Author: AIN Author

ಮಂಡ್ಯ: ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕನನ್ನು ಹತ್ಯೆ ಮಾಡಲಾದ ಘಟನೆ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆ ಕೃತ್ಯವೆಸಗಿದ್ದು, ಅಕ್ಷಯ್( 24 ) ಹತ್ಯೆಯಾದ ಯುವಕನಾಗಿದ್ದಾನೆ.  ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕನನ್ನು ಫೋನ್ ಮಾಡಿ ಕರೆಸಿಕೊಳ್ಳಲಾಗಿದೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ನಂತರ ಮಾರಾಕಾಸ್ತ್ರದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.  

Read More

 ವಿಜಯನಗರ: ಪ್ರತಿ ವರ್ಷ ರಾಜ್ಯದಲ್ಲಿ ಅತಿ ಹೆಚ್ಚಿನ ಅಂಕಗಳಿಸುವ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಅಂಕಗಳಿಕೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಕೊಟ್ಟೂರು ಇಂದು ಪಿಯು ಕಾಲೇಜಿನ ವಿದ್ಯಾರ್ಥಿ‌ನಿ ಬಿ.ವಿ.ಕವಿತ ಕಲಾ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿದ್ದಾಳೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಶಶಿಧರ 594, ಹಡಗಲಿಯ ಎಸ್ಎಂಎಂ ಪಿಯು ಕಾಲೇಜಿನ ಅನುಶ್ರೀ 594, ಇಂದು ಕಾಲೇಜಿನ ಬೀರೇಶ್ 593, ಶ್ರೀ ಪಂಚಮಸಾಲಿ ಕಾಲೇಜಿನ ಪಿ.ವೀರೇಶ್ 592 ಅಂಕಗಳಿಸಿದ ಸಾಧನೆ ಮಾಡಿದ್ದಾರೆ. ಸತತ 9 ವರ್ಷದಿದ ಪ್ರಥಮ ಸ್ಥಾನ ಗಳಿಸುತ್ತಿರುವ ಇಂದು ಪೊಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Read More

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕರ್ನಾಟಕವನ್ನು ಪಾಕಿಸ್ಥಾನಕ್ಕಿಂತ ಕಡೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು. ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹನುಮಾನ್ ಚಾಲೀಸ್ ಪಠಿಸಿದವರ ಮೇಲೆ ಎಫ್ ಐಆರ್‌ ಹಾಕಿರುವ ಬಗ್ಗೆ ಹೀಗೆ ಕಠೋರ ಪ್ರತಿಕ್ರಿಯೆ ನೀಡಿದರು. ಇವರೇನು ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಕೂಡಲೇ ಹನುಮಾನ್ ಚಾಲೀಸ್ ಪಠಿಸಿದವರ ಮೇಲೆ ಎಫ್‌ಐಆರ್ ಹಾಕಿರುವುದನ್ನು ಕೈ ಬಿಡಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಬೆಳಕು ಹರಿಯುವ ಮೊದಲೇ 6 ಗಂಟೆಗೂ ಮುನ್ನ ಆ ಕೋಮಿನವರು ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸ್ ಹಾಕುವುದು ತಪ್ಪೇ? ಎಂದು ಜೋಶಿ ಪ್ರಶ್ನಿಸಿದರು. ಕಾಂಗ್ರೆಸ್ ತುಷ್ಟಿಕರಣದ ಪರಕಾಷ್ಟೆ ತಲುಪಿದೆ. ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು…

Read More

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/  ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌ (Petrol rate), ಡೀಸೆಲ್‌ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಪೆಟ್ರೋಲ್ ಮತ್ತು…

Read More

ಬೆಂಗಳೂರು: ಹೊಸತೊಡಕು ಸಂಭ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅಲ್ಲೇನು ರಾಜಕೀಯ ಇಲ್ಲ. ಸಮುದಾಯ ಪ್ಲೇ ಕಾರ್ಡ್ ಅನ್ನೋಕೆ ಆಗಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೊದಲ ಹಂತದ ಚುನಾವಣಾ ಅಭ್ಯರ್ಥಿಗಳು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇವೆ. ಬೆಂಗಳೂರು ನಗರದ 4 ಅಭ್ಯರ್ಥಿಗಳು, ಮೈಸೂರಿನ ಅಭ್ಯರ್ಥಿ, ಕೋಲಾರದ ಅಭ್ಯರ್ಥಿ, ತುಮಕೂರು, ಮಂಡ್ಯದ ನಾನು ಎಲ್ಲಾ ಜೊತೆಗೂಡಿ ಆಶೀರ್ವಾದ ಪಡೆದಿದ್ದೇವೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ವರ್ಷದ ಮೊದಲ ದಿನ ಗುರುಗಳ ಆಶೀರ್ವಾದ ಪಡೆಯೋದು ನಮ್ಮ ಕರ್ತವ್ಯ.  ಬಳಿಕ ನಾವೆಲ್ಲ ಒಟ್ಟಾಗಿ ಹೊಸತೊಡಕು ಆಚರಣೆ ಮಾಡುತ್ತೇವೆ ಎಂದರು. ಇನ್ನೂ ಮುಖ್ಯಮಂತ್ರಿಗಳಿಗೆ ಈಗ ಒಕ್ಕಲಿಗರು ಕಾಣುತ್ತಿದ್ದಾರೆ. ಅವರಿಗೆ ಅಸ್ಥಿರತೆ ಕಾಡುತ್ತಿರೋ ಕಾರಣ ಈಗ ಬರುತ್ತಾ ಇದ್ದಾರೆ. ಇವರ ಸರ್ಕಾರದಲ್ಲಿ ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ನಾವಿಲ್ಲಿ ಡಿಕೆ ಶಿವಕುಮಾರ್ ರೀತಿ ಟಿವಿ ಕುಕ್ಕರ್ ಕೊಡುವ ಕಾರ್ಯಕ್ರಮ ಅಲ್ಲ. ಜಸ್ಟ್ ಗೆಟ್ ಟು ಗೆದರ್ ಅಷ್ಟೇ ಎಂದು ಹೆಚ್‍ಡಿಕೆ ಸ್ಪಷ್ಟಪಡಿಸಿದರು.

Read More

ಬೆಂಗಳೂರು: ಬಿಎಂಟಿಸಿ ರಾಜ್ಯ ರಾಜಾಧಾನಿಯ ಸಂಪರ್ಕಕೊಂಡಿ. ಆದ್ರೆ ಈ ಬಿಎಂಟಿಸಿ ಬಸ್ ಕಿಲ್ಲರ್ ಬಿಎಂಟಿಸಿಯಾಗಿ ಅಮಾಯ ಬೆಂಗಳೂರಿಗರ ಬಲಿ ಪಡೀತಿದೆ, ಒಂದಾದ ಮೇಲೆ ಒಂದು ಆಕ್ಸಿಡೆಂಟ್​ಗಳು ಆಗ್ತಾನೆ ಇವೆ (BMTC Accident). ಅದ್ರಲ್ಲೂ ಆಕ್ಸಿಡೆಂಟ್ ಆದಾಗೆಲ್ಲ ಸಾವು ನೋವು ಕೂಡ ಆಗ್ತಿದೆ. ಅದೇ ರೀತಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಯುವಕ ಬಲಿಯಾಗಿರುವ ಘಟನೆ ಶಿವಾಜಿನಗರದಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ನಡೆದಿದೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಕಮಲೇಶ್ (18) ಮೃತ ದುರ್ದೈವಿಯಾಗಿದ್ದು, ಸ್ನೇಹಿತನ ಭೇಟಿ ಮಾಡಲು ಹೋಗಿದ್ದ ಕಮಲೇಶ್ ಒವರ್ ಟೆಕ್ ಮಾಡಲು ಹೋಗಿ ಬಸ್ ಗೆ ಗುದ್ದಿದ್ದಾರೆ. ಸ್ಥಳೀಯರು ಕಮಲೇಶನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಶಿವಾಜಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಬೆಂಗಳೂರು:  ಫೆಡೆಕ್ಸ್‌ ಅಂತಾರಾಷ್ಟ್ರೀಯ ಖಾಸಗಿ ಕಂಪನಿಯ ಹೆಸರಲ್ಲಿ ಬೆಂಗಳೂರಿನ ಮಹಿಳೆಗೆ  ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನ ಸತತ 36 ಗಂಟೆಗಳ ಕಾಲ ವೀಡಿಯೋ ಕಾಲ್‌ನಲ್ಲಿ ನಿಯಂತ್ರಿಸಿದ್ದು, ಆಕೆಯ ನಗ್ನ ವೀಡಿಯೋವನ್ನ ಸೈಬರ್‌ ವಂಚಕರು ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಬಳಿಕ ಆ ವೀಡಿಯೋವನ್ನ ಡಾರ್ಕ್‌ವೆಬ್‌ನಲ್ಲಿ ಹಾಕುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಶುರು ಮಾಡಿದ್ದಾರೆ. ಆಗಷ್ಟೇ ಮಹಿಳೆ ವೀಡಿಯೋ ಕರೆಯನ್ನ ಸ್ಥಗಿತಗೊಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.  ಪ್ರಕರಣ ಶುರುವಾಗಿದ್ದು ಹೇಗೆ? ಇದೇ ಏಪ್ರಿಲ್‌ 3 ರಂದು ಮಧ್ಯಾಹ್ನ 2:15 ರಂದು ಬೆಂಗಳೂರಿನ 29 ವರ್ಷದ ಮಹಿಳೆಯೊಬ್ಬರಿಗೆ ದೂರವಾಣಿ ಕರೆ ಬಂದಿತ್ತು. ಈ ದೂರವಾಣಿ ಕರೆ ಏಪ್ರಿಲ್‌ 5ರಂದು ಮಧ್ಯಾಹ್ನ 1:15 ಗಂಟೆವರೆಗೂ ಮುಂದುವರಿದಿತ್ತು. ಆಕೆ ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋದು ಕನಿಷ್ಠ ಸುಳಿವು ಆಕೆಗೆ ಬರಲೇ ಇಲ್ಲ, ತಿಳಿದುಕೊಳ್ಳುವಷ್ಟರಲ್ಲೇ ಸೈಬರ್‌ ವಂಚಕರು 15 ಲಕ್ಷ ರೂ. ಸುಲಿಗೆ ಮಾಡಿದ್ದರು. ತಾನು ವಂಚನೆಗೆ ಒಳಗಾಗಿರುವುದು ತಿಳಿದ ಮೇಲೆ ಮಹಿಳೆ ಪೂರ್ವ ಸಿಇನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.…

Read More

ಬೆಂಗಳೂರು: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಜನರು ಎದುರು ನೋಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅವರು, ಈ ಚುನಾವಣೆಯಲ್ಲಿ ಧರ್ಮ ಅಧರ್ಮದ ಯುದ್ಧ ನಡೆಯುತ್ತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಜನರು ಎದುರು ನೋಡುತ್ತಿದ್ದಾರೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆದ್ದು ಮೋದಿ ಕೈ ಬಲಪಡಿಸಬೇಕು. ಕರ್ನಾಟಕ ಪೊಲಿಟಿಕಲ್ ಲೀಡರ್ ಶಿಪ್​​ನಲ್ಲಿ ಅಗ್ರಗಣ್ಯವಾಗಿರಬೇಕು. ಕಳೆದ ಬಾರಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರ ಗೆದ್ದಿತ್ತು. ಗ್ರಾಮಾಂತರದಲ್ಲಿ ಪ್ರತಿಷ್ಠೆ ತೋರಿಸುವ ಅವಶ್ಯಕತೆ ಬೇಕಿಲ್ಲ. ಡಾ ಮಂಜುನಾಥ್ ಬರ್ತಾರೆ ಎಂದು ಡಿಕೆ ಬ್ರದರ್ಸ್ ಆಗಲಿ, ನಾವು ಯಾರೇ ಆಗಲಿ ಅಂದುಕೊಂಡಿರಲಿಲ್ಲ. ಎಲ್ಲವೂ ಕಾಲದ ನಿರ್ಧಾರವಾಗಿದೆ. ಮಂಜುನಾಥ್ ಅವರಂತ ಸ್ಪರ್ಧೆ ದೇಶಕ್ಕೆ ಮಾದರಿಯಾಗುತ್ತಿದೆ. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ನನಗೆ ಆಗಲಿ, ಮುನಿರತ್ನಗಾಗಲಿ ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ. ಆದರೆ, ಮಂಜುನಾಥ್ ಅವರನ್ನು ಒತ್ತಾಯ ಮಾಡಿ ರಾಜಕೀಯಕ್ಕೆ ಕರೆತರಲಾಗಿದೆ. ಗ್ರಾಮಾಂತರದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಕಾಂಗ್ರೆಸ್​ನವರು ನಮ್ಮ ನೀರು…

Read More

ಭೋಪಾಲ್:‌ ಮಧ್ಯಪ್ರದೇಶದ ಬೆತುಲ್ ಕ್ಷೇತ್ರದಿಂದ ಮಾಯಾವತಿಯವರ ಬಹುಜನ ಸಮಾಜ ಪಕ್ಷದ (BSP) ಲೋಕಸಭಾ ಅಭ್ಯರ್ಥಿ ಅಶೋಕ್ ಭಾಲವಿ (Ashok Bhalawi) ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ನಡೆಯಬೇಕಿದ್ದ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಪಕ್ಷದ ಪ್ರಕಾರ, ಭಾಲವಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರವನ್ನು ಬೆತುಲ್ ಡಿಎಂ ನರೇಂದ್ರ ಕುಮಾರ್ ಸೂರ್ಯವಂಶಿ ಖಚಿತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಹೀಗಾಗಿ ಏಪ್ರಿಲ್‌ 26ರಂದು ನಡೆಯಬೇಕಿದ್ದ ಎರಡನೇ ಹಂತದ ಮತದಾನವನ್ನು ಮುಂದೂಡಿದ್ದೇವೆ ಎಂದು ಹೇಳಿದರು. ಇತ್ತ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನರೇಂದ್ರ ಸಿಂಗ್ ರಘುವಂಶಿ ಪ್ರತಿಕ್ರಿಯಿಸಿ, ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, https://twitter.com/ANI_MP_CG_RJ/status/1777709941266026815?ref_src=twsrc%5Etfw%7Ctwcamp%5Etweetembed%7Ctwterm%5E1777709941266026815%7Ctwgr%5Ec8e1a9204d6cf12447f7efef4b2bb9ce8f6a20fb%7Ctwcon%5Es1_&ref_url=https%3A%2F%2Fpublictv.in%2Fmadhya-pradesh-bsps-lok-sabha-candidate-from-betul-dies-of-cardiac-arrest-elections-postponed%2F ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬೇತುಲ್‌ನ ಹಾಲಿ ಸಂಸದ…

Read More

ಪಿಯುಸಿ ಆದ ನಂತರ ಮುಂದೇನು ಎಂಬ ಚಿಂತೆ ಇದ್ದರೆ ಈ ಕೋರ್ಸ್​ ಮಾಡಿ ಒಳ್ಳೆ ಭವಿಷ್ಯ ನಿಮ್ಮದಾಗುತ್ತದೆ. ಅನೇಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ನೋಡಿದ ನಂತರ ಮುಂದೆ ಏನು ಮಾಡಬೇಕೆಂದು ಮತ್ತು ಏನು ಓದಬೇಕೆಂದು ಗೊಂದಲಕ್ಕೊಳಗಾಗಬಹುದು ಮತ್ತು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕು ಎಂದು ತುಂಬಾನೇ ಯೋಚಿಸಬಹುದು. ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಷಯಗಳೊಂದಿಗೆ ಉತ್ತೀರ್ಣರಾಗುವ ವಿದ್ಯಾರ್ಥಿಗಳು 12ನೇ ತರಗತಿಯ ನಂತರ ಕೆಲವು ಉತ್ತಮ ವೃತ್ತಿ ಆಯ್ಕೆಗಳನ್ನು ಹೊಂದಿದ್ದಾರೆ. ಕಲಾ ವಿಷಯದೊಂದಿಗೆ ಪಿಯುಸಿ ಮುಗಿಸಿದ್ದರೆ ಈ ಕೋರ್ಸ್‌ಗಳನ್ನು ಮಾಡಬಹುದು ನೀವು ಕಲಾ ವಿಷಯದೊಂದಿಗೆ ದ್ವಿತೀಯ ಪಿಯುಸಿಯನ್ನು ಮುಗಿಸಿದ್ದರೆ, ನೀವು ಮುಂದೆ ಪದವಿಯಲ್ಲಿ ಫ್ಯಾಶನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಡಿಸೈನ್, ಶೂ ಡಿಸೈನ್, ಎಥ್ನೋಗ್ರಫಿ, ಡಿಪ್ರೆಶನ್ ಕೌನ್ಸೆಲಿಂಗ್, ಬೇಕರಿ ಮತ್ತು ಸ್ವೀಟ್ಸ್, ಲೆದರ್ ಡಿಸೈನಿಂಗ್ ಮತ್ತು ಗ್ರಾಫಾಲಜಿಯಂತಹ ವೃತ್ತಿಗಳನ್ನು ಪರಿಗಣಿಸಬಹುದು. https://ainlivenews.com/good-news-for-coffee-lovers-diabetes-control-by-drinking-3-cups-of-filter-coffee-daily/ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ರೇಡಿಯೋ ಪತ್ರಿಕೋದ್ಯಮ, ಜಾಹೀರಾತು, ಅನಿಮೇಷನ್, ವೆಬ್ ಡಿಸೈನಿಂಗ್,  ಮಾಧ್ಯಮ ಸಂಶೋಧನೆ ಮತ್ತು…

Read More