Author: AIN Author

ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು ಗುರುವಾರ (ಏ.4) ರಾಜ್ಯಸಭೆ ಸದಸ್ಯೆಯಾಗಿ‌ (Rajya Sabha Member) ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಯ್‌ಬರೇಲಿಯಿಂದ ಸಂಸದೆಯಾಗಿ ಆಯ್ಕೆಯಾಗುತ್ತಿದ್ದ ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ರಾಜಸ್ಥಾನದಿಂದ ಅವರು ಆಯ್ಕೆಯಾಗಿದ್ದಾರೆ. ಗುರವಾರ ಸಂಸತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಜಗದೀಪ್ ಧನಕರ್ (Jagdeep Dhankhar) ಪ್ರಮಾಣ ವಚನ ಭೋದಿಸಿದರು‌. ಸೋನಿಯಾ ಗಾಂಧಿ ಜೊತೆಗೆ ಆರ್‌ಪಿಎನ್ ಸಿಂಗ್‌, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಕರ್ನಾಟಕದ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್, ಸೈಯದ್ ನಾಸೀರ್ ಹುಸೇನ್, ಪಶ್ಚಿಮ ಬಂಗಾಳದ ಬಿಜೆಪಿ ಸದಸ್ಯ ಸಾಮಿಕ್ ಭಟ್ಟಾಚಾರ್ಯ, ವೈಎಸ್‌ಆರ್‌ಸಿಪಿ ನಾಯಕರಾದ ಗೋಲಾ ಬಾಬು ರಾವ್, ಮೇಧಾ ರಘುನಾಥ್ ರೆಡ್ಡಿ ಮತ್ತು ಯೆರುಂ ವೆಂಕಟ್ ಸುಬ್ಬಾ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. https://ainlivenews.com/are-you-wearing-the-same-saree-repeatedly-beware-of-cancer/ ಸೋನಿಯಾ ಗಾಂಧಿ ಅವರಿಗೆ…

Read More

ಬೆಂಗಳೂರು : ತೆರೆದ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಪುಟ್ಟ ಕಂದ ಸಾತ್ವಿಕ್ ಕೊನೆಗೂ ಸಾವು ಗೆದ್ದು ಬಂದಿದ್ದಾನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.‌ https://twitter.com/siddaramaiah/status/1775820500566213110?t=AKWQOU9Jq9imZ27xhhrs_A&s=19 ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ. ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ – ಹಾರೈಕೆಗಳು ಫಲಿಸಿದೆ, ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು. ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

Read More

ಮಂಡ್ಯ :- ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲಿಯೇ ಚುನಾವಣೆಗೆ ನಿಂತರೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿ ಬಳಿಕ ಆಯೋಜಿಸಲಾಗಿದ್ದ ಬಿಜೆಪಿ- ಜೆಡಿಎಸ್‌ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಹಣ, ಹೆಂಡ ಮತ್ತು ತೋಳ್ಬಲದಿಂದ ಅಧಿಕಾರ ಪಡೆಯುತ್ತೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ಪಾಠ ಕಲಿಸಬೇಕಿದೆ. ಮಂಡ್ಯದಲ್ಲಿ ಕುಮಾರಣ್ಣ ಮತ್ತು ಬೆಂ. ಗ್ರಾಮಾಂತರದಲ್ಲಿ ಡಾ. ಮಂಜುನಾಥ್‌ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ ಎಂದರು. ಜನರ ಅಪೇಕ್ಷೆಯ ಮೇರೆಗೆ ಕುಮಾರಸ್ವಾಮಿಯವರು ಮಂಡ್ಯದಿಂದ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಸೇರಿರುವ 70-80 ಸಾವಿರ ಜನರು ತಮ್ಮ ಕುಟುಂಬದ ಸದಸ್ಯರೊಡನೆ ಮತ ಹಾಕಿದರೆ ಸಾಕು. ಎಚ್‌ಡಿಕೆಯವರು ಅಭೂತಪೂರ್ವ ಬಹುಮತ ಪಡೆದು ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಕುಮಾರಸ್ವಾಮಿ ಹಾಗೂ ಡಾ. ಸಿ.ಎನ್‌.ಮಂಜುನಾಥ್‌…

Read More

ಬೆಂಗಳೂರು : ಬಿಜೆಪಿ ಸದಸ್ಯರು ನಾಥೂರಾಮ್ ಗೋಡ್ಸೆ ಮಂದಿರ ಕಟ್ಟಬೇಕು, ಪೂಜೆ ಮಾಡಬೇಕು ಎಂದು ಹೇಳ್ತಾರೆ. ಮಹಾತ್ಮ ಗಾಂಧಿ ಪುತ್ಥಳಿ ಮಾಡಿ ಅದಕ್ಕೆ ಗುಂಡು ಹಾರಿಸುವವರ ಜೊತೆಗೆ ಬಿಜೆಪಿ ಇದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಿಸಿದರು. https://ainlivenews.com/hd-kumaraswamys-tweet-about-satvik-who-fell-into-an-open-tube-well-and-won-death/ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಹುತ್ವ, ಪ್ರಜಾಪ್ರಭುತ್ವದಲ್ಲಿ ನಂಬಿಕೆ  ಇಟ್ಟವರು. ಸಂವಿಧಾನ ರಕ್ಷಣೆ ಮಾಡುವವರು, ಅವರು ಸಂವಿಧಾನ ವಿರೋಧಿಗಳು ಎಂದು ಕುಟುಕಿದರು. ಕೇರಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಸ್​ಡಿಪಿಐ ಬೆಂಬಲ ವಿಚಾರವಾಗಿ ಮಾತನಾಡಿ, ಕೇರಳದಲ್ಲಿ ಎಸ್​ಡಿಪಿಐ ಬೆಂಬಲವನ್ನು ನಾವು ಕೋರಿಲ್ಲ. ಬದಲಾಗಿ, ಅವರೇ ಕೊಟ್ಟರೆ ನಾವೇನು ಮಾಡಲು ಆಗಲ್ಲ. ಕೋಮುವಾದಿ ಪಕ್ಷವನ್ನು ಸೋಲಿಸಲು ಬೆಂಬಲ ಕೊಟ್ಟರೆ ಅದು ಅವರಿಗೆ ಬಿಟ್ಟಿದ್ದು. ನಾವು ಅವರ ಬೆಂಬಲ ಕೋರಿಲ್ಲ. ಕೇರಳದಲ್ಲಿ ಯಾರ ಜೊತೆಯೂ ಮೈತ್ರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

Read More

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದರು. https://ainlivenews.com/hd-kumaraswamys-tweet-about-satvik-who-fell-into-an-open-tube-well-and-won-death/ ಬೃಹತ್​ ಮೆರವಣಿಗೆ ಮೂಲಕ ಜಯನಗರದ BBMP ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತೇಜಸ್ವಿ ಸೂರ್ಯಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಾಥ್ ನೀಡಿದರು. ಆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,‘ ಕಾಂಗ್ರೆಸ್ ನ ಎಲ್ಲ ಕಾರ್ಡ್​ಗಳು ರಿಜೆಕ್ಟ್ ಆಗುತ್ತವೆ. ಕಾಂಗ್ರೆಸ್ ಪಕ್ಷವೇ ಎಕ್ಸಪೈರ್ ಆಗಿದೆ. ಈಗ ಮೋದಿ ನಾಯಕತ್ವಕ್ಕೆ ಬೆಂಬಲ ಸಿಗುತ್ತದೆ. ನೋ ಬಾಲ್ ಮೇಲೆ ಸಿಕ್ಸರ್ ಹೊಡೆಯುತ್ತೇನೆ. ಜೊತೆಗೆ ಈ ಬಾರಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ 5 ಲಕ್ಷ ಅಂತರದಿಂದ ಗೆಲ್ಲುತ್ತದೆ ಎಂದರು.

Read More

ಮುಂದಿನ 30 ವರ್ಷಗಳಲ್ಲಿ ಭಾರತದ ಇಂಧನ ಬೇಡಿಕೆಯು ವಿಶ್ವದ ಎಲ್ಲ ದೇಶಗಳನ್ನು ಮೀರಿಸಿ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಹೀಗಾಗಿ ದೇಶವು ವಿಶ್ವಾಸಾರ್ಹ ಶಕ್ತಿಯ ಮೂಲ ಹೊಂದಿರುವುದು ಬಹಳ ಮುಖ್ಯವಾಗಿದೆ. ಭವಿಷ್ಯದಲ್ಲಿ ಕಲ್ಲಿದ್ದಲು ಮತ್ತು ಇತರ ಮೂಲಗಳನ್ನು ಅವಲಂಬಿಸಲು ಸಾಧ್ಯವಿಲ್ಲ ಎಂಬುದು ವಾಸ್ತವ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಸೌರ ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು ವಿಸ್ತರಿಸಬೇಕಾಗಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಹೆಚ್ಚಳದ ಹೊರತಾಗಿಯೂ, 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸಲು ಭಾರತ ಬದ್ಧವಾಗಿದೆ. ಅಲ್ಲದೆ, 2030 ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇಕಡಾ 50ರಷ್ಟು ವಿದ್ಯುತ್ ಉತ್ಪಾದನೆಯ ಗುರಿಯನ್ನು ದೇಶವು ಹೊಂದಿದೆ. ಇದರಲ್ಲಿ ಈಗಾಗಲೇ ಶೇ 43ರ ಗುರಿಯನ್ನು ತಲುಪಲಾಗಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯಕ್ಕೆ ನವೀಕರಿಸಬಹುದಾದ ಇಂಧನಗಳು ಶೇ 30ರಷ್ಟು ಕೊಡುಗೆ ನೀಡುತ್ತಿವೆ. https://ainlivenews.com/are-you-wearing-the-same-saree-repeatedly-beware-of-cancer/ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಎಂಬ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅದೇ ರೀತಿ…

Read More

ಬೆಂಗಳೂರು : ತೆರೆದ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಪುಟ್ಟ ಕಂದ ಸಾತ್ವಿಕ್ ಕೊನೆಗೂ ಸಾವು ಗೆದ್ದು ಬಂದಿದ್ದಾನೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. https://x.com/hd_kumaraswamy/status/1775804155371934030?t=bSUJJFa6p5FY2GVxFbYk8A&s=08 ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಮೃತ್ಯುಂಜಯನಾಗಿ ಹೊರಬಂದ ಎರಡು ವರ್ಷದ ಮಗು ಸಾತ್ವಿಕ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ. ಅತ್ಯಂತ ಕಠಿಣ ಮತ್ತು ಸವಾಲಿನದ್ದು ಆಗಿದ್ದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗು ಸಾತ್ವಿಕ್ ಜೀವ ಉಳಿದಿದ್ದು ನನಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಇಡೀ ನಾಡಿಗೆ ನಾಡೇ ಋಣಿಯಾಗಿದೆ ಮಗುವನ್ನು ರಕ್ಷಣೆ ಮಾಡಿದ ಎಲ್ಲಾ NDRF, SDRF, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗೆ ಅವರ ಪೋಷಕರು ಮಾತ್ರವಲ್ಲ, ಇಡೀ ನಾಡಿಗೆ ನಾಡೇ ಋಣಿಯಾಗಿದೆ. ಈ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು ಎಂದು ಹೆಚ್.ಡಿ. ಕುಮಾರಸ್ವಾಮಿ ಪೋಸ್ಟ್ ಮಾಡಿದ್ದಾರೆ. ತಾತ ಶಂಕರಪ್ಪ ಕೊರೆಸಿದ್ದ ಬೋರ್​ವೆಲ್…

Read More

ಬೆಂಗಳೂರು:   ಪಂಚಾಯಿತಿಗೆ ಬೀಗ ಜಡೆದು ಆಕ್ರೋಶ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬೀಗ ಜಡಿದು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿದ ಮಹಿಳೆಯರು. https://ainlivenews.com/good-news-for-the-sun-drenched-people-four-days-of-rain-from-april-6/ ಆನೇಕಲ್ ತಾಲೂಕಿನ ವನಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದ್ದು  ವನಕನಹಳ್ಳಿ ಗ್ರಾಮ ಪಂಚಾಯಿತಿ ಬೀಗ ಜಡಿದು ಪ್ರತಿಭಟನೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ಸುಮಾರು ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಟ ಸುಮಾರು 2000 ಅಡಿ ಕೊಳವೆಬಾವಿ ಕೊರೆದರು ನೀರು ಪ್ರಾಬ್ಲಂ ಕುಡಿಯುವ ನೀರು ಸಿಗದೆ ಜನರು ಹೈರಾಣು ವಣನಕನಹಳ್ಳಿ ಗ್ರಾಮ ಪಂಚಾಯಿತಿ ಭಾಗದಲ್ಲಿ 10 ಹಳ್ಳಿಗಳಿಗೆ ನೀರಿಲ್ಲದೆ ಪರದಾಟ ಪಂಚಾಯಿತಿ ಪಿಡಿಒ ಧನಂಜಯ್ ವಿರುದ್ಧ ಉಪಾಧ್ಯಕ್ಷ ಹಾಗೂ ಸದಸ್ಯರು ಫುಲ್ ಗರಂ ಮಾಜಿ ಅಧ್ಯಕ್ಷ ಶ್ರೀನಿವಾಸ್ ಉಪಾಧ್ಯಕ್ಷ ದೇವರಾಜು ಮತ್ತು ಸದಸ್ಯರಿಂದ ಪಂಚಾಯಿತಿಗೆ ಬೀಗ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯ ಆನೇಕಲ್ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಸಾಧ್ಯತೆ

Read More

ಚಾಮರಾಜನಗರ: ಚಾಮರಾಜನಗರ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಒಟ್ಟು 7.84 ಕೋಟಿ ರೂ. ಆಸ್ತಿಯ ಒಡೆಯನಾಗಿದ್ದರೂ, ಅದೇ ರೀತಿ 5.56 ಕೋಟಿ ರೂ. ಸಾಲಗಾರರೂ ಆಗಿದ್ದಾರೆ. 42 ವರ್ಷದ ಬೋಸ್‌ ಅವರು ಪಿಯುಸಿ ವರೆಗೆ ವ್ಯಾಸಂಗ ಮಾಡಿದ್ದಾರೆ. ಇದೇ ಪ್ರಥಮ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿರುವ ಸುನೀಲ್‌ ಬೋಸ್‌ ಅವರ ವಿರುದ್ಧ 2017ರ ಚುನಾವಣೆ ಸಂದರ್ಭದಲ್ಲಿ ಚುನಾವಣೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದು ನಂಜನಗೂಡು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿ ಇದೆಯಷ್ಟೆ. ಉಳಿದಂತೆ ಇನ್ಯಾವುದೇ ಕ್ರಿಮಿನಲ್‌ ಪ್ರಕರಣಗಳು ಅವರ ಮೇಲಿಲ್ಲ. https://ainlivenews.com/are-you-wearing-the-same-saree-repeatedly-beware-of-cancer/ ಮೈಸೂರಿನ ವಾಣಿ ವಿಲಾಸ ಮೊಹಲ್ಲದಲ್ಲಿ 2 ಕೋಟಿ ರೂ. ಮೌಲ್ಯದ ಮನೆಯನ್ನು ಬೋಸ್‌ ಹೊಂದಿದ್ದಾರೆ. ಕೈಯಲ್ಲಿ 9.9 ಲಕ್ಷ ರೂ. ನಗದು ಹೊಂದಿದ್ದು, ಬ್ಯಾಂಕ್‌ಗಳಲ್ಲಿ 6.98 ಲಕ್ಷ ರೂ. ಹಣವನ್ನು ಉಳಿತಾಯ ಖಾತೆಯಲ್ಲಿ ಹೊಂದಿದ್ದಾರೆ. ಇವರ ಬಳಿ 38 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳಿವೆ. ಇವರ ಚರಾಸ್ತಿ 3.53…

Read More

ಹಾಸನ: ಬಿಜೆಪಿಯ ಒಬ್ಬರೇ ಒಬ್ಬರು ಕಾರ್ಯಕರ್ತರಿಗೆ ಕಾಂಗ್ರೆಸ್ – ಜೆಡಿಎಸ್‌ನಿಂದ ಸಮಸ್ಯೆ ಆದರೆ, ಕಿರುಕುಳ ನೀಡಿದರೆ ಧೃತಿಗೆಡಬೇಡಿ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಜೆ.ಗೌಡ ಅಭಯ ನೀಡಿದರು. ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಪದಾಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೆಲಸ ಆಗಬೇಕಾದರೆ ಆತ್ಮೀಯರು ಎನ್ನುವುದು, ಬಳಿಕ ಒಬ್ಬರೇ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಶೋಷಣೆ ಮಾಡಲು ಬಂದರೆ ನಿಮ್ಮ ಪರವಾಗಿ ಮೊದಲು ಬಂದು ನಿಲ್ಲುವನು ಪ್ರೀತಂ ಜೆ.ಗೌಡ ಎಂದು ಹೇಳಿದರು. https://ainlivenews.com/are-you-wearing-the-same-saree-repeatedly-beware-of-cancer/ 2013 ರಲ್ಲಿ ಅಭ್ಯರ್ಥಿಯಾಗಲು ಯಾರು ಸಿದ್ಧರಿರಲಿಲ್ಲ. ಜಿಲ್ಲಾ ರಾಜಕಾರಣದ ಸ್ಥಿತಿ ಆ ರೀತಿ ಇತ್ತು 2023 ರಲ್ಲಿ ಸಕಲೇಶಪುರ ಕ್ಷೇತ್ರದಲ್ಲಿ ಸಿಮೆಂಟ್‌ಮಂಜು, ಬೇಲೂರಿನಲ್ಲಿ ಎಚ್.ಕೆ.ಸುರೇಶ್ ಶಾಸಕರಾಗಲು ನಮ್ಮಗಳ ನಡವಳಿಕೆ , ಕಾರ್ಯಕರ್ತರ ಹೋರಾಟ ಕಾರಣವಾಗಿದೆ ಎರಡು ಕ್ಷೇತ್ರ ಮುಂದೆ ನಾಲ್ಕು ಆಗಬೇಕು ಎಂದರೆ ಸ್ವಾಭಿಮಾನದಿಂದ ಹೋರಾಟ ಮುಂದುವರೆಸಿಕೊಂಡು ಹೋಗಬೇಕು ಎಂದರು. 5 ವರ್ಷ ಶಾಸಕನಾಗಿದ್ದ ವೇಳೆ ಹೊಂದಾಣಿಕೆ ರಾಜಕಾರಣ ಮಾಡದೆ , ಹೆದರಿಸಿದವರಿಗೆ ಹೆದರದೆ…

Read More