Author: AIN Author

ಕೋಲಾರ: ಕೋಲಾರದ ಕೆಜಿಎಫ್ ನಲ್ಲಿ ಬಿಜೆಪಿ ಭಿನ್ನಮತ‌ ಬಹಿರಂಗವಾಗಿದೆ. ಎನ್ ಡಿ ಎ ಸಮನ್ಚಯ ಸಭೆಯಲ್ಲಿ ಕೆಜಿಎಫ್ ಮಾಜಿ ಶಾಸಕ ಸಂಪಂಗಿ ಮತ್ತು ಹಾಲಿ‌ಸಂಸದ ಮುನಿಸ್ಚಾಮಿ ನಡುವಿನ ಭಿನ್ನಮತ ಬಹಿರಂಗವಾಗಿದೆ. ಕೋಲಾರ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಪ್ರಚಾರ ಸಭೆಯಲ್ಲಿ ಚುನಾವಣಾ ಉಸ್ತುವಾರಿ ಸಂಪಂಗಿ ಗೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಸಂಸದ ಮುನಿಸ್ವಾಮಿ ಗೆ ಪ್ರಚಾರ ಉಸ್ತುವಾರಿ ನೀಡದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ನಲ್ಲಿ‌ ನಡೆದಿರುವ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆಯಾಗಿದೆ.

Read More

ತುಮಕೂರು: ಕುಡಿಯಲು ನೀರಿಲ್ಲದೇ ಗ್ರಾಮಸ್ಥರ ಪರದಾಡುವ ಸ್ಥಿತಿ ನಿರ್ಮಾಣವಾದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಮಲನಾಯಕನ ತಾಂಡ್ಯದಲ್ಲಿ ನಡೆದಿದೆ. ಗ್ರಾಪಂ ಸಮರ್ಪಕವಾಗಿ ನೀರು  ಬಿಡ್ತಿಲ್ಲ, ದಿನಗಟ್ಟಲೇ ಟ್ಯಾಂಕ್ ಬಳಿ ಕಾದರೂ ನೀರಿಲ್ಲ, ಬೆಳಿಗ್ಗೆ ಯಿಂದ ರಾತ್ರಿವರೆಗೂ‌ ಬಿಂದಿಗೆ ಇಟ್ಟು ಕಾಯುತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ಗ್ರಾಪಂ ಪಿಡಿಓ ನೀರಿನ ಬಗ್ಗೆ ಸಮಸ್ಯೆ ಕೇಳಲು ಹೋದರೇ ಉಡಾಫೆ ಉತ್ತರ ನೀಡುತ್ತಾರೆ. ಗ್ರಾಮದ ನಿವಾಸಿಗಳಿಗೆ ಹಾಗೂ ದನ ಕರುಗಳಿಗೆ ನೀರಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಗ್ರಾಪಂ ಜೊತೆಗೆ ಗ್ರಾಮದಲ್ಲಿ ಚರಂಡಿ ಸ್ವಚ್ಚತೆ ಮಾಡದೆ ಸುಮ್ಮನಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Read More

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣೆಯಲ್ಲಿ ಗೆದ್ದು ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂಬ ಆಶಯ ಹಿನ್ನೆಲೆ ಯುವಕರು ವಿಶಿಷ್ಟವಾಗಿ ಪ್ರಚಾರ ಮಾಡಿದ್ದಾರೆ. ನಾಲ್ವರು ಮೋದಿ ಅಭಿಮಾನಿಗಳು ನಮೋ ಬ್ರಿಗೇಡ್​ 2.O ಎಂದು ಬರೆದಿರುವ ಬ್ಯಾನರ್​ ಹಿಡಿದುಕೊಂಡು ಸ್ಕೈಡೈವಿಂಗ್ ಮಾಡಿದ್ದಾರೆ. ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ, ಬೆಂಗಳೂರಿನ ರಾಹುಲ ಡಾಕ್ರೆ, ಅನುಭವ ಅಗರವಾಲ್ ಮತ್ತು ಮಹರಾಷ್ಟ್ರದ ಹಿಮಾಂಶು ಸಾಬಳೆ ನಾಲ್ವರು ಬ್ಯಾಂಕಾಕ್​ನ ಖಾವ್ಯಾವ್ ಡ್ರಾಪ್ ಝೋನ್​ನಿಂದ ಮೋದಿ ಭಾವಚಿತ್ರವಿರು ಬಾವುಟ ಹಿಡಿದುಕೊಂಡು 13,000 ಅಡಿ ಎತ್ತರದಿಂದ ಹಾರಿದ್ದಾರೆ. ರಾಜಶೇಖರ್ ಹಾಗೂ ಅವರ ತಂಡ ಸ್ಕೈಡೈವಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಲತಾಣಲ್ಲಿ ವೈರಲ್ ಆಗಿದೆ.‌ ಈ ನಾಲ್ವರು ಯುವಕರು ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೂ ಸ್ಕೈ ಡೈವಿಂಗ್​ ಮಾಡಿದ್ದರು. ಕೈಯ್ಯಲ್ಲಿ ಜೈ ಶ್ರೀರಾಮ ಎಂದು ಬರೆದಿರುವ ಮತ್ತು ರಾಮ ಮಂದಿರದ ಫೋಟೋ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀ ರಾಮ್ ಎಂದು ಧುಮುಕಿದ್ದಾರೆ.

Read More

ವಿರಾಟ್ ಕೊಹ್ಲಿಯ ಅಭಿಮಾನಿಗಳಿಗೆ ಲೆಕ್ಕವೇ ಇಲ್ಲ… ಜಾಗತಿಕವಾಗಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವರ್ಚಸ್ವಿ ವ್ಯಕ್ತಿತ್ವದಿಂದ ಕೊಹ್ಲಿ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿದ್ದಾರೆ. ಆರ್​ಸಿಬಿ ಮತ್ತು ರಾಜಸ್ಥಾನ್​ ರಾಯಲ್ಸ್​ ಜೈಪುರದ ಸವಾಯಿ ಮಾನ್ಸಿಂಗ್​ ಮೈದಾನದಲ್ಲಿ ಮುಖಾಮುಖಿಯಾಗಿದ್ದರು. https://twitter.com/mufaddal_vohra/status/1776660465776837036?ref_src=twsrc%5Etfw%7Ctwcamp%5Etweetembed%7Ctwterm%5E1776660465776837036%7Ctwgr%5E2fd553a4435b3b2805ed4c5356eeee6c3a5ae337%7Ctwcon%5Es1_&ref_url=https%3A%2F%2Fnewsfirstlive.com%2Fa-fan-entered-into-the-ground-to-hug-virat-kohli-hg%2F ಆರ್​ಸಿಬಿ ತಂಡದ ಬ್ಯಾಟಿಂಗ್​ ಪ್ರದರ್ಶನದ ವೇಳೆ ಕೊಹ್ಲಿಯನ್ನು ಕಂಡ ಅಭಿಮಾನಿ ಮೈದಾನದತ್ತ ನುಗ್ಗಿದ್ದಲ್ಲದೆ, ಕೊಹ್ಲಿಯನ್ನು ಓಡಿ ಬಂದು ಅಪ್ಪಿಕೊಂಡಿದ್ದಾನೆ. ಯುವಕನು ಆರ್​ಸಿಬಿ ಟೀ ಶರ್ಟ್​ ಧರಿಸಿದ್ದನು. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಹಿಡಿದು ಮೈದಾನದಿಂದ ಹೊರಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.ಆಗ, ಆತನಿಗೆ ಏನೂ ಮಾಡಬೇಡಿ ಎಂದು ಕೊಹ್ಲಿ ಸಿಬ್ಬಂದಿಗೆ ಹೇಳ್ತಾರೆ. https://twitter.com/ImBansi07/status/1776657127471522014?ref_src=twsrc%5Etfw%7Ctwcamp%5Etweetembed%7Ctwterm%5E1776657127471522014%7Ctwgr%5E2fd553a4435b3b2805ed4c5356eeee6c3a5ae337%7Ctwcon%5Es1_&ref_url=https%3A%2F%2Fnewsfirstlive.com%2Fa-fan-entered-into-the-ground-to-hug-virat-kohli-hg%2F ಮೈದಾನದ ಸ್ಟಾಫ್‌ಗೆ ಕೊಹ್ಲಿ ಸಲಹೆ ನೀಡುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇತ್ತೀಚೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ಪ್ರವೇಶಿಸಿ ವಿರಾಟ್ ಭೇಟಿಯಾಗಿದ್ದ. ಆದರೆ, ಆತನನ್ನು ಹೊರಕ್ಕೆ ಕರೆದುಕೊಂಡು ಹೋಗಿದ್ದ ಸಿಬ್ಬಂದಿ ಕಾಲಿಂದ ಒದ್ದು ಥಳಿಸಿದ್ದರು. ಆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ…

Read More

ಬೆಂಗಳೂರು: ನಿಂತಿದ್ದ ಕಸದ ಲಾರಿಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಟೆಕ್ಕಿ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ (Whitefield Police Station)  ವ್ಯಾಪ್ತಿಯ ಬಾಲಗತ್ತ್ ಜಂಕ್ಷನ್‌ನಲ್ಲಿ ನಡೆದಿದೆ. ಭಾನುವಾರ ರಾತ್ರಿ 10:30 ಸುಮಾರಿಗೆ ಘಟನೆ ನಡೆದಿದ್ದು, https://ainlivenews.com/you-will-get-2-lakh-insurance-from-the-government-rs-3000-thousand-per-month/ ಒಡಿಶಾ ಮೂಲದ ಸಾಗರ್ (23) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ವರು ಟೆಕ್ಕಿಗಳಿಗಳಿಗೆ (Techie) ಸಣ್ಣಪುಟ್ಟ ಗಾಯಗಳಾಗಿವೆ. ನಾಲ್ವರೂ ಸಹ ಒಡಿಶಾ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಪಘಾತದಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ: ಪೈಲಟ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ದಿನಕ್ಕೆ 25-30 ವಿಮಾನಗಳ ಹಾರಾಟ ರದ್ದುಗೊಳಿ ಸಲಾಗುವುದು ಎಂದು ವಿಸ್ತಾರ ಏರ್‌ಲೈನ್ಸ್‌ (Vistara airlines) ತಿಳಿಸಿದೆ. ಪರಿಸ್ಕೃತ ವೇತನದ ವಿರುದ್ಧ ಅಸಮಾಧಾನಗೊಂಡಿರುವ ಪೈಲಟ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್‌ನಲ್ಲಿ ಪೈಲಟ್‌ಗಳ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ವಿಸ್ತಾರದಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ಕಡಿತಗೊಳಿಸಿರುವ ಬಗ್ಗೆ ಘೋಷಣೆ ಹೊರಬಿದ್ದಿದೆ. https://ainlivenews.com/you-will-get-2-lakh-insurance-from-the-government-rs-3000-thousand-per-month/ ರದ್ದತಿಗಳನ್ನು ಹೆಚ್ಚಾಗಿ ದೇಶೀಯ ನೆಟ್‌ವರ್ಕ್‌ನಲ್ಲಿ ಮಾಡಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಏರ್‌ಲೈನ್ ತಿಳಿಸಿದೆ. ದಿನಕ್ಕೆ ಸುಮಾರು 25-30 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಲಾಗಿದೆ. ಅಂದರೆ ನಾವು ಕಾರ್ಯನಿರ್ವಹಿಸುತ್ತಿದ್ದ ಸಾಮರ್ಥ್ಯದ ಸರಿಸುಮಾರು 10% ಕಡಿತಗೊಳಿಸಲಾಗುವುದು ಎಂದು ವಿಸ್ತಾರ ಏರ್‌ಲೈನ್ಸ್‌ ಮಾಹಿತಿ ನೀಡಿದೆ. ಮಾರ್ಚ್‌ 31 ರಿಂದ ಆರಂಭವಾಗಿರುವ ಬೇಸಿಗೆ ವೇಳಾಪಟ್ಟಿ ಪ್ರಕಾರ, ವಿಸ್ತಾರ ನಿತ್ಯ 300 ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸುತ್ತಿದೆ.

Read More

ಬೆಣ್ಣೆ ನಗರಿ,ಶಿಕ್ಷಣ ನಗರಿ ಎಂದೆಲ್ಲ ಕರೆಯುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮವರ್ಗದವರು, ಬಡವರು ಮತ್ತು ಕಡುಬಡವರ ಲಕ್ಷಾಂತರ ಜನರು ವಾಸಮಾಡುತ್ತಿದ್ದಾರೆ. ದಿನನಿತ್ಯದ ಬದುಕಿನ ಜಂಜಾಟಗಳ ನಾಗಾಲೋಟದಲ್ಲಿ ಕೆಲವು ಸಣ್ಣ ಸಣ್ಣ ವಿಷಯಗಳು ನಾಗರಿಕ ಸಮಾಜದ ಕಣ್ಣಿಗೆ ಬಿದ್ದರೂ ಹೃದಯಕ್ಕೆ ತಟ್ಟುವುದಿಲ್ಲ. ಆದರೆ,ದಾವಣಗೆರೆ ಶಾಮನೂರು ಕೆಳ ಸೇತುವೆಯನ್ನೆ ಸೂರು ಮಾಡಿಕೊಂಡು ಪುಟ್ಟ ನಾಯಿಮರಿ ಯೊಂದಿಗೆ ವಾಸವಿದ್ದ ವಯೋವೃದ್ಧೆಯನ್ನು ರಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾನವೀಯತೆಯನ್ನು ಮೆರೆದಿದ್ದಾರೆ. ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿಂದ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ,ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ಮಹಿಳೆಯ ಘನತೆಯ ಬದುಕಿಗೆ ಆಸರೆಯಾಗಿದ್ದಾರೆ. https://ainlivenews.com/you-will-get-2-lakh-insurance-from-the-government-rs-3000-thousand-per-month/ ಮೊದಮೊದಲು ತೀವ್ರ ಪ್ರತಿರೋಧ,ಆಕ್ರೋಶ,ಕೌಟುಂಬಿಕವಾಗಿ ತನ್ನ ಮೇಲಾದ ಆಕ್ರಮಣಗಳನ್ನು ಅಸ್ಪಷ್ಟವಾಗಿ ಹೇಳುತ್ತಿದ್ದ ಆ ವಯೋವೃದ್ಧೆ, ಉಂಡ ಸಂಕಟಗಳ ಕಾರಣಕ್ಕೋ ಏನೋ ತನ್ನೆದುರಿಗೆ ನಿಂತು ತನ್ನನ್ನು ವಿಚಾರಿಸುತ್ತಿದ್ದ…

Read More

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ದೇಶ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜೈಪುರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರುವಂತೆ ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂದು ನಮ್ಮ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಪಡಿಸ ಲಾಗುತ್ತಿದೆ. ನಮ್ಮ ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ, ಹಣದುಬ್ಬರ, ಅಸಮಾನತೆ, ದೌರ್ಜನ್ಯ ಹೆಚ್ಚಾಗಿದೆ. ಮೋದಿ ಸರ್ಕಾರ ಏನು ಮಾಡಿದೆ ಎಂಬುದು ನಮ್ಮೆಲ್ಲರ ಮುಂದೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ. https://ainlivenews.com/you-will-get-2-lakh-insurance-from-the-government-rs-3000-thousand-per-month/ ತನ್ನನ್ನು ತಾನು ಶ್ರೇಷ್ಠ ಎಂದು ಪರಿಗಣಿಸಿ, ಮೋದಿ ಅವರು ದೇಶದ ಘನತೆ ಮತ್ತು ಅದರ ಪ್ರಜಾಪ್ರಭುತ್ವ ವನ್ನು ನಾಶ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,…

Read More

ಬೆಂಗಳೂರು : ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಸೋಮವಾರ ಪ್ರಕಟಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ. 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕಳೆದ ಮಾರ್ಚ್‌ನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲಾಗಿತ್ತು.  https://ainlivenews.com/you-will-get-2-lakh-insurance-from-the-government-rs-3000-thousand-per-month/ ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳ ಸಹಿತ ಶಾಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸಿರುವ ಪ್ರತಿಯನ್ನು ಆಯಾ ಶಾಲೆಗಳಿಗೆ ರವಾನಿಸಲಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಸೋಮವಾರ ಶಾಲಾ ಹಂತದಲ್ಲಿ ಫಲಿತಾಂಶ ಪ್ರಕಟಿಸಬೇಕು. ಫಲಿತಾಂಶ ಪ್ರಕಟಿಸಿರುವ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಡಳಿಗೆ ಹಾಗೂ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಗಳು ತಮ್ಮ ಕಚೇರಿಗೆ ಮಾಹಿತಿ ನೀಡಬೇಕೆಂದು ಮಂಡಳಿಯ ಅಧ್ಯಕ್ಷರು ಸೂಚಿಸಿದ್ದಾರೆ.

Read More

ಬೆಂಗಳೂರು: ಬಸ್ ಸ್ಟ್ಯಾಂಡ್ʼ​ನಲ್ಲಿ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ  ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರ ಮೇಲೆ‌ ಪುಡಿರೌಡಿಗಳು ಲಾಂಗ್ ಬೀಸಿದ ಘಟನೆ ಕುಮಾರಸ್ವಾಮಿ ಲೇಔಟ್​ನ ಬಿಎಂಟಿಸಿ E ಬಸ್ ನಿಲ್ದಾಣದಲ್ಲಿ ಏಪ್ರಿಲ್‌ 4ರ ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ. ಕುಡಿದ  ಮತ್ತಿನಲ್ಲಿದ್ದ ಕಿಡಿಗೇಡಿಗಳಿಗೆ ರಾತ್ರಿ ಬಸ್ ಸ್ಟ್ಯಾಂಡ್​ನಲ್ಲಿ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ.  ಇದರಿಂದ ಚಾಲಕ ನಾಗೇಂದ್ರ ಎಂಬುವವರಿಗೆ ತಲೆ, ಕಣ್ಣಿನ ಕೆಳಭಾಗ ಹಾಗೂ ಎಡಕೈಗೆ ಗಾಯವಾಗಿದೆ. ಇನ್ನು ಮಚ್ಚು ಬಿಸುತ್ತಾ ಒಡಿಸಿಕೊಂಡು ಬರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ದೂರಿನಲ್ಲಿ ಏನಿದೆ? ಸುಮಾರು 30 ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕನಾಗಿರುವ ನಾಗೇಂದ್ರ, ಅವರು ಏ.4ರಂದು ಮಾರ್ಗ ಸಂಖ್ಯೆ 15E/2ರಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ 15 ಇ ಬಸ್‌ ನಿಲ್ದಾಣದಲ್ಲಿ ಅಂದಿನ ಕರ್ತವ್ಯ ಮುಗಿಸಿ ಮಲಗಿದ್ದ ಕಂಡೆಕ್ಟರ್ ಹಾಗೂ ಡ್ರೈವರ್, ಬಸ್ ನಿಲ್ದಾಣಕ್ಕೆ ಬಂದ 4 ಜನ ಅಪರಿಚಿತರು ನಿಲ್ದಾಣದಲ್ಲಿ ಜೋರಾಗಿ…

Read More