Author: AIN Author

ಕಲಬುರ್ಗಿ:- ಆಳಂದ ಹೊರವಲಯದಲ್ಲಿ ಜಗಳ ಬಿಡಿಸಲು ಹೋದ ಪೊಲೀಸ್​ ಪೊಲೀಸ್​ ಪೇದೆ​ 8 ಜನರಿಂದ ಹಲ್ಲೆ ನಡೆದ ಘಟನೆ ಜರುಗಿದೆ. https://ainlivenews.com/hitman-who-created-a-rare-record-in-t20-cricket/ ಆಳಂದ ಠಾಣೆ ಪೊಲೀಸ್​ ಪೇದೆ ಹಲ್ಲೆಗೊಳಗಾದವರು ಎನ್ನಲಾಗಿದೆ. ಆಳಂದ ಹೊರವಲಯದ ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬೊಲೆರೊ ಹಾಗೂ ಆಟೋ ಮಧ್ಯೆ ಅಪಘಾತವಾಗಿತ್ತು. ಅಪಘಾತ ಸ್ಥಳಕ್ಕೆ ಪೊಲೀಸ್​ ಪೇದೆ ತೆರಳಿದ್ದರು. ಪ್ರಕರಣ ಬಗೆಹರಿಸಿ ಗಣಪತ್​ರಾವ್​ ಘಂಟೆ ಠಾಣೆಗೆ ತೆರಳುತ್ತಿರುವ ವೇಳೆ ಸ್ಥಳಕ್ಕೆ ನಿಪ್ಪಾಣಿ ತಾಂಡಾ ಗ್ಯಾಂಗ್ ಬಂದಿದ್ದು, ಟಂಟಂ ಆಟೋದವನ ಜೊತೆ ಗಲಾಟೆ ಆರಂಭಿಸಿದೆ. ಈ ಜಗಳ ಬಿಡಿಸಲು ಹೋದ ಪೊಲೀಸ್​ ಪೊಲೀಸ್​ ಪೇದೆ​ ಗಣಪತ್​ರಾವ್​ ಘಂಟೆ ಮೇಲೆ ನಿಪ್ಪಾಣಿ ತಾಂಡಾ ಗ್ಯಾಂಗ್​ನ ನಿಖಿಲ್, ಕರ್ಣ್ ಸೇರಿದಂತೆ ಎಂಟು ಜನರು ಹಲ್ಲೆ ಮಾಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಆರು ಜನ ಯುವಕರು ಪರಾರಿಯಾಗಿದ್ದಾರೆ. ​

Read More

ಟಿ20 ಕ್ರಿಕೆಟ್‌ನಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ನೂತನ ದಾಖಲೆ ನಿರ್ಮಿಸಿದ್ದಾರೆ. ಇಂದು ನಡೆದ 17ನೇ ಆವೃತ್ತಿಯ ಐಪಿಎಲ್​ನ 20ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 29 ರನ್​ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್‌ ತಂಡ ಲೀಗ್​ನಲ್ಲಿ ಮೊದಲ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಮುಂಬೈ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 49 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತಿ ಅಪರೂಪದ ದಾಖಲೆಯನ್ನು ನಿರ್ಮಿಸಿದರು. https://ainlivenews.com/kolar-rebel-bjp-leader-supports-nda-candidate/ ರೋಹಿತ್ ಶರ್ಮಾ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಒಟ್ಟು 9 ಬೌಂಡರಿಗಳನ್ನು ಬಾರಿಸುವುದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 1508 ಬೌಂಡರಿಗಳನ್ನು ಪೂರೈಸಿದ್ದಾರೆ. ಈ ಮೂಲಕ ರೋಹಿತ್ ಈ ಸ್ವರೂಪದಲ್ಲಿ 1500 ಕ್ಕೂ ಹೆಚ್ಚು ಬೌಂಡರಿಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿರುವ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ರೋಹಿತ್ ನಂತರ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತೀಯ ಆಟಗಾರರ ಪೈಕಿ…

Read More

ಕೋಲಾರ:- ಜಿಲ್ಲೆಯಲ್ಲಿ ಮತ್ತೊರ್ವ ಬಿಜೆಪಿ ಭಂಡಾಯ ನಾಯಕ ಎನ್ ಡಿ ಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ‌. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ರೀತಿಯಲ್ಲಿ ಕೆಜಿಎಫ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೂ ಸಹ ಭಂಡಾಯ ಬಿಸಿ ತಗುಲಿತ್ತು. ಬಿಜೆಪಿಯಲ್ಲಿ ಟಿಕೆಟ್ ಗಾಗಿ ಅಶ್ಚಿನಿ ಸಂಪಂಗಿ ಮತ್ತು ಮೋಹನ್ ಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿತು. https://ainlivenews.com/there-is-a-conspiracy-to-back-modi-by-all-means-joshi/ ಟಿಕೇಟ್ ಮಾಜಿ ಶಾಸಕ ವೈ ಸಂಪಂಗಿ ಪುತ್ರಿ ಅಶ್ವಿನಿ ಸಂಪಂಗಿಗೆ ಒಲಿದಿತ್ತು.ಆ ಮೋಹನ್ ಕೃಷ್ಣ ಪಕ್ಷದ ವಿರುದ್ದ ಮುನಿಸಿಕೊಂಡಿದ್ದರು. ಇದೀಗ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ತಮ್ಮ ಬೆಂಬಲಿಗರ ಸಬೆ ನಡೆಸಿರುವ ಮೋಹನ್ ಕೃಷ್ಣ ಎನ್ ಡಿ ಎ ಅಭ್ಯರ್ಥಿ ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಹಾಲಿ ಎನ್‌ಡಿ‌ಎ ಅಭ್ಯರ್ಥಿ ‌ಮಲ್ಲೇಶ್‌ಬಾಬು ತಮಗೆ ಹಲವು ಭಾರಿ ಸಂಪರ್ಕ ಮಾಡಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಅವರನ್ನು ಯಾವುದೆ ಶರತ್ತು ಇಲ್ಲದೆ ಬೆಂಬಲಿಸುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಬೆಂಬಲಿಗರ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

Read More

ಹುಬ್ಬಳ್ಳಿ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಬ್ಬಳ್ಳಿಯ ಪಾರಸಮಲ್ ಜೈನ್ ನೇಮಕಗೊಂಡಿದ್ದಾರೆ. https://ainlivenews.com/there-is-a-conspiracy-to-back-modi-by-all-means-joshi/ ಕ್ಷೇತ್ರದ ವ್ಯಾಪ್ತಿಯ ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು, ಹಿರಿಯ ನಾಯಕರು, ಶಾಸಕರು, ಡಿಸಿಸಿ ಅಧ್ಯಕ್ಷರು, 2023ರ ವಿಧಾನಸಭೆ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಬಿಸಿಸಿ ಅಧ್ಯಕ್ಷರು ಹಾಗೂ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಯುವ ಸಂಘಟನೆಗಳು, ವಿದ್ಯಾ ಸಂಸ್ಥೆಗಳು, ಕೃಷಿ ಕಾರ್ಮಿಕರು ಹಾಗೂ ಇತರ ಸಂಘ-ಸಂಸ್ಥೆಗಳನ್ನು ಭೇಟಿ ಮಾಡಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಹಾಗೂ 2024ರ ಚುನಾವಣೆಗೆ ಎಐಸಿಸಿ ನೀಡುತ್ತಿರುವ ಭರವಸೆಗಳ ಬಗ್ಗೆ ಪಾರಸಮಲ್ ಜೈನ್ ಅವರುಗಳಿಗೆ ಮಾಹಿತಿ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇಮಕ ಆದೇಶದಲ್ಲಿ ಸೂಚಿಸಿದ್ದಾರೆ.

Read More

ಹುಬ್ಬಳ್ಳಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ರೀತಿಯಲ್ಲಿ ಹಿನ್ನಡೆ ಮಾಡಬೇಕು ಎಂಬ ಷಡ್ಯಂತ್ರ ನಡೆತಾ ಇದ್ದು ಭಾರತ ವಿರೋಧಿ ಹಿತಾಸಕ್ತಿಗಳು ಕೆಲಸ ಮಾಡುತ್ತೇವೆ ಎಂದುಭಾರತೀಯ ಜನತಾ ಪಕ್ಷದ ಅಭ್ಯರ್ಥಿ ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. https://ainlivenews.com/the-problem-of-itching-during-pregnancy/ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಎಐ ತಂತ್ರಜ್ಞಾನ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಹಿನ್ನಡೆ ಮಾಡುವ ವಿಚಾರವಾಗಿ ಅವರು ಮಾತನಾಡಿದರು. ಅದರಲ್ಲಿ ಚೀನಾ ಸಹ ಇದೆ ಚೀನಾ ಕಾಂಗ್ರೆಸ್ ಪಕ್ಷಕ್ಕೆ ಬಹಳ ಹತ್ತಿರ ಇದೆ. ರಾಹುಲ್ ಗಾಂಧಿ ಹೋಗಿ ಗೌಪ್ಯ ಸಭೆ ಮಾಡಿದ್ದಾರೆ ಹೀಗಾಗಿ ನರೇಂದ್ರ ಮೋದಿ ಇದ್ಧರೆ ದೇಶ ಬಲಿಷ್ಠ ಆಗುತ್ತದೆ ದೇಶ ಎಲ್ಲ ವಿಷಯಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಗಟ್ಟಿಯಾಗಿ ಮಾತನಾಡುತ್ತದೆಭಾರತ ಆರ್ಥಿಕವಾಗಿ ಮುನ್ನಡೆತಾ ಇದೆ. ನಮ್ಮ ಸಶಕ್ತ ಸೈನ್ಯ ಮುಂದುವರಿತಾ ಇದ ಅದಕ್ಕಾಗಿ ಮೋದಿ ಇದ್ದರೆ ಭಾರತಉಚ್ಛ್ರಾಯ ಸ್ಥಿತಿಗೆ ತಲುಪುತ್ತದೆ ಇದೆಲ್ಲಾ ಕಾರಣಕ್ಕೆ ಚೀನಾ ತಂತ್ರ ಮಾಡತಾ ಇದೆ ಭಾರತದ ಜನ ಭಾರತದ ತಂತ್ರಜ್ಞರು ಸಶಕ್ತರಾಗಿದ್ದಾರೆಇದನ್ನು…

Read More

ಕೊಲೆಸ್ಟಾಸಿಸ್ ಎನ್ನುವ ಕಾರಣದಿಂದ ಉಂಟಾಗುವ ತುರಿಕೆಯು ಗರ್ಭಾವಸ್ಥೆಯಲ್ಲಿ ಅತ್ಯಂತ ಅಪಾಯಕಾರಿ ಸಂಗತಿ. ಈ ವಿಪರೀತ ತುರಿಕೆಯ ಕಾರಣದಿಂದ ತಾಯಿ ಮತ್ತು ಮಗು ಇಬ್ಬರೂ ಕಠಿಣ ಸಮಯವನ್ನು ಎದುರಿಸಬೇಕಾಗುವುದು. ಅಲ್ಲದೆ ಹುಟ್ಟಲಿರುವ ಮಗುವಿನ ಪ್ರಾಣಕ್ಕೆ ಹಾನಿ ಉಂಟುಮಾಡುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಆದಾಗ್ಯೂ, ನೀವು ಮನೆಮದ್ದುಗಳೊಂದಿಗೆ ತುರಿಕೆ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಗರ್ಭಾವಸ್ಥೆಯಲ್ಲಿ ತುರಿಕೆ ಸಮಸ್ಯೆಯನ್ನು ನಿವಾರಿಸುವ ಈ ಮನೆಮದ್ದುಗಳ ಬಗ್ಗೆ ತಿಳಿಯೋಣ. https://ainlivenews.com/it-is-the-duty-of-the-government-to-treat-all-citizens-equally/ ತುರಿಕೆಯನ್ನು ನಿವಾರಿಸುವಲ್ಲಿ ನಿಂಬೆ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸಿಟ್ರಿಕ್ ಆಮ್ಲವನ್ನು ಹೊಂದಿರುವುದರಿಂದ ಮತ್ತು ಅದರ ಆಮ್ಲೀಯ ಗುಣದಿಂದಾಗಿ ಇದು ಚರ್ಮದ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ಮತ್ತು ತುರಿಕೆ ಪೀಡಿತ ಪ್ರದೇಶಕ್ಕೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ ತೊಳೆಯಿರಿ. ತುರಿಕೆಯಿಂದ ನೀವು ಸಾಕಷ್ಟು ಪರಿಹಾರವನ್ನು ಪಡೆಯುತ್ತೀರಿ. ಇದಲ್ಲದೆ, ನೀವು ತುರಿಕೆ ಇರುವ ಜಾಗಕ್ಕೆ ಅಲೋವೆರಾ ಜೆಲ್ ಅನ್ನು ಸಹ ಅನ್ವಯಿಸಬಹುದು. ಇದರಿಂದ ತುರಿಕೆಯೂ ನಿವಾರಣೆಯಾಗುತ್ತದೆ. ತೆಂಗಿನ ಎಣ್ಣೆಯು ತುರಿಕೆ ಸಮಸ್ಯೆಯನ್ನು ಸಹ…

Read More

ವಿಜಯಪುರ:- ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣುವುದು ಸರ್ಕಾರದ ಕರ್ತವ್ಯ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಹನುಮಾನ್ ಚಾಲಿಸಾ ಹಾಕಿ ಹಲ್ಲೆಗೊಳಗಾದ ಮುಖೇಶ್ ಮೇಲೆ ಕೇಸ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ ಸರ್ಕಾರ ಒಂದು ಕೋಮಿನ ಅಥವಾ ಗುಂಪಿನ ಸ್ವತ್ತಲ್ಲ. ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿದ್ದವರ ಕರ್ತವ್ಯವಾಗಿದೆ ಎಂದರು. https://ainlivenews.com/dinesh-gunduraos-wife-filed-another-complaint-against-yatnal/ ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕಬಾರದು. ಎಲ್ಲಾ ಸಮಾಜಗಳನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ ರಾಮನವಮಿ ದಿನದಂದು ಅಯೋಧ್ಯೆಗೆ ಭಕ್ತರು ಬರಬೇಡಿ. ತಮ್ಮ ತಮ್ಮ ಊರುಗಳಲ್ಲಿ ರಾಮನವಮಿ ಆಚರಿಸಿ. ಆ ದಿನ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗಲಿದೆ. ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮನವಮಿ ಆಚರಿಸಿ ಎಂದು ಶ್ರೀಗಳು ಸಲಹೆ ಕೊಟ್ಟಿದ್ದಾರೆ.

Read More

ಬೆಂಗಳೂರು:- ಸಚಿವ ಗುಂಡೂರಾವ್​ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆ ನೀಡಿದ್ದ ಯತ್ನಾಳ್ ವಿರುದ್ಧ ದಿನೇಶ್ ಪತ್ನಿ ಟಬು ರಾವ್ ದೂರು ನೀಡಿದ್ದಾರೆ. https://ainlivenews.com/mumbais-first-win-after-a-hat-trick-defeat/ ಸಂಜಯನಗರ ಪೊಲೀಸ್ ಠಾಣೆಗೆ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ದೂರು ನೀಡಿದ್ದಾರೆ. ಇದಕ್ಕೂ ಮುಂಚೆ ಟಬು ರಾವ್ ಅವರು ಶಾಸಕ ಯತ್ನಾಳ್​ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಬಿಜೆಪಿ ನಾಯಕರಿಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಟಬು ರಾವ್, ಬಸನಗೌಡ ಪಾಟೀಲ್ ಯತ್ನಾಳ್ ಯಾರು ನನಗೆ ಗೊತ್ತಿಲ್ಲ. ನಾನು ರಾಜಕೀಯದಲ್ಲಿಲ್ಲ, ನನಗೇಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಈ ರೀತಿ ಮಾತನಾಡೋದೆ ರಾಜಕೀಯನಾ ಎಂದು ಪ್ರಶ್ನೆ ಮಾಡಿದ್ದಾರೆ. ಭಾರತ ಮಾತೆ ಅಂತಾರೆ, ಇದೇನಾ ಇವರು ಕೊಡುವ ಗೌರವ? ಸಂಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇವೆ. ನಾನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ದಿನೇಶ್ ಬಗ್ಗೆ ಮಾತನಾಡಿದರೆ ಪರ್ವಾಗಿಲ್ಲ, ನಮ್ಮ ಬಗ್ಗೆ ಏಕೆ…

Read More

ಹ್ಯಾಟ್ರಿಕ್ ಸೋಲಿನ ಬಳಿಕ ಹಾರ್ದಿಕ್​ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್​ ತಂಡಕ್ಕೆ ಕೊನೆಗೂ ಒಂದು ಗೆಲುವು ದೊರಕಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ ಇಂಡಿಯನ್ಸ್​ ಭರ್ಜರಿಯಾಗಿ ಬ್ಯಾಟಿಂಗ್​ ಮಾಡಿದರು. ಈ ಮೂಲಕ ಮುಂಬೈ ತಂಡವು 20 ಓವರ್​ ನಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್​ ಗಳಿಸಿದರು. ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ರೊಮಾರಿಯೊ ಶೆಫರ್ಡ್ ಐಪಿಎಲ್ 20ನೇ ಪಂದ್ಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮುಂಬೈ ಇಂಡಿಯನ್ಸ್‌ನ ಕೊನೆಯ ಓವರ್‌ನಲ್ಲಿ ಶೆಫರ್ಡ್ ಒಟ್ಟು 32 ರನ್ ಗಳಿಸಿದರು. ಈ ಬೃಹತ್​ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ನಿಗದಿತ 20 ಓವರ್​ ಗೆ 8 ವಿಕೆಟ್ ನಷ್ಟಕ್ಕೆ 205 ರನ್​ ಗಳಿಸುವ ಮೂಲಕ 29 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಮುಂಬೈ ಮೊದಲ ಗೆಲುವು ದಾಖಲಿಸಿತು. https://ainlivenews.com/lsg-vs-gt-lucknow-batting-won-the-toss-gt-bowling/ ಇನ್ನು, ಮುಂಬೈ ಇಂಡಿಯನ್ಸ್​ ನೀಡಿದ ಬೃಹತ್​ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ತಂಡಕ್ಕೆ ಪೃಥ್ವಿ ಶಾ ಉತ್ತಮವಾಗಿ ಬ್ಯಾಟಿಂಗ್​…

Read More

ಇಂದು ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ https://ainlivenews.com/vishwanath-sudhakar-is-like-an-ash-covered-corpse/ ಐಪಿಎಲ್ 2024 ರ 21 ನೇ ಪಂದ್ಯದಲ್ಲಿ ಇಂದು ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಉಭಯ ತಂಡಗಳು ಈ ಸೀಸನ್​ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿವೆ. ಲಕ್ನೋ ಸತತ ಮೂರನೇ ಗೆಲುವು ದಾಖಲಿಸುವ ಇರಾದೆಯಲ್ಲಿದ್ದರೆ, ಗುಜರಾತ್ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಸೋಲಿನ ಗಾಯವನ್ನು ಮರೆಯಲು ಪ್ರಯತ್ನಿಸುತ್ತಿದೆ. ಹೀಗಾಗಿ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುವುದು ಖಚಿತ

Read More