Author: AIN Author

ಗದಗ: ರಾಜ್ಯಾದ್ಯಂತ ಬರಗಾಲ ತೀವ್ರವಾಗಿ ಕಾಡುತ್ತಿರುವುದರಿಂದ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಜನರು ಕೆಲಸವಿಲ್ಲದೆ ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ನರೇಗಾ ಆರಂಭಿಸಿ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡುತ್ತಿದ್ದು, ಇದರ ಪ್ರಯುಕ್ತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮ ಪಂಚಾಯತಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ ಎಚ್ ರವರು ಸಾಮೂಹಿಕ ಬುದು ನಿರ್ಮಾಣ ಕಾಮಗಾರಿ ಆರಂಭಿಸಿದ್ದು ಕೂಲಿ ಕೆಲಸಕ್ಕಾಗಿ ಮಹಿಳೆಯರು ಪುರುಷರು ಬಿಸಿಲಿನ ತಾಪದಲ್ಲಿ ಕೂಡ ಅತಿ ಉತ್ಸಾಹದಿಂದ 550 ಜನ ಕೂಲಿಕಾರರು ಹಾಜರಾಗಿ ಉದ್ಯೋಗ ಖಾತ್ರಿಯ ಲಾಭ ಪಡೆದರು. ಈ ಸಂದರ್ಭದಲ್ಲಿ ಕೂಲಿಕಾರರಿಗೆ ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲು ಮತ್ತು ಮತದಾನ ಮಾಡಿಸುವಂತೆ ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯ ಮತದಾನಕ್ಕಾಗಿ ಮತದಾರರ ಪ್ರತಿಜ್ಞಾ ವಿಧಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ…

Read More

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ವೇಳೆ ಕಾಂಗ್ರೆಸ್ ಪಕ್ಚದಿಂದ ಬೃಹತ್ ರ್ಯಾಲಿ ಮಾಡಲಾಗಿದ್ದು, ಇವರಿಗೆ, ಸಚಿವರಾದ ಎಚ್.ಸಿ.ಮಹದೇವಪ್ಪ, ವೆಂಕಟೇಶ್ ಜೊತೆಯಾಗಿದ್ದಾರೆ. ಬಿರುಬಿಸಿಲಿನ್ನೂ ಲೆಕ್ಕಿಸದೆ ಸಾವಿರಾರು ಕಾರ್ಯಕರ್ತರು ಆಗಮಿಸಿದರು.

Read More

ಗದಗ: ಗದಗ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 19 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಖತರ್ನಾಕ್ ಕಳ್ಳರು ಅರೆಸ್ಟ್‌ ಮಾಡಿದ್ದಾರೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 19 ಪ್ರಕರಣಗಳಲ್ಲಿ 53 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ರಾಜ್ಯದ ಅಮರ್ ಚವ್ಹಾಣ, ಕಂಪ್ಲಿಯ ರಾಮು ಶಿಕಾರಿ ಮತ್ತು ರಾಜು @ ರಾಜ್ಯಾ ವಡ್ಡರ ಬಂಧಿತ ಆರೋಪಿಗಳು ಆಗಿದ್ದು, ಗದಗ ಉಪವಿಭಾಗ ವ್ಯಾಪ್ತಿಯ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ 6, ಬೆಟಗೇರಿ ಬಡಾವಣೆ ಠಾಣೆಯ 3 ಹಾಗೂ ಗದಗ ಶಹರ ಪೊಲೀಸ್ ಠಾಣೆಯ 1 ಸೇರಿ ಒಟ್ಟು10 ಸ್ವತ್ತಿನ ಪ್ರಕರಣಗಳಲ್ಲಿ ಕಳ್ಳತನವಾದ 31.25 ಲಕ್ಷ ರೂ. ಮೌಲ್ಯದ 625 ಗ್ರಾಂ ತೂಕದ ಬಂಗಾರದ ಆಭರಣಗಳು, 3 ಲಕ್ಷ ರೂ. ಮೌಲ್ಯದ 5,094 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More

ಚಿತ್ರದುರ್ಗ: ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಕಳೆದ 2019ರ ಚುನಾವಣೆಯಲ್ಲಿ ನನ್ನ ಮಗನಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳಿದ್ದೆವು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಶಾಸಕ ಚಂದ್ರಪ್ಪ ಹೇಳಿಕೆ ನೀಡಿದ್ದಾರೆ. ಗೋವಿಂದ ಕಾರಜೋಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ರಘು ಚಂದನ್ ಜಿಲ್ಲೆಯಾದ್ಯಂತ ಯುವಕರ ಪಡೆ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದ, ಹೀಗಾಗಿ ನಾವು ಟಿಕೆಟ್ ಗಾಗಿ ಹೋರಾಟ ಮಾಡಿದ್ದೇವೆ. ಆದರೆ ಅನಿವಾರ್ಯ ಕಾರಣದಿಂದ ಬಿಜೆಪಿ ಹೈಕಮಾಂಡ್  ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ಮುಖ್ಯ  ಆದ್ದರಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು ಎಂದರು.

Read More

ಬೆಂಗಳೂರು: ‘ಡೆವಿಲ್’ ಸಿನಿಮಾ ಶೂಟಿಂಗ್ ವೇಳೆ ನಟ ದರ್ಶನ್ ಅವರು ಕೈಗೆ ಪೆಟ್ಟಾಗಿದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈಗಾಗಲೇ ಅವರು ಸರ್ಜರಿ ಮಾಡಿಸಿಕೊಳ್ಳಬೇಕಿತ್ತು. ಆದರೆ, ಅವರು ಅದನ್ನು ಮುಂದೂಡಿಕೊಂಡಿದ್ದಾರೆ https://ainlivenews.com/sumalta-said-that-she-is-joining-bjp-after-liking-modis-work/ ಈ ವೇಳೆ ದರ್ಶನ್ ತಮ್ಮ ಕೈಯನ್ನು ಹ್ಯಾಂಡ್​ ಸ್ಲಿಂಗ್​ (Hand sling) ಮೇಲೆ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ತಳಮಳಗೊಂಡಿದ್ದಾರೆ. ನೆಚ್ಚಿನ ಸ್ಟಾರ್​ಗೆ ಏನಾಯಿತು? ಕೈಗೆ ಏನು ಪೆಟ್ಟಾಗಿದೆ ಎಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ ‘ನಾನು ಈಗಾಗಲೇ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಆದರೆ, ಅಮ್ಮನಿಗೆ ಡೇಟ್ಸ್ ಕೊಟ್ಟಿದ್ದೇನೆ. ಅದನ್ನು ಮುಗಿಸಿ ಬರ್ತೀನಿ. ರಾತ್ರಿ ವೇಳೆಗೆ ಆಸ್ಪತ್ರೆಗೆ ಅಡ್ಮಿಟ್ ಆಗ್ತೀನಿ. ನಾಳೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ’ ಎಂದರು ದರ್ಶನ್.

Read More

ವಿಜಯಪುರ: ಆಕಸ್ಮಿಕ ವಿದ್ಯುತ್ ತಂತಿ ಸ್ಪರ್ಶಿಸಿ  17 ಕುರಿಗಳು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಡಂಬಳ ತಾಂಡಾದ ತೋಟದಲ್ಲಿ ನಡೆದಿದೆ. ಕಾಂತವ್ವ ರಾಠೋಡ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಮಂಡ್ಯ: ಸುಮಲತಾ ಅಂಬರೀಶ್​ ಅವರ ಮುಂದಿನ ನಡೆ ಏನು ಎಂಬುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಈ ಪ್ರಶ್ನೆಗೆ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಉತ್ತರ ನೀಡಿದ್ದಾರೆ. ಹೌದು ನಾನು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮತ್ತು ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಸಂಸದೆ ಹೇಳಿದ್ದಾರೆ. ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್​ ಪಕ್ಷಕ್ಕೆ ಹೋಗುವುದಿಲ್ಲ. ನೀವು ಬೇರೆ ಯಾವುದೆ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಸ್ವತಃ ಪ್ರಧಾನಿ ಮೋದಿಯವರು ನನಗೆ ಹೇಳಿದ್ದಾರೆ ಎಂದು ತಿಳಿಸಿದರು. ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್​ಎಸ್​ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. https://ainlivenews.com/such-students-will-get-rs-12400-per-month-scholarship-apply-today/ ಮೈಷುಗರ್​ ಕಾರ್ಖಾನೆಗಾಗಿ ಎರಡು ವರ್ಷ…

Read More

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಂಗು ಜೋರಾಗುತ್ತಿದ್ದು, ಇಂದು ಕಾಂಗ್ರೆಸ್​ ಮತ್ತು ಬಿಜೆಪಿ ಕಮಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಎರಡೂ ಪಕ್ಷಗಳು ಭರ್ಜರಿ ರೋಡ್ ಶೋ ನಡೆಸಲಿವೆ. ಇದರ ಬೆನ್ನಲ್ಲೇ ನಾಮಿನೇಷನ್ ದಿನವೇ ಗೋ ಬ್ಯಾಕ್ ಸುನಿಲ್ ಬೋಸ್ ಪೋಸ್ಟರ್ ಪ್ರತ್ಯೇಕ್ಷ ವಾಗಿದೆ. ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿದ ಅನಾಮಿಕರು ಚಾಮರಾಜನಗರ ರಸ್ತೆಯಲ್ಲಿ ಗೋ ಬ್ಯಾಕ್ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇಂಟಿನಲ್ಲಿ ಗೋ ಬ್ಯಾಕ್ ಸುನಿಲ್ ಬೋಸ್ ಎಂದು ಬರೆದಿದ್ದು, ಮರಳು ಮಾಫಿಯಾ ದೊರೆಗೆ ಮರಳಾಗಬೇಡಿ ಎಂದು ಪೋಸ್ಟರ್ ಬರಹವಾಗಿದೆ.

Read More

ಕಲಬುರಗಿ: ತುಂಬಿ ತುಳುಕುತಿದ್ದ ಬಸ್ಸಲ್ಲಿ ಆಗಿದ್ದ ಪ್ರಯಾಣಿಕರ ಸಾಲಿನಲ್ಲಿ ಬಂದು ಚಿನ್ನದ ಸರ ಎಗರಿಸಿದ್ದ ತಾಯಿ-ಮಗಳನ್ನ ಲಾಕ್ ಮಾಡುವಲ್ಲಿ ಕಲಬುರಗಿ ಪೋಲೀಸರು ಸಕ್ಸಸ್ ಆಗಿದ್ದಾರೆ..ತಾಯಿ ಹಸೀನಾ ಮಗಳು ಸಕೀನಾ ಬಂಧಿತ ಆರೋಪಿಗಳು. ಅಂದಹಾಗೆ ಕಲಬುರಗಿಯ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ 40 ಗ್ರಾಂ ಚಿನ್ನರ ಸರ ಕದ್ದು ಎಸ್ಕೇಪ್ ಆಗಿದ್ರು. ಈ ಬಗ್ಗೆಆಳಂದ ತಾಲ್ಲೂಕಿನ ಭೀಮಾಬಾಯಿ ಎಂಬುವವರು ಅಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ರು. ಈ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಆಧರಿಸಿ ಆರೋಪಿಗಳನ್ನ ಹಿಡಿದು ಜೈಲಿಗೆ ಕಳಿಸಿದ್ದಾರೆ..

Read More

ತುಮಕೂರು: ತುಮಕೂರಿನಲ್ಲಿ ಲೋಕಕದನ ಗೆಲ್ಲಲು ಮುದ್ದಹನುಮೇಗೌಡ‌ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಟಿ.ಬಿ ಜಯಚಂದ್ರರನ್ನ ಮನವೊಲಿಸುವಲ್ಲಿ ಮುದ್ದಹನುಮೇಗೌಡ‌ ಸಕ್ಸಸ್ ಆಗಿದ್ದಾರೆ. ಜಯಚಂದ್ರ ಜೊತೆ ಸುಧೀರ್ಘ ಚರ್ಚೆ ನಡೆಸಿ ಅಸಮಾಧಾನವನ್ನ ಶಮನಗೊಳಿಸಿದ್ದಾರೆ. ಶಿರಾದಲ್ಲಿರುವ ಟಿಬಿ ಜಯಚಂದ್ರ ಮನೆಯಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ,ಹಾಗೂ ಕುಂಚಿಟಿಗ ಸಮುದಾಯದ ನಾಯಕರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು. ಮುದ್ದಹನುಮೇಗೌಡ‌ ಗೆಲುವಿಗೆ ಸಹಕಾರ ನೀಡೋದಾಗಿ ಟಿ.ಬಿ ಜಯಚಂದ್ರ ಭರವಸೆ ನೀಡಿದರು. ಆರಂಭದಲ್ಲಿ ಮುದ್ದಹನುಮೇಗೌಡ‌ಗೆ ಲೋಕಸಭಾ ಟಿಕೆಟ್ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದ ಟಿ‌.ಬಿ ಜಯಚಂದ್ರ ತಮ್ಮ ಮಗ ಸಂಜಯ್ ಜಯಚಂದ್ರಗೆ ಟಿಕೆಟ್ ಕೊಡುವಂತೆ ಡಿಮ್ಯಾಂಡ್ ಇಟ್ಟಿದ್ದರು. ಮಗನಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಟಿಬಿ ಜಯಚಂದ್ರ ಮುದ್ದಹನುಮೇಗೌಡ‌ ಪರ ಪ್ರಚಾರ ಮಾಡಲು ಹಿಂದೇಟು ಹಾಕಿದ್ರು.. ಇದಾದ ಬೆನ್ನಲ್ಲೇ ಎಚ್ಚೆತ್ತ ಮುದ್ದಹನುಮೇಗೌಡ‌ ಟಿಬಿ ಜಯಚಂದ್ರರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಿ ಸಂಧಾನದ‌ ಬಳಿಕ ಮುದ್ದಹನುಮೇ ಗೌಡ‌ರನ್ನ ತಬ್ಬಿಕೊಂಡು ಮುದ್ದಹನುಮೇಗೌಡ‌ ಗೆಲುವಿಗೆ ಶ್ರಮಿಸೋದಾಗಿ ಟಿ.ಬಿ ಜಯಚಂದ್ರ ಭರವಸೆ ನೀಡಿದರು.

Read More