Author: AIN Author

ನವದೆಹಲಿ: ಶಿವಸೇನೆ ಉದ್ಧವ್‌ ಬಣದ ಜತೆ ಕಾಂಗ್ರೆಸ್‌ ಸೀಟು ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿಭುಗಿಲೆದ್ದ ಅಸಮಾಧಾನ ಭುಗಿಲೆದ್ದಿತ್ತು. ವಾಯವ್ಯ ಮುಂಬಯಿ ಕ್ಷೇತ್ರದಿಂದ ಟಿಕೆಟ್‌ ವಂಚಿತರಾಗಿದ್ದ ಸಂಜಯ್‌, ತಮ್ಮ ಬದಲಿಗೆ ಶಿವಸೇನೆ ಉದ್ಧವ್‌ ಬಣದ ಅಭ್ಯರ್ಥಿಗೆ ಕಾಂಗ್ರೆಸ್‌ ಮಣೆ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಕಾಂಗ್ರೆಸ್‌ ಹಿರಿಯ ಮುಖಂಡ ಸಂಜಯ್‌ ನಿರುಪಮ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಸಂಜಯ್‌ ಉಚ್ಚಾಟನೆಗೆ ಸೂಚಿಸಿ ಮಹಾರಾಷ್ಟ್ರ ಕಾಂಗ್ರೆಸ್‌ ಘಟಕವು ಹೈಕಮಾಂಡ್‌ಗೆ ಶಿಫಾರಸು ಮಾಡಿತ್ತು. ಬುಧವಾರ ರಾತ್ರಿ ದಿಲ್ಲಿಯಲ್ಲಿ ಚರ್ಚೆ ಬಳಿಕ ಹೈಕಮಾಂಡ್‌ ಉಚ್ಛಾಟನೆ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮುನ್ನ ಬುಧವಾರ ಬೆಳಗ್ಗೆಯೇ ಸಂಜಯ್‌ ಅವರನ್ನು ‘ಸ್ಟಾರ್‌ ಪ್ರಚಾರಕ’ರ ಪಟ್ಟಿಯಿಂದ ಕೈಬಿಡಲಾಗಿತ್ತು. https://ainlivenews.com/falling-into-the-tube-well-and-groaning-a-childs-leg-caught-on-camera/ ‘ಮುಂಬಯಿನ ಆರು ಕ್ಷೇತ್ರಗಳ ಪೈಕಿ ಶಿವಸೇನೆಗೆ ಐದು ಬಿಟ್ಟುಕೊಡಲಾಗಿದೆ. ಕಾಂಗ್ರೆಸ್‌ಗೆ ಭಿಕ್ಷೆ ಎಂಬಂತೆ ಒಂದು ಕ್ಷೇತ್ರ ಬಿಟ್ಟುಕೊಡಲಾಗಿದೆ. ಇದಕ್ಕೆ ಹೈಕಮಾಂಡ್‌ ತಲೆದೂಗಿದೆ,’’ ಎಂದು ಬಹಿರಂಗವಾಗಿಯೇ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ, ಹೈಕಮಾಂಡ್‌…

Read More

ಮಂಡ್ಯ: ಇಂದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ಮೊದಲು ಕುಮಾರಸ್ವಾಮಿ, ನಗರಕ್ಕೆ ಹತ್ತಿರದ ಗುತ್ತಲುನಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.  https://ainlivenews.com/falling-into-the-tube-well-and-groaning-a-childs-leg-caught-on-camera/ ಹಾಗೆಯೇ, ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದೆ ಬಿಜೆಪಿ ಸೇರುವ ಘೊಷಣೆಯನ್ನು ನಿನ್ನೆ ಮಾಡಿದ್ದು ಅವರನ್ನು ನಿಶ್ಚಯವಾಗಿ ನಿರಾಳವಾಗಿಸಿದೆ. ನಗರಕ್ಕೆ ಹತ್ತಿರದ ಗುತ್ತಲುನಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಂಡ್ಯದ ಕಾವೇರಿ ಭವನದ ಮುಂಭಾಗ ಇರುವ ಕಾವೇರಿ ಮಾತೆಗೆ ಹೆಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸಿದರು.          

Read More

ದಕ್ಷಿಣ ಕನ್ನಡ:  ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥ್‌  ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಕರ್ನಾಟಕ ರಾಜ್ಯ ಮಟ್ಟದ ವಿಶ್ವವಿದ್ಯಾಲಯ ಹಾಗೂ ಕಾಲೇಜು ಪತ್ರಿಕೋದ್ಯಮ ಉಪನ್ಯಾಸಕರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. https://ainlivenews.com/do-you-know-how-much-property-shobha-karandlaje-has-who-left-udupi-chikkamagaluru/ ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಿ.ಕೆ. ರವಿ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪತ್ರಿಕೋದ್ಯಮ ಅಧ್ಯಾಪಕರ ವಿಶೇಷ ಕಾರ್ಯಾಗಾರ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಗೌರವಾಧ್ಯಕ್ಷರಾಗಿಯೂ ಡಾ. ಭಾಸ್ಕರ ಹೆಗಡೆ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Read More

ಮೈಸೂರು:  ಪ್ರತಾಪ್ ಸಿಂಹಗೆ ದೇವೇಗೌಡರು ಟಿಕೆಟ್ ತಪ್ಪಿಸಿದ್ದಾರೆ ಅಂತ ಹಬ್ಬಿರುವ ಸುದ್ದಿ ಆಧಾರರಹಿತ ಎಂದು ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊದಿಗೆ ಮಾತಾಡಿದ ಯದುವೀರ್, ಚುನಾವಣಾ ಪ್ರಚಾರದಲ್ಲಿ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗದೆ ಅದರ್ಶಮಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದರೆ ಚುನಾವಣೆಗೊಂದು ಘನತೆ ಬರುತ್ತದೆ ಎಂದು ಹೇಳಿದರು. https://ainlivenews.com/falling-into-the-tube-well-and-groaning-a-childs-leg-caught-on-camera/ ಯದುವೀರ್ ಅವರನ್ನು ತಾನೇ ನೋಡಿಲ್ಲ ಇನ್ನು ಜನ ಅವರನ್ನು ಗುರುತಿಸುವುದು ಎಲ್ಲಿಂದ ಬಂತು ಅಂತ ಸಚಿವ ಕೆ ವೆಂಕಟೇಶ್ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಯುದವೀರ್, ಕಳೆದ 9-10 ವರ್ಷಗಳಿಂದ ಜನರ ನಡುವೆ ತಾನು ಓಡಾಡುತ್ತಿದ್ದು ಜನ ತಮ್ಮನ್ನು ಗುರುತಿಸುತ್ತಾರೆಯೋ ಇಲ್ಲವೋ ಅನ್ನೋದು ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು. ಪ್ರತಾಪ್ ಸಿಂಹಗೆ ದೇವೇಗೌಡರು ಟಿಕೆಟ್ ತಪ್ಪಿಸಿದ್ದಾರೆ ಅಂತ ಹಬ್ಬಿರುವ ಸುದ್ದಿ ಆಧಾರರಹಿತ ಎಂದು ಅವರು ಹೇಳಿದರು.

Read More

ಮೈಸೂರು: ಬನ್ನಿ ಇಬ್ಬರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲೋಣ. ಯಾರು ಗೆಲುತ್ತಾರೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಜಿಟಿ ದೇವೇಗೌಡ ಸವಾಲು ಹಾಕಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಅಂದರೆ ಏನೂ ಅಂತ ಗೊತ್ತಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಮಾಡದೆ ರಾಜಕೀಯದಲ್ಲಿ ಬೆಳೆದು ಬಂದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ. https://ainlivenews.com/falling-into-the-tube-well-and-groaning-a-childs-leg-caught-on-camera/  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಅದಕ್ಕಾಗಿ ಆಗ ನೀವು ಗೆದ್ದರಿ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟು ಸಲ ಪ್ರಯತ್ನ ಪಟ್ಟಿದ್ದೀರಿ. ನನ್ನ ಕಾಯೋಕೆ ದೈವವಿದೆ, ಧರ್ಮವಿದೆ. ಅದು ಹೇಗೆ ನೀವು ನನ್ನನ್ನು ಸೋಲಿಸ್ತಿರಿ. ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯ್ತು. ಯಾಕೆ ಪದೇ ಪದೇ ಹೀಗೆ ಮಾತಾಡುತ್ತೀರಿ ಎಂದು ಪ್ರಶ್ನಿಸಿದರು.

Read More

ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್‌, ಬೌಂಡರಿ ಚಚ್ಚಿದ ಪರಿಣಾಮ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಐಪಿಎಲ್‌ನಲ್ಲಿ (IPL) ಮತ್ತೊಂದು ವಿಶೇಷ ಸಾಧನೆ ಮಾಡಿದೆ. 7 ವಿಕೆಟ್‌ ನಷ್ಟಕ್ಕೆ 272 ರನ್‌ ಸಿಡಿಸುವ ಮೂಲಕ ಐಪಿಎಲ್‌ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ ಸಿಡಿಸಿದ 2ನೇ ತಂಡ ಹೆಗ್ಗಳಿಗೆಕೆ ಕೆಕೆಆರ್‌ ತಂಡ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು. https://ainlivenews.com/do-you-know-how-much-property-shobha-karandlaje-has-who-left-udupi-chikkamagaluru ಆದ್ರೆ ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 277 ಬಾರಿಸುವ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ನುಚ್ಚುನೂರು ಮಾಡಿತ್ತು. ಈದೀಗ ಕೋಲ್ಕತ್ತಾ ನೈಟ್‌ರೈಡರ್ಸ್‌ 272 ರನ್‌ ಸಿಡಿಸುವ ಮೂಲಕ ಆರ್‌ಸಿಬಿ ದಾಖಲೆಯನ್ನ ನುಚ್ಚುನೂರು…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಾಖಲೆಯ ತಾಪಮಾನ ಏರಿಕೆಯಾಗಿದೆ. ಮೂರು ವರ್ಷಗಳ ದಾಖಲೆ ಸರಿಗಟ್ಟಿದೆ. ಬರೋಬ್ಬರಿ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗಿದೆ. ಬಿಸಿಲಿನ ಬೇಗೆಗೆ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಒಟ್ಟು ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಆದರೆ ಬೆಂಗಳೂರಿನ ಎಂಟು ವಲಯಗಳಲ್ಲಿ ತಾಪಮಾನ ದಾಖಲೆ ಬರೆದಿದೆ. https://ainlivenews.com/do-you-know-how-much-property-shobha-karandlaje-has-who-left-udupi-chikkamagaluru/ ಎಲ್ಲಿ ಎಷ್ಟು ತಾಪಮಾನ? ಆರ್‌ಆರ್ ನಗರ – 38.60 ಡಿಗ್ರಿ ಸೆಲ್ಸಿಯಸ್ ಬೆಂಗಳೂರು ಪೂರ್ವ- 37 ಡಿಗ್ರಿ ಸೆಲ್ಸಿಯಸ್ ಯಲಹಂಕ – 34.90 ಡಿಗ್ರಿ ಸೆಲ್ಸಿಯಸ್ ಬೆಂಗಳೂರು ದಕ್ಷಿಣ – 35.90 ಡಿಗ್ರಿ ಸೆಲ್ಸಿಯಸ್ ದಾಸರಹಳ್ಳಿ – 36.60 ಡಿಗ್ರಿ ಸೆಲ್ಸಿಯಸ್ ಬೊಮ್ಮನಹಳ್ಳಿ – 36.70% ಮಹಾದೇವಪುರ – 34.80 ಡಿಗ್ರಿ ಸೆಲ್ಸಿಯಸ್ ಪಶ್ಚಿಮ ವಲಯ – 35.40 ಡಿಗ್ರಿ ಸೆಲ್ಸಿಯಸ್ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಅಂತರ್ಜಲ ಕುಸಿದಿದೆ. ಮರ ಗಿಡಗಳು ಕಡಿಮೆ ಇದೆಯೋ ಅಲ್ಲಿ ತಾಪಮಾನ (Temperature) ಏರಿಕೆ ಆಗಿದೆ.…

Read More

ಫೇಸ್‌ಬುಕ್‌ (Facebook) ಕಂಪನಿಯ ಮಾತೃ ಸಂಸ್ಥೆ ಮೆಟಾ (META) ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ (Data Center) ಅನ್ನು ಚೆನ್ನೈನ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪನೆ ಮಾಡಲಿದೆ. ಮಾರ್ಚ್ ಆರಂಭದಲ್ಲಿ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಬಳಿಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಕಂಪನಿಯು ರಿಲಯನ್ಸ್‌ (Reliance Industries) ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅಂಬತ್ತೂರ್ ಇಂಡಸ್ಟ್ರಿಯಲ್ ಎಸ್ಟೇಟ್‌ 10-ಎಕರೆ ಕ್ಯಾಂಪಸ್ ಹೊಂದಿದೆ. ಬ್ರೂಕ್‌ಫೀಲ್ಡ್ ಅಸೆಟ್‌ ಮ್ಯಾನೇಜ್‌ಮೆಂಟ್‌, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿ ಜಂಟಿಯಾಗಿ ಈ ಕ್ಯಾಂಪಸ್‌ನಲ್ಲಿ ಹೂಡಿಕೆ ಮಾಡಿದೆ. ಭಾರತದಲ್ಲಿ ಫೇಸ್‌ಬುಕ್ 31.46 ಕೋಟಿ, ಇನ್‌ಸ್ಟಾಗ್ರಾಮ್ 35 ಕೋಟಿ, ವಾಟ್ಸಪ್‌ಗೆ 48 ಕೋಟಿ ಬಳಕೆದಾರರಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಬಳಕೆದಾರರ ಸಂಖ್ಯೆ ದುಪ್ಪಟ್ಟು ಇರುವುದರಿಂದ ಈಗ ಇಲ್ಲೇ ಡೇಟಾ ಸೆಂಟರ್‌ ತೆರೆಯಲು ಮೆಟಾ ಮುಂದಾಗಿದೆ. ಗೂಗಲ್ ದೇಶದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ನವಿ ಮುಂಬೈನಲ್ಲಿ 22.5…

Read More

ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ. ಶೀಘ್ರ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದು, ಪಕ್ಷದ ನಿಲುವಿಗೆ ಬದ್ಧ ಎನ್ನುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುವುದಾಗಿ ಸಂಸದೆ ಸುಮಲತಾ ಅಂಬರೀಶ್ ಬುಧವಾರ ಘೋಷಣೆ ಮಾಡಿದ್ದಾರೆ. ಈ ಮೂಲಕ ಹೆಚ್.ಡಿ.ಕುಮಾರಸ್ವಾಮಿಗೆ ನಾಮಪತ್ರ ಸಲ್ಲಿಸಲು ಹಾದಿ ಸುಗಮಗೊಳಿಸಿದ್ದರು. ಈ ಹಿನ್ನಲೆಯಲ್ಲಿ  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮುನ್ನಾ ಬುಧವಾರ ಮಧ್ಯಾಹ್ನ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿಗಳಾದ ಮಾಜಿ ಶಾಸಕರಾದ ದಿ.ಪುಟ್ಟಣ್ಣಯ್ಯ, ಚೌಡಯ್ಯ, ಕೆ.ವಿ.ಶಂಕರೇಗೌಡ, ಎಸ್.ಡಿ.ಜಯರಾಂ, ಜಿ.ಮಾದೇಗೌಡ, ಅಂಬರೀಶ್ ಅವರುಗಳ ಸಮಾಧಿಗಳಿಗೆ ತೆರಳಿ ಕುಮಾರಸ್ವಾಮಿ ನಮನ ಸಲ್ಲಿಸಲಿದ್ದಾರೆ. ಇಂದು ಬೆಳಿಗ್ಗೆ ಮಂಡ್ಯ ನಗರದ ಶ್ರೀ ಅರ್ಕೇಶ್ವರ, ಶ್ರೀ ಕಾಳಿಕಾಂಬ, ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನ, ನಂತರ ಕಾವೇರಿ ಪ್ರತಿಮೆ, https://ainlivenews.com/falling-into-the-tube-well-and-groaning-a-childs-leg-caught-on-camera/ ಡಾ.…

Read More

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಶೋಭಾ ಕರಂದ್ಲಾಜೆ (Shobha Karandlaje) ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ   ಪರೀಕ್ಷೆಗಿಳಿದಿದ್ದಾರೆ. ಏಪ್ರಿಲ್ 3ರಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಶೋಭಾ ಕರಂದ್ಲಾಜೆ ಅವರು ತಮ್ಮ ಬಳಿ 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಅಲ್ಲದೇ 1 ಕೆಜಿ ಚಿನ್ನದ ಬಿಸ್ಕೆಟ್ ಇದೆ ಎಂದು ತಿಳಿಸಿದ್ದಾರೆ.  ಕಳೆದ ಲೋಕಸಭಾ ಚುನಾವಣೆಗೆ(2019) ಈಗ ಹೋಲಿಸಿದರೆ ಐದು ವರ್ಷದಲ್ಲಿ ಶೋಭಾ ಅವರ ಆಸ್ತಿ ಮೌಲ್ಯದಲ್ಲಿ 6 ಕೋಟಿ ರೂ. ಹೆಚ್ಚಳವಾಗಿದೆ. https://ainlivenews.com/rain-forecast-in-many-parts-of-karnataka-yellow-alert-for-these-districts/ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಚರಾಸ್ತಿ 9,23,66,909 ರೂಪಾಯಿ ಮೌಲ್ಯ ಹಾಗೂ 6,78,97,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ. ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ತಮ್ಮ ನಾಪಮತ್ರದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ…

Read More