Author: AIN Author

ತುಮಕೂರು: ನನ್ನನ್ನು ಸೋಲಿಸಲು ಮೈತ್ರಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕನ್ನಡ ನಾಡಿನ ಅಭಿವೃದ್ಧಿಗಾಗಿ, ರೈತರ ಪ್ರಗತಿಗಾಗಿ ಅಲ್ಲ. ನನ್ನನ್ನು ಸೋಲಿಸಿ ದೇವೇಗೌಡರ ಮಗ ಮತ್ತು ಅಳಿಯನ ಗೆಲುವಿಗಾಗಿ ಎಂದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹತ್ತು ವರ್ಷ, ಎಂಟು ತಿಂಗಳು ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಚುನಾವಣೆಗಾಗಿ ರಾಜಕಾರಣ ಮಾಡದೇ ಅಭಿವೃದ್ಧಿಗಾಗಿ ಶ್ರಮಿಸಿರುವೆ. ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ 25 ವರ್ಷಗಳಿಂದ ಅನ್ಯಾಯವಾಗಿದೆ. https://ainlivenews.com/mysterious-death-of-husband-wife-friend-in-the-same-room-victim-of-witchcraft/  950 ಕೋಟಿ ರೂ. ವೆಚ್ಚದ ಸಂಪರ್ಕ ಕಾಲುವೆ ಯೋಜನೆ ಅನುಷ್ಠಾನದ ಮೂಲಕ ಇದನ್ನು ಸರಿಪಡಿಸಲಾಗಿದೆ ಎಂದರು. ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಹೆಚ್‌.ಡಿ.ಕುಮಾರಸ್ವಾಮಿ ಅವರ ಬಾವನನ್ನು ಜೆಡಿಎಸ್‌ನಿಂದ ಕಣಕ್ಕಿಳಿಸದೇ, ಬಿಜೆಪಿಯಿಂದ ಕಣಕ್ಕಿಳಿಸಿ ನನ್ನನ್ನು ಸೋಲಿಸಲು ಸಂಚು ರೂಪಿಸಿದ್ದಾರೆ ಎಂದು ಟೀಕಿಸಿದರು.

Read More

ಮಂಗಳೂರು: ಮಂಗಳೂರಿನಲ್ಲಿ ಫುಡ್ ಪಾಯಿಸನ್ ಕೇಸ್ ಹೆಚ್ಚಳವಾಗುತ್ತಿದ್ದು, ನೀರು ಕುಡಿಯುವಾಗ ಎಚ್ಚರ ಇರಲಿ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ನೀರಿನ ಗುಣಮಟ್ಟದಲ್ಲಿನ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಿರ ಬಹುದು ಎಂದು ಆರೋಗ್ಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಮಂದಿ ಫುಡ್​ ಪಾಯಿಸನ್ ಅಥವಾ ವಿಷಾಹಾರ ಸಮಸ್ಯೆಯಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿ ವರದಿಯಾಗಿದೆ. ವಿವಿಧ ಕಾರಣಗಳಿಂದ ನಾವು ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದರೂ ಕಲುಷಿತ ನೀರು ಮುಖ್ಯ ಕಾರಣ ಎಂದು ಆಯುರ್ ಸ್ಪರ್ಶ ಆಸ್ಪತ್ರೆಯ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಸೌಜನ್ಯ ಸತೀಶ್ ಶಂಕರ್ ವಿವರಿಸಿದ್ದಾರೆ. ತಾಪಮಾನ ಪ್ರಮಾಣ ಹೆಚ್ಚುತ್ತಿರುವಾಗ ಹೆಚ್ಚು ನೀರನ್ನು ಸೇವಿಸುವುದು ಅತ್ಯಗತ್ಯ. ಆದರೆ ಅದರ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ. https://ainlivenews.com/mysterious-death-of-husband-wife-friend-in-the-same-room-victim-of-witchcraft/ ಕಲುಷಿತ ನೀರು ಸೇವನೆ ಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ, ಆಹಾರದಲ್ಲಿರುವ ಕಲ್ಮಶಗಳು, ಆಹಾರದಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು,…

Read More

ಬೆಂಗಳೂರು: ಎಸ್ ಟಿ ಸೋಮಶೇಖರ್ ಬಿಜೆಪಿಯಲ್ಲಿ ಇಲ್ಲ,ಅವರು ಕಾಲು ಹೊರಗಡೆ ಇಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಹೇಳಿದ್ದಾರೆ. https://ainlivenews.com/bjp-is-gearing-up-to-collect-a-secret-report-in-the-constituency-where-there-is-tough-competition/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎಸ್ ಟಿ ಸೋಮಶೇಖರ್ ಬಿಜೆಪಿಯಲ್ಲಿ ಇಲ್ಲ,ಕಾಂಗ್ರೆಸ್ ಅವರ ಜತೆ ಸಂಪರ್ಕದಲ್ಲಿ ಇದ್ದಾರೆ.ಅವರ ವಿರುದ್ಧ ಚುನಾವಣೆ ಬಳಿಕ ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಹಾಕಿದ್ದಾರೆ. ನಮ್ಮ ಪಕ್ಷ ಬಿಟ್ಟು ಕಾಲು ಹೊರಗಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabaha Election) ಸಮಯದಲ್ಲಿ ಬಿಜೆಪಿ ಹೈಕಮಾಂಡ್ (BJP High Command) ಸಕ್ರೀಯವಾಗಿದ್ದು ಕಠಿಣ ಸ್ಪರ್ಧೆ ಇರುವ ಕ್ಷೇತ್ರದಲ್ಲಿ ತಂಡವೊಂದರಿಂದ ರಹಸ್ಯ ವರದಿ ಸಂಗ್ರಹಿಸಲು ಮುಂದಾಗಿದೆ. https://ainlivenews.com/row-row-holiday-for-ugadi-festival-good-news-for-state-road-transport-corporation-commuters/ ಕಳೆದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ (BJP) ಒಳ ಹೊಡೆತದಿಂದ ಹೆಚ್ಚು ನಷ್ಟವಾಗಿತ್ತು. ಒಬ್ಬರ ಕಾಲನ್ನ ಇನ್ನೊಬ್ಬರು ಎಳೆದು ಗೆಲ್ಲಬಹುದಾಗಿದ್ದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಿತ್ತು. ವಿಧಾನಸಭಾ ಚುನಾವಣೆ ಆಗಿರುವ ತಪ್ಪು ಮತ್ತೆ ಮರುಕಳಿಸದಂತೆ ಮಾಡಲು ಅಸಮಾಧಾನ ಇರುವ 15 ಕ್ಷೇತ್ರಗಳಲ್ಲಿ ತಂಡ ರಹಸ್ಯ ವರದಿಯನ್ನು ಸಂಗ್ರಹಿಸಲಿದೆ. ನಾಮಪತ್ರ ಸಲ್ಲಿಕೆಗೂ ಮೊದಲೇ ಈ ತಂಡ ಈಗಾಗಲೇ ಫೀಲ್ಡ್‌ಗೆ ಇಳಿದು ಕೆಲಸ ಮಾಡುತ್ತಿದೆ. ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್‌ಗೆ ಕಡಿವಾಣ ಹಾಕಲು ಪ್ಲಾನ್‌ ಮಾಡಿದ್ದು ಅನುಮಾನ ಇರುವ ನಾಯಕರ ಸುತ್ತ ಸ್ಪೆಷಲ್ ಟೀಂ ಕಣ್ಗಾವಲು ಇಡಲಿದೆ. ಅಸಮಾಧಾನ ಇರುವ ಕ್ಷೇತ್ರಗಳಲ್ಲೂ ಒಬ್ಬರು ರಹಸ್ಯವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರತಿದಿನ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್‌ ಅವರಿಗೆ ಈ ವರದಿಯನ್ನ…

Read More

ಶಿವಮೊಗ್ಗ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರೆದಾಗ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ಪರೋಕ್ಷವಾಗಿ ನನ್ನ ಸ್ಪರ್ಧೆಗೆ ಅಸ್ತು ಎಂದಿದ್ದಾರೆ. ನಾನು ಈ ಹಿಂದೆ ಹೇಳಿದಂತೆ ನನ್ನ ಸ್ಪರ್ಧೆ ನಿಶ್ಚಿತ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಿತ್‌ ಶಾ ಅವರು ಸೇರಿ ಪಕ್ಷದ ಹಿರಿಯರಿಗೆ ಗೌರವ ಕೊಡುವುದು ನನಗೆ ಕಲಿಸಿರುವ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಆದರೆ ಅಲ್ಲಿ ಮಾತುಕತೆ ನಡೆಯಲಿಲ್ಲ. ಮತ್ತೆ ದೆಹಲಿಯಿಂದ ಕರೆ ಬಂದರೆ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ. ಹೀಗಾಗಿ ನನ್ನ ಸ್ಪರ್ಧೆ ಕುರಿತು ಕಾರ್ಯಕರ್ತರು ಇನ್ನು ಯಾವ ಅನುಮಾನವನ್ನೂ ಇಟ್ಟುಕೊಳ್ಳುವುದು ಬೇಡ ಎಂದರು. https://ainlivenews.com/mysterious-death-of-husband-wife-friend-in-the-same-room-victim-of-witchcraft/ ದೆಹಲಿಯಲ್ಲಿ ಸಂಘಟನಾ ಕಾರ್ಯದರ್ಶಿ‌ ರಾಜೇಶ್ ಜೀ ಮನೆಗೆ ಬರುವಂತೆ ತಮಗೆ ತಿಳಿಸಲಾಗಿತ್ತು. ಶಾ ಅವರ ಕಚೇರಿಯಿಂದ ಕರೆ ಬಂದ ಬಳಿಕ ಮನೆಗೆ ಕರೆಯುವುದಾಗಿ ತಿಳಿಸಲಾಯಿತು. ಕೆಲ ಹೊತ್ತಿನ ಬಳಿಕ ಅಮಿತ್‌ ಶಾ…

Read More

ಬೇಸಿಗೆಯಲ್ಲಿ ಎಲ್ಲರೂ ಬಯಸಿ ಸೇವಿಸುವ ಹಣ್ಣು ಕಲ್ಲಂಗಡಿ (Watermelon). ನೀರಿನಿಂದ ಕೂಡಿರುವ ಕಲ್ಲಂಗಡಿ ಹಣ್ಣು ದೇಹ ಡಿಹೈಡ್ರೇಟ್ (Dehydrate) ಆಗದಂತೆ ನೋಡಿಕೊಳ್ಳುತ್ತದೆ. ಗರ್ಭಿಣಿಯರು ಹಾಗೂ ಬೊಜ್ಜಿನ ಸಮಸ್ಯೆ ಉಳ್ಳವರು ದಿನವೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಇದೊಂದು ಆರೋಗ್ಯಕರ (Healthy) ಹಾಗೂ ಟೇಸ್ಟಿ (Tasty) ಹಣ್ಣೆನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೂ ಕೆಲವರಿಗೆ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಹಾನಿ ತರಬಹುದು ಎಂದರೆ ಅಚ್ಚರಿಯಾದೀತು.  https://ainlivenews.com/mysterious-death-of-husband-wife-friend-in-the-same-room-victim-of-witchcraft/ ಅಧಿಕಾಂಶ ನೀರಿನಿಂದ ಕೂಡಿದ್ದರೂ ಕಲ್ಲಂಗಡಿ ಹಣ್ಣು ಉಷ್ಣ(Heat)ವನ್ನು ಉಂಟುಮಾಡುವಂಥ ಗುಣ ಹೊಂದಿದೆ. ಇದೇ ಗುಣದಿಂದ ಕೆಲವು ಆರೋಗ್ಯ ಸಮಸ್ಯೆ ಉಳ್ಳವರಿಗೆ ಇದು ಹಾನಿಕಾರಿ ಆಗಬಲ್ಲದು. ಕಲ್ಲಂಗಡಿ ಹಣ್ಣು ಯಾರಿಗೆಲ್ಲ ಸಮಸ್ಯೆ ತರಬಹುದು ನೋಡಿಕೊಳ್ಳಿ. ಪೌಷ್ಟಿಕತೆಯುಳ್ಳ ಹಣ್ಣಾದರೂ ಎಲ್ಲ ರೀತಿಯ ದೇಹ ಪ್ರಕೃತಿಯವರಿಗೂ ಇದು ಒಗ್ಗುವುದಿಲ್ಲ. ಅದನ್ನು ಅರಿತು ಸೇವಿಸಿ. ಜೀರ್ಣಕ್ಕೆ (Digestion) ಸಂಬಂಧಿಸಿದ ಸಮಸ್ಯೆ ಉಳ್ಳವರು ವರದಿಯೊಂದರ ಪ್ರಕಾರ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಉಳ್ಳವರಿಗೆ ಕಲ್ಲಂಗಡಿ ಉತ್ತಮವಲ್ಲ. ಅಲ್ಪಸ್ವಲ್ಪ ಸೇವನೆ ಮಾಡಿದರೆ…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮಟ ಮಟ ಮಧ್ಯಾಹ್ನ ಮಿರಾಕಲ್ ಡ್ರಿಂಕ್ಸ್ ಎಂಬ ಖಾಸಗಿ ಕಂಪನಿಯ ಕಟ್ಟಡದ ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದೆ. RT ನಗರದಲ್ಲಿರುವ 80 ಅಡಿ ರಸ್ತೆಯ ಮಿರಾಕಲ್ ಡ್ರೀಮ್ಸ್ ಕಟ್ಟಡದಲ್ಲಿ ಬೆಂಕಿ ಅವಘಡ ಕಾಣಿಸಕೊಂಡಿದ್ದು  ಗ್ರೌಂಡ್ ಫ್ಲೋರ್ ನಲ್ಲಿ ಆಗಿರೋ ಬೆಂಕಿ ಅವಘಡ ಕಟ್ಟಡದಲ್ಲಿ 10 ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು, RT ನಗರ ಪೊಲೀಸರು ದೌಡು ಮಧ್ಯಾಹ್ನ 1:50 ರ ಸುಮಾರಿಗೆ ನಡೆದಿರುವ ಘಟನೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಅಗ್ನಿ ಅವಘಡ ಸಂಭವಿಸಿದಾಗ ಸುಮಾರು 60 ಮಂದಿ ಕಟ್ಟಡದ ಒಳಗಡೆ ಇದ್ರು ಸದ್ಯ ಯಾರಿಗೂ ಯಾವುದೇ ಪ್ರಾಣಾಪಾಯವಿಲ್ಲ ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅಗ್ನಿಗೆ ಆಹುತಿ

Read More

ತುಮಕೂರು: `ಈ ಹಿಂದೆ ಯಡಿಯೂರಪ್ಪರನ್ನು ದೇವೇಗೌಡರು ಕೆಟ್ಟದಾಗಿ ಬೈದಿದ್ದರು. ದೇವೇಗೌಡರನ್ನು ಸೋಲಿಸಿದವರನ್ನೇ ಪಕ್ಕದಲ್ಲಿ ಕುರಿಸಿಕೊಂಡು ನನ್ನ ಸೋಲಿಸಿದವರನ್ನು ಸೋಲಿಸಿ ಎಂದು ದೇವೇಗೌಡರು ಹೇಳ್ತಾರೆ ಅಲ್ವಾ ?’ ಎಂದು ಸಚಿವ ಕೆಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ತಿಳಿಸಿದರು. ಇದೇ ದೇವೇಗೌಡರು. ಯಡಿಯೂರಪ್ಪ ಕೆಟ್ಟದಾಗಿ ಬೈದಿರುವುದು ನೆನಪಿದಿಯಾ? ಅಂಥವರ ಜೊತೆ ಇವರು ಹೇಗೆ ಬಂದರು ಮತ್ತೆ? ಅವಾಚ್ಯವಾಗಿ ಬೈದಿರುವುದರ ಬಗ್ಗೆ ನನ್ನ ಹತ್ತಿರ ದಾಖಲೆ ಇದೆ. ಬೈದ ಮೇಲೆ ಬಂದು ಯಾಕೆ ಮತ ಕೇಳ್ತಾರೆ? ಇವರಿಗೆ ಏನು ನೈತಿಕತೆ ಇದೆ ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದರು. ದೇವೇಗೌಡರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು ಸೋಮಣ್ಣಗೆ ವೋಟ್ ಕೊಡಿ‌ ಅಂದಿದ್ದಾರಾ ಎಂದೂ ಪ್ರಶ್ನಿಸಿದರು. https://ainlivenews.com/mysterious-death-of-husband-wife-friend-in-the-same-room-victim-of-witchcraft/ ವಾಲ್ಮೀಕಿ ಸಮುದಾಯದ ರಾಜಣ್ಣ ಅವರ ಮಾತು ಕೇಳಬೇಡಿ ಎಂದು ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು…

Read More

ಕನ್ನಡತಿ ರಶ್ಮಿಕಾ ಮಂದಣ್ಣಗೆ (Rashmika Mandanna) ಇಂದು (ಏ.5) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಈ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಪುಷ್ಪ’ (Pushpa) ಚಿತ್ರದ ಮುಂದುವರೆದ ಭಾಗದಲ್ಲಿ ಶ್ರೀವಲ್ಲಿ ಲುಕ್ ಹೇಗಿರಲಿದೆ ಎಂಬುದು ಈಗ ರಿವೀಲ್ ಆಗಿದೆ. ಚಿತ್ರದ ಪೋಸ್ಟರ್‌ ರಿವೀಲ್‌ ಮಾಡುವ ಮೂಲಕ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ. https://ainlivenews.com/queen-of-reels-sonu-srinivas-gowda-released-from-jail-today/ ‘ಪುಷ್ಪ’ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀವಲ್ಲಿ ಮಿಂಚಿದ್ದರು. ಪುಷ್ಪ ಪಾರ್ಟ್ ಒನ್‌ಗಿಂತ ಭಾಗ 2ರಲ್ಲಿ (Pushpa 2) ನಟಿಯ ಲುಕ್ ವಿಭಿನ್ನವಾಗಿದೆ. ಕತ್ತಿನಲ್ಲಿ ಬಂಗಾರ ಹೇರಿಕೊಂಡು ಕಣ್ಣಿನ ಬಳಿ ಕೈ ಹಿಡಿದು ಸೂಪರ್ ಎಂದು ರಶ್ಮಿಕಾ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ನಟಿಗೆ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಮುಗ್ಧ ಹುಡುಗಿಯಂತಿದ್ದ ಶ್ರೀವಲ್ಲಿ ಇದೀಗ ರೆಬೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.‌ ಪುಷ್ಪ ಪಾರ್ಟ್ 2ಗೆ `ಪುಷ್ಪ: ದಿ ರೈಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ…

Read More

ಬೆಂಗಳೂರು : ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಬರುವ ಹಿನ್ನೆಲೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಈಗಾಗಲೇ ಜನತೆ ಸಿದ್ದತೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಲು ತಯಾರಿ ನಡೆಸಿದೆ. ವಿಶೇಷ ಬಸ್​ಗಳ ವ್ಯವಸ್ಥೆ : ಬೆಂಗಳೂರಿನಿಂದ ದೂರದೂರುಗಳಿಗೆ ಪ್ರಯಾಣಿಸುವ ಜನರಿಗೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಂದ ಎರಡು ಸಾವಿರಕ್ಕು ಅಧಿಕ ಬಸ್​ ವ್ಯವಸ್ಥೆಕಲ್ಪಿಸುತ್ತಿದೆ. ಕೆಎಸ್​ಆರ್​ಟಿಸಿ ವತಿಯಿಂದ 1.750 ಬಸ್​ಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ (NWKSRTC) ವತಿಯಿಂದ 145 ಬಸ್ಸ್​ಗಳು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ನಿಗಮ ವತಿಯಿಂದ 200 ಬಸ್ಸ್​ಗಳು ಮತ್ತು ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC) ಸಂಸ್ಥೆ ವತಿಯಿಂದ 180 ಬಸ್ಸ್​ಗಳನ್ನು ರಸ್ತೆಗಿಳಿಸಲು ತೀರ್ಮಾನಿದೆ. ಯುಗಾದಿ ಹಬ್ಬಕ್ಕೆ ಊರಿಗೆ ಹೊರಡಲು ತಯಾರಿ ನಡೆಸಿರುವ ಜನರಿಗೆ ಬರೊಬ್ಬರಿ 5 ದಿನಗಳ ರಜೆ ಸಿಗಲಿದೆ. ಏ.7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಹಬ್ಬ ಬರುವುದರಿಂದ ಏ.8ರಂದು…

Read More