ನಮ್ಮ ಸೌಂದರ್ಯ ಹೆಚ್ಚಿಸಲು ಮಾರುಕಟ್ಟೆಯಲ್ಲಿ ದೊರೆಯುವ ಬ್ಯೂಟಿ ಪ್ರಾಡೆಕ್ಟ್‌ಗಳಿಗೆ ಹಣ ಖರ್ಚು ಮಾಡುವ ಬದಲು ಕೆಲವೊಂದು ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿ ತ್ವಚೆ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಬಹುದು. https://ainlivenews.com/%ca%bbkai%ca%bc-activist-found-dead-in-suitcase-murder-suspected/ ಸೌಂದರ್ಯ ವೃದ್ಧಿಗೆ ನೈಸರ್ಗಿಕವಾದ ಸಾಧನಗಳನ್ನು ಬಳಸುವುದರ ಪ್ರಯೋಜನವೆಂದರೆ ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಹಾಗೂ ನಮ್ಮ ಅಂದವನ್ನು ಹೆಚ್ಚಿಸುವುದರ ಜತೆಗೆ ಸೌಂದರ್ಯದ ರಕ್ಷಣೆಯನ್ನು ಮಾಡುತ್ತದೆ. ಬಾಳೆಹಣ್ಣು ಕೂಡ ನೈಸರ್ಗಿಕವಾದ ಸೌಂದರ್ಯವರ್ಧಕಗಳಲ್ಲಿ ಒಂದಾಗಿದೆ.. ಬಾಳೆಹಣ್ಣಿನ ಹೇರ್ ಪ್ಯಾಕ್ ನಿಮ್ಮ ಕೂದಲಿನ ವಿನ್ಯಾಸವನ್ನು ಸುಧಾರಿಸುತ್ತದೆ.ಇದರೊಂದಿಗೆ, ಇದು ತುದಿಗಳ ಸೀಳುವಿಕೆಯ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ.ಇಷ್ಟೇ ಅಲ್ಲ, ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.ಅಲ್ಲದೆ, ಇದು ನಿಮ್ಮ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ, ಆದ್ದರಿಂದ ಬಾಳೆಹಣ್ಣಿನ ಹೇರ್ ಪ್ಯಾಕ್ ತಯಾರಿಸುವುದು ಹೇಗೆ? ಎನ್ನುವುದನ್ನು ತಿಳಿಯೋಣ ಬನ್ನಿ. ಬಾಳೆಹಣ್ಣಿನ ಹೇರ್ ಪ್ಯಾಕ್ ಮಾಡಲು ಬೇಕಾಗುವ ಪದಾರ್ಥಗಳು- ಬಾಳೆಹಣ್ಣು ಅಲೋವೆರಾ ಜೆಲ್ ತಾಜಾ ಜೇನುತುಪ್ಪ 2 ಟೀ ಚಮಚ ತೆಂಗಿನ ಎಣ್ಣೆ 2 ರಿಂದ 3 ಟೀ…
Author: AIN Author
ಚಂಡೀಗಢ:- ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ʻಕೈʼ ಕಾರ್ಯಕರ್ತೆ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. https://ainlivenews.com/if-you-do-these-5-things-every-day-gods-blessings-are-guaranteed/ ಮೃತ ಮಹಿಳೆಯನ್ನು ಹಿಮಾನಿ ನರ್ವಾಲ್ ಎಂದು ಗುರುತಿಸಲಾಗಿದೆ. ಸಾವಿನ ಕುರಿತು ಉನ್ನತಮಟ್ಟದ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ. ಸಂಪ್ಲಾ ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್‌ಕೇಸ್ ಇರುವುದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್‌ನಲ್ಲಿ ಶವ ಇರುವುದನ್ನು ಪತ್ತೆಹಚ್ಚಿದ್ದಾರೆ. ಶವವನ್ನು ಹೊರತೆಗೆದಾಗ ಕುತ್ತಿಗೆ ಭಾಗಕ್ಕೆ ದುಪ್ಪಟ್ಟಾ ಬಿಗಿಯಲಾಗಿತ್ತು. ಹೀಗಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹಿಂದೂ ಧರ್ಮದಲ್ಲಿ, ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ದೈನಂದಿನ ಪೂಜೆಯ ಮಾರ್ಗವೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿತ್ಯ ಪೂಜೆ ಮತ್ತು ಮಂತ್ರ ಪಠಣದಿಂದ ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ ಮತ್ತು ದೇವರಲ್ಲಿ ನಂಬಿಕೆ ಹುಟ್ಟುತ್ತದೆ. ಪೂಜೆಯೂ ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡುತ್ತದೆ. ನಮ್ಮಲ್ಲಿ ಯಾವುದೇ ಕಠಿಣ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹುಟ್ಟುಹಾಕುತ್ತದೆ. ಪೂಜೆಯು ನಮ್ಮ ಇಂದ್ರೀಯಗಳ ಮೇಲೆ ನಿಯಂತ್ರಿಸುವುದಕ್ಕೂ ಸಹಕಾರಿಯಾಗಿದೆ. https://ainlivenews.com/important-notice-from-the-center-regarding-passport-new-law-to-be-implemented-across-the-country/ ಧರ್ಮ, ದೇವರಿಲ್ಲದೇ ಏನು ಇಲ್ಲವೆಂಬುದು ಅನೇಕರಿಗೆ ತಿಳಿದೇ ಇಲ್ಲ. ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುವ ವ್ಯಕ್ತಿಯು ಕೆಲವೊಂದು ಆಚರಣೆಗಳನ್ನು ಅನುಸರಿಸುವುದು ಉತ್ತಮ. ಪ್ರತಿನಿತ್ಯ ನಾವು ಈ ಆಚರಣೆಗಳನ್ನು ಅನುಸರಿಸುವ ಮೂಲಕ ಧನಾತ್ಮಕತೆಯನ್ನು ಆಕರ್ಷಿಸಬಹುದು ಅಥವಾ ದೇವರ ಆಶೀರ್ವಾದವನ್ನೂ ಪಡೆದುಕೊಳ್ಳಬಹುದು. ಅಂತಹ ಆಚರಣೆಗಳ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ. ಹಿಂದೂ ಧರ್ಮದಲ್ಲಿ ಜಪಮಾಲೆಯ ಬಳಕೆ ತುಂಬಾನೇ ಹೆಚ್ಚಾಗಿದೆ. ಜಪಮಾಲೆಯನ್ನು ಹಿಡಿದು ಮಂತ್ರಗಳನ್ನು ಪಠಿಸಲಾಗುತ್ತದೆ. ಧ್ಯಾನವನ್ನು ಮಾಡಲಾಗುತ್ತದೆ. ಜಪಮಾಲೆಯನ್ನು ಯಾರು ಬೇಕಾದರೂ ಎಲ್ಲಿಯಾದರೂ ಕುಳಿತು ಅಥವಾ ನಿಂತುಕೊಂಡು ಪಠಿಸಬಹುದು. ಜಪಮಾಲೆಯನ್ನು ಹಿಡಿದು ಮಣಿಗಳನ್ನು ಎಣಿಸುವುದರಿಂದ ನಿಮ್ಮ…
ಬೆಂಗಳೂರು/ನವದೆಹಲಿ:- ಭಾರತದಲ್ಲಿ ಪಾಸ್‌ಪೋರ್ಟ್ ಮಾಡಿಸಲು ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಅದರಂತೆ, 2023ರ ಅಕ್ಟೋಬರ್ 1ರಿಂದ ಜನಿಸಿದವರು ಇನ್ಮುಂದೆ ಪಾಸ್‌ಪೋರ್ಟ್ ಪಡೆಯಲು ದಾಖಲೆಯಾಗಿ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. https://ainlivenews.com/we-do-not-paint-a-movie-dcm-political-talk-at-the-film-festival/ ಹೌದು, ಪಾಸ್ಪೋರ್ಟ್ ಗೆ ಸಂಬಂಧಿಸಿ ನಾಗರೀಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ಕೊಟ್ಟಿದೆ. ಶಾಲೆಯ ಪ್ರವೇಶಾತಿ, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ನಂಬರ್ ಎಲ್ಲದಕ್ಕೂ ಜನನ ಪ್ರಮಾಣ ಪತ್ರವೇ ಏಕೈಕ ಮಾನದಂಡ ಎನ್ನಲಾಗಿದೆ. ಅಕ್ಟೋಬರ್ 1, 2023ರ ಬಳಿಕ ಜನಿಸಿದ ದೇಶದ ಎಲ್ಲಾ ನಾಗರಿಕರಿಗೆ ಈ ಕಾನೂನು ಅನ್ವಯವಾಗುತ್ತದೆ. ಅಕ್ಟೋಬರ್ 1, 2023ರ ನಂತರ ಜನಿಸಿದ ಯಾರೇ ಆದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಲೇ ಬೇಕು. ಇದಕ್ಕೂ ಮೊದಲು ಅಂದ್ರೆ ಅಕ್ಟೋಬರ್ 1, 2023ಕ್ಕೂ ಮೊದಲು ಜನಿಸಿದವರಿಗೆ ಜನನ ಪ್ರಮಾಣ ಪತ್ರ ಬದಲು ಇತರೆ ದಾಖಲಾತಿಗಳನ್ನು ಸಲ್ಲಿಸಲು ಅನುಮತಿ ಇತ್ತು. ಪರ್ಯಾಯ ದಾಖಲೆಗಳು ಅಂದ್ರೆ…
ಬೆಂಗಳೂರು:- ನಾವು ಬಣ್ಣ ಹಾಕದೇ ಸಿನಿಮಾ ಮಾಡೋರು ಎಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ DCM ಡಿಕೆ ಶಿವಕುಮಾರ್ ರಾಜಕೀಯ ಮಾತುಗಳನ್ನಾಡಿದರು. https://ainlivenews.com/r-cb-who-lost-his-fourth-consecutive-match-in-bangalore/ ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡುತ್ತೀರಾ, ನಾವು ಬಣ್ಣ ಹಾಕದೇ ಸಿನಿಮಾ ಮಾಡುತ್ತೀವಿ. ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ ಇವೆಲ್ಲವೂ ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. 18% ಜನರಿಗೆ ಸಿನಿಮಾದಿಂದ ಉದ್ಯೋಗ ದೊರೆಯುತ್ತಿದೆ. ನಾನು ಎಕ್ಸಿಬಿಟರ್ ಆಗಿ ಜೀವನ ಪ್ರಾರಂಭ ಮಾಡಿದೆ. ಇಂದಿರಾ ಗಾಂಧಿ ಹೆಸರಿನಲ್ಲಿ ಥಿಯೇಟರ್ ಮಾಡಿದ್ದೆ. ಈಗ 23 ಸ್ಕ್ರೀನ್ ಇವೆ. ಆದರೆ ಒಂದು ದಿನವೂ ನಾನು ಅಲ್ಲಿ ಸಿನಿಮಾ ನೋಡಿಲ್ಲ. ನಮ್ಮ ರಜನಿಕಾಂತ್, ಜಯಲಲಿತಾ ಅವರು ಬೇರೆ ರಾಜ್ಯದಲ್ಲಿ ಹೆಸರು ಮಾಡಿದರು. ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಾ. ನಾವು ಬಣ್ಣ ಹಾಕದೇ ಸಿನಿಮಾ ಮಾಡ್ತೀವಿ ಅಷ್ಟೆ ಎಂದು ರಾಜಕೀಯದ…
ಮೊದಲೆರಡು ಪಂದ್ಯದಲ್ಲಿ ಆರ್ಭಟಿಸಿದ RCB, ನಂತರ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ. ಅದರಲ್ಲೂ ತವರು ಬೆಂಗಳೂರಿನಲ್ಲೇ ಸತತ ನಾಲ್ಕು ಪಂದ್ಯ ಸೋತು ಭಾರೀ ಮುಖಭಂಗ ಅನುಭವಿಸಬೇಕು. https://ainlivenews.com/sheep-sacrifice-in-a-muslim-country-people-appeal-to-bakrid-not-to-sacrifice/ ವಾಸ್ತವವಾಗಿ ಆರ್ಸಿಬಿ ತನ್ನ ತವರಿನಲ್ಲಿ ಆಡಿದ ನಾಲ್ಕಕ್ಕೇ ನಾಲ್ಕು ಪಂದ್ಯಗಳಲ್ಲಿ ಸೋಲಿಗೆ ಕೊರಳೊಡ್ಡಿತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವೈಫಲ್ಯ ಹಾಗೂ ಕಳಪೆ ನಾಯಕತ್ವ ಕಾರಣ ಎನ್ನಬಹುದು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 148 ರನ್ ಕಲೆಹಾಕಲಷ್ಟೇ ಶಕ್ತವಾಯಿತು. 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆದರೆ ಈ ಅಲ್ಪ ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭ ಕಳಪೆಯಾಗಿತ್ತು. ತಂಡದ ನಾಯಕಿ ಮೆಗ್ ಲ್ಯಾನಿಂಗ್ 12 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಅವರ ಔಟಾದ ನಂತರ, ಶಫಾಲಿ ವರ್ಮಾ…
ಬೆಂಗಳೂರು:- ಹೃದಯ ಸಂಬಂಧಿ ಬಳಲುತ್ತಿದ್ದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಪುತ್ರಿ ಕೃತಿಕಾ ಅವರು ನಿಧನರಾಗಿದ್ದಾರೆ. https://ainlivenews.com/gautami-jadhav-visits-dhanraj-achars-residence-whats-special/ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕೃತಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದರು. ಕೃತಿಕಾ ನಿಧನದಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಶಾಸಕ ರಾಜು ಕಾಗೆ ಅವರ ಸ್ವಗ್ರಾಮ ಉಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಬಾಬಾ ವಂಗಾ ಬಗ್ಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿರಬಹುದು. ಬಲ್ಗೇರಿಯಾ ದೇಶದ ಈ ಪ್ರಸಿದ್ಧ ಕಾಲಜ್ಞಾನಿಗೆ ಜಗತ್ತಿನಾದ್ಯಂತ ಹೆಸರಿದೆ. 1911ರಲ್ಲಿ ಹುಟ್ಟಿದ ಅವರು ಬದುಕಿದ್ದ ಸಮಯದಲ್ಲಿ ಎಷ್ಟೋ ವಿಷಯಗಳನ್ನು ತಿಳಿಸಿದ್ದಾರೆ. ಭವಿಷ್ಯದಲ್ಲಿ ಏನು ನಡೆಯಲಿವೆ ಅನ್ನೋ ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಇದರ ಪ್ರಕಾರ 2025ರಲ್ಲಿ ಭಾರತದಲ್ಲಿ ಭಾರಿ ವಿನಾಶ ಆಗುವ ಸಾಧ್ಯತೆ ಇದೆ ಅಂತ ಅವರು ಹೇಳಿದ್ದಾರೆ. https://ainlivenews.com/big-shock-for-motorists-vehicles-seized-if-petrol-or-diesel-is-used-new-rules-in-the-capital/ ಭವಿಷ್ಯ ನುಡಿಯುವಲ್ಲಿ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಹೇಳಿರುವ 2024ರಲ್ಲಿನ ಭವಿಷ್ಯವಾಣಿಯಲ್ಲಿ ಎರಡು ಸತ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಹಿಂದೆ ಬಾಬಾ ವಂಗಾ ಹೇಳಿರುವ ಎಷ್ಟೋ ಮಾತುಗಳು ನಿಜವಾಗಿದೆ ಎಂದು ಅನೇಕರು ಹೇಳಿದ್ದಾರೆ. ಇನ್ನು ಬಾಬಾ ವಂಗಾ 2025ರಲ್ಲಿ ಕೆಲವೊಂದು ಘಟನೆಗಳು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಭವಿಷ್ಯವಾಣಿಗಳು ಈಗಾಗಲೇ ನಿಜವಾಗುತ್ತಿದೆ. ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ ದಶಕಗಳ ಹಿಂದೆಯೇ ಅನೇಕ ಘಟನೆಗಳನ್ನು ಭವಿಷ್ಯ ನುಡಿದಿದ್ದರು. ಅವರ ಅನೇಕ ಹೇಳಿಕೆಗಳು ಇಲ್ಲಿಯವರೆಗೆ ಸತ್ಯವಾಗಿದೆ ಎಂದು…
ಬಕ್ರೀದ್ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಾನುವಾರುಗಳನ್ನು ಬಲಿ ನೀಡುವ ಮೂಲಕ ಮುಸ್ಲಿಮರು ಬಕ್ರೀದ್ ಆಚರಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೇಕೆ, ಕುರಿ, ಒಂಟೆ ಅಥವಾ ಹಸುಗಳನ್ನು ಬಲಿ ಕೊಡುತ್ತಾರೆ. ಬಕ್ರೀದ್ ಹಬ್ಬವನ್ನು ಬಕ್ರಿ ಈದ್, ಈದ್ ಕುರ್ಬಾನ್, ಈದ್ ಅಲ್-ಅಧಾ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ. https://ainlivenews.com/big-shock-for-motorists-vehicles-seized-if-petrol-or-diesel-is-used-new-rules-in-the-capital/ ಕುರಿಗಳನ್ನು ಕಡಿಯುವ ವಿಶೇಷ ಬಕ್ರೀದ್ ಹಬ್ಬವು ಮುಸ್ಲಿಮರಿಗೆ ವಿಶೇಷ ಹಬ್ಬ. ಆದರೆ ಮುಸ್ಲಿಂ ರಾಷ್ಟ್ರದಲ್ಲೇ ಕುರಿ ಬಲಿ ನಿಷೇಧ ಮಾಡಲಾಗಿದೆ ಜೂನ್ ತಿಂಗಳಲ್ಲಿ ಬರುವ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ ಅಥವಾ ಮೇಕೆಯನ್ನು ಬಲಿ ಕೊಡುವ ಮೂಲಕ ಹಜ್ಜ್ ಯಾತ್ರೆಯನ್ನು ನೆನಪಿಸಿಕೊಳ್ಳುತ್ತಾರೆ. ಬಲಿ ಕೊಟ್ಟ ಮಾಂಸವನ್ನು ಮನೆಯಲ್ಲೂ ಬಳಸುತ್ತಾರೆ, ಬಡವರಿಗೂ ಹಂಚುತ್ತಾರೆ. ಆದರೆ ಈಗ ಸದ್ಯ ಮೊರಾಕೊದಲ್ಲಿ ಜನರ ಖರೀದಿ ಶಕ್ತಿ ಕಡಿಮೆಯಾಗಿದೆ. ಇತ್ತೀಚಿನ…
ಚಂದನವನದ ಕ್ಯೂಟ್ ನಟಿ ಅಂತಲೇ ಫೇಮಸ್ ಆಗಿರೋ ಅಮೂಲ್ಯ ಅವರು, ತಮ್ಮ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಶನಿವಾರ ಮೂರನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. https://ainlivenews.com/big-shock-for-motorists-vehicles-seized-if-petrol-or-diesel-is-used-new-rules-in-the-capital/ ಅಥರ್ವ್ ಮತ್ತು ಆಧವ್ ನಿನ್ನೆ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಇದೇ ಖುಷಿಯಲ್ಲಿ ನಟಿ ಅಮೂಲ್ಯ ದಂಪತಿ ಮುದ್ದಾದ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಕ್ಯೂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳ ಜೊತೆಗೆ ನಟಿ ಅಮೂಲ್ಯ Happy birthday ಅಥರ್ವ್ ಮತ್ತು ಆಧವ್.. ನಮ್ಮ ಸರ್ವಸ್ವ ಎಂದು ಬರೆದುಕೊಂಡಿದ್ದಾರೆ. ಇನ್ನೂ, ಶೇರ್ ಮಾಡಿಕೊಂಡ ಫೋಟೋಗಳಲ್ಲಿ ದಂಪತಿ ಹಾಗೂ ಮುದ್ದಾದ ಇಬ್ಬರು ಮಕ್ಕಳು ಒಂದೇ ರೀತಿಯ ಬಟ್ಟೆಯನ್ನು ಧರಿಸಿದ್ದಾರೆ.