Author: AIN Author

ಬಳ್ಳಾರಿ: ಬಳ್ಳಾರಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ನಾಗೇಂದ್ರ ಭಾಷಣ ಮಾಡಿದ್ದು, ಒಂದು ಸುಳ್ಳಿಗೆ ಒಂದು ಸತ್ಯಕ್ಕೆ ಚುನಾವಣೆಯಾಗಿದೆ. ಸುಳ್ಳಿಗೆ ಬಿಜೆಪಿ, ಸತ್ಯಕ್ಕೆ ಕಾಂಗ್ರೆಸ್, ಈ ಚುನಾವಣೆ ಬಹಳ ಪ್ರತಿಷ್ಠೆಯ ಚುನಾವಣೆ, ನಮ್ಮ ಗ್ಯಾರಂಟಿ ಬಗ್ಗೆ ಪ್ರಧಾನಿ ಕೂಡಾ ಹಾಸ್ಯ ಮಾಡಿದ್ರು, ಆದ್ರೇ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದು ಹೇಳಿದರು. ಇನ್ನೂ ಹನ್ನೆರಡನೇ ತಾರೀಖು ನಾಮಿನೇಷನ್ ಆದ ಮೇಲೆ ನಮ್ಮ ಆಟ ಶುರುವಾಗುತ್ತೆ, ಒಬ್ಬ ಆ್ಯಕ್ಟರ್, ಇನ್ನೊಬ್ಬ ವರ್ಕರ್ ನಡುವೆ ನಡೆಯುವ ಚುನಾವಣೆಯಾಗಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಸಾಕಷ್ಟು ಸುಳ್ಳು ಹೇಳ್ತಾರೆ, ಈ ಬಾರಿ ಯಾರೇ ಬಿಜೆಪಿ ಅಭ್ಯರ್ಥಿ ಆದ್ರೂ ಸೋಲಿಸೋದು ಗ್ಯಾರಂಟಿ, ಬಿಜೆಪಿ ಅವರು ಅಬ್ ಕಿ ಬಾರ್ ಚಾರ್ ಸೌ ಪಾರ್ ಅಂತಾರೆ, ಆದ್ರೇ ಅಬ್ ಕಿ ಬಾರ್ ಪಾರ್ಲಿಮೆಂಟ್ ಕಿ ಬಹರ್ ಆಗ್ತಾರೆ ಬಿಜೆಪಿ ಎಂದು ವ್ಯಂಗ್ಯವಾಡಿದ್ದು.

Read More

ಬಳ್ಳಾರಿ: ಲೋಕಸಭೆ ಬಳ್ಳಾರಿ ಅಭ್ಯರ್ಥಿ ಇ.ತುಕರಾಂ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಇಂದು ಕಾಂಗ್ರೇಸ್ ಅವರು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸ ಸೃಷ್ಟಿ ಮಾಡಿದವರು ಅಂದ್ರೆ ಅದು ಕಾಂಗ್ರೆಸ್, ಇತಿಹಾಸ ಮರೆತವರು, ಗೊತ್ತಿಲ್ಲದವರು ಅಂದ್ರೆ ಅದು ಬಿಜೆಪಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ ಎಂದು ಇ ತುಕಾರಾಂ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ್ಸಾ,‌ಇತಿಹಾಸವನ್ನ ಯಾಕೆ.? ನೆನಪು ಮಾಡುತ್ತೆವೆ ಅಂದ್ರೆ ಕಾಂಗ್ರೆಸ್ ಪಕ್ಷ ಮಾಡಿದ ಕೆಲಸಕ್ಕೆ ಜನ ಋಣ ತೀರಿಸ ಬೇಕು, ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು – ಸಮಬಾಳು ಅಂತಾ ಹೇಳುತ್ತೆ, ಆದ್ರೆ ಬಿಜೆಪಿ ಅವರು ಇದನ್ನ ವಿರೋಧ ಮಾಡುತ್ತಾರೆ ಎಂದು ಕಿಡಿಕಾರಿದರು.  

Read More

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅಪಪ್ರಚಾರದ ರಾಜಕೀಯ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ವಿರುದ್ದ ಅಪಪ್ರಚಾರ ಆರೋಪ ಬಂದಿದ್ದು, ಎಸ್. ಬಾಲರಾಜು ಮಣಿಸಲು ಸುಳ್ಳು ಹೇಳಿಕೆ ಪೋಸ್ಟರ್ ಗಳು ವೈರಲ್ ಆಗಿವೆ. ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಸಂಸದ ವಿ. ಶ್ರೀನಿವಾಸ ಪ್ರಸಾದ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆಂದು ಸುಳ್ಳು ಪೋಸ್ಟ್ ಕಿಡಿಗೇಡಿಗಳು ಹರಿಬಿಡುತ್ತಿದ್ದಾರೆ. ಹಿರಿಯ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಬಗ್ಗೆ ತಪ್ಪಾಗಿ ಮಾತನಾಡಿದರೆ  ದಲಿತರು ಅದನ್ನ ಸಹಿಸುವುದಿಲ್ಲ, ಬಿಜೆಪಿ ಗೆ ಮತ ನೀಡಲ್ಲ ಎಂದು ಕಿಡಿಗೇಡಿಗಳು ಬಿಜೆಪಿಯ ದಲಿತ ಮತಗಳನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿರುವ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಪೋಸ್ಟರ್ ವೈರಲ್ ಆಗಿವೆ. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಈ ಬಗ್ಗೆ ನವಾಜ್ ಹಾಗು ರವಿ ಎಂಬುವವರ ವಿರುದ್ದ ಯಳಂದೂರು, ಕೊಳ್ಳೇಗಾಲ ಪೊಲೀಸ್ ಠಾಣೆ  ಹಾಗು ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ನೀಡಲಾಗಿದೆ. ಇನ್ನೂ ಪೋಸ್ಟರ್ ಬೆನ್ನಲ್ಲೇ ನಾನು ಯಾವುದೇ ತರದ ಹೇಳಿಕೆ ನೀಡಿಲ್ಲ ಎಂದು ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು…

Read More

ಬಳ್ಳಾರಿ ವಿಜಯನಗರ ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತೀದೆ.ಬಿಜೆಪಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ನಿವಾಸದಲ್ಲಿ ೨೦ ಕ್ಕೂ ಹೆಚ್ಚು ಜೆ.ಡಿಎಸ್.ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಪಿ ಎಸ್ ಸೋಮಲಿಂಗನಗೌಡ ಅವರು ಮತ್ತು ಪದಾಧಿಕಾರಿಗಳಾದ ಬಂಡೆಗೌಡ ಬಳ್ಳಾರಿ. ಲಕ್ಷ್ಮಿಕಾಂತ್ ಗೌಡ ಜೋಳದರಾಶಿ, ವಾದಿರಾಜ ಶೆಟ್ಟರು. ಬಳ್ಳಾರಿ,ಹೊನ್ನರ ಸ್ವಾಮಿ ,ಹನುಮಂತಪ್ಪ ಚರಕುಂಟೆ. ಕೆ ಹಂಪನಗೌಡ ಬಳ್ಳಾರಿ, ಆರ್ ಬಿ ರುದ್ರೇಗೌಡ, ಆರ್ ಎಸ್ ಶಿವರುದ್ರಗೌಡ ಅವರು ಸೇರಿದಂತೆ ಎಂ ರಾಮನ ಗೌಡ್ರು,ಎ ರಾಜೇಗೌಡ. ಶಿವನಗೌಡ ಮೀನಹಳ್ಳಿ, ನಾರಾಯಣ ರೆಡ್ಡಿ ದಮ್ಮೂರು, ಹೇಮರೆಡ್ಡಿ ಮದಿರೆ, ಕೇದಾರ ಗೌಡ ಬಳ್ಳಾರಿ, ವಿಶ್ವನಾಥ ಸ್ವಾಮಿ ಕುರುಗೋಡು. ಅವರು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆಗೆ ವಿಧಾನಪರಿಷತ್ ಸದಸ್ಯರಾದ ವೈ.ಎಂ‌.ಸತೀಶ್. ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ಓಬಲೇಶ್, ಬಿಜೆಪಿ ಪಕ್ಷದ ಬಳ್ಳಾರಿ ಗ್ರಾಮಾಂತರ ಉಪಾಧ್ಯಕ್ಷರಾದ ವಿಕೆ ಬಸಪ್ಪ ಪಕ್ಷದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದ ಪೇಟೆಯ ಲ್ಲಿರುವ ವಿಠ್ಠಲ ಮಂದಿರದ ಹತ್ತಿರ ನಗರಸಭೆ ಬೋರವೆಲ್ ನಿಂದ ನೀರು ತರಲು ಹೋಗಿದ ಯುವತಿ ಮುಂಜಾನೆ 9 ರ ವೇಳೆ ವಿದ್ಯುತ್ ಪ್ರವಹಿಸಿ ಯುವತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ, ಅವರು ಬನಹಟ್ಟಿಯ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಪೂರದ ನಿವಾಸಿಗಳ ಶೃತಿ ಹಾಸಿಲಕರ,(30) ವಿದ್ಯುತ್ ಆಘಾತಕ್ಕೆ ಒಳಗಾದರು ಎಂದು ತಿಳಿದು ಬಂದಿದೆ, ರಬಕವಿ ಬನಹಟ್ಟಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮಹಿಳೆಗೆ ವಿದ್ಯುತ್ ಶಾಕ್‌ ಆಗಿದೆ. ವಿದ್ಯುತ್ ಪ್ರವಹಿಸಿ ಯುವತಿಯನ್ನು ಗಮನಿಸಿದ ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ, ನಗರಸಭೆ ವತಿಯಿಂದ ಚಿಕಿತ್ಸೆ ವೆಚ್ಚ  ಪಾವತಿಸಲಾಗುವುದು ಎಂದು ಪೌರಾಯುಕ್ತರು ಹೇಳಿದ್ದಾರೆ, ಪ್ರಕಾಶ ಕುಂಬಾರ  ಬಾಗಲಕೋಟೆ

Read More

ಬೆಂಗಳೂರು: ಬರ ಘೋಷಣೆಯನ್ನೇ ತಡ ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿಯಾಗಿ ಮೂರು ತಿಂಗಳು ತಡವಾಗಿ ಬರ ಘೋಷಣೆ ಮಾಡಿದೆ. ಈಗ ಹಿಂಗಾರು ಬರಗಾಲದ ಘೋಷಣೆಯನ್ನೂ ಮಾಡಿಲ್ಲ ಎಂದು ವಿಧಾನಸಭೆಯ ಪ್ರತಿಪ್ಷಕ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಮಾತನಾಡಿದ ಅವರು, ಸರ್ಕಾರ ಬರಗಾಲದ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದರು. ಈ ಕುರಿತು ಪತ್ರಿಕೆಗಳಲ್ಲೂ ಅನೇಕ ವರದಿಗಳು ಬಂದಿವೆ. ಆದರೆ ಬರವನ್ನು ಘೋಷಣೆ ಮಾಡಲು ಸರ್ಕಾರ ಮೂರು ತಿಂಗಳು ತೆಗೆದುಕೊಂಡಿದೆ. ಮಾಧ್ಯಮಗಳಲ್ಲಿ ವರದಿ ಬಂದಾಗ, ರೈತರು ಪ್ರತಿಭಟಿಸಿದಾಗಲೇ ಬರಗಾಲ ಘೋಷಿಸಿದ್ದರೆ ಕೇಂದ್ರ ಸರ್ಕಾರದ ತಂಡ ಬೇಗ ಬಂದು ಪರಿಶೀಲನೆ ಮಾಡುತ್ತಿತ್ತು. ಬರ ಘೋಷಣೆಯನ್ನೇ ತಡ ಮಾಡಿ ಈಗ ಕೇಂದ್ರದ ತಪ್ಪು ಎನ್ನುವ ರಾಜ್ಯ ಸರ್ಕಾರಕ್ಕೆ ಮಾನ ಇಲ್ಲ ಎಂದು ದೂರಿದರು. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಸಚಿವ ಕೃಷ್ಣ ಬೈರೇಗೌಡರು ಅಷ್ಟೊಂದು ಪ್ರತಿಭಾವಂತರಾಗಿದ್ದರೆ ಸಂಸದರಾಗಿ ಅವರೇ ಹೋಗಿ ಪ್ರಶ್ನೆ ಕೇಳಬಹುದಿತ್ತು. ಒಬ್ಬ ರೈತರಿಗೆ 25 ಸಾವಿರ ರೂ. ನೀಡುವ…

Read More

ಬೆಂಗಳೂರು: ಸೀರೆಯಿಂದ ಕುತ್ತಿಗೆ ಬಿಗಿದು ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಯಾಗಿರುವ ಘಟನೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇತ್ರಾವತಿ ಪತಿಯಿಂದ ಹತ್ಯೆಯಾದ ದುರ್ದೈವಿಯಾಗಿದ್ದು, ವೆಂಕಟೇಶ್‌ ಕೊಲೆ ಆರೋಪಿ ಆಗಿದ್ದಾನೆ. ಪತ್ನಿ ನೇತ್ರಾವತಿಯನ್ನು ಸೀರೆಯಿಂದ ಆಕೆಯ ಕುತ್ತಿಗೆ ಬಿಗಿದು ವೆಂಕಟೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ನಿನ್ನೆ ಶನಿವಾರ ರಾತ್ರಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದಾನೆ. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕಾಮಾಕ್ಷಿ ಪಾಳ್ಯ ಪೊಲೀ ಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. 

Read More

ಮುಂಬೈ: ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಜೇ ರಿಚರ್ಡ್‌ಸನ್ ಹಾಗೂ ಲಲಿತ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕ್ವೆನಾ ಮಫಾಕಾ ಬದಲಿಗೆ ಮೊಹಮ್ಮದ್ ನಬಿ, ಡೆವಾಲ್ಡ್ ಬ್ರೆವೀಸ್ ಬದಲಿಗೆ ರೊಮಾರಿಯೋ ಶೆಫರ್ಡ್ ಹಾಗೂ ನಮನ್ ಧೀರ್ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡಕೂಡಿಕೊಂಡಿದ್ದಾರೆ. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನೊಂದೆಡೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ 4 ಪಂದ್ಯಗಳಲ್ಲಿ ಒಂದು ಗೆಲುವು…

Read More

ನವದೆಹಲಿ: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪುಲ್ವಾಮಾ ದಾಳಿ (Pulwama Attack) ನಡೆದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ‌. ಇದು ಅತ್ಯಂತ ದುಃಖಕರ, ಆತಂಕಕಾರಿ ಹಾಗೂ ದೇಶ ವಿರೋಧಿ ಹೇಳಿಕೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ (Gaurav Bhatia) ಆರೋಪಿಸಿದ್ದಾರೆ. ಜಿ. ಪರಮೇಶ್ವರ್ (G.Parameshwar) ಹೇಳಿಕೆ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇಂದಿನ ಕಾಂಗ್ರೆಸ್‌ನ (Congress) ಪಾತ್ರ ಭಾರತ ವಿರೋಧಿ ಎಂಬುದು ನಂಬಿಕೆಗೆ ಮೀರಿದ್ದು. ಅವರ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬಾಲಾಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲೂ ಕಾಂಗ್ರೆಸ್, https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಎಸ್‌ಪಿ (SP) ಮತ್ತು ಆಮ್ ಆದ್ಮಿ (AAP) ಪಕ್ಷಗಳು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದವು, ದಾಳಿಗೆ ಇದಕ್ಕೆ ಸಾಕ್ಷಿ ಕೇಳಿದ್ದವು. ಈಗ ಜಿ.ಪರಮೇಶ್ವರ್ ಹೇಳಿಕೆಯಲ್ಲೂ ಅದೇ ಭಾರತ ವಿರೋಧಿ ಪಾತ್ರ ಎದ್ದು ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್‌ಗೆ ಅಂತಹ ನಿಲುವು…

Read More

ಬೆಂಗಳೂರು: ನೇಣು ಬಿಗಿದುಕೊಂಡು ರೌಡಿ ಶೀಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ದಿನ್ನೂರಿನಲ್ಲಿ ನಡೆದಿದೆ. ಅರುಣ್ ಅಲಿಯಾಸ್ ಚಿನ್ನಿ(28) ಆತ್ಮಹತ್ಯೆಗೆ ಶರಣಾದ ರೌಡಿ ಶೀಟರ್ ಆಗಿದ್ದು, 2019ರಲ್ಲಿ ಲೋಕನಾಥ್ ಎಂಬಾತನ ಕೊಲೆ ಪ್ರಕರಣದಲ್ಲಿ ಅರುಣ್‌ ಜೈಲುಪಾಲಾಗಿದ್ದ. ನಂತರ ಜಾಮೀನಿನ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಇತ್ತೀಚಿಗೆ ಅರುಣ್ ಮಾನಸಿಕ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರುಣ್‌ ರೂಮಿನ ಬಾಗಿಲು ತೆರೆಯದೇ ಇದ್ದಾಗ, ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ, ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆನೇಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More