Author: AIN Author

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ‌ ಶೇಕಡ 70 ರಷ್ಟು ಕಾಂಗ್ರೆಸ್ ಬಗ್ಗೆ ಒಲವಿದೆ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂಬ ಉತ್ಸಾಹದಲ್ಲಿದ್ದಾರೆ ಎಂದು ಅಭ್ಯರ್ಥಿ ಚಂದ್ರಪ್ಪ ಹೇಳಿದರು. ಅವರು ಮಾಧ್ಯಮಗಳೊಂದಿಗೆ ಮಾತಾಡಿದರು.ನಾವು ಮತ್ತು ಪಕ್ಷ ಹಾಗೂ ಜಾತ್ಯಾತೀತ ತತ್ವ ಭದ್ರವಾಗಿದೆ. ಕಾರಜೋಳ ಬಂದಿರುವುದರಿಂದ ನಮಗೇನು ಸಮಸ್ಯೆ ಇಲ್ಲ. ಐದು ಗ್ಯಾರಂಟಿ ಯೋಜನೆಗಳು ಭದ್ರವಾಗಿವೆ. ಅನ್ಯ ಪಕ್ಷದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಮಾತಾಡುವ ಸಮಯವನ್ನು ಪಕ್ಷದ ಸಂಘಟನೆಗೋಸ್ಕರ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ಏಳು ಜನ ಶಾಸಕರಿದ್ದಾರೆ. ಆಂಜನೇಯ ಅವರು ಕಡಿಮೆ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಯಾರೇ ಬಂದರೂ ನಮ್ಮ ಎದುರಾಳಿಗಳೇ ಅವರಿಗೆ ನಾವು ಗೌರವಿಸುತ್ತೇವೆ. ನಾವು ಗೆಲ್ಲುತ್ತೇವೆ ಮತಗಳ ಅಂತರವ‌ನ್ನು ಜನರಿಗರ ಬಿಡುತ್ತೇವೆ. ಕಾರಜೋಳ ಬಂದ ಮೇಲೆ ನಮ್ಮ ಪಕ್ಷ ಮತ್ತಷ್ಟು ಸದೃಢವಾಗಿದೆ. ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ನಾನೇನು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದಲದಲಿ ದೀಪ‌ಹಚ್ಚಲು ಯಾರೂ ಇರುವುದಿಲ್ಲ ಎಂದು ಹೇಳುವುದನ್ನು‌ನಾನು ಒಪ್ಪುವುದಿಲ್ಲ. ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭದ್ರವಾಗಿದೆ‌ ಅದ್ಹೇಗೆ ದೀಪ‌ಹಚ್ಚಲು ಸಾಧ್ಯವಿಲ್ಲ. ಏನೂ ಕೆಲಸ ಮಾಡದೆ…

Read More

ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ನಗರ ದೇವತೆ ಕೋಲಾರಮ್ಮ ದೇವಸ್ಥಾನಕ್ಕೆ ಕೆವಿ ಗೌತಮ್ ಭೇಟಿ ನೀಡಿ ಮೂಜೆ ಸಲ್ಲಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಅಮ್ಮನವರ ಆಶೀರ್ವಾದ ಪಡೆದರು. ಬಳಿಕ ಮೆಥೋಡಿಸ್ಟ್ ಚರ್ಚ್ ಗೆ ಭೇಟಿ ನೀಡಿ ಕ್ರೈಸ್ತ ದೇವರಿಗೆ ನಮಿಸಿ ಪಾದ್ರಿಗಳಿಂದ ಆಶೀರ್ವಾದ ಪಡೆದರು. ನಂತರ ಕೋಲಾರ ಕ್ಲಾಕ್ ಟವರ್ ಬಳಿ ಇರುವ ದರ್ಗಾಗೆ ಭೇಟಿ ನೀಡಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಮೌಲ್ವಿ ಗಳಿಂದ ಆಶೀರ್ವಾದ ಕೂಡ ಪಡೆದರು. ಈ ಸಂದರ್ಭದಲ್ಲಿ ಸಚಿವ ಡಾ.ಸುಧಾಕರ್, ಶಾಸಕರಾದ ಕೊತ್ತೂರು ಮಂಜುನಾಥ್, ಎಂಎಲ್ ಸಿ ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಆದಿನಾರಾಯಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಸೇರಿದಂತೆ ಮುಂತಾದವರು ಸಾಥ್ ನೀಡಿದರು.

Read More

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಗೆ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ, ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್, ಮುದ್ದಹನುಮೇಗೌಡರಿಗೆ ಸಾಥ್ ನೀಡಿದರು. ಇನ್ನೂ ನಾಮಪತ್ರ ಸಲ್ಲಿಕೆ ಬಳಿಕ ಬೃಹತ್ ರ್ಯಾಲಿ ನಡೆಸಲಿದ್ದಾರೆ. ತುಮಕೂರಿನ ಬಿಜಿಎಸ್ ಸರ್ಕಲ್ ನಿಂದ ಡಿಸಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಯಲಿದೆ.

Read More

ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ ಅವರಿಂದ ನಾಮಪತ್ರ ಸಲ್ಲಿಕೆ ಮಾಡಲಾಯಿತು. ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿ ಅಕ್ರಂ‌ ಪಾಷ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆ.ವಿ.ಗೌತಮ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಚಿವ ಡಾ.ಎಂ.ಸಿ.ಸುಧಾಕರ್,ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ,ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಸಾಥ್ ನೀಡಿದ್ದಾರೆ.  

Read More

ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮಾನ ಮಾದರಿಯಲ್ಲಿ ನೇಕಾರ ಸಮ್ಮಾನ ಜಾರಿಯಾಗಬೇಕು. ನೇಕಾರರನ್ನು ಕಾರ್ಮಿಕರೆಂದು ಘೋಷಿಸಿ. ಆತ್ಮಹತ್ಯೆಗೊಳಗಾದ ಕುಟುಂಬಗಳಿಗೆ 10ಲಕ್ಷ ಪರಿಹಾರ ಧನ ಸೇರಿದಂತೆ ಹಲವು ಬೇಡಿಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. 48,000 ಜನ ಕುಟುಂಬಗಳು ನೇಕಾರಿಕೆ ಮಾಡುತ್ತಿದ್ದರು ಆದರೆ ಇವತ್ತು ಕೇವಲ ನಾಲ್ಕು ಸಾವಿರದ ಎರಡು ನೂರು ಮಗ್ಗಗಳು ನೇಕಾರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವನತಿಯ ಅಂಚಿನಲ್ಲಿರುವ ನಿಗಮವು ನೂರಾರು ಕೋಟಿ ರೂಪಾಯಿಗಳ ಸಾಲದ ಹೊರೆಯಲ್ಲೇ ಸಾಗುತ್ತಿದ್ದೂ ಕಳೆದ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಹಗರಣ ನಡೆದು ಸೂಕ್ತವಾದ ತನಿಖೆಯೂ ಆಗಲಿಲ್ಲ ಇದರ ದುಸ್ಥಿತಿಯ ಪರಿಣಾಮವಾಗಿ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಹೆಚ್ ಡಿ ಸಿ ಯಲ್ಲಿ 40 ವರ್ಷಗಳಿಂದ ವಾಸವಾಗಿರುವ ನೇಕಾರರಿದ್ದು ಅವರಿಗೆ ಸಿ. ಟಿ. ಎಸ್ ಉತಾರ ದೊರೆಯದೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ಅಲ್ಲದೆ ನೂರಾರು ಜನರಿಗೆ ನಿವೇಶನಗಳು ಇರದೇ ಬಾಡಿಗೆ ಮನೆಯಲ್ಲಿದ್ದಾರೆ. ಇತ್ತೀಚೆಗೆ ಸಮರ್ಪಕ ಯೋಜನೆಗಳು ದೊರೆಯದ ಕಾರಣ ಕೆಲವಿಷ್ಟು…

Read More

ಬಳ್ಳಾರಿ: ತೋಳಗಳ ದಾಳಿಗೆ 20 ಕುರಿಗಳು ಬಲಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ತೆಲುಗುರ ದೊಡ್ಡ ರಂಗಪ್ಪ ಸೇರಿದ ಸುಮಾರು 20 ಕುರಿಗಳು ತೋಳಗಳಿಗೆ ಬಲಿಯಾಗಿದ್ದು, ಕುರಿ ಹಟ್ಟಿಗೆ ನುಗ್ಗಿ ಕುರಿ ಮರಿಗಳನ್ನು ತೋಳಗಳು ತಿಂದುಹಾಕಿವೆ. ಇನ್ನುಳಿದ ಕುರಿಗಳಿಗೆ ಸಣ್ಣಪುಟ್ಟ ತೀವ್ರ ಗಾಯಗಳಾಗಿದ್ದು, ನರಿಗಳ ದಾಳಿಯಿಂದ ಸುಮಾರು ಒಂದು ಲಕ್ಷ ಮೌಲ್ಯವು ನಷ್ಟ ಉಂಟಾಗಿದೆ. ಸ್ಥಳಕ್ಕೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಗಂಗಾಧರ ಮತ್ತು ಗ್ರಾಮದ ಪಶು ವೈದ್ಯ ಶಿವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅಧಿಕಾರಿಗಳು ಸತ್ತ ಕುರಿಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.

Read More

ಲೋಕಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಮನೆದೇವರ ಮೊರೆ ಹೋಗಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ  ಸೋಬಗಾನ ಹಳ್ಳಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕುಟುಂಬ ಸಮೇತ ಭೇಟಿ ‌ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Read More

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ (Karnataka) ಜನತೆಗೆ ಸಿಹಿ ಸುದ್ದಿ. ಇನ್ನು ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.ಇದೇ ಏಪ್ರಿಲ್ 6 ರಿಂದ ನಾಲ್ಕು ದಿನ ಸಾಧಾರಣ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://ainlivenews.com/what-did-ks-eshwarappa-say-after-coming-from-delhi/ ಏಪ್ರಿಲ್ 6 ರಂದು ದಕ್ಷಿಣ‌ಕನ್ನಡ , ಬೀದರ್ ,ಕಲಬುರಗಿ, ಕೊಡಗು, ಮಂಡ್ಯ, ಮತ್ತು ಮೈಸೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಏಪ್ರಿಲ್ 7ರಂದು‌, ಬೆಂಗಳೂರು, ಹಾಸನ , ಹಾಗೂ ತುಮಕೂರು ಜಿಲ್ಲೆಗಳಲ್ಲಿ ‌ಮಳೆ‌ಯಾಗಲಿದ್ದರೆ ಏಪ್ರಿಲ್ ‌9 ರಂದು ಕರವಾಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳು ಸೇರಿ 18 ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ.

Read More

ವಿಜಯಪುರ: ಸಾವಿರಾರು ಜನರ ಪ್ರಾರ್ಥನೆ ಫಲಿಸಿದ್ದು,  20 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರತೆಗೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿಬುಧವಾರ ಸಂಜೆ 6 ಗಂಟೆಗೆ ಕೊಳವೆ ಬಾವಿಗೆ ಬಿದ್ದ ಮಗು 20 ಗಂಟೆಗಳಿಂದ ಅನ್ನ ನೀರು ಇಲ್ಲದೆ  ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಈ ಸಂಬಂಧ NDRF, SDRF ತಂಡಗಳು ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾತ್ವಿಕ್​ನನ್ನು ಹೊರಗೆ ತೆಗಿದಿದ್ದಾರೆ. ಇದರಿಂದ ಮಗುವಿನ ಪೋಷಕರು, ಸಂಬಂಧಿಗಳು ಹಾಗೂ ಗ್ರಾಮಸ್ಥರೆಲ್ಲ ಫುಲ್ ಖುಷಿಯಾಗಿದ್ದಾರೆ. https://ainlivenews.com/are-you-wearing-the-same-saree-repeatedly-beware-of-cancer/ ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಬಳಿಕ ಆಂಬುಲೆನ್ಸ್‌ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದೆ. ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿಯ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಮಗು ಜೀವಂತವಾಗಿ ಬಂದಿದೆ. ರಕ್ಷಣಾ ಕಾರ್ಯಾಚರಣೆ ಇನ್ನೇನು ಕೊನೆ ಕ್ಷಣಕ್ಕೆ ತಲುಪುತ್ತಿದ್ದಂತೆಯೇ  ಮಗು ಅಳುವ ಸದ್ದು ಜೋರಾಗಿ ಕೇಳಿಸುತ್ತಿತ್ತು.

Read More

ಬಳ್ಳಾರಿ: ಜನಾರ್ಧನ್ ರೆಡ್ಡಿ ಬಿಜೆಪಿಗೆ ಸೇರಿರುವ ಹಿನ್ನೆಲೆ ಬಹುತೇಕ ಕೆ ಆರ್ ಪಿ ಪಕ್ಷದ ನಾಯಕರು ಬಿಜೆಪಿಗೆ ಮರಳುವ ಸಿದ್ಧತೆ ಮಾಡಿಕೊಂಡಿದ್ದಾರೆ. KRPP ನಾಯಕಿ ಅರುಣಾ ಲಕ್ಷ್ಮೀ ಜೊತೆ ಇಂದು ಬಳ್ಳಾರಿಯಲ್ಲಿ ಶ್ರೀರಾಮುಲು ಸಭೆ ನಡೆಸಲಿದ್ದು, ಬಿಜೆಪಿ ತೊರೆದು KRPP ಸೇರಿದ್ದ ಬಳ್ಳಾರಿ ನಾಯಕರುಗಳು ಮರಳಿ ಬಿಜೆಪಿಗೆ ಸೇರಲಿದ್ದಾರೆ. ಜನಾರ್ಧನ್ ರೆಡ್ಡಿ ಬಿಜೆಪಿ ಸೇರಿದ್ದರು ಸಹ ಬಳ್ಳಾರಿ KRPP ನಾಯಕರು ಎಲ್ಲೂ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿರಲಿಲ್ಲ, ಇಂದಿನಿ ಸಭೆಯಲ್ಲಿ ಎಲ್ಲಾ ನಾಯಕರುಗಳನ್ನ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಸಿದ್ದು, ಸಂಜೆ ನಾಲ್ಕು ಗಂಟೆಗೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಸೇರಿದಂತೆ ಕೆಆರ್ಪಿಪಿ ನಾಯಕರುಗಳ ಜೊತೆ ಸಭೆ ನಡೆಸಲಿದ್ದಾರೆ. ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಸಭೆ ಕರೆದಿದ್ದಾರೆ.

Read More