ವಾಷಿಂಗ್ಟನ್:- ಚೀನಾ, ಮೆಕ್ಸಿಕೋ, ಕೆನಡಾ ಬೆನ್ನಲ್ಲೇ ಏ. 2ರಿಂದ ಭಾರತದ ಮೇಲೂ ಪ್ರತಿ ಸುಂಕ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. https://ainlivenews.com/milana-is-the-best-mother-darling-krishna-congratulates-his-wife/ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಹಿಂದಿರುಗಿದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಮಾತನಾಡಿದರು. ಈ ವೇಳೆ ತಮ್ಮ ಎರಡನೇ ಅಧಿಕಾರ ಅವಧಿಯ ಸಂಪೂರ್ಣ ಯೋಜನೆಗಳ ನೋಟವನ್ನು ಪ್ರಸ್ತುತಪಡಿಸಿದರು. ಅಮೆರಿಕದ ನಾಗರಿಕರ ಆರ್ಥಿಕತೆ, ಭದ್ರತೆ ಮತ್ತು ಜಾಗತಿಕ ಸಹಕಾರ ಬಲಪಡಿಸುವ ಬದ್ಧತೆ ಬಗ್ಗೆ ಟ್ರಂಪ್ ಮಾತನಾಡಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ನೀತಿಯನ್ನು ಶತಾಯಗತಾಯ ಜಾರಿಗೆ ತರಲು ಸಂಕಲ್ಪ ತೊಟ್ಟಂತಿದ್ದಾರೆ. ಈವರೆಗೂ ಅವರು ತಾವು ಹೇಳಿದಂತೆಯೇ ಮಾಡುತ್ತಿದ್ದಾರೆ. ಕೆನಡಾ, ಮೆಕ್ಸಿಕೋ ಮತ್ತು ಚೀನಾ ಮೇಲೆ ಸುಂಕ ವಿಧಿಸಿದ್ದಾರೆ. ಭಾರತ, ಐರೋಪ್ಯ ಒಕ್ಕೂಟ ಹಾಗೂ ಇತರ ದೇಶಗಳ ಮೇಲೂ ಟ್ಯಾರಿಫ್ ಹಾಕುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಇತರ ದೇಶಗಳ ಮೇಲೆ ಏಪ್ರಿಲ್ 2ರಿಂದ ರೆಸಿಪ್ರೋಕಲ್ ಟ್ಯಾಕ್ಸ್ ಅಥವಾ ಪ್ರತಿ…
Author: AIN Author
ಮಿಲನಾ ಬೆಸ್ಟ್ ಮದರ್ ಎಂದು ಹೇಳುವ ಮೂಲಕ ಪತ್ನಿಯನ್ನು ಡಾರ್ಲಿಂಗ್ ಕೃಷ್ಣ ಹೊಗಳಿದ್ದಾರೆ. https://ainlivenews.com/yathindra-siddaramaiah-demands-re-implementation-of-amrutha-swabhimani-kuri-gahi-scheme/ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ದಂಪತಿ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸದ ನಡುವೆಯೂ ಮಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ಪುತ್ರಿ ‘ಪರಿ’ಗೆ 6 ತಿಂಗಳು ತುಂಬಿದ್ದು, ಕ್ಯೂಟ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಪುಟ್ಟ ತಾರೆಗೆ 6 ತಿಂಗಳ ಶುಭಾಶಯಗಳು. ನನ್ನ ಹೆಂಡತಿ ಸೂಪರ್ ಹೀರೋ ಆಗಿ ಅರ್ಧ ವರ್ಷ ಕಳೆದಿದೆ. ನನ್ನ ಅದ್ಭುತ ಹೆಂಡತಿ, ಅತ್ಯುತ್ತಮ ತಾಯಿಯಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಶೀರ್ಷಿಕೆ ಹಾಕಿದ್ದಾರೆ. ಡಾರ್ಲಿಂಗ್ ಕೃಷ್ಣ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ ಬಂದಿದೆ.
ಬೆಂಗಳೂರು:- ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮರು ಜಾರಿಗೆ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. https://ainlivenews.com/milk-price-hike-inevitable-minister-venkatesh/ ಕಲಾಪದಲ್ಲಿ ಚರ್ಚಿಸಿದ ಅವರು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮರು ಜಾರಿ ಮಾಡಬೇಕು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮತ್ತೆ ಜಾರಿ ಮಾಡಬೇಕು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಯೋಜನೆಯಡಿ 1 ಲಕ್ಷ ರೂ.ನಲ್ಲಿ 20 ಕುರಿ ಅಥವಾ ಮೇಕೆ ತೆಗೆದುಕೊಳ್ಳುವ ಯೋಜನೆ ಇದಾಗಿದೆ. 20 ಕುರಿ, ಮೇಕೆಗೆ ಹಣ ಕೊಡಲು ಆಗದೇ ಹೋದರೆ 10 ಕುರಿ ಅಥವಾ ಮೇಕೆಗೆ ಆದರೂ ರಾಜ್ಯ ಸರ್ಕಾರವೇ ಹಣ ಕೊಟ್ಟು ಯೋಜನೆ ಪ್ರಾರಂಭ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಚಿವ ವೆಂಕಟೇಶ್ ಪ್ರತಿಕ್ರಿಯಿಸಿ, ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆಯಲ್ಲಿ ಫಲಾನುಭವಿಗಳು ಹಣ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಆರ್ಥಿಕ ಇಲಾಖೆ ಯೋಜನೆ ಸ್ಥಗಿತ ಮಾಡಲು ಸೂಚನೆ ಕೊಟ್ಟಿತ್ತು. ಹೀಗಾಗಿ ಯೋಜನೆ ರದ್ದು ಮಾಡಿದ್ದೇವೆ. ಯೋಜನೆ ಮತ್ತೆ ಪ್ರಾರಂಭ ಮಾಡಲು ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಸಿಎಂ ಒಪ್ಪಿಗೆ ಕೊಟ್ಟರೆ ಯೋಜನೆ…
ಬೆಂಗಳೂರು:- ಹಾಲಿನ ದರ ಏರಿಕೆ ಅನಿವಾರ್ಯ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ. https://ainlivenews.com/mangaluru-food-poisoning-in-jail-15-prisoners-fall-ill/ ಕಲಾಪದಲ್ಲಿ ಬಿಜೆಪಿಯ ಎಂಜಿ ಮೂಳೆ, ಕಾಂಗ್ರೆಸ್‌ನ ಉಮಾಶ್ರೀ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ವೆಂಕಟೇಶ್, ಹಾಲು ಉತ್ಪಾದಕರಿಗೆ 656.07 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿದುಕೊಂಡಿದೆ. 9,04,547 ಫಲಾನುಭವಿಗಳಿಗೆ ಬಾಕಿ ಹಣ ಕೊಡಬೇಕಾಗಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 613.58 ಕೋಟಿ ರೂ., ಪರಿಶಿಷ್ಟ ಜಾತಿಯವರಿಗೆ 18.29 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡಕ್ಕೆ 24.20 ಕೋಟಿ ರೂ. ಬಾಕಿಯಿದೆ ಎಂದು ಮಾಹಿತಿ ನೀಡಿದರು. ಬಾಕಿ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಕೇಳಿದ್ದೇವೆ. ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ ಕೂಡಲೇ ಬಾಕಿ ಹಣ ಬಿಡುಗಡೆ ಮಾಡ್ತೀವಿ. ಹಾಲಿನ ಉತ್ಪಾದನೆ ಜಾಸ್ತಿ ಆಗಿದೆ. ಬಜೆಟ್ ಅಲೋಕೇಷನ್ ಅದರಂತೆ ಕೊಡ್ತಿಲ್ಲ. ಹೀಗಾಗಿ ಬಾಕಿ ಉಳಿದಿದೆ. ಸಿಎಂ ಅವರಿಗೆ ಬಾಕಿ ಹಣ ಬಿಡುಗಡೆಗೆ ಮನವಿ ಮಾಡಿದ್ದೇನೆ. ಆದಷ್ಟು ಶೀಘ್ರವೇ ಬಾಕಿ ಹಣ ಬಿಡುಗಡೆ ಮಾಡುತ್ತೇವೆ. ಇನ್ನೂ ಹಾಲಿನ ದರ ಏರಿಕೆಗೆ ರೈತರ ಬೇಡಿಕೆಯಿದ್ದು,…
ಮಂಗಳೂರು:- ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಫುಡ್ ಪಾಯಿಸನ್ ಆಗಿ ಹೊಟ್ಟೆ ನೋವಿನಿಂದ 15 ಕೈದಿಗಳು ನರಳಾಡಿರುವಂತಹ ಘಟನೆ ಜರುಗಿದೆ. https://ainlivenews.com/skip-the-pizza-burgers-noodles-and-eat-ragi-balls-a-model-program-in-bengaluru/ ಏಕಾಏಕಿ ವಾಂತಿ ಮಾಡುತ್ತಾ ಹೊಟ್ಟೆ ನೋವಿನಿಂದ ಕೈದಿಗಳು ನರಳಾಡಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಕೈದಿಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಸ್ವಸ್ಥ ಕೈದಿಗಳನ್ನ ಸಹ ಕೈದಿಗಳು ತಾವೇ ಹೊತ್ತುತಂದಿದ್ದಾರೆ. ಈ ವೇಳೆ ನಾವು ಆಸ್ಪತ್ರೆಗೆ ಹೋಗುತ್ತೇವೆ ಎಂದು ಕೈದಿಗಳು ಪಟ್ಟು ಹಿಡಿದಿದ್ದರು. ಆಕ್ರೋಶಗೊಂಡಿದ್ದ ಕೈದಿಗಳನ್ನ ವಾಹನದಿಂದ ಕೆಳಗಿಳಿಸಿದ ಪೊಲೀಸರು, ಅಸ್ವಸ್ಥ ಕೈದಿಗಳನ್ನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಬಳಿಕ ಜೈಲಿನಲ್ಲಿ ಪೊಲೀಸರ ವಿರುದ್ಧ ಕೈದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಟಿಕೋಳಿ ಸಾರು ಮುದ್ದೆ ಊಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಪಿಜ್ಜಾ, ಬರ್ಗರ್ ನೂಡಲ್ಸ್ ಬಿಡಿ, ರಾಗಿ ಗಂಜಿ, ರಾಗಿ ಮುದ್ದೆ ತಿಂದು ಆರೋಗ್ಯವಾಗಿರಿ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. https://ainlivenews.com/want-to-normalize-blood-sugar-then-eat-this-vegetable-for-dinner/ ರಾಗಿ ಮುದ್ದೆ ನಾಟಿ ಕೋಳಿ ಸಾರು ಸವಿಯುವ ಮೂಲಕ ಶಾಸಕ ಸತೀಶ್ ರೆಡ್ಡಿ ಉದ್ಘಾಟನೆ ಮಾಡಿದ್ದಾರೆ. ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ 8ನೇ ವಾರ್ಷಿಕೋತ್ಸವ ಅಂಗವಾಗಿ ಬೆಂಗಳೂರಿನ ಬಿಳೇಕಹಳ್ಳಿ, ಮುಲ್ಕಿ ಸುಂದರಾಮ್ ಮೆಮೊರಿಯಲ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿಚ್ಚಲಾನಂದನಾಥ ಸ್ವಾಮೀಜಿ ಅವರು, ಉದ್ಘಾಟನೆ ಮಾಡಿದ್ದಾರೆ. ರಾಘವ ಚರಿತ್ರೆಯಲ್ಲಿ ರಾಗಿಗೆ ರಾಮಧಾನ್ಯ ಎನ್ನುತ್ತಾರೆ. ರಾಗಿಮುದ್ದೆಗೆ ದೇಹದ ಶಕ್ತಿ ಹಿಡಿಯುವ ಶಕ್ತಿ ಇದೆ ಎಂದು ಇದೇ ವೇಳೆ ಶ್ರೀ ನಚ್ಚಲಾನಂದ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಾರೆ. ರಾಗಿಯ ಮಹತ್ವ ಮತ್ತು ರಾಗಿ ಮುದ್ದೆ ಸೇವನೆ ಆರೋಗ್ಯ ಕಾಳಜಿಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಡಯಾಬಿಟಿಸ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಹಾಗೂ ನಿರ್ವಹಿಸಲು ರಕ್ತದಲ್ಲಿನ ಶುಗರ್ ಲೆವಲ್ ತುಂಬಾ ಮುಖ್ಯವಾಗಿವೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ರಕ್ತದಲ್ಲಿನ ಶುಗರ್ ಅತ್ಯಗತ್ಯವಾಗಿದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿದ್ದರೆ ಹಾಗೂ ತುಂಬಾ ಕಡಿಮೆಯಿದ್ದರೆ, ಅನಿಯಂತ್ರಿತವಾಗಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. https://ainlivenews.com/has-your-whatsapp-chat-been-hacked-heres-how-to-find-out/ ಮಧುಮೆಹ ಅಥವಾ ಬ್ಲಡ್ ಶುಗರ್ ಇದ್ದಾಗ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೇವೆ, ರಾತ್ರಿ ಊಟಕ್ಕೆ ಏನನ್ನು ಸೇವಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅನುಸರಿಸಬೇಕಾದ ಮುಖ್ಯ ಹೆಜ್ಜೆಯೇ ಇದು. ಈ ಪ್ರಕಾರ ರಾತ್ರಿ ಊಟಕ್ಕೆ ಇದೊಂದು ತರಕಾರಿಯನ್ನು ಸೇವಿಸಿದರೆ ಬೆಳಗ್ಗೆ ಆಗುವ ವೇಳೆಗೆ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ ಎಂದು ಹೇಳಲಾಗುತ್ತದೆ. ಪುಟ್ಟದಾಗಿ ಕಾಣುವ ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶದಂತಹ ಗುಣಗಳು ಹೇರಳವಾಗಿ ಕಂಡುಬರುತ್ತವೆ. ತೊಂಡೆಕಾಯಿಯಲ್ಲಿ ಕಡಿಮೆ ಮಟ್ಟದ ಗ್ಲೈಸೆಮಿಕ್ ಇಂಡೆಕ್ಸ್…
ವೇಗದ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ಸ್ನೇಹಿತರೊಂದಿಗೆ, ಫ್ಯಾಮಿಲಿಯವರೊಂದಿಗೆ ಸಂಪರ್ಕಿಸಲು ಅತ್ಯುತ್ತಮ ಮಾಧ್ಯಮವಾಗಿದೆ. ಆದರೆ ನೀವು ಮಾಡುವ ಸಣ್ಣ ತಪ್ಪು ಕೂಡ ನಿಮಗೆ ಸಾಕಷ್ಟು ನಷ್ಟವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು.. ನಿಮ್ಮ ಸಣ್ಣ ತಪ್ಪಿನಿಂದಾಗಿ ಇತರರು ನಿಮ್ಮ ವಾಟ್ಸಾಪ್ ಚಾಟ್ ಅನ್ನು ಓದಬಹುದು. ಹ್ಯಾಕ್ ಆಗುವ ಸಾಧ್ಯತೆಗಳು ಸಹ ಹೆಚ್ಚಾಗಬಹುದು. ಹಾಗಿದ್ರೆ ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ಏನು ಮಾಡ್ಬೇಕು ಎಂಬುದಕ್ಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್. https://ainlivenews.com/hubballi-ambareeshs-grandson-has-a-cradle-in-kalaghat/ ಜನರು WhatsApp ನಲ್ಲಿ ಖಾಸಗಿ ಚಾಟ್‌ಗಳನ್ನು ಮಾಡುತ್ತಾರೆ ಮತ್ತು ಅವರ ಪ್ರಮುಖ ದಾಖಲೆಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಾರೆ. ಆದ್ದರಿಂದ, ನಿಮ್ಮ WhatsApp ಚಾಟ್‌ಗಳನ್ನು ಬೇರೆ ಯಾರಾದರೂ ಕದ್ದು ಓದುತ್ತಿದ್ದಾರಾ ಎಂದು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್‌ನಲ್ಲಿ ಹಲವು ವೈಶಿಷ್ಟ್ಯಗಳು ಲಭ್ಯವಿದೆ. ಈ ವೈಶಿಷ್ಟ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ, ಸ್ಕ್ಯಾಮರ್‌ಗಳು ಜನರ ಖಾಸಗಿ ಚಾಟ್‌ಗಳನ್ನು ಪ್ರವೇಶಿಸಬಹುದು. ಬಳಕೆದಾರರು ವಾಟ್ಸಾಪ್‌ನಲ್ಲಿ ಲಿಂಕ್ಡ್ ಡಿವೈಸ್ ವೈಶಿಷ್ಟ್ಯವನ್ನು ಪಡೆಯುತ್ತಾರೆ, ಇದು ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಯನ್ನು ಮತ್ತೊಂದು…
ಬೆಂಗಳೂರು:- ಕುಡಿಯುವ ನೀರನ್ನು ಅನ್ಯಬಳಕೆ ಮಾಡಿ ನಿಯಮ ಉಲ್ಲಂಘಿಸಿದ ಸಿಲಿಕಾನ್ ಸಿಟಿ ಮಂದಿಗೆ ಜಲಮಂಡಳಿ ದಂಡದ ಬಿಸಿ ಮುಟ್ಟಿಸಿದೆ. https://ainlivenews.com/bulero-accident-grapes-scattered-on-the-road/ ಕುಡಿಯುವ ನೀರನ್ನ ಅನ್ಯ ಕೆಲಸಗಳಿಗೆ ಬಳಸಬಾರದು. ಹಾಗೆ ಮಾಡಿದರೆ ದಂಡ ಹಾಕುತ್ತೇವೆ ಎಂದು ಆದೇಶ ಮಾಡಿತ್ತು. ಆದೇಶವನ್ನೂ ಲೆಕ್ಕಿಸದೇ ಕುಡಿಯುವ ನೀರನ್ನ ಅನ್ಯ ಕಾರ್ಯಗಳಿಗೆ ಬಳಿಸಿದವರಿಗೆ ದಂಡ ಹಾಕಲಾಗಿದೆ. ಬೆಂಗಳೂರಿನ 417 ಜನರಿಗೆ ನೋಟಿಸ್ ನೀಡಿ ಜಲಮಂಡಳಿ ದಂಡ ಹಾಕಿದೆ. 417 ಜನರಿಗೆ 20.85 ಲಕ್ಷ ದಂಡ ಹಾಕಲಾಗಿದೆ. ಬೆಂಗಳೂರು ಪೂರ್ವ ಭಾಗದ ಜನರು ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನೀರು ವೇಸ್ಟ್ ಮಾಡಿದ್ರೆ ಸ್ಥಳದಲ್ಲೇ ದಂಡ ಬೀಳುತ್ತೆ. ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರನ್ನು ವ್ಯರ್ಥ ಮಾಡೋರಿಗೆ ದಂಡ ಹಾಕಲಾಗುವುದು ಎಂದು ಜಲಮಂಡಳಿ ನಗರದ ಜನತೆಗೆ ಎಚ್ಚರಿಕೆ ನೀಡಿತ್ತು.
ನೆಲಮಂಗಲ: ದ್ರಾಕ್ಷಿ ತುಂಬಿದ ಬುಲೆರೊ ವಾಹನ ಅಪಘಾತಕ್ಕೀಡಾಗಿ ದ್ರಾಕ್ಷಿಯೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಘಟನೆ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. https://ainlivenews.com/actress-ranya-raos-flat-raided-gold-worth-crores-seized/ ನೆಲಮಂಗಲ ಬಳಿಯ ಮಾಕಳಿ ಬಳಿ ಬುಲೆರೋ ವಾಹನ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ದ್ರಾಕ್ಷಿ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ನಾ ಮುಂದು ತಾ ಮುಂದು ಎಂದು ದ್ರಾಕ್ಷಿಯನ್ನು ಜನತೆ ಹೊತ್ತೊಯ್ದಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ತುಮಕೂರು ಮಾರ್ಗದಲ್ಲಿ ಬೆಂಗಳೂರು ನಗರಕ್ಕೆ ಬರುತ್ತಿದ್ದ ಬುಲೆರೋ ವಾಹನ ಚಾಲಕನಿಗೆ ಗಾಯವಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.