Author: AIN Author

IPL ಸೀಸನ್ 17 ರಲ್ಲಿ ಸತತ ಸೋಲಿನ ಬಳಿಕ ಆರ್‌ಸಿಬಿ ವಿಲ್ ಜ್ಯಾಕ್ಸ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ಕೂಡ ಒತ್ತಾಯಿಸಿದ್ದಾರೆ. ಅಭಿಮಾನಿಗಳಂತೂ ವಿಲ್ ಜ್ಯಾಕ್ಸ್ ಅಂತಹ ಆಟಗಾರನನ್ನು ಐದು ಪಂದ್ಯಗಳು ಕೂರಿಸಿರುವುದಕ್ಕೆ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. https://ainlivenews.com/voters-are-not-entitled-to-know-details-of-all-properties-of-candidates/ ವಿಲ್ ಜ್ಯಾಕ್ಸ್ ಆಡಲೇಬೇಕು ಎಂದು ಒತ್ತಾಯ ಮಾಡುತ್ತಿರುವುದರ ಹಿಂದೆ ಬಲವಾದ ಕಾರಣವಿದೆ. ವಿಲ್ ಜ್ಯಾಕ್ಸ್ ಎಂತಹ ಎದುರಾಳಿಗಳನ್ನು ಧ್ವಂಸ ಮಾಡಬಲ್ಲ ಸ್ಫೋಟಕ ಬ್ಯಾಟರ್, ಬೌಲಿಂಗ್‌ನಲ್ಲೂ ಮೋಡಿ ಮಾಡಬಲ್ಲ ಆಟಗಾರ. ಅವರ ದಾಖಲೆಗಳ ಪಟ್ಟಿ ನೊಡಿದ್ರೆ ಇಂತಹ ಆಟಗಾರನನ್ನ ಐದು ಪಂದ್ಯ ಯಾಕೆ ಆಡಿಸಿಲ್ಲ ಎನ್ನುವ ಪ್ರಶ್ನೆ ನಿಮಗೂ ಬರುತ್ತದೆ. ವಿಲ್ ಜ್ಯಾಕ್ಸ್ 25 ಎಸೆತಗಳಲ್ಲಿ ಶತಕ ಸಿಡಿಸಿರುವ ಆಟಗಾರ, ಅದೇ ಇನ್ನಿಂಗ್ಸ್‌ನಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ ಸ್ಫೋಟಕ ಬ್ಯಾಟರ್. 2019ರಲ್ಲಿ ಸರ್‍ರೇ ತಂಡಕ್ಕಾಗಿ ಆಡುವ ಅವರು, ದುಬೈನಲ್ಲಿ ನಡೆದ ಟಿ10 ಪಂದ್ಯದಲ್ಲಿ ಲ್ಯಾಂಕಾಶೈರ್ ವಿರುದ್ಧ ಈ ಸಾಧನೆ ಮಾಡಿದರು. 2024ರ…

Read More

ನವದೆಹಲಿ:- ಮತದಾರರಿಗೆ ಅಭ್ಯರ್ಥಿಗಳ ಎಲ್ಲಾ ಆಸ್ತಿಗಳ ವಿವರ ತಿಳಿಯುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲೋಕಸಭಾ ಚುನಾವಣಾ ಕಾವು ಹೆಚ್ಚಾಗುತ್ತಲೇ ಇದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ನಿರತರಾಗಿದ್ದು, ಯಾವ ಅಭ್ಯರ್ಥಿಯ ಬಳಿ ಎಷ್ಟು ಆಸ್ತಿ ಇದೆ ಎಂಬ ವಿಷಯ ಸುದ್ದಿಯಾಗುತ್ತಿದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪು ಮತದಾರರ ಹುಬ್ಬೇರುವಂತೆ ಮಾಡಿದೆ. ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯ ಬಗ್ಗೆ ತಿಳಿಯಲು ಮತದಾರರಿಗೆ ಸಂಪೂರ್ಣ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. https://ainlivenews.com/which-walk-is-better-after-lunch-slow-or-fast/ ಅಭ್ಯರ್ಥಿಗೂ ಗೌಪತ್ಯೆಯ ಹಕ್ಕಿದೆ ಅಭ್ಯರ್ಥಿ ಕೂಡ ತಮಗೆ ಸಂಬಂಧಿಸದ ವಿಷಯಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಅಭ್ಯರ್ಥಿಗಳು ಗಣನೀಯ ಮೌಲ್ಯದ ಅಥವಾ ಐಷಾರಾಮಿ ಜೀವನಶೈಲಿಯನ್ನು ಪ್ರತಿಬಿಂಬಿಸದ ಹೊರತು ಅವರು ಅಥವಾ ಅವರ ಕುಟುಂಬದ ಒಡೆತನದ ಪ್ರತಿಯೊಂದು ಆಸ್ತಿಯನ್ನು ಬಹಿರಂಗಪಡಿಸಬೇಕಾಗಿಲ್ಲ ಎಂದು ಹೇಳಿದೆ.

Read More

ರಾತ್ರಿಯ ಊಟದ ನಂತರ ಸಾಮಾನ್ಯವಾಗಿ ಸ್ವಲ್ಪ ಸಮಯದವರೆಗೆ ನಡೆಯುವವರು ಮತ್ತು ಊಟ ತಿಂದು ನೇರವಾಗಿ ಮಲಗುವವರೂ ಇದ್ದಾರೆ. ಆದರೆ ಊಟದ ನಂತರ ನಡಿಗೆ ತುಂಬಾ ಅಗತ್ಯ ಏಕೆಂದರೆ ಊಟ ಮಾಡಿ ನೇರವಾಗಿ ಮಲಗುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಮತ್ತು ಬೆಳಗ್ಗೆ ಎದ್ದ ನಂತರ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಬಹುದು. ಈ ಸಮಸ್ಯೆಯನ್ನು ತಪ್ಪಿಸಲು, ನೀವು ಆಹಾರವನ್ನು ಸೇವಿಸಿದ ನಂತರ ನಡೆಯಬೇಕು, ಆದರೆ ಎಷ್ಟು ಸಮಯ ಮತ್ತು ಯಾವ ವೇಗದಲ್ಲಿ ನೀವು ನಡೆಯಬೇಕು ಅಥವಾ ಜಾಗಿಂಗ್ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ. https://ainlivenews.com/will-bjp-mlas-son-vivek-hebbar-join-the-congress-today/ ರಾತ್ರಿ 7 ಗಂಟೆಯೊಳಗೆ ಊಟ ಮಾಡಬೇಕು ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿ ಊಟವಾದ ತಕ್ಷಣ ವಾಕಿಂಗ್ ಹೋಗಬೇಡಿ, ಊಟವಾದ ನಂತರ ಕನಿಷ್ಠ ಒಂದು ಗಂಟೆ ವಾಕ್ ಮಾಡಿ. ಇದರೊಂದಿಗೆ, ಯಾವಾಗಲೂ ರಾತ್ರಿಯಲ್ಲಿ ಚುರುಕಾದ ನಡಿಗೆಯನ್ನು ತಪ್ಪಿಸಿ ಮತ್ತು ಸಾಧ್ಯವಾದಷ್ಟು ನಿಧಾನವಾಗಿ ನಡೆಯಿರಿ. ಊಟದ ನಂತರ, ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಸಾಮಾನ್ಯ ನಡಿಗೆಯನ್ನು ತೆಗೆದುಕೊಳ್ಳಿ. ತುಂಬಾ…

Read More

ಕಾರವಾರ:- ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಪುತ್ರ ಇಂದೇ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಜಿಲ್ಲಾ ಕೈ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. https://ainlivenews.com/chikkodi-undocumented-16-lakh-money-seized-two-arrested/#google_vignette ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ 2023ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಹಲವು ಸಭೆಗಳನ್ನೂ ನಡೆಸಿದ್ದ ಹೆಬ್ಬಾರ್, ರಾಜ್ಯಸಭಾ ಚುನಾವಣೆ ವೇಳೆ ಮತದಾನ ಮಾಡದೇ ಸೈಲೆಂಟ್ ಆಗಿದ್ದರು ಅಲ್ಲದೇ ಆಗಾಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ, ಕೈ ನಾಯಕರನ್ನ ಹಾಡಿ ಹೊಗುಳುತ್ತಿದ್ದರು. ಸದ್ಯ ಲೋಕಸಭಾ ಚುನಾವಣೆ ಸಮೀಪದಲ್ಲಿದ್ದರೂ ಶಿವರಾಂ ಹೆಬ್ಬಾರ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿಲ್ಲ. ಈ ನಡುವೆ ಅವರ ಪುತ್ರ ಇಂದೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ

Read More

ಚಿಕ್ಕೋಡಿ:- ಚಿಕ್ಕೋಡಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬಸ್ ಮೂಲಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ 31 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. https://ainlivenews.com/ipl-2024-gujarat-broke-rajasthans-winning-streak/#google_vignette ತಡರಾತ್ರಿ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಪೊಲೀಸರ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಚಿಕ್ಕೋಡಿಯಿಂದ ಮಹಾರಾಷ್ಟ್ರದ ಇಚಲಕರಂಜಿ ನಗರಕ್ಕೆ ತೆರಳುತ್ತಿದ್ದ ಬಸ್ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಅಕ್ರಮ ಹಣದ ಜೊತೆಗೆ ಇಬ್ಬರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಣ ಸಾಗಾಟ ಮಾಡುವರು ಮಹಾರಾಷ್ಟ್ರದ ಇಚಲಕರಂಜಿ ನಗರದ ನಿವಾಸಿಗಳಾಗಿದ್ದಾರೆ. ಪ್ರಕರಣವನ್ನ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More

ರಾಜಸ್ಥಾನ್ ಗೆಲುವಿನ ಓಟಕ್ಕೆ ಗುಜರಾತ್ ತಂಡವು ಬ್ರೇಕ್ ಹಾಕಿದೆ. ಸತತ ನಾಲ್ಕು ಗೆಲುವು ದಾಖಲಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲು ಕಂಡಿದೆ. ರಾಜಸ್ಥಾನ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 197 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್, ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. https://ainlivenews.com/modis-name-does-not-work-in-chikkaballapur-raksharamaiah/ ಮೊದಲ ಮೂರು ಓವರ್‌ಗಳಲ್ಲಿ ನಿಖರ ದಾಳಿ ಸಂಘಟಿಸಿದ ರಾಜಸ್ಥಾನದ ವೇಗದ ಬೌಲರ್ ಕುಲದೀಪ್ ಸೆನ್, ತಮ್ಮ ಅಂತಿಮ ಓವರ್‌ನಲ್ಲಿ 20 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಎನಿಸಿದರು. ಆ ಮೂಲಕ ಹೀರೊದಿಂದ ವಿಲನ್ ಆದರು. ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಆಡಿದ ಸೆನ್, ಸಾಯಿ ಸುದರ್ಶನ್ (35), ಮ್ಯಾಥ್ಯೂ ವೇಡ್ (4) ಹಾಗೂ ಅಭಿನವ್ ಮನೋಹರ್ (1) ವಿಕೆಟ್‌ಗಳನ್ನು ಗಳಿಸಿದರು. ಆದರೂ ಅಂತಿಮವಾಗಿ ನಾಲ್ಕು ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟರು. ಮತ್ತೊಂದೆಡೆ ಟ್ರೆಂಟ್ ಬೌಲ್ಟ್‌ಗೆ ಕೇವಲ ಎರಡು ಓವರ್ ಮಾತ್ರ ನೀಡಿರುವುದು ನಾಯಕ ಸಂಜು ಸ್ಯಾಮ್ಸನ್ ಟೀಕೆಗೆ ಗುರಿಯಾಗಿದ್ದಾರೆ.…

Read More

ಯಲಹಂಕ:- ಚಿಕ್ಕಬಳ್ಳಾಪುರದಲ್ಲಿ‌ ಮೋದಿ‌ ಹೆಸರು ಕೆಲಸ ಮಾಡಲ್ಲ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಹೇಳಿದ್ದಾರೆ. https://ainlivenews.com/after-the-lok-sabha-elections-the-state-congress-government-is-dust/#google_vignette ಈ ಸಂಬಂಧ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೆತ್ರದಲ್ಲಿ ಡಾ.ಕೆ.ಸುಧಾಕರ್ / ರಕ್ಷಾರಾಮಯ್ಯ ಹೆಸರು ಮಾತ್ರ ಕೆಲಸ ಮಾಡುತ್ತೆ. ಮೋದಿ ಹೆಸರು ಇಲ್ಲಿ ನಡೆಯಲ್ಲ. ಸುಧಾಕರ್ ರವರು ಕಳೆದ ಹತ್ತು ವರ್ಷಗಳಿಂದ ಇಲ್ಲಿ ಶಾಸಕ-ಸಚಿವರಾಗಿ ಕೆಲಸ ಮಾಡಿದ್ದಾರೆ. ನಾನು ಈಗ ಸ್ಪರ್ದೆ ಮಾಡ್ತಿದ್ದು, ಪಕ್ಷ ಮತ್ತು ನನ್ನ ಯೋಜನೆ ಜನರ ಮುಂದಿಟ್ಟಿದ್ದೇನೆ ಜನ ಯಾರು ಸೂಕ್ತ ಅಭ್ಯರ್ಥಿ ನಮಗೆ ಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಯಲಹಂಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ರಕ್ಷಾರಾಮಯ್ಯ ಹೇಳಿದ್ದಾರೆ. ಅಲ್ಲದೇ ಮೋದಿ ಮತ್ತು ಸುಧಾಕರ್ ಇಬ್ಬರಿಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಟಾಂಗ್ ಕೊಟ್ಟಿದ್ದಾರೆ

Read More

ಹಾವೇರಿ: ಲೋಕಸಭೆ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರಕಾರ ಧೂಳಿಪಟವಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ. ವಿಶ್ವಾಸ ವ್ಯಕ್ರಪಡಿಸಿದರು. https://ainlivenews.com/husband-posted-wifes-photo-on-facebook-as-a-call-girl/ ಹಾವೇರಿಯಲ್ಲಿಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಬೃಹತ್ ರೋಡ್ ಶೋ ಹಾಗೂ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದು ದೇಶದ ಭವಿಷ್ಯ ರೂಪಿಸುವ ಲೋಕಸಭೆಗೆ ನಡೆಯುವ ಚುನಾವಣೆ. ಈಗ ನಡೆಯುತ್ತಿರುವ ಚಿನಾವಣೆ ಎರಡು ಪಕ್ಷ, ಎರಡು ಜಾತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ದೇಶಾದ್ಯಂತ ಬಿಜೆಪಿ ಪರವಾದ ಅಲೆ ಇದೆ. ರಾಜ್ಯದಲ್ಲಿಯೂ ಬಿಜೆಪಿ ಪರ ಅಲೆಯಿಂದ ಇದರಿಂದ ಸಿಎಂ ಡಿಸಿಎಂ ನಿದ್ದೆಗೆಟ್ಟಿದ್ದಾರೆ. ಲೋಕಸಭೆ ಚುನಾವಣೆಯ ನಂತರ‌ ರಾಜ್ಯ ಕಾಂಗ್ರೆಸ್ ಸರ್ಕಾರ ಧೂಳಿಪಟವಾಗಲಿದೆ ಎಂದು ಹೇಳಿದರು. 2014 ರ ಮುಂಚೆ ಯುಪಿಎ ಸರ್ಕಾರದ ಅವಧಿಯಲ್ಲಿ ಈ ದೇಶದ ಜನರು ಈ ದೇಶಕ್ಕೆ ಭವಿಷ್ಯ ಇಲ್ಲ ಎಂದು ಆಶಾಭಾವನೆ ಕಳೆದುಕೊಂಡಿದ್ದರು. ಆದರೆ, 2014 ರಲ್ಲಿ ಮೋದಿಯವರು ಬಂದ ನಂತರ…

Read More

ಬೆಂಗಳೂರು:- ಸಾಮಾಜಿಕ ಜಾಲತಾಣಗಳಲ್ಲಿ ಪತಿ ಓರ್ವ ತನ್ನ ಹೆಂಡತಿ ಫೋಟೋವನ್ನು ಕಾಲ್ ಗರ್ಲ್ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಪತ್ಯ ಕಲಹವೇ ಘಟನೆಗೆ ಮುಖ್ಯ ಕಾರಣ ಎಂಬುದು ಪ್ರಾಥಮಿಕ ಹಂತದ ತನಿಖೆ ಎಂದು ತಿಳಿದು ಬಂದಿದೆ https://ainlivenews.com/ramadan-celebration-khaki-alert-at-idga-maidan-chamarajpet/ ನಂದಿನಿ ಲೇಔಟ್ ವ್ಯಾಪ್ತಿಯ ಸತ್ಯನಾರಾಯಣ ರೆಡ್ಡಿ ಮತ್ತು ಆತನ ಪತ್ನಿ ಮಧ್ಯೆ ದಾಂಪತ್ಯ ಕಲಹವಿತ್ತು. 2019ರಲ್ಲಿ ವಿವಾಹವಾಗಿದ್ದ ಈ ದಂಪತಿ ಒಂದು ವರ್ಷದಿಂದ ಬೇರೆ ಬೇರೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಪತಿಯು ದೈಹಿಕ ಮತ್ತು ಮಾನಸಿಕ ಹಿಂದು ನೀಡುತ್ತಿದ್ದುದರಿಂದ ಪತ್ನಿ ಆತನಿಂದ ದೂರವಾಗಿದ್ದಳು. ಇದನ್ನೇ ನೆಪ ಮಾಡಿಕೊಂಡಿದ್ದ ಆರೋಪಿ ಪತ್ನಿ ವಿರುದ್ಧ ಸೇಡು ತೀರಿಸಲು ಸಾಮಾಜಿಕ ಮಾಧ್ಯಮ ಫೇಸ್​​ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಕಲಾ ಶಶಿ’ ಎಂದು ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿದ್ದ ಆರೋಪಿ ಅದರಲ್ಲಿ ಪತ್ನಿಯ ದೂರವಾಣಿ ಸಂಖ್ಯೆ, ಫೋಟೋ ಮತ್ತು ಆಕೆಯ ಸಹೋದರನ ಮೊಬೈಲ್ ಸಂಖ್ಯೆ ಕೂಡ…

Read More

ಬೆಂಗಳೂರು:- ಇಂದು ರಂಜನ್ ಆಚರಣೆ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನ ಫುಲ್ ಆಲರ್ಟ್ ಘೋಷಿಸಲಾಗಿದೆ. ಬೆಳಗ್ಗಿನ ಜಾವ ೬:೩೦ ರಿಂದಲ್ಲೇ ಪೊಲೀಸರ ಸರ್ಪ ಕಾವಲಿನಲ್ಲಿ ಈದ್ಗಾ ಮೈದಾನ ಇದ್ದು, ನಮಾಝ್ ಮಾಡಲು ಸಾವಿರಾರು ಮುಸ್ಲಿಂ ಜನಗಳು ಅಲ್ಲಿ ಸೇರಲಿದ್ದಾರೆ. ಹೀಗಾಗಿ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ಖಾಕಿ ಬಂದೋಬಸ್ತ್ ಕೈಗೊಂಡಿದೆ. https://ainlivenews.com/a-fire-broke-out-in-a-house-in-bengaluru-in-the-morning/ 121ಟ್ರಾಫಿಕ್ ಪೊಲೀಸರು, 500ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ. ೯ ಗಂಟೆಗೆ ನಮಾಜ್ ಪ್ರಾರಂಭ ಆಗಲಿದ್ದು, ಮೈದಾನದ ಸುತ್ತ ಪೊಲೀಸರು ಬ್ಯಾರಿಗೇಟ್ ಹಾಕಿ‌ದ್ದಾರೆ. ಒಬ್ಬೊಬ್ಬರಾಗಿಯೇ ಮೈದಾನದ ಬಳಿ ಮುಸ್ಲಿಂರು ಸೇರಿಕೊಳ್ಳುತ್ತಿದ್ದಾರೆ. ಇನ್ನೂ ಈದ್ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಗಳಿವೆ. ಈ ಹಿನ್ನಲೆ ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಎರಡು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಟೌನ್ ಹಾಲ್ ಟು ಮೈಸೂರು ರಸ್ತೆ ಕಡೆಗೆ ಮತ್ತು ಕೆಂಗೇರಿ ಟು ಮಾರ್ಕೆಟ್ ಬರುವ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಏಳು…

Read More