Author: AIN Author

ದೇವನಹಳ್ಳಿ:-ಬೊಲೆನೋ ಮತ್ತು ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ನೂತನ ರಸ್ತೆಯಲ್ಲಿ ಜರುಗಿದೆ https://ainlivenews.com/reels-rani-sonu-is-likely-to-release-today/ ಕೆಂಪೇಗೌಡ ಏರ್ಪೋರ್ಟ್ನಿಂದ ಚನ್ನೈ ಕಡೆ ಇನೋವಾ ಕಾರು ಹೊರಟಿತ್ತು. ಹೊಸಕೋಟೆಯಿಂದ ಯಲಹಂಕ ಕಡೆಗೆಮತ್ತೊಂದು ಬುಲನೋ ಕಾರು ಹೊರಟಿತ್ತು. ಇದೆ ವೇಳೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸಧ್ಯ ರಸ್ತೆ ಪ್ರಾರಂಭಕ್ಕೂ ಮುನ್ನ ಇದು ಮೂರನೇ ಅಪಘಾತವಾಗಿದೆ. ಸರಣಿ ಅಪಘಾತಕ್ಕೆ ಸ್ಥಳೀಯ ಜನರು ಬೇಸತ್ತು ಹೋಗಿದ್ದಾರೆ. ಇನ್ನು ರಸ್ತೆ ಕಾಮಗಾರಿ ಪೂರ್ಣ ಗೊಂಡಿಲ್ಲ . ಪರ್ಯಾಯ ರಸ್ತೆ ಇದ್ದರೂ ಕಾಮಗಾರಿ ಮಾಡ್ತಿರೋ ರಸ್ತೆ ಕಡೆ ವಾಹನ ಸಂಚಾರ ಮಾಡುತ್ತಿದೆ. ಒಂದು ಸ್ಪೀಡ್ ಬ್ರೇಕರ್ ಇಲ್ಲಾ ಸಂಚಾರಿ ನಾಮಪಲಕ ಇಲ್ಲಾ ಎಂದು ರಸ್ತೆ ಪ್ರಾಧಿಕಾರದ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

Read More

ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣ ಸಂಬಂಧ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಇಂದು ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆ ಇದೆ. https://ainlivenews.com/ipl-2024-gold-prices-drop-slightly-heres-todays-price-list/ ನಿನ್ನೆ ಜಾಮೀನು ಪ್ರತಿ ತಲುಪಬೇಕಿತ್ತು. ಆದರೆ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿಲ್ಲ. ಹಾಗಾಗಿ ಇಂದು ಜಾಮೀನು ಪ್ರಕ್ರಿಯೆಯನ್ನು ಸೋನು ಪರ ವಕೀಲರು ಪೂರ್ಣ ಮಾಡಲಿದ್ದಾರೆ. ಹೀಗಾಗಿ ಇಂದು ರಿಲೀಸ್ ಸಾಧ್ಯತೆ ಇದೆ.

Read More

ನಿಂಬೆ ಗಿಡ ತುಂಬಾ ಚೆಂದ, ನಿಂಬೆ ಹಣ್ಣು ತುಂಬಾ ರುಚಿ!” ಎಂದು ಹಾಡಿಕೊಳ್ಳುತ್ತಾ ಈ ಪರಿ ಬೇಸಿಗೆಗೆ ಗಂಟಲೊಣಗಿ ನಿಂಬೆ ಪಾನಕ ಮಾಡುತ್ತಿದ್ದೆ. ಈ ಕೊರೊನಾ ವೈರಸ್ಸಿನಿಂದ ಗೃಹ ಬಂಧಿಗಳಾಗಿ (ಮನೆ) ತಿಂಡಿ-ಊಟ, ಜೂಸುಗಳ ಭಾರಾಟೆಯಲ್ಲಿ ಗಂಟೆಗಟ್ಟಲೆ ಅಡುಗೆ ಮನೆಯಲ್ಲೇ ನಮ್ಮಂತ ಗೃಹಿಣಿಯರಿಗೆ ಲಾಕ್ ಡೌನ್ ಆಗಿ ಬಿಡುವ ಪರಿಸ್ಥಿತಿ! ನಿಂಬೆ ಪಾನಕದ ಹುಳಿ ಮಧುರ ರುಚಿ ನಾಲಗೆಗೆ ಏರುತ್ತಿದ್ದಂತೆ ಈ ನಿಂಬೆಯ ಬಗ್ಗೆ ತಲೆಯಲ್ಲಿ ಹುಳ ಕೊರೆಯಲಾರಂಭಿಸಿತು. ಕಳೆಕಳೆಯಾಗಿ ಹೊಳೆಯುವ ಹಳದಿ ಸುಂದರಿ ನಿಂಬೆ ತರಕಾರಿ ಕೆಟಗರಿಯಲ್ಲಿ ಬಂದರೂ ತನ್ನ ಹೆಸರಿನ ಪಕ್ಕ ”ಹಣ್ಣು” ಎನ್ನುವ ಸರ್ ನೇಮ್ ಇಟ್ಟಕೊಂಡು ಹಣ್ಣುಗಳ ಜೊತೆಯಲ್ಲೂ ಗುರುತಿಸಿಕೊಂಡು ಬುದ್ಧಿವಂತಿಕೆ ಮೆರೆದಿದೆ https://ainlivenews.com/know-the-health-benefits-of-eating-onions/ ಫ್ರಿಡ್ಜ್​ನಲ್ಲಿ ನಿಂಬೆ ಹಣ್ಣು ಇಡಬಹುದೇ? ಫ್ರಿಡ್ಜ್​​ನಲ್ಲಿ ನಿಂಬೆ ಹಣ್ಣುಗಳು ತಾಜಾವಾಗಿರುವ ಕಾರಣ ಇದನ್ನು ಅದರಲ್ಲಿ ಸಂಗ್ರಹಿಸಿಡಬಹುದು. ನಿಂಬೆಗಳು ಒಂದೆರೆಡು ಇದ್ದು, ಬೇಗ ಬಳಸುತ್ತೀರಿ ಎಂದರೆ ಅದನ್ನು ಅಲ್ಲಿ ಇಡುವ ಅವಶ್ಯಕತೆ ಇರುವುದಿಲ್ಲ. ಇಲ್ಲಾ ತುಂಬಾ ಹಣ್ಣಿದೆ ಅಂದಾಗ ನೀವು…

Read More

ಇಂದು 1 ಗ್ರಾಂ ಚಿನ್ನಕ್ಕೆ 6,415 ರೂ. ಇದೆ. ನಿನ್ನೆ 6,460 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 45 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,320 ರೂ. ನೀಡಬೇಕು. ನಿನ್ನೆ 51,680 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 360 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 64,150 ರೂ ಇದೆ. ನಿನ್ನೆ 64,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 450 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,41,500 ರೂ. ನೀಡಬೇಕು. ನಿನ್ನೆ 6,46,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 4,500 ರೂ. ಇಳಕೆಯಾಗಿದೆ. 24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,998 ರೂ. ಇದೆ. ನಿನ್ನೆ 7,047 ರೂ. ಇದು ಈ ದರಕ್ಕೆ ಹೋಲಿಸಿದರೆ 49 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 55,984 ರೂ. ನೀಡಬೇಕು. ನಿನ್ನೆ 56,376 ರೂ. ಇದ್ದು…

Read More

ಭಾರತದಲ್ಲಿ ರೈತರು ಸಾಂಪ್ರದಾಯಿಕ ಕೃಷಿಯಿಂದ ದೂರ ಸರಿಯುತ್ತಿದ್ದಾರೆ ಮತ್ತು ವಿವಿಧ ರೀತಿಯ ಕೃಷಿ ಮಾಡುತ್ತಿದ್ದಾರೆ. ಹೀಗಾಗಿ ಕೆಲ ರೈತರು ಶ್ರೀಗಂಧ ಕೃಷಿಯಲ್ಲೂ ಕೈ ಹಾಕುತ್ತಿದ್ದಾರೆ. ಶ್ರೀಗಂಧದ ಮರವು ಪ್ರತಿ ಋತುವಿನಲ್ಲಿ ಫಲ ನೀಡುತ್ತದೆ. ಇದು ಒಂದಲ್ಲ ಹಲವು ವಿಶೇಷತೆಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಅದರ ಸುಗಂಧವು ಇತರ ಮರಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಈ ಮರವನ್ನು ಪೂಜಿಸುವ ಪದ್ಧತಿಯೂ ಮುಂದುವರೆದಿದೆ. ಭಾರತದಲ್ಲಿ, ಶ್ರೀಗಂಧವನ್ನು ಹೆಚ್ಚಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬೆಳೆಸಲಾಗುತ್ತದೆ. ಒಬ್ಬ ರೈತ ಶ್ರೀಗಂಧವನ್ನು ಬೆಳೆಸಲು ಬಯಸಿದರೆ ಅದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ತಿಳಿದುಕೊಳ್ಳಬೇಕು. ಹಾಗಾಗಿ ಈ ಕುರಿತಾದ ಮಾಹಿತಿ ಇಲ್ಲಿದೆ. ಈ ಮೂಲಕ ನೀವು ಶ್ರೀಗಂಧವನ್ನು ಬೆಳೆಸಬಹುದು ಶ್ರೀಗಂಧವನ್ನು ಬೆಳೆಸಲು ನೀವು ವಿಶೇಷ ಋತುವಿಗಾಗಿ ಕಾಯಬೇಕಾಗಿಲ್ಲ. ನೀವು ಯಾವುದೇ ತಿಂಗಳಲ್ಲಿ ಶ್ರೀಗಂಧದ ಗಿಡವನ್ನು ನೆಡಬಹುದು. ನೀವು ನೆಡುವ ಶ್ರೀಗಂಧದ ಗಿಡವು 2 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಶ್ರೀಗಂಧದ ಮರವನ್ನು ನೆಟ್ಟ ನಂತರ, ನೀವು ಅದರ ಸ್ವಚ್ಛತೆಯ ಬಗ್ಗೆ ಗಮನ…

Read More

CSK ವಿರುದ್ಧ SRH ಗೆಲುವಿನ ಬೆನ್ನಲ್ಲೇ ಪಾಯಿಂಟ್ಸ್ ಟೇಬಲ್ ನಲ್ಲಿ ಬದಲಾವಣೆ ಆಗಿದೆ. ಈ ಬಾರಿ ಪಾಯಿಂಟ್ಸ್ ಟೇಬಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಅಗ್ರಸ್ಥಾನ ಅಲಂಕರಿಸಿದರೆ, ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯ ಐಪಿಎಲ್​ನ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಒಟ್ಟು 6 ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ +2.518 ನೆಟ್​ ರನ್ ಹೊಂದುವ ಮೂಲಕ ಆರ್​ಆರ್​ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. https://ainlivenews.com/araga-gyanendra-clarified-about-nia-arresting-a-bjp-worker/ ರಾಜಸ್ಥಾನ್ ರಾಯಲ್ಸ್ ತಂಡವು ಇದುವರೆಗೆ ಮೂರು ಪಂದ್ಯಗಳನ್ನಾಡಿದ್ದು, ಮೂರು ಮ್ಯಾಚ್​ನಲ್ಲೂ ಜಯ ಸಾಧಿಸಿದೆ. ಈ ಮೂಲಕ ಒಟ್ಟು 6 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ನೆಟ್​ ರನ್​ ರೇಟ್ +1.249. ಇನ್ನು ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೂರನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ.…

Read More

ಬೆಂಗಳೂರು:- ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಶಕ್ಕೆ ಪಡೆದಿರುವ ಬಗ್ಗೆ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಮತಿನ್​ ಎಂಬುವನು ಸಿಮ್ ಖರೀದಿಸಿ ಕೊಟ್ಟ ವಿಳಾಸ, ದಾಖಲೆ ದುರುಪಯೋಗ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆ ತೀರ್ಥಹಳ್ಳಿಯ ಸಾಯಿ ಪ್ರಕಾಶ್​ನನ್ನು ವಿಚಾರಣೆ ಮಾಡಲಾಗಿದ್ದು, ಸತ್ಯಾಂಶ ಗೊತ್ತಾದ ನಂತರ ನಿನ್ನೆ ಎನ್​ಐಎ ತಂಡ ವಾಪಸ್ ಕಳುಹಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. https://ainlivenews.com/47-female-students-of-bangalore-medical-college-are-sick/ ಕೇಸ್​ನಲ್ಲಿ ಬಿಜೆಪಿ ಕಾರ್ಯಕರ್ತರ ಭಾಗಿ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ತೀರ್ಥಹಳ್ಳಿಯ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿಸಿ 8 ಹಿಂದುಗಳ ಹೆಸರಿನಲ್ಲಿ ಮತಿನ್ ನಕಲಿ ಫೇಸ್​ಬುಕ್ ಅಕೌಂಟ್ ಮಾಡಿದ್ದಾನೆ. ಇವರನ್ನು NIA ತಂಡ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ. ಬಿಜೆಪಿ ಕಾರ್ಯಕರ್ತ ರಾಷ್ಟ್ರವಿರೋಧಿ ಕೃತ್ಯದಲ್ಲಿ ಭಾಗಿ ಆಗಲ್ಲ ಎಂದು ಹೇಳಿದ್ದಾರೆ. ಸಾಯಿ ಪ್ರಸಾದ್ ಒಬ್ಬ ಕಾರ್ಯಕರ್ತ ಉತ್ತಮ ಜೀವನ ಆತ ನಡೆಸುತ್ತಿದ್ದಾನೆ. ಆತ ಓರ್ವ ಪೆಂಟರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾನೆ. ಆತ ವಿಚಾರಣೆಯಲ್ಲಿ…

Read More

ಬೆಂಗಳೂರು:- ಬೆಂಗಳೂರು ಮೆಡಿಕಲ್‌ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. https://ainlivenews.com/ipl-2024-csk-beat-srh-easy-win-by-6-wickets/ ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಐವರಿಗೆ ಹೆಚ್​​ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಉತ್ತಮವಾಗಿದೆ. ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಹೆಚ್ಚು ತಾಪಮಾನ ನಡುವೆ ಬೆಂಗಳೂರಿನಲ್ಲಿ ಕಾಲರಾ ಭೀತಿ ಶುರುವಾಗಿದೆ. ಇದರ ಮಧ್ಯೆ ಏಕಾಏಕಿ ಬೆಂಗಳೂರು ಮೆಡಿಕಲ್‌ ಕಾಲೇಜಿನ ಹಾಸ್ಟೆಲ್​ ವಿದ್ಯಾರ್ಥಿನಿಯರು ಏಕಾಏಕಿ ವಾಂತಿ-ಭೇದಿಯಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲರಾ ಶಂಕೆ ವ್ಯಕ್ತವಾಗಿದೆ. ಇದರಿಂದ ಆರೋಗ್ಯ ಇಲಾಖೆಗೆ ಟೆನ್ಷನ್ ಶುರುವಾಗಿದೆ.

Read More

ಸನ್​ ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್​ನ 2024ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಬಲಿಷ್ಠ ಸಿಎಸ್​ಕೆ ತಂಡವನ್ನು ಸೋಲಿಸಿದೆ. ಇದರೊಂದಿಗೆ ಹೈದರಾಬಾದ್ ಮೂಲದ ತಂಡ ಹಾಲಿ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. https://ainlivenews.com/rr-vs-rcb-big-fight-today-bengaluru-giving-will-jacks-a-chance-in-this-match/ ಅದ್ಭುತ ಬೌಲಿಂಗ್ ದಾಳಿ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಚೆನ್ನೈ ತಂಡವನ್ನು 165 ರನ್‌ಗೆ ಕಟ್ಟಿಹಾಕಿತ್ತು. 166 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಸ್ಫೋಟಕ ಆರಂಭ ಪಡೆಯಿತು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಕ್ಕೆ ಸಿಎಸ್‌ಕೆ ಬೆಚ್ಚಿ ಬಿದ್ದಿತ್ತು. ಅಭಿಷೇಕ್ ಶರ್ಮಾ 12 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 37 ರನ್ ಸಿಡಿಸಿ ಔಟಾದರು. ಅಭಿಷೇಕ್ ಶರ್ಮಾ ಒಂದೆಡೆಯಿಂದ ಅಬ್ಬರಿಸಿದರೆ ಇತ್ತ ಟ್ರಾವಿಸ್ ಹೆಡ್ ಕೂಡ ಉತ್ತಮ ಆರಂಭ ನೀಡಿದರು. ಹೆಡ್ 24 ಎಸೆತದಲ್ಲಿ 31 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಆ್ಯಡಿನ್ ಮರ್ಕ್ರಮ್ ಬ್ಯಾಟಿಂಗ್ ಹೈದರಾಬಾದ್ ತಂಡಕ್ಕೆ ನೆರವಾಯಿತು. ಇದೇ ವೇಲೆ ಮರ್ಕ್ರಮ್ ಹಾಫ್…

Read More

ರಾಜಸ್ಥಾನದ ತವರು ಮೈದಾನವಾದ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅದ್ಭುತ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಇಂದು ಎದುರಿಸಲಿದೆ. https://ainlivenews.com/queen-of-reels-sonu-gowda-will-be-jailed-today/ ಈ ಪಂದ್ಯ ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಏಕೆಂದರೆ ಒಂದೆಡೆ ಆರ್​ಸಿಬಿ ಸತತ ಸೋಲುಗಳಿಂದ ಹೊರಬರಲು ಎದುರು ನೋಡುತ್ತಿದ್ದರೆ, ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ತನ್ನ ಗೆಲುವಿನ ಲಯವನ್ನು ಮುಂದುವರೆಸಲು ಪ್ರಯತ್ನಿಸಲಿದೆ. ಸತತ ಮೂರು ಸೋಲುಗಳನ್ನು ಕಂಡಿರುವ ಆರ್​​ಸಿಬಿ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ರಾಯಲ್ಸ್ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ರಾಯಲ್ಸ್ ಗೆದ್ದರೆ ಅದು ಮೊದಲ ಸ್ಥಾನಕ್ಕೇರುವ ಅವಕಾಶ ಪಡೆಯಲ್ಲಿದೆ. ಇತ್ತ ಆರ್​ಸಿಬಿ ಕೂಡ ಮೇಲಕ್ಕೇರುವ ಅವಕಾಶ ಹೊಂದಿದೆ. ಇನ್ನು ಆರ್​ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಬಗ್ಗೆ ಹೇಳುವುದಾದರೆ.. ಕಳೆದ ನಾಲ್ಕು ಪಂದ್ಯಗಳಲ್ಲ್ಲೂ ತಂಡದ ಅಗ್ರ ಕ್ರಮಾಂಕವು ಉತ್ತಮ ಪ್ರದರ್ಶನ ನೀಡಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ನಿರೀಕ್ಷತ ಪ್ರದರ್ಶನ…

Read More