Author: AIN Author

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯ ಇಬ್ಬರು ವಿದ್ಯಾರ್ಥಿನಿಯರ ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ. ಸರಾಸರಿ 47 ವೈದ್ಯರಿಗೆ ಕಾಲರಾ ಅಟ್ಯಾಕ್ ಆಗಿರುವ ಬಗ್ಗೆ ಸುದ್ದಿಯಾಗಿತ್ತು. ವಿದ್ಯಾರ್ಥಿಗಳು ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಐಸಿಯು ನಲ್ಲಿ 4 ಜನ ಸಂಶೋಧನಾ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು H ಬ್ಲಾಕ್ ನಲ್ಲಿ ದಾಖಲು ಮಾಡಲಾಗಿದೆ. ಹಾಸ್ಟೆಲ್ ಅವ್ಯವಸ್ಥೆಯಿಂದ ಕಾಲರಾ ಹರಡಿರುವ ಶಂಕೆ ವ್ಯಕ್ತವಾಗಿದೆ. https://ainlivenews.com/let-bangalore-director-kempegowdas-movie-come-to-the-screen-who-is-directing/ ಸದ್ಯ ಇಬ್ಬರು ವಿದ್ಯಾರ್ಥಿನಿಗೆ ಕಾಲರಾ ಬಂದಿರುವುದು ದೃಢವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ 47 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ  26 ವರ್ಷದ ಫ್ರಫೂಲ್ಲ ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಆಗಿದೆ. ಬ್ಲಡ್ ಸ್ಯಾಂಪಲ್ ನಲ್ಲಿ ಕಾಲರಾ ಬಂದಿರುವುದು ದೃಢವಾಗಿದೆ. ಮಿಕ್ಕ   46 ಸಂಶೋಧನಾ ವಿದ್ಯಾರ್ಥಿನಿಯರ ಟೆಸ್ಟ್ ರಿಪೋರ್ಟ್ ಇನ್ನು ಬರಬೇಕಷ್ಟೇ. ಕಲ್ಚರ್ ರಿಪೋರ್ಟ್ ಇನ್ನು ಮೂರು ದಿನದಲ್ಲಿ ಬರುವ ಸಾಧ್ಯತೆ ಇದ್ದು, ಬಂದನಂತರ…

Read More

ಶಿವಮೊಗ್ಗ: ನಮ್ಮ ಹಿಂದೂ ಹುಡುಗರು ಕೊಡುವ ದಾಖಲಾತಿ ಪೋರ್ಜರಿ ಮಾಡಿ ಅವರ ಹೆಸರಿನಲ್ಲಿ ಇನ್ನೊಂದು ಸಿಮ್ (Sim) ಖರೀದಿ ಮಾಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ (BY Raghavendra) ತಿಳಿಸಿದ್ದಾರೆ. ಬಿಜೆಪಿ ಸಂಸ್ಥಾಪನಾ ದಿನ ಹಿನ್ನೆಲೆ ಶಿವಮೊಗ್ಗ ನಗರದ ಹಲವು ಬಿಜೆಪಿ ಬೂತ್‌ಗಳಿಗೆ ಭೇಟಿ ನೀಡಿದ ಬಳಿಕ ಜೊತೆ ಮಾತನಾಡಿದರು.  ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಎನ್‌ಐಎ (NIA) ತೀರ್ಥಹಳ್ಳಿಯ (Thirthahalli) ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, https://ainlivenews.com/let-bangalore-director-kempegowdas-movie-come-to-the-screen-who-is-directing/#google_vignette ತೀರ್ಥಹಳ್ಳಿ ಬಿಜೆಪಿ  (BJP) ಕಾರ್ಯಕರ್ತನನ್ನು ಎನ್‌ಐಎ ತಂಡ ತನಿಖೆ ವಿಚಾರಣೆಗೆ ಕರೆದೊಯ್ದು 24 ಗಂಟೆಯಲ್ಲಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಕರ್ತ ವಾಪಸ್ ಬಂದ ನಂತರ ಆತಂಕದ ವಿಚಾರ ಗೊತ್ತಾಯಿತು. ಹಿಂದೂ ಹುಡುಗರು ಕೊಡುವ ದಾಖಲಾತಿಯನ್ನು ಪೋರ್ಜರಿ ಮಾಡಿ ಸಿಮ್ ಖರೀದಿಸಿ ಇಂತಹ ದುಷ್ಕೃತ್ಯ ಮಾಡುವ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಸಿಮ್ ಕೊಡುತ್ತಿದ್ದರು ಎಂದು ಅವರು ತಿಳಿಸಿದರು.

Read More

ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್(Bharat Sanchar Nigam Limited-BSNL)​​ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 558 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು ಖಾಲಿ ಇವೆ.ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. https://ainlivenews.com/let-bangalore-director-kempegowdas-movie-come-to-the-screen-who-is-directing/ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್​ಎನ್​ಎಲ್(BSNL)​ನ ಅಧಿಕೃತ ವೆಬ್​ಸೈಟ್​​ bsnl.co.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಹುದ್ದೆಯ ಮಾಹಿತಿ: ಟೆಲಿಕಾಂ ಆಪರೇಶನ್ಸ್​- 450 ಫೈನಾನ್ಸ್​- 84 ಸಿವಿಲ್- 13 ಎಲೆಕ್ಟ್ರಿಕಲ್- 11 ವಿದ್ಯಾರ್ಹತೆ: ಟೆಲಿಕಾಂ ಆಪರೇಶನ್ಸ್​- EEE/ECE/CSE/IT/ ಇನ್​​ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್​ ಫೈನಾನ್ಸ್​- ಸಿಎ, ಸಿಎಂಎ ಸಿವಿಲ್- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್ ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್ ವಯೋಮಿತಿ: ಭಾರತ್ ಸಂಚಾರ ನಿಗಮ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ,…

Read More

ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ಪಡೆಯದೇ ಅವಕಾಶ ವಂಚಿತರಾಗಿರುವ ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಹಿಳೆಯರಿಗೆ ಸಿಹಿ ಸುದ್ದಿ. ಮತ್ತೆ ಗ್ಯಾಸ್‌ ಸಂಪರ್ಕ ಪಡೆಯುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದ್ದು, ಗ್ರಾಹಕರು ನೇರವಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. https://ainlivenews.com/let-bangalore-director-kempegowdas-movie-come-to-the-screen-who-is-directing/ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಲಾಭ ಪಡೆಯಲು ಆನ್‌ಲೈನ್‌ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.ಈ ಯೋಜನೆಯಡಿ, ಫಲಾನುಭವಿಗಳಿಗೆ ಉಚಿತ ಎಲ್ ಪಿಜಿ ಮತ್ತು ಗ್ಯಾಸ್ ಸ್ಟವ್ ನೀಡಲಾಗುತ್ತದೆ. ನೀವು PMUYಗಾಗಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನಿಮ್ಮ ಪ್ರದೇಶದ ಹತ್ತಿರದ ಎಲ್‌ಪಿಜಿ ವಿತರಕರನ್ನು ಸಂಪರ್ಕಿಸಬೇಕಾಗುತ್ತದೆ. PMUY ಗಾಗಿ ಅರ್ಹತಾ ಮಾನದಂಡಗಳು ಹೀಗಿವೆ: * ಅರ್ಜಿದಾರರು ಮಹಿಳೆಯಾಗಿರಬೇಕು. * ಅರ್ಜಿದಾರರ ವಯೋಮಿತಿ 18 ವರ್ಷಕ್ಕಿಂತ ಹೆಚ್ಚಾಗಿರಬೇಕು. * ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆಯಿರಬೇಕು. * ಅರ್ಜಿದಾರರ…

Read More

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುದೀರ್ಘ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಹೈಕೋರ್ಟ್‌, ಸಿಬಿಐಗೆ ಪ್ರಶ್ನಿಸಿದೆ. ರಾಜ್ಯ ಸರಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿಗಳು ನ್ಯಾ ಕೆ. ಸೋಮಶೇಖರ್‌ ಮತ್ತು ನ್ಯಾ. ಉಮೇಶ್‌ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಂದವು. ಸಿಬಿಐ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಪೀಠ, ”ಸುದೀರ್ಘ ತನಿಖೆಗೆ ಕಾನೂನಿನಲ್ಲಿ ಅವಕಾಶವಿದೆಯೇ? ಸಿಆರ್‌ಪಿಸಿ ಅಡಿ ತನಿಖೆಗೆ ಕಾಲಮಿತಿ ಇಲ್ಲವೇ,” ಎಂದು ಪ್ರಶ್ನೆ ಮಾಡಿತು. ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಏ 18ಕ್ಕೆ ಮುಂದೂಡಿತು. https://ainlivenews.com/let-bangalore-director-kempegowdas-movie-come-to-the-screen-who-is-directing/ ಸಿಬಿಐ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನಕುಮಾರ್‌, ”ಸರಕಾರವು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಸರಕಾರದ ಕ್ರಮ ಕಾನೂನುಬಾಹಿರವಾಗಿದೆ. 2020ರ ಅಕ್ಟೋಬರ್ 10ರಿಂದಲೂ…

Read More

ಅಯೋಧ್ಯೆ: ಸುಮಾರು 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮಮಂದಿರಕ್ಕೆ (Ayodhya Ram Mandir) ಇದುವರೆಗೆ 1.5 ಕೋಟಿ ಭಕ್ತರು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ವಿದೇಶಿ ಭಕ್ತರೇ ಹೆಚ್ಚು.ಹೌದು. ರಾಮಮಂದಿರ ಉದ್ಘಾಟನೆಯಾದಾಗಿನಿಂದ ರಾಮಲಲ್ಲಾ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 1.5 ಕೋಟಿ ಭಕ್ತರು ರಾಮಮಂದಿರವನ್ನು ದರ್ಶನಕ್ಕಾಗಿ ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಭಕ್ತರೂ ಸೇರಿದ್ದಾರೆ. ಜನವರಿ 22 ರಂದು ಪ್ರಾಣಪ್ರ ತಿಷ್ಠಾ ಕಾರ್ಯಕ್ರಮದ ನಂತರ ಮರುದಿನ ಸಾಮಾನ್ಯ ಭಕ್ತರಿಗಾಗಿ ರಾಮಮಂದಿರವನ್ನು ತೆರೆಯಲಾಯಿತು. ಹೀಗಾಗಿ ರಾಮಲಲ್ಲಾ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸತೊಡಗಿದರು. ಪ್ರತಿದಿನ ಸರಾಸರಿ ಒಂದು ಲಕ್ಷ ಜನರು ರಾಮಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಮನವಮಿಯ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಾಮಮಂದಿರವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ರಾಮ ಮಂದಿರಕ್ಕೆ ಭೇಟಿ ನೀಡಿದ 1.5 ಕೋಟಿ ಭಕ್ತರಲ್ಲಿ ಸುಮಾರು ಒಂದು ಲಕ್ಷ ಭಕ್ತರು ವಿದೇಶಿಯರೂ ಆಗಿದ್ದಾರೆ. https://ainlivenews.com/let-bangalore-director-kempegowdas-movie-come-to-the-screen-who-is-directing/ ಶ್ರೀ ರಾಮನ ದರ್ಶನ ಪಡೆಯಲು ವಿದೇಶದಿಂದ ಜನ…

Read More

ಬೆಂಗಳೂರು: ಯುಗಾದಿ, ರಂಜಾನ್​, ಬೇಸಿಗೆ ರಜೆ ಕಾರಣ ಮಕ್ಕಳ ಜೊತೆ ಪ್ರವಾಸ ಅಥವಾ ತಮ್ಮ ತಮ್ಮ ಊರಿಗೆ ತೆರಳಲು ಪೋಷಕರು ಯೋಚಿಸಿದ್ದಾರೆ. ಬಸ್ ಟಿಕೆಟ್ ಬುಕ್ ಮಾಡಲು ಮುಂದಾದರೆ ದರ ಏರಿಕೆಯ ಶಾಕ್ ಎದುರಾಗಿದೆ. ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಏರಿಕೆ ಮಾಡಿದ್ದಾರೆ. ಅದ್ರೆ ಇದೇ ಸಮಯಕ್ಕೆ ಕೆಎಸ್ ಆರ್ ಟಿ ಸಿ ಯಿಂದ ಹೆಚ್ಚುವರಿ ಬಸ್ ಬಿಟ್ಟಿರುವುದು ಜನರ ಮುಖದಲ್ಲಿ ಮಂದಹಾಸ ಉಂಟುಮಾಡಿದೆ.. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.. ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆಯಿದೆ ಅಂತ ಮನೆ ಕಡೆ ಹೊಗಲು ಸಜ್ಜಾದವರಿಗೆ ಖಾಸಗಿ ಬಸ್ ದರ  ಏರಿಕೆ ಶಾಕ್ ಎದುರಾಗಿದೆ.ಯುಗಾದಿ ರಜೆ ಬೆಲ್ಲವಾದರೆ ಖಾಸಗಿ ಬಸ್​ಗಳ ಪ್ರಯಾಣದ ದರ ಏರಿಕೆ ಪ್ರಯಾಣಿಕರಿಗೆ ಬೇವು ಆಗಿದೆ.ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತೆ. ಹೀಗಾಗಿ ಸೋಮವಾರ ರಜೆ ಹಾಕಿ ನಾಳೆಯೇ ಊರಿಗೆ ತೆರಳಲು ಜನರ ಪ್ಲಾನ್ ಮಾಡಿದ್ದಾರೆ. https://ainlivenews.com/let-bangalore-director-kempegowdas-movie-come-to-the-screen-who-is-directing/ ಇನ್ನೂ ಕೆಲವರು…

Read More

ಜೈಪುರ: ಹೊಸ ಅಧ್ಯಾಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿದರೂ ತನ್ನ ಹಳೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಆರ್‌ಸಿಬಿ ಈಗ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದೆ. ಅದೇನೇ ಮಾಡಿದರೂ ಸೋಲು ಮಾತ್ರ ಆರ್‌ಸಿಬಿಯ ಬೆಂಬಿಡದೆ ಕಾಡುತ್ತಿದ್ದು, ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಜಯದ ಹಳಿಗೆ ಮರಳುವ ಕಾತರದಲ್ಲಿದೆ. ಆದರೆ ರಾಯಲ್ಸ್‌ನ ತವರು ಜೈಪುರದಲ್ಲಿ ಪಂದ್ಯ ಗೆಲ್ಲುವುದು ತನ್ನ ಈ ವರೆಗಿನ ಪ್ರದರ್ಶನದಿಂದ ಅಸಾಧ್ಯ ಎಂಬ ಅರಿವು ಆರ್‌ಸಿಬಿಗೆ ಇದೆ. ಆರ್‌ಸಿಬಿಈವರೆಗೆ 4 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ತವರಿನ 2 ಪಂದ್ಯಗಳಲ್ಲೇ ಸೋತಿದ್ದು ತಂಡದ ಹೀನಾಯ ಸ್ಥಿತಿಗೆ ಹಿಡಿದ ಕೈಗನ್ನಡಿ, ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಇತರ ಯಾರೊಬ್ಬರೂ ಆರ್‌ಸಿಬಿ ಗೆಲ್ಲಬೇಕೆಂದು ಆಡುವಂತೆ ತೋರುತ್ತಿಲ್ಲ. ಫಾಫ್ ಡು ಪ್ಲೆಸಿ, ಮ್ಯಾಕ್ಸ್‌ವೆಲ್, ಗ್ರೀನ್ ಜೊತೆ ದೇಸಿ ಕ್ರಿಕೆಟ್ ತಾರೆ ಪಾಟೀದಾರ್ ಕೂಡಾ ವಿಫಲರಾಗುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಂಗ್ಲೆಂಡ್‌ನ ಪ್ರತಿಭೆ ವಿಲ್ ಜ್ಯಾಕ್ಸ್‌ರನ್ನು ಆಡಿಸಿದರೆ ಬ್ಯಾಟಿಂಗ್ ಜೊತೆ ಬೌಲಿಂಗ್ ವಿಭಾಗಕ್ಕೂ ನೆರವಾಗಬಹುದು ಎಂಬುದು ತಜ್ಞರ ಅಭಿಪ್ರಾಯ.…

Read More

ಮಂಗಳೂರು: ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ಕರಾವಳಿ ಭಾಗದಲ್ಲಿ ನಕ್ಸಲರ (Naxal) ಚಲನವಲನ ಹೆಚ್ಚಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದ (Kadaba) ಮನೆಗೆ 6 ಮಂದಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದ ಚೆರು ಗ್ರಾಮದ ಮನೆಗೆ ತಡರಾತ್ರಿ ಆರು ಮಂದಿ ಬಂದಿದ್ದಾರೆ.  ಸುಮಾರು ಎರಡು ಗಂಟೆಗಳ ಕಾಲ ಇದ್ದ 6 ಮಂದಿ ಮನೆಯಲ್ಲಿ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದ ಮಾಹಿತಿ ಲಭ್ಯವಾಗಿದೆ. https://ainlivenews.com/let-bangalore-director-kempegowdas-movie-come-to-the-screen-who-is-directing/ ಈ ವಿಚಾರ ತಿಳಿದ ಬೆನ್ನಲ್ಲೇ ನಕ್ಸಲ್‌ ನಿಗ್ರಹ ದಳ (ANF) ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದೆ. ವಾರದ ಹಿಂದೆ ಸುಬ್ರಹ್ಮಣ್ಯದ ಐನೆಕಿದು ಬಳಿ ನಕ್ಸಲರು ಪತ್ತೆಯಾಗಿದ್ದರು. ಮೋಸ್ಟ್ ವಾಂಟೆಡ್ ವಿಕ್ರಂ ಗೌಡ, ಲತಾ ಮುಂಡುಗಾರು ಇದ್ದ ತಂಡ ಕಡಬಕ್ಕೂ ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.  ಚುನಾವಣೆ ಹೊತ್ತಲ್ಲಿ ಪಶ್ಚಿಮ ಘಟ್ಟ ಭಾಗದಲ್ಲಿ ನಕ್ಸಲ್ ಚಲನವಲನ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

Read More

ಶಿವಮೊಗ್ಗ: ಬಿಜೆಪಿ  ಬಂಡಾಯ ನಾಯಕ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದು, ತಮ್ಮ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ  ಭಾವಚಿತ್ರ ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಇತ್ತೀಚೆಗೆ ಅವರು, ಮೋದಿಯವರು ವಿಶ್ವ ನಾಯಕ, ಭಾರತದ ಪ್ರಧಾನಮಂತ್ರಿ ಅದಕ್ಕೆ ಫೋಟೋ ಬಳಸಿಕೊಳ್ಳುತ್ತೇನೆ ಎಂದಿದ್ದರು. ಮೋದಿ ಭಾವಚಿತ್ರ ಬಳಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಈಶ್ವರಪ್ಪ ಅವರು ನ್ಯಾಯಾಲಯದಲ್ಲಿ ಕೆವಿಯಟ್ ಸಲ್ಲಿಸಿದ್ದು, ಭಾವಚಿತ್ರವನ್ನು ಬಳಸಿಕೊಳ್ಳುವುದನ್ನು ಕಾನೂನಾತ್ಮಕವಾಗಿ ತಡೆಯುವ ಯಾರಾದರೂ ಪ್ರಯತ್ನಿಸಿದರೆ ಅದಕ್ಕೆ ಹಿನ್ನಡೆಯಾಗಲಿದೆ ಎಂಬುದು ಅವರ ಲೆಕ್ಕಾಚಾರವಾಗಿದೆ. ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದು, https://ainlivenews.com/let-bangalore-director-kempegowdas-movie-come-to-the-screen-who-is-directing/ ಸಂವಿಧಾನದಲ್ಲಿ ಎಲ್ಲಾ ಭಾರತೀಯರು ಪ್ರಧಾನಿಯ ಭಾವಚಿತ್ರವನ್ನು ಬಳಸಿಕೊಳ್ಳಲು ಅವಕಾಶವಿದೆ.  ಈಶ್ವರಪ್ಪ ಅವರು, ಸಲ್ಲಿಸಿರುವ ಕೆವಿಯಟ್ ಅವಧಿ ಮೂರು ತಿಂಗಳಾಗಿರುತ್ತದೆ. ಅಷ್ಟರಲ್ಲಿ ಚುನಾವಣೆ ಮುಗಿದಿರುತ್ತದೆ. ಯಾರು ಕೂಡ ಇದರ ವಿರುದ್ಧ ತಡೆ ತರಲು ಬರುವುದಿಲ್ಲ ಎನ್ನುವುದು ಅವರ ಯೋಚನೆ. ಇದರಿಂದ ಮೋದಿ ಭಾವಚಿತ್ರ ಬಳಸಿಕೊಳ್ಳಲು ಈಶ್ವರಪ್ಪನವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

Read More