ಉಡುಪಿ: ಕರ್ಕಶ ಶಬ್ದ ಹಿನ್ನೆಲೆ ದುಬೈ ಕಾರುಗಳಿಗೆ ಪೊಲೀಸರು ದಂಡ ವಿಧಿಸಿದ ಘಟನೆ ಉಡುಪಿಯಲ್ಲಿ ಜರುಗಿದೆ. ಕಾರುಗಳನ್ನು ವಶಕ್ಕೆ ಪಡೆದ ಮಣಿಪಾಲ ಪೊಲೀಸರು, 1,500 ರೂ. ದಂಡ ವಿಧಿಸಿದ್ದಾರೆ. https://ainlivenews.com/power-cut-power-cut-in-these-areas-of-bangalore-tomorrow-3/ ಸುಲೈಮನ್ ಮೊಹಮ್ಮದ್ (29), ಮೊಹಮ್ಮದ್ ಶರೀಫ್ (27) ಮತ್ತು ಅಬ್ದುಲ್ ನಜೀರ್ (25) ಎಂಬ ಯುವಕರು ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ರಸ್ತೆಯಲ್ಲಿ ನಿಯಮ ಮೀರಿ ಓಡಾಟ ನಡೆಸಿದ್ದ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರು ತಿಂಗಳು ಭಾರತದಲ್ಲಿ ತಿರುಗಾಡಲು ಕಾರುಗಳನ್ನು, ಸಮುದ್ರದ ಮುಖಾಂತರ ಹಡಗಿನಲ್ಲಿ ಆಮದು ಮಾಡಿಕೊಂಡಿದ್ದರು. ದುಬೈ ದೇಶಕ್ಕೆ 30 ಲಕ್ಷ ರೂ. ಹಾಗೂ ಭಾರತಕ್ಕೆ 1 ಕೋಟಿ ರೂ. ಹಣ ಕಟ್ಟಿರುವುದಾಗಿ ಪೊಲೀಸರ ಬಳಿ ಯುವಕರು ತಿಳಿಸಿದ್ದಾರೆ.
Author: AIN Author
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/just-because-universities-dont-make-profits-doesnt-mean-education-is-not-a-business-r-ashok/ ಬೆಳ್ಳಾವಿ, ಸುಗುಣ, ದೊಡ್ಡವೀರನಹಳ್ಳಿ, ಸಿಂಗೀಪುರ, ದೊಡ್ಡರಿ, ಕಾಗ್ಗೆರೆ, ಅಸಲಿಪುರ, ಮಷಣಾಪುರ, ಹರಿವಣಪುರ, ನಾಗಾರ್ಜುನಹಳ್ಳಿ, ಚನ್ನೇನಹಳ್ಳಿ, ಕರಲುಪಾಳ್ಯ, ಚಿಕ್ಕಬೆಳ್ಳಾವಿ, ಮಾವಿನಕುಂಟೆ, ತಿಮ್ಮಲಾಪುರ, ಬಾಣಾವರ, ಲಕ್ಕನಹಳ್ಳಿ, ಅಪ್ಪಿನಾಯಕನಹಳ್ಳಿ, ಬ್ಯಾಲ, ಟಿ.ಗೊಲ್ಲಹಳ್ಳಿ, ಬುಗುಡನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಮಂಡ್ಯ:- ವಿವಿಗಳಿಂದ ಲಾಭವಿಲ್ಲ ಎಂಬ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. https://ainlivenews.com/further-changes-in-state-politics-sadashiva-mutya-is-the-future-of-babaladi/ ಈ ಸಂಬಂಧ ಮಾತನಾಡಿದ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ಹೊಸ 9 ವಿಶ್ವವಿದ್ಯಾಲಯಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಕಿತ್ತುಕೊಂಡಿದೆ. ವಿವಿಗಳನ್ನು ಮುಚ್ಚಲು ರೂಪಿಸಿದ ವರದಿಯಲ್ಲಿ ವಿವಿಗಳು ಲಾಭದಾಯಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದಲೂ ಆದಾಯ ಬರಬೇಕು ಎಂಬುದು ಸರ್ಕಾರದ ಉದ್ದೇಶ ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡುತ್ತಿದ್ದಾರೆ. ಈ ಬಾರಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಅತ್ಯಧಿಕ ಸಾಲ ಮಾಡಿದ್ದಾರೆ ಎಂದು ದೂರಿದರು. ಶಿಕ್ಷಣ ಎಂದರೆ ವ್ಯಾಪಾರವಲ್ಲ, ಅದು ನಮ್ಮ ದೇಶದ ಆಸ್ತಿ. ಮುಚ್ಚಿರುವ ಬಾರ್‌ಗಳನ್ನು ತೆರೆದು, ವಿವಿಗಳನ್ನು ಮುಚ್ಚಲಾಗುತ್ತಿದೆ. ಎಲ್ಲ ವಿವಿಗಳನ್ನು ನಡೆಸಲು 252 ಕೋಟಿ ರೂ. ಇದ್ದರೆ ಸಾಕು. ಉಚಿತವಾಗಿ 2 ಸಾವಿರ ರೂ.…
ಸಪೋಟಾ ಎಂಬ ಹಣ್ಣು ಮೂಲತಃ ದಕ್ಷಿಣ ಮೆಕ್ಸಿಕೋ ಮಧ್ಯ ಅಮೇರಿಕಾ ಮತ್ತು ಕ್ಯಾರಿಬಿಯನ್ ದೇಶದಿಂದ ಬಂದಿದೆ. ಈ ಹಣ್ಣು ಭಾರತದಲ್ಲಿ ಚಿಕ್ಕೂ ಎಂದೇ ಪರಿಚಿತವಾಗಿದೆ. ವ್ಯಾಪಾರಿಗಳು ತಮ್ಮೊಂದಿಗೆ ತಂದ ಈ ಹಣ್ಣು ಈಗ ನಮ್ಮ ಭಾರತದ್ದೇ ಸ್ವಂತ ಎಂಬಷ್ಟು ಚೆನ್ನಾಗಿ ಬೆಳೆಯುತ್ತಿದೆ. ಅದರಲ್ಲೂ ಕರ್ನಾಟಕ ಭಾರತದ ಅತ್ಯಂತ ಹೆಚ್ಚು ಚಿಕ್ಕೂ ಬೆಳೆಯುವ ರಾಜ್ಯವಾಗಿದೆ. https://ainlivenews.com/attention-government-employees-important-order-from-the-government-regarding-the-old-pension-scheme/ ಅನೇಕ ಜನರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಮ್ಮ ಆಹಾರದಲ್ಲಿ ಹಣ್ಣುಗಳನ್ನು ಸೇವಿಸುತ್ತಾರೆ. ಸಪೋಟಾ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಮಲಬದ್ಧತೆ, ಉರಿಯೂತ ಮತ್ತು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಾರಿನಂಶದಿಂದ ಸಮೃದ್ಧವಾಗಿರುವ ಸಪೋಟಾ, ಜೀರ್ಣಕ್ರಿಯೆಗೆ ಅತ್ಯುತ್ತಮವಾದ ಹಣ್ಣು. ಆದರೆ ಹೆಚ್ಚು ಈ ಹಣ್ಣನ್ನು ತಿನ್ನುವುದು ಕೆಲವು ಜನರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮಧುಮೇಹ – ಮಧುಮೇಹ ಇರುವ ರೋಗಿಗಳು ಚಿಕ್ಕು ಹಣ್ಣನ್ನು ಸೇವಿಸಬಾರದು. ಏಕೆಂದರೆ ಹಣ್ಣು ತುಂಬಾ ಸಿಹಿಯಾಗಿರುತ್ತದೆ. ಆದ್ದರಿಂದ, ಮಧುಮೇಹ ಇರುವ ರೋಗಿಗಳು ಇದನ್ನು…
ಬೆಂಗಳೂರು:- ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಭರವಸೆಯನ್ನ ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದಾರೆ. https://ainlivenews.com/dr-for-the-awareness-march-of-traditional-medicine-conference-rajneesh-wali-driving/ ಹಳೆಯ ಪಿಂಚಣಿ ಯೋಜನೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ 2025-26ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಅಂತಿಮ ಘೋಷಣೆಯಾಗುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರಿ ನೌಕರರ ಬೇಡಿಕೆಯಲ್ಲಿ ಒಂದು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂಬುದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಮೊದಲ ಆದೇಶವೊಂದು ಹೊರಬಿದ್ದಿದೆ. ದಿನಾಂಕ: 1.4.2006 ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಡಿಫೈನ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿ ಮೇಲೆ…
ಡಬ್ಲ್ಯುಪಿಎಲ್ 2025 ರಲ್ಲಿ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಆರ್ ಸಿಬಿ ಗೆಲ್ಲಲೇಬೇಕಾಗಿದೆ. https://ainlivenews.com/why-is-world-civil-defence-day-celebrated-today-here-is-some-background-information/ ಇಂದು ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಬೆಂಗಳೂರಿನಲ್ಲಿ ಕೊನೆಯ ಪಂದ್ಯವಾಡಲಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ 2025 ರ ಪಂದ್ಯ ಅಂತ್ಯವಾಗಲಿದೆ. ತವರಿನಲ್ಲಿ ಆರ್ ಸಿಬಿ ಒಂದೇ ಒಂದು ಪಂದ್ಯ ಗೆಲ್ಲದೇ ನಿರಾಸೆಗೊಂಡಿರುವ ಅಭಿಮಾನಿಗಳ ಮನರಂಜಿಸಲು ಆರ್ ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು WPL 2025ರ ಪಂದ್ಯದಲ್ಲಿ ಆರಂಭದಲ್ಲಿ ಅಬ್ಬರಿಸಿ ಬಳಿಕ ಹ್ಯಾಟ್ರಿಕ್ ಸೋಲಿವತ್ತ ಹೆಜ್ಜೆ ಹಾಕಿದೆ. ಹೀಗಾಗಿ ಮೂರು ಸೋಲುಗಳೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಕೂಡ ತುಸು ಕಠಿಣವಾಗಿದೆ. ಅಂದರೆ ಆರ್ಸಿಬಿ ತಂಡಕ್ಕೆ ಇನ್ನುಳಿದಿರುವುದು ಕೇವಲ ಮೂರು ಮ್ಯಾಚ್ಗಳು ಮಾತ್ರ. ಈ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ. ಆರ್ಸಿಬಿ ತಂಡವು ಮುಂದಿನ ಮೂರು…
ತರಕಾರಿ-ಹಣ್ಣುಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ನಮಗೆ ತಿಳಿಯದ ವಿಚಾರವೇನಲ್ಲ. ಅದರಲ್ಲೂ ಕೆಲವು ನಿರ್ದಿಷ್ಟ ತರಕಾರಿಗಳು ನಮಗೆ ವರದಾನವೇ ಸರಿ. ಅಂತಹ ಸಾಲಿನಲ್ಲಿ ಮೊದಲು ನಿಲ್ಲುವುದು ಗಡು ಗುಲಾಬಿ ಬಣ್ಣದ ಬೀಟ್ ರೂಟ್. https://ainlivenews.com/does-eating-watermelon-increase-blood-sugar-heres-the-answer-to-your-confusion/ ಕಡುಗೆಂಪು ಬಣ್ಣದ ಬೀಟ್ರೂಟ್ ತರಕಾರಿಯೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದ್ರೆ ತರಕಾರಿಯನ್ನು ದಿನನಿತ್ಯ ಈ ರೀತಿ ಸೇವಿಸುವುದರಿಂದ ಸೊಂಪಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಕೂದಲಿನ ಆರೋಗ್ಯದಲ್ಲಿ ಬೀಟ್ರೂಟ್ ಹೇಗೆ ಸಹಕಾರಿ? ವಿಟಮಿನ್ ಸಿ: ವಿಟಮಿನ್ ಸಿ ತನ್ನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಈ ಅಂಶವು ಬೀಟ್ರೂಟ್ ನಲ್ಲಿ ಹೇರಳವಾಗಿದೆ. ಇದು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುವ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಕೂದಲಿನ ರಚನೆಯನ್ನು ಕಾಪಾಡಿಕೊಳ್ಳಲು ಬೇಕಾದ ಕಾಲಜನ್ ಉತ್ಪಾದನೆಯಲ್ಲಿ ವಿಟಮಿನ್ ಸಿ ಸಹಕಾರಿಯಾಗಿದೆ. ಮೆಗ್ನೀಸಿಯಮ್ ಹಾಗೂ ರಂಜಕ: ಈ ಖನಿಜಗಳು ಕೂದಲಿನ ಬುಡವನ್ನು ಸುಧಾರಿಸಿ ಕೂದಲು ಉದುರುವುದನ್ನು ತಡೆಯುತ್ತದೆ. ಪೊಟ್ಯಾಸಿಯಮ್: ಬೀಟ್ರೂಟ್ ನಲ್ಲಿರುವ…
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಲ್ಲಂಗಡಿ ನಮ್ಮ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲದೇ ದೇಹವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಕಲ್ಲಂಗಡಿ ನೀರಿರುವ ಹಣ್ಣಾಗಿದ್ದರೂ, ಇದು ಸಿಹಿ ರುಚಿಗೆ ಹೆಸರುವಾಸಿಯಾಗಿದೆ. ಇದು ಸ್ವಾಭಾವಿಕವಾಗಿ ಸಿಹಿ ರುಚಿಯನ್ನು ಹೊಂದಿರುವುದರಿಂದ ಮಧುಮೇಹಿಗಳು ಇದನ್ನು ತಿನ್ನಬಹುದೇ ಎಂಬ ಅನುಮಾನ ಅನೇಕ ಮಂದಿಗಿದೆ. ಹಾಗಾದ್ರೆ ಶುಗರ್ ಇರುವವರು ಕಲ್ಲಂಗಡಿ ತಿನ್ನಬಹುದೋ ಅಥವಾ ಇಲ್ವೋ ಎಂದು ನಾವಿಂದು ತಿಳಿಯೋಣ. https://ainlivenews.com/ipl-2025-former-rcb-captain-enters-delhi-team/ ನೀವು ಕೂಡ ಮಧುಮೇಹದಿಂದ ಬಳಲುತ್ತಿದ್ದರೆ, ಕಲ್ಲಂಗಡಿ ತಿನ್ನುವುದು ಒಳ್ಳೆಯದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಮಧುಮೇಹದಲ್ಲಿ ಕಲ್ಲಂಗಡಿ ತಿನ್ನುವುದರಿಂದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಎರಡೂ ಇವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಒಂದು ಕಪ್ ಅಥವಾ 152 ಗ್ರಾಂ ಕತ್ತರಿಸಿದ ಕಲ್ಲಂಗಡಿ 9.42 ಗ್ರಾಂ ನೈಸರ್ಗಿಕ ಸಕ್ಕರೆ ಮತ್ತು 11.5 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಅದೇ ಸಮಯದಲ್ಲಿ, ಕಲ್ಲಂಗಡಿ ಸಾಮಾನ್ಯವಾಗಿ 72 ರ GI ಅನ್ನು ಹೊಂದಿರುತ್ತದೆ.…
IPL ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಡೆಲ್ಲಿ ತಂಡಕ್ಕೆ RCB ಮಾಜಿ ನಾಯಕ ಎಂಟ್ರಿ ಕೊಟ್ಟಿದ್ದಾರೆ. https://ainlivenews.com/do-you-see-this-symptom-on-your-hands-and-skin-if-so-this-is-a-sign-of-liver-damage/ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ತಂಡಕ್ಕೆ ಹೊಸ ಮೆಂಟರ್ನ ಆಯ್ಕೆ ಮಾಡಿಕೊಂಡಿದೆ. ಹೀಗೆ ಮೆಂಟರ್ ಆಗಿ ಎಂಟ್ರಿ ಕೊಟ್ಟವರು ಆರ್ಸಿಬಿ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಐಪಿಎಲ್ನಲ್ಲಿ ಆರ್ಸಿಬಿ, ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ 2009 ರಲ್ಲಿ ಆರ್ಸಿಬಿ ಹಾಗೂ 2014 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದರು. ಇದೀಗ 11 ವರ್ಷಗಳ ಹಿಂದೆ ನಾಯಕರಾಗಿ ಕಾಣಿಸಿಕೊಂಡ ಫ್ರಾಂಚೈಸಿ ಪರವೇ ಮೆಂಟರ್ ಆಗಿ ರಿಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದರಂತೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಪೀಟರ್ಸನ್ ಡೆಲ್ಲಿ ಕ್ಯಾಪಿಟಲ್ಸ್ ಬಳಗದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಐಪಿಎಲ್ನಲ್ಲಿ 36 ಪಂದ್ಯಗಳನ್ನಾಡಿರುವ ಕೆವಿನ್ ಪೀಟರ್ಸನ್ 1 ಭರ್ಜರಿ ಶತಕ ಹಾಗೂ…
ದೇವರು ಸೃಷ್ಟಿಸಿರುವ ದೇಹವನ್ನು ಮರುಸೃಷ್ಟಿ ಮಾಡಲು ವಿಜ್ಞಾನಿಗಳು ಇನ್ನಿಲ್ಲದೆ ಪ್ರಯತ್ನ ಮಾಡುತ್ತಲಿದ್ದರೂ ಅದು ಸಂಪೂರ್ಣವಾಗಿ ಇದುವರೆಗೆ ಸಾಧ್ಯವಾಗಿಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ತನ್ನದೇ ಆದ ವೈಶಿಷ್ಯ ಹಾಗೂ ಕಾರ್ಯವೈಖರಿಯನ್ನು ಹೊಂದಿಕೊಂಡಿದೆ. ಹೀಗಾಗಿ ಯಾವುದೇ ಒಂದು ಅಂಗದ ಮೇಲೆ ಪರಿಣಾಮವಾದರೂ ಅದರಿಂದ ಬೇರೆ ಅಂಗಗಳಿಗೆ ಹಾನಿ ಆಗುವುದು. ಇಂತಹ ಸಮಯದಲ್ಲಿ ಮುಖ್ಯವಾಗಿ ದೇಹದ ಒಳಗಿನ ಅಂಗಾಂಗಗಳ ಕಡೆ ಹೆಚ್ಚು ಗಮನ ಹರಿಸಬೇಕು. https://ainlivenews.com/bird-flu-scare-in-chikkaballapur-mass-killing-of-over-400-chickens/ ಯಕೃತ್ತಿನ ಹಾನಿಯು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡಬಹುದು. ಯಕೃತ್ತು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಯಕೃತ್ತಿನ ಸಮಸ್ಯೆ ಇದ್ದಾಗ, ಅದರ ಲಕ್ಷಣಗಳು ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಯಕೃತ್ತಿನ ಹಾನಿಯು ಹೊಟ್ಟೆಯ ಊತಕ್ಕೆ ಕಾರಣವಾಗಬಹುದು. ಅಲ್ಲದೆ, ಹೆಪಟೈಟಿಸ್ ಮತ್ತು ಕಾಮಾಲೆಯಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದೆಲ್ಲದರ ಹೊರತಾಗಿ, ಯಕೃತ್ತು ಹಾನಿಗೊಳಗಾದಾಗ, ಕೈ ಮತ್ತು ಕಾಲುಗಳ ಚರ್ಮದ ಮೇಲೂ ಕೆಲವು ಲಕ್ಷಣಗಳು ಗೋಚರಿಸುತ್ತವೆ. ದೀರ್ಘಕಾಲದವರೆಗೆ ಯಕೃತ್ತಿನ ಹಾನಿಯ ಈ ಲಕ್ಷಣಗಳು ಕಾಣಿಸುತ್ತಿದ್ದರೆ,…