Author: AIN Author

ಚಾಮರಾಜನಗರ: ಸುನೀಲ್ ಬೋಸ್ ವಿರುದ್ಧ ಗೋ ಬ್ಯಾಕ್ ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಸಿ ಮಹಾದೇವಪ್ಪ ಪ್ರತಿಕ್ರಿಯೇ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ತಲೆ ಕೆಟ್ಟವನು ಮಾಡಿರೋ ಪಿತೂರಿ ಆಗಿದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯೇ ಬರೋದಿಲ್ಲ ಎಂದರು. ಇನ್ನೂ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಸಭೆ ನಡೆಸಿದ್ದೇವೆ ಉತ್ತಮ ಸ್ಪಂದನೆ ಸಿಕ್ಕಿದೆ. ಯಾರೋ ಒಬ್ಬ ಗೋ ಬ್ಯಾಕ್ ಅಂತಾ ಹೇಳಿದ ತಕ್ಷಣ ಸುನೀಲ್ ಬೋಸ್ ನಾ ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Read More

ಬೆಂಗಳೂರು: ಮೋಸಗಾರ ಸಿದ್ದರಾಮಯ್ಯ.. ಹೆಂಗಸರಿಗೆ 2,000 ರೂ. ಕೊಟ್ಟು, ಗಂಡಸರಿಗೆ ಎಣ್ಣೆ ರೇಟು ಜಾಸ್ತಿ ಮಾಡಿದ್ರು. ಗಂಡನಿಂದ ಕಿತ್ತು ಹೆಂಡತಿಗೆ ಕೊಟ್ರು ಎಂದು ಕಾಂಗ್ರೆಸ್​ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. https://ainlivenews.com/a-crusade-is-going-on-in-bangalore-countryside-hd-kumaraswamy/ ನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೀಕರ ಬರಗಾಲ. ಆಮೇಲೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕ್ಯಾಬಿನೆಟ್​ನಲ್ಲಿ ಕೂತ್ರು. ಇಡೀ ರಾಜ್ಯದಲ್ಲೆಲ್ಲಾ ಮಳೆ ಬಂತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ. ಬಿಜೆಪಿ ‌ಸರ್ಕಾರ ಬಂದಾಗ ಮಳೆ. ಕಾಂಗ್ರೆಸ್​ನವರ ದರಿದ್ರ ಕಾಲುಗುಣದಿಂದ ಬರಗಾಲ ಬಂದಿದೆ ಎಂದು ಕುಟುಕಿದರು ರಾಮಮಂದಿರ ಕಟ್ಟೋಕೆ 100 ವರ್ಷ ಆಯ್ತು. ಯಾರು ಕಟ್ಟೋಕೆ ಆಗಿಲ್ಲ. ಮೋದಿನೇ ಬರಬೇಕಾಯ್ತು. ನಮ್ಮ‌ ಬೆಂಬಲ‌ ಯಾರಿಗೆ? ಮೋದಿಗೆ. ಕಾಂಗ್ರೆಸ್ ಕಾಶ್ಮೀರವನ್ನ ಬಿಟ್ಟುಬಿಟ್ರು. ಆದರೆ, ಮೋದಿ ನಮ್ಮದಾಗಿಸಿಕೊಂಡ್ರು. ರಾಹುಲ್ ಗಾಂಧಿ ಅವರು ಮೋದಿಗೆ ಸರಿಸಮನಾಗಿ ನಿಲ್ಲೋಕೆ ಆಗುತ್ತಾ..? ಯಾವಾಗ…

Read More

ಬೆಂಗಳೂರು:  ಬಿಎಂಟಿಸಿ ಬಸ್ಸು ಹತ್ತಿದ ಚಿರತೆ ಮರಿ ತುರಹಳ್ಳಿ ಫಾರೆಸ್ಟ್ ನಿಂದ ರಸ್ತೆ ಗೆ ನುಗ್ಗಿದ ಚಿರತೆ ಮತ್ತು ಮರಿ ಚಿರತೆ ಕಂಡಿದ್ದೆ ಬಸ್ಸು ನಿಲ್ಲಿಸಿದ ಚಾಲಕ https://ainlivenews.com/increased-heat-in-bangalore-department-of-energy-warns-to-be-alert-send-feedback-side-panels-history-saved-contribute-translation-results-available/ ಚಿರತೆ ತಪ್ಪಿಸಿಕೊಂಡಿದ್ದು, ಚಿರತೆ ಮರಿ‌ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು ಬಿಎಂಟಿಸಿ ಬಸ್ ಅಡಿಯಲ್ಲಿದ್ದ ಚಿರತೆ ಮರಿ ಚಿರತೆ ಮರಿಗೆ ನೀರು ಕುಡಿಸಲು ಮುಂದಾಗಿದ್ದ ಬಿಎಂಟಿಸಿ ಡ್ರೈವರ್  ಮೇಲೆ ಅಟ್ಯಾಕ್ ಮಾಡಲು ಮುಂದಾಗಿದೆ ಕೆಂಗೇರಿ ಟೂ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್ಸು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಸೂಚನೆ ನೀಡಿದ್ದ ಕಂಡಕ್ಟರ್ ಮತ್ತು ಡ್ರೈವರ್ ಈ ವಿಚಾರ ತಿಳಿದ ಅರಣ್ಯ ಇಲಾಖೆ ಈಗಾಗಲೇ ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ ತಾಯಿ ಚಿರತೆಗಾಗಿ ಹುಡುಕಾಟ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

Read More

ಹುಬ್ಬಳ್ಳಿ: ಸ್ಥಳೀಯವಾಗಿ ವಿಮಾನಯಾನ ಸಂಪರ್ಕ ಬಲಪಡಿಸಲು ಉಡಾನ್ ಎರಡನೇ ಹಂತದ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನೀಡಲಾಗಿದ್ದ ವಿಮಾನಯಾನ ಮಾರ್ಗಗಳಲ್ಲಿ ಸೇವೆ ಸ್ಥಗಿತವಾಗಿದೆ. ಇಲ್ಲಿಂದ ಕಾರ್ಯಾಚರಣೆ ನಡೆಸುವ ವಿಮಾನಗಳ ಸಂಖ್ಯೆಯೂ ಕಡಿಮೆಯಾಗಿದೆ. ಈ ಯೋಜನೆಯಡಿ ಜನರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಸಿಗುತಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 2018ರಲ್ಲಿ ಈ ಯೋಜನೆ ಆರಂಭವಾಗಿದ್ದು, 2022ರಲ್ಲಿ ಮಾರ್ಗಗಳು ಸ್ಥಗಿತವಾಗಿವೆ. ಇದರಿಂದಾಗಿ ಪ್ರಯಾಣಿಕರಿಗೆ ಸಹ ತೊಂದರೆ ಆಗಿದೆ. ಉಡಾನ್ ಯೋಜನೆ ಜಾರಿಯಲ್ಲಿದ್ದಾಗ ಸ್ಟಾರ್ ಏರ್, ಸ್ಪೇಸ್ ಜೆಟ್, ಏರ್ ಇಂಡಿಯಾ, ಇಂಡಿಗೊ ಕಂಪನಿಗಳ ವಿಮಾನಗಳು ಸೇವೆ ನೀಡುತ್ತಿದ್ದವು. ಈಗ ಇಂಡಿಗೊ ಕಂಪನಿ ಹೊರತುಪಡಿಸಿ ಉಳಿದ ಕಂಪನಿಗಳು ಇಲ್ಲಿ ಸೇವೆ ನಿಲ್ಲಿಸಿವೆ. ಈ ಹಿಂದೆ ಅಹಮದಾಬಾದ್, ಸೂರತ್, ಕೊಚ್ಚಿ, ಗೋವಾ, ಮಂಗಳೂರು, ಮೈಸೂರಿಗೆ ವಿಮಾನ ಸೇವೆ ಇತ್ತು. ಈಗ ಇಂಡಿಗೊ ಕಂಪನಿಯು ಚೆನ್ನೈ, ಪುಣೆ, ಹೈದರಾಬಾದ್, ಬೆಂಗಳೂರು, ದೆಹಲಿಗೆ ವಿಮಾನ ಸೇವೆ ಒದಗಿಸುತ್ತಿದೆ. ಮುಂಬೈಗೆ ಇದ್ದ ವಿಮಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಕೋವಿಡ್ ಅವಧಿ ಹೊರತು…

Read More

ಬೆಂಗಳೂರು : ಕೇಂದ್ರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸಂಪಂಗಿರಾಮ ನಗರದ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಸಾವಿರಾರು ಕಾರ್ಯಕರ್ತರ ಜೊತೆ ರ್ಯಾಲಿ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿದ ಮನ್ಸೂರ್ ಆಲಿಖಾನ್ ಉಮೇದುವಾರಿಕೆ ಸಲ್ಲಿಸಿದ್ದಾರೆ. https://ainlivenews.com/increased-heat-in-bangalore-department-of-energy-warns-to-be-alert-send-feedback-side-panels-history-saved-contribute-translation-results-available/ ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಜೊತೆಗೆ ಹಿಂದೂಗಳ ಮತ ಗಳಿಸಿಕೊಂಡ್ರೆ ಬೆಂಗಳೂರು ಕೇಂದ್ರ ಗೆಲ್ಲೋದು ಸುಲಭ ಎಂಬ ಲೆಕ್ಕಾಚಾರದಲ್ಲಿರುವ ಮನ್ಸೂರ್ ಅಲಿ ಖಾನ್ ಜಾತ್ಯಾತೀತ ನೆಲೆಗಟ್ಟಿನಲ್ಲಿ ಸರ್ವ ಧರ್ಮ ಸಮನ್ವಯ ಎಂಬ ತತ್ವದಲ್ಲಿ ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಸಂಪಂಗಿರಾಮ ನಗರದ ಗಣೇಣ ದೇವಸ್ಥಾನಕ್ಕೆ ಭೇಟಿ ಕೊಟ್ಟು ಒಂದು ಸಂದೇಶ ರವಾನೆ ಮಾಡೋ ಪ್ರಯತ್ನ ಮಾಡಿದ್ದಾರೆ.

Read More

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಅಂಗವಾಗಿ ಹಾವೇರಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಇಂದು ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಭಾರತೀಯ ಜನತಾ ಪಕ್ಷದ ಮುಖಂಡ ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತಾನಾಡಿದರು. ಹಾವೇರಿ – ಗದಗ ಲೋಕಸಭಾ ಅಭ್ಯರ್ಥಿಗಳು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯೋನ್ಮುಕರಾಗೋಣ ಎಂದು ತಿಳಿಸಿ, ಪಕ್ಷವನ್ನು ಸಂಘಟಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯರಾದ ಶಿವರಾಜ ಸಜ್ಜನ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ನಂಜುಂಡೇಶ್ ಕಳ್ಳೇರ್, ಗಿರೀಶ ತುಪ್ಪದ, ಬಸವರಾಜ ಕಳಸೂರ್ ಸೇರಿದಂತೆ ಇನ್ನಿತರ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಚಾಮರಾಜನಗರ: ಗೋ ಬ್ಯಾಕ್ ಸುನಿಲ್ ಬೋಸ್ ಎಂದು ಪೋಸ್ಟರ್ ಅಂಟಿಸಿರುವುದು ಬಿಜೆಪಿಯವರು, ಅವರೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದರು. ಚಾಮರಾಜ ನಗರದಲ್ಲಿ ಸುದ್ದಿ ಗಾರರೊಂದಿಗೆ ಅವರು ಮಾತನಾಡಿ, ಗೋ ಬ್ಯಾಕ್ ಅಂಥಾ  ಯಾಕೆ  ಹಾಕಿದ್ದಾರೆ, ನಾನು ಹೊರಗಿವನಾ? ಮರಳು ಮಾಫಿಯಾ ಕೇಸ್ ಕೋರ್ಟ್ ನಲ್ಲಿ ವಜಾ ಆಗಿದೆ. ಕ್ಲೀನ್ ಚಿಟ್ ಕೊಡಲಾಗಿದೆ, ಬಿಜೆಪಿಯವರಿಗೆ ಸವಾಲು ಹಾಕುತ್ತೇನೆ, ನನ್ನ ವಿರುದ್ಧ ಮರಳು ದಂಧೆ ಆರೋಪ ಸಾಬೀತು ಮಾಡಿದರೇ ನಾನು ನಾಮಪತ್ರವನ್ನೇ ಸಲ್ಲಿಸುವುದಿಲ್ಲ ವಾಪಸ್ ಪಡೆಯುತ್ತೇನೆ ಎಂದರು.ಗೋ ಬ್ಯಾಕ್ ಬರೆದವರ ವಿರುದ್ಧ ದೂರು ಕೊಡ್ತೀನಿ. ಚುನಾವಣಾಧಿ ಕಾರಿಗಳಿಗೆ ದೂರು ಕೊಡಲಾಗುವುದು. ಮಾಧ್ಯಮವರು ಹೇಳಿದ  ಮೇಲೆ ಗೋ ಬ್ಯಾಕ್ ವಿಚಾರ ಗಮನಕ್ಕೆ ಬಂದಿದೆ, ಬಿಜೆಪಿಯವರು ಈ ಅಪಪ್ರಚಾರ ಮಾಡಿದ್ದಾರೆ ಎಂದು ಕಿಡಿಕಾರಿದರು. ಕರ್ನಾಟಕದಲ್ಲಿ ಮೋದಿ ಹವಾ ಇಲ್ಲಾ, ಕಾಂಗ್ರೆಸ್ ಈ ಬಾರಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More

ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ  ಸರ್ಕಾರಿ ಬಸ್‌ ವೊಂದು ಜಮೀನಿಗೆ ನುಗ್ಗಿದ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ದೇವಿನಗರದ ಬಳಿ ನಡೆದಿದೆ. ಅದೃಷ್ಟಾವಶಾತ್ ಸರ್ಕಾರಿ ಬಸ್’ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಕೆಲವೊಬ್ಬರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಬಳ್ಳಾರಿ: ಕೊಯ್ಲಿಗೆ ಬಂದ ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗುಂಡಿಗನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ಹನಮೇಶ್ ಎಂದ ರೈತರ ಗದ್ದೆಯಲ್ಲಿ ಪ್ರತಕ್ಷವಾಗಿದ್ದು, ಮೊಸಳೆ ಕಂಡು ರೈತರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಮೊಸಳೆ ರಕ್ಷಿಸಿಸುವ ನಿಪುಣ ಸ್ಥಳೀಯ ವೇಶಗಾರ್ ಎಂಬುವನಿಂದ ರೆಸ್ಕ್ಯೂಮಾಡಿ ಬಳಿಕ ಮರಳಿ ತುಂಗಾ ನದಿಗೆ ಬಿಟ್ಟ ಅರಣ್ಯ ಸಿಬ್ಬಂದಿಗಳು.

Read More

ಶಿವಮೊಗ್ಗ: ಗ್ಯಾರಂಟಿ ಯೋಜನೆಗಳಿಂದ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಕೆಲವರು ತಪ್ಪು ಸಂದೇಶ ಹರಡುತ್ತಿದ್ದಾರೆ. ಈ ರೀತಿಯ ವದಾಂತಿಗಳಿಗೆ ಜನರು ಕಿವಿಕೊಡಕೂಡದು. ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಹಸನಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು. ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಪಡವಗೋಡು ಗ್ರಾಮ ಪಂಚಾಯಿತಿ ಲಿಂಗದಹಳ್ಳಿ ಹಾಗೂ ಭೀಮನೇರಿಯ ಸೂರನಗದ್ದೆ ದೇವಸ್ಥಾನ ವೃತ್ತದಲ್ಲಿ ಬುಧವಾರ ಆಯೋಜಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಕೃಪಾಂಕ ಕಲ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಶಕ್ತ ಕುಟುಂಬಗಳಿಗೆ ಆಶಾಕಿರಣ ಆಗಿದ್ದರು. ಅವರ ಮಗಳಾದ ನಾನು ಕೂಡ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗುತ್ತೇನೆ‌. ನೊಂದವರ ಕಣ್ಣೀರು ಒರೆಸುತ್ತೇನೆ ಎಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು. ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾವು ಹೆಚ್ಚಾಗಿದೆ. ಆದ್ದರಿಂದ, ಇಲ್ಲಿ…

Read More