Author: AIN Author

ಬೆಂಗಳೂರು: ಕಾಂಗ್ರೆಸ್‌ಗೆ ನೀಡುವ ಮತ ಅರಾಜಕತೆ, ಆರ್ಥಿಕ ದಿವಾಳಿತನ, ಭ್ರಷ್ಟಾಚಾರಕ್ಕೆ ನೀಡುವ ಮತವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿಎಸ್‌ ಯಡಿಯೂರಪ್ಪ ವ್ಯಾಖ್ಯಾನಿ ಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ಅಭಿವೃದ್ದಿ ಕುಂಠಿತವಾಗಿದೆ. ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಣ ಬಿಡುಗಡೆ ಮಾಡುವುದು ಕೇಂದ್ರದ ಕರ್ತವ್ಯ, ತಕ್ಷಣ ಹಣ ಬಿಡುಗಡೆ ಮಾಡಲಿದೆ. ಅದರಲ್ಲಿ ಭೇದಭಾವ ಇಲ್ಲ. ಬೇರೆ ಬೇರೆ ಕಾರಣದಿಂದ ಹಣ ಬಿಡುಗಡೆ ವಿಳಂಬ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದರು. https://ainlivenews.com/big-news-for-government-employees-important-order-for-old-pension/ ರಾಜ್ಯ ಸರ್ಕಾರ ಆಶ್ವಾಸನೆ ನೀಡಿದ 10 ಕೆಜಿ ಅಕ್ಕಿಯಲ್ಲಿ ಒಂದು ಕಾಳು ನೀಡದೆ ಇರುವುದು ಸಾಧನೆ. 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 6 ಸಾವಿರ ನೀಡುತ್ತಿದೆ. ನಾನು 4000…

Read More

ಬೆಂಗಳೂರು: ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಸೋಲಿನ ಹತಾಶೆಯಿಂದ ಗೂಂಡಾಗಿರಿ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ನವೀನ್ ಅವರ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಆರ್‌. ಅಶೋಕ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರೆಂಟಿ ಆಗುತ್ತಿದ್ದಂತೆ, ಶಾಶ್ವತವಾಗಿ ಸಿಎಂ ಇನ್ ವೈಟಿಂಗ್ ಆಗಿ ಉಳಿಯಬೇಕಾಗುತ್ತಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿಕೆ ಶಿವಕುಮಾರ್‌ ಹಾಗೂ ಅವರ ಸಹೋದರ ಡಿಕೆ ಸುರೇಶ್ ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ. https://ainlivenews.com/big-news-for-government-employees-important-order-for-old-pension/ ಬಿಜೆಪಿ ಕಾರ್ಯಕರ್ತ‌ ಸಹೋದರ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೆ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯನವರೇ? ಸ್ಟ್ರಾಂಗ್ ಸಿಎಂ ಎಂದು ಹೇಳಿಕೊಳ್ಳುವ ನೀವು ಡಿಕೆ ಸಹೋದರದ ಮುಂದೆ ಅಷ್ಟೊಂದು ವೀಕ್ ಯಾಕಾಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

Read More

ಸಿನಿಮಾ ಶೂಟಿಂಗ್ ಮುಗಿಸಿಕೊಂಡು ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಛತ್ತೀಸ್ ಗಢದ ಖ್ಯಾತ ಖಳನಟ (Villain) ಸೂರಜ್ ಮೆಹರ್ (Suraj Mehr) ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 40ರ ವಯಸ್ಸಿನ ನಟ ಅಖ್ರಿ ಫೈಸ್ಲಾ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬರುವಾಗ ಈ ಅವಘಡ ನಡೆದಿದೆ. ಛತ್ತೀಸಗಢ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟರಾಗಿದ ಸೂರಜ್, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಬುಧವಾರ ಅವರ ಎಂಗೇಜ್ ಮೆಂಟ್ ಆಗಬೇಕಿತ್ತು. ಆದರೆ, ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. https://ainlivenews.com/big-news-for-government-employees-important-order-for-old-pension/ ನಟನು ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿರುವ ಪರಿಣಾಮ, ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು. ಹಾಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನೋರ್ವರಿಗೂ ಗಂಭೀರ ಗಾಯಗಳು ಆಗಿವೆಯಂತೆ.

Read More

ಕಾರವಾರ: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಪುತ್ರ ವಿವೇಕ್ ಹೆಬ್ಬಾರ್ (Vivek Hebbar) ಗುರುವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. https://ainlivenews.com/big-news-for-government-employees-important-order-for-old-pension/ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ವಿವೇಕ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ್ ಹೆಬ್ಬಾರ್ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ನೂರಾರು ಬೆಂಬಲಿಗರ ಜೊತೆ ವಿವೇಕ್ ಹೆಬ್ಬಾರ್ ‘ಕೈ’ ಹಿಡಿದಿದ್ದಾರೆ.

Read More

ರಾಮನಗರ: ಬುಧವಾರ ತೋಟದ ಮನೆಯ ಹೊಸತೊಡಕು ಊಟಕ್ಕೆ ಚುನಾವಣಾಧಿಕಾರಿಗಳು ಬ್ರೇಕ್ ಹಾಕಿದ ವಿಚಾರದ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಸಾಮಾನ್ಯವಾಗಿ ಯುಗಾದಿ (Ugadi) ಹಬ್ಬದಲ್ಲಿ ಹೊಸತೊಡಕು ಊಟ ಹಾಕುತ್ತೇವೆ. ನಮ್ಮ ತೋಟದ ಮನೆಯ 100 ರಿಂದ 150 ಮಂದಿ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಬಿಜೆಪಿ-ಜೆಡಿಎಸ್ ಮುಖಂಡರು ಸಹ ಊಟಕ್ಕೆ ಸೇರುವ ತೀರ್ಮಾನ ಮಾಡಿದ್ದೆವು. ಇಲ್ಲಿ ಯಾವುದೇ ಪಾರ್ಟಿ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಸಾರ್ವಜನಿಕ ಸಮಾರಂಭ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ನವರ ರೀತಿಯ ಕುಕ್ಕರ್, ಸೀರೆ ಹಂಚುವ ಕಾರ್ಯಕ್ರಮ ನಮ್ಮದಲ್ಲ ಎಂದು ಹರಿಹಾಯ್ದರು.  ಕಾಂಗ್ರೆಸ್ (Congress) ಸೋಲುವ ಆತಂಕದಲ್ಲಿ ಏನೇನೋ ಆರೋಪ ಮಾಡುತ್ತಿದೆ. https://ainlivenews.com/big-news-for-government-employees-important-order-for-old-pension/ ಅವರ ದೂರಿಗೆ ಮಣೆಹಾಕಿ ಅಧಿಕಾರಿಗಳು ತೋಟದ ಮನೆಗೆ ಬಂದು ಪರಿಶೀಲನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಕುಕ್ಕರ್, ಸೀರೆ ಹಂಚುವ ಬಗ್ಗೆ ಯಾಕೆ ಚುನಾವಣಾ ಆಯೋಗ ಕ್ರಮವಹಿಸುತ್ತಿಲ್ಲ. ಚುನಾವಣಾಧಿ ಕಾರಿಗಳು ಅವರ ಕೈಗೊಂಬೆ ಆಗಿರೋದು…

Read More

ನವದೆಹಲಿ: ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾ (K.Kavitha) ಅವರನ್ನು ಕೇಂದ್ರ ತನಿಖಾ ದಳವು (CBI) ತಿಹಾರ್ ಜೈಲಿನಲ್ಲಿ ಬಂಧಿಸಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆ ಎಂದು ಆರೋಪಿಸಲಾಗಿದೆ. ಇದು ಮದ್ಯದ ದೊಡ್ಡ ಷೇರಿಗೆ ಪ್ರತಿಯಾಗಿ ದೆಹಲಿಯಲ್ಲಿ ಆಡಳಿತಾರೂಢ ಎಎಪಿಗೆ 100 ಕೋಟಿ ಕಿಕ್‌ಬ್ಯಾಕ್ ನೀಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಕಳೆದ ಮಂಗಳವಾರ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ನಿವಾಸದಿಂದ ಕವಿತಾ ಅವರನ್ನು ಮಾರ್ಚ್ 15 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. https://ainlivenews.com/big-news-for-government-employees-important-order-for-old-pension/ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದು ಜೈಲಿನಲ್ಲಿ ಕವಿತಾ ಅವರನ್ನು ವಿಚಾರಣೆ ನಡೆಸಿದ್ದರು. ಸಹ ಆರೋಪಿ ಬುಚ್ಚಿ ಬಾಬು ಅವರ ಫೋನ್ ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳಿಂದ…

Read More

ನಗರದ ಸತ್ತಿ ರಸ್ತೆಯಲ್ಲಿರುವ ಈದ್ಗಾ ಮೈದಾನ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರತೇಕವಾಗಿ ಸಡಗರದಿಂದ ಸಾಮೋಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಮೌಲಾನಾ ಅಬ್ದುಲ್ ಹಸೀಬ್ ರವರು ಮಾತನಾಡಿ, ಒಂದು ತಿಂಗಳ ಸತತವಾಗಿ ಉಪವಾಸ ಮಾಡಿದ ಬಳಿಕ ಅಲ್ಲಾಹನ ಕ್ರುಪೆ ಪಡೆಯಲು ಸಲುವಾಗಿ ಅರ್ಹ ಬಡವರಲ್ಲಿ ದಾನ ಧರ್ಮ ಮಾಡುವುದೇ ರಂಜಾನ್ ಹಬ್ಬದ ವಿಶೇಷತೆ. ಒಂದು ತಿಂಗಳ ರಂಜಾನ್ ಮಾಹೆಯಲ್ಲಿ ಹಸಿವು ಅನುಭವಿಸಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ಆದೇಶಗಳನ್ನು ಪಾಲಿಸಿ ಪ್ರಾರ್ಥನೆ ಮಾಡಿ ಖುರಾನ್ ಓದುವ ಮೂಲಕ ತನ್ನನ್ನು ಪಾರದರ್ಶಕತೆಯ ಹಾದಿಯಲ್ಲಿ ಕೂಂಡು ಕೂಂಡು ಸಾಗಿ ಇತರರಿಗೆ ಮಾದರಿಯಾಗ ಬೇಕು. ಮುಸ್ಲಿಂ ಬಾಂಧವರು ತಮ್ಮಲ್ಲಿರುವ ಪ್ರೀತಿ ವಿಶ್ವಾಸ ಸಹನೆ ಭಾವೈಕ್ಯತೆ ಹಂಚುವ ಮೂಲಕ ಹಬ್ಬದ ಆಚರಣೆಗೆ ಆಧ್ಯತೆ ನೀಡಬೇಕು ಮತ್ತು ಜಿಲ್ಲೆಯಾದ್ಯಂತ ವಿರುವ ಎಲ್ಲಾ ಮುಸ್ಲಿಂ ಬಾಂಧವರು ನೂರಕ್ಕು ನೂರು ಮತಚಲಾಯಿಸಬೇಕು ಯಾವುದೇ ಕಾರಣಕ್ಕು ಮೈಮರೆಯಬೇಡಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಈದ್ಗಾ ಕಮೀಟಿಯ…

Read More

ಕೊಪ್ಪಳ: ಕಾಂಗ್ರೆಸ್ ಯಾವಾಗ ಬರುತ್ತದೆ ಅವಾಗ ಬರಗಾಲ ಬರುತ್ತದೆ. ಕಾಂಗ್ರೆಸ್ ನ ಕಾಲ್ಗುಣನೋ ಏನೂ ಈಗ ಬರಗಾಲ ಬಂದಿದೆ ಎಂದು ಕೊಪ್ಪಳದಲ್ಲಿ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದಾಗ ಯಡಿಯೂರಪ್ಪ ಒಬ್ಬರೇ ಪ್ರವಾಸ ಮಾಡಿದರು. ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಿದರು. ಕೇಂದ್ರ ಸರಕಾರದ ಅನುದಾನಕ್ಕೆ ಕಾಯಲಿಲ್ಲ, ಇವತ್ತು ಈ ಸರಕಾರ ಬರಗಾಲ ಇದ್ದರೂ ಪರಿಹಾರ ನೀಡುತ್ತಿಲ್ಲ. ಸಮಯ ವ್ಯರ್ಥ ಮಾಡುತ್ತಿದೆ,ಇದು ಸಂಪೂರ್ಣ ರೈತ ವಿರೋಧಿ ಸರಕಾರ ಆದ್ದರಿಂದ ಈ ಸರಕಾರ ಕಿತ್ತೊಗೆಯಬೇಕೆಂದರು.  ಇನ್ನೂ ಮೋದಿ ಯುವಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಸಚಿವ ಶಿವರಾಜ ತಂಗಡಗಿ ಮೋದಿ ಎನ್ನುವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದಾರೆ. ತಂಗಡಗಿ ಅವರೇ ಬಸವಣ್ಣನವರ ನಾಡಿನವರು, ಈ ಮಾತನ್ನು ಕೇಳಿದರೆ ನೀವು ಬಸವಣ್ಣ ನಾಡಿನವರು ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಬರುತ್ತದೆ ಎಂದು ಹೇಳಿದರು.

Read More

ಚಾಮರಾಜನಗರ: ಬಿಜೆಪಿ ಕಾಂಗ್ರೆಸ್ ಗೆ ಪ್ರತಿಷ್ಟೆಯ ಕಣವಾದ ಚಾಮರಾಜನಗರ ಲೋಕಸಭೆ ಎಸ್.ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹಾಗು ಹನೂರು ಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಪ್ರಚಾರ ನಡೆಸುತ್ತಿದ್ದು, ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಹಾಗು ಬಿಜೆಪಿ ನಾಯಕರ ಜೊತೆ ಎನ್.ಡಿ‌.ಎ ಅಭ್ಯರ್ಥಿ ಎಸ್‌.ಬಾಲರಾಜ್ ಪರ ಬಿವೈ ವಿಜಯೇಂದ್ರ ಬೃಹತ್ ರೋಡ್ ಶೋ ಮೂಲಕ ದಲಿತ ಮತಗಳೇ ಹೆಚ್ಚಾಗಿರುವ ಭಾಗದಲ್ಲಿ ದಲಿತ ಮತಗಳ ಕ್ರೋಡೀಕರಣಕ್ಕೆ ತಂತ್ರ ಎಣೆದಿದ್ದಾರೆ. https://ainlivenews.com/big-news-for-government-employees-important-order-for-old-pension/ ರೋಡ್ ಶೋ ಗೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಕಾಂಗ್ರೆಸ್ ಪಕ್ಷದವರು ಹಣ ಬಲ, ತೋಳ್ಬಲದೊಂದಿಗೆ ಪ್ರಚಾರ ನಡೆಸಲು ಮುಂದಾಗಿದ್ದಾರೆ, ಆದರೆ ಈ ಬಾರಿ ಮತದಾರರು ತೀರ್ಮಾನ ಮಾಡಿದ್ದಾರೆ, ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಅಭ್ಯರ್ಥಿ ಡಾ.ಮಂಜುನಾಥ್ ಗೆದ್ದೇ ಗೆಲ್ಲುತ್ತಾರೆ, ಚಾಮರಾಜನಗರದಲ್ಲೂ ಸಜ್ಜನ ವ್ಯಕ್ತಿಯಾದ ಬಾಲರಾಜ್ ಗೆಲುವು ಶತಸಿದ್ದ ಎಂದಿದ್ದಾರೆ.

Read More

ಗದಗ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅದರಹಳ್ಳಿ ಗ್ರಾಮದ ರವೀನಾ ಲಮಾಣಿ ಕಲಾ ವಿಭಾಗದಲ್ಲಿ 600 ಕ್ಕೆ 595 ಅಂಕ ಪಡೆದು ರಾಜ್ಯಕ್ಕೆ ಎರಡನೆ ಸ್ಥಾನ ಪಡೆದಿರುವುದು ಅಭಿನಂದನೀಯ ಎಂದು ಮಾಜಿ ‌ಸಿಎಂ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, Basavaraj S Bommai (Modi Ka Parivar) on X: “”ಜ್ಞಾನ ಈ ಜಗತ್ತನ್ನು ಆಳಲಿದೆ” ನಮ್ಮ ಹೆಮ್ಮೆಯ ಲಕ್ಷ್ಮೇಶ್ವರದ ಆದರಹಳ್ಳಿ ಗ್ರಾಮದ ರವೀನಾ ಲಮಾಣಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇಯ ಸ್ಥಾನ ಪಡೆದಿರುವುದು ನಿಜಕ್ಕೂ ಸಂತಸದ ಸಂಗತಿ. ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಬಡತನವನ್ನು ಎದುರಿಸುವ ನಡುವೆಯೇ ರವೀನಾ ಈ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ರವೀನಾ ಪೋಷಕರಾದ ಸೋಮಣ್ಣ… https://t.co/6bLNRuWwyD” / X (twitter.com) ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಬಡತನದ ನಡುವೆಯೇ ರವೀನಾ ಈ ಸಾಧನೆ ಮಾಡಿರುವುದು ನಿಜಕ್ಕೂ…

Read More