ಬೆಂಗಳೂರು:- ನಗರದಲ್ಲಿ ದೀಪಾವಳಿ ಸಂಭ್ರಮದ ಜೊತೆ ಪಟಾಕಿ, ಸದ್ದು ಜೋರಾಗಿದೆ. ಪಟಾಕಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ವಾಯುಮಾಲಿನ್ಯ ಬಹಳಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. https://ainlivenews.com/khaki-attack-on-adde-who-was-playing-ispeet-with-lakhs-of-lakhs-pepper-spray-on-the-police/ ಕಳೆದ ವಾರ 50ರ ಆಸುಪಾಸಿನಲ್ಲಿದ್ದಂತಹ ವಾಯು ಪ್ರಮಾಣ ಎರಡು-ಮೂರು ದಿನದಲ್ಲಿ 100ರ ಗಡಿ ದಾಟಿದ್ದು, ಕಳಪೆ ಗುಣಮಟ್ಟದ ಗಾಳಿಯನ್ನ ಹೊಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 50 ಎಕ್ಯೂ ಇದ್ದರೆ ಉತ್ತಮ ಗಾಳಿ ಎಂದರ್ಥ. 60 ರಿಂದ 80 ರ ಗಡಿಯಲ್ಲಿದ್ದರೆ ಸಾಧಾರಣ ಗುಣಮಟ್ಟದಲ್ಲಿದೆ. 100 ರಿಂದ 150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲದ ಗಾಳಿ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130ರ ಗಡಿ ದಾಟಿದೆ. ಇಂದಿನ ಗಾಳಿಯ ಗುಣಮಟ್ಟವಿದೆ ಜಯನಗರದಲ್ಲಿ – 124 ಎಕ್ಯೂ ಬಿಟಿಎಂ ಲೇಔಟ್ – 130 ಎಕ್ಯೂ ಬಾಪುಜಿನಗರ – 110 ಎಕ್ಯೂ ಸಿಲ್ಕ್ ಬೋರ್ಡ್- 97 ಎಕ್ಯೂ ಮಹದೇವಪುರ – 74 ಎಕ್ಯೂ…
Author: AIN Author
ಬೆಂಗಳೂರು:- ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ನವಿಲುನಗರದ ಇಟ್ಟಿಗೆ ಗೂಡಿನಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಪೆಪ್ಪರ್ ಸ್ಪ್ರೇ ದಾಳಿ ಮಾಡಿರುವ ಘಟನೆ ಜರುಗಿದೆ. https://ainlivenews.com/today-is-the-last-day-for-hassanambe-darshan-2/ ರೌಡಿಶೀಟರ್ ಕ್ಯಾಟ್ ರಾಜನ ಸಹಚರರು ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಮಾಹಿತಿ ಮೇರೆಗೆ ಇಂದು ಸಂಜೆ ಎಸಿಪಿ ಚಂದನ್ & ಟೀಂ ದಾಳಿ ನಡೆಸಿತು. ಸುಮಾರು 30 ಜನ ಲಕ್ಷ ಲಕ್ಷ ಹಣ ಬಾಜಿ ಕಟ್ಟಿ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಸ್ಪೀಟ್ ಅಡ್ಡೆ ಮೇಲಿನ ದಾಳಿ ವೇಳೆ ಪೊಲೀಸರ ಮೇಲೆ ಆರೋಪಿಗಳು ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆ ಬಳಿಕ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಸ್ಥಳದಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಇಸ್ಪೀಟ್ ಆಡುತ್ತಿದ್ದ 13 ಆರೋಪಿಗಳನ್ನು ಬಂಧಿಸಲಾಗಿದೆ. 3.80 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಾಸನ:- ವರ್ಷಕ್ಕೆ ಒಂದು ಬಾರಿ ಮಾತ್ರ ಬಾಗಿಲು ತೆರೆಯುವ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದೆ. https://ainlivenews.com/ipl-2025-why-did-rcb-release-siraj-heres-the-real-reason/ ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದ್ದು ಸಂಪ್ರಾಯದಂತೆ ನವೆಂಬರ್ 03 ರಂದು ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಅಕ್ಟೋಬರ್ 24 ರಂದು ಮಧ್ಯಾಹ್ನ 12:15 ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗಿತ್ತು. ಅಂದಿನಿಂದ ಇವತ್ತಿನವರೆಗೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಹಾಸನಾಂಬೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರದಿಂದ ವಿವಿಐಪಿ ಹಾಗೂ ವಿಐಪಿ ಪಾಸ್ಗಳು ರದ್ದು ಮಾಡಲಾಗಿದೆ. ರವಿವಾರ ನಸುಕಿನ ಜಾವ 4 ಗಂಟೆವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಭಕ್ತಾದಿಗಳ ದಂಡೇ ಹರಿದು ಬರುತ್ತಿದೆ.
ಗೋವರ್ಧನ ಪೂಜಾ ಸೂರ್ಯೋದಯ: 06:19, ಸೂರ್ಯಾಸ್ತ : 05:40 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ಪಾಡ್ಯಾಮಿ ನಕ್ಷತ್ರ: ವಿಶಾಖಾ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ರಾ .8:16 ನಿಂದ ರಾ .10:02 ತನಕ ಅಭಿಜಿತ್ ಮುಹುರ್ತ: ಬೆ.11:36 ನಿಂದ ಮ.12:22 ತನಕ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ…
ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಕೇವಲ ಮೂವರು ಆಟಗಾರನ್ನು ಮಾತ್ರ ರೀಟೈನ್ ಮಾಡಿಕೊಂಡಿದ್ದು, ತಂಡದ ಸ್ಟಾರ್ ಆಟಗಾರರನ್ನೇ ಕೈ ಬಿಟ್ಟಿದೆ. ಕ್ಯಾಪ್ಟನ್ ಫಾಪ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್ ಸೇರಿದಂತೆ ಹಲವರನ್ನು ಆಟಗಾರರನ್ನು ಆರ್‌ಸಿಬಿ ಕೈ ಬಿಟ್ಟಿದೆ. https://ainlivenews.com/lucknow-owner-insulted-by-kl-rahul-do-you-know-anything-about-kannadigas/ ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿರೋ ಆರ್‌ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದೆ. ಆದರೆ, ತಂಡದ ಬೌಲಿಂಗ್ ವಿಭಾಗದ ಆಧಾರಸ್ಥಂಬ ಆಗಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಟೀಮ್ ಇಂಡಿಯಾದ ಆಲ್ ಫಾರ್ಮೇಟ್ ಪ್ಲೇಯರ್ ಮೊಹಮ್ಮದ್ ಸಿರಾಜ್ ಅವರು. ಇವರನ್ನು ಕೈ ಬಿಟ್ಟು ಆರ್‌ಸಿಬಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್ನಲ್ಲಿ ಸಿರಾಜ್ಗಿಂತಲೂ ಯಶ್ ದಯಾಳ್ ಅತ್ಯುತ್ತಮ ಪ್ರದರ್ಶನ ನೀಡಿದ್ರು. ದಯಾಳ್ ತಾನು ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ರು. ಆರ್‌ಸಿಬಿ ತಂಡವನ್ನು ಪ್ಲೇ-ಆಫ್‌ಗೆ ಕರೆದೊಯ್ಯುವಲ್ಲಿ ದಯಾಳ್…
ಈ ಬಾರಿಯ ಐಪಿಎಲ್ 2025ರ ಮೆಗಾ ಹರಾಜಿಗೆ ಕೆಎಲ್ ರಾಹುಲ್ ಬಂದಿದ್ದು, ಭಾರೀ ಕುತೂಹಲ ಮೂಡಿಸಿದೆ. https://ainlivenews.com/renowned-economic-expert-vivek-debaroi-passed-away-condolences-from-many-including-pm-modi/ ರೀಟೆನ್ಷನ್ ಬಳಿಕ ಕೆ.ಎಲ್ ರಾಹುಲ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಾಲಿಗೆ ಹರಿಬಿಟ್ಟಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಆಡೋರು ನಮಗೆ ಬೇಕಿಲ್ಲ. ತಂಡದ ಗೆಲುವಿಗೆ ಆಡೋ ಆಟಗಾರರನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ. ಎಲ್ಲೂ ಕೆ.ಎಲ್ ರಾಹುಲ್ ಹೆಸರು ಹೇಳದೆ ಆಕ್ರೋಶ ಹೊರಹಾಕಿದ್ದಾರೆ. ಇವರ ಹೇಳಿಕೆ ಎಲ್ಲೆಡೆ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮೆಗಾ ಆಕ್ಷನ್ಗೆ ಮುನ್ನವೇ ಕ್ಯಾಪ್ಟನ್ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ದೂರ ಆಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೆ.ಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲು ಲಕ್ನೋ ತಂಡ ಮುಂದಾಗಿತ್ತು. ಆದರೆ, ಇವರು ಪರ್ಸನಲ್ ಮತ್ತು ಪ್ರೊಫೆಷನಲ್ ಕಾರಣಕ್ಕೆ ತಂಡ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನವದೆಹಲಿ:- ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಧೀಮಂತ ಆರ್ಥಿಕ ತಜ್ಞ ವಿವೇಕ್ ದೇಬರಾಯ್ ವಿಧಿವಶರಾಗಿದ್ದಾರೆ.69 ವರ್ಷದ ವಿವೇಕ್ ದೇವರಾಯ್ ಕೆಲ ವರ್ಷಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ವಿವೇಕ್ ದೇಬ್ರಾಯ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ಡಾ. ಬಿಬೇಕ್ ದೇಬ್ರಾಯ್ ಅವರು ಆರ್ಥಿಕತೆ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆದ್ಯಾತ್ಮ ಮತ್ತಿತರ ವಿಚಾರಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಭಾರತದ ಬೌದ್ಧಿಕ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿ ಹೋಗಿದ್ದಾರೆ. ಸಾರ್ವಜನಿಕ ನೀತಿಗೆ ಕೊಡುಗೆ ನೀಡುವುದರ ಜೊತೆಗೆ, ನಮ್ಮ ಪ್ರಾಚೀನ ಪಠ್ಯಗಳೊಂದಿಗೆ ಕೆಲಸ ಮಾಡಲು ಖುಷಿ ಪಡುತ್ತಿದ್ದರು,’ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ಪದ್ಮಶ್ರೀ ಮೊದಲಾದ ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುವ ವಿವೇಕ್ ದೇಬ್ರಾಯ್ ಅವರು ಮೇಘಾಲಯದಲ್ಲಿ ಜನಿಸಿದರೂ, ಮುಖ್ಯವಾಗಿ ಓದಿದ್ದು ಕೋಲ್ಕತಾದಲ್ಲಿ. ಲಂಡನ್ನ ಕೇಂಬ್ರಿಡ್ನಲ್ಲಿ ಅರ್ಥಶಾಸ್ತ್ರದ ಉನ್ನತ ಶಿಕ್ಷಣ ಪಡೆದಿದ್ದರು.
ನಿಮ್ಮ ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛವಾಗಿ ಮತ್ತು ಧೂಳು ಮುಕ್ತವಾಗಿರಿಸಿಕೊಳ್ಳುವುದು ಮುಖ್ಯ. ಇದು ನಿಮ್ಮ ಮನೆಯ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಸುರಕ್ಷಿತ ಕೂಡ. ಅಲುಗಾಡುವ ಸೀಲಿಂಗ್ ಫ್ಯಾನ್‌ನ ಮುಖ್ಯ ಸಮಸ್ಯೆ ಧೂಳು. ಎತ್ತರದ ಸೀಲಿಂಗ್‌ನಲ್ಲಿ ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛಗೊಳಿಸುವುದು ಸ್ವಲ್ಪ ಕಷ್ಟಕರವೇ, ಆದರೆ ಅದನ್ನೂ ಸ್ವಚ್ಚ ಮಾಡಲು ಸುಲಭ ಮಾರ್ಗಗಳಿವೆ. https://ainlivenews.com/there-is-discussion-about-jds-mlas-coming-to-congress-minister-k-venkatesh/ ಹಬ್ಬದ ವೇಳೆ ಮನೆಯ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡೋದು ಸ್ವಲ್ಪ ರಿಸ್ಕಿ ವಿಚಾರ. ಹೀಗಾಗಿ ಕೆಲವರು ಅದು ಕಷ್ಟನಪ್ಪಾ ಅಂತಾ ಫ್ಯಾನ್ ಮೇಲೆ ಧೂಳು ಹೊಡೆದುಕೊಂಡು ಸುಮ್ನಾಗಿರ್ತಾರೆ. ಆದ್ರೆ ಮನೆ ಸ್ವಚ್ಛವಾಗಿ ಕಾಣೋದು ಮನೆಯ ಎಲ್ಲಾ ಭಾಗ ಸ್ವಚ್ಛವಾಗಿದ್ರೆ ಮಾತ್ರವೇ, ಆ ಫ್ಯಾನ್ ಒಂದು ಗಲೀಜಾಗಿ ಕಂಡ್ರೆ ಏನ್ ಚೆಂದ ಹೇಳಿ. ಈಸಿಯಾಗಿ ಮತ್ತೆ ಫಳಫಳ ಹೊಳೆಯುವಂತೆ ಫ್ಯಾನ್ ಕ್ಲೀನ್ ಮಾಡಲು ಒಂದಿಷ್ಟು ಟಿಪ್ಸ್‌ಗಳನ್ನು ನಿಮಗಾಗಿ ಹೇಳ್ತೀವಿ ಕೇಳಿ. ಉದ್ದನೆಯ ಸಾಫ್ಟ್ ಡಸ್ಟರ್ ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛಗೊಳಿಸಲು ಇದು ಸುಲಭವಾದ ಮಾರ್ಗಗಳಲ್ಲಿ…
ಬೆಂಗಳೂರು:- ಸಿದ್ದರಾಮಯ್ಯ CM ಸ್ಥಾನದಿಂದ ಇಳಿದ್ರೆ ಕರ್ನಾಟಕದಲ್ಲಿ ಕ್ರಾಂತಿ ಗ್ಯಾರಂಟಿ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. https://ainlivenews.com/will-there-be-a-panchayat-this-week-too-people-are-bored-to-watch-the-show/ ಈ ಸಂಬಂಧ ಮಾತನಾಡಿದ ಅವರು,ಎಂದಾದರೂ ಒಂದು ದಿನ ಯಾವುದಾದರೂ ಶಕ್ತಿ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸೋಕೆ ಹೋದರೆ ಕರ್ನಾಟಕದಲ್ಲಿ ಕ್ರಾಂತಿ ಆಗುತ್ತೆ. ಇದು ಸಿದ್ದರಾಮಯ್ಯ ಅಂತಾ ಪ್ರಶ್ನೆ ಅಲ್ಲ, ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತೆ. ಈ ಬಗ್ಗೆ ಎಲ್ಲಾ ಪಕ್ಷದವರು ಚಿಂತನೆ ಮಾಡಬೇಕು ಎಂದು ಹೇಳಿದ್ದಾರೆ. ಸ್ನೇಹ ಇದೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳುತ್ತಿಲ್ಲ. 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯಗೆ ಏನೂ ಸಿಕ್ಕಿಲ್ಲ. ಯಾರೇ ಬೀದಿಯಲ್ಲಿ ಹೋಗುವವರಿಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟರು. ವಿರೋಧ ಪಕ್ಷದವರು ಎತ್ತಿಕಟ್ಟಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ. ಸಿಎಂಗೆ ನೋಟಿಸ್ ಕೊಟ್ಟಿದ ದಿನವೇ ರಾಜ್ಯಪಾಲರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ್ದೇ ನಾನು ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಯಾರೂ ಇಲ್ಲ. ಸಂವಿಧಾನ ಬದ್ಧವಾಗಿ ಯಾರೂ ಬೇಕಾದರೂ ಸಿಎಂ ಆಗಬಹುದು. ಆದರೆ ಸಿದ್ದರಾಮಯ್ಯ ಇತಿಹಾಸವೇನು,…
ಧಾರವಾಡ : ಕನ್ನಡ ನಾಡು ಉದಯವಾಗಿ ಅರವತ್ತೆಂಟು ವರ್ಷವಾಯಿತು. ಒಂದೆಡೆ ಅಭಿವೃದ್ದಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ,ಉಡುಗೆ ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿದೆ. ಕನ್ನಡಿಗರು ಎಚ್ಚೆತ್ತುಕೊಂಡು ಅಚ್ಚಕನ್ನಡದಲ್ಲಿ ಮಾತನಾಡೋದು, ಪ್ರಾಥಮಿಕ ಶಿಕ್ಷಣವನ್ನು ಕನ್ನಡಭಾಷೆಯಲ್ಲಿ ಕಲಿಸುವುದು. ಕನ್ನಡದ ಪುಸ್ತಕ, ದಿನ ಪತ್ರಿಕೆಗಳನ್ನು ಕೊಂಡು ಓದುವಂತಾಗಬೇಕಿದೆ ಎಂದು ವೈ.ಜಿ ಭಗವತಿ ಹೇಳಿದರು. https://ainlivenews.com/2-60-lakhs-per-month-salary-there-is-a-great-job-opportunity-in-bangalore-apply-today/ ತಾಲೂಕಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಭಾಗವಹಿಸಿ ಮಾತನಾಡಿದರು. ಅನೇಕ ಕವಿಗಳು, ದಾರ್ಶನಿಕರು ಈ ನಾಡಿನ ಹಿರಿಮೆಯನ್ನು ಬೆಳೆಸಿದ್ದಾರೆ. ಇಂದಿನ ನವ ಪೀಳಿಗೆ ಇದನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಪ್ರತಿಯೊಬ್ಬರು ಕನ್ನಡ ನಾಡಿನ ಬಗ್ಗೆ ಅಭಿಮಾನ ಹೊಂದಬೇಕಾಗಿದೆ ಎಂದರು.