Author: AIN Author

ಬೆಂಗಳೂರು:- ರಾಜಧಾನಿ ಬೆಂಗಳೂರಿನ ವೆಂಕಟೇಶ್ವರಪುರದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಭಾವನಿಂದ ಬಾಮೈದನನ್ನು ಹತ್ಯೆ ಮಾಡಿದ ಘಟನೆ ಜರುಗಿದೆ. https://ainlivenews.com/chance-of-rain-till-april-15-in-these-districts-of-karnataka/ ಆರೋಪಿ ಲಕ್ಷ್ಮಣ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಭಾವ, ಬಾಮೈದನ ನಡುವೆ ಇಂದು ಗಲಾಟೆ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ವೆಂಕಟೇಶ್ವರಪುರದ ಗಲ್ಲಿಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಚಾಕು ಇರಿದು ಕೊಲೆ ಮಾಡಲಾಗಿದೆ. ಕಿರಣ್ ಕುಮಾರ್ ಹತ್ಯೆಗೆ ಲಕ್ಷ್ಮಣ ಮೊದಲೇ ಸಂಚು ರೂಪಿಸಿದ್ದ. ಹಾಗಾಗಿ ಚಾಕು ಇಟ್ಟುಕೊಂಡು ಬಂದಿದ್ದ. ಇಸ್ಪೀಟ್ ಎಲೆಗಳ ಮೇಲಿದ್ದ ಹಣ ಎತ್ತಲು ಬಗ್ಗಿದಾಗ ಕಿರಣ್ ಕುಮಾರ್ ಬೆನ್ನಿಗೆ ಭಾವ ಲಕ್ಷ್ಮಣ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಕಿರಣ್ ಕುಮಾರ್​ನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಮೈದ ಸಾವನ್ನಪ್ಪಿದ್ದಾನೆ.

Read More

ನವದೆಹಲಿ: ಭಾರತದ ಮಾಜಿ ವೇಗಿ ಶ್ರೀಶಾಂತ್ ವಿರುದ್ಧ ಐಪಿಎಲ್‌ನ ಸ್ಪಾಟ್ ಪ್ರಕರಣದಲ್ಲಿ ಸಾಕ್ಷ್ಯಾಧಾ ರಗಳಿದ್ದರೂ ಕಾನೂನಿನಲ್ಲಿನ ಲೋಪದಿಂದಾಗಿ ಬಚಾವಾದರು ಎಂದು ಬಿಸಿಸಿಐನ ಮಾಜಿ ಭದ್ರತಾ ಅಧಿಕಾರಿ, ಫಿಕಿಂಗ್ ತನಿಖಾಧಿಕಾರಿಯಾಗಿದ್ದ ನೀರಜ್ ಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ನೀರಜ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಜಿಂಬಾಬ್ವೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕ್ರೀಡೆಯಲ್ಲಿನ ಫಿಕ್ಸಿಂಗ್ ಗೆ ಕಠಿಣ ಕಾನೂನುಗಳಿವೆ. ಆದರೆ ಭಾರತದಲ್ಲಿ ಸೂಕ್ತ ಕಾನೂನಿಲ್ಲ, ಫಿಕ್ಸಿಂಗ್ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ, ಮೋಸ ಹೋದ ವ್ಯಕ್ತಿಯನ್ನು ನಮಗೆ ತೋರಿಸಿ ಎಂದು ನ್ಯಾಯಾಲಯ ಹೇಳುತ್ತದೆ. ಹೀಗಾದರೆ ಕಠಿಣ ಶಿಕ್ಷೆ ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.  ಶ್ರೀಶಾಂತ್ 2013ರಲ್ಲಿ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಪುನರ್‌ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. https://ainlivenews.com/navodaya-vidyalaya-has-huge-job-opportunities-for-puc-and-sslc-passers/ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಕೇರಳ ಮೂಲದ ವೇಗಿ ಎಸ್ ಶ್ರೀಶಾಂತ್, 2013ರಲ್ಲಿ ಸ್ಪಾಟ್‌ ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದು, 2015ರವರೆಗೂ ಕಂಬಿ ಎಣಿಸಿದ್ದ…

Read More

ಬೆಂಗಳೂರು:- ಕರ್ನಾಟಕದ ಹಲವೆಡೆ ಏಪ್ರಿಲ್ 15 ರ ತನಕ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. https://ainlivenews.com/an-exciting-win-for-sunrisers-hyderabad-against-punjab/ ಏಪ್ರಿಲ್​ 12ರಂದು ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಮುಂದಿನ ಎರಡು ದಿನಗಳಲ್ಲಿ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಬೆಮಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ, ಎಚ್​ಎಎಲ್​ನಲ್ಲಿ 36.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 37.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ,…

Read More

ಚಂಡೀಗಢದ ಮುಲ್ಲನ್‌ಪುರದ ನೂತನ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 23ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಮತ್ತು ಪ್ರವಾಸಿ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಿತ್ತು. ಎಸ್‌ಆರ್‌ಹೆಚ್‌ ತಂಡದ ಬ್ಯಾಟ್ಸ್‌‌ಮನ್‌ಗಳಿಗೆ ಪಂಜಾಬ್‌ ಬೌಲರ್ಸ್ ಕಾಟ ಕೊಟ್ರು. ಆದ್ರೂ ಸನ್‌ರೈರ್ಸಸ್‌ ಬ್ಯಾಟ್ಸ್‌ಮನೆಗಳು 20 ಓವರ್‌ಗಳಲ್ಲಿ 182 ರನ್‌‌ಗಳಿಸಿತ್ತು. ಪಂಜಾಬ್‌ ಕಿಂಗ್ಸ್‌ ತಂಡ 20 ಓವರ್‌‌ಗಳಲ್ಲಿ 180 ರನ್‌ಗಳಿಸಿ 3ರನ್‌ಗಳಿಂದ ಸೋತಿದೆ. https://ainlivenews.com/ybh-jaydevs-birthday-witnessed-the-gathering-of-friends/ ಪ್ಯಾಟ್ ಕಮಿನ್ಸ್ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ಜಾನಿ ಬೈರ್​ಸ್ಟೋವ್ ಕ್ಲೀನ್ ಬೌಲ್ಡ್ ಆದರು. ಭುವನೇಶ್ವರ್ ಕುಮಾರ್ ಎಸೆದ 3ನೇ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಪ್ರಭ್​ಸಿಮ್ರಾನ್ ಸಿಂಗ್ ಕೂಡ ಕ್ಯಾಚ್‌ ನೀಡಿ ಔಟಾದ್ರು.ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್​ನ 4ನೇ ಎಸೆತದಲ್ಲಿ 14 ರನ್‌ಗಳಿಸಿದ್ದ ಶಿಖರ್‌ ಧವನ್‌ ಸ್ಟಂಪ್‌ ಔಟಾದ್ರು ನಟರಾಜನ್ ಎಸೆದ 10ನೇ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್ ಕರನ್(29 ರನ್‌) ಕೂಡ ಕ್ಯಾಚ್‌ ನೀಡಿ ಔಟಾದ್ರು.…

Read More

ದಾಸರಹಳ್ಳಿ:- ಸಮಾಜ ಸೇವಕರು ಬಡವರ ಬಂಧು ಯುವಕರ ಕಣ್ಮಣಿ ಕವಿಗಳು ಸಾಹಿತಿಗಳು ಚಿಂತಕರು ಹತ್ತು ದಶಕಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಹಾಗೂ ಜಾನಪದ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವ್ಯೆ.ಬ್.ಹೆಚ್ ಜಯದೇವ್ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಭೂಮಿಕ ಸೇವಾ ಪೌಂಡೇಶನ್ ನಲ್ಲಿ ಅಚರಿಸಲಾಯಿತು .ಇದೇ ವೇಳೆ ಜನಪ್ರಿಯ ಶಾಸಕರು ಅಭಿವ್ರುದ್ದಿ ಹರಿಕಾರರು ಆದ ಎಸ್ ಮುನಿರಾಜು ಅವರು ಕೂಡ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದರು. https://ainlivenews.com/even-after-the-festival-of-ugadi-the-price-of-gold-does-not-decrease/ ಸಾಹಿತ್ಯ ಸಂಗೀತ ಕವಿಗಳು ಅದ ವ್ಯೆ ಬಿ ಹೆಚ್ ಜಯದೇವ್ ಅವರು ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ ಹಲವು ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸದಾ ಚಟುವಟಿಕೆಯಿಂದ ಓಡಾಡಿಕೊಂಡು ದಾಸರಹಳ್ಳಿ ಕ್ಷೇತ್ರದ ಜನರಲ್ಲಿ ಭರವಸೆಯ ಕವಿಗಳು ಎಂದು ಪ್ರಖ್ಯಾತರಾಗಿದ್ದಾರೆ ನೂರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಸ್ನೇಹಿತರು ಬಂಧು ಮಿತ್ರರು ಹಿತೈಷಿಗಳು ಬೃಹತ್ ಹೂ ಮಾಲೆ ಮೈಸೂರು ಪೇಟ ಶಾಲು ತೊಡಿಸಿ ನೆಚ್ಚಿನ ನಾಯಕನಿಗೆ ಶುಭ…

Read More

ಕಾಫಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವಾರು ಮಂದಿ. ಆದರೆ ಕೆಲವು ಜನರು ಕಾಫಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವವರು ಇದ್ದಾರೆ. ಕಾಫಿ ಸೇವಿಸಿದರೆ ಅದರಿಂದ ದೇಹಕ್ಕೆ ಒಳ್ಳೆಯದು ಎನ್ನುವ ಮಾತುಗಳು ಈಗ ಬರುತ್ತಿದೆ. ಹಿತಮಿತವಾಗಿ ಕಾಫಿ ಕುಡಿಯಿರಿ ಹೌದು, ಕಾಫಿ ಕುಡಿದರೆ ಅದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮಿತ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡಿದರೆ ಆಗ ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೌತ್ ಹ್ಯಾಂಪ್ಟನ್ ನಲ್ಲಿನ ಯೂನಿವರ್ಸಿಟಿಯೊಂದು ನಡೆಸಿರುವಂತಹ ಅಧ್ಯಯನದ ಪ್ರಕಾರವಾಗಿ ದಿನಕ್ಕೆ 3-4 ಕಪ್ ಕಾಫಿ ಕುಡಿದರೆ ಅದು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹೇಳಿದೆ. ಮಿತ ಪ್ರಮಾಣದ ಕಾಫಿ ಸೇವಿಸಿದರೆ ಅದರಿಂದ ಯಕೃತ್ ನ ಕಾಯಿಲೆ, ಮಧುಮೇಹ, ಬುದ್ದಿಮಾಂದ್ಯತೆ, ಕೆಲವೊಂದು ರೀತಿಯ ಕ್ಯಾನ್ಸರ್ ಗಳನ್ನು ನಿವಾರಣೆ ಮಾಡಬಹುದು ಎಂದು ಕಂಡುಕೊಂಡಿದೆ. ಅತೀಯಾಗಿ ಸೇವಿಸಬೇಡಿ ಸುಮಾರು 200 ಅಧ್ಯಯನಗಳನ್ನು ಪುನರ್ ವಿಮರ್ಶೆ ಮಾಡಿಕೊಂಡಿರುವ ಅಧ್ಯಯನವು ಮಿತ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡಿದರೆ…

Read More

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿರುವ ಕಂಪನಿಯ (Pune Company) ಕ್ಯಾಂಟೀನ್‌ನಲ್ಲಿ ಸಮೋಸಾದೊಳಗೆ (Samosa) ಬ್ಯಾಂಡೇಜ್‌, ಕಾಂಡೋಮ್, ಕಲ್ಲುಗಳು ಮತ್ತು ತಂಬಾಕು ಮುಂತಾದ ವಸ್ತುಗಳು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್, ಮಜರ್ ಶೇಖ್, ಅಜರ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾಗಿದೆ. ಕಂಪನಿಯು ತಮ್ಮ ಒಪ್ಪಂದವನ್ನು ರದ್ದುಪಡಿಸಿದ ಕೋಪದಿಂದ ಆರೋಪಿಗಳೆಲ್ಲರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಮಾಧ್ಯಮ ವರದಿಗಳ ಪ್ರಕಾರ, ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಚಿಖಾಲಿ ಮೂಲದ ಕಂಪನಿಯೊಂದರ ಅಧಿಕಾರಿ ಕೀರ್ತಿಕುಮಾರ್ ಶಂಕರರಾವ್ ದೇಸಾಯಿ ಅವರು ಏ.7 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಖಾಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, https://ainlivenews.com/navodaya-vidyalaya-has-huge-job-opportunities-for-puc-and-sslc-passers/ ತಮ್ಮ ಕಂಪನಿಯು ಚಿಖಾಲಿಯ ಮತ್ತೊಂದು ದೊಡ್ಡ ಕಂಪನಿಯಿಂದ ಆಹಾರ ಪೂರೈಕೆಗಾಗಿ ಆದೇಶವನ್ನು ಪಡೆದಿದೆ. ಅದರಂತೆ…

Read More

ಯುಗಾದಿ ಬಳಿಕವೂ ಚಿನ್ನದ ಬೆಲೆ ಏರಿಕೆ ನಿಂತಿಲ್ಲ. ಯುಗಾದಿ ದಿನದಂದು ಬೆಳ್ಳಿ ಬೆಲೆ ಗ್ರಾಮ್​ಗೆ 1 ರೂನಷ್ಟು ಹೆಚ್ಚಿತ್ತು. ಚಿನ್ನವಂತೂ ಗ್ರಾಮ್​ಗೆ 30 ರೂ ಹೆಚ್ಚಾಗಿತ್ತು. ಈ ಬೆಲೆ ಏರಿಕೆಯ ಓಟ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಸ್ಪಷ್ಟ ಇಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 65,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,375 ರುಪಾಯಿಯಲ್ಲಿ ಇದೆ. https://ainlivenews.com/do-this-setting-to-prevent-someone-else-from-using-your-sim-card/ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,750 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,730 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ…

Read More

ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ಸ್ವಾಪ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸಿಮ್ ಕಾರ್ಡ್ ಸ್ವಾಪ್ ಮೂಲಕ ವಂಚಕರು ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸಿಮ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ಬಹಳ ಮುಖ್ಯವಾಗಿದೆ. https://ainlivenews.com/second-puc-result-announced-today/ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ನಿಮ್ಮ ಸಿಮ್ ಕಾರ್ಡ್ (SIM Card) ಅನ್ನು ಬಳಸಲು ಸಾಧ್ಯವಾಗದ ಮಾರ್ಗವನ್ನು ನಾವು ನಿಮಗೆ ಹೇಳಲಿದ್ದೇವೆ. ನಿಮ್ಮ ಸಿಮ್ ಕಾರ್ಡ್ (SIM Card) ಅನ್ನು ನೀವು ಸುರಕ್ಷಿತಗೊಳಿಸಬಹುದಾದ ಕೆಲವು ಸೆಟ್ಟಿಂಗ್‌ಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಫೋನ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಸಿಮ್ ಕಾರ್ಡ್ (SIM Card) ಅನ್ನು ಸುಲಭವಾಗಿ ಲಾಕ್ ಮಾಡಬಹುದು. ಈ ಕಾರಣದಿಂದಾಗಿ ನಿಮ್ಮ ಫೋನ್ ಕಳೆದುಹೋದರೂ ಮತ್ತು ಯಾರಾದರೂ ಅದನ್ನು ಕಂಡುಕೊಂಡರೂ ಅವರು ನಿಮ್ಮ ಸಿಮ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಫೀಚರ್ ಬಳಸಲು ಪ್ರತಿಯೊಂದು ಸಿಮ್ ಲಾಕ್ ಅಥವಾ ಅನ್ಲಾಕ್ ಮಾಡಲು ಡೀಫಾಲ್ಟ್ ಪಿನ್ ಸಂಖ್ಯೆ ಅಗತ್ಯವಿರುತ್ತದೆ.…

Read More

ಬೆಂಗಳೂರು:- ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಬೆಳಿಗ್ಗೆ ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಲಿದ್ದು, 11ಗಂಟೆಗೆ ನಂತರ https://karresults.nic.in ಅಥವಾ pue.kar.nic ಅಧಿಕೃತ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಇದರ ಫಲಿತಾಂಶವನ್ನು ಇಂದು ಪ್ರಕಟಿಸಲಾಗುತ್ತಿದೆ. https://ainlivenews.com/life-is-better-if-husband-and-wife-sit-together-and-have-drinks/ ವಿಜ್ಞಾನ, ವಾಣಿಜ್ಯ, ಕಲೆ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳ ಫಲಿತಾಂಶವನ್ನು ಏಕಕಾಲದಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2024ರ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 3.3 ಲಕ್ಷ ವಿದ್ಯಾರ್ಥಿಗಳಾಗಿದ್ದು, 3.6 ಲಕ್ಷ ವಿದ್ಯಾರ್ಥಿನಿಯರಾಗಿದ್ದಾರೆ.

Read More