Author: AIN Author

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್  ತಮ್ಮ ಬೆಂಬಲಿಗರೊಂದಿಗೆ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಮತಯಾಚನೆ ನಡೆಸುವ ವೇಳೆ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಂಟಿಬಿ ನಾಗರಾಜ್, ಧೀರಜ್ ಮುನಿರಾಜು, ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, https://ainlivenews.com/mysterious-death-of-husband-wife-friend-in-the-same-room-victim-of-witchcraft/ ಪಿ.ಸಿ.ಮೋಹನ್ ಸೇರಿದಂತೆ ಮೈತ್ರಿ ಪಕ್ಷದ ಪ್ರಭಾವಿಗಳು ರೋಡ್‌ ಶೋದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಳೆದ ವಿಧಾನಸಭೆ ಚುನಾವಣೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ನಾನು ಸಚಿವನಾಗಿದ್ದ ವೇಳೆ ಯಾವುದೇ ಮೋಸ ಮಾಡಿಲ್ಲ. ಯಾವುದೇ ಜಾತಿ ರಾಜಕೀಯ ಮಾಡಿಲ್ಲ. ಕ್ಷೇತ್ರದಲ್ಲಿ 11 ಸಾವಿರ ಸೈಟ್ ಹಂಚಿದ್ದೇನೆ. 10 ತಿಂಗಳ ಕಾಲ ಅಜ್ಞಾತವಾಸ ಅನುಭವಿಸಿದ್ದೇನೆ ಎಂದರು.

Read More

ದೆಹಲಿ:- ಮನೆಯೊಂದರ ಕಪಾಟಿನಲ್ಲಿ 26 ವರ್ಷದ ಮಹಿಳೆಯ ಶವ ಪತ್ತೆಯಾದ ಘಟನೆ ಜರುಗಿದ್ದು, ಲಿವ್ ಇನ್ ಸಂಗಾತಿ ಕೈವಾಡ ಶಂಕೆ ವ್ಯಕ್ತವಾಗಿದೆ. ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಮನೆಯೊಂದರಲ್ಲಿ ಘಟನೆ ಜರುಗಿದೆ. ಮಹಿಳೆಯ ತಂದೆ ಕೆಲವು ದಿನಗಳಿಂದ ಮಗಳಿಗೆ ಕರೆ ಮಾಡುತ್ತಿದ್ದರು ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ರಾತ್ರಿ ಪೊಲೀಸರಿಗೆ ಕರೆ ಬಂದಿದೆ, ಮಹಿಳೆಯ ತಂದೆ ತನ್ನ ಮಗಳನ್ನು ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು https://ainlivenews.com/collision-with-ksrtc-bus-standing-on-the-side-of-the-road-injured-admitted-to-hospital/ ನಂತರ ದಾಬ್ರಿ ಪೊಲೀಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಶದಲ್ಲಿ ಹೇಳಿದ ಮನೆಗೆ ಹೋಗಿದ್ದಾರೆ. ಫ್ಲಾಟ್​ಗೆ ತೆರಳಿದಾಗ ಆಕೆಯ ಮೃತದೇಹವು ರೂಮಿನ ಕಪಾಟಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಂದೆ, ತನ್ನ ಮಗಳನ್ನು ಆಕೆಯ ಲೈವ್-ಇನ್ ಸಂಗಾತಿ ವಿಪಾಲ್ ಹತ್ಯೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಡಿಡಿಯು ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗುಜರಾತ್‌ನ ಸೂರತ್‌ ಮೂಲದ ಆರೋಪಿ…

Read More

ಕೊಪ್ಪಳ:- ರಸ್ತೆ ಬದಿ ನಿಂತಿದ್ದ KSRTC ಸಾರಿಗೆ ಬಸ್ ಗೆ ಚುನಾವಣಾ ವೀಕ್ಷಕರಿದ್ದ ವಾಹನ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಜರುಗಿದೆ. https://ainlivenews.com/ksrtc-gave-good-news-to-passengers/ ಡಿಕ್ಕಿ ರಭಸಕ್ಕೆ ಚುನಾವಣೆ ವೀಕ್ಷಕರ ಜೀಪ್ ಸಂಪೂರ್ಣ ಜಖಂಗೊಂಡಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ. ಚುನಾವಣೆ ವೀಕ್ಷಕರ ವಾಹನದ ಡ್ರೈವರ ಶಿವಾನಂದಗೆ ಗಂಭೀರಗಾಯವಾಗಿದೆ. ಓರ್ವ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಘಟನೆ ಜರುಗಿದೆ. ಮೀನುಗಾರಿಕೆ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಘಟನೆ ಮಾಹಿತಿ ಪಡೆದು ಗಂಗಾವತಿ ತಹಶಿಲ್ದಾರ್ ಯು.ನಾಗರಾಜ್ ಆಸ್ಪತ್ರೆಗೆ ಧಾವಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಪಾಟ್ನಾ: ಅವರ ಕಾಲದಲ್ಲಿ ಬಡವರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಭೂಮಿ ಕಸಿದುಕೊಳ್ಳಲಾಯಿತು. ಕಿಡ್ನಾಪ್ ಉದ್ಯಮಕ್ಕೆ ಹೆಸರಾದವರು ರಾಜ್ಯದಲ್ಲಿ ರಸ್ತೆಗಳನ್ನು ನಿರ್ಮಿಸಲು ಬಿಡಲಿಲ್ಲ. ಬಿಹಾರವನ್ನು (Bihar) ಲ್ಯಾಂಟರ್ನ್ ಯುಗದಲ್ಲಿ ಇರಿಸಲು ಅವರು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರ್‌ಜೆಡಿ (RJD) ಪಕ್ಷದ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ (Lalu Prasad Yadav) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಜಮುಯಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಅವರು ವಿಪಕ್ಷಗಳ ವಿರುದ್ಧ ಭ್ರಷ್ಟಾಚಾರದ (Corruption) ಆರೋಪ ಮಾಡಿದರು. ಬಿಹಾರದ 85 ಲಕ್ಷಕ್ಕೂ ಹೆಚ್ಚು ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಜಮುಯಿಯಲ್ಲಿ ಮಾತ್ರ ಈ ಯೋಜನೆಯಡಿ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ 850 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿದ್ದಾರೆ. ದುರಹಂಕಾರಿ ಸಮ್ಮಿಶ್ರ ಸರ್ಕಾರವಾಗಿದ್ದಲ್ಲಿ ನೇರವಾಗಿ ಅಕೌಂಟ್‌ಗೆ ಹಣ ಕಳುಹಿಸುವ ಯೋಜನೆ ಇತ್ತೇ? ಇವರು ನಿಮ್ಮ ಹಣ ಲೂಟಿ ಮಾಡಿ ಹಣ ಸಿಕ್ಕಿದೆ ಎಂದು ಸಹಿ ಹಾಕುತ್ತಿದ್ದರು. https://ainlivenews.com/mysterious-death-of-husband-wife-friend-in-the-same-room-victim-of-witchcraft/ ಒಬ್ಬರನ್ನೊಬ್ಬರು ಜೈಲಿಗೆ ಹಾಕಲು…

Read More

ಬೆಂಗಳೂರು:- ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ KSRTC ನಿಗಮವು ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. https://ainlivenews.com/a-poisonous-snake-can-be-trusted-but-the-bjp-cannot-be-trusted/ ಏಪ್ರಿಲ್ 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಮುಂದಿನ ವಾರ, ಏಪ್ರಿಲ್ 11 ರ ಗುರುವಾರ ಮುಸ್ಲಿಮರ ಹಬ್ಬ ರಂಜಾನ್ ಸಹ ಇರಲಿದೆ. ಮತ್ತೆ ದೀರ್ಘ ವಾರಾಂತ್ಯ ರಜೆ ಸಿಗಲಿದೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ‌ ಇದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ. ಕೆಎಸ್‌ಆರ್‌ಟಿಸಿಯಿಂದ 1,750ಬಸ್, ವಾಯವ್ಯ…

Read More

ಇಸ್ಲಾಮಾಬಾದ್: ತನ್ನ ಪತ್ನಿ ಬುಶ್ರಾ ಬೀಬಿಗೆ  (Bushra Bibi) ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಜೈಲಿನಲ್ಲಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಪ್ರಥಮ ಮಹಿಳೆಯೂ ಆಗಿರುವ ಬುಶ್ರಾ ಬೀಬಿ ಅವರನ್ನು ಜೈಲಾಗಿ ಮಾರ್ಪಡಿಸಲಾದ ಖಾಸಗಿ ನಿವಾಸದಲ್ಲಿ ಬಂಧಿಸಿಡಲಾಗಿದ್ದು, ಅಲ್ಲಿಯೇ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಯಾವುದೇ ಹಾನಿಯಾದರೂ ಸೇನಾ ಮುಖ್ಯಸ್ಥರೇ ಹೊಣೆಯಾಗಬೇಕು ಆಗ್ರಹಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಅವರು, ಬುಶ್ರಾ ಬೀಬಿಯವರಿಗೆ ವಿಷ ಹಾಕುವ ಪ್ರಯತ್ನ ನಡೆದಿದೆ. ಆಕೆಯ ಚರ್ಮ ಮತ್ತು ನಾಲಿಗೆಯ ಮೇಲೆ ಗುರುತುಗಳಿವೆ. ಇದು ವಿಷದ ಅಡ್ಡ ಪರಿಣಾಮವಾಗಿದೆ. ಇದರ ಹಿಂದೆ ಯಾರಿದ್ದಾರೆಂದು ನನಗೆ ತಿಳಿದಿದೆ ಎಂದಿದ್ದಾರೆ. https://ainlivenews.com/mysterious-death-of-husband-wife-friend-in-the-same-room-victim-of-witchcraft/ ಬುಶ್ರಾ ಬೀಬಿಗೆ ಏನಾದರೂ ತೊಂದರೆಯಾದರೆ, ಇಸ್ಲಾಮಾಬಾದ್‍ನ ಬನಿ ಗಾಲಾ ನಿವಾಸ ಮತ್ತು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಗುಪ್ತಚರ ಸಂಸ್ಥೆಯ ಸದಸ್ಯರು ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೇ ನೇರ ಹೊಣೆ ಎಂದು…

Read More

ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಈ ಹಿಂದೆ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯ ಹೊಣೆ ಹೊತ್ತಿದ್ದರು. ಅಂಥದ್ದೊಂದು ಗೌರವಕ್ಕೆ ಅವರು ಪಾತ್ರರಾಗಿದ್ದರು. ಈಗ ಅಕಾಡೆಮಿಯು ದೀಪಿಕಾಗೆ ಮತ್ತೊಂದು ಗೌರವ ನೀಡಿದೆ. ದೀಪಿಕಾ ನಟನೆಯ ಬಾಜಿರಾವ್ ಮಸ್ತಾನಿ ಸಿನಿಮಾದ ದಿವಾನಿ ಮಸ್ತಾನಿ ಹಾಡನ್ನು ಆಸ್ಕರ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಒಂದು ಕಡೆ ಈ ಗೌರವ. ಮತ್ತೊಂದು ಕಡೆ ಇತ್ತೀಚೆಗೆ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ ದೀಪಿಕಾ. ಇದೀಗ ಬೆಂಗಳೂರಿನಲ್ಲಿಯೇ (Bengaluru) ಚೊಚ್ಚನ ಮಗುವಿಗೆ ದೀಪಿಕಾ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಸಿಕ್ಕಿದೆ. https://ainlivenews.com/mysterious-death-of-husband-wife-friend-in-the-same-room-victim-of-witchcraft/ ಕನ್ನಡತಿ ದೀಪಿಕಾ ಪಡುಕೋಣೆ- ರಣ್‌ವೀರ್ (Ranveer Singh) ಜೋಡಿ ಹಲವು ವರ್ಷಗಳು ಪ್ರೀತಿಸಿ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ 6 ವರ್ಷಗಳ ನಂತರ ಈ ಜೋಡಿ ಪೋಷಕರಾಗುತ್ತಿದ್ದಾರೆ. ಇನ್ನೂ ದೀಪಿಕಾ ಮೂಲತಃ ಮಂಗಳೂರಿನವರಾಗಿದ್ದು, ನಟಿಯ ಪೋಷಕರು ಸಾಕಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗುವಿಗೆ ಬೆಂಗಳೂರಿನಲ್ಲಿಯೇ ಜನ್ಮ ನೀಡಲು ದೀಪಿಕಾ ನಿಶ್ಚಯಿಸಿದ್ದಾರೆ. ಇಂದಿರಾ…

Read More

ಬಿಹಾರ:- ವಿಷಪೂರಿತ ಹಾವು ನಂಬಬಹುದು, ಆದ್ರೆ ಬಿಜೆಪಿ ನಂಬಲಾಗದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,2024 ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ತಯಾರಿಯಲ್ಲಿ ನಿರತವಾಗಿವೆ. ಬಿಜೆಪಿ ಚುನಾವಣಾ ನೀತಿ ಸಂಹಿತೆ ಪಾಲಿಸುತ್ತಿಲ್ಲ. ಶಿತಾಲ್ಕುಚಿಯಲ್ಲಿ ಗುಂಡಿಕ್ಕಿ ಕೊಂದವರು ಈಗ ಬಿರ್ಭೂಮ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಆರೋಪಿಸಿದರು. https://ainlivenews.com/there-is-no-other-leader-in-the-country-like-prime-minister-modi/ ಕಳೆದ 3 ವರ್ಷಗಳಿಂದ ವಸತಿ ಯೋಜನೆಗೆ ಹಣ ನೀಡುತ್ತಿಲ್ಲ, ರಸ್ತೆ ಹಣ ನೀಡುತ್ತಿಲ್ಲ, ಬಂಗಾಳ ಉಳಿದರೆ ದೇಶ ಉಳಿಯುತ್ತದೆ. ಕೇಂದ್ರ ತನಿಖಾ ಸಂಸ್ಥೆಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಬಿಜೆಪಿ ಒಂದು ರಾಷ್ಟ್ರ, ಒಂದು ಪಕ್ಷ ಸಿದ್ಧಾಂತವನ್ನು ಅನುಸರಿಸುತ್ತಿದೆ, ಕೇಂದ್ರೀಯ ತನಿಖಾ ಸಂಸ್ಥೆಗಳ ಮುಂದೆ ತನ್ನ ಪಕ್ಷ ಟಿಎಂಸಿ ತಲೆ ಬಾಗದು, ಲೋಕಸಭಾ ಚುನಾವಣೆಗೂ ಮುನ್ನ ಬಿಎಸ್​ಎಫ್​ ಸ್ಥಳೀಯರಿಗೆ ಕಿರುಕುಳ ನೀಡುವ ಘಟನೆಗಳು ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ…

Read More

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ನಟಿ ಸುಮಲತಾ ಅಂಬರೀಶ್ (Sumalta Ambarish), ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮೈತ್ರಿ ಕಾರಣದಿಂದಾಗಿ ಅವರಿಗೆ ಟಿಕೆಟ್ ನೀಡಲಿಲ್ಲ. ಆದರೂ, ಅವರು ಬಿಜೆಪಿ (BJP) ಸೇರುತ್ತಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. https://ainlivenews.com/mysterious-death-of-husband-wife-friend-in-the-same-room-victim-of-witchcraft/ ಈಗ ಬಿಜೆಪಿ ನಾಯಕರ ಸಮ್ಮುಖದಲ್ಲಿ 5 ಏಪ್ರಿಲ್  2024ರ (ಇಂದು) ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವೆ. ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳ, ಡಾ.ಅಂಬರೀಶ್ ಅವರ ಅಭಿಮಾನಿಗಳ ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ ಎಂದು…

Read More

ಹಾವೇರಿ: ಅಕ್ಕಿಆಲೂರ: ಲೋಕಸಭೆ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಚುನಾವಣೆ ನಡೆದರೆ ಆಶ್ಚರ್ಯ ಪಡಬೇಕಿಲ್ಲ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಇಬ್ಬಾಗವಾಗುತ್ತದೆ. ಭಾರತ ಸಾಕಷ್ಟು ಪ್ರಧಾನಿಗಳನ್ನು ಕಂಡಿದೆ ಆದರೆ, ನರೇಂದ್ರ ಮೋದಿಯವರಂತ ವ್ಯಕ್ತಿತ್ವ ನಮಗೆ ಸಿಕ್ಕಲ್ಲ, ಪ್ರಮಾಣಿಕತೆ, ಸಮಯ ಪ್ರಜ್ಞೆ, ದೇಶಭಕ್ತಿಯ ಸಂಸ್ಕಾರ ಮೋದಿಯವರಲ್ಲಿ ಇದೆ. ದೇಶಭಕ್ತಿಗೆ ಇನ್ನೊಂದು ಹೆಸರೆ ಮೋದಿಜೀ. ದೇಶದಲ್ಲಿ ಭಯೋತ್ಪಾದನೆ ನಡೆದರೆ ಮನಮೋಹನ ಸಿಂಗ್, ಪಾಕಿಸ್ತಾನಕ್ಕೆ ಪತ್ರ ಬರೆಯುತ್ತಿದ್ದರು, ಆದರೆ ಮೋದಿ, ಮಾತಲ್ಲ ಕೃತಿ ಮೂಲಕ ತಕ್ಕ ಉತ್ತರ ನೀಡಿದರು ಎಂದು ಹೇಳಿದರು. https://ainlivenews.com/assault-case-against-mobile-shop-owner-for-playing-devotional-song/#google_vignette ದೇಶದ ಬೆಳೆವಿಮೆ ನೇತಾರ ಸಿ.ಎಂ ಉದಾಸಿಯವರು, ಹಾವೇರಿ ಜಿಲ್ಲೆಯಲ್ಲಿ 480 ಕೋಟಿ ಬೆಳೆವಿಮೆ ಬಂದಿದೆ. ವಿಮೆ ಜಾರಿ ಮಾಡುವುದು ಮಾತ್ರವಲ್ಲ. ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಮೋದಿ ಮಾಡುತ್ತಿದ್ದಾರೆ. ಪ್ರಧಾನಿಗಳಿಗೆ…

Read More