Author: AIN Author

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ರಾಶಿ ರಾಶಿ ಮೀನುಗಳು ಸಾವನ್ನಪ್ಪಿದೆ. ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕನ್ನಮೇಡಿ ಕೆರೆಯಲ್ಲಿ ನಡೆದಿದೆ. ಸುಮಾರು 108 ಎಕರೆ ಪ್ರದೇಶದಲ್ಲಿರುವ ಕನ್ನಮೇಡಿ ಕೆರೆಯಾಗಿದ್ದು, ಮಳೆಯಿಲ್ಲದೇ ಸಂಪೂರ್ಣವಾಗಿ ನೀರಿಲ್ಲದೇ ಖಾಲಿ ಖಾಲಿಯಾಗಿದೆ. ಬಿಸಿಲಿನ ತಾಪಕ್ಕೆ ನೀರಿಲ್ಲದೇ ಕೆರೆಯಲ್ಲಿದ್ದ ಮೀನುಗಳು ವಿಲವಿಲನೇ ಒದ್ದಾಡಿ ಸಾಯುತ್ತಿವೆ. ಬಿಸಿಲಿನ ತಾಪಮಾನಕ್ಕೆ ಸ್ಥಳೀಯರಲ್ಲಿ ಹೆಚ್ಚಾಯ್ತು ಆತಂಕ ಹೆಚ್ಚಾಗಿದೆ.

Read More

ಕ್ರಿಕೆಟಿಗ ಯಜುವೇಂದ್ರ ಚಾಹಲ್ (Yuzvendra Chahal) ಪತ್ನಿ ಧನಶ್ರೀ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಹೊಸ ಅವತಾರದಲ್ಲಿ ‘ಲವ್ ಸೆಕ್ಸ್ ಔರ್ ದೋಖಾ 2’ (Love Sex Aur Dhokha 2) ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿನ ಹಾಡಿಗೆ ನಟಿ ಸೊಂಟ ಬಳುಕಿಸಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆಯಾಗಿದೆ. https://ainlivenews.com/multilingual-actor-prakash-raj-broke-his-silence-on-bjp-joining-rumours/ ಕಮ್ಸನ್ ಕಾಲಿ ಹಾಡಿನಲ್ಲಿ ಟೋನಿ ಕಕ್ಕರ್ ಜೊತೆ ಧನಶ್ರೀ ವರ್ಮಾ (Dhanashree Verma) ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಧನಶ್ರೀ ವರ್ಮಾ ಮಿಂಚಿದ್ದು, ಟೋನಿ ಕಕ್ಕರ್ ಜೊತೆ ನಟಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡಿನಲ್ಲಿ ಸೊಂಟಕ್ಕೆ ಚಿವುಟುವ ದೃಶ್ಯವನ್ನು ಹಾಕಲಾಗಿದೆ. ಸಾಂಗ್‌ನಲ್ಲಿ ಧನಶ್ರೀ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ದೋಖಾ 2’ ಸಿನಿಮಾ ಏ.19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಕೂಡ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

Read More

ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ವಿದ್ಯಾರ್ಥಿಗಳ ಜೊತೆ ವಾಲಿಬಾಲ್ ಆಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಚಾಮರಾಜನಗರ ಮೀಸಲು  ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿನ ಸೇವಾಭಾರತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜೊತೆ ವಾಲಿಬಾಲ್ ಆಟ ಆಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರಮೋದಿಯನ್ನು ಮೂರನೇ ಬಾರಿ ಪಿ.ಎಂ.ಮಾಡಲು ಮತಯಾಚಿಸಿದರು. ಮೊದಲ ಬಾರಿ ಮತಚಲಾಯಿಸುವ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿ ಆಯ್ಕೆ ಮಾಡುವಂತೆ ಹಾಗೂ ದೇಶಕ್ಕಾಗಿ ಯುವಕರು ಮತದಾನವನ್ನು ಖಡ್ಡಾಯವಾಗಿ ಮಾಡುವಂತೆ ಬಾಲರಾಜ್ ಮನವಿ ಮಾಡಿದರು. ಈ ವೇಳೆ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ. ನಿರಂಜನ ಕುಮಾರ್ ಸಾಥ್ ನೀಡಿದರು.

Read More

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ರಾಜಕೀಯ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಆಗಾಗ ನಟ ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ಅವರು ಬಿಜೆಪಿಗೆ (BJP) ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರಕಾಶ್ ರಾಜ್ ಮೌನ ಮುರಿದಿದ್ದಾರೆ. https://ainlivenews.com/rashmika-mandannas-birthday-celebration-abroad-lovely-boy-vijay-devarakonda-participates/ ಪ್ರಕಾಶ್ ರಾಜ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪ್ರಯತ್ನಿಸಿದ್ದಾರೆ ಅಂತ ನಾನು ಭಾವಿಸಿದ್ದೇನೆ. ನನ್ನನ್ನು ಕೊಂಡುಕೊಳ್ಳುವಷ್ಟು ಅವರು ಸೈದ್ಧಾಂತಿಕವಾಗಿ ಶ್ರೀಮಂತವಾಗಿಲ್ಲ ಎಂಬುದು ಅವರಿಗೆ ಅರ್ಥ ಆಗಿರಬೇಕು. ನಿಮ್ಮ ಅಭಿಪ್ರಾಯವೇನು ಸ್ನೇಹಿತರೇ. ಜಸ್ಟ್ ಆಸ್ಕಿಂಗ್ ಎಂದು ಪ್ರಕಾಶ್ ರಾಜ್ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಮೂಲಕ ರಾಜಕೀಯ ಎಂಟ್ರಿ ಕುರಿತು ಹಬ್ಬಿರುವ ಸುದ್ದಿಗೆ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರುವ ಸುದ್ದಿ ಸುಳ್ಳು…

Read More

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.‌ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ನೂತನ ತಾಲೂಕು ಕುರುಗೋಡಿನ ದಮ್ಮೂರು ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದೆ. ಬೇಸಿಗೆ ಪ್ರಾರಂಭವಾದ ದಿನದಿಂದ ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದು, ಖಾಸಗಿಯವರ ಬಳಿ ದುಡ್ಡುಕೊಟ್ಟು ಖರೀದಿ ಮಾಡಿ ನೀರು ಕೊಳ್ಳಬೇಕು, ಇಲ್ಲ ಅಂದ್ರೆ ಈ ಗ್ರಾಮಕ್ಕೆ ಕುಡಿಯಲು ನೀರೆ ಇಲ್ಲ, ನೀರಿಲ್ಲದೇ ಇರುವುದರಿಂದ ಗ್ರಾಮಸ್ಥರಿಗೆ ಬೇರೆ ಮಾರ್ಗವೇ ಇಲ್ಲ, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬೇಸಿಗೆ ಕುಡಿಯುವ ನೀರಿಗಾಗಿ ಮುನ್ನಚ್ಚೆರಿಕೆ ಕ್ರಮ ಕೈಗೊಂಡಿಲ್ಲ ಎಂದು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಸರಿಯಾದ ಉತ್ತರ ಕೊಡದೇ ಬಾಗಿಲು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯವೈಖರಿಯನ್ನು ವಿರೋಧಿ ಸಾರ್ವಜನಿಕರಿಂದ ಮುತ್ತಿಗೆ ಹಾಕಿದ್ದು, ನೀರು ಕೊಡುವಂತೆ ಆಗ್ರಹಿಸಿ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಖಾಲಿಕೊಡ ಹಿಡಿದು ಪ್ರತಿಭಟನೆ ನಡೆಸಿದರು.

Read More

ಬಾಗಲಕೋಟೆ: ಬಾಗಲಕೋಟ ಜಿಲ್ಲೆಯಲ್ಲಿ ಈ ಭಾರಿ ಬರಗಾಲ ಆವರಿಸಿದ್ದು ಹಿನ್ನಲೆ ಜೀವನ ನಡೆಸುವದು ಕಷ್ಟಕರವಾದ್ದರಿಂದ ಇಲ್ಲೊಬ್ಬರು ದಾನಿಗಳು ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ ವಿತರಣೆ ಮಾಡಲು ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಿ ಕೆ ಚಿಂಚಲಿ ಶಾಲೆ ವತಿಯಿಂದ ಸರ್ಕಾರಿ ಶಾಲೆಗಳಿಗೆ 800 ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಬರುವ ಅನುದಾನವನ್ನು ಮಾತ್ರ ಸಾಲುತ್ತಿಲ್ಲ ಎಂದು, ಮಕ್ಕಳು ಸಂತೆ ಚೀಲವನ್ನು ಹಿಡಿದುಕೊಂಡು ಬರುವ ದೃಶ್ಯವನ್ನು ಕಂಡು ಮನಗೊಂಡ ಚಿಂಚಲಿ ಶಾಲೆಯ ಮುಖ್ಯಸ್ಥರು ಸರ್ಕಾರಿ ಶಾಲೆಗಳಿಗೆ ಬ್ಯಾಗ್ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಚಿಂಚಲಿ ಶಾಲೆ ಮಾಲೀಕರು ಶ್ರೀ ಸಿದ್ದು ಚಿಂಚಲಿ. ಮಹಾಂತೇಶ ಚಿಂಚಲಿ. ಶಾಲೆಯ ಮುಖ್ಯ ಗುರುಗಳು ಸುರೇಶರೆಡ್ಡಿ ಗೊರಭಾಳ. ಲಕ್ಷ್ಮಿಕಾಂತ ಮೊಖಾಶಿ. ಎಸ್ ಡಿ ಎಮ್ ಸಿ ಅಧ್ಯಕ್ಷ ಮುತ್ತಪ್ಪ ಹನಗಂಡಿ. ಶಾಲೆ ಮುಖ್ಯ ಗುರುಗಳು ಚವ್ವಾಣ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಬೆಂಗಳೂರು ಗ್ರಾಮಾಂತರ : ಡಿಕೆ ಸುರೇಶ್ ಎದುರಾಳಿ‌ ಮಂಜುನಾಥ್ ಆಸ್ತಿ ಮೌಲ್ಯದಲ್ಲಿ ಹಿಂದೆ ಬಿದ್ದಿಲ್ಲ.ಿವರತ್ರ ಬರೋಬ್ಬರಿ 98 ಕೋಟಿ ಒಡೆಯ. ಇವರು 3.74 ಕೋಟಿ ಸಾಲಗಾರ. https://ainlivenews.com/mandya-rebel-lady-sumalata-ambarish-joins-bjp/ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಫಿಡೆವಿಟ್​​ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ. ಡಾ. ಮಂಜುನಾಥ್​​ ಅವರ ಒಟ್ಟು ಆಸ್ತಿ ಮೌಲ್ಯ 98.36 ಕೋಟಿ ರೂ. ಇವರ ಬಳಿ 6.98 ಕೋಟಿ ಚರಾಸ್ತಿ ಹಾಗೂ 36.65 ಕೋಟಿ ಸ್ಥಿರಾಸ್ತಿ ಇದೆ. ಡಾಕ್ಟರ್ ಹೆಸರಲ್ಲಿ 55 ಲಕ್ಷ ಮೌಲ್ಯದ ಎರಡು ಕಾರುಗಳಿವೆ. ಇನ್ನು 3.74 ಕೋಟಿ ರೂ. ಸಾಲ ಮಾಡಿದ್ದಾರೆ. ಮಂಜುನಾಥ್ ಅವರ ಪತ್ನಿ ಅನುಸೂಯ ಹೆಸರಲ್ಲಿ 17.36 ಕೋಟಿ ಚರಾಸ್ತಿ ಹಾಗೂ 35.30 ಕೋಟಿ ಸ್ಥಿರಾಸ್ತಿ ಇದೆ. ಪತ್ನಿ ಬಳಿ 13 ಲಕ್ಷ ಬೆಲೆ ಬಾಳುವ ಒಂದು ಕಾರು ಸಹ ಇದೆ. ಗಂಡನಂತೆಯೇ ಅನುಸೂಯ ಒಟ್ಟು 11…

Read More

ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಬ್ಯಾರೇಜ್ ಕಾಮಗಾರಿ ನಿಧಾನಗತಿಯಲ್ಲಿ ಸಾಗ್ತಾ ಇದೆ ಮತ್ತು ಸುಮಾರು ಹತ್ತು ವರ್ಷಗಳಿಂದ ನಿರಂತರವಾಗಿ ಕಾಮಗಾರಿ ನಡೀತಾನೆ ಇದೆ ಆದರೆ ಇಲ್ಲಿವರೆಗೂ ಪೂರ್ಣಗೊಂಡಿಲ್ಲ ಮತ್ತು ಅಸ್ತಿ ಪಂಜರದಂತೆ ಬ್ಯಾರೇಜ್ ಅನಾಥವಾಗಿ ನಿಂತಿರುವದು ಬೇಸರ ತರುವಲ್ಲಿ ಕಾರಣವಾಗಿದೆ. 2018 ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು 30 ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಟ್ರಕ್ಸನ್ಸ್ ಕಂಪನಿಗೆ ನೀಡಿತ್ತು. ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕಾಮಗಾರಿ ನಡೆದಿದೆ.ಇದಕ್ಕೆ ಪೂರಕವಾಗಿ 2021 ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು 40 ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರು. ಗುತ್ತಿಗೆಯನ್ನು ಪಡೆದಿರುವ ತೇಜಸ್ ಕನಸ್ಟಂಕ್ಷನ್ಸ್ ಕಂಪನಿಯು ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡಿತಾ…

Read More

ಚಾಮರಾಜನಗರ: ಆನೆ ದಾಳಿಗೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಕುಳ್ಳೂರು ಗ್ರಾಮದ  ಜಡಿಯ ಊರುಫ್ ಜಡಿಯಾಗೌಡ ಮೃತ ದುರ್ಧೈವಿಯಾಗಿದ್ದು, ಬಿ.ಆರ್.ಟಿ.ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ರಾಮಪುರ ಗಸ್ತು  ಅರಣ್ಯ ಗಡಿಯಿಂದ 1km ದೂರದಲ್ಲಿ  ಸುವರ್ಣಾವತಿ ಹಿನ್ನೀರಿನ  ಸುಂಡ್ರೆ ಹಳ್ಳ ಆರಣ್ಯ ಪ್ರದೇಶದಲ್ಲಿ ಆನೆ ದಾಳಿ ಮಾಡಿದೆ. ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಬಿ.ಆರ್.ಟಿ.ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಧಿಕಾರಿಗಳು ಹಾಗೂ ಪೂರ್ವ ಪೋಲೀಸ್ ಠಾಣೆಯ ಪೋಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಸಂಸದೆ ಸುಮಲತಾ ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.  ಇಂದು ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಬಿಎಸ್‌ವೈ, ವಿಜಯೇಂದ್ರ ನೇತೃತ್ವದಲ್ಲಿ ಅಧಿಕೃತವಾಗಿ ಅವರು ಕಮಲ ಪಡೆ ಸೇರಿದ್ದರು. https://ainlivenews.com/the-fear-of-cholera-started-in-bangalore-the-health-department-was-on-alert/ ಸುಮಲತಾಗೆ ರಾಕ್‌ಲೈನ್ ವೆಂಕಟೇಶ್‌, ಪುತ್ರ ಅಭಿಷೇಕ್ ಸಾಥ್ ನೀಡಿದ್ದಾರೆ. ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಮುನಿರತ್ನ ಸಿ.ಟಿ.ರವಿ, ವಿಪಕ್ಷ ನಾಯಕ ಆರ್.ಅಶೋಕ್‌ ಉಪಸ್ಥಿತಿರಿದ್ದರು

Read More