Author: AIN Author

ಕೋಲಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಟಾನಕ್ಕೆ ತಂದಿರುವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ ಶಾಲಾ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಹಿಂಪಡೆದಿದೆ ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​ ಅವ್ರು ಆರೋಪಿಸಿದರು. https://ainlivenews.com/during-the-campaign-of-bommai-dissent-erupted-in-the-bjp/ ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕಾಗೋಷ್ಟಿ ನಡೆಸಿ ಮಾತನಾಡಿದರು, ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಂತಹ ಯೋಜನೆಗಳನ್ನು ಗ್ಯಾರೆಂಟಿಗಳಿಗೆ ಬಳಸಿಕೊಂಡಿದೆ .ಸಿದ್ದರಾಮಯ್ಯ ಸರ್ಕಾರವು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ತೀವ್ರ ಬರ ಪರಿಸ್ಥಿತಿ ನಡುವೆಯು ರೈತರ ನೆರವಿಗೆ ದಾವಿಸುತ್ತಿಲ್ಲ ಎಂದು ತಿಳಿಸಿದ್ರು. ಕರ್ನಾಟಕದಲ್ಲಿ ತೀವ್ರ ಬರಗಾಲ ಎದುರಾಗಿದ್ದು ಕುಡಿಯುವ ನೀರಿನ ಸಮಸ್ಯೆಯಾಗಿದೆ. ಜನರು ಕಂಗಾಲಾಗಿದ್ದಾರೆ. ಅವರ ನೆರವಿಗೆ ಧಾವಿಸದೆ ವಿನಾಕಾರಣ ಕಾಂಗ್ರೆಸ್​ನವರು ಕೇಂದ್ರ ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಪಾಲು ಬಿಡುಗಡೆಯಾಗಿದೆ. ಆ ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದರು. 5 ಗ್ಯಾಂರೆಂಟಿ ಯೋಜನೆಗಳನ್ನು ಕಾಂಗ್ರೆಸ್​ನವರು ಘೋಷಿಸಿದರು. ಇದಕ್ಕೆ ಹಣ ಎಲ್ಲಿಂದ ತರಲಾಗುತ್ತದೆ ಎಂದು ಪ್ರಶ್ನಿಸಿದಾಗ ಉತ್ತರ ನೀಡಲಿಲ್ಲ.…

Read More

ಗದಗ:- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರದ ವೇಳೆಯೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜರುಗಿದೆ. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ವಿರುಧ್ಧ ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಕಾರ್ಯಕರ್ತರ ಮಧ್ಯೆ ನೂಕಾಟ ತಳ್ಳಾಟ ನಡೆದಿದ್ದು, ಶಾಸಕ ಚಂದ್ರು ಲಮಾಣಿ ಸ್ಟೇಜ್ ಹತ್ತಬಾರದು, ರೋಡ್ ಶೋಗೆ ಬರಬಾರದು ಎಂದು ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ ಸಿ ಪಾಟೀಲ್ ಮುಂದೆಯೇ ಭಿನ್ನಮತ ಪ್ರದರ್ಶನ ಮಾಡಿದ್ದಾರೆ. ಎಂಎಲ್ ಎ ಡಾ. ಚಂದ್ರು ಲಮಾಣಿ ಗೋ ಬ್ಯಾಕ್ ಎಂಬ ಪೋಸ್ಟರ್ ಹಿಡಿದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಬೊಮ್ಮಾಯಿ,‌ ಸಿ ಸಿ ಪಾಟೀಲ್ ಮುಜುಗರಕ್ಕೀಡಾಗಿದ್ದಾರೆ. ಕಾರ್ಯಕರ್ತರನ್ನು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದಾರೆ. ಭಿನ್ನಮತ ಶಮನಕ್ಕೆ ಬೊಮ್ಮಾಯಿ ಮುಂದಾಗಿದ್ದು, ಕಾರ್ಯಕ್ರಮ ಮುಗಿದ ನಂತರ ಕಾರ್ಯಕರ್ತರೊಂದಿಗೆ ಪ್ರತ್ಯೇಕವಾಗಿ ಮಾತಾಡ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಭಿನ್ನಾಭಿಪ್ರಾಯ ಇದೆ ನಾನು ಹೆಳಿ ಬಗೆಹರಿಸಿದ್ದೇನೆ, ನಾಳೆ ಅಥವಾ…

Read More

ಗದಗ:- ಈ ಬಾರಿ ನಾವು ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಚುನಾವಣೆ ಪ್ರಚಾರದಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲಾ ವರ್ಗದ ಜನರು ಬಹಿರಂಗವಾಗಿ ಬಂದು ಬೆಂಬಲ‌ ಸೂಚಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಮಗೆ ಬೆಂಬಲ ಹೆಚ್ಚಾಗುತ್ತಿದೆ. ಜನರು ಸಹ ತೀರ್ಮಾನ ಮಾಡಿದ್ದಾರೆ ಅನಿಸುತ್ತದೆ. ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ ” ಎಂದರು https://ainlivenews.com/shreyas-patel-should-win-if-i-want-to-become-a-minister/ ಇನ್ನು ಕಾಂಗ್ರೆಸ್ ಗ್ಯಾರಂಟಿ ಕುರಿತು ಖಾರವಾಗಿ ಮಾತನಾಡಿದ ಅವರು, ” ನಮ್ಮ ಗ್ಯಾರಂಟಿಗಳು ಶಾಶ್ವತವಾದ ಬದುಕು ಕಟ್ಟುವ ಗ್ಯಾರಂಟಿಗಳು. ಜನರಿಗೆ ಉದ್ಯೋಗ ಕೊಟ್ಟು, ಶಾಶ್ವತ ಬದುಕು ಕಟ್ಟುವ ಗ್ಯಾರಂಟಿಗಳು ” ಎಂದರು. ಎಲ್ಲರ ಆರ್ಥಿಕ ಸಮೀಕ್ಷೆ ನಡೆಸಿ ಸಮಾನತೆ ತರುವ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಎರಡು ತರನಾದ ಸಮಾನತೆ ಇರುತ್ತದೆ. ಒಂದು ಬಡವರನ್ನು ಶ್ರೀಮಂತರನ್ನಾಗಿ ಮಾಡಿ ಸಮಾನತೆ ಮಾಡುವುದು. ಇನ್ನೊಂದು ಎಲ್ಲರನ್ನೂ ಬಡವರನ್ನಾಗಿ ಮಾಡುವ ಸಮಾನತೆ. ರಾಹುಲ್‌ ಗಾಂಧಿ…

Read More

ಹಾಸನ:- ನಾನು ಮುಂದೆ ಮಂತ್ರಿ ಆಗಬೇಕಾದರೆ ಶ್ರೇಯಸ್ ಪಟೇಲ್ ಗೆಲ್ಲಿಸಿ ಎಂದು ಹಾಸನ ಜನತೆಗೆ ಕೆಎಂ ಶಿವಲಿಂಗೇಗೌಡ ಸಲಹೆ ಕೊಟ್ಟಿದ್ದಾರೆ. https://ainlivenews.com/cms-only-job-is-to-abuse-power/ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ಮಾಡುವುದರ ಜೊತೆಗೆ ತಮ್ಮನ್ನ ಮಂತ್ರಿ ಮಾಡಬೇಕೆನ್ನುವ ಆಗ್ರಹವನ್ನು ಬಹಳ ಚಾಕ್ಯಚಕ್ಯತೆಯಿಂದ ಮಾಡಿದರು. ಮಾತು ಆರಂಭಿಸಿದ ಬಳಿಕ ಬರಪರಿಹಾರ ನಿಧಿ ಮಾಡದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದದ ಗೌಡರು, ನಂತರ ತಾವು ಮಂತ್ರಿಯಾಗುವ ಇಂಗಿತವನ್ನು ಗಟ್ಟಿಧ್ವನಿಯಲ್ಲಿ ಹೇಳಿದರು. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಯೂ ತಾನು ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿರುವುದಾಗಿ ಹೇಳಿದ ಅವರು ಗೆದ್ದ ಬಳಿಕ ತನ್ನನ್ನು ಮಂತ್ರಿ ಮಾಡಬೇಕಿತ್ತು, ಆದರೆ ಅದ್ಯಾವುದೋ ಕಾರಣಕ್ಕೆ ಸಚಿವ ಸ್ಥಾನ ನೀಡದೆ ಹೌಸಿಂಗ್ ಬೋರ್ಡ್ ಅಧ್ಯಕ್ಷನ ಸ್ಥಾನ ನೀಡಿದರು ಎಂದರು. ಆದರೆ ಅದನ್ನು ತಾನು ತಿರಸ್ಕರಿಸುವುದಾಗಿ ಹೇಳಿದ ಗೌಡರು ತನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಾದರೆ ಶ್ರೇಯಸ್ ಪಟೇಲ್ ರನ್ನು ಪ್ರಚಂಡ ಬಹಮತದಿಂದ ಗೆಲ್ಲಿಸಬೇಕು, ಗೆಲ್ಲಿಸಿದರೆ ತಾನು ಖಂಡಿತ ಮಂತ್ರಿ ಆಗುವೆ ಎಂದರು.

Read More

ಮಡಿಕೇರಿ:- ಅಧಿಕಾರ ದುರ್ಬಳಕೆ ಮಾಡುವುದಷ್ಟೇ CM ಸಿದ್ದರಾಮಯ್ಯ ಕೆಲಸ ಎಂದು ಮಾಜಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೆ ಅಷ್ಟೇ. ಆದರೆ ಕೆಲಸ ಮಾಡುವ ಅನುಭವ, ಕಾಳಜಿ ಸಿದ್ದರಾಮಯ್ಯನವರಿಗೆ ಇಲ್ಲ. ಬರೀ ದ್ವೇಷ, ಅಧಿಕಾರ ದುರ್ಬಳಕೆ ಮಾಡುವುದಷ್ಟೇ ಇವರ ಕೆಲಸ. ಈಗ ಲೂಟಿ ಮಾಡಿರುವ ಹಣವನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುತ್ತೇವೆ ಎನ್ನುವ ಹುಚ್ಚು ವಿಶ್ವಾಸದಲ್ಲಿ ಇದ್ದಾರೆ. ಆದರೆ ಸಂಪೂರ್ಣ ಸೋಲುತ್ತಾರೆ ಎಂದರು. https://ainlivenews.com/dont-delay-will-give-jacks-a-seat/ ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅದನ್ನು ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ. ಮಂಜುನಾಥ್ ಗೆಲ್ಲುತ್ತಾರೆ. ಆ ಮೂಲಕ ಸಿದ್ದರಾಮಯ್ಯ, ಡಿಕೆಶಿ ಟೀಂಗೆ ಬುದ್ಧಿ ಕಲಿಸಲಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮುಕ್ತ ದೇಶವಾಗಬೇಕಿತ್ತು. ಕಾಂಗ್ರೆಸ್ ರಾಜ್ಯಕ್ಕೆ ಒಂದು ಶಾಪವಿದ್ದಂತೆ…

Read More

ಇನ್ನೂ ತಡಬೇಡ ವಿಲ್‌ ಜ್ಯಾಕ್ಸ್‌ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಆರ್‌ಸಿಬಿಗೆ ಸನ್‌ರೈಸರ್ಸ್‌ ಹೈದರಬಾದ್‌ ಮಾಜಿ ಕೋಚ್ ಟಾಮ್‌ ಮೂಡಿ ಸಲಹೆ ಕೊಟ್ಟಿದ್ದಾರೆ. ರಾಜಸ್ಥಾನ್‌ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸಿತ್ತು. ಆ ಮೂಲಕ ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳ ಪೈಕಿ ಆರ್‌ಸಿಬಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. https://ainlivenews.com/post-that-rcb-lost-because-of-fathers-wife/ ಪ್ರಸಕ್ತ ಟೂರ್ನಿಯಲ್ಲಿ ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ 109 ರನ್, ಗ್ಲೆನ್ ಮ್ಯಾಕ್ಸ್‌ವೆಲ್‌ 32 ರನ್‌ ಹಾಗೂ ಕ್ಯಾಮೆರಾನ್‌ ಗ್ರೀನ್ 68 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಮತ್ತೊಂದೆಡೆ ಬೆಂಚ್‌ ಕಾಯುತ್ತಿರುವ ವಿಲ್‌ ಜ್ಯಾಕ್ಸ್‌ ಅವರ ಪವರ್‌ಪ್ಲೇ ಸ್ಟ್ರೈಕ್‌ ರೇಟ್‌ 164.21 ಇದೆ. ಇನ್ನು ಮಧ್ಯಮ ಓವರ್‌ಗಳಲ್ಲಿ ಇವರ ಸ್ಟ್ರೈಕ್‌ ರೇಟ್‌ 146 ಇದೆ. ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಟಾಮ್‌ ಮೂಡಿ, “ಆರ್‌ಸಿಬಿ ವಿಲ್‌ ಜ್ಯಾಕ್ಸ್…

Read More

 ಬೆಂಗಳೂರು:- RCB ಸೋತಿದ್ದು ಅಪ್ಪು ಪತ್ನಿಯಿಂದ ಎಂಬ ಪೋಸ್ಟ್ ಹಾಕಿದ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ರಿಯಾಕ್ಷನ್ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/csk-won-the-toss-and-elected-to-bowl-in-chennai/ ಈ ಸಂಬಂಧ ಮಾತನಾಡಿದ ಅವರು,ಅವಹೇಳನಕಾರಿ ಪೋಸ್ಟ್​ ಮಾಡಿದವರನ್ನು ಆದಷ್ಟು ಬೇಗ ಸೈಬರ್​ ಇಲಾಖೆಯ ಮೂಲಕ ಪತ್ತೆ ಹಚ್ಚಿ, ಕಾನೂನಿನ ಕ್ರಮ ತೆಗೆದುಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಾನು ಸೂಚನೆ ನೀಡುತ್ತೇನೆ. ಇಂಥ ಕೃತ್ಯ ಮಾಡಿದ ಕಿಡಿಗೇಡಿಗಳನ್ನು ಕಾನೂನಿನ ಚೌಕಟ್ಟಿಗೆ ತರುವ ಕೆಲಸವನ್ನು ಶೀಘ್ರದಲ್ಲೇ ಮಾಡುತ್ತೇನೆ’ ಎಂದು ಜಿ. ಪರಮೇಶ್ವರ್​ ಹೇಳಿದ್ದಾರೆ. ಬೇರೆ ನಟರ ಅಭಿಮಾನಿಗಳ ಹೆಸರಿನಲ್ಲಿ ಸೋಶಿಯಲ್​ ಮೀಡಿಯಾ ಖಾತೆಗಳನ್ನು ತೆರೆದ ಕಿಡಿಗೇಡಿಗಳು ಕೆಟ್ಟ ಪೋಸ್ಟ್​ಗಳನ್ನು ಮಾಡಿದ್ದಾರೆ. ಇಂಥ ಕೆಲಸ ಮಾಡಿದವರಿಗೆ ಆದಷ್ಟು ಬೇಗ ತಕ್ಕ ಶಿಕ್ಷೆ ಆಗಬೇಕು ಎಂದು ಡಾ. ರಾಜ್​ಕುಮಾರ್​ ಕುಟುಂಬದ ಅಭಿಮಾನಿಗಳು ಒತ್ತಾಯಿಸಿದ್ದಾರೆ.

Read More

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದೆ. ಚೆನ್ನೈನಲ್ಲಿ ಟಾಸ್ ಗೆದ್ದ ಸಿಎಸ್​ಕೆ ನಾಯಕ ರುತುರಾಜ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. https://ainlivenews.com/anamika-who-came-with-a-gun-and-garlanded-the-cm/ ಇಂದು, ಐಪಿಎಲ್‌ನ 22 ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಸತತ ಎರಡು ಸೋಲಿನ ಬಳಿಕ ಸಿಎಸ್ ಕೆ ಮತ್ತೆ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸುತ್ತಿದ್ದು, ಇದುವರೆಗೆ ಸೋಲನುಭವಿಸದ ಕೆಕೆಆರ್ ಆವೇಗವನ್ನು ಕಾಯ್ದುಕೊಳ್ಳಲು ಹವಣಿಸುತ್ತಿದೆ

Read More

ಬೆಂಗಳೂರು:- ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರದ ವೇಳೆ ಗನ್ ಇಟ್ಟುಕೊಂಡು ಕ್ಯಾಂಟರ್ ಏರಿ ಸಿಎಂಗೆ ವ್ಯಕ್ತಿಯೊಬ್ಬ ಹಾರ ಹಾಕಿದ್ದು, ಭದ್ರತಾ ವೈಫಲ್ಯ ಎದುರಾಗಿದೆ. ಆತನ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಎಂದು ಗುರುತಿಸಲಾಗಿದೆ. ಆತ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನವಾದ ಬಳಿಕ ಗನ್ ಪರವಾನಿಗೆ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. https://ainlivenews.com/high-court-refuses-to-quash-yogesh-gowda-murder-case/ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜ್, ರಿಯಾಜ್ ಕಾಂಗ್ರೆಸ್‍ನ ಕಾರ್ಯಕರ್ತ, ನಾಲ್ಕೈದು ವರ್ಷಗಳ ಹಿಂದೆ ಅವನ ಮೇಲೆ ಅಟ್ಯಾಕ್ ಆಗಿತ್ತು. ಇದರಿಂದ ಗನ್ ಲೈಸೆನ್ಸ್ ಪಡೆದುಕೊಂಡು, ಇಟ್ಟುಕೊಂಡಿದ್ದಾನೆ ಅನ್ಸುತ್ತೆ. ಅವನೇನು ರೌಡಿ ಅಲ್ಲ ಎಂದಿದ್ದಾರೆ. ಸಿಎಂ ಬಳಿ ಗನ್ ತೆಗೆದುಕೊಂಡ ಹೋದ ವ್ಯಕ್ತಿ ಮೇಲೆ ಅನುಮಾನ ಮೂಡಿದ್ದು, ಚುನಾವಣಾ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ಅವಕಾಶ ಇಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರ ಈ ಸಂದರ್ಭದಲ್ಲಿ ಗನ್…

Read More

ಬೆಂಗಳೂರು:- ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದ್ದು, ಯೋಗೀಶ್ ಗೌಡ ಕೊಲೆ ಕೇಸ್ ರದ್ಧತಿಗೆ ಹೈಕೋರ್ಟ್ ನಕಾರ ತೋರಿದೆ. https://ainlivenews.com/n-chaluvarayaswamy-thundered-against-jds-in-hassan/#google_vignette ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ತಮ್ಮ ಮೇಲಿನ ಕೇಸ್ ರದ್ದುಗೊಳಿಡುವಂತೆ ವಿಜಯ್ ಕುಲಕರ್ಣಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣ ರದ್ದು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಸಾಕ್ಷ್ಯ ವಿಚಾರಣೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಸಿಬಿಐ ಪರ ಅಭಿಯೋಕರಿಗೆ ಸೂಚನೆ ನೀಡಿದ್ದಾರೆ.

Read More