Author: AIN Author

ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಲ್ಲೊಂದು ಸಂಸ್ಥೆಯಲ್ಲಿ ನೀವು ಜಸ್ಟ್ ಡಿಗ್ರಿ ಪಾಸ್ ಮಾಡಿದ್ರೆ ಸಾಕು, ಕೈ ತುಂಬಾ ಸಂಬಳದ ಜೊತೆ ಉತ್ತಮ ಕೆಲಸ ಪಡೆಯಬಹುದು. https://ainlivenews.com/ta-sharavana-who-had-darshan-of-hasanamba-devi/ ಎಸ್, ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ನವೆಂಬರ್‌ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್‌(Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್‌ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕರ್ನಾಟಕದಲ್ಲಿ 300 ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ: ಕರ್ನಾಟಕ ಲೋಕಾಯುಕ್ತ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಕರ್ನಾಟಕ ಲೋಕಾಯುಕ್ತ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳು: 03 ವರ್ಷಗಳು…

Read More

ಹಿಂದೂ ಧರ್ಮದಲ್ಲಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದು ಒಂದು ರೀತಿಯ ರೂಢಿ. ಈ ಕಾರಣಕ್ಕಾಗಿ ಪ್ರತಿಯೊಂದು ಮನೆಯಲ್ಲೂ ಪ್ರತ್ಯೇಕವಾದ ದೇವರ ಕೋಣೆಯನ್ನು ನಿರ್ಮಿಸಿರುತ್ತಾರೆ. ಆದರೆ, ಪೂಜೆಯ ಸಮಯದಲ್ಲಿ ನಾವು ಮಾಡುವ ಒಂದಿಷ್ಟು ತಪ್ಪುಗಳು ನಮಗೆ ಪೂಜೆಯ ಯಾವುದೇ ರೀತಿಯಾದ ಫಲ ಸಿಗದಂತೆ ಮಾಡುತ್ತದೆ. https://ainlivenews.com/ind-vs-nz-its-spinner-jadejas-charm-giants-record-udis/#google_vignette ಪ್ರತಿನಿತ್ಯ ದೇವರನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಜೀವನದ ಪ್ರತಿಯೊಂದು ಅಂಶವು ನಮ್ಮ ವೇದಗಳಲ್ಲಿ ವಿಜ್ಞಾನ ಅಥವಾ ನಂಬಿಕೆಯ ವಿಷಯವಾಗಿದೆ. ಪೂಜೆಯ ನಿಜವಾದ ವಿಧಾನ ಯಾವುದು ಎಂಬುದನ್ನು ನಾವಿಂದು ತಿಳಿಯೋಣ. ಸಾಮಾನ್ಯವಾಗಿ, ಮಧ್ಯಾಹ್ನ ಪೂಜೆ ಮಾಡಬೇಕೋ ಬೇಡವೋ ಎಂಬ ಸಂದೇಹ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇರುತ್ತದೆ. ಹಿಂದೂ ಧರ್ಮದ ಪ್ರಕಾರ, ಸೂರ್ಯೋದಯದ ನಂತರ ಮುಂಜಾನೆ ಪೂಜೆಗೆ ಉತ್ತಮ ಸಮಯ ಎಂದು ಹೇಳಲಾಗುತ್ತದೆ. ಮುಂಜಾನೆ ದೇವರ ಪೂಜೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬ್ರಹ್ಮಮುಹೂರ್ತದಲ್ಲಿ ಎಂದರೆ ಮುಂಜಾನೆ 3:30 ರಿಂದ 5:30 ರವರೆಗಿನ ಸಮಯವು ಅತ್ಯುತ್ತಮ ಸಮಯವಾಗಿದೆ. ಮಧ್ಯಾಹ್ನ ಮಾಡುವ ಪೂಜೆಯನ್ನು…

Read More

ಶಿವಮೊಗ್ಗ: ಕಳೆದ ವಾರ ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದ ರಾಜೇಶ್ ಹಾಗೂ ಅಶ್ವಿನಿ ದಂಪತಿ ಪುತ್ರ ಅಥರ್ವ (2) ಮೃತ ಬಾಲಕ. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ರಾಜೇಶ್ ಅವರ ನೆರೆಮನೆ ನಿವಾಸಿ ಕಳೆದ ವಾರ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಅಶ್ವಿನಿ ಟೀ ಮಾಡಿಟ್ಟಿದ್ದರು. ಟೀ ಇರುವ ಪಾತ್ರೆಯನ್ನು ಮಗು ತನ್ನ ಮೈಮೇಲೆ ಬೀಳಿಸಿಕೊಂಡು ಗಾಯವಾಗಿತ್ತು. ಕಳೆದೊಂದು ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read More

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ರವೀಂದ್ರ ಜಡೇಜಾ ಅವರು, ದಿಗ್ಗಜರ ದಾಖಲೆ ಉಡೀಸ್ ಮಾಡಿದ್ದಾರೆ. https://ainlivenews.com/kti-yojana-revision-issue-what-did-minister-v-somanna-say/ ಭಾರತ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ 235 ರನ್​​ಗಳಿಗೆ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಕಿವೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ ಖಾತೆಗೆ ಜಾರಿದ ಬಿದ್ದ ವಿಕೆಟ್​ಗಳ ಪೈಕಿ, ವಿಲ್ ಯಂಗ್, ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್, ಇಶ್ ಸೋಧಿ ಹಾಗೂ ಮ್ಯಾಟ್ ಹೆನ್ರಿ ಸೇರಿದ್ದಾರೆ. ದಿನದಾಟದ ಮೊದಲೆರಡು ಸೆಷನ್​ಗಳಲ್ಲಿ ಮೂರು ವಿಕೆಟ್ ಉರುಳಿಸಿದ್ದ ಜಡೇಜಾ, ಚಹಾ ವಿರಾಮದ ಮೊದಲು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಉರುಳಿಸಿದರು. ಈ ಮೂಲಕ ಜಡೇಜಾ ವಿಶಿಷ್ಟ ದಾಖಲೆಯನ್ನು ಮಾಡಿದರು. ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಉರುಳಿಸುವ ಮೂಲಕ ರವೀಂದ್ರ ಜಡೇಜಾ, ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು…

Read More

ನವದೆಹಲಿ: ಚುನಾವಣೆಗಾಗಿ ಮಾಡುವ ಘೋಷಣೆ ಎಷ್ಟರ ಮಟ್ಟಿಗೆ ತೊಂದರೆ ಕೊಡುತ್ತವೆ ಎನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿಗಳೇ ಸಾಕ್ಷಿ. ರಾಜ್ಯ ಸರ್ಕಾರದ ಈ ತೊಳಲಾಟವನ್ನು ಬಹಿರಂಗವಾಗಿ ಹೇಳಿರುವ ಡಿಸಿಎಂ ಡಿ.ಕೆ ಶಿವಕುಮಾರ್  ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಸಿಎಂ ಡಿಕೆಶಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಸಿಲ್ಲದೇ ಕರಿಮಣಿ ಹೊಲಿಸಿಕೊಂಡಿದ್ದಾರೆ. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿಕೊಂಡ ಹಾಗೇ ಈ ಗ್ಯಾರಂಟಿ ಯೋಜನೆಗಳು. ಚುನಾವಣೆಗಾಗಿ ಗ್ಯಾರಂಟಿ ನೀಡಿ ಈಗ ಪರಿತಪಿಸುತ್ತಿದ್ದಾರೆ. https://ainlivenews.com/make-kaju-barfi-at-home-this-diwali-here-is-an-easy-recipe/ ದೇಶದ ವ್ಯವಸ್ಥೆಯಲ್ಲಿ, ರಾಜ್ಯದ ಪಾಲುದಾರಿಕೆಯಲ್ಲಿ ಇತಿಮಿತಿಯಲ್ಲಿ ಸರ್ಕಾರ ನಡೆಸಬೇಕು. ಸಿಎಂ ಸಿದ್ದರಾಮಯ್ಯ, ಎಲ್ಲ ಮಂತ್ರಿಗಳು ಮತ್ತು ಕಾಂಗ್ರೆಸ್ ಎಲ್ಲ ನಾಯಕರ ಭಾವನೆಯೂ ಇದೆ ಆಗಿದೆ. ಹೊಟ್ಟೆಯಲ್ಲಿರುವ ನೋವನ್ನು ಡಿಕೆಶಿ ಹೇಳಿಕೊಂಡಿದ್ದಾರೆ. ಹೀಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು. ನವೆಂಬರ್ ಬಳಿಕ ಗ್ಯಾರಂಟಿಗಳಿಗೆ ಜನ ಗಣ ಮನ ಹಾಡುತ್ತಾರೆ.…

Read More

ಬೆಂಗಳೂರು:- ಕರ್ಮ ಭೂಮಿಗೆ ನಾವೆಲ್ಲರೂ ಧನ್ಯವಾದ ಅರ್ಪಿಸಬೇಕು ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. https://ainlivenews.com/ta-sharavana-who-had-darshan-of-hasanamba-devi/ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ತಾಯಿ ನಾಡಿಗೆ ಗೌರವ ಸಲ್ಲಿಸುವುದರ ಜತೆಗೆ, ಈ ನೆಲಕ್ಕೆ ಕೃತಜ್ಞತೆ ಸಲ್ಲಿಸಿ, ಕನ್ನಡದ ಕೀರ್ತಿ ಪತಾಕೆಯನ್ನು ನಾವೆಲ್ಲರೂ ಹಾರಿಸಬೇಕು ಎಂದರು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡು, 51ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕರ್ನಾಟಕವೇ ನಮ್ಮ ಸ್ವರ್ಗ, ಕನ್ನಡವೇ ನಮ್ಮ ದೇವ ಭಾಷೆ, ತುಂಗ, ಭದ್ರೆ, ಕಾವೇರಿ, ಕೃಷ್ಣ ನದಿಯೇ ನಮಗೆ ಪುಣ್ಯ ತೀರ್ಥ ಎಂದು ಭಾವಿಸಿದ್ದೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ವೈಯಕ್ತಿಕವಾಗಿ ರಾಜ್ಯದ ಜನರು ಹಾಗೂ ಎಲ್ಲಾ ಕನ್ನಡಿಗರಿಗೆ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತೇನೆ ಎಂದರು.

Read More

ಹಾಸನ: ವಿಧಾನ ಪರಿಷತ್ ಶಾಸಕ ಟಿಎ ಶರವಣರವರು, ಉಪ ಚುನಾವಣೆಯ ಬ್ಯುಸಿ ನಡುವೆಯೂ ಕುಟುಂಬ ಸಮೇತರಾಗಿ ಆಗಮಿಸಿ ಪುರಾಣ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಹಾಸನಾಂಬ ದೇವಿ ನಾಡಿನ ಜನತೆಗೆ ಒಳಿತು ಮಾಡಲಿ, ನೆಮ್ಮದಿ ಶಾಂತಿಯಿಂದ ಬದುಕಲಿ ಹಾಗೂ ಹಾಸನಾಂಬಾ ದೇವಿಯ ಎಲ್ಲ ಭಕ್ತರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Read More

ಬೆಂಗಳೂರು:- ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಬಿಜಿಎಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ. https://ainlivenews.com/fireworks-accident-air-quality-in-bangalore-has-fallen/ ಮಧ್ಯಾಹ್ನ 2:40 ಸುಮಾರಿಗೆ ದರ್ಶನ್ ಪೊಲೀಸ್ ಭದ್ರತೆಯೊಂದಿಗೆ ಮನೆಯಿಂದ ಹೊರಟಿದ್ದಾರೆ. ಆಸ್ಪತ್ರೆಯಲ್ಲಿ ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡಲಿರುವ ವೈದ್ಯರು, ಬಳಿಕ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವ ಕೆಲಸ ಆರಂಭಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಮಾಹಿತಿ ನೀಡಿದೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ದರ್ಶನ್ ಬೆಳಗ್ಗೆ ಮಲ್ಲೇಶ್ವರಂನಲ್ಲಿರೋ ಆರ್ಥೋ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ದರ್ಶನ್ ಚಿಕಿತ್ಸೆಗಾಗಿ ದಾಖಲಾಗಲಿರುವ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

Read More

ಬೆಂಗಳೂರು:- ಪಟಾಕಿ ಅವಘಡ ಹಿನ್ನೆಲೆ ಒಂದೇ ದಿನದಲ್ಲಿ ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟದಲ್ಲಿ ಕುಸಿತಕಂಡಿದೆ. https://ainlivenews.com/do-not-consume-ghee-for-any-reason-if-you-have-these-problems/ ನಿಯಮಗಳನ್ನು ಗಾಳಿಗೆ ಪಟಾಕಿ ಸಿಡಿಸಿದ ಪರಿಣಾಮ ಗಾಳಿಯ ಗುಣಮಟ್ಟ ಸೂಚ್ಯಂಕ 100ರ ಗಡಿದಾಟಿದೆ. ಕಳೆದ ಒಂದು ತಿಂಗಳಿಂದ‌ ಕಡಿಮೆ ಮಾಲಿನ್ಯ ಇತ್ತು. ಆದ್ರೆ, ದೀಪಾವಳಿ ಹಬ್ಬ ಹಿನ್ನೆಲೆ‌ ಪಟಾಕಿಯ ಸದ್ದಿಗೆ ನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ದೀಪಾವಳಿ ಹಬ್ಬಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಪಟಾಕಿ ಮಾರುವುದಕ್ಕೆ ಮಾತ್ರ ಅನುಮತಿ ನೀಡಿತ್ತು. ಇನ್ನು ಸರ್ಕಾರವೂ ಸಹ ಹಸಿರು ಪಟಾಕಿ ಮಾಡಬೇಕು. ಅಲ್ಲದೇ ಇದೇ ಸಮಯದಲ್ಲಿ ಪಟಾಕಿ ಸಿಡಿಸಬೇಕೆಂದು ಸಮಯ ನಿಗದಿ ಮಾಡಿತ್ತು. ಆದ್ರೆ, ಜನ ಕೇಳಬೇಕಲ್ಲ. ವರ್ಷಕ್ಕೆ ಒಂದೇ ದಿನ ಬರುವ ದೊಡ್ಡ ಹಬ್ಬ ದೀಪಾವಳಿ. ಅಂಗಡಿ ಮುಂಗಟ್ಟು ಪೂಜೆ ಮಾಡಿ ಭರ್ಜರಿ ಪಟಾಕಿ ಸಿಡಿಸಿ ಎಂಜಾಯ್ ಮಾಡಿದ್ದಾರೆ. ಹೀಗಾಗಿ ಮಾಲಿನ್ಯ ಹೆಚ್ಚಳವಾಗಿದೆ. ಬೆಂಗಳೂರಿನ ಯಾವ್ಯಾವ ಏರಿಯಾದಲ್ಲಿ‌ ಎಷ್ಟೆಷ್ಟು:- ಬಾಪುಜಿನಗರ- 79AQನಿಂದ 117 AQಗೆ ಹೆಚ್ಚಳ ಸಿಟಿ ರೈಲ್ವೆ ಸ್ಟೇಷನ್ ಮೆಜೆಸ್ಟಿಕ್- 78 AQನಿಂದ 150AQಗೆ…

Read More

ತುಪ್ಪವನ್ನು ಶತಮಾನಗಳಿಂದ ಭಾರತೀಯ ಅಡುಗೆ ಮತ್ತು ಆಯುರ್ವೇದ ಔಷಧದಲ್ಲಿ  ವ್ಯಾಪಕವಾಗಿ ಬಳಸಲಾಗುತ್ತದೆ. ಅನ್ನ ಸಾಂಬಾರ್ ಜೊತೆಗೆ ಸ್ವಲ್ಪ ತುಪ್ಪ ಹಾಕಿಕೊಂಡು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ತುಪ್ಪ ನಮ್ಮ ಆಹಾರಕ್ಕೆ ಅಷ್ಟೊಂದು ರುಚಿ ಕೊಡುತ್ತದೆ. ಅಡುಗೆ ತಯಾರಿ ಮಾಡುವಾಗ ಕೂಡ ತುಪ್ಪವನ್ನು ಬಳಸುವುದರಿಂದ ಅಡುಗೆಯ ಸ್ವಾಧ ಹೆಚ್ಚಾಗುತ್ತದೆ. ತುಪ್ಪ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. https://ainlivenews.com/shobhita-nagachaitanyas-wedding-date-is-finally-fixed-you-know-when/ ಭಾರತೀಯ ಆಹಾರ ಪದ್ಧತಿ ಮತ್ತು ಸಂಸ್ಕೃತಿಯಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುವ ತುಪ್ಪ ಬಹುತೇಕ ಆಹಾರಗಳ ತಯಾರಿಕೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ತಜ್ಞರು ಹೇಳುವಂತೆ, ಈ ಸೂಪರ್‌ಫುಡ್…

Read More