Author: AIN Author

ಅಹಮದಾಬಾದ್‌: ಡೆತ್‌ ಓವರ್‌ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ತಂಡವು 19.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಪೂರೈಸಿ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್‌, ಐಪಿಎಲ್‌ನಲ್ಲಿ ಹೆಚ್ಚುಬಾರಿ 200 ರನ್‌ ಗುರಿ ಬೆನ್ನಟ್ಟಿದ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು. https://ainlivenews.com/important-message-for-rcb-team-kotru-abd/ ಕೊನೇ ಓವರ್‌ ರೋಚಕತೆ ಹೇಗಿತ್ತು? ಕೊನೇ ಓವರ್‌ನಲ್ಲಿ ಪಂಜಾಬ್‌ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ದರ್ಶನ್‌ ನಾಲ್ಕಂಡೆ ಬೌಲಿಂಗ್‌ನಲ್ಲಿದ್ದರು. ನಾಲ್ಕಂಡೆ ಬೌಲಿಂಗ್‌ನ ಮೊದಲ ಎಸೆತದಲ್ಲೇ ಸಿಕ್ಸರ್‌ ಪ್ರಯತ್ನಿಸಿದ…

Read More

ವಿಶಾಖಪಟ್ಟಣಂ: 2024ರ ಐಪಿಎಲ್‌ (IPL 2024) ಆವೃತ್ತಿ ಹಲವು ಅವಿಸ್ಮರಣೀಯ ದಾಖಲೆಗಳಿಗೆ ಸಾಕ್ಷಿಯಾಗಿದೆ. ಮೈದಾನದಲ್ಲಿ ಹುರಿಯಾಳುಗಳು ಬ್ಯಾಟ್‌ ಹಿಡಿದು ಅಬ್ಬರಿಸುತ್ತಾ ದಾಖಲೆಗಳನ್ನು ಬರೆಯುತ್ತಿದ್ದರೆ, ಗ್ರೌಂಡ್‌ ಹೊರಗೆ ಕ್ರಿಕೆಟ್‌ ಅಭಿಮಾನಿಗಳು ವೀಕ್ಷಣೆಯಲ್ಲಿ ದಾಖಲೆ ಮಾಡುತ್ತಿದ್ದಾರೆ. ಬುಧವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (KKR vs DC) ವಿರುದ್ಧ ಪಂದ್ಯದ ಬಳಿಕ 17ನೇ ಆವೃತ್ತಿ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. https://ainlivenews.com/important-message-for-rcb-team-kotru-abd/ ಲೀಗ್‌ ಸುತ್ತಿನ ಮೊದಲ 10 ಪಂದ್ಯಗಳಲ್ಲಿ ದಾಖಲೆಯ 35 ಕೋಟಿ ವೀಕ್ಷಣೆ ಕಂಡಿದೆ.‌ ಕೋವಿಡ್‌ ಬಳಿಕ ಸ್ಟಾರ್‌ ಸ್ಫೋರ್ಟ್ಸ್‌ನಲ್ಲಿ (Star Sports) ಐಪಿಎಲ್‌ ಟೂರ್ನಿಯ ಮೊದಲ 10 ಪಂದ್ಯಗಳನ್ನು 35 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನ ನುಚ್ಚುನೂರು ಮಾಡಿದೆ. ಬಾರ್ಕ್‌ (BARC) ದತ್ತಾಂಶಗಳನ್ನು ಉಲ್ಲೇಖಿಸಿ ಸ್ಟಾರ್‌ಸ್ಫೋರ್ಟ್ಸ್‌ ಮಾಹಿತಿ ಹಂಚಿಕೊಂಡಿದೆ. ಅಲ್ಲದೇ ಟಿವಿಯಲ್ಲಿ ಪಂದ್ಯಾವಳಿಯ ಒಟ್ಟು ವೀಕ್ಷಣೆ ಸಮಯವು 8,028 ಕೋಟಿ ನಿಮಿಷಗಳಷ್ಟು ತಲುಪಿದೆ. ಇದು ಕಳೆದ ವರ್ಷಕ್ಕಿಂತ 20% ಹೆಚ್ಚಳವಾಗಿದೆ. ಅಲ್ಲದೇ ಹಿಂದಿನ ಎಲ್ಲಾ ಆವೃತ್ತಿಗಳಿಗೆ ಹೋಲಿಸಿದರೆ,…

Read More

ಚಿತ್ರದುರ್ಗ: ಕಾರಜೋಳ ಅವರು ಉಪ.ಮುಖ್ಯ ಮಂತ್ರಿಯಾಗಿ ನಾಡಿಗೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಒಬ್ಬ ಸಜ್ಜನ‌ ರಾಜಕಾರಣಿಯಾಗಿದ್ದಾರೆ, ಅಜಾತಶತ್ರು ರಾಜಕಾರಣಿಯನ್ನು ಚಿತ್ರದುರ್ಗದ ಜನರು ಸರ್ವಾಂಗೀಣ ಅಭಿವೃದ್ದಿಗಾಗಿ ಆಯ್ಕೆ ಮಾಡುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ಬಿಜೆಪಿ‌ರಾಜ್ಯಾದ್ಯಾಕ್ಷ ವಿಜಯೇಂದ್ರ ಹೇಳಿದರು.ಅವರು ಚಿತ್ರದುರ್ಗದಲ್ಲಿ‌ ಮಾಧ್ಯಮಗಳೊಂದಿಗೆ ಮಾತಾಡಿದರು. ಎಲ್ಲರ ಮನಸ್ಸಿನಲ್ಲಿರುವುದು ಮೋದಿ ಮತ್ತೊಮ್ಮೆ ಎಂಬುದಾಗಿದೆ. ಮೋದಿಯವರ ಜೊತೆ ಕಾರಜೋಶ ಅವರಿರಬೇಕು‌ ಇದ್ದಕ್ಕೆ‌ ಜನರು  ಆಶೀರ್ವಾದ ಮಾಡುತ್ತಾರೆ. ಶಿವಮೊಗ್ಗಾದ ಬಂಡಾಯವನ್ನು ವರಿಷ್ಠರು ಸರಿಪಡಿಸುತ್ತಾರೆಂಬ ವಿಶ್ವಾಸವಿದೆ. ಅವರ ಬೇಡಿಕೆ ಏನಿದ್ದರೂ ಅವರು ಕೇಂದ್ರದ ವರಿಷ್ಠರ ಮುಂದೆ ಹೇಳಿದ್ದು,ಅವರು ತೀರ್ಮಾನ ಮಾಡುತ್ತಾರೆ. https://ainlivenews.com/mysterious-death-of-husband-wife-friend-in-the-same-room-victim-of-witchcraft/ ನನ್ನ ಬಗ್ಗೆ ಅದೇನು‌ ಕೋಪ‌ ಇದೆ ಎಂದು ತಿಳಿದಿಲ್ಲ.ರಾಜ್ಯದಲ್ಲಿ‌ಎಷ್ಟು ಸ್ಥಾನ ಗೆಲ್ಲುತ್ತಿರಾ ಎಂದರೆ ಅದಕ್ಕೆ ನನ್ನ ಬಳಿ‌ ಉತ್ತರವಿಲ್ಲ, ಇಂದು ರಾಜ್ಯದಲ್ಲಿ‌ಬಿಜೆಪಿ ಜೆಡಿಎಸ್ ಪರವಾದ ಅಲೆ‌ ಇದೆ. ನರೇಂದ್ರ ಮೋದಿ ಅವರ ಜನಪ್ರಿಯತೆಯ ಪರಿಣಾಮವಾಗಿ 28  ಸ್ಥಾನಗಳನ್ನು‌ ಗೆಲ್ಲುತ್ತೇವೆ ಎಂದರು.

Read More

ಬೆಂಗಳೂರು: ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ಬೆಂಗಳೂರಿನಿಂದ ಊರಿಗೆ ಹೊರಟ ಜನ ಯುಗಾದಿಗೆ ರಜೆಯ ಸಿಹಿ ಖಾಸಗಿ ಬಸ್ ಗಳಿಂದ ದರ ಏರಿಕೆಯ ಕಹಿ ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಸಿದ್ಧರಾದ ಐಟಿ‌ ಮಂದಿ ಕೆಲವರಿಂದ ನಾಳೆ ರಾತ್ರಿ ಊರಿಗೆ ಹೋಗಲು ಟಿಕೆಟ್ ಬುಕ್ಕಿಂಗ್ ಬ್ಯಾಕ್ ಟು ಬ್ಯಾಕ್ ರಜೆ ಹಿನ್ನೆಲೆ ಟ್ರಿಪ್ ಗೂ ಹಲವರಿಂದ ಪ್ಲ್ಯಾನ್  ರಜೆ ಅಂತ ಊರಿನ ಕಡೆ ಹೊರಟವರಿಗೆ ಮತ್ತೆ ಶಾಕ್ ಕೊಟ್ಟ ಖಾಸಗಿ ಬಸ್ ಮಾಲೀಕರು ಮನಸಿಗೆ ಬಂದಂತೆ ದರ ಏರಿಕೆ‌ ಮಾಡಿದ್ರು ಸಾರಿಗೆ ಇಲಾಖೆಯಿಂದ ಪದೇ ಪದೇ ನಿರ್ಲಕ್ಷ ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಟಿಕೆಟ್ ದರ ದುಪ್ಪಟ್ಟಾದ್ರು ಖಾಸಗಿ ಬಸ್ ಗಳು ಬಹುತೇಕ ಭರ್ತಿ https://ainlivenews.com/sumalatha-offered-pooja-at-ambarish-samadhi-before-joining-bjp/ ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತೆ ಸೋಮವಾರ ರಜೆ ಹಾಕಿ ನಾಳೆಯೇ ಊರಿಗೆ ತೆರಳಲು ಜನರ ಪ್ಲಾನ್ ಅಲ್ಲದೆ…

Read More

ಬೆಂಗಳೂರು: ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನ ಹಿಂಭಾದಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಮಿರ್ಜಾ ರಸ್ತೆಯಲ್ಲಿ ನಡೆದಿದೆ.. ಬೆಳಗಿನ ಜಾವ 6:30ಕ್ಕೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ..ಆನೇಕಲ್ ಪಟ್ಟಣದ ಶಭಾಷ್ 16 ವರ್ಷದ ಯುವಕ ಮೃತಪಟ್ಟ ಬಾಲಕ.. ಇನ್ನೂ ಖಾಸಗಿ ಚಾಲಕ ಶ್ರೀಕಾಂತ್ ಆನೇಕಲ್ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.. https://ainlivenews.com/rows-of-holidays-for-ugadi-festival-bitterness-of-price-increase-by-private-buses/ ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಿರ್ಜಾ ರಸ್ತೆಯಲ್ಲಿ ಬೆಳಗಿನ ಮೃತ ಶಭಾಷ್ ಹಾಲು ತರಲು ವೆಂಕಟೇಶ್ವರ ಸರ್ಕಲ್ ನಿಂದ ರಾಘವೇಂದ್ರ ಭವನ ಸರ್ಕಲ್ ಮಾರ್ಗವಾಗಿ ಬರುವಾಗ ಅತಿ ವೇಗವಾಗಿ ಖಾಸಗಿ ಬಸ್ಸನ್ನು ಬರುತ್ತಿತ್ತು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ತಲೆ ಮೇಲೆ ಹರಿದಿದೆ ಇನ್ನು ಬೈಕ್ ಸವಾರ ತಲೆ ಮೇಲೆ ಹರಿದ ಪರಿಣಾಮ ತಲೆ ಭಾಗ ಸಂಪೂರ್ಣ ಚಿದ್ರ ಚಿದ್ರ ಆಗಿದೆ.. ಇನ್ನು ಇದೇ ರಸ್ತೆಯಲ್ಲಿ ಒಂದೇ ವಾರದಲ್ಲಿ ಎರಡು ಅಪಘಾತಗಳು…

Read More

ಐಐಟಿ ಮದ್ರಾಸ್‌ನ ಮಾಜಿ ವಿದ್ಯಾರ್ಥಿ, ಭಾರತೀಯ ಮೂಲದ ಪವನ್‌ ದಾವುಲೂರಿ ಅವರನ್ನು ಮೈಕ್ರೋಸಾಫ್ಟ್‌ ವಿಂಡೋಸ್‌ & ಸರ್ಫೇಸ್‌ನ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇಲ್ಲಿಯವರೆಗೂ ಈ ಸ್ಥಾನ ವಹಿಸಿಕೊಂಡಿದ್ದ ಪಾನೋಸ್‌ ಪನಯ್‌ ಅವರ ನಿರ್ಗಮನದ ಬಳಿಕ ಈ ಹುದ್ದೆ ಖಾಲಿ ಉಳಿದಿದತ್ತು. ಈಗ ಪವನ್‌ ದಾವುಲೂರಿ ಅವರನ್ನು ಈ ಸ್ಥಾನಕ್ಕ ನೇಮಿಸಲಾಗಿದೆ. ಪಾನೋಸ್‌ ಪನಯ್‌ ಕಳೆದ ವರ್ಷ ಅಮೇಜಾನ್‌ನಲ್ಲಿ ಅವಕಾಶ ದೊರೆತ ಕಾರಣಕ್ಕೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾಮಾನ್ಯವಾಗಿ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್‌ ಹಾಗೂ ಸರ್ಫೇಸ್‌ ಗ್ರೂಪ್‌ಗಳಿಗೆ ಭಿನ್ನ ಮುಖ್ಯಸ್ಥರನ್ನು ನೇಮಕ ಮಾಡುತ್ತದೆ. ಇದಕ್ಕೂ ಮುನ್ನ ಪವನ್‌ ದಾವುಲೂರಿ, ಸರ್ಫೇಸ್‌ನ ಸಿಲಿಕಾನ್‌ ವರ್ಕ್‌ನ ಉಸ್ತುವಾರಿ ವಹಿಸಿಕೊಂಡಿದ್ದರೆ, ಮಿಖಾಯಿಲ್‌ ಪಾರಾಖಿನ್‌, ವಿಂಡೋಸ್‌ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಪಾರಾಖಿನ್‌ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ನಿರ್ಧಾರ ಮಾಡಿದ ಕಾರಣ, ದಾವುಲೂರಿ ಈಗ ಮೈಕ್ರೋಸಾಫ್ಟ್‌ನ ವಿಂಡೋಸ್‌ ಹಾಗೂ ಸರ್ಫೇಸ್‌ ಎರಡರ ಜವಾಬ್ದಾರಿಯನ್ನು ಈಗ ಪವನ್‌ ಹೊತ್ತುಕೊಂಡಿದ್ದಾರೆ. ಪವನ್‌ ದಾವುಲೂರಿಗೆ ಭಾರತದ ನೇರ ಸಂಪರ್ಕವಿದೆ. ಐಐಟಿ ಮದ್ರಾಸ್‌ನಿಂದ…

Read More

ನವದೆಹಲಿ: ನಟಿ ಹಾಗೂ ಉತ್ತರ ಪ್ರದೇಶದ ಮಥುರಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋ ಮೂಲಕ ಕಾಂಗ್ರೆಸ್‌ ಸಂಸದ ರಣದೀಪ್‌ ಸುರ್ಜೆವಾಲಾ ವಿವಾದಕ್ಕೆ ಸಿಲುಕಿದ್ದಾರೆ. ಸುರ್ಜೆವಾಲಾ ಅವರ ಕ್ಷಮೆಯಾಚನೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಸುರ್ಜೆವಾಲಾ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡ ಬಳಿಕ ಬಿಜೆಪಿ ನಾಯಕರು ಸುರ್ಜೆವಾಲಾ ವಿರುದ್ಧ ಮುಗಿಬಿದ್ದಿದ್ದಾರೆ. ವಿಡಿಯೊದಲ್ಲಿಇರುವುದೇನು? ”ನಾವೇಕೆ ಸಂಸದರು/ಶಾಸಕರನ್ನು ಆಯ್ಕೆ ಮಾಡುತ್ತೇವೆ? ಜನಪ್ರತಿನಿಧಿಗಳಾಗಿ ನಮ್ಮ ಪರ ಧ್ವನಿ ಎತ್ತಲಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ರಾಜ್ಯ/ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ ಎಂಬ ದೃಷ್ಟಿಯಿಂದ. ಆದರೆ ಬಿಜೆಪಿಯವರು ಹೇಮಾ ಮಾಲಿಯನ್ನು ನೆಕ್ಕಲು (ಲಿಕ್‌) ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ?” ಎಂದು ಪ್ರಶ್ನಿಸಿರುವುದು ವಿಡಿಯೊದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಈ ವಿಡಿಯೋ, ಏ 1ರಂದು ನಡೆದ ಘಟನೆ…

Read More

ಬೆಂಗಳೂರು: ಈ ಬಾರಿ ಆರ್‌ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಸೋತು, ಒಂದು ಮ್ಯಾಚ್​ ಗೆದ್ದಿದೆ. ಇದರ ಬೆನ್ನಲ್ಲೇ ದರ್ಶನ್‌ ಕೆಲ ಫ್ಯಾನ್ಸ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ದೂರುತ್ತಿದ್ದಾರೆ. https://ainlivenews.com/sumalatha-offered-pooja-at-ambarish-samadhi-before-joining-bjp/ ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿದೆ.ಆರ್​ಸಿಬಿ ಸೋಲುವುದಕ್ಕೂ,ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕುತ್ತಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ಗೆ ಅಶ್ವಿನಿ ಅವರು ಕೂಡ ತೆರಳಿದ್ದರು. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್​ನಿಂದ ಪುನೀತ್ ರಾಜಕುಮಾರ್ ಫ್ಯಾನ್ಸ್ ಸದ್ಯ ಕೋಪಗೊಂಡಿದ್ದಾರೆ. ಕಾನೂನು ಕ್ರಮಕ್ಕೆ ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ. ಈಗಾಗಲೇ ಟ್ವಿಟರ್‌ನಲ್ಲಿ ಈ ಬಗೆಗಿನ…

Read More

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಳಿ ಸ್ವಂತ ಕಾರು, ಬೈಕು ಮನೆ ಸೇರಿ ಯಾವುದೇ ಸ್ಥಿರಾಸ್ತಿ ಇಲ್ಲ. ಅವರ ಒಟ್ಟು ಆಸ್ತಿಯ ಮೌಲ್ಯ 4.10 ಕೋಟಿ ರೂ. ಇದೆ ಕಳೆದ ಬಾರಿ 13.46 ಲಕ್ಷ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದ ತೇಜಸ್ವಿ ಸೂರ್ಯ ಆಸ್ತಿ ಮೌಲ್ಯದಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಇದೆಲ್ಲವೂ ಬಹುತೇಕ ಹೂಡಿಕೆಯಿಂದಲೇ ಬಂದಿರುವುದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. https://ainlivenews.com/sumalatha-offered-pooja-at-ambarish-samadhi-before-joining-bjp/ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸ್ವಂತ ಮನೆಯಿಲ್ಲ, ಕಾರು, ದ್ವಿಚಕ್ರ ವಾಹನ ಕೂಡ ಇಲ್ಲ ಎನ್ನುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ತಿಳಿಸಿದ್ದಾರೆ. ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಆದರೆ, ಒಟ್ಟು 4.10 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ. ಕೈಯಲ್ಲಿ ನಗದು 80 ಸಾವಿರ ರೂ.ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ, 1,79,31,750 ರೂ. ಮಾರುಕಟ್ಟೆ ಮೌಲ್ಯದ…

Read More

ನವದೆಹಲಿ: ಇಸ್ರೋದ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಯಶಸ್ಸಿನ ಬಳಿಕ ಮೈಸೂರಿನ ರಮೇಶ್‌ ಕುಂಞಿಕಣ್ಣನ್ (Ramesh Kunhikannan) ಅವರು ಬಿಲಿಯನೇರ್‌ ಆಗಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್‌ 23 ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯಿತು. ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ನಾಲ್ಕನೇ ರಾಷ್ಟ್ರ ಎಂದೂ ಕೂಡ ಭಾರತ ಖ್ಯಾತಿ ಗಳಿಸಿತು. ಈ ಯಶಸ್ಸಿನ ಬೆನ್ನಲ್ಲೇ 60 ವಯಸ್ಸಿನ ರಮೇಶ್‌ ಕೋಟ್ಯಧೀಶರಾಗಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಮೈಸೂರಿನ ಕೇನ್ಸ್ ಟೆಕ್ನಾಲಜಿ ಇಂಡಿಯಾದ ಸಂಸ್ಥಾಪಕರಾದ ರಮೇಶ್‌, ಚಂದ್ರಯಾನ-3 ರೋವರ್ ಮತ್ತು ಲ್ಯಾಂಡರ್ ಎರಡಕ್ಕೂ ಶಕ್ತಿ ನೀಡಲು ಬಳಸುವ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ಪೂರೈಸಿದ್ದರು. 2022 ರ ನವೆಂಬರ್‌ನಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪ್ರಾರಂಭವಾದಾಗಿನಿಂದ ಕೇನ್ಸ್‌ನ ಷೇರುಗಳು, ಚಂದ್ರನ ಯಶಸ್ವಿ ಕಾರ್ಯಾಚರಣೆಯಲ್ಲಿ ಅದರ ಪಾತ್ರವನ್ನು ಸಾರ್ವಜನಿಕಗೊಳಿಸಿದ ನಂತರ ಇನ್ನೂ 40% ಮೌಲ್ಯವನ್ನು ಪಡೆದುಕೊಂಡಿದೆ. ಇದು ಕುಂಞಿಕಣ್ಣನ್ ಅವರ ನಿವ್ವಳ ಮೌಲ್ಯವನ್ನು ಸುಮಾರು 1.1 ಶತಕೋಟಿ ಡಾಲರ್‌ಗಳನ್ನಾಗಿ ಮಾಡಿತು. https://ainlivenews.com/mysterious-death-of-husband-wife-friend-in-the-same-room-victim-of-witchcraft/ ಕೇನ್ಸ್ ಟೆಕ್ನಾಲಜಿ ಇಂಡಿಯಾ…

Read More