Author: AIN Author

‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಪುಷ್ಪ 2: ದಿ ರೂಲ್‌’ ಸಿನಿಮಾದ ಟೀಸರ್ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಪುಷ್ಪ 2’ ಸಿನಿಮಾದ ಟೀಸರ್ ಪಕ್ಕಾ ಮಾಸ್ ಶೈಲಿಯಲ್ಲಿ ಇದೆ. ಈ ಟೀಸರ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿ, ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವನ್ನು ಹಾಕಿಕೊಂಡು, ಕಾಲಿಗೆ ಗಜ್ಜೆ ಹಾಕಿಕೊಂಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ತ್ರಿಶೂಲ ಹಿಡಿದುಕೊಂಡು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಜಾತ್ರೆಯ ಬ್ಯಾಗ್ರೌಂಡ್‌ನಲ್ಲಿ ಈ ಟೀಸರ್ ಮೂಡಿಬಂದಿದೆ. ‘ಪುಷ್ಪ 2: ದಿ ರೂಲ್’ ಸಿನಿಮಾದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ‘ಪುಷ್ಪ 2’ ಟೀಸರ್ ಅನ್ನು ಇಷ್ಟಪಟ್ಟು ಲಕ್ಷಾಂತರ ಮಂದಿ ಲೈಕ್ ಒತ್ತಿದ್ದಾರೆ. ಪುಷ್ಪ 2 ಸಿನಿಮಾವು ಆಗಸ್ಟ್ 15ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಫಹಾದ್ ಫಾಸಿಲ್, ರಾವ್…

Read More

ಅಯೋಧ್ಯೆ: ಈ ಬಾರಿಯ ರಾಮನವಮಿ ಅಯೋಧ್ಯೆಯಲ್ಲಿ (Ayodhya) ವಿಶೇಷವಾಗಿರಲಿದೆ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಹೀಗಾಗಿ ರಾಮಲಲ್ಲಾನ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ರಾಮನವಮಿಯಂದು ರಾಮಮಂದಿರದಲ್ಲಿರುವ ಶ್ರೀರಾಮನ ಹಣೆಗೆ ಸೂರ್ಯ ತಿಲಕವಿಡಲು ಸಿದ್ಧತೆಗಳು ನಡೆಯುತ್ತಿವೆ. ರೂರ್ಕಿಯ ವಿಜ್ಞಾನಿಗಳು ಹಗಲಿರುಳು ಈ ಕೆಲಸದಲ್ಲಿ ನಿರತರಾಗಿದ್ದಾರೆ. 500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶ್ರೀರಾಮನು ಗರ್ಭಗುಡಿಯಲ್ಲಿ ಕುಳಿತಿದ್ದಾನೆ. ರಾಮನವಮಿಯ ದಿನದಂದು ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಬೀಳುವ ರೀತಿಯಲ್ಲಿ ರಾಮಮಂದಿರದ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ರಾಮ ಮಂದಿರದ (Rama Mandir) ಕೆಳ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಮೊದಲ ಮಹಡಿಯ ಕಾಮಗಾರಿ ನಡೆಯುತ್ತಿದ್ದು, ಶಿಖರದ ಕಾಮಗಾರಿ ಇನ್ನೂ ಬಾಕಿ ಇದೆ.  https://ainlivenews.com/you-will-get-2-lakh-insurance-from-the-government-rs-3000-thousand-per-month/ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ದೇವಾಲಯವು ಪೂರ್ಣಗೊಂಡು ಶಿಖರವನ್ನು ನಿರ್ಮಿಸಿದಾಗ, ಶಿಖರದ ಮೇಲೆ ಸಾಧನವನ್ನು ಸ್ಥಾಪಿಸಿ, ಪ್ರತಿ ರಾಮನವಮಿಯಂದು ಭಗವಾನ್ ರಾಮನ ಹಣೆಗೆ ಸೂರ್ಯ ತಿಲಕವನ್ನು ಇರಿಸಲಾಗುತ್ತದೆ. ಆದರೆ ಇದಕ್ಕಾಗಿ ಭಕ್ತರು ತುಂಬಾ…

Read More

ಬೆಳಗಾವಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜಗತ್ತಿನ ರಾಜಕಾರಣ ನಿರ್ಧರಿಸುವ ಶಕ್ತಿ ಭಾರತಕ್ಕೆ ದೊರೆತಿದೆ. ಈ ಮೂಲಕ ಮೋದಿ ಜಾಗತಿಕ ನಾಯಕರಾಗಿ ಹೊರ ಹೊಮ್ಮಿದ್ದಾರೆ. ನಿಮ್ಮ ಒಂದು ಮತ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ದೇಶವನ್ನು ಇನ್ನೂ ಬಲಿಷ್ಠಗೊಳಿಸಿ ವಿಶ್ವ ಗುರುವನ್ನಾಗಿಸುತ್ತದೆ’ ಎಂದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಾಂಬ್‌ ಸಂಸ್ಕೃತಿ ಮರೆಯಾಗಿ ಜನತೆ ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ ಸಿಂಹ ಹೇಳಿದರು. https://ainlivenews.com/you-will-get-2-lakh-insurance-from-the-government-rs-3000-thousand-per-month/ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮಾತನಾಡಿ, ’30 ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಕಾರ್ಯ ನಿರ್ವಹಿಸಿದ್ದೇನೆ. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ಎರಡು ಬಾರಿ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಪ್ರವಾಹ, ಕೋವಿಡ್‌ ಸಂದರ್ಭದಲ್ಲೂ ವಿಶೇಷ ಸೇವೆ ಸಲ್ಲಿಸಿದ್ದೇನೆ. ವಿರೋಧಿಗಳ ಹೇಳಿಕೆಗಳಿಗೆ ಮಹತ್ವ ನೀಡಬೇಡಿ. ದಿವಂಗತ ಸುರೇಶ ಅಂಗಡಿ ಅವರ ಯೋಜನೆಗಳನ್ನು ಕಾರ್ಯಗತ ಮಾಡಲು ನನಗೆ ಅವಕಾಶ ನೀಡಿ’ ಎಂದು…

Read More

ಬೆಂಗಳೂರು: ಶೋಭಾ ಕರಂದ್ಲಾಜೆ ಪ್ರಚಾರದ ವೇಳೆ ಅವಘಡ ಸಂಭವಿಸಿದೆ. ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ರಸ್ತೆ ಬದಿಗೆ ಕಾರು ನಿಲ್ಲಿಸಿ ಡೋರ್ ತೆಗೆಯುತ್ತಿದ್ದಂತೆ ಕಾರನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತ ಡೋರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. https://ainlivenews.com/you-will-get-2-lakh-insurance-from-the-government-rs-3000-thousand-per-month/  ಆದರೆ, ಕೆಳಗೆ ಬಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಹಿಂದೆ ಬರುತ್ತಿದ್ದ ಖಾಸಗಿ ಬಸ್ ಕೂಡ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹೌದು, ಶೋಭಾ ಕರಂದ್ಲಾಜೆ ಕಾರಿಗೆ ದ್ವಿಚಕ್ರವಾಹನ ಡಿಕ್ಕಿ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಕೆ.ಆರ್. ಪುರದ ಗಣೇಶ ದೇವಸ್ಥಾನದ ಬಳಿ ನಡೆದಿದೆ. ಮೃತರನ್ನು ಕೆ.ಆರ್. ಪುರದ ಬೈಕ್‌ ಸವಾರ ಬಿಜೆಪಿ ಕಾರ್ಯಕರ್ತ ಪ್ರಕಾಶ್ (35) ಎಂದು ಗುರುತಿಸಲಾಗುದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕಾರು ಚಾಲಕ ರಸ್ತೆ ಬದಿಯಲ್ಲಿ ಕಾರನ್ನು…

Read More

ಶಿವಮೊಗ್ಗ: ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ. ಕೈಜೋಡಿಸಿ ವಿನಂತಿಸುತ್ತೇನೆ. ನಿಮ್ಮ ಸಮಸ್ಯೆಗಳೇನಿದ್ದರೂ ದಿಲ್ಲಿ ಜೊತೆ ಮಾತನಾಡಿ, ನಾವಂತೂ ನಿಮ್ಮ ಜತೆ ಇರುತ್ತೇನೆ. ನೀವು ಸಹ ನಮ್ಮೊಂದಿಗಿರಬೇಕು ಎಂಬುದು ನಮ್ಮ ಆಸೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಬಿಜೆಪಿ ಪಕ್ಷ ಕಟ್ಟುವಲ್ಲಿಈಶ್ವರಪ್ಪ ಅವರ ಕೊಡುಗೆ ಅಪಾರವಾಗಿದೆ. ಅವರು ಹರಿಯರು, ಯಾವುದೋ ಪರಿಸ್ಥಿತಿ ಈ ಸನ್ನಿವೇಶಕ್ಕೆ ದೂಡಿದೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿ ಆಗಲು ಪಕ್ಷ ದ ಹಿತದೃಷ್ಟಿಯಿಂದ ಕೈಜೋಡಿಸಬೇಕು ” ಎಂದು ಕೋರಿದರು. https://ainlivenews.com/you-will-get-2-lakh-insurance-from-the-government-rs-3000-thousand-per-month/ ರಾಘವೇಂದ್ರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಈ ಸಲ ಎರಡು ಲಕ್ಷದ ಅಂತರದಲ್ಲಿಗೆ ಲ್ಲುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ರಾಜ್ಯದಲ್ಲಿಇನ್ನೂ ನಾಲ್ಕೈದು ಸಲ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಯೋಗಿ ಆದಿತ್ಯನಾಥ್‌ ಸಹ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.

Read More

ಚೆನ್ನೈ: ತವರಲ್ಲಿ ಮೊದಲೆರಡು ಪಂದ್ಯ ಗೆದ್ದು ಬಳಿಕ ತವರಿನಾಚೆಯ ಎರಡೂ ಪಂದ್ಯಗಳಲ್ಲಿ ಸೋತಿರುವ ಹಾಲಿ ಚಾಂಪಿಯನ್ ಚೆನ್ನೈ ತಂಡ ಈಗ ಬಲಿಷ್ಠ ಕೋಲ್ಕತಾದ ಸವಾಲು ಎದುರಿಸಲು ಸಜ್ಜಾಗಿದೆ. ಚೆಪಾಕ್‌ನಲ್ಲಿ ಪಂದ್ಯ ನಡೆಯಲಿದ್ದು, ಸಿಎಸ್‌ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದೆ. ಸತತ ಸೋಲು ಕಂಡ ಹೊರತಾಗಿಯೂ ಚೆನ್ನೈ ತಂಡ ತವರಿನಲ್ಲಿ ಎಷ್ಟು ಬಲಿಷ್ಠ ಎಂಬುದು ಕೆಕೆಆರ್‌ಗೆ ಅರಿವಿದೆ. ಆದರೆ ಶಿವಂ ದುಬೆ ಹೊರತುಪಡಿಸಿ ಇತರ ಯಾವ ಬ್ಯಾಟರ್ ಕೂಡಾ ನಿರ್ಭೀತಿಯಿಂದ ಬ್ಯಾಟ್ ಬೀಸುತ್ತಿಲ್ಲ. ಅಜಿಂಕ್ಯ ರಹಾನೆ, ಡ್ಯಾರಿಲ್ ಮಿಚೆಲ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಅಬ್ಬರಿಸಬೇಕು. ಸ್ಫೋಟಕ ಬ್ಯಾಟರ್ ಸಮೀರ್ ಮೇಲ್ಕ್ರಮಾಂಕದಲ್ಲಿ ಆಡಿದರೂ ಅಚ್ಚರಿಯಿಲ್ಲ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮುಸ್ತಾಫಿಜುರ್, ಪತಿರನ ಕೆಕೆಆರ್ ವಿರುದ್ಧ ಆಡುವ ಬಗ್ಗೆ ಖಚಿತತೆಯಿಲ್ಲ. https://ainlivenews.com/you-will-get-2-lakh-insurance-from-the-government-rs-3000-thousand-per-month/ ಮತ್ತೊಂದೆಡೆ ಕೆಕೆಆರ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಸತತ 4ನೇ ಜಯದ ನಿರೀಕ್ಷೆಯಲ್ಲಿದೆ. ಆಕ್ರಮಣಕಾರಿ ಬ್ಯಾಟರ್‌ಗಳು ತಂಡದ ಪ್ಲಸ್ ಪಾಯಿಂಟ್. ಅಬ್ಬರಿಸುತ್ತಿರುವ ನರೈನ್, ರಸೆಲ್, ರಿಂಕು ಸಿಂಗ್ ಚೆನ್ನೈ ಬ್ಯಾಟರ್‌ಗಳಿಗೆ ಕಠಿಣ…

Read More

ಬೆಂಗಳೂರು: ನಮ್ಮ ರಾಷ್ಟ್ರವನ್ನು ಮುನ್ನೆಡಸಲು ಎಲ್ಲರೂ ಒಂದಾಗಿ ತಪ್ಪದೆ ಮತ ಚಲಾಯಿಸೋಣವೆಂದು ಚುನಾವಣಾ ರಾಯಭಾರಿ, ಚಿತ್ರನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ರವರು ವಿಧ್ಯಾರ್ಥಿಗಳನ್ನು‌ ಪ್ರೇರೇಪಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವಕ್ಕೆ ಹಲೋ(Say Hello to Democracy) ಎಂದಾಗ ಮಾತ್ರ ನಾವು ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು. ಶೇ. 20 ರಷ್ಟು ಮಂದಿ ಒಂದಾಗಿ ಕೂಗಿದಾಗ ಹೆಚ್ಚು ಶಬ್ದ ಬರಲು ಸಾಧ್ಯವಿಲ್ಲ. ಅದೇ ಶೇ. 100 ರಷ್ಟು ಮಂದಿ ಒಟ್ಟಾಗಿ ಕೂಗಿದಾಗ ಶಬ್ದ ಜೊರಾಗಿ ಬರಲಿದೆ. ಅದೇ ರೀತಿ ಚುನಾವಣೆಯಲ್ಲಿಯೂ ಶೇ. 20 ರಷ್ಟು ಮತದಾನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಒಟ್ಟಾಗಿ ಶೇ. 100 ರಷ್ಟು ಮತ ಚಲಾಯಿಸಿದಾಗ ಮಾತ್ರ ನಾವು ಉತ್ತಮ‌ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು. ಗೂಗಲ್ ನಲ್ಲಿ ನಿಮ್ಮ ಕ್ಷೇತ್ರದ ಆಭ್ಯರ್ಥಿ…

Read More

ಬೆಂಗಳೂರು: ಕೋಣನಕುಂಟೆಯಲ್ಲಿ ಹೋಟೆಲ್​​​ ಪಕ್ಕದ ಖಾಲಿ ಜಾಗದಲ್ಲಿ ವೀರೇಶ್​ ಎಂಬುವವರ ಮೃತದೇಹ ಪತ್ತೆ ಆಗಿದೆ. ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ವೀರೇಶ್ ಮೂಲತಃ ರಾಯಚೂರಿನವನು. ಬೆಂಗಳೂರಿನ ಕೋಣನಕುಂಟೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. 80 ಅಡಿ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿ ವೀರೇಶ್ ಉಳಿದುಕೊಳ್ಳುತ್ತಿದ್ದ. https://ainlivenews.com/you-will-get-2-lakh-insurance-from-the-government-rs-3000-thousand-per-month/ ಆದರೆ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳದಲ್ಲಿ ರಕ್ತ ಕಲೆಗಳು ಪತ್ತೆಯಾಗಿವೆ. ಆದರೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ಸ್ಥಳಕ್ಕೆ FSL ಟೀಂ ಕೂಡ ಭೇಟಿ ನೀಡಿ ಪರಿಶೀಲಿಸಿದೆ. ಸದ್ಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಕೋಣನಕುಂಟೆ ಪೊಲೀಸರಿಂದ Crpc 174Cರಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.

Read More

ನವದೆಹಲಿ: ರಾಜ್ಯದ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ (Board Exam Results) ಪ್ರಕಟಿಸದಂತೆ ಸುಪ್ರೀಂಕೋರ್ಟ್ (Supreme Court of India) ತಡೆ ನೀಡಿದೆ. 5,8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪರೀಕ್ಷೆಗೆ ಅನುಮತಿ ನೀಡಿದ್ದ ಹೈಕೋರ್ಟ್ (High Court of Karnataka) ಆದೇಶವನ್ನು ಪ್ರಶ್ನಿಸಿ, ರುಪ್ಸಾ, ಅವರ್ ಸ್ಕೂಲ್, ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. https://ainlivenews.com/you-will-get-2-lakh-insurance-from-the-government-rs-3000-thousand-per-month/ ಇದೀಗ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪರೀಕ್ಷಾ ಫಲಿತಾಂಶ ಪ್ರಕಟಿಸಿದಂತೆ ತಡೆ ನೀಡಿದೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿಗೊಳಿಸಿದೆ. ಈಗಾಗಲೇ 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶವನ್ನು ಬೆಳಗ್ಗೆ 10 ಗಂಟೆಗೆ ಶಾಲೆಗಳು ಪ್ರಕಟ ಮಾಡಿವೆ. ಎಲ್ಲಾ ಶಾಲೆಗಳಲ್ಲಿ ಆಡಳಿತ ಮಂಡಳಿಗಳು ಫಲಿತಾಂಶ ಪ್ರಕಟ ಮಾಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಫಲಿತಾಂಶ ರವಾನೆ ಮಾಡಲಾಗಿದೆ. ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಗೆ ಮಾಹಿತಿ ಅಪ್‍ಲೋಡ್ ಮಾಡಬೇಕಿದೆ.

Read More

ಬೆಂಗಳೂರು: ಯುಗಾದಿ ಹಬ್ಬ ಮತ್ತು ಹೊಸ ತೊಡಕು ಪ್ರಯುಕ್ತ ನಂದಿನಿ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟ ಮಾಡುವ ಸ್ಪರ್ಧೆಯಲ್ಲಿ 12 ಮುದ್ದೆ ಅದರ ಮೇಲೆ ಅರ್ಧ ಮುದ್ದೆ ಊಟ ಮಾಡಿದ ಸ್ಥಳೀಯ ನಿವಾಸಿಗಳಾದ 55 ವರ್ಷದ ವೆಂಕಟರಾಮ ಪುರುಷರ ವಿಭಾಗದಲ್ಲಿ ಮತ್ತು ಏಳೂವರೆ ಮುದ್ದೆ ಊಟ ಮಾಡುವ ಮೂಲಕ 35 ವರ್ಷದ ಗೀತಾ ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು. ಕೆಂಪೇಗೌಡ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಂದಿನಿ ಬಡಾವಣೆಯ ಜೈ ಮಾರುತಿ ನಗರದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಕುಣಿಗಲ್‌, ದೊಡ್ಡಬಳ್ಳಾಪುರ, ಮಂಡ್ಯ, ಮಳವಳ್ಳಿ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ನಾಗಮಂಗಲ ಸೇರಿದಂತೆ ವಿವಿಧೆಡೆಯಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. https://ainlivenews.com/you-will-get-2-lakh-insurance-from-the-government-rs-3000-thousand-per-month/ ಊಟ ಮುಗಿಸಲು 30 ನಿಮಿಷ ಸಮಯ ನಿಗದಿಗೊಳಿಸಲಾಗಿತ್ತು. ಸ್ಪರ್ಧೆ ವೀಕ್ಷಿಧಿಸಲು ಸುಮಾರು 500ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಪ್ರತಿ ಒಂದು ಮುದ್ದೆ ಊಟ ಮಾಡಿದ ನಂತರ ವೀಕ್ಷಕರು ಸಿಳ್ಳೆ-ಚಪ್ಪಾಳೆ ಹೊಡೆದು ಸ್ಪರ್ಧಿಗಳನ್ನು…

Read More