Author: AIN Author

ಸೂರ್ಯೋದಯ: 06:10, ಸೂರ್ಯಾಸ್ತ : 06:26 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ದ್ವಾದಶಿ, ನಕ್ಷತ್ರ: ಶತಭಿಶ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಬೆ.9:11 ನಿಂದ ಬೆ.10:38 ತನಕ ಅಭಿಜಿತ್ ಮುಹುರ್ತ: ಬೆ.11:53 ನಿಂದ ಮ.12:42 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಜೇನು ಸಾಕಾಣಿಕೆ,ಕೋಳಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಮಾಡುವಂತವರಿಗೆ ಆರ್ಥಿಕ ಧನ ಲಾಭ, ಸರಕಾರದ ಸೌಲತ್ತು ಪಡೆಯಲು ಯಶಸ್ವಿ, ಟ್ರಾನ್ಸ್ಪೋರ್ಟ್ಗಾರರಿಗೆ ಆರ್ಥಿಕ ನಷ್ಟ,ಹಾರ್ಡ್ವೇರ್ ಉದ್ಯಮದಾರರಿಗೆ ಧನ ಲಾಭ, ಗುತ್ತಿಗೆದಾರರಿಗೆ ನಿಂತಿರುವ ಕಾಮಗಾರಿ ಪುನರಾರಂಭ, ಹಳೆಯ ಬಿಲ್…

Read More

ಬೆಂಗಳೂರು:- ಜಾಮೀನು ಸಿಕ್ಕರೂ ರೀಲ್ಸ್ ರಾಣಿ ಸೋನುಗೌಡಗೆ ಇಂದು ಸಹ ಜೈಲೇ ಗತಿ ಆಗಿದೆ. ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ಜಾಮೀನು ಪ್ರಕ್ರಿಯೆ ಪೂರ್ಣ ಮಾಡಿಲ್ಲ. https://ainlivenews.com/rameswaram-cafe-blast-case-nia-says-dont-spread-rumours/#google_vignette ಸಂಜೆ 7 ಗಂಟೆಯೊಳಗೆ ಜಾಮೀನು ಪ್ರತಿ ತಲುಪಬೇಕಿತ್ತು. ಆದರೆ ಇನ್ನೂ ಸಹ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿಲ್ಲ. ಹಾಗಾಗಿ ನಾಳೆಯವರೆಗೂ ಸೋನುಗೌಡ ಜೈಲಿನಲ್ಲೇ ಇರಲಿದ್ದು, ಪ್ರಕ್ರಿಯೆ ಪೂರ್ಣಗೊಂಡು ನಾಳೆ ಸಂಜೆ ವೇಳೆಗೆ ರಿಲೀಸ್ ಸಾಧ್ಯತೆ ಇದೆ. ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ನಿನ್ನೆ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಈ ಕುರಿತಾಗಿ ಆದೇಶ ಸಹ ಹೊರಡಿಸಲಾಗಿತ್ತು. ಜೈಲಿನಿಂದ ಇಂದು ಬಿಡುಗಡೆ ಸಾಧ್ಯತೆ ಎಂದು ಹೇಳಲಾಗಿತ್ತು. ಆದರೆ ಜಾಮೀನಿನ ಷರತ್ತುಗಳು ಪೂರೈಕೆಯಾಗದ ಹಿನ್ನೆಲೆ ಇಂದು ಕೂಡ ಸೋನುಗೆ ಜೈಲೇ ಗತಿಯಾಗಿದೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಎನ್ಐಎ ಈಗಾಗಲೇ ಶಂಕಿತರಿಬ್ಬರ ಫೋಟೋ ಪ್ರಕಟಿಸಿ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಈ ಪ್ರಕರಣ ಸಂಬಂಧ ಇಂದು ಎನ್‌ಐಎ ಅಧಿಕಾರಿಗಳು ಸಾಕ್ಷಿಯಾಗಿ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ನನ್ನು ವಿಚಾರಣೆ ನಡೆಸಿದೆ. ಆದರೆ ಕಾಂಗ್ರೆಸ್,ಕೈ ನಾಯಕರು, ಕೆಲ ಮಾಧ್ಯಮಗಳು ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ, ಕೇಸರಿ ಭಯೋತ್ಪಾದನೆ, ಭಯೋತ್ಪಾದ ರಾಜಕೀಯ ಪಕ್ಷ, ಭಯೋತ್ಪಾದಕರ ಜೊತೆ ಬಿಜೆಪಿ ಲಿಂಕ್ ಸೇರಿದಂತೆ ಬಗೆ ಬಗೆಯ ಪೋಸ್ಟ್ ಹಾಕಿತ್ತು. ಈ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಸ್ಪಷ್ಟನೆ ನೀಡಿದೆ. ಬಿಜೆಪಿ ಕಾರ್ಯಕರ್ತನ ಬಂಧಿಸಿಲ್ಲ. ಈತ ಆರೋಪಿಯಲ್ಲ, ಸಾಕ್ಷಿಯಾಗಿ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್, ಮೊಬೈಲ್ ಅಂಗಡಿ ಮಾಲೀಕನ ವಿಚಾರಣೆ ನಡೆಸಲಾಗಿದೆ. ಸಾಯಿ ಪ್ರಸಾದ್ ತನ್ನ ಹಳೆ ಮೊಬೈಲನ್ನು ಮೊಬೈಲ್ ಅಂಗಡಿ…

Read More

ಗದಗ:- ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಜರುಗಿದೆ. https://ainlivenews.com/rabkavi-banahatti-hipparagi-barrage-backwater-is-draining/ ಎ ಎಂ ಮಡಿವಾಳರ ಹಲ್ಲೆಗೊಳಗಾದ ಬಸ್ ಚಾಲಕ ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಲ್ಲೆ ಎಕ್ಸ್ಕ್ಲೂಸಿವ್ ವಿಡಿಯೋ AINಗೆ ಲಭ್ಯವಾಗಿದೆ. ಬಸ್ ನಿಲ್ಲಿಸದೇ ಇರೋದೇ ಹಲ್ಲೆಗೆ ಕಾರಣ ಅನ್ನೋ ಆರೋಪ ಕೇಳಿ ಬಂದಿದೆ. ನರಗುಂದ ತಾಲೂಕಿನ ಕೊಣ್ಣೂರಿನಿಂದ ರೋಣಕ್ಕೆ ಬಸ್ ತೆರಳ್ತಿತ್ತು ಎನ್ನಲಾಗಿದ್ದು, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಬಾಗಲಕೋಟೆ:- ಕೃಷ್ಣೆಯ ಒಡಲು ಬರಿದಾಗುತ್ತಿರುವುದರಿಂದ ಹಿಪ್ಪರಗಿ ಜಲಾಶಯ ಹಿನ್ನೀರು ನಂಬಿರುವ ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ ಹಲವಾರು ನಗರ ಹಾಗು ಗ್ರಾಮಗಳಿಗೆ ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. https://ainlivenews.com/farmers-protest-demanding-to-release-water-to-the-indi-branch-canal/ ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಈಗಾಗಲೇ ನೀರಿನ ಕೊರತೆ ಎದುರಾಗಿದ್ದು, ಜನರು ಖಾಸಗಿ ಕೊಳವೆ ಬಾವಿ ಹಾಗು ನಗರಸಭೆಯ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ. ಇದೀಗ ನೀರಿನ ಭವಣೆ ಅಷ್ಟೊಂದು ಪ್ರಮಾಣದಲ್ಲಿದಿದ್ದರೂ ಕೊಡಗಳನ್ನು ಹೊತ್ತು ನೀರಿಗಾಗಿ ದೂರ ಕ್ರಮಿಸಬೇಕಾದ ಅನಿವಾರ್ಯತೆ ಕೆಲವೆಡೆಯಿದೆ. ಇದೇ ಸಮಸ್ಯೆ ಮುಂದುವರೆದರೆ ಕೊಳವೆ ಬಾವಿಗಳೂ ಸಹಿತ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಅಲ್ಲಲ್ಲಿ ಸರ್ಕಾರಿ ಹಾಗು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜಾಗುತ್ತಿದೆ. ಕೆಲ ಕಡೆ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿಯಿಂದ ನೀರು ಪೂರೈಕೆದಾರರ ವಿದ್ಯುತ್ ಬಿಲ್ ನಗರಸಭೆಯೇ ಕಟ್ಟಲಿದ್ದು, ಆತಂಕಪಡುವ ಅಗತ್ಯವಿಲ್ಲವೆಂದರು. `ಮಹಾ’ ಇಳಿಕೆ ಮಹಾರಾಷ್ಟ್ರದ ಜಲಾಶಯದಲ್ಲಿ ಸದ್ಯ 64 ಟಿಎಂಸಿಯಷ್ಟು ನೀರು ಮಾತ್ರವಿದೆಯೆಂಬ ಮಾಹಿತಿಯಿದೆ. 103 ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ…

Read More

ವಿಜಯಪುರ:- ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ. https://ainlivenews.com/bjp-leaders-fight-mp-siddeshwar-who-came-to-campaign-is-back/#google_vignette ಚಡಚಣ ತಾಲೂಕಿನ ಕೊನೆಯ ಭಾಗದ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಝಳಕಿ ಪಟ್ಟಣದ ಕೆಬಿಜೆಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇಂಡಿ ಶಾಖಾ ಕಾಲುವೆಯ ನಾರಾಯಣಪುರ ಎಡದಂಡೆ ಕಾಲುವೆಗೆ 130 ಕಿಲೋ ಮಿಟರ್ ದಿಂದ 172 ಕಿಲೋ ಮೀಟರ್ ವರೆಗರ ನೀರು ಹರಿಸುವಂತೆ ಒತ್ತಾಯ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಇಂಡಿ ತಹಶಿಲ್ದಾರ ಮಂಜುಳಾ ನಾಯಕ ಭೇಟಿ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ನೀರು ಹರಿಸುವ ಭರವಸೆಯನ್ನು ರೈತರಿಗೆ ನೀಡಿದ್ದಾರೆ.

Read More

ದಾವಣಗೆರೆ:- ಬಿಜೆಪಿ ಮುಖಂಡರ ನಡುವೆ ಉಂಟಾದ ಜಗಳದಿಂದ ಪ್ರಚಾರಕ್ಕೆ ಬಂದಿದ್ದ ಸಂಸದ ಸಿದ್ದೇಶ್ವರ್ ವಾಪಾಸ್ ಆಗಿದ್ದಾರೆ. https://ainlivenews.com/involved-in-illegal-activity-16-exiled/ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದಲ್ಲಿ ಘಟನೆ ಜರುಗಿದೆ. ಬಿಜೆಪಿ ಮುಖಂಡ ಶಿವಕುಮಾರ್ ಹಾಗೂ ಮಾಡಾಳು ಮಲ್ಲಿಕಾರ್ಜುನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಪ್ರಚಾರ ಮಾಡದೇ ಸಿದ್ದೇಶ್ವರ್ ಹಾಗೂ ಬಿಜೆಪಿ ಮುಖಂಡರು ವಾಪಸ್ ತೆರಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವಕುಮಾರ್, ಬಂಡಾಯ ಅಭ್ಯರ್ಥಿಯಾಗಿ ಮಾಡಾಳು ಮಲ್ಲಿಕಾರ್ಜುನ ಸ್ಪರ್ಧೆ ಮಾಡಿದ್ದರು. ಇಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಸಂಸದ ಸಿದ್ದೇಶ್ವರ ಪ್ರಚಾರಕ್ಕೆ ತೆರಳಿದ್ದ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ.

Read More

ತುಮಕೂರು:- 2024 ರ ಲೋಕಸಭಾ ಚುನಾವಣಾ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಮುಂದಾಗಿದ್ದಾರೆ. https://ainlivenews.com/a-mother-and-two-children-got-water-while-going-to-wash-clothes/ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ 16 ಮಂದಿ ಜಿಲ್ಲೆಯಿಂದ ಗಡಿಪಾರು ಮಾಡಿ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಯಿಂದ ಆದೇಶ ಹೊರಡಿಸಿದ್ದಾರೆ. ತಿಪಟೂರು ನಗರ ಠಾಣಾ ವ್ಯಾಪ್ತಿಯ ಸಲ್ಮಾನ್ ಖಾನ್ @ ಸಲೇಮಾನ್, ಚೇತನ್ ಬಿ.ಆರ್, ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಶಿಧರ್, ತುರುವೇಕೆರೆ ಠಾಣಾ ವ್ಯಾಪ್ತಿಯ ನಾಗರಾಜ್ @ ರಾಕಿ, ಮಂಜುನಾಥ್ @ ಲಾಳಿ ಮಂಜ, ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಹರೀಶ್ @ ಖಡಕ್ ಹರೀಶ್, ಬಸವರಾಜು, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶ್, ಶ್ರೀನಿವಾಸ್@ ಸೀನ, ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯಧುನಂದನ‌, ಗುಬ್ಬಿ ಠಾಣಾ ವ್ಯಾಪ್ತಿಯ ಫರ್ಮಾನ್ ಖಾನ್@ ಇರ್ಫಾನ್ ಖಾನ್, ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯ ಅಲಿಹುಸೇನ್@ಅಲಿ, ಜಯನಗರ ಠಾಣಾ ವ್ಯಾಪ್ತಿಯ ಸಂಪತ್ ಕುಮಾರ್@ ಸಂಪತ್, ಕೋರ ಪೊಲೀಸ್ ಠಾಣಾ ವ್ಯಾಪ್ತಿಯ…

Read More

ಚಾಮರಾಜನಗರ: ಬಟ್ಟೆ ಒಗೆಯುತ್ತಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹನೂರು ತಾಲೂಕಿನ ಗೋಪಿನಾಥಂ ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. https://ainlivenews.com/the-electric-bus-standing-in-the-sun-caught-fire/ ಗೋಪಿನಾಥಂ ಸಮೀಪದ ಪುದೂರು ಗ್ರಾಮದ ನಿವಾಸಿಗಳಾದ ಮೀನಾ (34), ಪವಿತ್ರಾ (14) ಹಾಗು ಕೀರ್ತಿ (11) ಮೃತರೆಂದು ತಿಳಿದುಬಂದಿದೆ. ಮೀನಾ ಅವರು ತಮ್ಮ ಮಕ್ಕಳೊಂದಿಗೆ ಶುಕ್ರವಾರ ಮಧ್ಯಾಹ್ನ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆದ ನಂತರ ಬಟ್ಟೆಯನ್ನು ಹಿಂಡಲು ಹೋದ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಇಬ್ಬರು ಹೆಣ್ಣು ಮಕ್ಕಳು ತಾಯಿಯನ್ನು ರಕ್ಷಿಸಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಮಗ ಸುರೇಂದ್ರ ತಂದೆಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರೂ ಅಸುನೀಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಶವ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮಲೆಮಹದೇಶ್ವರ ಬೆಟ್ಟ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Read More

ಬೆಂಗಳೂರು:- ದಿನೇದಿನೆ ತಾಪಮಾನ ಹೆಚ್ಚಳದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ , , ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟದಂತಹ ಅವಘಡಗಳು ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. https://ainlivenews.com/protest-in-dharwad-against-the-chief-officer-of-kalaghatagi-pattana/ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಬಿಸಿಲಿಗೆ ನಿಂತ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಬಿಡದಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋದಲ್ಲಿ ನಡೆದಿದೆ. ಬೆಳಗ್ಗೆಯಿಂದ ಎಲೆಕ್ಟ್ರಿಕ್ ಬಸ್ ಬಿಸಿಲಲ್ಲಿ ನಿಲ್ಲಿಸಿದ್ದರಿಂದ ಬ್ಯಾಟರಿ ಓವರ್ ಹೀಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಬಸ್‌ಗೆ ಆವರಿಸಿದ ದಟ್ಟ ಹೊಗೆ. ಸಿಬ್ಬಂದಿ ಕ್ಷಣಕಾಲ ಆತಂಕಕ್ಕೊಳಗಾದರೂ, ಅದೃಷ್ಟವಶಾತ್ ಬಸ್ ನಲ್ಲಿ ಯಾವುದೇ ಸಿಬ್ಬಂದಿ, ಪ್ರಯಾಣಿಕರು ಇಲ್ಲದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಸಿಬ್ಬಂದಿ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ ಬ್ಯಾಟರಿ ಹೊರತೆಗೆದಿದ್ದಾರೆ.

Read More