Author: AIN Author

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುಗಾದಿಗೆ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ. ಯುಗಾದಿ ಸಂತೋಷ, ಭರವಸೆ ಹಾಗೂ ಹೊಸ ಆರಂಭದ ಹಬ್ಬವಾಗಿದ್ದು, ವಿವಿಧ ಆಚರಣೆಗಳು ಮತ್ತು ವಿಶಿಷ್ಟವಾದ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. https://ainlivenews.com/belly-fat-is-melting-after-delivery-if-so-try-this-home-remedy/ ಎಲ್ಲರಿಗೂ ಅಪರಿಮಿತ ಸಂತೋಷ ಹಾಗೂ ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷ ತರಲಿ ಎಂದು ಹಾರೈಸಿದ್ದಾರೆ. ಮೋದಿ ಮತ್ತೊಂದು ಪೋಸ್ಟ್​ನಲ್ಲಿ ದೇಶದ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಚೈತ್ರ ನವರಾತ್ರಿಯ ಶುಭಾಶಯಗಳು ಎಂದು ಬರೆದಿದ್ದಾರೆ.ಶಕ್ತಿಯ ಆರಾಧನೆಯ ಈ ಮಹಾ ಹಬ್ಬವು ಎಲ್ಲರಿಗೂ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಆರೋಗ್ಯವನ್ನು ತರಲಿ ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.

Read More

ಮಹಿಳೆಯು ತಾಯಿಯಾಗುವ ಸಂದರ್ಭದಲ್ಲಿ ನಾನಾ ರೀತಿಯ ಬದಲಾವಣೆಗೆ ತಯಾರಾಗಿರಬೇಕಾಗುತ್ತದೆ. ಈ ವೇಳೆಯಲ್ಲಿ ತೂಕ ಹೆಚ್ಚಳ ಹಾಗೂ ಹಾರ್ಮೋನಿನ ಬದಲಾವಣೆಗಳು ಆಗುವುದು ಸಹಜ. ಆದರೆ ಮಗುವಿಗೆ ಜನ್ಮ ನೀಡಿದ ಬಳಿಕ ಹೊಟ್ಟೆಯು ಜೋತು ಬೀಳುವುದಲ್ಲದೆ, ಕೆಲವರಂತೂ ಬಲೂನಿನಂತೆ ಊದಿ ಕೊಳ್ಳುತ್ತಾರೆ. ದೇಹದ ಸೌಂದರ್ಯ ಹಾಳಾಯಿತಲ್ಲ ಎಂದು ಮಹಿಳೆಯರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸಹಜತೆಯನ್ನು ಒಪ್ಪಿಕೊಂಡು ಬದುಕುತ್ತಾರೆ. https://ainlivenews.com/celebration-of-ugadi-festival-all-over-the-country/ ಹೊಟ್ಟೆ ಕರಗಿಸಲು ಬಯಸುವವರು ಪ್ರತಿ ದಿನವೂ ಒಂದೊಂದು ಸೇಬನ್ನು ತಿನ್ನುವುದು ಒಳ್ಳೆಯ ಅಭ್ಯಾಸ. ಇದರಲ್ಲಿರುವ ನಾರಿನಾಂಶ ಅಧಿಕವಾಗಿದ್ದು ಕೊಬ್ಬನ್ನು ಕರಗಿಸುತ್ತದೆ. ಮೊಸರಿನಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಕಾರಣ ಇದು ಕೊಬ್ಬನ್ನು ಕರಗಿಸುತ್ತದೆ. ದೇಹಕ್ಕೆ ತಂಪೆನಿಸುವ ಮೊಸರು ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಕಾರಿಯಾಗಿದೆ. ನಿಯಮಿತವಾಗಿ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಬೊಜ್ಜು ಕಡಿಮೆ ಮಾಡುವುದಲ್ಲದೆ ದಪ್ಪ ಹೊಟ್ಟೆಯನ್ನು ನಿಯಂತ್ರಿಸುತ್ತದೆ. ಬಿಸಿ ನೀರು ಕುಡಿಯುವುದರಿಂದ ದೇಹದ ತೂಕವು ನಿಯಂತ್ರಿಸುವುದರೊಂದಿಗೆ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಮಗುವಿನ ಜನ್ಮ ನೀಡಿದ ಬಳಿಕ ಹೊಟ್ಟೆಯ ಭಾಗದ ಕೊಬ್ಬು ಕರಗಿಸಲು ಗ್ರೀನ್ ಟೀ…

Read More

ಬೆಂಗಳೂರು:- ಇಂದು ರಾಜಧಾನಿ ಬೆಂಗಳೂರು ಸೇರಿ ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಸಿಲಿಕಾನ್ ಸಿಟಿ ಮಂದಿ ಅದ್ದೂರಿಯಾಗಿ ಹಬ್ಬವನ್ನ ಬರಮಾಡಿಕೊಳ್ಳುತ್ತಿದ್ದಾರೆ. https://ainlivenews.com/a-lok-sabha-candidate-is-campaigning-for-votes-by-wearing-a-necklace/ ಹೀಗಾಗಿ ನಗರದ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯುತ್ತಿದ್ದು, ನಗರದ ಗವಿಗಂಗಾಧರ, ಕಾಡುಮಲ್ಲೆಶ್ವರ, ಬನಶಂಕರಿ, ಕೋಟೆ ವೆಂಕಟೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಗವಿಗಂಗಾಧರ ದೇವಸ್ಥಾನದಲ್ಲಿ ಬೆಳ್ಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಪಂಚಾಭಿಷೇಕ, ರುದ್ರಾಭಿಷೇಕ, ಪುಷ್ಪಭಿಷೇಕ ಮಾಡಿ ಮಹಾಭಿಷೇಕ ನಡೆದಿದೆ. ಮಹಾಭಿಷೇಕದ ನಂತರ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತದಿಗಳು ಬಂದು ದೇವರ ದರ್ಶನ ಪಡೆದಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತದಿಗಳಿಗೆ ರಾತ್ರಿವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಸಾದ ವಿತರಣೆಯ ವ್ಯವಸ್ಥೆ ಕೂಡ ಮಾಡಲಾಗಿದೆ.

Read More

ಲಕ್ನೋ:- ಲೋಕಸಭಾ ಚುನಾವಣೆಯ ಬಿಸಿ ಹೊತ್ತಲ್ಲೇ ಉತ್ತರಪ್ರದೇಶದ ಅಲಿಗಢ್‌ನಲ್ಲಿ ಅಭ್ಯರ್ಥಿಯೊಬ್ಬರು ಅಚ್ಚರಿ ಮೂಡಿಸುವ ಕೆಲಸ ಮಾಡಿದ್ದಾರೆ. ಯಾರನ್ನಾದರೂ ಶಿಕ್ಷಿಸಲು ಅಥವಾ ಅವಮಾನಿಸಲು ಚಪ್ಪಲಿ ಹಾರವನ್ನು ಧರಿಸುವುದನ್ನು ನೀವು ಆಗಾಗ್ಗೆ ನೋಡಿರಬಹುದು. ಆದರೆ ಅಲಿಗಢದ ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್ ಚಪ್ಪಲಿ ಹಾರ ಹಾಕಿಕೊಂಡು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಹೂವಿನ ಹಾರದ ಬದಲು ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸಿದ್ದನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. https://ainlivenews.com/gurdwara-head-murder-case-accused-dies-in-police-encounter/ ಪಂಡಿತ್ ಕೇಶವ್ ದೇವ್ ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದು, ಅವರ ಚುನಾವಣಾ ಚಿಹ್ನೆ ಚಪ್ಪಲಿ ಆಗಿದೆ. ಸ್ವತಃ ಕೇಶವ್ ದೇವ್ ಅವರೇ ಚಪ್ಪಲಿ ಚುನಾವಣಾ ಚಿಹ್ನೆಗೆ ಅರ್ಜಿ ಸಲ್ಲಿಸಿರುವುದಾಗಿದೆ. ಅದರಂತೆ ಚಿಹ್ನೆ ದೊರೆತ ಬಳಿಕ ಕೊರಳಿಗೆ 7 ಚಪ್ಪಲಿಗಳನ್ನು ಹಾರ ಮಾಡಿ ಹಾಕಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕೇಶವ್‌ ಅವರು ಭ್ರಷ್ಟಾಚಾರವನ್ನು ವಿರೋಧಿಸುವ ಮೂಲಕವೂ ಸುದ್ದಿಯಲ್ಲಿದ್ದಾರೆ. RTI ಕಾರ್ಯಕರ್ತನಾಗಿರುವ ಪಂಡಿತ್ ಕೇಶವ್ ದೇವ್ ಅವರು ಭಾರತೀಯ ಹಿಂದೂ ರಾಷ್ಟ್ರ ಸೇನೆ ಮತ್ತು ಭ್ರಷ್ಟಾಚಾರ ವಿರೋಧಿ…

Read More

ಉತ್ತರಾಖಂಡ:- ಇಲ್ಲಿನ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಗುರುದ್ವಾರ ಮುಖ್ಯಸ್ಥರ ಹತ್ಯೆ ಪ್ರಕರಣದ ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಮಾರ್ಚ್ 28ರಂದು ದೇಗುಲದ ಆವರಣದಲ್ಲಿ ಬೈಕ್ ನಲ್ಲಿ ಬಂದ ಸರಬ್ಜಿತ್ ಸಿಂಗ್ ಮತ್ತು ಅಮರ್ ಜಿತ್ ಸಿಂಗ್ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ನಾನಕಮಟ್ಟಾ ಸಾಹಿಬ್ ಗುರುದ್ವಾರದ ಡೇರಾ ಕರ್ ಸೇವಾ ಮುಖ್ಯಸ್ಥ ಕುರ್ಚಿಯಲ್ಲಿ ಕುಳಿತಿದ್ದಾಗ ಶೂಟರ್ ರೈಫಲ್‌ನಿಂದ ಗುಂಡು ಹಾರಿಸಿದ್ದ. https://ainlivenews.com/cholera-scare-bbmp-breaks-street-food-sales/#google_vignette ಅಮರ್‌ಜಿತ್ ಸಿಂಗ್ ಅವರ ಸಾವಿನ ಕುರಿತು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಎಎನ್‌ಐಗೆ ಹೇಳಿಕೆ ನೀಡಿದ್ದು, ಅವರ ಸಹಚರರು ಪರಾರಿಯಾಗಿದ್ದಾರೆ ಮತ್ತು ಅಧಿಕಾರಿಗಳು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದಿದ್ದಾರೆ. ಉತ್ತರಾಖಂಡದ ಪೊಲೀಸರು ಬಾಬಾ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‌ಟಿಎಫ್ ಮತ್ತು ಪೊಲೀಸರು ಇಬ್ಬರೂ ಹಂತಕರಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದಿದ್ದಾರೆ. ಹರಿದ್ವಾರದ ಕಲಿಯಾರ್ ರಸ್ತೆ ಮತ್ತು ಭಗವಾನ್‌ಪುರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪರ್ಮಿಂದರ್…

Read More

ಬೆಂಗಳೂರು:- ನಗರದಲ್ಲಿ ಬೀದಿ ಬದಿಯಲ್ಲಿ ಆಹಾರ ಮಾರಾಟದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. https://ainlivenews.com/if-the-guarantee-is-stopped-they-will-bring-it-to-the-street-and-ask-questions/ ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಗಮನಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮಹಾನಗರದ 8 ವಲಯಗಳಿಗೆ ಅನ್ವಯಿಸುವಂತೆ ಈ ಆದೇಶವನ್ನು ಬಿಬಿಎಂಪಿ ಆದೇಶಿಸಿದೆ. ನಗರದಲ್ಲಿ ಕಾಲರಾ ಕಾಣಿಸಿಕೊಳ್ಳುತ್ತಿರುವುದರಿಂದ ಆಯಾ ವಲಯದ ಆರೋಗ್ಯ ಪರಿವೀಕ್ಷಕರು ಹೋಟೆಲ್, ಅಂಗಡಿಗಳನ್ನು ತಪಾಸಣೆ ಮಾಡಬೇಕು. ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ಹೋಟೆಲ್ ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಜತೆಗೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ ನೀಡುವಂತೆ ತಿಳಿಸಲಾಗಿದೆ.

Read More

ಕೊಪ್ಪಳ:- ಗ್ಯಾರಂಟಿ ಯೋಜನೆಯನ್ನ ನಿಲ್ಲಿಸ್ತೇನೆ ಎಂದು ಕಾಂಗ್ರೆಸ್ ಹೇಳಿದರೆ ಬಿಡಲ್ಲ. ಸಿಎಂ ಮತ್ತು ಡಿಸಿಎಂ ರನ್ನು ಬೀದಿಗೆ ತಂದು ಕೇಳ್ತೇವೆ ಎಂದು ಜನಾರ್ಧನ್ ರೆಡ್ಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. https://ainlivenews.com/unmistakable-water-crisis-for-silicon-city-apartments/ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಗ್ಯಾರಂಟಿ ಹೆಸರಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸ್ತೇನೆ ಅನ್ನೋಕೆ ಹೇಗೆ ಬರುತ್ತದೆ? ಇದು ಲೋಕಸಭಾ ಚುನಾವಣೆ ರಾಜ್ಯದ ಚುನಾವಣೆ ಅಲ್ಲ. ಸೋನಿಯಾ ಗಾಂಧಿ ಸೋಲ್ತೇನೆ ಅಂತ ತಿಳಿದು ರಾಜ್ಯಸಭೆಗೆ ಹೋಗಿದ್ದಾರೆ. ರಾಹುಲ್ ಗಾಂಧಿಗೆ ಕೂಡಾ ಮತ್ತೆ ಗಲ್ಲುತ್ತೇನೋ ಇಲ್ವೋ ಅನ್ನೋ ಗಾಬರಿ ಇದೆ. ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯಿದ್ದರೆ ನಾವು ಕೈ ಮುಗಿಯುತ್ತೇವೆ, ಬಿಜೆಪಿ ಪಲ್ಲಕ್ಕಿಯಲ್ಲಿ ಮೋದಿ ಅನ್ನೋ ಮೂರ್ತಿಯಿದೆ. ಆದ್ರೆ ಕಾಂಗ್ರೆಸ್ ಪಲ್ಲಕ್ಕಿಯಲ್ಲಿ ಯಾರ ಮೂರ್ತಿಯೂ ಇಲ್ಲ. ಕಾಂಗ್ರೆಸ್ ಗೆ ತಮ್ಮ ಪ್ರಧಾನಿ ಅಭ್ಯರ್ಥಿ ಅಂತ ಘೋಷಿಸಲು ಧೈರ್ಯವಿಲ್ಲ ಎಂದ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

Read More

ಬೆಂಗಳೂರು :- ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮ ತೀವ್ರಗೊಂಡಿದ್ದು, ಸಿಲಿಕಾನ್ ಸಿಟಿಯ ಅಪಾರ್ಟ್ ಮೆಂಟ್ ಗಳಿಗೆ ಜಲಸಂಕಷ್ಟ ಎದುರಾಗಿದೆ. https://ainlivenews.com/shivannas-health-fluctuates-entry-to-campaign-again-for-his-wife/ ಜಲಸಂಕಷ್ಟ ಎದುರಾದರೂ ನೀರಿನ ಸಮಸ್ಯೆ ಬಗೆಹರಿಸದ ಆಡಳಿತ ಮಂಡಳಿ ವಿರುದ್ಧ ನಿವಾಸಿಗಳು ಕಿಡಿಕಾರಿದ್ದಾರೆ. ಬಿನ್ನಿಪೇಟೆಯ ಶಾಪೂರ್ಜಿ ಪೋಲಾಂಜಿ ಅಪಾರ್ಟ್ ಮೆಂಟ್ ನಲ್ಲಿ ಪ್ರತಿಭಟನೆ ಮಾಡಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹಿಸಿದ್ದಾರೆ. ನೀರು ಬೇಕು ನೀರು ಬೇಕು ಅಂತಾ ಜಾಥಾ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ನಿವಾಸಿಗಳ ಸಂಕಷ್ಟ ಸರಿಪಡಿಸುವಂತೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ.

Read More

ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದ ಶಿವಣ್ಣ ಅವರು ಮತ್ತೆ ಪ್ರಚಾರಕ್ಕೆ ಇಳಿದಿದ್ದಾರೆ. ನಿರಂತರವಾಗಿ ಅವರು ಚುನಾವಣೆ ಪ್ರಚಾರದಲ್ಲಿ ಇದ್ದ ಕಾರಣ ಅವರಿಗೆ ಸುಸ್ತ್ ಆಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು https://ainlivenews.com/top-hero-in-world-cup-only-in-ipl-zero-zero/ ಒಂದು ದಿನ ಅವರು ಅಲ್ಲಿಯೇ ಇದ್ದು ಚಿಕಿತ್ಸೆ ಪಡೆದು ಬಂದಿದ್ದರು. ಈಗ ಅವರು ಮತ್ತೆ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ. ಶಿವಮೊಗ್ಗದಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ. ‘ಶಿವರಾಜ್​ಕುಮಾರ್ ಆಗಿ ಅಲ್ಲ ಗೀತನ ಗಂಡ ಆಗಿ ಬಂದಿದ್ದೇನೆ’ ಎಂದಿದ್ದಾರೆ ಅವರು. ಇದಕ್ಕೆ ಶಿಳ್ಳೆ ಚಪ್ಪಾಳೆ ಬಿದ್ದಿದೆ.

Read More

ಅಪಾರ ಅಭಿಮಾನಿ ಬಳಗ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ IPL ನಲ್ಲಿ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಬೆಂಗಳೂರು ತಂಡ ಸತತ 4 ಸೋಲುಗಳಿಂದ ಆಘಾತಕ್ಕೊಳಗಾಗಿದೆ. ಆಡಿದ ಐದು ಪಂದ್ಯಗಳಲ್ಲಿ ಆರ್‌ಸಿಬಿ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಸೋತು ಅಂಕಗಳಿಕೆಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡದ ವೈಫಲ್ಯಕ್ಕೆ ಅವರ ಸ್ಟಾ‌ರ್ ಆಟಗಾರರ ಕಳಪೆ ಪ್ರದರ್ಶನವೇ ಕಾರಣ. ಅದರಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಆಟದ ವೈಖರಿಯಿಂದ ಒಂದಿಷ್ಟು ವೈಫಲ್ಯಗಳು ಕಾಣುತ್ತಿದ್ದು, ಆರ್ ಸಿಬಿಯಲ್ಲಿ ಭಯ ಹೆಚ್ಚಾಗುತ್ತಿದೆ. https://ainlivenews.com/the-party-has-not-left-it-it-has-not-even-started-campaigning/ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಕೊನೆಯ 5 ಪಂದ್ಯಗಳಲ್ಲಿ ಕೇವಲ 32 ಅಂಕಗಳನ್ನು ಗಳಿಸಿದ್ದಾರೆ, ಅಂದರೆ ಮೊದಲ ಐದು ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಸೊನ್ನೆಗೆ ಎರಡು ಬಾರಿ ಔಟಾದರು. ಅವರು ಮತ್ತೊಮ್ಮೆ ಎರಡು ಬಾರಿ ಏಕ-ಅಂಕಿಯ ರನ್‌ಗಳಿಗೆ ವಿಕೆಟ್‌ಗಳನ್ನು ನೀಡಿದರು. ಅಂದರೆ ಅವರು ಇಲ್ಲಿಯವರೆಗೆ ಗಳಿಸಿರುವುದು ಕೇವಲ 6.40 ಅಂಕಗಳು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸೋಲು…

Read More