ಧಾರವಾಡ : ಕನ್ನಡ ನಾಡು ಉದಯವಾಗಿ ಅರವತ್ತೆಂಟು ವರ್ಷವಾಯಿತು. ಒಂದೆಡೆ ಅಭಿವೃದ್ದಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ,ಉಡುಗೆ ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿದೆ. ಕನ್ನಡಿಗರು ಎಚ್ಚೆತ್ತುಕೊಂಡು ಅಚ್ಚಕನ್ನಡದಲ್ಲಿ ಮಾತನಾಡೋದು, ಪ್ರಾಥಮಿಕ ಶಿಕ್ಷಣವನ್ನು ಕನ್ನಡಭಾಷೆಯಲ್ಲಿ ಕಲಿಸುವುದು. ಕನ್ನಡದ ಪುಸ್ತಕ, ದಿನ ಪತ್ರಿಕೆಗಳನ್ನು ಕೊಂಡು ಓದುವಂತಾಗಬೇಕಿದೆ ಎಂದು ವೈ.ಜಿ ಭಗವತಿ ಹೇಳಿದರು. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ತಾಲೂಕಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಭಾಗವಹಿಸಿ ಮಾತನಾಡಿದರು. ಅನೇಕ ಕವಿಗಳು, ದಾರ್ಶನಿಕರು ಈ ನಾಡಿನ ಹಿರಿಮೆಯನ್ನು ಬೆಳೆಸಿದ್ದಾರೆ. ಇಂದಿನ ನವ ಪೀಳಿಗೆ ಇದನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಪ್ರತಿಯೊಬ್ಬರು ಕನ್ನಡ ನಾಡಿನ ಬಗ್ಗೆ ಅಭಿಮಾನ ಹೊಂದಬೇಕಾಗಿದೆ ಎಂದರು.
Author: AIN Author
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯದಲ್ಲಿರುವ ಟಿಬೆಟಿಯನ್ ಕಾಲೋನಿಯ ಬಂಧುಗಳು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ವೇಳೆ ಕನ್ನಡ ಚಲನ ಚಿತ್ರದ ಡಾ.ರಾಜಕುಮಾರ , ಪವರ್ ಸ್ಟಾರ್ ಪುನೀತ್ ರಾಜಕುಮಾರ ಗೀತೆಗಳಿಗೆ ಮಹಿಳಾ ಟಿಬೆಟಿಯನ್ಸಗಳು ಗೀತೆಗಳನ್ನು ಹಾಡಿ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು. ಕನ್ನಡ ಗೀತೆಗಳು ಟಿಬೆಟಿಯನ್ನರ ಮಧುರ ಕಂಠದಲ್ಲಿ ಕೇಳದಿ ಸ್ಥಳೀಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಸಂಭ್ರಮಿಸಿದರು.
ಗಡಿ ಜಿಲ್ಲೆ ಚಾಮರಾಜನಗರದ ಪ್ರಸಿದ್ದ ಯಾತ್ರಾ ಸ್ಥಳ ಪವಾಡ ಮಲೈಮಹದೇಶ್ವರಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಮಾದಪ್ಪನ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು. ವಿವಿಧ ಹರಕೆಗಳನ್ನು ಹೊತ್ತ. ಭಕ್ತರು ಉಘೇಉಘೇ ಮಾದಪ್ಪ ಎಂದು ಝೇಂಕರಿಸುತ್ತಾ ಮಾದಪ್ಪನ ಸನ್ನಿದಿಯಲ್ಲಿ ಭಕ್ತಿ ಪರಾಕಾಷ್ಟಯಲ್ಲಿ ಮಿಂದೆದ್ದರು. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ದೀಪಾವಳಿ ಜಾತ್ರೆಯ ಪ್ರಯುಕ್ತ ಹಾಲರವೆ ಉತ್ಸವವು ಬಹಳ ವಿಜೃಂಬಣೆಯಿಂದ ಜರುಗಿತು. ನೂರ ಒಂದು ಬಾಲಕಿಯರು ಉಪವಾಸವಿದ್ದು ಮಾದಪ್ಪನ ಬೆಡ್ಟದ 7 ಕಿಲೊಮೀಟರ್ ದೂರದಿಂದ ಹಳ್ಳಕ್ಕೆ ತೆರಳಿ ಮಡಿ ಮಾಡಿ ಹಾಲು ಹಳ್ಳ ಗಂಗೆಯನ್ನು ಹೊತ್ತು ಕಾಲ್ನಡಿಯೆಲ್ಲಿ ಸಾಗಿ ಪವಾಡ ಪುರುಷನ ಸನ್ನಿದಿಗೆ ಆಗಮಿಸಿ ವಿಶೇಷ ಪೂಜೆಯಲ್ಲಿ ತೊಡಗಿದರು. ನಂತರ ಮಾದಪ್ಪನ ಚಿನ್ನದ ತೇರು ಉತ್ಚವವು ಕಣ್ಮನ ಸೆಳೆಯಿತು.
ಸಾಕಷ್ಟು ಜನ ಬಿಗ್ ಬಾಸ್ ನೋಡೋದೆ ಸುದೀಪ್ ಗೋಸ್ಕರ. ಅವರು ಮಾತಾಡೋ ಶೈಲಿ. ಅವರು ಉಪಯೋಗಿಸೋ ಕಾಸ್ಟ್ಯೂಮ್, ಅವರ ಮಾತಿನ ಶೈಲಿ.. ಎಲ್ಲವೂ ಕೂಡ ವೀಕ್ಷಕರಿಗೆ ಬಹಳ ಅಚ್ಚುಮೆಚ್ಚು. ಸುದೀಪ್ ಇಲ್ಲದೇ ಬಿಗ್ ಬಾಸ್ ನೋಡಲು ಅಸಾಧ್ಯ ಎಂತಿದ್ದಾರೆ. https://ainlivenews.com/raichur-a-person-was-killed-for-not-lighting-firecrackers-five-arrested/ ಇನ್ನೂ ತಾಯಿ ಅಗಲಿಕೆಯಿಂದ ಕಳೆದ ವಾರ ಎಪಿಸೋಡ್ ಗೆ ಗೈರಾಗಿದ್ದ ಸುದೀಪ್ ಅವರು, ಈ ವಾರ ಎಂಟ್ರಿ ಕೊಡ್ತಾರ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪರೋಕ್ಷವಾಗಿ ಬಿಗ್ ಬಾಸ್ ಉತ್ತರ ಕೊಟ್ಟಿದೆ. ಎಲ್ಲ ಕಡೆಗಳಲ್ಲಿ ದೀಪಾವಳಿ ಆಚರಣೆ ಜೋರಾಗಿದೆ. ಶನಿವಾರವೂ ದೀಪಾವಳಿ ಹಬ್ಬ ಆಚರಣೆ ಇರುತ್ತದೆ. ಹೀಗಾಗಿ ಮನೆಯವರಿಗೆ ಗ್ರ್ಯಾಂಡ್ ಆಗಿ ರೆಡಿ ಆಗೋಕೆ ಅವಕಾಶ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಒಂದನ್ನು ಬಿಗ್ ಬಾಸ್ ನೀಡಿದ್ದರು. ಚಟುವಟಿಕೆ ಪ್ರಕಾರ ಖಾಸಗಿ ಬಟ್ಟೆ ಕಂಪನಿಯೊಂದರ ಕ್ಯಾಟ್ಲಾಗ್ನ ಕಳುಹಿಸಿಕೊಟ್ಟಿದ್ದರು ಬಿಗ್ ಬಾಸ್. ಅವರಿಷ್ಟದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ವಾರಾಂತ್ಯದ ಎಪಿಸೋಡ್ಗೆ ಕಳುಹಿಸಿಕೊಡುವುದಾಗಿ ಸೂಚನೆ ಬಂದಿದೆ. ಇಷ್ಟು ಗ್ರ್ಯಾಂಡ್ ಆಗಿ ವೀಕೆಂಡ್…
ಚಾಮರಾಜನಗರ: ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗುಸು-ಗುಸು ಚರ್ಚೆ ನಡೆಯುತ್ತಿದೆ, ಯಾರು ಬರ್ತಾರೆ ಎಂದು ನಿಖರ ಮಾಹಿತಿ ಇಲ್ಲಾ, ಕಾದು ನೋಡೋಣ, ಯಾರ್ಯಾರು ಬರ್ತಾರೆ ಅಂತಾ, ಚರ್ಚೆ ಅಂತೂ ಆಗುತ್ತಿದೆ. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು. ಇನ್ನೂ ರಾಜ್ಯ ಸರ್ಕಾರ ದಿವಾಳಿ ಎಂದಿದ್ದ ಪ್ರಹ್ಲಾದ್ ಜೋಶಿಗೆ ಕೇಂದ್ರ ಸರ್ಕಾರ ದಿವಾಳಿ ಆಗುತ್ತಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ತಿರುಗೇಟು ನೀಡಿದ್ದಾರೆ. ಮೋದಿ ಬಂದ ಮೇಲೆ ಎಷ್ಟು ಲಕ್ಷ ಕೋಟಿ ಸಾಲ ಮಾಡಿದ್ದಾರೆ ಅದನ್ನು ಹೇಳಲಿ ಎಂದು ಹೇಳಿದ್ದಾರೆ.
ರಾಯಚೂರು: ರಾಯಚೂರು ನಗರದ ರಾಗಿಮನಗಡ್ಡದಲ್ಲಿ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ ಮಾಡಿದ ಘಟನೆ ನಡೆದಿದೆ. ನರಸಿಂಹಲು(32) ಮೃತ ವ್ಯಕ್ತಿ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪರಸ್ಪರ ಕೇಸ್ ದಾಖಲಾಗಿದ್ದು, ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ಮನೆ ಹೊಂದಿರುವ ಮೃತ ನರಸಿಂಹ, ನಿನ್ನೆ ರಾತ್ರಿ ರಸ್ತೆಯಲ್ಲಿ ಅದೇ ಏರಿಯಾದ ಹುಡುಗರು ಪಟಾಕಿ ಹೊಡೆಯುತ್ತಿದ್ದರು. ಆಗ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಏರಿಯಾ ಹುಡುಗರು ಮಾತು ಕೇಳದ ಹಿನ್ನೆಲೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರಿಂದ ನರಸಿಂಹನ ಹತ್ಯೆ ಮಾಡಿದ್ದಾರೆ. ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿಲ್ಲ. ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಸ್ಪಷ್ಟನೆ ನೀಡಲಾಗಿದೆ.
ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಲ್ಲೊಂದು ಸಂಸ್ಥೆಯಲ್ಲಿ ನೀವು ಜಸ್ಟ್ ಡಿಗ್ರಿ ಪಾಸ್ ಮಾಡಿದ್ರೆ ಸಾಕು, ಕೈ ತುಂಬಾ ಸಂಬಳದ ಜೊತೆ ಉತ್ತಮ ಕೆಲಸ ಪಡೆಯಬಹುದು. https://ainlivenews.com/ta-sharavana-who-had-darshan-of-hasanamba-devi/ ಎಸ್, ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ನವೆಂಬರ್ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್(Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕರ್ನಾಟಕದಲ್ಲಿ 300 ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ: ಕರ್ನಾಟಕ ಲೋಕಾಯುಕ್ತ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಕರ್ನಾಟಕ ಲೋಕಾಯುಕ್ತ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳು: 03 ವರ್ಷಗಳು…
ಹಿಂದೂ ಧರ್ಮದಲ್ಲಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದು ಒಂದು ರೀತಿಯ ರೂಢಿ. ಈ ಕಾರಣಕ್ಕಾಗಿ ಪ್ರತಿಯೊಂದು ಮನೆಯಲ್ಲೂ ಪ್ರತ್ಯೇಕವಾದ ದೇವರ ಕೋಣೆಯನ್ನು ನಿರ್ಮಿಸಿರುತ್ತಾರೆ. ಆದರೆ, ಪೂಜೆಯ ಸಮಯದಲ್ಲಿ ನಾವು ಮಾಡುವ ಒಂದಿಷ್ಟು ತಪ್ಪುಗಳು ನಮಗೆ ಪೂಜೆಯ ಯಾವುದೇ ರೀತಿಯಾದ ಫಲ ಸಿಗದಂತೆ ಮಾಡುತ್ತದೆ. https://ainlivenews.com/ind-vs-nz-its-spinner-jadejas-charm-giants-record-udis/#google_vignette ಪ್ರತಿನಿತ್ಯ ದೇವರನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಜೀವನದ ಪ್ರತಿಯೊಂದು ಅಂಶವು ನಮ್ಮ ವೇದಗಳಲ್ಲಿ ವಿಜ್ಞಾನ ಅಥವಾ ನಂಬಿಕೆಯ ವಿಷಯವಾಗಿದೆ. ಪೂಜೆಯ ನಿಜವಾದ ವಿಧಾನ ಯಾವುದು ಎಂಬುದನ್ನು ನಾವಿಂದು ತಿಳಿಯೋಣ. ಸಾಮಾನ್ಯವಾಗಿ, ಮಧ್ಯಾಹ್ನ ಪೂಜೆ ಮಾಡಬೇಕೋ ಬೇಡವೋ ಎಂಬ ಸಂದೇಹ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇರುತ್ತದೆ. ಹಿಂದೂ ಧರ್ಮದ ಪ್ರಕಾರ, ಸೂರ್ಯೋದಯದ ನಂತರ ಮುಂಜಾನೆ ಪೂಜೆಗೆ ಉತ್ತಮ ಸಮಯ ಎಂದು ಹೇಳಲಾಗುತ್ತದೆ. ಮುಂಜಾನೆ ದೇವರ ಪೂಜೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬ್ರಹ್ಮಮುಹೂರ್ತದಲ್ಲಿ ಎಂದರೆ ಮುಂಜಾನೆ 3:30 ರಿಂದ 5:30 ರವರೆಗಿನ ಸಮಯವು ಅತ್ಯುತ್ತಮ ಸಮಯವಾಗಿದೆ. ಮಧ್ಯಾಹ್ನ ಮಾಡುವ ಪೂಜೆಯನ್ನು…
ಶಿವಮೊಗ್ಗ: ಕಳೆದ ವಾರ ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದ ರಾಜೇಶ್ ಹಾಗೂ ಅಶ್ವಿನಿ ದಂಪತಿ ಪುತ್ರ ಅಥರ್ವ (2) ಮೃತ ಬಾಲಕ. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ರಾಜೇಶ್ ಅವರ ನೆರೆಮನೆ ನಿವಾಸಿ ಕಳೆದ ವಾರ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಅಶ್ವಿನಿ ಟೀ ಮಾಡಿಟ್ಟಿದ್ದರು. ಟೀ ಇರುವ ಪಾತ್ರೆಯನ್ನು ಮಗು ತನ್ನ ಮೈಮೇಲೆ ಬೀಳಿಸಿಕೊಂಡು ಗಾಯವಾಗಿತ್ತು. ಕಳೆದೊಂದು ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ರವೀಂದ್ರ ಜಡೇಜಾ ಅವರು, ದಿಗ್ಗಜರ ದಾಖಲೆ ಉಡೀಸ್ ಮಾಡಿದ್ದಾರೆ. https://ainlivenews.com/kti-yojana-revision-issue-what-did-minister-v-somanna-say/ ಭಾರತ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ 235 ರನ್ಗಳಿಗೆ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಕಿವೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ ಖಾತೆಗೆ ಜಾರಿದ ಬಿದ್ದ ವಿಕೆಟ್ಗಳ ಪೈಕಿ, ವಿಲ್ ಯಂಗ್, ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್, ಇಶ್ ಸೋಧಿ ಹಾಗೂ ಮ್ಯಾಟ್ ಹೆನ್ರಿ ಸೇರಿದ್ದಾರೆ. ದಿನದಾಟದ ಮೊದಲೆರಡು ಸೆಷನ್ಗಳಲ್ಲಿ ಮೂರು ವಿಕೆಟ್ ಉರುಳಿಸಿದ್ದ ಜಡೇಜಾ, ಚಹಾ ವಿರಾಮದ ಮೊದಲು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಉರುಳಿಸಿದರು. ಈ ಮೂಲಕ ಜಡೇಜಾ ವಿಶಿಷ್ಟ ದಾಖಲೆಯನ್ನು ಮಾಡಿದರು. ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಉರುಳಿಸುವ ಮೂಲಕ ರವೀಂದ್ರ ಜಡೇಜಾ, ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು…