Author: AIN Author

ಯಾದಗಿರಿ:- ಸಿಎಂ ಸ್ಥಾನದಿಂದ ಸಿದ್ದು ಇಳಿಸಿದರೆ ಸರ್ಕಾರ‌‌ ಉಳಿಯಲ್ಲ ಎಂದು ರಾಜುಗೌಡ ಹೇಳಿದ್ದಾರೆ. https://ainlivenews.com/cholera-anxiety-ways-to-prevent-it/ ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಧಮ್​ನಿಂದಲೇ ಗೆದ್ದಿದ್ದಾರೆ. ಕಾಂಗ್ರೆಸ್​ಗೆ ಇಷ್ಟು ಸೀಟು ಬಂದಿವೆ. ಸಿದ್ದರಾಮಯ್ಯ ಸಾಹೇಬರನ್ನ ಇಳಿಸಿದರೆ ಸರ್ಕಾರ‌‌ ಉಳಿಯಲ್ಲ. ಗೃಹಲಕ್ಷ್ಮೀ ಹಣ 3 ತಿಂಗಳಿಗೋ 6 ತಿಂಗಳಿಗೋ ಬರುತ್ತೆ. ನಾನು ಗೆದ್ರೆ ಸಿಎಂ ಸಾಹೇಬರ ಬಳಿ ಮಾತಾಡಿ ಹಾಕಿಸ್ತೇನೆ. ಕಾಂಗ್ರೆಸ್​ನವರು ಗೆದ್ರೆ ಸಿದ್ದರಾಮಯ್ಯರ ಮುಂದೆ ಮಾತಾಡಲ್ಲ. ಸಿದ್ದರಾಮಯ್ಯನವರು ಹೇ ಅಂದ್ರೆ ಅವರು ಸುಮ್ಮನಾಗುತ್ತಾರೆ. ನಾನಾದರೆ ಅಣ್ಣಾ ಅಂತ ಹೇಳಿ ಕೆಲಸವನ್ನು ಮಾಡಿಸುತ್ತೇನೆ ಎಂದರು.

Read More

ಕಾಲರಾ ಸಾಮಾನ್ಯವಾಗಿ ಕಲುಷಿತ ನೀರಿನಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ. ಕಾಲರಾ ತೀವ್ರ ಅತಿಸಾರ ಮತ್ತು ನಿರ್ಜಲೀಕರಣವನ್ನು ಉಂಟು ಮಾಡುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಕಾಲರಾ ಮಾರಣಾಂತಿಕವಾಗಬಹುದು. https://ainlivenews.com/if-you-see-this-warning-in-your-body-dont-ignore-it/ ಆಧುನಿಕ ಒಳಚರಂಡಿ ಮತ್ತು ನೀರಿನ ಸಂಸ್ಕರಣೆಯು ಆಧುನಿಕೀಕರಣಗೊಂಡ ದೇಶಗಳಲ್ಲಿ ಕಾಲರಾವನ್ನು ಬಹುತೇಕ ನಿರ್ಮೂಲನೆ ಮಾಡಿದೆ. ಆದರೆ ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಹೈಟಿಯಲ್ಲಿ ಕಾಲರಾ ಇನ್ನೂ ಅಸ್ತಿತ್ವದಲ್ಲಿದೆ. ಬಡತನ, ಯುದ್ಧ ಅಥವಾ ನೈಸರ್ಗಿಕ ವಿಪತ್ತುಗಳು ಸಾಕಷ್ಟು ನೈರ್ಮಲ್ಯವಿಲ್ಲದೆ ಕಿಕ್ಕಿರಿದ ಪರಿಸ್ಥಿತಿಗಳಲ್ಲಿ ಜನರು ವಾಸವಿದ್ದರೆ ಕಾಲರಾ ಸಾಂಕ್ರಾಮಿಕದ ಅಪಾಯವು ಹೆಚ್ಚು. ಕಾಲರಾ ಬ್ಯಾಕ್ಟೀರಿಯಂ (ವಿಬ್ರಿಯೊ ಕಾಲರಾ) ಗೆ ಒಡ್ಡಿಕೊಂಡ ಹೆಚ್ಚಿನ ಜನರು ಕೂಡಲೇ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಅಲ್ಲದೆ ಅವರು ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದಿರುವುದಿಲ್ಲ. ಆದರೆ ಅವರು ಏಳರಿಂದ 14 ದಿನಗಳವರೆಗೆ ತಮ್ಮ ಮಲದಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಚೆಲ್ಲುವ ಕಾರಣ, ಅವರು ಕಲುಷಿತ ನೀರಿನ ಮೂಲಕ ಇತರರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಕಾಲರಾ ಸೋಂಕಿನ ಲಕ್ಷಣಗಳು ಅತಿಸಾರ: ಕಾಲರಾ-ಸಂಬಂಧಿತ ಅತಿಸಾರವು ಇದ್ದಕ್ಕಿದ್ದಂತೆ ಬರುತ್ತದೆ. ತ್ವರಿತವಾಗಿ…

Read More

ಹೃದಯದಲ್ಲಿ ಯಾವುದೇ ಒಂದು ಸಮಸ್ಯೆ ಕಾಣಿಸಿಕೊಂಡಿದೆ ಎಂದರೆ, ಹೃದಯ ಅದಕ್ಕಿಂತಲೂ ಮುನ್ನ ಕೆಲ ಸಂಕೇತಗಳನ್ನು ನೀಡುತ್ತಲೇ ಇರುತ್ತದೆ, ಅವುಗಳ ಕುರಿತು ತಿಳಿದುಕೊಳ್ಳೋಣ https://ainlivenews.com/massive-operation-roughly-5-crore-60-lakh-undocumented-money-seized/ ನಿಮಗೆ ಹೃದಯಾಘಾತ, ಪರಿಧಮನಿಯ ಕಾಯಿಲೆ ಅಥವಾ ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಕಾಯಿಲೆಗಳ ಅಪಾಯವಿರಬಾರದು ಎಂದು ನೀವು ಬಯಸುತ್ತಿದ್ದರೆ, ಇಂದಿನಿಂದಲೇ ಹೃದಯದ ಆರೈಕೆಯನ್ನು ಪ್ರಾರಂಭಿಸುವುದು ಉತ್ತಮ, ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ ಹೃದಯಾಘಾತ ತಡೆಗಟ್ಟುವ ಮಾರ್ಗಗಳು :- >> ನಿಮ್ಮ ತೂಕವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ ಮತ್ತು ಅನಗತ್ಯ ಹೆಚ್ಚಾಗಲು ಬಿಡಬೇಡಿ >> ಬೊಜ್ಜು ಇರುವವರು ಮತ್ತು ನಿಯಮಿತ ವ್ಯಾಯಾಮಕ್ಕೆ ಗಮನ ಕೊಡುತ್ತಾರೆ >> ದೈನಂದಿನ ಆಹಾರದಲ್ಲಿ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ >> ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ, ಉಪ್ಪು ಸೇವನೆಯನ್ನು ಕಡಿಮೆ ಮಾಡಿ. >> ಹೆಚ್ಚು ಕಾಫಿ ಕುಡಿಯುವುದರಿಂದ ರಕ್ತದೊತ್ತಡವೂ ಹೆಚ್ಚುತ್ತದೆ ಅದು ಹೃದಯಕ್ಕೆ ಒಳ್ಳೆಯದಲ್ಲ. >> ಮಧುಮೇಹ ಹೊಂದಿರುವ ರೋಗಿಗಳಿಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚು. >> ವೈದ್ಯರ ಸಲಹೆ ಇಲ್ಲದೆ ಯಾವುದೇ…

Read More

ಬೆಂಗಳೂರು ಏ 7: ಉತ್ತರ ಲೋಕಸಭಾ ಕ್ಷೇತ್ರದ ಪ್ರೊ.ರಾಜೀವ್ ಗೌಡ ಅವರು ಪಾರ್ಲಿಮೆಂಟಿನಲ್ಲಿ ಸಮರ್ಥವಾಗಿ ನಾಡಿನ ಪರವಾಗಿ, ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತುತ್ತಾರೆ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನು ಆಡಿದರು. ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡರ ಪರವಾಗಿ ನಡೆದ ಬೂತ್ ಮುಖಂಡರು ಮತ್ತು ಬ್ಲಾಕ್ ಮುಖಂಡರುಗಳ ಬೃಹತ್ ಸಭೆಯನ್ನು ಹಾಗೂ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ನೀವು ಮತ ಹಾಕಲು ಕಾರಣಗಳೇ ಇಲ್ಲ. ಅವರು ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳು ಬಗ್ಗೆ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಲಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೇ ಗೋ-ಬ್ಯಾಕ್ ಎಂದು ಓಡಿಸಿದ್ದಾರೆ. ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಕಾರ್ಯಕರ್ತರೇ ಅವರನ್ನು ಗೋ ಬ್ಯಾಕ್ ಎಂದು ಕಳುಹಿಸಿದ್ದಾರೆ. ಆದ್ದರಿಂದ ಇವರಿಗೆ ಇಲ್ಲಿ ಅವರಿಗೆ ಮತಹಾಕಲು ಕಾರಣಗಳೇ ಇಲ್ಲ ಎಂದರು. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಜನರ…

Read More

ಬೆಂಗಳೂರು: ಕುಡಿಯುವ ನೀರು ಇರಬಹುದು, ಇವರ ಸಮಸ್ಯೆ ಕಷ್ಟ ಏನೇ ಇದ್ದರೂ ಸಹಾಯಕ್ಕೆ ಬರುವುದು ನಾವೇ ಹೊರತು ದೆಹಲಿಯಿಂದ ಯಾರೂ ಬರಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ (DK Suresh) ಪರವಾಗಿ ಡಿಕೆಶಿ ಇಂದು ಮತ ಬೇಟೆಗೆ ಇಳಿದರು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆಶಿ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಸಂಡೆ ಮತದಾರರ ಭೇಟಿಗೆ ಅಂತ ಬಂದಿದ್ದೇನೆ. ಸಹಾಯ ಕೇಳಿದ್ದೇನೆ. ನಿಮ್ಮ ಸಮಸ್ಯೆ ಕಷ್ಟ ಏನೇ ಇದ್ದರು ಸಹಾಯಕ್ಕೆ ಬರುವುದು ನಾವೇ. ದೆಹಲಿಯಿಂದ ಯಾರೂ ಬರಲ್ಲ ಎಂದರು. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಇವತ್ತು ಪಾಪ ಕುಮಾರಸ್ವಾಮಿ ನಾನು ಮಹದಾಯಿ ಮಾಡೇ ಮಾಡ್ತೀನಿ ಅಂತಿದ್ದಾರೆ. ಅಧಿಕಾರ ಅವರ ಕೈಯಲ್ಲಿ ಇತ್ತಲ್ಲ, ಅಧಿಕಾರ ಇದ್ದಾಗ ಏನು ಮಾಡೋಕೆ ಆಗಲಿಲ್ಲ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಬಿರಿಯಾನಿ ಕೊಟ್ಕೊಂಡು ಹೋಗ್ತಿದ್ದಾರೆ ಅಂತ…

Read More

ಬಳ್ಳಾರಿ: ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನ ಜಪ್ತಿ ಮಾಡಿದ್ದಾರೆ.  ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯೂವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಹಣ, ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಮುಂಬೈ: ಮುಂಬೈ ಇಂಡಿಯನ್ಸ್ ತಂಡ ಮೊದಲ 20 ಓವರ್‌ಗಳಲ್ಲಿ 234 ರನ್ ಗಳಿಸಿದೆ. ರೊಮಾರಿಯೊ ಶೆಫರ್ಡ್ ಕೊನೆಯ ಓವರ್‌ನಲ್ಲಿ 32 ರನ್ ಗಳಿಸಿದರೆ, ರೋಹಿತ್ ಶರ್ಮಾ 49 ರನ್, ಇಶಾನ್ ಕಿಶನ್ 42 ರನ್ ಮತ್ತು ಹಾರ್ದಿಕ್ ಪಾಂಡ್ಯ 39 ರನ್ ಗಳಿಸಿದರು. ಹೌದು  ರೋಹಿತ್ ಶರ್ಮಾ, ಇಶಾನ್ ಕಿಶನ್, ಟಿಮ್ ಡೇವಿಡ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 235 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ ಸವಾಲಿನ ಗುರಿ ನೀಡಿದೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲೇ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮೊದಲ 7 ಓವರ್‌ಗೆ…

Read More

ಹಾವೇರಿ: ಜನಪದ‌ ಕ್ರೀಡೆ ಹೋರಿ ಹಬ್ಬದಲ್ಲಿ ಸಿನಿಮಾ ನಟರಂತೆ ಸುತ್ತ ಮುತ್ತ ಹಳ್ಳಿಗಳಲ್ಲಿ ಹೆಸರು ಮಾಡಿದ್ದ ರಾಕ್‌ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ (Kobbari Hori) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ. ಹೋರಿ ಹಬ್ಬದ ಇತಿಹಾಸದಲ್ಲಿಯೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ರಾಕ್‌ ಸ್ಟಾರ್ ಹೋರಿಯನ್ನ ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರು ಸಾಕಿದ್ದರು. ರಾಕ್‌ ಸ್ಟಾರ್ ಹೋರಿಗೆ 25 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ರಾಕ್‌ ಸ್ಟಾರ್‌ ಹೋರಿಯನ್ನ ಮೀರಿಸುವ ಯಾವುದೇ ಹೋರಿ ಇರಲಿಲ್ಲ. ಎಲ್ಲೇ ಹೋದರೂ ಇದಕ್ಕೆ ಬಹುಮಾನ ಫಿಕ್ಸ್‌ ಆಗಿರುತ್ತಿತ್ತು. ರಾಕ್‌ ಸ್ಟಾರ್‌ ಹೋರಿ ಹಬ್ಬದಲ್ಲಿ ಭಾಗಹಿಸುತ್ತಿದೆ ಅಂದ್ರೆ ಸಾವಿರಾರು ಅಭಿಮಾನಿಗಳು ಇದರ ಆರ್ಭಟ ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಿದ್ದರು. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಕಾಲಾನಂತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಕ್‌ಸ್ಟಾರ್‌ ಕಳೆದ ಒಂದು ವರ್ಷದಿಂದ ಯಾವುದೇ ಹಬ್ಬದಲ್ಲಿಯೂ ಪಾಲ್ಗೊಂಡಿರಲಿಲ್ಲ. ಪಶುವೈದ್ಯರಿಂದ ನಿರಂತರವಾಗಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇತ್ತೀಚೆಗೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿ ರಾಕ್‌ ಸ್ಟಾರ್‌ ಹೋರಿಯ 25ನೇ…

Read More

ಬೆಂಗಳೂರು: ಬಿಸಲ ಝಳಕ್ಕೆ ಜನ ಬೆಂದು ಹೋಗ್ತಿರೋದು ಒಂದು ಕಡೆ ಆದ್ರೆ, ಸಿಲಿಕಾನ್ ಸಿಟಿಯಲ್ಲಿ ಸರಣಿ ಅಗ್ನಿ ಅವಘಡಗಳು ಸಂಭವಿಸ್ತಿದೆ.ಇಂದು ಮುಂಜಾನೆ ನಿದ್ರೆಯಲ್ಲಿದ್ದ ಚಾಮರಾಜಪೇಟೆ ಜನರು ಕೆಲ ಕಾಲ ಬೆಚ್ಚಿ ಬಿದ್ದಿದ್ದರು. ನೋಡನೋಡುತ್ತಿದ್ದಂತೆ ಇಡೀ ಏರಿಯಾವನ್ನ ದಟ್ಟ ಹೊಗೆ ಅವರಿಸಿತ್ತು. ರಾಜಧಾನಿ ಬೆಂಗಳೂರು ಇಂದು ಬೆಳಗ್ಗೆ ಮತ್ತೊಂದು ಅಗ್ನಿಅವಘಡಕ್ಕೆ ಸಾಕ್ಷಿಯಾಯ್ತು. ಯೆಸ್ ಬೆಸೀಗೆ ಬಂದಾಗಿನಿಂದ ರಾಜಧಾನಿ ಬೆಂಗಳೂರು ಒಂದಿಲ್ಲೊಂದು ಅಗ್ನಿ ಅವಘಡಕ್ಕೆ ಸಾಕ್ಷಿಯಾಗುತ್ತಿದೆ.  ಇಂತಹದೇ ದೊಡ್ಡ ಅಗ್ನಿ ಅವಘಡಕ್ಕೆ ಇಂದು ಮುಂಜಾನೆ ರಾಜಧಾನಿ ಬೆಂಗಳೂರು ಸಾಕ್ಷಿಯಾಯ್ತು ಚಾಮರಾಜಪೇಟೆಯ ಗವಿಪುರಂನಲ್ಲಿರುವ  ರಾಜೇಶ್ ಅಗರ್ವಾಲ್ ಎಂಬುವರ ಮಾಲೀಕತ್ವದ ಚೆರ್ರಿ ಏಜೇನ್ಸಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಟೈರ್ ಗೋಡೌನ್ ಒಂದಕ್ಕೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದೆ.  https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಸಾಕಷ್ಟು ಟೈರ್ ಸಂಗ್ರಹಿಸಿದ್ದರಿಂದ ಇಡಿ ಗೋಡೌನ್ ಸುಟ್ಟು ಭಸ್ಮವಾಗಿದ್ದರೆ ಇಡಿ ಏರಿಯಾ ಕೆಲ ಕಾಲ ದಟ್ಟ ಹೊಗೆಯಿಂದ ಅವರಿಸಿಕೊಂಡು ಕೆಲ ಕಾಲ ಏರಿಯಾ ಜನರು ಭಯ ಭೀತರಾಗಿದ್ದರು. ಇನ್ನೂ ಗೋಡೌನ್ ನಲ್ಲಿ…

Read More

ತುಮಕೂರು: ರಾಜಕೀಯ ದ್ವೇಷದಿಂದ ಯೂತ್ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿಗೆ ಚಾಕು ಇರಿದ ಪ್ರಕರಣ ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರದಲ್ಲಿ ನಡೆದಿದೆ. ಡಿ.ಕೆ ಸುರೇಶ್  (D.K Suresh) ನಾಮಪತ್ರ ಸಲ್ಲಿಕೆಗೆ ತೆರಳಿದ್ದಕ್ಕೆ ಚಾಕು ಇರಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ ಎಂದು ತಿಳಿದು ಬಂದಿದೆ. ಚಂದ್ರ, ಜಗದೀಶ್ ಹಾಗೂ ಸುನೀಲ್ ಎಂಬ ಮೂವರು, ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಯಾಕೆ ತೆರಳಿದ್ದೆ ಎಂದು ಕೀರ್ತಿಯವರ ಬಳಿ ಜಗಳ ಆರಂಭಿಸಿದ್ದಾರೆ. https://ainlivenews.com/job-opportunity-for-puc-passers-direct-recruitment-without-exam-salary-%e2%82%b963000-per-month/ ಬಳಿಕ ಮೂವರು ಸೇರಿ ಕೀರ್ತಿ ಮೇಲೆ ಚಾಕು, ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕು ಇರಿತದಿಂದ ಗಾಯಗೊಂಡ ಕೀರ್ತಿಯನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಕೀಯ ವೈಷಮ್ಯ ಹಿನ್ನೆಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read More