Author: AIN Author

ಬೆಂಗಳೂರು: ರಾಜ್ಯದಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಭೆ ಕರೆದು, ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಡಾ. ಸತೀಶ್ ಕುಮಾರ್ ಒತ್ತಾಯಿಸಿದರು. https://ainlivenews.com/exemption-from-election-duty-for-pharmacy-officers/ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷಗಳ ಕಾಲರಾ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದರೆ ಪ್ರತಿವರ್ಷ ಕ್ರಮವಾಗಿ 30, 40, 48 ಪ್ರಕರಣಗಳು ದಾಖಲಾಗುತ್ತಿದ್ದವು, ಆದರೆ ಈ ವರ್ಷ 109 ಕಾಲರಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 6-7 ಪ್ರಕರಣಗಳು ವರದಿಯಾಗಿವೆ ಎಂದರು. ಕುಡಿಯುವ ಉದ್ದೇಶಕ್ಕೆ ಶೇಖರಿಸಿರುವ ನೀರು ಕೊನೆಯ ಹಂತ ತಲುಪಿದೆ. ಪೈಪ್‌ಗಳನ್ನು ಸರಿಯಾಗಿ ನಿರ್ವಹಣೇ ಮಾಡದೇ ಇರುವುದು, ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್‌ ಸಮೀಪವೇ ಇರುವುದು, ಅವು ಒಡೆದಾಗ ಕೊಳಚೆ ನೀರು ಕುಡಿಯುವ ನೀರನ್ನು ಸೇರುತ್ತಿದೆ. ಕುಡಿಯುವ ನೀರಿನ ಸಂಗ್ರಹಗಾರದಲ್ಲಿ ಇರುವ ಸ್ವಚ್ಛತೆಯ…

Read More

ಬೆಂಗಳೂರು:- ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. https://ainlivenews.com/duster-car-caught-fire-on-madikeri-mangalore-highway/ ಈ ಮೂಲಕ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ನೀಡಿದ್ದ ಆದೇಶವನ್ನ ತಡೆಹಿಡಿದಿದೆ ಚುನಾವಣೆ ನಿಯಮದಲ್ಲಿ ವೈದ್ಯರು,‌ ನರ್ಸ್, ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿಯಿದೆ. ಆದರೂ ಬಿಬಿಎಂಪಿಯಿಂದ ಕಾನೂನುಬಾಹಿರ ಸೂಚನೆ ಎಂದು ಅರ್ಜಿದಾರರ ಪರ ವಕೀಲ ಬಿ.ಎಂ.ಸಂತೋಷ್ ವಾದಿಸಿದ್ದರು. ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸುವಾಗ ಕಾನೂನು ಪಾಲಿಸಿ ಎಂದು ಬಿಬಿಎಂಪಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

Read More

ಕೊಡಗು:- ಮಡಿಕೇರಿ ಸಮೀಪದ ತಾಳತ್ ಮನೆ ಸಮೀಪ ಹೆದ್ದಾರಿಯಲ್ಲಿಂದು ಮಧ್ಯಾಹ್ನ ತಾಂತ್ರಿಕ ದೋಷದಿಂದ ಡಸ್ಟರ್ ಕಾರಿನಲ್ಲಿ ಬೆಂಕಿ ಉಂಟಾಗಿ ಹೊತ್ತಿ ಉರಿದಿದೆ. https://ainlivenews.com/gods-chariot-overturned-out-of-control-missed-disaster/ ಮಂಗಳೂರು ಕಡೆಯಿಂದ ಮಡಿಕೇರಿಯತ್ತ ಬರುತ್ತಿದ್ದ ಡಸ್ಟರ್ ಕಾರಿನ ಇಂಜಿನ್ ನಲ್ಲಿ ತಾಂತ್ರಿಕ ದೋಷವುಂಟಾಗಿ ಬೆಂಕಿ ಆವರಿಸಿಕೊಂಡಿದೆ. ಅಗ್ನಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ದಹಿಸಿದೆ. ಬೆಂಕಿಯ ಜ್ವಾಲೆ ಪಕ್ಕದ ಕಾಡಿಗೆ ಹಬ್ಬಿದ್ದು, ಮಡಿಕೇರಿ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More

ಆನೇಕಲ್:- ವಾಹನಗಳು ಅಪಘಾತವಾಗೋದನ್ನ ನೋಡಿರ್ತೀವಿ.. ಇಲ್ಲಿ ದೇವರ ರಥವೊಂದು ಕೂಡ ಅಪಘಾತಕ್ಕೀಡಾಗಿದೆ.. https://ainlivenews.com/unity-for-strong-nation-building-joshi/ ಜಾತ್ರೆಗಾಗಿ ಎಳೆದು ತರುತ್ತಿದ್ದ ರಥ ಕಂಟ್ರೋಲ್ ತಪ್ಪಿ ಉರುಳಿಬಿದ್ದ ಘಟನೆ ಆನೇಕಲ್‌‌‌ನ ಹುಸ್ಕೂರು ಬಳಿ ನಡೆದಿದೆ. ಹುಸ್ಕೂರು ಮದ್ದೂರಮ್ಮ ಜಾತ್ರೆಗೆಂದು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ರಥವನ್ನ ಎತ್ತುಗಳು ಹಾಗೂ ಟ್ರಾಕ್ಟರ್ ಸಹಾಯದಿಂದ ಎಳೆದು ತರಲಾಗುತ್ತಿತ್ತು. ಈ ವೇಳೆ ಕಮ್ಮಸಂದ್ರದ ಹೈಪರ್ ಮಾರ್ಕೆಟ್‌ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 120 ಅಡಿ ಎತ್ತರದ ಈ ಬೃಹತ್ ತೇರು ಉರುಳಿ ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

Read More

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಯನ್ನು ಈ ಬಾರಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಯಾಗಿ ಎದುರಿಸುತ್ತಿದೆ. ಎರಡೂ ಪಕ್ಷದವರು ಒಂದೆಡೆ ಸೇರಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಅದೇ ರೀತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದು, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು. https://ainlivenews.com/contesting-as-a-non-party-candidate-condemning-the-insult-to-the-society-in-the-district/ ನಗರದಲ್ಲಿಂದು ನಡೆದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೂಡ ಬಿಜೆಪಿ ಮತ್ತು ಜೆಡಿಎಸ್​ ಸಮನ್ವಯ ಸಭೆ ಅವರು ಮಾತನಾಡಿದರು, ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ಸಲುವಾಗಿ ಜಾತ್ಯಾತೀತ ಜನತಾದಳ ಪಕ್ಷವು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ್ದು, ಇಂದು‌, ಜೆಡಿಎಸ್ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ಮಾಜಿ ಪ್ರಧಾನಮಂತ್ರಿ ಎಚ್​ಡಿ ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೆಲ್ಲರೂ ಬಿಜೆಪಿಯನ್ನು ಬೆಂಬಲಿಸಿ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಭರವಸೆ ನೀಡಿದರು ಎಂದಿದ್ದಾರೆ. ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿಮರದ, ಮಾಜಿ ಸಚಿವರಾದ…

Read More

ಹುಬ್ಬಳ್ಳಿ: ಸಬ್ ಕೆ ಸಾಥ್ ಎನ್ನುತ್ತಲೇ ಬಿಜೆಪಿಯವರು ಪ್ರಮುಖ ಸಮಾಜಗಳನ್ನು ಕಡೆಗಣಿಸಿದೆ. ಹಾಲುಮತ ಸಮಾಜಕ್ಕಾದ ಅವಮಾನ ಖಂಡಿಸಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ತಿಳಿಸಿದರು. https://ainlivenews.com/how-angry-is-the-congress-about-the-ram-mandir-modis-attack/ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16ರಂದು ಧಾರವಾಡ ಕಲಾಭವನದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ನುಡಿದರು. ರಾಜ್ಯದಲ್ಲಿ ಸುಮಾರು 90 ಲಕ್ಷ ಜನಸಂಖ್ಯೆ ಇರುವ ಕುರುಬ ಸಮಾಜಕ್ಕೆ ಬಿಜೆಪಿ ಒಂದು ಟಿಕೆಟ್ ನೀಡಿಲ್ಲ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿ ಬಿಜೆಪಿ ಅವಮಾನ ಮಾಡಿದೆ ಎಂದರು. ಕುರುಬರಿಗೆ ಎಸ್ ಟಿ ಸ್ಥಾನ ನೀಡಿಕೆಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಅನ್ಯಾಯ ಮಾಡಿತ್ತು. ಸಿದ್ಧರಾಮಯ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ಸೌಲಭ್ಯಕ್ಕೆ ಕೇಂದ್ರದಲ್ಲಿ ಯತ್ನಿಸಿ ಎಂದು ಮನವಿ ಮಾಡಿದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಂದಿಸದೆ ಅನ್ಯಾಯ ಮಾಡಿದ್ದಾರೆ. ಬಕೇಟ್ ಹಿಡಿಯುವವರಿಗೆ ಮಾತ್ರ ಬಿಜೆಪಿಯಲ್ಲಿ ಬೆಲೆ, ಸ್ಥಾನಮಾನಗಳಿವೆ. 30 ವರ್ಷಗಳಿಂದ ಬಿಜೆಪಿಗೆ…

Read More

ಅಜ್ಮೀರ್:- ರಾಮಮಂದಿರ ಉದ್ಘಾಟನೆಗೆ ಬಂದಿದ್ದ ಕಾಂಗ್ರೆಸ್​ ನಾಯಕರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್​ ಶ್ರೀರಾಮನನ್ನು ದ್ವೇಷಿಸುತ್ತದೆ. ರಾಮ ಮಂದಿರ ನಿರ್ಮಾಣದಿಂದ ಎಲ್ಲರಿಗೂ ಸಂತೋಷವಾಗಿದೆಯೇ, ಇಲ್ಲವೇ ನೀವೇ ಹೇಳಿ. ಆದರೆ ಕಾಂಗ್ರೆಸ್ ಮಾತ್ರ ರಾಮನನ್ನು ಎಷ್ಟು ದ್ವೇಷಿಸುತ್ತದೆ ಎಂದರೆ ಅವರು ಪ್ರಾಣಪ್ರತಿಷ್ಠೆಗೆ ಬರುವವರನ್ನು ವಿರೋಧಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ. https://ainlivenews.com/meeting-on-the-problems-of-gamanagatti-village/#google_vignette ಶ್ರೀರಾಮನಿಲ್ಲದ ಈ ದೇಶವನ್ನು ನೀವು ಊಹಿಸಬಲ್ಲಿರಾ? ನಮ್ಮ ದಿನನಿತ್ಯ ಆರಂಭವಾಗುವುದೇ ರಾಮನಿಂದ. ಕೊನೆಗೊಳ್ಳುವುದು ಕೂಡ ರಾಮನಿಂದ. ಆದರೆ ನಿಮಗೆ (ಕಾಂಗ್ರೆಸ್​) ಯಾಕೆ ಆ ರಾಮನ ಮೇಲೆ ಅಷ್ಟು ಕೋಪ? ಇದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ನಮ್ಮ ಮನೆಯಲ್ಲಿ ರಾಮನಿದ್ದಾನೆ. ಇನ್ನೇನು ಕೆಲ ದಿನಗಳಲ್ಲಿ ರಾಮನವಮಿ ಬರುತ್ತದೆ. ಪ್ರತಿಯೊಬ್ಬರು ಅದ್ಧೂರಿಯಾಗಿ ರಾಮನವಮಿ ಆಚರಿಸುತ್ತಾರೆ. ನೀವು ಎಷ್ಟು ಪ್ರತಿಭಟಿಸುತ್ತೀರಿ ನೋಡೋಣ ಎಂದು ವಾಗ್ದಾಳಿ ಮಾಡಿದ್ದಾರೆ. ಇನ್ನು ರಾಮ ಮಂದಿರ ನಿರ್ಮಾಣದಿಂದಾಗಿ ಇಡೀ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್​ ಆರೋಪ ವಿಚಾರವಾಗಿ ಮಾತನಾಡಿದ ಅವರು,…

Read More

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಗಾಮನಗಟ್ಟಿ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಸ್ಥಳೀಯರ ಜೊತೆಗೆಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕರಾದ ಅರವಿಂದ ಬೆಲ್ಲದ ಸಭೆ ನಡೆಸಿ ಹಲವಾರು ಬೇಡಿಕೆ ಹಾಗೂ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. https://ainlivenews.com/do-not-do-this-work-at-night-before-going-to-sleep/ ಮಂಜುನಾಥ ನಗರದಲ್ಲಿನ ಗೃಹ ಕಚೇರಿಯಲ್ಲಿ ಗಾಮನಗಟ್ಟಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಗ್ರಾಮಸ್ಥರ ಸಮಸ್ಯೆಗಳು, ಕುಂದುಕೊರತೆಗಳು ಮತ್ತು ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸವಿವರವಾಗಿ ಚರ್ಚಿಸಲಾಯಿತು..ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಹಿರಿಯರಾದ ಕರಿಯಪ್ಪ ಅವರಾಧಿ, ಸ್ಥಳೀಯರಾದ ಶೀತಲ ಗುರಣ್ಣವರ, ರಾಜು ಬೆಂಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Read More

ಕೆಲವೊಬ್ಬರು ರಾತ್ರಿ ಊಟ ಮಾಡಿದ ಬಳಿಕ ಬೇಗ ನಿದ್ದೆ ಬರಲು ವ್ಯಾಯಾಮ ಸೂಕ್ತ ಎಂದು ಭಾವಿಸುತ್ತಾರೆ. ರಾತ್ರಿಯಾದ ಮೇಲೆ ವ್ಯಾಯಾಮ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುವುದು ಕೆಲವರ ತಪ್ಪು ಕಲ್ಪನೆ. ವ್ಯಾಯಾಮದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಅಲ್ಲದೇ ಸ್ಟ್ರೆಸ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇಂಥ ಹಾರ್ಮೋನುಗಳು ಹಾಗೂ ಜಿಮ್ ನಲ್ಲಿರುವ ಬೆಳಕು ಮೆಲಟೋನಿನ್ ಅಂದರೆ ಸ್ಲೀಪ್ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತವೆ. https://ainlivenews.com/do-you-know-the-benefits-of-eating-peas-twice-a-week/#google_vignette ಹೀಗಾಗಿ ಮಲಗುವ 3 ಗಂಟೆ ಮುಂಚಿತವಾಗಿ ವ್ಯಾಯಾಮ ಮಾಡಬೇಕು. ಅಲ್ಲದೇ ಜಿಮ್ ನಿಂದ ಬಂದಾದ ಮೇಲೆ ಸ್ನಾನ ಮಾಡುವುದೂ ಸಹ ಒಳ್ಳೆಯ ಹವ್ಯಾಸವಾಗಿದೆ. ವ್ಯಾಯಾಮ ಎನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದು ನಿಮ್ಮ ದಿನಚರಿ ಸರಿಯಾಗಿದ್ದಾಗ ಮಾತ್ರ.

Read More

ಬಟಾಣಿಯನ್ನು ವಾರಕ್ಕೆರಡು ಸಲ ತಿನ್ನುತ್ತಾ ಬಂದ್ರೆ ಸಿಗುವ ಬೆನಿಫಿಟ್ ಗಳು ಹಾಗೂ ನಿಮಗೆ ಗೊತ್ತಿಲ್ಲದ ಬಟಾಣಿಯ ಕೆಲವು ವಿಶೇಷ ಆರೋಗ್ಯ ಪ್ರಯೋಜನಗಳನ್ನು ನೋಡೋಣ ಬನ್ನಿ https://ainlivenews.com/rr-v-s-rcb-rajasthan-win-the-toss-rcb-bat-first/ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಅನೇಕ ತರಕಾರಿಗಳಿಗೆ ಹೋಲಿಸಿದರೆ ಬಟಾಣಿಗಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿವೆ. ಇದರಿಂದ ರಕ್ತದಲ್ಲಿ ಸಕ್ಕರೆ ಹೆಚ್ಚುವ ಭಯವಿಲ್ಲ. ಬಟಾಣಿಯಲ್ಲಿ ನಾರಿನಂಶ ಹೇರಳವಾಗಿದೆ. ಪ್ರೋಟೀನ್ ಕೊರತೆ ನೀಗಿಸುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಸುಲಭವಾಗಿ ಸಿಗುವ ಧಾನ್ಯಗಳಲ್ಲಿ ಒಂದಾಗಿದೆ. ತ್ವಚೆಯಆರೋಗ್ಯಕ್ಕೆ ಬಟಾಣಿಯಲ್ಲಿ ಕೆಲವು ಪೋಷಕಾಂಶಗಳು ಇವೆ. ಇದು ತ್ವಚೆಯನ್ನು ಆರೋಗ್ಯಕರವಾಗಿರುಸುತ್ತದೆ. ಬಟಾಣಿ ಕಾಳು ಬಿ6, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ಉರಿಯೂತ ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಸ್ ನಿಂದ ಚರ್ಮಕ್ಕೆ ಹಾನಿ ಆಗದಂತೆ ತಡೆಯುತ್ತದೆ. ತ್ವಚೆಯಆರೋಗ್ಯಕ್ಕೆ ಬಟಾಣಿಯಲ್ಲಿ ಕೆಲವು ಪೋಷಕಾಂಶಗಳು ಇವೆ. ಇದು ತ್ವಚೆಯನ್ನು ಆರೋಗ್ಯಕರವಾಗಿರುಸುತ್ತದೆ. ಬಟಾಣಿ ಕಾಳು ಬಿ6, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಹೊಂದಿದೆ. ಈ…

Read More