Author: AIN Author

ಬೆಂಗಳೂರು: ಕಾಂಗ್ರೆಸ್ ಇಂದಿನಿಂದ  ಅಧಿಕೃತವಾಗಿ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ.ಕೋಲಾರದ ಕುರುಡುಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ,ಕಾಂಗ್ರೆಸ್ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿದ್ದಾರೆ.ಅಲ್ದೇ ಚುನಾವಣಾ ಅಖಾಡದಲ್ಲಿ ಮಾತಿನ ಸಮರ ಕೂಡ ಇಂದಿನಿಂದ ಜೋರಾಗಲಿದೆ. ಯೆಸ್, ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ.ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು,ಈ ಹಿನ್ನಲೆಯಲ್ಲಿ ನಾಳೆಯಿಂದಲೇ ಚುನಾವಣಾ ಪ್ರಚಾರಕ್ಕೆ ಧುಮುಕಲು ಕಾಂಗೆಸ್ ನಿರ್ಧಾರ ಮಾಡಿದೆ.ಕೋಲಾರದ ಕುರುಡುಮಲೆಯ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ,ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.ಸಚಿವರು,ಶಾಸಕರು ನಾಳೆ ವಿಶೇಷ ಪೂಜೆಯಲ್ಲಿ ಸಾಕ್ಷಿಯಾಗಲಿದ್ದಾರೆ. https://ainlivenews.com/asha-workers-demand-to-act-during-the-election/ ಇನ್ನು ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ್ ವಾದ್ರಾ ಕರೆಸಲು ತೀರ್ಮಾನ ಮಾಡಲಾಗಿದೆ.ಮೈಸೂರು,ಚಿಕ್ಕಬಳ್ಳಾಪುರ,ಕೋಲಾರ,ಚಿತ್ರದುರ್ಗ,ದಾವಣಗೆರೆಯಲ್ಲಿ ಸಮಾವೇಶ ಜೊತೆಗೆ ಬೃಹತ್ ರೋಡ್ ಶೋ ನಡೆಸಲು ಚಿಂತಿಸಲಾಗಿದೆ.ಇನ್ನು ಕೆಲ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪ್ರಚಾರ ನಡೆಸಲು ತೀರ್ಮಾನ ಮಾಡಿದರೆ,ಇನ್ನು ಕೆಲ ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ಮಾಡಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಇನ್ನು…

Read More

ಬೆಂಗಳೂರು: ಸ್ವಾಭಿಮಾನದ ಕಹಳೆಯೂದಿ ಮಂಡ್ಯದ ಜನರ ಮನಸ್ಸು ಹೃದಯ ಗೆದ್ದಿದ್ದ ಸಂಸದೆ ಸುಮಲತಾ ಕೊನೆಗೂ ಕಮಲ ಮುಡಿದಿದ್ದಾರೆ. ಘಟಾನುಗಟಿ ನಾಯಕರು ಮಂಡ್ಯದ ಗೌಡ್ತಿಯನ್ನ ಬಿಜೆಪಿಗೆ ಬರಮಾಡಿಕೊಂಡ್ರು. ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಅಖಾಡವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿನಾಯಕರು ಡಿಕರ ಬ್ರದರ್ಸ್ ಗೆ ಖೆಡ್ಡಾ ತೋಡಲು ಮಾಜಿ ಸಚಿವ ಅಶ್ವಥ್ ನಾರಾಯಣ ಮನೆಯಲ್ಲಿ ಸಭೆ ನಡೆಸಿ ರಣಕಹಳೆ ಮೊಳಗಿಸಿದ್ದಾರೆ, ಡಿಕೆ ನೋಟು, ಡಾಕ್ಟರ್ ಗೆ ಓಟು ಅನ್ನೋ ದಾಳ ಉರುಳಿಸಿ ಗೇಮ್ ಪ್ಲಾನ್ ಶುರುಮಾಡಿದ್ದಾರೆ…. 2019 ರ ಲೋಕಸಭಾ ಮಂಡ್ಯ ಅಖಾಡದಲ್ಲಿ ಸ್ವಾಭಿಮಾಮದ ಕಹಳೆಯೂದಿ ಸಕ್ಕರೆ ನಾಡಿನ‌ ಅಕ್ಕರೆಯ ಸಂಸದೆಯಾಗಿದ್ದ ಸಂಸದೆ ಸುಮಲತಾ. ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರು ಆ ಮೈತ್ರಿ ಧರ್ಮದ ಹಿನ್ನೆಲೆ ಮಂಡ್ಯದ ಗೌಡ್ತಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಮೊನ್ನೆ ಮಂಡ್ಯದಲ್ಲಿ ಸಮಾವೇಶ ನಡೆಸಿ ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದ ಸುಮಲತಾ ಇಂದು ಬಿಜೆಪಿ ಕಛೇರಿ ಯಲ್ಲಿ ಘಟಾನುಘಟಿ ನಾಯಕಾರದ ಯಡಿಯೂರಪ್ಪ, ವಿಜಯೇಂದ್ರ‌, ಅಶೋಕ, ಸಿಟಿ…

Read More

ಬೆಂಗಳೂರು: ಲೋಕ ಸಮರಕ್ಕೆ ಕೌಂಟ್ ಡೌನ್ ಶುರುವಾಗಿದ್ದು  ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಪೂರೈಸಬೇಕು ಎಂದು ಆಶಾ ಕಾರ್ಯಕರ್ತೆಯರು ಬೇಡಿಕೆ ಇಟ್ಟಿದ್ದಾರೆ ಚುನಾವಣೆ ದಿನ ಚುನಾವಣಾ ಕೇಂದ್ರದ ಬಳಿ ಕಾರ್ಯನಿರ್ವಹಿಸಲು ಆಶಾ ಕಾರ್ಯಕರ್ತೆಯರಿಗೆ ಸೂಚನೆ ಈ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಬೇಡಿಕೆಗಳನ್ನ ಇಟ್ಟಿರುವ ಆಶಾ ಕಾರ್ಯಕರ್ತೆಯರು https://ainlivenews.com/a1-accused-who-planned-the-cafe-blast-arrested-nia-clarification/ ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು…!? ಸರಿಯಾದ ಸಮಯದಲ್ಲಿ ನಿಗದಿತ ವೇತನ ನೀಡಬೇಕು, ಕಳೆದ ಬಾರಿಯ ಗೌರವಧನವನ್ನ ಆದಷ್ಟು ಬೇಗ ಆಶಾಗಳಿಗೆ ತಲುಪಿಸಬೇಕು 700ರೂ ಇರುವ ಗೌರವಧನವನ್ನ 1000ರೂಪಾಯಿಗೆ ಹೆಚ್ಚಿಸಬೇಕು ಆಶಾ ಕಾರ್ಯಕರ್ತೆಯರಿಗೆ ಸ್ಥಳಿಯ ಎಲೆಕ್ಷನ್ ಬೂತ್ ಗಳಲ್ಲಿ ಕೆಲಸ ನಿಯೋಜನೆ ಮಾಡಬೇಕು ಬೇರೆ ಊರೂ ಅಥವಾ ಜಿಲ್ಲೆಗಳಲ್ಲಿ ನಿಯೋಜನೆ ಮಾಡಬಾರದು ಆಶಾ ಕಾರ್ಯಕರ್ತೆಯರ ಓಡಾಟಕ್ಕೆ ಬಸ್ ಅಥವಾ ಇತರೆ ವಾಹನಗಳ ಸೌಲಭ್ಯ ಒದಗಿಸಬೇಕು ಉಚಿತ ಆಹಾರ, ನೀರು ಪೂರೈಕೆ ಮಾಡಬೇಕು ಎಂದು ಡಿಮ್ಯಾಮಡ್‌ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಏನ್‌ ಕ್ರಮ ವಹಿಸುತ್ತೆ ಕಾದು ನೋಡಬೇಕಿದೆ.

Read More

ಬೆಂಗಳೂರು: ನಗರದ  ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ಔಟ್ ಬ್ರೇಕ್..!? ಸರಾಸರಿ 47 ವೈದ್ಯರಿಗೆ ಕಾಲರಾ ಅಟ್ಯಾಕ್..!? ಕಾಲರಾ ಬಗ್ಗೆ ಕನ್ಫರ್ಮ್ ಇಲ್ಲ ಅಂದ್ರು ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿರುವ ವೈದ್ಯರು‌ https://ainlivenews.com/what-was-shivakumars-contribution-to-ramanagara/ ಐಸಿಯು ನಲ್ಲಿ 4 ವೈದ್ಯರು ಅಡ್ಮಿಟ್ ಇನ್ನುಳಿದ 15 ವೈದ್ಯರು H ಬ್ಲಾಕ್ ನಲ್ಲಿ ದಾಖಲು 28 ವೈದ್ಯಕೀಯ ವಿಧ್ಯಾರ್ಥಿಗಳು ಟ್ರಾಮಾ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಅಕ್ಯೂಟ್ ಗಾಸ್ಟ್ರೋ ಎಂಟರ್ಐಟಿಸ್ (ತೀವ್ರತರವಾದ ಹೊಟ್ಟೆ ನೋವು) ಬಳಲುತ್ತಿರೋ ವೈದ್ಯರು ಪ್ರಾಥಮಿಕ ಮಾಹಿತಿಯಿಂದ ದೃಡ ಪಟ್ಟಿರೋದು ಹಾಸ್ಟೆಲ್ ಅವ್ಯವಸ್ಥೆಯಿಂದ ಕಾಲರಾ ಹರಡಿರುವ ಶಂಕೆ ಹಾಸ್ಟೆಲ್ ನಲ್ಲಿ ಕನಿಷ್ಠ ಸ್ವಚ್ಛತೆ ಇಲ್ಲದ ಬಗ್ಗೆ ಹಲವು ಬಾರಿ ದೂರು ನೀಡಿದ್ದ ವೈದ್ಯರು ಸ್ವಚ್ಛತೆ ಬೇಕು ಅಂದ್ರೆ ಹಾಸ್ಟೆಲ್ ಬಿಟ್ಟು ಹೋಗಿ ಎಂಬ ವಾರ್ಡನ್ ದರ್ಪ ನಿಮ್ಮ ಸ್ಟೈಫೆಂಡ್ ಹಣದಲ್ಲಿ ಬದುಕಿ ಎಂದು ವಾರ್ಡನ್ ಧಿಮಾಕು ಕುಡಿಯುವ ನೀರು ಕೂಡ ಕೊಳಕು ಹಣಕೊಟ್ಟು…

Read More

ಇತ್ತೀಚೆಗಷ್ಟೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಯುವ ವೇಗಿ ಮಯಾಂಕ್‌ ಯಾದವ್‌ (Mayank Yadav) ಅಮೋಘ ಸಾಧನೆ ಮಾಡಿದ್ದಾರೆ. ಇಡೀ ಕ್ರಿಕೆಟ್‌ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಅತೀ ವೇಗದ ಬೌಲರ್ (Fastest Bowlers) ಎನಿಸಿಕೊಂಡಿದ್ದಾರೆ. ಮಗನ ಸಾಧನೆಯನ್ನು ಕಂಡ ತಾಯಿ ತಮ್ಮ ಖುಷಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಯಾಂಕ್‌ ಯಾದವ್‌ ಅವರ ಫಿಟ್‌ನೆಸ್‌ (Fitness) ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮಯಾಂಕ್‌ ಅವರ ತಾಯಿ ಮಮತಾ ಯಾದವ್‌, ಕಳೆದ 2 ವರ್ಷಗಳಿಂದ ನನ್ನ ಮಗ ಸಸ್ಯಾಹಾರಿಯಾಗಿ ಬದಲಾಗಿದ್ದಾನೆ. ಅದಕ್ಕೂ ಮುನ್ನ ಮಾಂಸಾಹಾರ ಸೇವನೆ ಮಾಡುತ್ತಿದ್ದ. ಪ್ರತಿದಿನ ಡಯಟ್‌ ಚಾರ್ಟ್‌ ಆಧಾರದಲ್ಲಿ ಏನು ಮಾಡಬೇಕು ಅಂತ ಅವನೇ ನಮಗೆ ಹೇಳುತ್ತಾನೆ. ಅವನು ಕೇಳಿದ್ದನ್ನ ನಾವು ಮಾಡಿಕೊಡ್ತೇವೆ. ಮಾಂಸಾಹಾರ ಸೇವಿಸುತ್ತಿದ್ದಾಗ ದಾಲ್, ರೊಟ್ಟಿ, ಅನ್ನ,…

Read More

ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಶುಕ್ರವಾರ (ಇಂದು) ಸೋಮನಾಥ ದೇವಸ್ಥಾನಕ್ಕೆ (Somnath Temple) ಭೇಟಿ ನೀಡಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ಕೈಮುಗಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಭಕ್ತಿಯಿಂದ ಶಿವನ ಶ್ಲೋಕ ಪಠಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಈ ವಿಶಿಷ್ಟ ಕ್ಷಣದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮುಂಬೈ (Mumbai Indians) ತಂಡದ ಅಭಿಮಾನಿಗಳು ಪಾಂಡ್ಯರನ್ನ ಟ್ರೋಲಿಗೆಳೆದಿದ್ದಾರೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2024) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುಜರಾತ್‌ ಟೈಟಾನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ (SRH) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಪಂದಗಳಲ್ಲೂ ಸೋತ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ…

Read More

ಬೆಂಗಳೂರು: ರಾಮೇಶ್ವರಂ ಕೆಫೆ ಪ್ರಕರಣಕ್ಕೆ (Rameshwaram Cafe Blast) ಸ್ಫೋಟಕ ಟ್ಬಿಸ್ಟ್ ಸಿಕ್ಕಿದ್ದು, ಕೇಸ್‌ನಲ್ಲಿ ಈಗಾಗಲೇ ಇಬ್ಬರ ಬಂಧನ ಮಾಡಲಾಗಿದೆ. ಆಶ್ಚರ್ಯವಾದರೂ ಇದು ನಿಜವಾದ ಸಂಗತಿ. https://ainlivenews.com/araga-gyanendra-clarified-about-nia-arresting-a-bjp-worker/ ಶಿವಮೊಗ್ಗದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ (Shivamogga Trial Blast) ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ ಮಾಝ್‌ ಮುನೀರ್‌ನನ್ನೇ (Maaz Muneer) ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮೊದಲ ಆರೋಪಿಯನ್ನಾಗಿ ಮಾಡಿದೆ. ಜೈಲು ಸೇರುವ ಮೊದಲೇ ಕೆಲವೊಂದು ಕಡೆ ಸ್ಫೋಟಕ್ಕೆ ಪ್ಲ್ಯಾನ್‌ ಮಾಡಿದ ಹಿನ್ನೆಲೆಯಲ್ಲಿ ಆತನನ್ನೇ ಎ1 ಆರೋಪಿಯನ್ನಾಗಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್‌ ಮುನೀರ್‌ನನ್ನು ಎನ್‌ಐಎ  ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್‌ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಎರಡು ಮತ್ತು…

Read More

ಕನಕಪುರ:- ಆ ಮುನಿರತ್ನ ತರ ನಾನು ಹೇಡಿಯಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಒಂದು ಕಾಲದಲ್ಲಿ ನಮ್ಮ ಮಿತ್ರರಾಗಿದ್ದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರು ಹೇಡಿಯಂತೆ ರೀತಿಯಲ್ಲಿ ಮನೆಯೊಳಗಿದ್ದ ವೇಳೆ ಅವರಿಗೆ ರಕ್ಷಣೆ ಕೊಟ್ಟಿದ್ದು ಇದೇ ಡಿ.ಕೆ.ಸುರೇಶ್ ಎಂಬುದನ್ನು ಮರೆತು ಇಂದು ಕೊರೋನಾ ಸಂದರ್ಭದಲ್ಲಿ ನಾನು ಮಾಡಿದ ಕಾರ್ಯವನ್ನು ಗೇಲಿ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು. https://ainlivenews.com/bjp-manifesto-release-in-another-week-rajnath-singh/#google_vignette ರಾಜರಾಜೇಶ್ವರಿ ನಗರದ ಜನತೆಗೆ ಯಾರು ಹೇಡಿ-ಕೇಡಿ ಎಂದು ಗೊತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ಲಾಕ್ ಡೌನ್ ಮಾಡಿದಾಗ ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿರುವುದನ್ನು ಕಂಡ ನಾನು ಮತ್ತು ಶಿವಕುಮಾರ್ ರೈತರ ಬೆಳೆಗಳನ್ನು ಖರೀದಿ ಮಾಡಿ ಜನತೆಗೆ ಹಂಚುವ ಕೆಲಸ ಮಾಡಿದ್ದು ನನ್ನ ಕ್ಷೇತ್ರದ ಜನರಿಗೆ ನನ್ನ ಕೈಲಾದಷ್ಟು ಸೇವೆ ಮಾಡುವ ಉದ್ದೇಶವೇ ಹೊರತು ಯಾರನ್ನು ಮೆಚ್ಚಿಸಲು ಅಲ್ಲ ಎಂದು ತಿರುಗೇಟು ನೀಡಿದರು. ತೆರಿಗೆ…

Read More

ನವದೆಹಲಿ:- ಏಳೆಂಟು ದಿನದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇನ್ನು ಏಳೆಂಟು ದಿನದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಈಗಾಗಲೇ ಬಹುತೇಕ ಕೆಲಸ ಮುಗಿದಿದ್ದು ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಪ್ರಣಾಳಿಕೆ ಜಾರಿಗೆ ಯೋಗ್ಯವಾಗಿರಬೇಕು, ಭರವಸೆ ನೀಡಿದ ಮೇಲೆ ಈಡೇರಿಸುವಂತಿರಬೇಕು ಆ ದೃಷ್ಟಿಕೋನದಲ್ಲಿ ನಾವು ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. https://ainlivenews.com/suryakumar-entered-the-ipl-with-complete-fitness/ ಪ್ರಣಾಳಿಕೆಯಲ್ಲಿ ಏನೆಲ್ಲ ಅಂಶಗಳಿದೆ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಸಣ್ಣದಾದ ಸುಳಿವು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಣಾಳಿಕೆಯಲ್ಲಿ ಏನಿದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಒಂದು ದೇಶ ಒಂದು ಚುನಾವಣೆ ನಡೆಯಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ಬಹಳಷ್ಟು ಜನರ ಇದರ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಣಾಳಿಕೆಯಲ್ಲಿ ಒಂದು ದೇಶ ಒಂದು ಚುನಾವಣೆ ಉಲ್ಲೇಖವಿರುವ ಸುಳಿವು ನೀಡಿದ್ದಾರೆ.

Read More

ಸೂರ್ಯಕುಮಾರ್ ಯಾದವ್ ಅವರು ಸಂಪೂರ್ಣ ಫಿಟ್​ನೆಸ್​ನೊಂದಿಗೆ IPL ಗೆ ಮರಳಿದ್ದಾರೆ. ಅಲ್ಲದೆ ಶುಕ್ರವಾರ ಮುಂಬೈ ಇಂಡಿಯನ್ಸ್ ಬಳಗವನ್ನು ಸೇರಿಕೊಂಡಿದ್ದಾರೆ. https://ainlivenews.com/a-lorry-collided-with-an-election-check-post-a-missed-tragedy/ ಶುಕ್ರವಾರ ಮುಂಬೈ ಇಂಡಿಯನ್ಸ್ ಕ್ಯಾಂಪ್ ಸೇರಿರುವ ಸೂರ್ಯಕುಮಾರ್ ಅದೇ ದಿನ ಅಭ್ಯಾಸಕ್ಕೂ ಇಳಿದಿದ್ದರು. ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು ಅತ್ತ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರ ಆಗಮನ, ಹೊಸ ಬಲವನ್ನು ನೀಡಲಿದೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲೂ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದೀಗ ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಸೂರ್ಯಕುಮಾರ್ ಯಾದವ್ ಅವರ ಆಗಮನವು ಮುಂಬೈ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಇನ್ಮುಂದೆ ಬಿರುಸಿನ ಬ್ಯಾಟಿಂಗ್ ನಿರೀಕ್ಷಿಸಬಹುದು. ಮುಂಬೈ ಇಂಡಿಯನ್ಸ್ ಪರ ಇದುವರೆಗೆ 85 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 2688 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 20 ಅರ್ಧಶತಕಗಳನ್ನು…

Read More