Author: AIN Author

ಹುಬ್ಬಳ್ಳಿ’: ನೂರಾನಿ ಮಾರ್ಕೆಟ್‌ನ ಪ್ರಿನ್ಸ್‌ ಬಾರ್‌ ಬಳಿ ನಡೆದುಕೊಂಡು ಹೋಗುತ್ತಿದ್ದ ಕಮರಿಪೇಟೆಯ ಫಯಾಜ್‌ ಉಂಟವಾಲೆ ಅವರಿಗೆ ನಾಲ್ವರ ಗುಂಪು ಹಲ್ಲೆ ನಡೆಸಿರುವ ಆರೋಪದ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://ainlivenews.com/fear-of-channapatna-by-election-defeat-dcm-dikeshi-meets-cpy/ ಫಯಾಜ್‌ ನಡೆದುಕೊಂಡು ಹೋಗುತ್ತಿದ್ದಾಗ ಸೆಟ್ಲಮೆಂಟ್‌ನ ವಿಜಯ ಬಿಜವಾಡ ಸೇರಿದಂತೆ ನಾಲ್ವರು ಆರೋಪಿಗಳು, ‘ಯಾಕ ಗುರಾಯಿಸಿ ನೋಡಾತಿಲೇ’ ಎಂದು ಒಮ್ಮಿಂದೊಮ್ಮೆಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More

ಬೆಂಗಳೂರು:- ಉಪ ಮುಖ್ಯಮಂತ್ರಿ ಡಿಸಿಎಂ ಡಿಕೆಶಿ ಅವ್ರನ್ನು ಸಿಪಿ ಯೋಗೇಶ್ವರ್ ಭೇಟಿಯಾಗಿದ್ದಾರೆ. https://ainlivenews.com/leopard-attack-four-sheep-died-in-mandya-people-were-devastated/ ಶಿವಾನಂದಸರ್ಕಲ್‌ಬಳಿಯ ಡಿಸಿಎಂ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ್ದು, ಈ ವೇಳೆ ಕಾಂಗ್ರೆಸ್,ಬಿಜೆಪಿ ಶಾಸಕರು ಉಪಸ್ಥಿತರಿದ್ದರು. ಶಾಸಕ ಜಯಚಂದ್ರ, ಎಸ್.ಟಿ.ಸೋಮಶೇಖರ್, ಅನೇಕಲ್ ಶಿವಣ್ಣ,ನೆಲಮಂಗಲ ಶ್ರೀನಿವಾಸ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಪರಿಷತ್ ಸದಸ್ಯ ಎಸ್.ರವಿ ಉಪಸ್ಥಿತರಿದ್ದರು. ಚನ್ನಪಟ್ಟಣ ಬೈ ಎಲೆಕ್ಷನ್ ಬಗ್ಗೆ ಗಹನ ಚರ್ಚೆ ಮಾಡಿದ್ದು, ಸಿಪಿವೈ ಸ್ಟೇಟ್ ಮೆಂಟ್ ಬಗ್ಗೆ ಚರ್ಚೆ ನಡೆದಿದೆ.

Read More

ಮಂಡ್ಯ:- ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಜರುಗಿದೆ. https://ainlivenews.com/i-am-not-cheap-enough-to-be-sold-for-50-100-crores-i-am-expensive/ ಜಿಲ್ಲೆಯಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. ಚಿರತೆ ದಾಳಿಯಿಂದ ಅಗಸನಪುರ ನಿವಾಸಿ ರತ್ನಮ್ಮ ಎಂಬುವವರಿಗೆ ಸೇರಿದ್ದ ನಾಲ್ಕು ಕುರಿಗಳು ಸಾವನ್ನಪ್ಪಿವೆ. ಜಿಲ್ಲೆಯ ಹಲವೆಡೆ ಚಿರತೆ ಹಾವಳಿಗೆ ಕಂಗಾಲಾಗಿರುವ ರೈತರು, ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ

Read More

ಕಾರವಾರ :- 50, 100 ಕೋಟಿಗೆಲ್ಲ ಸೇಲ್ ಆಗುವಷ್ಟು ಚೀಪ್ ನಾನಲ್ಲ, ನಾನು ದುಬಾರಿ ಎಂದು ಸಚಿವ ಮಂಕಾಳ್ ವೈದ್ಯ ಹೇಳಿದ್ದಾರೆ. https://ainlivenews.com/heavy-rain-in-these-districts-of-the-state-for-the-next-2-weeks/ ಮುರುಡೇಶ್ವರದಲ್ಲಿ ಮಾತನಾಡಿದ ಅವರು, 2,500 ಕೋಟಿಗೆ ಸಿಎಂ ಹುದ್ದೆ, 100 ಕೋಟಿಗೆ ಶಾಸಕ ಸ್ಥಾನ ಬಿಜೆಪಿಯ ಸಂಪ್ರದಾಯ. ಈ ಮಾತಿನ ಹಿಂದೆ ಬಿಜೆಪಿಯ ನಾಯಕರೇ ಹೇಳಿದ್ರು. ಹಾಗಾಗಿ, ದುಡ್ಡಿನಲ್ಲಿ ಮತ್ತೆ ಸರ್ಕಾರ ಮಾಡುವ ಕನಸು ಕಾಣುತ್ತಿದ್ದಾರೆ. ನನಗಂತೂ ಇದುವರೆಗೂ ಬಿಜೆಪಿ ಯಾವ ನಾಯಕರೂ ಸಂಪರ್ಕ ಮಾಡಿಲ್ಲ ಎಂದರು. ಕೋವಿಡ್ ಹಗರಣ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಅಥವಾ ದೇಶದಲ್ಲಿ ವಸ್ತುವನ್ನ ಖರೀದಿ ಮಾಡಬೇಕಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರದಲ್ಲಿ ವಿದೇಶದಿಂದ ವಸ್ತು ಖರೀದಿ ಮಾಡಿದ್ದಾರೆ. ಇಲ್ಲಿ ರೇಟ್ 350 ರೂ. ಇಂಪೋರ್ಟ್ ರೇಟ್, 350 ರೂ. ಸ್ವದೇಶಿ ಎಂದು ಬಿಜೆಪಿಗರು ದೊಡ್ಡದಾಗಿ ಹೇಳುತ್ತಾರೆ. ಇದಕ್ಕಿಂತ ಪ್ರೂಫ್ ಏನು ಬೇಕು. ಈ ಹಗರಣದ ನೇರ ಕೈವಾಡ ಅಂದಿನ ಬಿಜೆಪಿ ಸರ್ಕಾರದ ಸಿಎಂ ಹಾಗೂ ಸಚಿವರಾಗಿದ್ದ ಶ್ರೀರಾಮುಲು, ಅದನ್ನು ಮುಚ್ಚಿಹಾಕಲು…

Read More

ಬೆಂಗಳೂರು:- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ವಾರ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/if-you-want-space-i-will-give-it-to-you-create-employment-first-dk-challenge-to-modi/ ರಾಜ್ಯ ಹವಾಮಾನ ಇಲಾಖೆಯ ಪ್ರಕಾರ, ಇಂದಿನಿಂದ ಡಿಸೆಂಬರ್ 03ರ ವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಕೊಟ್ಟಿದೆ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿತ್ರದುರ್ಗ, ವಿಜಯನಗರ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೆಲವೊಂದು ಕಡೆಗಳಲ್ಲಿ ತುಂತುರು ಮಳೆ ಸುರಿದಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣವಿದೆ.

Read More

ಬೆಂಗಳೂರು:- ಜಾಗ ಬೇಕಾದ್ರೆ ನಾನೇ ಕೊಡಿಸ್ತೀನಿ, ಮೊದಲು ಉದ್ಯೋಗ ಸೃಷ್ಟಿಸಲಿ ಎಂದು ಮೋದಿಗೆ ಡಿಕೆಶಿ ಸವಾಲ್ ಹಾಕಿದ್ದಾರೆ. https://ainlivenews.com/power-outage-in-these-areas-of-bangalore-today-2/ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ವಿಷಯ ಇಲ್ಲದೇ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿವೆ. ಮೋದಿ ಅವರು ಮೊದಲು ಕೊಟ್ಟಿರುವ ಭರವಸೆ ಈಡೇರಿಸುವ ಕೆಲಸ ಮಾಡಲಿ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡಲಿ ರಾಜ್ಯದಲ್ಲಿ ಜಾಗ ಬೇಕಿದ್ರೆ ಹೇಳಲಿ, ನಾನೇ ನಿಂತು ಜಾಗ ಕೊಡಿಸುತ್ತೇನೆ ಉದ್ಯೋಗ ನೀಡಲಿ ಎಂದರು. ಬಿಜೆಪಿಗೆ, ಕುಮಾರಸ್ವಾಮಿಗೆ ನಮ್ಮ ಸರ್ಕಾರದ ಬಗ್ಗೆ ಹೇಳೋದಕ್ಕೆ ಏನೂ ಇಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ರು. ಯಾವ ಬಡವರಿಗೂ ಸಹಾಯ ಮಾಡಲಿಲ್ಲ. ಒಂದು ಕಾರ್ಯಕ್ರಮ ಕೋಡೋದಕ್ಕೆ ಆಗಲಿಲ್ಲ ಎಂದು ತಿವಿದರು

Read More

:- ಬೆಂಗಳೂರಿನ ಹಲವು ಏರಿಯಾದಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/it-is-true-that-there-was-corruption-in-bjp-there-is-doubt-in-the-loka-investigation/ ನಗರದ ಬ್ರೆಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿಐ ಬ್ಯಾಂಕ್, ರಾಯಭಾರ ಕಚೇರಿ ಎತ್ತರ, ಅಭರಣ ಆಭರಣಗಳು, ಹರ್ಬನ್ ಲೈಫ್, RMZ, ಅಶೋಕ್ ನಗರ, ಗರುಡಮಾಲ್, ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್‌ನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈ.ಜಿ.ಪಾಳ್ಯ, ಕೆಎಸ್‌ಆರ್‌ಪಿ, ಐಟಿಸಿ ಹೋಟೆಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಗ್ಲೋಬಲ್ ಮಾಲ್ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ

Read More

ಕಲಬುರಗಿ:-ಬಿಜೆಪಿಯಲ್ಲಿ ಭ್ರಷ್ಟಾಚಾರ ಇದ್ದದ್ದು ನಿಜ, “ಲೋಕಾ” ತನಿಖೆಯಲ್ಲಿ ಅನುಮಾನ ಇದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದ್ದಾರೆ. https://ainlivenews.com/extreme-cold-bengaluru-people-are-cold/ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದದ 40 ಪರ್ಸೆಂಟ್ ಆರೋಪ ಸುಳ್ಳು ಎನ್ನೋ ಲೋಕಾ ವರದಿ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಮಾಜಿ ಅಧ್ಯಕ್ಷ ದಿ‌.ಕೆಂಪಣ್ಣ ಮಾಡಿದ್ದ ಆರೋಪ ಸತ್ಯ. ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ವಿಜಯೇಂದ್ರ ನಮ್ಮ ಸಂಘದ ಹೆಸರು ತೆಗೆದುಕೊಂಡು ಕೆಂಪಣ್ಣರವ ಹೆಸರು ತೆಗೆದುದಕೊಂಡು ಲಘವಾಗಿ ಮಾತನಾಡಿದ್ದಾರೆ. ಅಂಬಿಕಾಪತಿ ದೂರು ನಮ್ಮ ಅಸೋಸಿಯೇಷನ್ ನಿಂದ ಹೋಗಿಲ್ಲ. ಅಂಬಿಕಾಪತಿ ನೀಡಿದ ದೂರಿಗೂ ನಮ್ಮ ಸಂಘಕ್ಕೂ ಸಂಬಂಧವಿಲ್ಲ. ಒಂದೇ ಒಂದು ಪತ್ರ ಲೋಕಾಯುಕ್ತಕ್ಕೆ ನೀಡಿಲ್ಲ. ಅದರ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಎಂದರು. ಇನ್ನೂ ನ್ಯಾ.ನಾಗಮೋಹನ ದಾಸ್ ಕಮಿಟಿಗೆ ನೀಡಿದ್ದೇವೆ. ನ್ಯಾಯಯುತವಾಗಿ ತನೀಖೆಯಾಗಬೇಕು‌. ಇಲ್ಲಾಂದ್ರೆ ನಾವು ನ್ಯಾಯಲಯದ…

Read More

ಬೆಂಗಳೂರು:- ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿ ಚಳಿ ಆರಂಭವಾಗಿದೆ. ಈಗಾಗಲೇ ಉತ್ತರ ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿ ಚಳಿ ಆರಂಭವಾಗಿದೆ. https://ainlivenews.com/dont-believe-fake-news-bpl-apl-is-not-canceled-any-card-k-h-muniappa/ ಈ ಬಾರಿ ಸತತವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹವಾಮಾನ ಪರಿಸ್ಥಿತಿ ಬದಲಾಗಿದ್ದು, ಈ ಬಾರಿ ಅಧಿಕ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಚಳಿಗಾಲ ಆರಂಭಕ್ಕೂ ಮುನ್ನವೇ ಚಳಿ ಹೆಚ್ಚಾಗಿದ್ದು, ವಾತಾವರಣ ಬದಲಾವಣೆಯಿಂದ ನಮ್ ಬೆಂಗಳೂರು ಮಂದಿ ಈಗಾಗಲೇ ಸ್ವೆಟರ್, ಸ್ಕಾರ್ಫ್, ಮಪ್ಲರ್, ಜರ್ಕಿನ್ ಹಾಗೂ ದೊಡ್ಡ ದೊಡ್ಡ ಕಂಬಳಿಯ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಮಾರ್ಕೆಟ್‌ಗೆ ಸ್ವೇಟರ್ ಗಳು ಲಗ್ಗೆ ಇಟ್ಟಿವೆ. ಈ ಬಾರಿ ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8ಗಂಟೆಯವರೆಗೂ ಶೀತದ ವಾತವರಣ ಇರುತ್ತಿರುವುದಿರಿಂದ ಶೀತ -ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉಸಿರಾಟ, ಎಲುಬು ಕೀಲು ನೋವು ಇರುವವರು ಆದಷ್ಟು ಬೆಚ್ಚಗೆ ಇರುವಂತೆ ಮತ್ತು ಚಳಿಗಾಲ ಮುಗಿಯೋ ವರೆಗೆ ಉಗುರು ಬೆಚ್ಚಗಿನ ನೀರು ಬಿಸಿ ಆಹಾರ ಸೇವಿಸುವಂತೆ ಹವಾಮಾನ ಇಲಾಖೆ…

Read More

ಬೆಂಗಳೂರು:- ಇತ್ತೀಚೆಗೆ ಅಬ್ಬಿಸಿರುವ ಸುಳ್ಳು ಸುದ್ದಿ ನಂಬಬೇಡಿ. ಬಿಪಿಎಲ್, ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. https://ainlivenews.com/mobile-lovers-5g-phone-available-at-cheap-rate-watch-the-news-without-fail/ ಈ ಸಂಬಂಧ ಮಾತನಾಡಿದ ಅವರು, ಬಿಪಿಎಲ್ ಹಾಗೂ ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದರು. ಈ ವೇಳೆ, 20-25% ಅರ್ಹರಲ್ಲದವರು ಬಿಪಿಎಲ್ ಗೆ ಸೇರಿಕೊಂಡಿದ್ದಾರೆ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವಾ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್‌ನವರು ಯಾರೂ ಕೂಡ ಭಯ ಪಡಬೇಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ನಿಜವಾದ ಬಿಪಿಎಲ್‌ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ. ಅಕಸ್ಮಾತ್ ಅರ್ಹರಿದ್ದು…

Read More