅವರು ಯಲಹಂಕ ಶಾಸಕ ಎಸ್‌ಆರ್‌ ವಿಶ್ವನಾಥ್‌ (SR Vishwanth) ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ (Amit Shah) ಸೂಚನೆ ಮೇರೆಗೆ ಬೆಳಗ್ಗೆ ಉಪಹಾರಕ್ಕೆ ಬರುವಂತೆ ಇಬ್ಬರು ನಾಯಕರಿಗೆ ಎಸ್‌ಆರ್‌ ವಿಶ್ವನಾಥ್ ಆಹ್ವಾನ ನೀಡಿದ್ದರು. ಆಹ್ವಾನದ ಹಿನ್ನೆಲೆಯಲ್ಲಿ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಇಬ್ಬರು ನಾಯಕರು ಭೇಟಿ ನೀಡಿ ಭಿನ್ನಾಭಿಪ್ರಾಯ ಮರೆತು ಮಾತುಕತೆ ನಡೆಸಿದರು. https://ainlivenews.com/amit-shah-came-to-the-state-and-gave-the-winning-task-to-the-leaders-here-are-the-full-details/ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್‌, ಅಸಮಾಧಾನ ಪಕ್ಷದ ಮೇಲೆ ಯಾವತ್ತೂ ಮಾಡಿಲ್ಲ. ಸುಧಾಕರ್ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೆ ಅಷ್ಟೇ. ನರೇಂದ್ರ ಮೋದಿ ಗೆಲ್ಲಿಸಲು ಬಿಜೆಪಿ ಪಕ್ಷವನ್ನ ನೋಡಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಚುನಾವಣಾ ಚಾಣಾಕ್ಷ ಅಮಿತ್ ಶಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ.ನಾನು ಏನು ಹೇಳಬೇಕೋ…

Read More

ಬೆಂಗಳೂರು:  ಕೇಂದ್ರ ಗೃಹ ಸಚಿವ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯ ಮೈತ್ರಿ ನಾಯಕರಿಗೆ ಎಲೆಕ್ಷನ್ ಬೂಸ್ಟ್ ನೀಡಿದ್ದಾರೆ. ಮೈತ್ರಿ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಗೆಲುವಿನ ಟಾನಿಕ್ ಕೊಟ್ರೆ. ಬೂತ್ ಪ್ರಮುಖರ ಸಮಾವೇಶ ನಡೆಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ರು, ಈ ಮಧ್ಯೆ ಬಿಜೆಪಿಯಲ್ಲಿ ಹಾರಾಡ್ತಿದ್ದ ಬಂಡಾಯದ ಬಾವುಟಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದ್ದು ಅಸಮಾಧಾನಿತ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಡಿಕೆ ಬ್ರದರ್ಸ್ ಕೋಟೆಯಲ್ಲಿ ಮೆಗಾ ರೋಡ್ ಶೋ ನಡೆಸಿದ ಶಾ ಬಂಡೆಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. https://ainlivenews.com/the-train-of-these-two-districts-leaving-bangalore-is-canceled-for-2-days/ ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಮೊದಲ ಭಾರಿಗೆ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮೈತ್ರಿ ನಾಯಕರ ಸಭೆ ಮಾಡುವ ಮೂಲಕ ರಾಜಕೀಯ ರಣತಂತ್ರ ಮತ್ತು ಅಸಮಾಧಾನ ಶಮನ ಮಾಡುವ ಪ್ರಯತ್ನ ಮಾಡಿದ್ರು. ಮೊದಲಿಗೆ ಬೆಂಗಳೂರು ಟಿಕೆಟ್ ಸಿಗದ ಕಾರಣ ಬಿಎಸ್‌ವೈ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶುದ್ದೀಕರಣದ ಸಮರ ಸಾರಿದ್ದ ಮಾಜಿ ಸಿಎಂ ಸದಾನಂದಗೌಡರ…

Read More

ಗದಗ: ಎಲ್ಲರ ಮನೆಗೆ ನಲ್ಲಿ ನೀರು, ಐದು ಕೆಜಿ ಅಕ್ಕಿ, ಕೊವಿಡ್ ಲಸಿಕೆ ಕೊಟ್ಟು ಎಲ್ಲರ ಜೀವ ಉಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ದೇಶದಲ್ಲಿ ಮೋದಿಯವರು ದೊಡ್ಡ ಪ್ರಮಾಣದ ಬದಲಾವಣೆ ಮಾಡಿದ್ದಾರೆ. ಬೆಳೆ ಹಾನಿಯಾದಾಗ ಎಂ ಎಸ್ ಪಿ ಎರಡು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ 10 ಸಾವಿ ರ ರೂ. ನೀಡಿದ್ದಾರೆ. ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟು ವರ್ಷ ಆಗಿದ್ದರೂ ಎಲ್ಲ ಮನೆಗಳಿಗೆ ನೀರು ಕೊಡುವ ಕೆಲಸ ಮಾಡಿರಲಿಲ್ಲ. ನಾನು ಸಿಎಂ ಆಗಿದ್ದಾಗ ಮನೆಗಳಿಗೆ ನಲ್ಲಿ ನೀರು ಕೊಡುವುದರಲ್ಲಿ ಕರ್ನಾಟಕ 20 ನೇ ಸ್ಥಾನದಲ್ಲಿತ್ತು. ನಾನು ಸಿಎಂ ಆದಮೇಲೆ ನಂಬರ್ ಒನ್ ಸ್ಥಾನಕ್ಕೆ ಬಂದಿದೆ‌.…

Read More

ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸೋಲು ಮುಂದುವರಿದಿದೆ. ಮಂಗಳವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಆರ್‌ಸಿಬಿ 28 ರನ್‌ಗಳಿಂದ ಸೋಲಿನ ಆಘಾತ ಅನುಭವಿಸಿತು ಲಖನೌ ಎದುರು ಆರ್‌ಸಿಬಿಯ ಸೋಲಿಗೆ 5 ಪ್ರಮುಖ ಕಾರಣಗಳು 1. ಫೀಲ್ಡಿಂಗ್‌ ವೈಫಲ್ಯ ಲಖನೌ ಸೂಪರ್‌ ಜಯಂಟ್ಸ್‌ ಎದುರಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಫೀಲ್ಡಿಂಗ್‌ ಮಾಡಿತು. ಕೆಲ ಆಟಗಾರರು ಮಿಸ್‌ ಫೀಲ್ಡ್ ಮಾಡಿದ್ದರು. ಇದಕ್ಕಿಂತ ಮುಖ್ಯವಾಗಿ ಲಖನೌ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಕ್ವಿಂಟನ್‌ ಡಿ ಕಾಕ್‌ ಹಾಗೂ ನಿಕೋಲಸ್‌ ಪೂರನ್‌ ಅವರ ಕ್ಯಾಚ್‌ಗಳನ್ನು ಆರ್‌ಸಿಬಿ ಆಟಗಾರರು ಕೈ ಚೆಲ್ಲಿದ್ದರು. ಕ್ವಿಂಟನ 30 ರನ್‌ ಆಸುಪಾಸಿನಲ್ಲಿ ಸಿರಾಜ್ ಬೌಲಿಂಗ್‌ನಲ್ಲಿ ಎಡ್ಜ್ ಮಾಡಿದ್ದರು. ಆದರೆ, ಫೀಲ್ಡರ್‌ ಇಲ್ಲದ ಕಾರಣ ಅವರು ಬಚಾವ್ ಆಗಿದ್ದರು. 2. ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ವೈಫಲ್ಯ ಕಳೆದ ಹಲವು…

Read More

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಬಡವರ, ಮಧ್ಯಮ ವರ್ಗ, ರೈತರ ಕಾರ್ಮಿಕರ, ನಿರುದ್ಯೋಗಿ ಯುವಕರ ಮತ್ತು ಶೋಷಿತರ ಹೃದಯದಲ್ಲಿರುವ ಜನನಾಯಕ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದರು. ಅವರು ಚಿತ್ರದುರ್ಗದಲ್ಲಿ‌ ಮಾಧ್ಯಮಗಳೊಂದಿಗೆ ಮಾತಾಡಿದರು.ಯೋಜನೆಗಳನ್ನು ಗ್ಯಾರಂಟಿಗಳನ್ನು‌ ಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿಯವರು ಬಿಟ್ಟಿ ಯೋಜನೆ ಕೊಟ್ಟಿದ್ದಾರೆಂದು‌ ಹೇಳಿದದರು. ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು. ಪಾಕಿಸ್ತಾನ ಶ್ರೀಲಂಕಾ ಆಗುತ್ತದೆ ಎಂದು ಆದರೆ ಆಯ್ತಾ ಎಂದು ಪ್ರಶ್ನಿಸಿದರು. ಬೆಲೆ ಏರಿಕೆಯಿಂದ ಜೀವನ ನಡೆಸಲು ಕಷ್ಟ ಪಡುವಂತಹ ಜನರಿಗೆ ಅವರ ಕಣ್ಣೀರೊರೆಸುವ ಕೆಲಸವನ್ನು ಐದು ಭಾಗ್ಯಗಳನ್ನು ನೀಡುವ ಮೂಲಕ ಮಾಡಿದ್ದೇವೆ. ಇಂತಹ ಯೋಜನೆಗಳನ್ನು ತಂದುಕೊಟ್ಟಿದ್ದೆನೆ, ನೇರವಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿದ್ದೇವೆ. ವಿರೋಧ ಪಕ್ಷದವರು ನಿಮಗೇನು‌ ಕೊಟ್ಟಿಲ್ಲ, ನೀವು ನನ್ನ ಕೈ ಬಲ ಪಡಿಸಿ, ನಿಮ್ಮ ಮೇಲಿನ ನಂಬಿಕೆಯಿಂದ‌ ಚುನಾವಣೆಯಲ್ಲಿದ್ದೇನೆ, ಮುಖ್ಯ ಮಂತ್ರಿಯಾಗಿದ್ದೇನೆ. https://ainlivenews.com/such-students-will-get-rs-12400-per-month-scholarship-apply-today/ ನನ್ನ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಹೆಚ್ಚು ಶಕ್ತಿ‌ ನೀಡಿ,ಇನ್ನಷ್ಟು ಯೋಜನೆ ರೂಪಿಸುವ ಹಾಗೂ ಹೆಚ್ಚು ಬಡವರಿಗೆ ಸಹಾಯ ಮಾಡುವ ಅವಕಾಶ…

Read More

ಬೆಂಗಳೂರು : ಸೋತ RCB, ಗೆದ್ದ LSG. ಇದು ಆರ್​ಸಿಬಿಯ ಹೊಸ ಅಧ್ಯಾಯವೇ..? ಐಪಿಎಲ್​ನಲ್ಲಿ ಬಹುತೇಕ ಎಲ್ಲಾ ತಂಡಗಳು ತವರು ನೆಲದಲ್ಲಿ ಗೆಲುವಿನ ನಗೆ ಬೀರಿದರೆ, ಆರ್​ಸಿಬಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಭರ್ಜರಿ ಗೆಲುವು ದಾಖಲಿಸಿದೆ. LSG ನೀಡಿದ್ದ 182 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ RCB, ನಿಗದಿತ 19.3 ಓವರ್ ಗಳಲ್ಲಿ 153 ರನ್ ಗಳಿಗೆ ಆಲೌಟ್ ಆಯಿತು. https://ainlivenews.com/he-was-the-reason-for-rcbs-defeat-this-was-the-reason-given-by-faf-duplessis/ ಆರ್​ಸಿಬಿ ಪರ ಲ್ಯಾಮೋರ್ 33, ಪಾಟೀದಾರ್ 29, ವಿರಾಟ್ ಕೊಹ್ಲಿ 22 ರನ್ ಗಳಿಸಿದರು. LSG ಪರ ಮಾಯಾಂಕ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ RCB ಮೂರನೇ ಸೋಲು ಕಂಡರೆ, LSG ಎರಡನೇ ಗೆಲುವು ದಾಖಲಿಸಿತು. ಡಿ ಕಾಕ್, ಪೂರನ್ ಅಬ್ಬರ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ LSG ಪರ ಡಿ ಕಾಕ್ ಹಾಗೂ ಪೂರನ್ ಅಬ್ಬರಿಸಿದರು.…

Read More

ವಿಜಯಪುರ: ಕಚತೀವು ದ್ವೀಪವನ್ನು ಶ್ರೀಲಂಕಾಗೆ ಸ್ನೇಹದ ಸಂಕೇತವಾಗಿ ಬಿಟ್ಟು ಕೊಟ್ಟೆವು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದೇಶದ ನೆಲವನ್ನು ಮುಯ್ಯಿ ಕೊಡುವುದಕ್ಕೆ ಭಾರತವೇನೂ ಕಾಂಗ್ರೆಸ್ ನ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಹಿರಿಯ ರಾಜಕಾರಣಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತುಗಳು ನಿಜಕ್ಕೂ ಆಶ್ಚರ್ಯಕರ, ಶೋಚನೀಯ ಹಾಗೂ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದೇಶದ ಭೂಮಿಯನ್ನು ರಕ್ಷಿಸಲು ಅಹರ್ನಿಶಿ ಟೊಂಕಕಟ್ಟಿ ಗಡಿಯಲ್ಲಿ ಕಾಯುತ್ತಿರುವ ನಮ್ಮ ಸೈನಿಕರಿಗೆ ಮಾಡುವ ಅವಮಾನ. ದೇಶದ ನೆಲವನ್ನು ‘ಮುಯ್ಯಿ’ ಕೊಡುವುದಕ್ಕೆ ಭಾರತ ಕಾಂಗ್ರೆಸ್ ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ. ಖರ್ಗೆ ಅವರು ತಮ್ಮ ವಯಸ್ಸಿನಂತೆ ತೂಕವಾಗಿ ಮಾತನಾಡುವುದನ್ನು, ಪ್ರಬುದ್ಧವಾಗಿ ಮಾತನಾಡುವುದನ್ನು ಕಲಿಯಲಿ.” ಎಂದು ಎಕ್ಸ್ ನಲ್ಲಿ ಪೋಸ್ಚ್ ಮಾಡಿದ್ದಾರೆ. https://ainlivenews.com/such-students-will-get-rs-12400-per-month-scholarship-apply-today/ ಇನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಸೇರಿದಂತೆ ಹಲವು ವಿಚಾರಗಳನ್ನು…

Read More

ಹುಬ್ಬಳ್ಳಿ: ಪ್ರಸಕ್ತ ಆರ್ಥಿಕ ವರ್ಷ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ  ಬಂಪರ್‌ ಆಫರ್‌ ಮಾಡಿಕೊಟ್ಟಿದೆ. 5% ರಿಯಾಯಿತಿಯೊಂದಿಗೆ ತೆರಿಗೆ ಪಾವತಿಸಲು ಏಪ್ರೀಲ್ 1 ರಿಂದ 30ರ ವರೆಗೆ ಅವಕಾಶ ಕಲ್ಪಿಸಿದೆ. ಎಲ್ಲಾ ವಲಯ ಕಚೇರಿಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಸ್ತಿ ತೆರಿಗೆ ಚಲನ್‌ಗಳನ್ನ ವಿತರಿಸಲಾಗುತ್ತಿದೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಮ್ಮ ಮೋಬೈಲ್‌ನಲ್ಲಿ ಹೆಚ್‌ಡಿಎಂಸಿ ಆ್ಯಪ್ (HDMC App) ಡೌನ್ಲೋಡ್ ಮಾಡಿಕೊಂಡು, ಆ್ಯಪ್‌ನಲ್ಲೂ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ. https://ainlivenews.com/such-students-will-get-rs-12400-per-month-scholarship-apply-today/ ಸಾರ್ವಜನಿಕರು ಆಸ್ತಿ ತೆರಿಗೆಯನ್ನು 2024-25 ನೇ ಸಾಲಿನಲ್ಲಿ ಕೇವಲ ಹುಬ್ಬಳ್ಳಿ ಧಾರವಾಡ-1 (ಕರ್ನಾಟಕ ಒನ್ ) ಸೇವಾ ಕೇಂದ್ರಗಳ ಮುಖಾಂತರ ಅಥವಾ ಪರ್ಯಾಯ ವ್ಯವಸ್ಥೆಯಾಗಿ ಸಂದಾಯ ಮಾಡಲು http://www.hdmc.in ವೆಬ್ ಸೈಟ್‌ನಲ್ಲಿ ಎಲ್ಲ ವಿಧದ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮುಖಾಂತರ ಆಸ್ತಿ ಕರ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರೂ…

Read More

ಬೆಂಗಳೂರು: ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು (Parents) ಕೌನ್ಸಿಲಿಂಗ್ (Counselling) ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮುಂದಾಗಿದೆ. ಕೌನ್ಸಿಲಿಂಗ್‌ನಲ್ಲಿ ಹಲವು ಅಂಶಗಳನ್ನು ಚರ್ಚಿಸಲಿದೆ. ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮ, ಇಲ್ಲವಾದಲ್ಲಿ ತಂದೆ ತಾಯಿಗೆ ಮಗುವನ್ನ ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ. https://ainlivenews.com/barbaric-murder-of-a-person-late-at-night-after-being-attacked-with-weapons/ ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಮುಂದಾಗಿದೆ. ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಮೇಲೆ ಪೋಷಕರು ಯಾಕೆ ದೂರು ಕೊಡಲಿಲ್ಲ? ಅವರಿಂದ ಆಮಿಷಕ್ಕೆ ಒಳಗಾಗಿದ್ರಾ ಎಂಬ ಆಯಾಮದಲ್ಲಿ ಕೌನ್ಸಿಲಿಂಗ್ ಮಾಡಿ ಮಗುವನ್ನು ರಕ್ಷಣೆ ಮಾಡೋಕೆ ಮುಂದಾಗಿದೆ ಸದ್ಯ ಮಗು ಬಾಲಿಕ ಆಶ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿದೆ. ದತ್ತು ಪಡೆಯುವಾಗ…

Read More