Author: AIN Author

ಗದಗ:- ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ ಐತಿಹಾಸಿಕ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಭಕ್ತಸಾಗದ ಹರಿದು ಬರ್ತಿದೆ. https://ainlivenews.com/keep-a-gun-for-protection-not-a-security-failure-dcm/ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದೆ. ಅಲಂಕೃತನಾದ ಶ್ರೀ ಶಂಕರಲಿಂಗನಿಗೆ ದೀಪ ಬೆಳಗಿ ಕಾಯಿ ಒಡೆದು ಜನರು ನಮಿಸುತ್ತಿದ್ದಾರೆ. ಆ ಮೂಲಕ ಒಳ್ಳೇದಾಗಲಿ ಎಂದು ಶಂಕರಲಿಂಗನಲ್ಲಿ ಭಕ್ತಾದಿಗಳು ಬೇಡಿಕೊಂಡಿದ್ದಾರೆ.

Read More

ಬೆಂಗಳೂರು:- ಗನ್ ಹಿಡಿದು ಸಿಎಂ ಗೆ ಹಾರ ಹಾಕಿದ ಪ್ರಕರಣ ಸಂಬಂಧ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸೆಕ್ಯೂರಿಟಿ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆನೂ ಗನ್ ಮ್ಯಾನ್ ಗಳು ಇದ್ದಾರೆ. ವಿರೋಧ ಪಕ್ಷಗಳಿಗೆ ಮಾತಾಡೋಕೆ ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. https://ainlivenews.com/mother-in-law-hesitated-to-give-property-share/ ಇನೂ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿ ಅಲ್ಲಿಂದ ತೆರಳಿದ್ದಾರೆ. ರಿಯಾಜ್ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಆದರೆ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಸುದ್ದಿಯಾಯಿತು

Read More

ದಾವಣಗೆರೆ:- ಮನೆ ಅಂದ ಮೇಲೆ ಜಗಳ, ವೈಮನಸ್ಸು ಎಲ್ಲವೂ ಸಹಜ. ಆದ್ರೆ ಇಲ್ಲೊಬ್ಬ ಸೊಸೆ ಒಬ್ಬಳು ತನ್ನ ಅತ್ತೆ ಮಾವನ ಮೇಲಿನ ಸಿಟ್ಟಿಗೆ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ! ಅಷ್ಟಕ್ಕೂ ಸೊಸೆ ಮಾಡಿದ ಕೆಲಸ ಏನು ಎಂದು ತಿಳಿಯಲು ಸುದ್ದಿ ಪೂರ್ತಿ ಓದಿ. https://ainlivenews.com/if-there-is-trouble-for-the-muslims-no-one-will-be-left/ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿರುವ ಘಟನೆ ಜರುಗಿದೆ. ಚಿದಾನಂದಸ್ವಾಮಿ, ಶಿವನಾಗಮ್ಮ ಅವರ ಜೇಷ್ಠ ಪುತ್ರ ಕುಮಾರಸ್ವಾಮಿಯ ಪತ್ನಿ ರೂಪಾ ಕೆಲ ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. ಆದರೆ ಅತ್ತೆ-ಮಾವ ಆಸ್ತಿಯಲ್ಲಿ ಪಾಲು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೋಪಗೊಂಡ ಸೊಸೆ ರೂಪಾ 3 ವರ್ಷದ 40 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿದ್ದಾಳೆ. “ಸೊಸೆ ರೂಪಾ ನಮ್ಮನ್ನು ಸರಿಯಾಗಿ ನೋಡಿಕೊಳ್ಳದೆ, ಹಲ್ಲೆ ಮಾಡುತ್ತಿದ್ದಾಳೆ. ನಮ್ಮ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕಟ್ಟಿಸಿಕೊಂಡಿದ್ದಾಳೆ. ಎಂದು ಮಾವ ಚಿದಾನಂದಪ್ಪ ದಾವಣಗೆರೆ ಗ್ರಾಮಾಂತರ…

Read More

ನವದೆಹಲಿ:- ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಬಿಜೆಪಿ ಸಂಸದ, ರಾಜ್ಯ ಖಾತೆ ಸಚಿವರಾಗಿರುವ ಶಾಂತನು ಠಾಕೂರ್​ಗೆ ಬೆದರಿಕೆ ಪತ್ರ ಕಳುಹಿಸಿದೆ. ಮುಸ್ಲಿಮರಿಗೆ ತೊಂದರೆ ಆದ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ ಎಂದು ಬರೆದಿದ್ದಾರೆ. NRC ಜಾರಿಗೆ ಬಂದರೆ ದೇಶವೇ ಹೊತ್ತಿ ಉರಿಯಲಿದೆ. ಮುಸ್ಲಿಂ ಸಮುದಾಯಕ್ಕೆ ಚಿತ್ರಹಿಂಸೆ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಉಗ್ರರು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. https://ainlivenews.com/rcb-is-confident-that-the-mumbai-team-will-surrender/ ಉಗ್ರರಿಂದ ಪತ್ರ ಬಂದಿರುವ ಬಗ್ಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವ ಶಾಂತನು ಠಾಕೂರ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ಕಳುಹಿಸಿರುವ ಪತ್ರದಲ್ಲಿ, ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರ ಮಾಡಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದರೆ ಬಂಗಾಳ ಮತ್ತು ಭಾರತ ಹೊತ್ತಿ ಉರಿಯುತ್ತದೆ. ನಿಮ್ಮನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ಲಷ್ಕರ್-ಎ-ತೈಬಾದ ಹೆಸರನ್ನು ನೀವು ಕೇಳಿದ್ದೀರಾ? ನಾವು ಲಷ್ಕರ್‌ನ ಸದಸ್ಯರು. ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಯಾದರೆ ಹಫೀಜ್ ಸಯೀದ್ ಅವರ ಸೂಚನೆಯಂತೆ ತಕ್ಷಣ ನಾವು ನಮ್ಮ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು…

Read More

RCBಗೆ ಮುಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವಿದೆ. ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿದ್ದ ಆರ್​ಸಿಬಿ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಗೆಲುವಿನ ಖಾತೆ ತೆರೆದಿತ್ತು. ಇದಾದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ತವರಿನಲ್ಲಿ ಮುಗ್ಗರಿಸಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಸೋಲುವ ಮೂಲಕ ಹ್ಯಾಟ್ರಿಕ್ ಸೋಲುಂಡಿದೆ. ಈ ಸೋಲಿನೊಂದಿಗೆ ಆರ್​ಸಿಬಿ ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. https://ainlivenews.com/pro-bjp-campaign-in-message/ ಸದ್ಯ ಸತತ ಸೋಲಿನಿಂದ ಕಂಗೆಟ್ಟಿರುವ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಅತ್ತ ಮುಂಬೈ ಕೂಡ ಆಡಿರುವ ಮೂರು ಪಂದ್ಯಗಳಲ್ಲೂ ಸೋಲುಂಡು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಏಪ್ರಿಲ್ 11 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಅತ್ತ…

Read More

ಹಾಸನ:- ಸಂದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಹಾಸನದ ಡಿಡಿಪಿಐ ಕಛೇರಿಯ ಎಫ್.ಡಿ.ಎ ಬಿ.ಎಚ್. ಮಂಜುನಾಥ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ. https://ainlivenews.com/india-is-the-capital-of-cancer-alarming-information-revealed/ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಿದ್ದು, 24 ಗಂಟೆಗಳೊಳಗಾಗಿ ಮಾಹಿತಿ ಒದಗಿಸಿ ಎಂದು ಎ.ಡಿ.ಸಿ ಶಾಂತಲಾ ಅವರು ನೋಟಿಸ್ ಜಾರಿ ಮಾಡಿದ್ದರಂತೆ. ಬಿಜೆಪಿ ಪಕ್ಷದ ಪರ ವಾಟ್ಸಾಪ್ ಗ್ರೂಪ್​​ನಲ್ಲಿ ಸಂದೇಶ ಕಳಿಸಿ ಪ್ರಚಾರ ನಡೆಸಿರುವ ಬಗ್ಗೆ ನಾಗೇಂದ್ರ ಎಂಬುವರು ದೂರು ನೀಡಿದ್ದರಂತೆ. ಪ್ರಕರಣದ ಬಗ್ಗೆ ಮಂಜುನಾಥ ಅವರ ವಿವರಣೆ ಹಾಗೂ ಡಿಸಿಪಿಐ ವರದಿ ಆದರಿಸಿ ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ಕಾಯ್ದಿರಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

Read More

ನವದೆಹಲಿ:- ಕ್ಯಾನ್ಸರ್​ ಕುರಿತು ದೊಡ್ಡ ಮಟ್ಟದ ಜಾಗೃತಿಗಳು ಭಾರತದಲ್ಲಿ ನಡೆಯುತ್ತಿವೆ. ಭಾರತದಲ್ಲಿ ಕ್ಯಾನ್ಸರ್​ಗಳ ಪತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಕ್ಯಾನ್ಸರ್ ಪತ್ತೆಯಾಗುವ ಪ್ರಮಾಣ ಅಪಾಯದ ಮಟ್ಟ ಮೀರಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತ ಕ್ಯಾನ್ಸರ್​ನ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ. 2024 ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4 ನೇ ಆವೃತ್ತಿಯು ಭಾರತವನ್ನು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂದು ಕರೆದಿದೆ. https://ainlivenews.com/increase-in-temperature-demand-of-civil-servants-for-half-day-leave-with-pay/ ವರದಿಯ ಪ್ರಕಾರ, ಮೂವರು ಭಾರತೀಯರಲ್ಲಿ ಒಬ್ಬರು ಪೂರ್ವ ಮಧುಮೇಹದಿಂದ ಬಳಲುತ್ತಿದ್ದಾರೆ, ಮೂವರಲ್ಲಿ ಇಬ್ಬರು ಪೂರ್ವ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 10ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿದ್ದಾರೆ. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿರ್ಣಾಯಕ ಮಟ್ಟ ತಲುಪಿದೆ. ಇದು ರಾಷ್ಟ್ರದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಏರುತ್ತಿದೆ ಕ್ಯಾನ್ಸರ್​ ಪ್ರಮಾಣ ಕ್ಯಾನ್ಸರ್ ಪ್ರಕರಣಗಳ ಉಲ್ಬಣವು ಭಾರತದಲ್ಲಿ ಮಿತಿಮೀರಿದೆ ಮತ್ತು…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳದಿಂದ ರಾಜಧಾನಿ ಮಂದಿ ಅಕ್ಷರಶಃ ನಲುಗಿ ಹೋಗಿದ್ದಾರೆ. ಅಲ್ಲದೇ ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರು ಆಗ್ರಹಿಸಿದ್ದಾರೆ. https://ainlivenews.com/a-student-of-indian-origin-who-went-missing-last-year-was-found-dead/ ಈ ಕುರಿತು ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟವು ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಪತ್ರ ಬರೆದಿದೆ. ಪೌರಕಾರ್ಮಿಕರಿಗೆ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿ ವಿರಾಮದೊಂದಿಗೆ ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ-ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಕೆಲವು ವಾರಗಳಿಂದ ತೀವ್ರತರವಾದ ಶಾಖದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ದಣಿವಾಗುತ್ತಿದೆ. ಕೆಲವರಿಗೆ ಕೆಲಸದ ವೇಳೆ ಆಯಾಸ, ತಲೆತಿರುಗುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಮಧ್ಯಾಹ್ನ…

Read More

ಅಮೇರಿಕಾ:- 2023ರಲ್ಲಿ ನಾಪತ್ತೆಯಾಗಿದ್ದ ಭಾರತ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾರೆ. ಅಮೆರಿಕದ ಓಹಿಯೋ ನಗರದಲ್ಲಿ ಘಟನೆ ಜರುಗಿದೆ. ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023 ರಲ್ಲಿ ಯುಎಸ್‌ಗೆ ತೆರಳಿದ್ದ ಹೈದರಾಬಾದ್‌ನ 25 ವರ್ಷದ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. https://ainlivenews.com/the-man-who-brought-a-gun-to-cm-siddaramaiah/ ಮೊಹಮ್ಮದ್ ಅಬ್ದುಲ್ ಅರ್ಫಾತ್ ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದರು ಮತ್ತು ದೂತಾವಾಸವು ಅಬ್ದುಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರನ್ನು ಪತ್ತೆಹಚ್ಚಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು. ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಕಳೆದ ಮಾರ್ಚ್​ 7 ರಂದು ಕುಟುಂಬದವರೊಂದಿಗೆ ಮಾತನಾಡಿದ್ದರು, ನಂತರ ಅವರ ಮೊಬೈಲ್ ಸ್ವಿಚ್ಡ್​ ಆಫ್​ ಆಗಿತ್ತು ಎಂದು ಅರ್ಫಾತ್ ತಂದೆ ತಿಳಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಬಳಿಕ ಮಗನನ್ನು ಅಪಹರಿಸಿದ್ದೇವೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದಾರೆ. ಅಬ್ದುಲ್ ಈ ವರ್ಷ ಅಮೇರಿಕಾದಲ್ಲಿ ಸಾವನ್ನಪ್ಪಿದ ಹನ್ನೊಂದನೇ ಭಾರತೀಯ.…

Read More

ಬೆಂಗಳೂರು:- ಸೊಂಟದ ಮೇಲೆ ಗನ್ ಇಟ್ಕೊಂಡು ಸಿಎಂ ಗೆ ಹಾರ ಹಾಕಿದ ವಿಚಾರವಾಗಿ ಆರ್.ವಿ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/pm-modi-wished-ugadi-festival-in-kannada/ ಈ ಸಂಬಂಧ ಮಾತನಾಡಿದ ಅವರು, ಗನ್ ತಂದಿದ್ದು ತಪ್ಪು, ನಾನು ಒಪ್ಪಿಕೊಳ್ಳುತ್ತೇನೆ. ಆದ್ರೆ ಆತನನ್ನು ನಾನೆ ಮೇಲೆ ಕರೆದಿದ್ದೆ. ರಿಯಾಜ್ ಅಷ್ಟೇ ಅಲ್ಲಾ, ಹಾರ ಹಾಕೇದಕ್ಕೆ ಬಂದಿದ್ದವರನ್ನೆಲ್ಲಾ ಮೇಲೆ ಕರೆದಿದ್ದೇವೆ. ರಿಯಾಜ್ ಸಿದ್ದಾಪುರ ಭಾಗದಲ್ಲಿ ತುಂಬಾ ಪ್ರಸಿದ್ಧ. ಆತ ಸಾಕಷ್ಟು ‌ಕೆಲಸ ಮಾಡಿದ್ದಾನೆ.. ಕಾಂಗ್ರೆಸ್ ಪಕ್ಷಕ್ಕಾಗಿ ಆತ ದುಡಿದ್ದಿದ್ದಾನೆ. ಹಿಂದು ಮುಸ್ಲಿಂ ಎಲ್ಲಾರನ್ನು ಸಹ ಆತ ಜೊತೆಗೂಡಿಸಿ ಕೆಲಸ ಮಾಡಿಸಿದ್ದಾನೆ. ಆತ ಒಳ್ಳೆಯ ಕೆಲಸಗಾರ ಎಂದು ದೇವರಾಜ್ ಹೇಳಿದ್ದಾರೆ

Read More