Author: AIN Author

ಕಾರವಾರ:- ಪಕ್ಷದ ಪ್ರಚಾರಕ್ಕೂ ಬಾರದೇ ಇತ್ತ ಪಕ್ಷವನ್ನೂ ಬಿಡದ ಹೆಬ್ಬಾರ್ ಸ್ವ-ಪಕ್ಷದ ವಿರುದ್ಧವೇ ತೊಡೆತಟ್ಟಿದ್ದಾರೆ. ಅಧಿಕಾರಕ್ಕಾಗಿ ಅಂದಿನ ಕಾಂಗ್ರೆಸ್ ಸರ್ಕಾರವನ್ನೇ ಬೀಳಿಸಿ ಬಂಡಾಯವೆದ್ದಿದ್ದ ಬಾಂಬೆ ಬಾಯ್ಸ್‍ಗಳಲ್ಲಿ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರು. ಬಿಜೆಪಿ ಹೆಸರಿನಲ್ಲಿ ಗೆದ್ದ ಯಲ್ಲಾಪುರ ಶಾಸಕ ಮತ್ತೊಮ್ಮೆ ರೆಬೆಲ್ ಆಗಿದ್ದಾರೆ. https://ainlivenews.com/karnataka-weather-chance-of-rain-in-these-districts-of-karnataka-today-2/ ಇನ್ನು ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿರುವ ಹೆಬ್ಬಾರ್ ನಡೆಗೆ ಪಕ್ಷದಲ್ಲಿ ಅಸಮಾಧಾನ ಹೆಚ್ಚಿಸಿದೆ. ಇದೇ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಹೆಬ್ಬಾರ್ ವಿರುದ್ಧ ಕಿಡಿಕಾರಿದ್ದಾರೆ. ಹೆಬ್ಬಾರ್ ವಿರುದ್ಧ ಬಿಜೆಪಿ ಕ್ರಮಕೈಗೊಂಡಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಗೆ (BJP) ಹಿನ್ನಡೆಯಾಗುವ ಆತಂಕವಿದೆ. ಅವರಾಗಿಯೇ ಪಕ್ಷ ತೊರೆದರೆ ಬಿಜೆಪಿಗೆ ಲಾಭ ಹೆಚ್ಚು. ಹೀಗಾಗಿ ಬಿಜೆಪಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲೂ ಅಸಮಾಧಾನಗಳಿದ್ದು, ಒಂದು ವಾರದಲ್ಲೇ ಸರಿ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದ್ದಾರೆ.

Read More

ಬೆಂಗಳೂರು:- ಇಂದು ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ 9 ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡಕ್ಕೆ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದ್ದು, ಬಳ್ಳಾರಿ, ಯಾದಗಿರಿ, ರಾಯಚೂರು, ಕಲಬುರಗಿ, ಬಾಗಲಕೋಟೆಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. https://ainlivenews.com/ugadi-special-make-this-new-kind-of-holi-and-enjoy-it-heres-the-recipe/ ಇನ್ನುಳಿದ ಕಡೆ ಏಪ್ರಿಲ್ 13ರಿಂದ ಮಳೆ ಶುರುವಾಗಲಿದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ವಿಜಯನಗರದಲ್ಲಿ ಏಪ್ರಿಲ್ 13ರಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ. ಮುಂದಿನ 4 ದಿನ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗಲಿದೆ. ಕಲಬುರಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದೆ, ಎಚ್​ಎಎಲ್​ನಲ್ಲಿ 36.6…

Read More

ಹೋಳಿಗೆಯನ್ನು ಹಲವು ರೀತಿಯಲ್ಲಿ, ಮಾಡಿ ಜನ ಸವಿಯುತ್ತಾರೆ. ತೊಗರಿಬೇಳೆ ಒಬ್ಬಟ್ಟು, ಕಡಲೇಪಪ್ಪು ಒಬ್ಬಟ್ಟು, ಕ್ಯಾರೆಟ್ ಒಬ್ಬಟ್ಟು, ಖೋವಾ ಒಬ್ಬಟ್ಟು ಸೇರಿದಂತೆ ನಾನಾ ಬಗೆಯಲ್ಲಿ ಹೋಳಿಗೆಯನ್ನು ಮಾಡಿ ಸವಿಯಲಾಗುತ್ತದೆ. ನೀವೂ ಈ ಯುಗಾದಿಯನ್ನು ಸ್ಪೆಷಲ್ ಆಗಿ ಆಚರಿಸಬೇಕೆಂದರೆ, ಬೇಳೆ ಬಿಟ್ಟು ತರವೇರಿಯಾದ ಒಬ್ಬಟ್ಟನ್ನು ಮಾಡಬೇಕೆಂದು ಅಂದುಕೊಂಡಿದ್ದರೆ ಈ ಆನಾನಸ್ ಹೋಳಿಗೆಯನ್ನು ಮಾಡಿ. ಈ ಹೋಳಿಗೆ ಮಾಡಲು ಸುಲಭವಾಗಿರುತ್ತದೆ ಹಾಗೇ ರುಚಿಯೂ ಬೊಂಬಾಟ್ ಆಗಿರುತ್ತದೆ. https://ainlivenews.com/rcbs-path-to-the-playoffs-is-tough-win-these-matches-to-get-in/ ಅನಾನಸ್ ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು: ಅನಾನಸ್ – 1 ಹಣ್ಣು, ಚಿರೋಟಿ ರವೆ – ಮುಕ್ಕಾಲು ಕಪ್, ಮೈದಾಹಿಟ್ಟು – ಕಾಲು ಕಪ್, ತುಪ್ಪ – 3 ಟೀ ಸ್ಪೂನ್, ಕೊಬ್ಬರಿ ತುರಿ – ಮುಕ್ಕಾಲು ಕಪ್, ಬೆಲ್ಲದ ಪುಡಿ – ಮುಕ್ಕಾಲು ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಎಣ್ಣೆ – ಅಗತ್ಯಕ್ಕೆ ತಕ್ಕಷ್ಚು ಅನಾನಸ್ ಹೋಳಿಗೆ ಮಾಡುವ ವಿಧಾನ ಒಂದು ಅಗಲವಾದ ಪಾತ್ರೆಯಲ್ಲಿ ಅರ್ಧ ಕಪ್ ಚಿರೋಟಿ ರವೆ, ಕಾಲು…

Read More

ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲೂ ಸೋತಿರುವ ಆರ್ ಸಿ ಬಿಗೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿದೆ. ಮತ್ತೊಂದೆಡೆ ಮುಂದೆ ಆರ್ ಸಿ ಬಿ ಪಾಲಿಗೆ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ ಇದುವರೆಗೆ ನಡೆದಿರುವ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಆರ್ ಸಿ ಬಿ ಸೋತಿದೆ. ಜೊತೆಗೆ 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳ ಪಡೆದಿರುವ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. https://ainlivenews.com/consecutive-defeat-for-the-team-rcb-players-went-to-god/ ಯಾವುದೇ ತಂಡವಾದರೂ ಪ್ಲೇ ಆಫ್ ಪ್ರವೇಶಿಸಲು ಕನಿಷ್ಠ 8 ಪಂದ್ಯಗಳನ್ನಾದರೂ ಗೆಲ್ಲಲೇಬೇಕು. ಅಂದರೆ ಇಷ್ಟು ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳು ಲಭಿಸುತ್ತವೆ. ಈಗಾಗಲೇ ಆರ್ ಸಿ ಬಿ ಒಂದು ಪಂದ್ಯದಲ್ಲಿ ಗೆದ್ದಿದ್ದು, ಇನ್ನು 7 ಪಂದ್ಯಗಳನ್ನು ಗೆಲ್ಲಲೇ ಬೇಕು. ಕೇವಲ ಗೆದ್ದರೆ ಸಾಲದು, ನೆಟ್ ​​ರನ್​ ರೇಟ್​ ಕೂಡ ಉತ್ತಮವಾಗಿ ಕಾಯ್ದುಕೊಂಡರೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯ ಒಂದು ವೇಳೆ ಇನ್ನುಳಿದರುವ 9 ಪಂದ್ಯಗಳಲ್ಲೂ ಗೆದ್ದರೆ ಯಾವುದೇ ಸಮಸ್ಯೆ ಇಲ್ಲದೆ,…

Read More

ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತ ಬಳಿಕ ಆರ್‌ಸಿಬಿ ಮುಂದಿನ ಪಂದ್ಯವಾಡಲು ಸಜ್ಜಾಗಿದೆ. ಸತತ ಸೋಲು ಕಂಡಿರುವ ಆಟಗಾರರು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ದೇವರ ಮೊರೆ ಹೋಗಿದ್ದಾರೆ. https://ainlivenews.com/fat-people-can-get-slim-in-summer-just-keep-eating-it/ ಆರ್‌ಸಿಬಿ ಆಟಗಾರರು ಸೋಮವಾರ ಮುಂಬೈನ ಪ್ರಸಿದ್ಧ ಶ್ರೀಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಜಯ್‌ ಕುಮಾರ್ ವೈಶಾಖ್, ಕರ್ಣ್ ಶರ್ಮಾ, ಮಯಾಂಕ್ ದಾಗರ್ ಮತ್ತು ಅನುಜ್ ರಾವತ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಏಪ್ರಿಲ್ 11ರಂದು ಆರ್‌ಸಿಬಿ ಮುಂದಿನ ಪಂದ್ಯವನ್ನು ಆಡಲಿದೆ. ಪ್ಲೇ ಆಫ್ ತಲುಪಬೇಕು ಎಂದರೆ ಆರ್‌ಸಿಬಿಗೆ ಮುಂದಿನ ಪಂದ್ಯಗಳು ಸಾಕಷ್ಟು ಮಹತ್ವದ್ದಾಗಿವೆ. ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಗೆಲುವಿನ ಹಾದಿಗೆ ಬರಲು ಆರ್‌ಸಿಬಿ ಪ್ರಯತ್ನಿಸುತ್ತಿದೆ. ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಗೆಲುವಿನ ಖಾತೆ ತೆರೆದಿದೆ. ಸತತ ಮೂರು ಪಂದ್ಯ ಸೋತ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್…

Read More

ಬೇಸಿಗೆಯಲ್ಲಿ ದೇಹದ ತೂಕ ಇಳಿಸುವುದು ಸುಲಭ ಅಂತಲೇ ಹೇಳಬಹುದು. ಈ ಋತುವಿನಲ್ಲಿ ಅನೇಕ ಆರೋಗ್ಯಕರ ಆಹಾರಗಳು ಲಭ್ಯವಿವೆ. ಇವು ತೂಕವನ್ನು ಕಳೆದುಕೊಳ್ಳುವಲ್ಲಿ ತುಂಬಾ ಸಹಾಯಕಾರಿಯಾಗಿವೆ. ಇವುಗಳನ್ನು ಹೆಚ್ಚಾಗಿ ತಿಂದರೆ ನಿಮ್ಮ ತೂಕ ಬೇಗನೇ ಕಡಿಮೆಯಾಗುತ್ತದೆ. https://ainlivenews.com/a-man-who-came-with-a-gun-to-the-cm-was-arrested/ ಮಜ್ಜಿಗೆ: ಮಜ್ಜಿಗೆ ತುಂಬಾ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಬೆಳ್ಳುಳ್ಳಿ: ಹೃದಯ ರೋಗಿಗಳಿಗೆ ಬೆಳ್ಳುಳ್ಳಿ ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ಬೆಳ್ಳುಳ್ಳಿ ಸೇವನೆ ಹೊಟ್ಟೆಯು ತುಂಬಿದೆ ಎಂದು ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಸಕ್ಕರೆ ನಿಯಂತ್ರಣದಲ್ಲಿ ಸಾಸಿವೆ ಎಣ್ಣೆ: ಈ ಎಣ್ಣೆ ಕೊಬ್ಬನ್ನು ಕಡಿಮೆ ಮಾಡಲು ಉತ್ತಮ ಆಯ್ಕೆಯಾಗಿದೆ. ಇದು ಇತರ ಎಣ್ಣೆಗಳಿಗಿಂತ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಸಾಸಿವೆ ಎಣ್ಣೆಯಲ್ಲಿ ಆಹಾರಗಳನ್ನು ಬೇಯಿಸಬೇಕು. ಇದರಲ್ಲಿರುವ ಅಂಶಗಳು ಕ್ಯಾಲೊರಿಗಳನ್ನು ಸುಡಲು…

Read More

ಬೆಂಗಳೂರು:- ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು, ಸಿಎಂ ಇದ್ದ ವಾಹನ ಹತ್ತಿ, ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದ. ಈ ವೇಳೆ ಗನ್ ನೋಡಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. https://ainlivenews.com/good-news-for-the-people-of-benda-who-are-exhausted-from-the-sun/ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ್ದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಅಲರ್ಟ್ ಆದ್ರು. ಸಿದ್ದಾಪುರ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ದೌಡಾಯಿಸಿ, ಮಾಹಿತಿ ಪಡೆದ್ರು. ಇನ್ನು ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಅಂತ ಗುರುತಿಸಲಾಗಿದೆ. ಈಗ ಬೆಂಗಳೂರಿನ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಸುಮಾರು 25 ವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾನೆ. ಸಿಎಂ ಬಳಿ ಗನ್ ಇಟ್ಟುಕೊಂಡು ಹೋಗಿದ್ಯಾಕೆ ಎಂಬ ಆಯಾಮದಲ್ಲಿ ರಿಯಾಜ್‌ನ ವಿಚಾರಣೆ ನಡೆಸಲಾಯ್ತು. ದೃಶ್ಯಾವಳಿಯಲ್ಲಿ ಗನ್ ಇಟ್ಟುಕೊಂಡು ಬಿಲ್ಡಪ್ ಕೊಟ್ಟಂತಿದ್ದು, ಆ ಬಗ್ಗೆ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ರಿಯಾಜ್ ಹಲವು ವಿಚಾರ ಹೇಳಿದ್ದಾನೆ ಎನ್ನಲಾಗಿದೆ.…

Read More

ಭೋಪಾಲ್‌: ಲಿವ್‌ ಇನ್‌ ಸಂಬಂಧದಲ್ಲಿದ್ದು, ಬೇರ್ಪಟ್ಟ ಬಳಿಕ ಯುವಕನು ಮಾಜಿ ಪ್ರೇಯಸಿ ಅಥವಾ ಗೆಳತಿಗೆ ಜೀವನಾಂಶ ನೀಡಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿದೆ. ಈ ಆದೇಶವು ಲಿವ್‌ ಇನ್‌ ಸಂಬಂಧದಲ್ಲಿ ಇರುವರಿಗೆ ಆತಂಕ ಮೂಡಿಸಿದೆ. ಬ್ರೇಕಪ್‌ ಆದ ಬಳಿಕ ಮಹಿಳೆಗೆ ಮಾಸಿಕ 1,500 ರೂ. ಜೀವನಾಂಶ ನೀಡಬೇಕು ಎಂದು ಅಧೀನ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಯುವಕನೊಬ್ಬ ಹೈಕೋರ್ಟ್‌ ಮೊರೆ ಹೋಗಿದ್ದ. https://ainlivenews.com/you-will-get-2-lakh-insurance-from-the-government-rs-3000-thousand-per-month/ ಸದ್ಯ ಹೈಕೋರ್ಟ್‌ ಕೂಡ ಮಾಸಿಕ 1,500 ರೂ. ನೀಡಬೇಕು ಎಂಬುದಾಗಿ ಅರ್ಜಿದಾರರಿಗೆ ಆದೇಶಿಸಿದೆ. ಯಾವುದೇ ಒಬ್ಬ ವ್ಯಕ್ತಿಯು ಮಹಿಳೆಯ ಜತೆ ಲಿವ್‌ ಇನ್‌ ರಿಲೇಷನ್‌ನಲ್ಲಿಇದ್ದು ,ಲೈಂಗಿಕ ಸಂಪರ್ಕ ಹೊಂದಿದ್ದರೆ ಆಗ ವ್ಯಕ್ತಿಯು ಬ್ರೇಕಪ್‌ ಬಳಿಕ ಜೀವನಾಂಶ ಕೊಡಬೇಕು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತು. ಅದರಲ್ಲೂ, ಮಧ್ಯಪ್ರದೇಶ ವ್ಯಕ್ತಿಯ ಪ್ರಕರಣದಲ್ಲಿ ಅಧೀನ ನ್ಯಾಯಾಲಯದ ವಿಶೇಷ ಪ್ರಸ್ತಾಪವನ್ನು ಹೈಕೋರ್ಟ್‌ ಗಮನ ಸೆಳೆಯಿತು.

Read More

ಬೆಂಗಳೂರು :- ವಾರಾಂತ್ಯದಲ್ಲಿ 3 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಮೂಲಕಬಿಸಿಲಿನಿಂದ ಬಳಲಿ ಬೆಂಡಾದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. https://ainlivenews.com/csk-back-on-winning-track-kkr-suffer-first-defeat/ ಸದ್ಯದ ವಾತಾವರಣದ ಪ್ರಕಾರ ಎಪ್ರಿಲ್‌ 13 ರಿಂದ ಎಪ್ರಿಲ್‌ 15 ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮುಂತಾದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಅಧಿಕವಾಗಿದೆ. ಜೊತೆಗೆ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲೂ ಮಳೆ ನಿರೀಕ್ಷಿಸಲಾಗಿದೆ ಸದ್ಯದ ವಾತಾವರಣ ಮುಂದುವರಿದರಷ್ಟೇ ಈ ಮಳೆಯ ಸಾಧ್ಯತೆ ಕಾಣಿಸುತ್ತಿವೆ ಮೋಡದ ಚಲನೆಯಲ್ಲಿ ಯಾವುದೇ ಬದಲಾವಣೆ ಆಗದಿರುವುದರಿಂದ ಎಪ್ರಿಲ್‌ ಮಧ್ಯ ಅಥವಾ ಈ ವಾರಾಂತ್ಯಕ್ಕೆ ಮಳೆ ನಿರೀಕ್ಷಿಸುವಂತೆ ಮಾಡಿದೆ

Read More

ಜಡೇಜಾ ಹಾಗೂ ರುತುರಾಜ್‌ ಅವರ ಆಕರ್ಷಕ ಫಿಫ್ಟಿ ನೆರವಿನಿಂದ ಕೋಲ್ಕತ್ತಾ ವಿರುದ್ಧ ಚೆನ್ನೈಗೆ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯದಲ್ಲಿ ಸೋತಿದ್ದ CSK ಗೆಲುವಿನ ಟ್ರ್ಯಾಕ್ ಗೆ ಮರಳಿದೆ. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಚೆನ್ನೈ ತಂಡವು ಉತ್ತಮ ಪ್ರದರ್ಶನ ನೀಡಿತು. ಸಿಎಸ್‌ಕೆ ತಂಡ ಕೆಕೆಆರ್‌ ಅನ್ನು 137 ರನ್‌ಗಳಿಗೆ ಕಟ್ಟಿ ಹಾಕಿತ್ತು. ಕೆಕೆಆರ್‌ ನೀಡಿದ 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ 17.4 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿ ಸುಲಭ ಜಯ ದಾಖಲಿಸಿತು. https://ainlivenews.com/gold-price-the-price-of-gold-that-does-not-decrease-here-is-todays-price-list/ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಲು ತಿಣುಕಾಡಿತು. ಜಡೇಜಾ, ತುಷಾರ್ ದೇಶಪಾಂಡೆ ಮಾರಕ ಬೌಲಿಂಗ್‌ ದಾಳಿಗೆ ಕೆಕೆಆರ್‌ ಬ್ಯಾಟರ್‌ಗಳು ಮಂಕಾದರು. ಕೋಲ್ಕತ್ತಾ ತಂಡದ ಸುನೀಲ್‌ ನರೈನ್‌ 27, ರಘುವಂಶಿ 24, ನಾಯಕ ಶ್ರೇಯಸ್‌ ಅಯ್ಯರ್‌ 34 ರನ್‌ ಗಳಿಸಿದ್ದು ಬಿಟ್ಟರೆ ಯಾವೊಬ್ಬ…

Read More