Author: AIN Author

ಬಳ್ಳಾರಿ:- ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಗರ್ಭಗುಡಿಯಲ್ಲಿ ಪವಾಡ ಪುರುಷ ಎರ್ರಿತಾತಾ ಸ್ವಾಮಿಯ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಕಲ್ಲು ತೂರಾಟ ನಡೆದ ಘಟನೆ ಜರುಗಿದೆ. 15 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕುರಿಸಲಾಗಿತ್ತು. ಈ ಮೂರ್ತಿಯನ್ನು ತೆರವುಗೊಳಿಸುವಂತೆ ಇನ್ನೊಂದು ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮೂರ್ತಿ ತೆರವುಗೊಳಿಸಲು ಆದೇಶ ನೀಡಿತ್ತು. ಆದರೆ ಪವಾಡ ಪುರುಷನ ಮೂರ್ತಿಯನ್ನು ತೆರವುಗೊಳಿಸಲ್ಲ ಅಂತ ಮೊತ್ತೊಂದು ಸಮುದಾಯದವರು ಹಠ ಹಿಡಿದ್ದಾರೆ. ಇದರಿಂದ ಎರಡು ಸಮುದಾಯದ ಮಧ್ಯೆ ವಾಗ್ವಾದ ಸಂಭವಿಸಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಸಂಭವಿಸಿದೆ. ಈ ವಿಚಾರ ತಿಳಿದು ಗ್ರಾಮಕ್ಕೆ ಪಿಎಸ್ಐ ಸಂತೋಷ್ ಡಬ್ಬಿನ್, ಸಿಪಿಐ ಸತೀಶ್ ಸೇರಿದಂತೆ ಇನ್ನಿತರ ಪೊಲೀಸ್​ ಸಿಬ್ಬಂದಿ ಬಂದಿದ್ದಾರೆ ಕಲ್ಲು ತೂರಾಟವನ್ನು ನಿಲ್ಲಿಸಲು ಮುಂದಾದಾಗ ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ಪಿಎಸ್ಐ ಸಂತೋಷ್ ಡಬ್ಬಿನ್ ತಲೆಗೆ, ಸಿಪಿಐ ಸತೀಶ್ ಸೇರಿದಂತೆ ಮೂವರಿಗೆ ಗಾಯವಾಗಿದೆ. ಕೂಡಲೆ ಪಿಎಸ್​ಐ ಸಂತೋಷ್ ಅವರನ್ನು…

Read More

ಉಳಗನಾಯಗನ್ ಕಮಲ್ ಹಾಸನ್ ಹಾಗೂ ದುಬಾರಿ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಕಮಲ್ ಹಾಸನ್ ಜೋಡಿಯ ಬಹು ನಿರೀಕ್ಷಿತ ಸಿನಿಮಾ ಇಂಡಿಯನ್-2. 1996ರಲ್ಲಿ ‘ಇಂಡಿಯನ್​’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲ್​ ಹಾಸನ್​ ಅವರು ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ ಸಿನಿಮಾ ಮೂಡಿಬರುತ್ತಿದೆ. ಸಣ್ಣದೊಂದು ಝಲಕ್ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿರುವ ಇಂಡಿಯನ್ -2 ಸಿನಿಮಾಗೆ ಚಿತ್ರಪ್ರೇಮಿಗಳು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಇದೀಗ ಸೇನಾಪತಿ ಪುನರ್ ಆಗಮನಕ್ಕೆ ಸಜ್ಜಾಗಿದ್ದು, ಜೂನ್ ತಿಂಗಳಲ್ಲಿ ಕಮಲ್ ಹಾಗೂ ಶಂಕರ್ ಜೋಡಿಯ ಚಿತ್ರ ತೆರೆಗೆ ಬರ್ತಿದೆ. ಆದರೆ ಯಾವ ದಿನ ಇಂಡಿಯನ್ ಸೀಕ್ವೆಲ್ ಬಿಡುಗಡೆಯಾಗಲಿದೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್’ ಮತ್ತು ‘ರೆಡ್ ಜೈಂಟ್ ಮೂವೀಸ್’…

Read More

ರಾಂಚಿ:- ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್‌ ಇಲಿಗಳೇ ತಿಂದಿದ್ದು, ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಅಲ್ಲದೇ ಸಾಕ್ಷಿ ಇಲ್ಲವೆಂದು ಕಕ್ಷಿಗಾರನ ಬಿಡುಗಡೆಗೆ ವಕೀಲರು ಮನವಿ ಮಾಡಿದ್ದಾರೆ. ವ್ಯಕ್ತಿಯೊಬ್ಬನಿಂದ ಜಪ್ತಿ ಮಾಡಿ ಗೋದಾಮಿನಲ್ಲಿ ಇರಿಸಲಾಗಿದ್ದ ಸುಮಾರು 10 ಕೆಜಿ ಗಾಂಜಾ (Ganja ), 9 ಕೆಜಿ ಭಾಂಗ್‌ ಅನ್ನು ಇಲಿಗಳೇ ತಿಂದುಬಿಟ್ಟಿವೆ ಎಂದು ಜಾರ್ಖಂಡ್‌ನ ಧನ್‌ಬಾದ್ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. 2018ರ ಡಿಸೆಂಬರ್‌ 14 ರಂದು ಇಲ್ಲಿನ ಪೊಲೀಸರು ನಡೆಸಿದ ದಾಳಿಯಲ್ಲಿ ಶಂಭು ಅಗರ್ವಾಲ್ ಆರೋಪಿಯಿಂದ ಗಾಂಜಾ ಮತ್ತು ಭಾಂಗ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ ಆರೋಪಿಯನ್ನ ಬಂಧಿಸಲಾಗಿತ್ತು. https://ainlivenews.com/12-lakh-people-who-are-eligible-to-vote-from-home/ ಈ ಪ್ರಕರಣದ ವಿಚಾರಣೆ ಸಂದರ್ಭಧಲ್ಲಿ ಪ್ರಿನ್ಸಿಪಾಲ್ ಮತ್ತು ಸೆಷನ್ ನ್ಯಾಯಾಧೀಶರಾದ ರಾಮ್ ಶರ್ಮಾ ಅವರು, ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ತನಿಖಾಧಿಕಾರಿ ಜೈ ಪ್ರಕಾಶ್‌ ಪ್ರಸಾದ್‌ ಅವರಿಗೆ ಸೂಚಿಸಿದ್ದರು. ಆದ್ರೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಪೊಲೀಸರು ಸಾಕ್ಷ್ಯಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ.…

Read More

ಬೆಂಗಳೂರು:- ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸುಮಾರು 12 ಲಕ್ಷ ಮಂದಿ ಮನೆಯಿಂದಲೇ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದಲ್ಲಿ 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 5.7 ಲಕ್ಷ ಹಿರಿಯ ನಾಗರಿಕರು ಮತ್ತು 6.13 ಲಕ್ಷ ವಿಕಲಚೇತನರು ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂಬುದು ಚುನಾವಣಾ ಆಯೋಗದ ಅಂಕಿಅಂಶಗಳಿಂದ ತಿಳಿದುಬಂದಿದೆ. https://ainlivenews.com/this-bitter-leaf-remedy-to-remove-yellow-stains-on-your-teeth/ ಅರ್ಜಿ ನಮೂನೆ 12ಡಿ ಮೂಲಕ ಅರ್ಹ ಮತದಾರರು ಮನೆಯಿಂದ ಮತ ಚಲಾಯಿಸಲು ಸಹಾಯಕ ಚುನಾವಣಾಧಿಕಾರಿಗೆ ಮನವಿ ಮಾಡಲು ಅವಕಾಶ ನೀಡಲಾಗಿದೆ. ತಾವು ಮತ ಚಲಾಯಿಸಲು ಮತಗಟ್ಟೆಗೆ ಹೋಗುವ ಸ್ಥಿತಿಯಲ್ಲಿಲ್ಲ ಎಂಬುದನ್ನು ಈ ಅರ್ಜಿ ಮೂಲಕ ತಿಳಿಸಬಹುದಾಗಿದೆ. ಕರ್ನಾಟಕದಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ (ಮೊದಲ ಹಂತದ ಮತದಾನಕ್ಕೆ ಮಾರ್ಚ್ 28 ರಂದು ಅಧಿಸೂಚನೆ ಹೊರಡಿಸಲಾಗಿದೆ) ಐದು ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜನರು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಭರ್ತಿ…

Read More

ನಾವು ಹೇಳುತ್ತಿರುವ ಈ ಮನೆಮದ್ದುಗಳನ್ನು ಅನುಸರಿಸುವುದರಿಂದ ಹಲ್ಲುಗಳ ಮೇಲಿನ ಹಳದಿ ಕೊಳೆ ಮಾಯವಾಗಿ ಬಿಳಿಯಾಗುತ್ತದೆ. ಹಲ್ಲುಗಳಲ್ಲಿನ ಕುಳಿಗಳ ಜೊತೆಗೆ ಕೆಟ್ಟ ವಾಸನೆಯನ್ನು ಸಹ ಈ ಮನೆಮದ್ದುಗಳಿಂದ ನಿವಾರಸಿಬಹುದು. https://ainlivenews.com/why-did-actress-khushbu-sundar-withdraw-from-the-lok-sabha-election-campaign/ ಹಲ್ಲುಗಳ ಮೇಲಿನ ಹಳದಿ ಕಲೆ ನಿವಾರಿಸಲು ಬೇವು ಉತ್ತಮ ಮಾರ್ಗವಾಗಿದೆ. ಈ ನೈಸರ್ಗಿಕ ಮೂಲಿಕೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಬೇವು ನಿಮ್ಮ ಹಲ್ಲುಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಉರಿಯೂತ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಬಿಳಿ ಹೊಳೆಯುವ ಹಲ್ಲುಗಳನ್ನು ಪಡೆಯಲು ಹಳದಿ ಹಲ್ಲಿಗೆ ಬೇವನ್ನು ಬಳಸುವ ಕೆಲವು ವಿಧಾನಗಳು ಇಲ್ಲಿವೆ: ಕಹಿಯಾದ ಬೇವಿನ ಎಲೆಗಳು ನಿಮ್ಮ ಒಸಡುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಬಹುದು. ಈ ಬೇವು ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಈ ಬೇವಿನ ಎಲೆಗಳ ಪೇಸ್ಟ್ ಅನ್ನು ತಯಾರಿಸಿ, ಇದರಿಂದ ಹಲ್ಲುಗಳನ್ನು ಬ್ರಷ್ ಮಾಡಬಹುದು. ಬೇವಿನ ತೊಗಟೆ: ಆರೋಗ್ಯಕರ ಹಲ್ಲುಗಳಿಗೆ ಬೇವಿನ ತೊಗಟೆಯನ್ನು ಜಗಿಯಿರಿ. ಇದು ಹಲ್ಲಿನ ಕಾಯಿಲೆಯ ವಿರುದ್ಧ…

Read More

ನಟಿ ಖುಷ್ಬು ಸುಂದರ್ ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ. ಈ ಸಂಬಂಧ ಖುಷ್ಬು ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯದ ಮೇಲೆ ಗಮನಹರಿಸಬೇಕು. ಹೀಗಾಗಿ ನಾನು ಇಂದು ಅಂತಹ ಸಂದಿಗ್ಧದಲ್ಲಿದ್ದೇ ನೆ ಎಂದಿದ್ದಾರೆ. https://ainlivenews.com/labor-department-inspector-loka-who-demanded-bribe/ 2019 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಅಪಘಾತದಿಂದ ಮೂಳೆ ಮುರಿದಿದೆ. ಕಳೆದ 5 ವರ್ಷಗಳಿಂದ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಆದರೂ ಸಮಸ್ಯೆ ನನ್ನನ್ನು ಕಾಡುತ್ತಿದೆ. ಹೀಗಾಗಿ ವೈದ್ಯರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ನಟಿ ತಿಳಿಸಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಹೆಚ್ಚು ಪ್ರಯಾಣ, ಕುಳಿತುಕೊಳ್ಳುವುದು ಅತ್ಯಗತ್ಯ. ಹೀಗಾಗಿ ಮತ್ತೆ ನನಗೆ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಅಲ್ಪ ವಿರಾಮ ಘೋಷಿಸಿದ್ದೇನೆ ಎಂದು ಖುಷ್ಬು ಪತ್ರದಲ್ಲಿ ವಿವರಿಸಿದ್ದಾರೆ.

Read More

ಬೆಂಗಳೂರು:- ನಗರದಲ್ಲಿ ಲಂಚಕ್ಕೆ ಬೇಡಿಕೆಯಿಟ್ಟ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ “ಲೋಕಾ” ಬಲೆಗೆ ಬಿದ್ದಿದ್ದಾರೆ. 9 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ರೆಡ್‌ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. https://ainlivenews.com/excise-officials-attacked-several-places-in-hassan/ ಹೋಟೆಲ್‌ವೊಂದರ ಪರವಾನಗಿ ಕೊಡಲು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಭೋಪಾಲ್ 9 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟದ್ದ. ಈ ಬಗ್ಗೆ ಮಂಗಳೂರು ಮೂಲದ ಹೋಟೆಲ್ ಮಾಲೀಕ ದೀಕ್ಷಿತ್ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು ಲಂಚ ಪಡೆಯುತ್ತಿದ್ದಾಗಲೇ ಕಾರ್ಮಿಕ ಭವನದಲ್ಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Read More

ಹಾಸನ:- ಹಾಸನದ ಹಲವೆಡೆ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದು, ಬರೋಬ್ಬರಿ 9 ಕೋಟಿ ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈ ದಾಳಿ ಮಾಡಿದ್ದಾರೆ. https://ainlivenews.com/why-did-virat-leave-rcb-team-and-go-to-mumbai/ ಹಾಸನ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೆಕರ್ ಡಿಸ್ಟಿಲರಿಸ್ ಆ್ಯಂಡ್ ಬ್ರಿವರೀಸ್ ಪ್ರೈವೆಟ್​ ಲಿ., (ಬ್ರಿವರಿ ವಿಭಾಗ) ನಲ್ಲಿ ತಪಾಸಣೆ ನಡೆಸಿದರು. ತಪಾಸಣೆ ವೇಳೆ ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ 9,54,08,422 ಕೋಟಿ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ. 56,236 ಬಾಕ್ಸ್‌ಗಳಲ್ಲಿದ್ದ (5,63,756.88 ಲೀಟರ್) ಪವರ್ ಕೂಲ್, ಲೆಜೆಂಡ್, ಬ್ಲಾಕ್‌ಫೋರ್ಟ್, ವುಡ್‌ಪೆಕರ್ ಬ್ರ್ಯಾಂಡ್​ ಬಿಯರ್​ ಅನ್ನು ವಶಪಡಿಸಿಕೊಂಡಿದ್ದಾರೆ. ರೂಗಳ ಬಿಯರ್ ವಶಕ್ಕೆ ವುಡ್‌ಪೆಕರ್ ಡಿಸ್ಟಿಲರಿಸ್ ಸನ್ನದುದಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾ.16 ರಿಂದ ಏ.6 ರವರೆಗೆ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಒಟ್ಟು 944 ಪ್ರಕರಣಗಳು ದಾಖಲು ಮಾಡಿಕೊಂಡಿದ್ದಾರೆ

Read More

IPL ಸೀಸನ್ 17 ರಲ್ಲಿ ಸತತ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ಹಾದಿ ಕಠಿಣಗೊಳಿಸಿಕೊಂಡಿದೆ. ಆರ್‌ಸಿಬಿ ತಂಡದ ಹೀನಾಯ ಸೋಲಿನ ನಂತರ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಮುಂಬೈಗೆ ಏಕಾಂಗಿಯಾಗಿ ಮರಳಲು ನಿರ್ಧರಿಸಿದರು. https://ainlivenews.com/athani-road-accident-biker-serious/ ಜೈಪುರದಲ್ಲಿ ಆರ್‌ಸಿಬಿ ತಂಡವನ್ನು ತೊರೆದು ವಿರಾಟ್ ಕೊಹ್ಲಿ ತಕ್ಷಣ ಮುಂಬೈಗೆ ಏಕಾಂಗಿಯಾಗಿ ಮರಳಲು ಕಾರಣಗಳು ತಿಳಿದಿಲ್ಲವಾದರೂ, ಅವರ ನಿರ್ಧಾರವು ಹಲವರ ಹುಬ್ಬುಗಳನ್ನು ಹೆಚ್ಚಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನಲ್ಲಿ ಗುರುವಾರ, ಏಪ್ರಿಲ್ 11ರಂದು ನಿಗದಿಪಡಿಸಲಾಗಿದ್ದು, ಅಭ್ಯಾಸ ಅವಧಿಯಲ್ಲಿ ವಿರಾಟ್ ಕೊಹ್ಲಿಯ ಉಪಸ್ಥಿತಿಯನ್ನು ನಿರೀಕ್ಷಿಸಬಹುದು. ಗಮನಿಸಬೇಕಾದ ಅಂಶವೆಂದರೆ, ವಿರಾಟ್ ಕೊಹ್ಲಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಐಪಿಎಲ್ ಪಂದ್ಯಕ್ಕೂ ಮೊದಲು ಕೆಲವು ದಿನಗಳ ವಿರಾಮ ಸಿಗಲಿದೆ. ಹೀಗಾಗಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ಎದುರು ನೋಡುತ್ತಿರಬಹುದು

Read More

ಅಥಣಿ :ತಾಲ್ಲೂಕಿನ ಚಿಕ್ಕಟ್ಟಿ ಗ್ರಾಮದ ಹೊರವಲಯದಲ್ಲಿ ಲಾರಿ ಹಾಗೂ ಬೈಕ್ ಮದ್ಯ ಬಿಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಬಿರ ಗಾಯಗೋಡಿದಾನೆ. https://ainlivenews.com/rain-forecast-today-in-these-districts-of-karnataka-2/ ಅಥಣಿ -ಜಮಖಂಡಿ ರಾಜ್ಯ ಹೆದ್ದಾರಿಯ ಚಿಕ್ಕಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ ಸoಭವಿಸಿದ್ದು, ಬೈಕ್ ಸವಾರ ರದ್ದೇರಹಟ್ಟಿ ಗ್ರಾಮದ ಚಿದಾನಂದ ಚಿಗರಿ ಹಾಗೂ ಸತ್ಯಪ್ಪ ಪರಮೇಶ್ವರ ಬ್ಯಾಡರಟ್ಟಿ ಎoದು ತಿಳಿದುಬಂದಿದೆ ಗಾಯಾಳುವನ್ನು ಸ್ಥಳೀಯ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವನಿಸಿದ್ದಾರೆ ಅಥಣಿ ಪೊಲೀಸ್ ಠಾಣೆಯಲಿ ಈ ಘಟನೆ ಸoಭವಿಸಿದೆ

Read More