Author: AIN Author

ಕಲಬುರಗಿ: ಕಲಬುರಗಿ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ.ಉಮೇಶ ಜಾಧವ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ನಾಮಪತ್ರ‌ ಸಲ್ಲಿಸಿದರು.

Read More

ಬಳ್ಳಾರಿ: ಬಳ್ಳಾರಿ ಲೋಕಸಭೆ ಕ್ಷೇತ್ರದ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಿದ್ದು, ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರರಿಗೆ ಪತ್ನಿ ಜತೆಗೆ ಆಗಮಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಮ್  ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತುಕಾರಾಂಗೆ ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪ, ಮಾಜಿ ಸಚಿವ ಪಿಟಿ. ಪರಮೇಶ್ವರ್ ನಾಯ್ಕ್ ಸಾಥ್ ನೀಡಿದರು.

Read More

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ‌ ಅಖಾಡ ರಾಜ್ಯದ ಹೈಓಲ್ಟೇಜ್ ಕ್ಷೇತ್ರವಾಗ್ತಿದ್ದು, ಡಿಕೆ‌ ಬ್ರದರ್ಸ್ vs ಮೈತ್ರಿ ನಾಯಕರ ಜಿದ್ದಾಜಿದ್ದಿನ ಪ್ರತಿಷ್ಟೆಯ ಸಮರ ವೇದಿಕೆ ಸಜ್ಜಾಗಿದೆ. ಡಿಕೆ ಸುರೇಶ್ ಸೋಲಿಸಲು ಮಾಜಿ ಸಿಎಂ ಕುಮಾರಸ್ವಾಮಿ ಪಣ ತೊಟ್ಟಿದ್ರೆ, ಸಹೋದರನನ್ನು ಗೆಲ್ಲಿಸಲು ಡಿಕೆಶಿ ಕ್ಷೇತ್ರದಾದ್ಯಂತ ಮಿಂಚಿನ‌ ಸಂಚಾರ ಮಾಡ್ತಿದ್ದಾರೆ. RR ನಗರ, ಯಶವಂತಪುರ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿರೋ ಡಿಕೆ ಬ್ರದರ್ಸ್ ಅಪಾರ್ಟ್ಮೆಂಟ್ ನಿವಾಸಿಗಳ ಮತ ಸೆಳೆಯಲು ಸರ್ಕಸ್ ಮಾಡ್ತಿದ್ದಾರೆ. ಲೋಕಸಭಾ ಅಖಾಡ ದಿನದಿಂದ ದಿನಕ್ಕೆ‌ ದೊಡ್ಡ ಮಟ್ಟದಲ್ಲಿ ರಂಗೇರ್ತಿದೆ, ಅದರಲ್ಲೂ ಬೆಂಗಳೂರು ಗ್ರಾಮಾಂತರ ‌ಅಖಾಡ ರಾಜ್ಯದ ಹೈ ಓಲ್ಟೇಜ್ ಕ್ಷೇತ್ರವಾಗ್ತಿದೆ.‌ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್, ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ನಡುವರ ಜಿದ್ದಾಜಿದ್ದಿನ ಫೈಟ್ ನಡಿತಿದೆ. ಡಿಕೆ ಬ್ರದರ್ಸ್ ಗೆ ಮಣ್ಣುಮುಕ್ಕಿಸಿ ಸುರೇಶ್ ರನ್ನ ಸೋಲಿಸಲೇಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಸ್ವಾಮಿ ಪಣತೊಟ್ಟಿದ್ದಾರೆ, ಸಭೆಗಳ ಮೇಲೆ ಸಭೆ ಮಾಡ್ತಾ ಡಾಕ್ಟರ್ ಗೆಲುವಿನ ರಣತಂತ್ರ ಹೆಣೆಯುತ್ತಾ. ಡಿಕೆ ಬ್ರದರ್ಸ್ ಗೆ ಖೆಡ್ಡಾ ತೋಡ್ತಿದ್ದಾರೆ.…

Read More

ಬೆಂಗಳೂರು: ಆದಿಚುಂಚನಗಿರಿ ಶ್ರೀಗಳನ್ನು ನಾವು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್​ನವರು ವಿಲ ವಿಲ ಎಂದು ಒದ್ದಾಡಿ ಬಿಟ್ಟಿದ್ದಾರೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳನ್ನು ನಾವು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್​ನವರು ವಿಲ ವಿಲ ಎಂದು ಒದ್ದಾಡಿ ಬಿಟ್ಟಿದ್ದಾರೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಒಕ್ಕಲಿಗ ಸಮುದಾಯ, ಬಿಜೆಪಿ- ಜೆಡಿಎಸ್ ಜೊತೆ ಹೋಗುತ್ತದೆ ಎಂಬ ಭಯದಿಂದ ಸರ್ಕಾರ ಬೀಳಿಸಿದವರು ಎಂಬ ನಿರಾಧಾರ ಆರೋಪ ಮಾಡಿದ್ದಾರೆ. ಕೇಂದ್ರದಲ್ಲಿ ದೇವೇಗೌಡರನ್ನು ಕೆಳಗೆ ಇಳಿಸಿದವರು ಯಾರು?, ರಾಜ್ಯದಲ್ಲಿ ಕುಮಾರಸ್ವಾಮಿಯವರನ್ನು ಇಳಿಸಿದವರು ಯಾರು ಎಂದು ಗೊತ್ತಿದೆ. ಸೋಲಿನ ಭೀತಿಯಿಂದ ಕೊಟ್ಟ ಹೇಳಿಕೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದರು.

Read More

ಮೊದಲು ಜನರು ನೀರನ್ನು ಸಂಗ್ರಹಿಸಲು ಮಣ್ಣಿನ ಮಡಿಕೆ ಬಳಸುತ್ತಿದ್ದರು. ಮಣ್ಣಿನ ಮಟ್ಕಾದ ನೀರು ಸ್ವಾಭಾವಿಕವಾಗಿ ತಂಪಾಗಿರುತ್ತದೆ. ಅದರ ನೀರು ಆರೋಗ್ಯಕ್ಕೆ ಉತ್ತಮ ಎಂದು ನಮ್ಮ ಪೂರ್ವಜರಿಗೆ ತಿಳಿದಿತ್ತು. ಈ ಹಳೆಯ ಅಭ್ಯಾಸವು ಗಾಜು ಅಥವಾ ಇತರ ಕಂಟೇನರ್ಗಳ ಸಾಂಪ್ರದಾಯಿಕ ಆಯ್ಕೆ ಮಾತ್ರವಲ್ಲ, ಅಳವಡಿಸಿಕೊಳ್ಳಲು ಆರೋಗ್ಯಕರ ಮತ್ತು ಚಿಕಿತ್ಸಕ ಆಯ್ಕೆ.  ಬೇಸಿಗೆಯಲ್ಲಿ ಹಲವು ಬಾರಿ ಮಣ್ಣು ಅಥವಾ ಮಟ್ಕಾ ನೀರು ಕುಡಿಯಬೇಕು. ಇಂದು, ಬಹುತೇಕ ಪ್ರತಿಯೊಂದೂ ಮನೆಯಲ್ಲೂ ರೆಫ್ರಿಜರೇಟರ್‌ಗಳನ್ನು ಬಳಸುತ್ತಿರುವಾಗ, ಮಣ್ಣಿನ ಮಡಿಕೆಗಳ ಬಳಕೆ ಕಡಿಮೆಯಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವುದು ಉತ್ತಮ. ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಗಂಟಲನ್ನು ಸರಿಯಾಗಿರಿಸುತ್ತದೆ ಮಣ್ಣಿನ ಮಡಿಕೆಯಲ್ಲಿ ಇರಿಸಲಾದ ನೀರು ಗಂಟಲಿಗೆ ಒಳ್ಳೆಯದು. ಆದರಿಂದ ಶೀತ, ಕೆಮ್ಮು ಮತ್ತು ಅಸ್ತಮಾದಿಂದ ಬಳಲುತ್ತಿರುವವರು ಗಂಟಲಿಗೆ ಮಟ್ಕಾ ನೀರು ಉತ್ತಮವಾಗಿರುವುದರಿಂದ, ತಣ್ಣನೆಯ ಫ್ರಿಡ್ಜ್ ನೀರಿನ ಬದಲು ಮಟ್ಕಾ ನೀರನ್ನು ಕುಡಿಯಬೇಕು. ಹಾನಿಕಾರಕ ರಾಸಾಯನಿಕಗಳಿಲ್ಲ ಪ್ಲಾಸ್ಟಿಕ್ ಬಾಟಲಿಗಳು ಬಿಪಿಎಯಂತಹ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮಣ್ಣಿನ ಮಡಿಕೆಯಲ್ಲಿ…

Read More

ಶಿವಮೊಗ್ಗ:  ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್​. ಈಶ್ವರಪ್ಪ ಅವರು ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈಶ್ವರಪ್ಪಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸಾಥ್ ನೀಡಿದ್ದಾರೆ. ಕೆಲ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಈಶ್ವರಪ್ಪ, ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆಗಿರುವ ಗುರುದತ್ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಈಶ್ವರಪ್ಪ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ”ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮುನ್ನ 8 ವಿಧಾನಸಭೆ ಕ್ಷೇತ್ರದಿಂದ ಜನರು ಬಂದಿದ್ದಾರೆ. ಮನೆ, ಮನೆಗೆ ಕಾರ್ಯಕರ್ತರು ಹೋಗಿ ಹಿಂದುತ್ವಕ್ಕೆ ಅನ್ಯಾಯ ಆಗಿರುವ ಬಗ್ಗೆ ಹೇಳುತ್ತಾರೆ. ಶಿವಮೊಗ್ಗದ ಜನರು ನನಗೆ ಬೆಂಬಲ ಕೊಡುತ್ತಾರೆ. ಈಗಾಗಲೇ 25-30 ಸಾವಿರ ಜನ ಬಂದು ಬೆಂಬಲ ಸೂಚಿಸಿದ್ದಾರೆ. ನಾಮಪತ್ರ ಸಲ್ಲಿಸಲ್ಲ ಎಂದವರಿಗೆ ಮೆರವಣಿಗೆಯೇ ಉತ್ತರ” ಎಂದು ತಿರುಗೇಟು ನೀಡಿದರು.

Read More

ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರಿಗೆ ಚೆನ್ನೈನ (Chennai) ವೇಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ (Honorary Doctorate) ಘೋಷಣೆ ಮಾಡಿದೆ. ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವನ್ನು ವಿಶ್ವವಿದ್ಯಾಲಯ ನೀಡುತ್ತಿದೆ. ಸಹಜವಾಗಿಯೇ ರಾಮ್ ಚರಣ್ ಅಭಿಮಾನಿಗಳಿಗೆ ಸಂಭ್ರಮವಾಗಿದೆ. ಸದ್ಯ ಅವರು ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ನಾಯಕಿ ಜಾನ್ವಿ ಕಪೂರ್ (Janhvi Kapoor) ಜೊತೆಗಿನ ಚಿತ್ರೀಕರಣದ ಫೋಟೋಗಳನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ರಾಮ್ ಚರಣ್- ಜಾನ್ವಿ ಕಪೂರ್ (Janhvi Kapoor) ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನೆರವೇರಿತ್ತು. ಈ ಇವೆಂಟ್‌ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಬೋನಿ ಕಪೂರ್, ಸುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣದಲ್ಲಿ ಮೆಗಾಸ್ಟಾರ್ ಪುತ್ರನ…

Read More

ಬೀದರ್: ಲೋಕಸಭಾ ಚುನಾವಣೆ ಹೊತ್ತಲ್ಲೆ ಸಚಿವ ಈಶ್ವರ್ ಖಂಡ್ರೆಗೆ ಐಟಿ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಹೌದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಹೋದರ ಅಧ್ಯಕ್ಷರಾಗಿರುವ ಬೀದರ್ ಡಿಸಿಸಿ ಬ್ಯಾಂಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ರೈತರಿಗೆ ಲೋನ್ ಕೊಡುತ್ತಿದ್ದಾರೆಂಬ ಆರೋಪದ ಮೇಲೆ ದಾಳಿಯಾಗಿದೆ. ಬೀದರ್ ನಗರದ ಹೈದ್ರಾಬಾದ್ ರಸ್ತೆಯಲ್ಲಿರು ಡಿಸಿಸಿ ಬ್ಯಾಂಕ್ ಮೇಲೆ 15ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿದ್ದಾರೆ. ತೆಲಂಗಾಣ, ಯಾದಗಿರಿ ಕಲಬುರಗಿಯಿಂದ ಬಂದಿರುವ ಐಡಿ ಅಧಿಕಾರಿಗಳು ಬ್ಯಾಂಕ್​ನ ಅಕೌಂಟ್ಸ್​ಗಳನ್ನು ಪರಿಶೀನಲೆ ಮಾಡುತ್ತಿದ್ದಾರೆ. ಇನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಹೋದರ ಅಮರ ಖಂಡ್ರೆ ಬೀದರ್​ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷರಾಗಿದ್ದಾರೆ. ಬ್ಯಾಂಕ್​ ಸಿಬ್ಬಂದಿಯ ಮೊಬೈಲ್​ಗಳನ್ನು ಆಫ್​ ಮಾಡಿಸಿ ಕೂಲಂಕುಶವಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.  

Read More

ಬೆಂಗಳೂರು: ಲೋಕಸಭಾ ಚುನಾವಣೆಯ (Loksabha Elections 2024) ಕಣ ರಾಜ್ಯದಲ್ಲಿ ರಂಗೇರುತ್ತಿದೆ. ಕ್ಷೇತ್ರಗಳಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾಯಕರು ಪಣತೊಟ್ಟಿದ್ದಾರೆ. ಇತ್ತ ಕಾಂಗ್ರೆಸ್ (Congress) ಗುರುವಾರ ರಾತ್ರಿ ಮಿಡ್ ನೈಟ್ ಆಪರೇಷನ್ ಮೂಲಕ ಬೆಳ್ಳಂಬೆಳಗ್ಗೆ ದಳಪತಿಗಳಿಗೆ ಶಾಕ್ ನೀಡಿದೆ. ಹೌದು.ತಡರಾತ್ರಿ 11.30ರ ಸುಮಾರಿಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಅಕ್ಕೂರ್ ದೊಡ್ಡಿ ಶಿವಣ್ಣ ಸೇರಿ ಚನ್ನಪಟ್ಟಣದ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಉಪಸ್ಥಿತರಿದ್ದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರೇ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೋಸ್ತಿ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.

Read More

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನಲೆ ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಧಾಕೃಷ್ಣ ದೊಡ್ಮನಿ ಇವತ್ತು ನಾಮಪತ್ರ ಸಲ್ಲಿಸಿದ್ರು.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರ ಅಳಿಯ ಆಗಿರುವ ರಾಧಾಕೃಷ್ಣ ಇದೇ ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಇಳಿದಿದ್ದು ವಿಶೇಷ..ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಫೌಜಿಯಾ ತರುನಮ್ ರವರಿಗೆ ನಾಮಪತ್ರ ಸಲ್ಲಿಸಿದ್ರು..ಈವೇಳೆ ಡಿಸಿಎಂ ಡಿಕೆಶಿ ಸೇರಿದಂತೆ ಐವರು ಉಮೇದುವಾರಿಕೆ ವೇಳೆ ಉಪಸ್ತಿತರಿದ್ರು.

Read More