Author: AIN Author

ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ ಆಗಲಿದೆ. ಸಿಎಸ್​ಕೆ ತನ್ನ ಕೊನೆಯ 2 ಪಂದ್ಯಗಳಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ರುತುರಾಜ್ ಗಾಯಕ್ವಾಡ್ ಪಡೆ ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಇತ್ತ ಕೆಕೆಆರ್ ಆಡಿರುವ ಎಲ್ಲಾ 3 ಪಂದ್ಯಗಳನ್ನು ಗೆದ್ದಿದ್ದು ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಫೋರ್ ಹೊಡೆಯಲು ಪ್ರಯತ್ನಿಸಲಿದೆ. https://ainlivenews.com/5-wickets-for-yash-lucknow-win-against-gujarat/ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಮುಖಾಮುಖಿ ಅಂಕಿಅಂಶಗಳನ್ನು ನಾವು ನೋಡುವುದಾದರೆ, ಇದರಲ್ಲಿ ಸಿಎಸ್‌ಕೆ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 28 ​​ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಚೆನ್ನೈ 18 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ 9 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಚೆನ್ನೈ ಮತ್ತು ಕೆಕೆಆರ್ ನಡುವಿನ ಪಂದ್ಯಗಳಲ್ಲಿ, ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಸಾಧಿಸಿದ್ದರೆ, ಗುರಿಯನ್ನು ಬೆನ್ನಟ್ಟಿದ 10 ಪಂದ್ಯಗಳನ್ನು ಗೆಲುವು ಸಾಧಿಸಿದೆ.…

Read More

ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಮಾವಿನ ಹಣ್ಣಿಗೆ ಬೇಡಿಕೆಯೂ ಗಣನೀಯವಾಗಿ ಹೆಚ್ಚುತ್ತಿದೆ. ನೀವು ಅಲ್ಫಾನ್ಸೋ, ಲಾಂಗ್ರಾ, ದಸ್ಸೆರಿ ಮಾವಿನ ಹಣ್ಣುಗಳನ್ನು ಬಹಳಷ್ಟು ತಿಂದಿರಬೇಕು ಆದರೆ ನೀವು ಎಂದಾದರೂ ನೇರಳೆ ಬಣ್ಣದ ಮಾವಿನ ಹಣ್ಣನ್ನು ತಿಂದಿದ್ದೀರಾ? ವಾಸ್ತವವಾಗಿ ಈ ನೇರಳೆ ಬಣ್ಣದ ಮಾವನ್ನು ಮುಖ್ಯವಾಗಿ ಜಪಾನ್‌ನಲ್ಲಿ ಬೆಳೆಯಲಾಗುತ್ತದೆ. ಈ ಮಾವಿನ ಹಣ್ಣಿನ ಬೆಲೆ ಎಷ್ಟಿದೆಯೆಂದರೆ ಒಂದು ಕೆಜಿ ದರದಲ್ಲಿ ದಸರಾದಿಂದ ಹಿಡಿದು ಅಲ್ಫೋನ್ಸೋ ಮಾವಿನ ಹಣ್ಣಿನವರೆಗೆ ಹಲವು ಕೆಜಿ ಸಿಗುತ್ತದೆ. ಜಪಾನ್ ನಲ್ಲಿ ಬೆಳೆಯುವ ಈ ಮಾವಿನ ಹೆಸರು ಮಿಯಾಝಕಿ. ಹೆಸರಿಗಿಂತ ಈ ಮಾವಿನ ಬೆಲೆಯೇ ವಿಶೇಷ. ಈ ಮಾವು ಕೆಜಿಗೆ 2.75 ಲಕ್ಷ ರೂ.ವರೆಗೆ ಮಾರಾಟವಾಗಿದೆ. ಈ ಮಾವಿನ ವಿಶೇಷತೆಯ ಬಗ್ಗೆ ಹೇಳುವುದಾದರೆ , ಅದರ ತೂಕ ಸುಮಾರು 350 ಗ್ರಾಂ ಮತ್ತು ಇದು ಶೇಕಡಾ 15 ಕ್ಕಿಂತ ಹೆಚ್ಚು ಸಕ್ಕರೆಯನ್ನು ಹೊಂದಿರುತ್ತದೆ. ಈ ಮಾವಿನ ಹಣ್ಣನ್ನು ಬಹಳ ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಮರವು ಫಲ ನೀಡಿದ ನಂತರ, ಪ್ರತಿ ಹಣ್ಣನ್ನು…

Read More

ಅವಕಾಡೊ ( ಬೆಣ್ಣೆಹಣ್ಣು) ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ. ಇದನ್ನು ಹಾಗೆ ತಿನ್ನಲು ತುಂಬಾ ರುಚಿಕರವಾಗಿದ್ದರೂ ಜ್ಯೂಸ್ ಮಾಡಿಕೊಂಡು ಕುಡಿದರೆ ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಇದನ್ನು ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಇದರಲ್ಲಿ ಹಲವಾರು ವಿಧದ ಪೋಷಕಾಂಶಗಳು ಇವೆ. ಅವಕಾಡೊ ಹಣ್ಣಿನ ಪ್ರಯೋಜನಗಳು ಚರ್ಮ ಮತ್ತು ಕೂದಲಿಗೆ ಅವಕಾಡೊದಲ್ಲಿ ಇರುವಂತಹ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ತುಂಬಾ ಲಾಭಕಾರಿ ಆಗಿರುವುದು. ಒಣ, ಒಡೆದ ಮತ್ತು ಹಾನಿಗೀಡಾಗಿರುವಂತಹ ಚರ್ಮವನ್ನು ಇದು ಸರಿಪಡಿಸುವುದು. ಇಂದಿನ ಕೆಲವೊಂದು ಸೌಂದರ್ಯ ಉತ್ಪನ್ನಗಳು ಹಾಗೂ ಫೇಸ್ ಮಾಸ್ಕ್ ಗಳಲ್ಲಿ ಅವಕಾಡೊವನ್ನು ಬಳಕೆ ಮಾಡಿರುವರು. ಇದರಿಮದ ಚರ್ಮವು ತುಂಬಾ ಆರೋಗ್ಯಕಾರಿ ಮತ್ತು ಕಾಂತಿಯುವಾಗಿ ಹೊಳೆಯುವುದು. ಒಣ ಹಾಗೂ ಹಾನಿಗೀಡಾಗಿರುವಂತಹ ಕೂದಲಿಗೆ ಕೂಡ ಇದು ತುಂಬಾ ಲಾಭಕಾರಿ ಆಗಿರುವುದು. ಅವಕಾಡೊದಲ್ಲಿ ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿದೆ. ಅಧಿಕ ಮಟ್ಟದ ಬೆಟಾ ಕ್ಯಾರೊಟಿನ್, ಬಿಸಿಲಿನಿಂದಾಗಿ…

Read More

ಲಕ್ನೋ: ತಂತ್ರಜ್ಞಾನ ಎಂಬುದು ಎಷ್ಟು ಅಪಾಯಕಾರಿಯೋ ಅಷ್ಟೇ ಪ್ರಯೋಜನಗಳು ಕೂಡ ಇವೆ. ಅಲೆಕ್ಸಾ (Alexa) ಎಂಬ ತಂತ್ರಜ್ಞಾನದಿಂದ ಬಾಲಕಿಯೊಬ್ಬಳು ತನ್ನ ಜೊತೆಗೆ ಒಂದು ವರ್ಷದ ಪುಟ್ಟ ಮಗುವಿನ ಪ್ರಾಣವನ್ನು ಕೂಡ ಉಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ. ಇದರ ಬೆನ್ನಲ್ಲೇ ಆನಂದ್‌ ಮಹೀಂದ್ರಾ ಅವರು ಉದ್ಯೋಗ ನೀಡುವ ಆಫರ್‌ ಕೊಟ್ಟಿದ್ದಾರೆ. ಹೌದು ತಂತ್ರಜ್ಞಾನವನ್ನು ಬಳಸಿ ಮಂಗಗಳಿಂದ ಬಚಾವಾದ 13 ವರ್ಷದ ಬಾಲಕಿ ನಿಕಿತಾಗೆ ಉದ್ಯೋಗ ಕೊಡುವ ಕುರಿತು ಆನಂದ್‌ ಮಹೀಂದ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಆಧುನಿಕ ಕಾಲದಲ್ಲಿ ನಾವು ತಂತ್ರಜ್ಞಾನದ ಗುಲಾಮರಾಗುತ್ತೇವೋ ಎಂಬ ಆತಂಕ ಕಾಡುತ್ತಿದೆ. ಆದರೆ, ಈ ಬಾಲಕಿಯು ಜಗತ್ತಿನಲ್ಲಿ ಮನುಷ್ಯನ ದಕ್ಷತೆಯನ್ನು ತಂತ್ರಜ್ಞಾನವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ” ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. https://twitter.com/anandmahindra/status/1776489642818175379?ref_src=twsrc%5Etfw%7Ctwcamp%5Etweetembed%7Ctwterm%5E1776489642818175379%7Ctwgr%5E2d0bc2c5e82bcaa6ddcd98b0abb8a9b4c04e9bd0%7Ctwcon%5Es1_&ref_url=https%3A%2F%2Fvistaranews.com%2Fvistara%2Fanand-mahindra-offers-job-to-uttar-pradesh-girl-who-foiled-monkey-attack-using-alexa%2F627195.html “ಬಾಲಕಿಯ ಕ್ಷಿಪ್ರ ಯೋಚನಾಶಕ್ತಿಯು ಅತ್ಯದ್ಭುತವಾಗಿದೆ. ಅನಿರೀಕ್ಷಿತ ಜಗತ್ತಿನಲ್ಲಿ ಹೇಗೆ ಯೋಚಿಸಬೇಕು, ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಈಕೆಯು ಸಾಬೀತುಪಡಿಸಿದ್ದಾಳೆ. ಈ ಬಾಲಕಿಯು ಶಿಕ್ಷಣ ಮುಗಿಸಿ, ಕಾರ್ಪೊರೇಟ್‌ ಜಗತ್ತಿಗೆ ಕಾಲಿಡಲು…

Read More

ಗುಜರಾತ್​ ಟೈಟನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡವು ಮೊದಲು ಟಾಸ್ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಲಕ್ನೋ ತಂಡವು ನಿಗದಿತ 20 ಓವರ್​ಗೆ 5 ವಿಕೆಟ್ ನಷ್ಟಕ್ಕೆ 163 ರನ್​ ಸಿಡಿಸುವ ಮೂಲಕ ಸಾಧಾರಣ ಮೊತ್ತ ಕಲೆಹಾಕಿತು. ಆದರೆ ಈ ಮೊತ್ತ ಬೆನ್ನಟ್ಟಿದ ಗುಜರಾತ್​ ಟೈಟನ್ಸ್ ತಂಡವು 18.5 ಓವರ್​ಗೆ 130 ರನ್​ಗೆ ಆಲೌಟ್ ಆಗುವ ಮೂಲಕ 33 ರನ್​ ಗಳಿಂದ ಸೋಲನ್ನಪ್ಪಿತು. https://ainlivenews.com/how-can-rcb-win-without-a-wicket-taking-bowler/ ಲಕ್ನೋ ನೀಡಿದ ಸಾಧರಣ ಗುಡಿಯನ್ನೂ ಬೆನ್ನಟ್ಟುವಲ್ಲಿ ಯಶಸ್ವಿಯಾಗದ ಗುಜರಾತ್​ ತಂಡವು ಮತ್ತೆ ಸೋಲನ್ನಪ್ಪಿತು. ಗುಜರಾತ್​ ಟೈಟನ್ಸ್ ಪರ ಬ್ಯಾಟಿಂಗ್​ ನಲ್ಲಿ ಎಡವಿದ ತಂಡವು ಯಾರೊಬ್ಬರೂ ಉತ್ತಮ ಫೈಪೋಟಿ ನೀಡಲಿಲ್ಲ. ಗುಜರಾತ್​ ಟೈಟನ್ಸ್​ ಪರ ಸಾಯಿ ಸುದರ್ಶನ್​ 23 ಎಸೆತದಲ್ಲಿ 31 ರನ್, ನಾಯಕ ಶುಭ್​ಮನ್ ಗಿಲ್​ 21 ಎಸೆತದಲ್ಲಿ 19 ರನ್, ಕೇನ್​ ವಿಲಿಯಮ್ಸನ್​ 5 ಎಸೆತದಲ್ಲಿ 1 ರನ್, ಬಿಆರ್​​…

Read More

ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್‌ ಇಲ್ಲದ ಮೇಲೆ RCB ಗೆಲ್ಲಲು ಹೇಗೆ ಸಾಧ್ಯ ಎಂದು ಮಾಜಿ ಕ್ರಿಕೆಟಿಗ ಸೆಹ್ವಾಗ್‌ ಹೇಳಿದ್ದಾರೆ. RR ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಇನ್ನೂ 20 ರನ್‌ ಹೆಚ್ಚುವರಿ ಗಳಿಸಬೇಕಿತ್ತು. ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಚೆನ್ನಾಗಿತ್ತು. ಆದ್ರೆ ಅವರೊಂದಿಗೆ ಸಾಥ್‌ ನೀಡಬೇಕಿದ್ದ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ಸರಿಯಾಗಿ ಬ್ಯಾಟಿಂಗ್‌ ಮಾಡಲಿಲ್ಲ. ಮಹಿಪಾಲ್‌ ಲೊಮ್ರೋರ್‌ ಸಹ ತಂಡದಲ್ಲಿ ಇಲ್ಲದೇ ಇದ್ದದ್ದು ದೊಡ್ಡ ನಷ್ಟವಾಯಿತು. ವಿರಾಟ್‌ ಕೊಹ್ಲಿ 39 ಬಾಲ್‌ಗೆ 50 ರನ್‌ ಗಳಿಸಿದಾಗ, ಅವರ ಸ್ಟ್ರೈಕ್‌ ರೇಟ್‌ 200ರ ಗಡಿ ದಾಟಬೇಕಿತ್ತು. ಆದ್ರೆ ಇತರ ಬ್ಯಾಟರ್‌ಗಳು ಸಾಥ್‌ ನೀಡದ ಪರಿಣಾಮ ಸಂಪೂರ್ಣ ಒತ್ತಡ ಕೊಹ್ಲಿ ಮೇಲೆ ಇತ್ತು ಎಂದು ಹೇಳಿದ್ದಾರೆ. https://ainlivenews.com/huge-amount-of-explosives-found-in-nangali-checkpost/ ಕೊಹ್ಲಿ ಒಳ್ಳೆ ಫಾರ್ಮ್‌ನಲ್ಲಿದ್ದಾರೆ, ಕೊನೇವರೆಗೂ ಕ್ರೀಸ್‌ನಲ್ಲಿ ಉಳಿಯೋದು ಅವರ ಪಾತ್ರ. ಆದ್ರೆ ಅಷ್ಟೊಂದು ಹಣಕ್ಕೆ ಆಯ್ಕೆಯಾದ ಇತರ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಮ್ಯಾಕ್ಸ್‌ವೆಲ್ ತರ ಆದ್ರೆ ಯಾರು ಏನ್‌ ಮಾಡೋದಕ್ಕೆ ಆಗುತ್ತೆ ಎಂದು…

Read More

ಕೋಲಾರ:- ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಚೆಕ್‌ಪೋಸ್ಟ್ ನಲ್ಲಿ ಬೃಹತ್ ಮಟ್ಟದ ಸ್ಪೋಟಕಗಳು ಪತ್ತೆ ಆಗಿದ್ದು, 1200 ಜಿಲೆಟಿನ್ ಕಡ್ಡಿ ವಶಕ್ಕೆ ಪಡೆಯಲಾಗಿದೆ. https://ainlivenews.com/expensive-gold-silver-prices-again-here-is-todays-price-list/ 1200 ಜಿಲೆಟಿನ್ ಕಡ್ಡಿ, 7 ಬಾಕ್ಸ್‌ ವೈಯರ್‌, 6 ಡಿಟೋನೇಟರ್ ಆರೋಪುಗಳು ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರು ಅನುಮಾನಗೊಂಡು ತಪಾಸಣೆ ನಡೆಸಿದಾಗ, ಭಾರಿ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ. ಇನ್ನು ಸ್ಫೋಟಕ ಸಾಗಿಸುತ್ತಿದ್ದ ಜಾಕೀರ್ ಹುಸೇನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಕಾರಿನಲ್ಲಿದ್ದ ಮತ್ತೊಬ್ಬ ಪರಾರಿಯಗಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇಷ್ಟೊಂದು ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರಲ್ಲಿ ಅನುಮಾನ ಹುಟ್ಟು ಹಾಕಿದೆ. ಸದ್ಯ ಆರೋಪಿಗಳು ಯಾವ ಕಾರಣಕ್ಕೆ ಸ್ಫೋಟಕ ಸಾಗಿಸುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬರಲಿದೆ.

Read More

ಚಿನ್ನ, ಬೆಳ್ಳಿ ಮತ್ತೆ ದುಬಾರಿ ಆಗಿದ್ದು, ಗೋಲ್ಡ್ ಪ್ರಿಯರಿಗೆ ಬೇಸರ ತರಿಸಿದೆ. ಇವತ್ತು ಚಿನ್ನದ ಬೆಲೆ ಗ್ರಾಮ್​ಗೆ 6,500ಕ್ಕೂ ಹೆಚ್ಚಿದೆ. ಅಪರಂಜಿ ಚಿನ್ನದ ಬೆಲೆಗೆ 7,100 ದಾಟಿದೆ. ಕಳೆದ 10 ದಿನಗಳಿಂದ ಅನಿರೀಕ್ಷಿತ ರೀತಿಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಒಂದು ವರ್ಷದಲ್ಲಿ ಆಗಬೇಕಿದ್ದ ಹೆಚ್ಚಳ ಕೆಲವೇ ತಿಂಗಳಲ್ಲಿ ಆಗಿದೆ. ಜಾಗತಿಕ ಯುದ್ಧ ಬೀತಿ ಹಿನ್ನೆಲೆಯಲ್ಲಿ ಚಿನ್ನಕ್ಕೆ ಈ ಪರಿ ಬೇಡಿಕೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 65,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,300 ರುಪಾಯಿಯಲ್ಲಿ ಇದೆ. https://ainlivenews.com/congress-has-joined-hands-with-china-to-defeat-modi/ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 8ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,350…

Read More

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಚೀನಾ ಹವಣಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಗಂಭೀರವಾಗಿ ಆರೋಪಿಸಿದರು. ಧಾರವಾಡದ ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಗ್ರಾಮದಲ್ಲಿ ಇಂದು ರಾತ್ರಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾದರೆ ಭಾರತವನ್ನು ಆರ್ಥಿಕ ಮುಂಚೂಣಿಗೆ ತರುವ ಜತೆಗೆ ವಿಶ್ವ ನಾಯಕರಾಗಿ ಬಿಡುತ್ತಾರೆ ಎಂಬ ತಳಮಳ ಚೀನಾ, ಪಾಕ್ ಸೇರಿದಂತೆ ಬಹು ರಾಷ್ಟ್ರಗಳನ್ನು ಕಾಡುತ್ತಿದೆ. ಈ ಬಾರಿ ಮೋದಿ ಅವರನ್ನು ಸೋಲಿಸಲು ಚೀನಾ ಎಲ್ಲ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದರು. https://ainlivenews.com/the-miscreants-set-fire-to-the-parangi-garden-that-had-come-to-harvest/ ಜೊತೆಗೆ ಮೋದಿ ಪ್ರಭಾವ ಕುಗ್ಗಿಸಲು ಕಾಂಗ್ರೆಸ್ ನಮ್ಮ ಶತ್ರು ರಾಷ್ಟ್ರಗಳೊಂದಿಗೆ ಸೇರಿ ಸಂಚು ಮಾಡುತ್ತಿದೆ. ಆದರೆ, ಮೋದಿ ಅವರಿಗೆ ಅಸಂಖ್ಯಾತ ಭಾರತೀಯರ ಬೆಂಬಲ, ಆಶೀರ್ವಾದವಿದೆ. ಹಾಗಾಗಿ ಇದೆಲ್ಲಾ…

Read More

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ ಜಾರಿಗೆ ತಂದಿದೆ. ಇ-ಶ್ರಮ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲೂ ಇ-ಶ್ರಮ ಕಾರ್ಡ್ ನೀಡಲಾಗುತ್ತಿದ್ದು, ಯೋಜನೆಯ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಇಲ್ಲಿದೆ. ಇ-ಶ್ರಮ ಕಾರ್ಡ್ ಎಂಬುದು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟೀಯ ದತ್ತಾಂಶವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ. ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ. ದೇಶದ ಎಲ್ಲಾ ಕಾರ್ಮಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು e-SHRAM ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ವಿಶೇಷವಾಗಿ ಕಾರ್ಮಿಕರಿಗೆ, ಶ್ರಮದ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಎಂದೇ ಹಲವು ಸೌಲಭ್ಯಗಳನ್ನು ಒದಗಿಸಲಿದೆ. ಕಾರ್ಮಿಕರು ಇ-ಶ್ರಾಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು…

Read More