ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇವಲ 30-35 ವರ್ಷ ದಾಟುವಷ್ಟರಲ್ಲೇ ಬಿಳಿ ಕೂದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಿಳಿ ಕೂದಲುಗಳನ್ನು ಮರೆಮಾಚಲು ಬಹುತೇಕ ಮಂದಿ ಹೇರ್ ಕಲರ್ ಮತ್ತು ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳ ದೀರ್ಘಕಾಲ ಬಳಕೆ ಕೂದಲಿಗೆ ಹಾನಿಯುಂಟು ಮಾಡುತ್ತದೆ. https://ainlivenews.com/distribution-of-government-kits-to-unorganized-sector-workers/ ಧೂಳು, ಮಾಲಿನ್ಯ, ಬದಲಾದ ವಾತಾವರಣದಿಂದಾಗಿ ಇದಲ್ಲದೆ, ಒತ್ತಡ ಭರಿತ ಜೀವನಶೈಲಿಯಿಂದಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯ ವಿಷಯ. ಆದರೆ, ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಹೇರ್ ಪ್ರಾಡಕ್ಟ್ ಬೇಕಿಲ್ಲ. ನಿಮ್ಮ ಮನೆಯಲ್ಲಿರುವ ವಸ್ತುಗಳೇ ಸಾಕು. ದುಬಾರಿ ಪ್ರಾಡಕ್ಟ್ ಬದಲಿಗೆ ನೀವು ಕಸ ಎಂದು ಬಿಸಾಡುವ ಈರುಳ್ಳಿ ಸಿಪ್ಪೆ ಸಹಾಯದಿಂದ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದು. ಈರುಳ್ಳಿ ಸಿಪ್ಪೆ, ಬ್ಯ್ಲಾಕ್ ಟೀ ಸಹಾಯದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಬ್ಲಾಕ್ ಟೀ ಸೊಪ್ಪನ್ನು ಹಾಕಿ ಇದರಲ್ಲಿ ಈರುಳ್ಳಿ…
Author: AIN Author
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ನವವಿವಾಹಿತ ಮಹಿಳೆ ನೇಣಿಗೆ ಶರಣಾದ ಘಟನೆ ಜರುಗಿದೆ. https://ainlivenews.com/distribution-of-government-kits-to-unorganized-sector-workers/ 23 ವರ್ಷದ ಪೂಜಾಶ್ರೀ ನೇಣಿಗೆ ಶರಣಾದ ಮಹಿಳೆ. ಪೂಜಾಶ್ರೀ ಅವರು, ಬೆಳ್ತಂಗಡಿಯ ಪಡಂಗಡಿ ಬರಾಯ ನಿವಾಸಿ ಪ್ರಕಾಶ್ ಎಂಬವರನ್ನು 10 ತಿಂಗಳ ಹಿಂದೆ ವಿವಾಹವಾಗಿದ್ದರು. ಕೆಲಸ ಅರಸುವ ಸಲುವಾಗಿ ಕಳೆದ ಎರಡು ತಿಂಗಳ ಹಿಂದೆ ಪೂಜಾಶ್ರೀಯನ್ನು ಪತಿ ಪ್ರಕಾಶ್ ಬೆಂಗಳೂರಿನಲ್ಲಿರೋ ತನ್ನ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದರು. ಸಂಬಂಧಿಕರ ಮನೆಯಲ್ಲೇ ಇದ್ದ ಪೂಜಾಶ್ರೀ ಅಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾಶ್ರೀ ಆತ್ಮಹತ್ಯೆ ಬಗ್ಗೆ ಆಕೆಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಜಾಲಹಳ್ಳಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನದಲ್ಲಿ ಅನೇಕ ಜನರಿಗೆ, ಹಳೆಯ ಸಾಲ ತೀರಿಸೋಕೆ ಮತ್ತೊಂದು ಸಾಲ ಮಾಡ್ಕೋಬೇಕಾ ಅನ್ನೋ ಪ್ರಶ್ನೆ ಬರುತ್ತೆ. ಈ ನಿರ್ಧಾರ ತಗೊಳ್ಳೋ ಮುಂಚೆ, ಸಾಲದ ಒಳಿತು-ಕೆಡುಕುಗಳ ಬಗ್ಗೆ, ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಅನ್ನೋದರ ಬಗ್ಗೆ, ಹೊಸ ಮತ್ತು ಹಳೆ ಸಾಲದ ಬಡ್ಡಿ ಎಷ್ಟಿದೆ ಅನ್ನೋದನ್ನೆಲ್ಲಾ ಚೆನ್ನಾಗಿ ಯೋಚಿಸಿ ಮುಂದುವರೆಯೋದು ಮುಖ್ಯ. https://ainlivenews.com/jigajinagi-was-the-bjp-mp-who-batted-for-aicc-president-mallikarjuna-kharge/ ಇನ್ನೂ ನೀವು ತುಂಬಾ ಸಾಲದಲ್ಲಿ ಮುಳುಗಿ ಅದನ್ನು ತೀರಿಸಲು ಕಷ್ಟಪಡುತ್ತಿದ್ದೀರಾ? ಒಂದೇ ಸಮಯದಲ್ಲಿ ಹಲವು ಸಾಲಗಳನ್ನು ನಿರ್ವಹಿಸುವುದು ತಲೆನೋವು ತರಬಹುದು. ಕ್ರೆಡಿಟ್ ಕಾರ್ಡ್‌ಗಳ ಹೆಚ್ಚಿನ ಬಡ್ಡಿ ದರಗಳು ಸೇರಿದಂತೆ ಹಲವು ರೀತಿಯ ಸಾಲಗಳನ್ನು ನಿಭಾಯಿಸುವುದು ಇನ್ನಷ್ಟು ಕಷ್ಟ ಅಂತಹ ಸಂದರ್ಭಗಳಲ್ಲಿ, ವೈಯಕ್ತಿಕ ಸಾಲವು ಒಂದು ಉತ್ತಮ ಪರಿಹಾರವಾಗಬಹುದು. ಮರುಪಾವತಿ: ನಿಮ್ಮ ಎಲ್ಲಾ ಸಾಲಗಳನ್ನು ಒಂದೇ ವೈಯಕ್ತಿಕ ಸಾಲಕ್ಕೆ ವರ್ಗಾಯಿಸುವ ಮೂಲಕ, ನೀವು ಬೇರೆ ಬೇರೆ ಪಾವತಿಗಳ ಒತ್ತಡವನ್ನು ಕಡಿಮೆ ಮಾಡಬಹುದು. ನೀವು ಪ್ರತಿ ತಿಂಗಳು ಕೇವಲ ಒಂದು ಪಾವತಿಯನ್ನು ಮಾಡಬೇಕಾಗುತ್ತದೆ ಮತ್ತು ಬೇರೆ ಬೇರೆ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.…
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಇಂದು ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಹೇಗಾದ್ರೂ ಮಾಡಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಹಳೆಯ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಮುಂದಾಗಿದೆ. https://ainlivenews.com/for-us-the-decision-of-the-high-command-is-final-rather-than-moilys-siddaramaiah/ ಈ ಹಿಂದೆ ಹಲವು ಬಾರಿ ಐಸಿಸಿ ಮೆಗಾ ಟೂರ್ನಿ ಫೈನಲ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಮುಖಾಮುಖಿ ಆಗಿವೆ. ಕಳೆದ ಎರಡು ಸಲ ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು ಸೆಣಸಾಡಿದ್ದವು. ಆ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋತಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 469 ರನ್ ಕಲೆ ಹಾಕಿತು. ಇದಾದ ಬಳಿಕ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 296 ರನ್ಗಳಿಗೆ ಆಲೌಟ್ ಆಗಿತ್ತು. 2ನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 2ನೇ…
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯಾ? ಹಾಗಿದ್ರೆ ಅರ್ಹರಿಗೆ ಇಲ್ಲೊಂದು ಸಿಹಿ ಸುದ್ದಿ ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬ್ಯಾಂಕ್ ಆಫ್ ಬರೋಡಾ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. https://ainlivenews.com/distribution-of-government-kits-to-unorganized-sector-workers/ ಬ್ಯಾಂಕ್ ಆಫ್ ಬರೋಡಾ, ಪ್ರಸ್ತುತ 400 ತರಬೇತಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆ ಮಾರ್ಚ್ 1 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 15 ರವರೆಗೆ ಗಡುವು ನಿಗದಿಪಡಿಸಲಾಗಿದೆ. ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಮಾನ ಅರ್ಹತೆಯನ್ನು ಹೊಂದಿರಬೇಕು. ಪದವಿಯನ್ನು ಏಪ್ರಿಲ್ 1, 2021 ಮತ್ತು ಜನವರಿ 1, 2025 ರ ನಡುವೆ ಪಡೆದಿರಬೇಕು. ವಯೋಮಿತಿ: ಅರ್ಜಿದಾರರು ಜನವರಿ 1, 2025 ರಂತೆ 20 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅರ್ಹ ಅಭ್ಯರ್ಥಿಗಳು…
ಸೂರ್ಯೋದಯ – 6:35 ಬೆ. ಸೂರ್ಯಾಸ್ತ – 6:19 ಸಂಜೆ. ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಪಾಲ್ಗುಣ ಮಾಸ, ತಿಥಿ – ಪಂಚಮಿ ನಕ್ಷತ್ರ – ಭರಣಿ ಯೋಗ – ಐಂದ್ರ ಕರಣ – ಬಾಲವ ರಾಹು ಕಾಲ – 03:00 ದಿಂದ 04:30 ವರೆಗೆ ಯಮಗಂಡ – 09:00 ದಿಂದ 10:30 ವರೆಗೆ ಗುಳಿಕ ಕಾಲ – 12:00 ದಿಂದ 01:30 ವರೆಗೆ ಬ್ರಹ್ಮ ಮುಹೂರ್ತ – 4:59 ಬೆ.ದಿಂದ 5:47 ಬೆ.ವರೆಗೆ ಅಮೃತ ಕಾಲ – 10:10 ರಾ.ದಿಂದ 11:39 ರಾ .ವರೆಗೆ ಅಭಿಜಿತ್ ಮುಹುರ್ತ – 12:04 ಮ.ದಿಂದ 12:51 ಮ.ವರೆಗೆ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ಕಿರು ಪ್ರವಾಸ ಸಾಧ್ಯತೆ, ಸಣ್ಣ ಉದ್ಯಮ ಪ್ರಾರಂಭ ಯೋಜನೆ ರೂಪಿಸುವಿರಿ,ರಾಶಿಯವರಿಗೆ ನೂರಾರು ಜನರಿಗೆ ಕೆಲಸದ ಆಶ್ರಯ ನೀಡುವ ಸಾಮರ್ಥ್ಯ ಇದೆ,ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ…
ಬೆಂಗಳೂರು:- ನಮಗೆ ಮೊಯ್ಲಿಗಿಂತ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. https://ainlivenews.com/there-is-nothing-wrong-in-giving-a-statement-to-the-media-to-get-b-form-priyanka-kharge/ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಬೇರೆ ಅವರು ಮಾತನಾಡಿದರೆ ನಾನೇನು ಮಾತನಾಡಲಿ. ನಾನು ಹೈಕಮಾಂಡ್ ನಿರ್ದೇಶನದಂತೆ ಹೋಗುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದೇನೆ. 30 ಸಾವಿರ ಕೋಟಿ ರೂ. ಬಾಕಿ ಇದೆ. 15 ಸಾವಿರ ಕೋಟಿ ರೂ. ಕೊಡಬೇಕು ಎಂದು ಹೇಳಿದ್ದಾರೆ. ಆದರೆ ಅಷ್ಟೆಲ್ಲಾ ಕೊಡಲು ಆಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕೊಡುತ್ತೇವೆ ಎಂದರು.
ಬೆಂಗಳೂರು:- ಬಿ ಫಾರ್ಮ್ ಪಡೆಯಲು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ರೆ ತಪ್ಪೇನಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. https://ainlivenews.com/what-is-the-most-common-reason-why-smartphones-explode-follow-these-tips/ ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಯಾರಿಗಾದರೂ ಸಮಸ್ಯೆಗಳಿದ್ದರೆ ಅವರು ನೇರವಾಗಿ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಮಾತಾಡಲಿ, ಹೈಕಮಾಂಡ್ ಎಲ್ಲರಿಗೂ ಜವಾಬ್ದಾರಿಗಳನ್ನು ನೀಡಿದೆ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ ಮತ್ತು ಡಿಕೆ ಶಿವಕುಮಾರ್ ಡಿಸಿಎಂ; ಸದ್ಯಕ್ಕೆ ಕುರ್ಚಿಗಳು ಖಾಲಿ ಇಲ್ಲ, ಬಿ ಫಾರ್ಮ್ ಪಡೆದುಕೊಳ್ಳುವ ಉದ್ದೇಶಕ್ಕಾಗಿ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ, ಹೈಕಮಾಂಡ್ ನೀಡಿರುವ ಜವಾಬ್ದಾರಿಗಳನ್ನು ಎಲ್ಲರೂ ನಿಭಾಯಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರತಿದಿನ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವ ಸುದ್ದಿಗಳನ್ನು ಕೇಳಿ ಸ್ಮಾರ್ಟ್‌ಫೋನ್‌ಗಳನ್ನು ಜೋಬಿನಲ್ಲಿ ಇಟ್ಟುಕೊಳ್ಳವುದೇ ಬಹುದೊಡ್ಡ ಹೆದರಿಕೆಯಾಗಿದೆ. ಯಾವ ಕ್ಷಣದಲ್ಲಿ ನನ್ನ ಮೊಬೈಲ್ ಕೂಡ ಬ್ಲಾಸ್ಟ್ ಆಗಿಬಿಡುತ್ತದೆಯೂ, ನನ್ನ ಫೊನ್ ಬ್ಲಾಸ್ಟ್ ಆದರೆ ಏನು ಕಥೆ? ಬ್ಲಾಸ್ಟ್ ಆಗದಂತೆ ಹೇಗೆ ತಡೆಯುವುದು? ಎಂಬ ಭಯ ಎಲ್ಲರಲ್ಲಿಯೂ ಮೂಡುತ್ತಿವೆ https://ainlivenews.com/dikeshis-statement-is-the-purpose-of-the-statement/ ಫೋನ್‌ಗಳು ಸ್ಫೋಟಗೊಳ್ಳುವುದು ಹೊಸದೇನಲ್ಲ. ಹಿಂದೆಯೂ ಬಹಳಷ್ಟು ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗಿದೆ. ಇಂತಹದ್ದೇ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಬಿಹಾರದ ಭಾಗಲ್‌ಪುರ ನಿವಾಸಿಯೊಬ್ಬರಿಗೆ ಸೇರಿದ ಶಿಯೋಮಿ 11 Lite NE ಸ್ಮಾರ್ಟ್‌ಫೋನ್ ಸ್ಫೋಟಗೊಂಡಿತ್ತು. ಫೋನ್ ಉರಿಯುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಮತ್ತು ಫೋಟೋಗಳನ್ನು ನೋಡಿದ ನಂತರ ಫೋನ್ ಬಳಕೆದಾರರಲ್ಲಿ ಆತಂಕ ಶುರುವಾಗಿದೆ. ಫೋನ್‌ಗಳು ಏಕೆ ಸ್ಫೋಟಗೊಳ್ಳುತ್ತವೆ: ಸ್ಮಾರ್ಟ್ಫೋನ್ನಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಗೆ ಹಾನಿಯಾಗುವುದರಿಂದ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಸ್ಫೋಟಗೊಳ್ಳುತ್ತವೆ. ಫೋನ್ ಸ್ಫೋಬ್ಲಾಸ್ಟ್ ಆಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಅತಿಯಾದ ಹೀಟ್. ಫೋನ್ ಅತಿಯಾಗಿ ಹೀಟ್ ಆದಾಗ…
ಬೆಂಗಳೂರು:- ಡಿಕೆಶಿ ಹೇಳಿಕೆಯ ಉದ್ದೇಶವೇ ಬೇರೆ, ಸುಮ್ಮನೆ ದೊಡ್ಡದು ಮಾಡ್ತಿದ್ದಾರೆ ಎಂದು ನಟ ಸಾಧು ಕೋಕಿಲ ಹೇಳಿದ್ದಾರೆ. https://ainlivenews.com/bird-flu-scare-in-the-state-precautionary-meeting-in-bagalkot/ ಕಲಾವಿದರಿಗೆ ಡಿಕೆಶಿ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಸಾಧು ಕೋಕಿಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡಿಕೆಶಿ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ, ಡಿಸಿಎಂ ಸಿನಿಮಾದವರನ್ನು ತಮ್ಮ ಮನೆಯವರು ಅಂದುಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ದೂರದವರಲ್ಲ, ತುಂಬಾ ಹತ್ತಿರದವರು. ಸಿನಿಮಾದವರು ಅವರಿಗೆ ಆತ್ಮೀಯರು. ಅವರು ಹೇಳಿರುವುದು ದೊಡ್ಡ ವಿಷಯ ಆಗಲ್ಲ, ದೊಡ್ಡ ವಿಷಯ ಮಾಡುತ್ತಿದ್ದಾರೆ ಅಷ್ಟೇ. ಅವರು ಹೇಳಿರುವುದರಲ್ಲಿ ಹಾಗೂ ಕೇಳಿರುವುದರಲ್ಲಿ ತಪ್ಪಿಲ್ಲ. ನೀರಿನ ವಿಚಾರದಲ್ಲಿ ಎಲ್ಲರೂ ಬರಬೇಕಿತ್ತು ಅನ್ನೋದು ಅವರ ಉದ್ದೇಶ, ಚಲನಚಿತ್ರೋತ್ಸವಕ್ಕೂ ಕೂಡ ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶವಾಗಿತ್ತು ಎಂದರು. ಇನ್ನೂ ಇದೇ ವೇಳೆ ಬೆಂಗಳೂರು ಫಿಲ್ಮ್‌ಫೆಸ್ಟ್‌ಗೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಿದ ಆರೋಪ ವಿಚಾರವಾಗಿ, ಕಲಾವಿದರಿಗೆ ಕೊನೆಯ ಕ್ಷಣದಲ್ಲಿ ಆಮಂತ್ರಣ ಹೋಗಿಲ್ಲ. ಚಲನಚಿತ್ರೋತ್ಸವ ಜನವರಿ 6ಕ್ಕೆ ನಿರ್ಧಾರವಾಗಿದೆ ಎಂದರು.