ದೆಹಲಿ:- ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ಮಾಡಿದ್ದಾರೆ. ಗ್ಯಾರಂಟಿ ಟೀಕಿಸಿದ ಮೋದಿ ವಿರುದ್ಧ ಟೀಕಿಸಿದ ಖರ್ಗೆ, ಸುಳ್ಳು, ವಂಚನೆ, ನಕಲಿ, ಲೂಟಿ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರಗಳು ಎಂದರು. https://ainlivenews.com/fanatic-jameer-will-be-sent-to-pakistan-soon-renukacharya/ ನಿಮ್ಮ ಸರ್ಕಾರದ 100 ದಿನಗಳ ಯೋಜನೆ ಅನ್ನೋದು ಬಿಟ್ಟಿ ಪ್ರಚಾರ. ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ವಾಗ್ದಾಳಿ ಮಾಡಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ನಿಮ್ಮ ಭರವಸೆ ಏನಾಯ್ತು? ಭಾರತದ ನಿರುದ್ಯೋಗ ದರವು 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಯಾಕೆ? ಜನರ ಉಳಿತಾಯದ ಮಟ್ಟ ಕನಿಷ್ಟ ಮಟ್ಟಕ್ಕೆ ಏಕೆ ಕುಸಿದಿದೆ. ನಿಮ್ಮ ಅಚ್ಛೇ ದಿನದ ಭರವಸೆ ಏನಾಯ್ತು ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ ಮಹಾರಾಷ್ಟ್ರದಲ್ಲಿ ನೀವು ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ದೆಹಲಿ ಏರ್ಪೋರ್ಟ್ನ ಮೇಲ್ಚಾವಣಿ ಹಾರಿಹೋಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…
Author: AIN Author
ದಾವಣಗೆರೆ:- ಮತಾಂಧ ಜಮೀರ್ ನನ್ನು ಶೀಘ್ರವೇ ಪಾಕಿಸ್ತಾನಕ್ಕೆ ಕಳಿಸ್ತೀವಿ ಎಂದು MP ರೇಣುಕಾಚಾರ್ಯ ಹೇಳಿದ್ದಾರೆ. https://ainlivenews.com/pundara-durbar-in-bangalore-firecrackers-crackle-while-the-bike-is-running/ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇಣುಕಾಚಾರ್ಯ, ಸಚಿವ ಜಮೀರ್ ಓರ್ವ ಮತಾಂಧ. ರೈತರ ಭೂಮಿ, ಹಿಂದೂಗಳ ಸ್ಮಶಾನ ಮತ್ತು ಮಠಮಾನ್ಯಗಳ ಜಾಗಗಳನ್ನು ಕಬಳಿಸಲು ಹುನ್ನಾರ ಮಾಡಿದ್ದಾನೆ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ. ಜಮೀರ್ ಅಹ್ಮದ್ ಅಲ್ಪಸಂಖ್ಯಾತರ ಸಚಿವರಾ..? ರಾಜ್ಯಕ್ಕೆ ಸಂಬಂಧಿಸಿದ ಸಚಿವರಾ..? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು. ಇನ್ನೂ ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಕನ್ಫರ್ಮ್. ನಂತರ ಈ ಸರ್ಕಾರ ಬಹಳ ದಿನಗಳ ಕಾಲ ಉಳಿಯಲ್ಲ ಸರ್ಕಾರ ಪತನ ಆಗುತ್ತೆ. ಆಗ ಜಮೀರ್ ಅಹಮದ್ ಅವರನ್ನ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಮಿಸ್ಟರ್ ಜಮೀರ್ ಅಹ್ಮದ್ ನಿಮ್ಮನ್ನ ವಜಾ ಮಾಡದಿದ್ದರೆ ಈ ಸರ್ಕಾರ ವಜಾ ಮಾಡುವ ಶಕ್ತಿ ಜನರಿಗೆ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಿಂದೂ ಸ್ಮಶಾನಗಳು ಮಠಗಳ ಆಸ್ತಿಯನ್ನ ಕಬಳಿಸಲು ನೋಟಿಸ್ ಕೊಟ್ಟಿದ್ದಾರೆ. ಆದರೆ…
ಬೆಂಗಳೂರು:-ಇದು ಎಂಥಾ ಸಾವು ಮರ್ರೆ, ಬೆಂಗಳೂರಿನಲ್ಲಿ ನಿಜಕ್ಕೂ ಕಾನೂನು ಸುವ್ಯವಸ್ಥೆ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ನಗರದಲ್ಲಿ ಪುಡಾರಿ ಪುಂಡರುಗಳ ಹಾವಳಿ ಜೋರಾಗಿದೆ. ಇವರಿಗೆ ಯಾವ ಪೊಲೀಸರ ಭಯವೂ ಇಲ್ಲ. ಪೊಲೀಸರೂ ಅಷ್ಟೇ ಇವರಿಗೆ ವಾರ್ನ್ ಮಾಡುವ ಗೋಜಿಗೂ ಹೋಗಲ್ಲ. https://ainlivenews.com/fire-accident-in-hospital-on-diwali-disaster-missed-patients-shifted/ ಎಸ್, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಇವರಿಗೆ ಯಾವ ಪೊಲೀಸರ ಭಯವೂ ಇಲ್ಲವೇ ನಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಎಸ್, ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ವಾಹನ ಸವಾರರ ಮೇಲೆ ಇಬ್ಬರು ಪಟಾಕಿ ಸಿಡಿಸಿದ್ದಾರೆ. ಬೆಂಗಳೂರಿನ ಹೆಚ್‌ಬಿಆರ್ ಲೇ ಔಟ್‌ನಲ್ಲಿ ಘಟನೆ ಇಬ್ಬರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯಲ್ಲಿ ಪಟಾಕಿ ಹಚ್ಚಿದ್ದಾರೆ. ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಪಟಾಕಿಯನ್ನು ರಸ್ತೆಗೆ ಎಸೆಯುತ್ತಿರುವುದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರನ್ನು ಹೆಣ್ಣೂರು ಠಾಣೆಯ ಪೊಲೀಸರು ಬಂದಿಸಿದ್ದಾರೆ.
ಚಿಕ್ಕಮಗಳೂರು:- ಜಿಲ್ಲೆಯ ಸ್ಪಂದನಾ ಆಸ್ಪತ್ರೆಯಲ್ಲಿ ದೀಪಾವಳಿ ಹಬ್ಬದ ದಿನವೇ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ. https://ainlivenews.com/firecrackers-hit-the-shop-and-all-the-items-were-burnt/ ಘಟನೆ ಹಿನ್ನೆಲೆ ರೋಗಿಗಳನ್ನು ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಗರದ ಸೇಂಟ್ ಜೋಸೆಫ್ ಶಾಲಾ ಮುಂಭಾಗವಿರುವ ಸ್ಪಂದನಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿರುವಂತಹ ಘಟನೆ ನಡೆದಿದೆ. ಕಟ್ಟಡದ ಕೆಳಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರೋಗಿಗಳು, ಸಿಬ್ಬಂದಿಗಳು ಹೊರಬಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 10ಕ್ಕೂ ಹೆಚ್ಚು ರೋಗಿಗಳನ್ನು ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಪಂದನ ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆಯನ್ನು ಸಂಪೂರ್ಣ ಬಂದ್ ಮಾಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರು:- ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸುತ್ತಿದ್ದ ವೇಳೆ ಬೆಂಕಿ ಕಿಡಿ ಅಂಗಡಿಗೆ ತಗುಲಿ ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾದ ಘಟನೆ ಜರುಗಿದೆ. https://ainlivenews.com/21-crore-salary-king-kohli-created-a-new-history/ ನಗರದ ಸದರಬಜಾರ್ ಪೊಲೀಸ್ ಠಾಣೆ ಎದುರು ಘಟನೆ ಜರುಗಿದೆ. ಬಟ್ಟೆ ತಯಾರಿಸುವ ಉಲ್ಲನ್ ದಾರದ ಅಂಗಡಿಗೆ ಪಟಾಕಿ ಕಿಡಿ ತಗುಲಿ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ವೇಳೆ ಅದೇ ಮಾರ್ಗವಾಗಿ ತಾಯಿ ಭುವನೇಶ್ವರಿ ಮೆರವಣಿಗೆ ಸಾಗುತ್ತಿತ್ತು. ಬೆಂಕಿ ಅವಘಡ ಹಿನ್ನೆಲೆ ಕನ್ನಡಾಂಬೆ ಮೆರವಣಿಗೆಗೆ ಅಡ್ಡಿಯುಂಟಾಗಿದೆ. ಬೆಂಕಿ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ಕನ್ನಡಾಂಬೆ ಮೆರವಣಿಗೆ ಸ್ಥಗಿತಗೊಂಡಿದೆ.
IPL 2025 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು ಬರೋಬ್ಬರಿ 21 ಕೋಟಿ ಸಂಭಾವನೆ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. https://ainlivenews.com/it-is-regrettable-that-pudari-lies-as-the-prime-minister-of-the-country-pm-modi-got-it/ ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿಯೇ ಇತ್ತು. 2021 ರಲ್ಲಿ ಕೊಹ್ಲಿಯನ್ನು ಆರ್ಸಿಬಿ 17 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದ್ದರು. ಆದರೆ ಈ ಬಾರಿ 21 ಕೋಟಿ ರೂ. ಪಡೆಯುವ ಮೂಲಕ ಐಪಿಎಲ್ನಲ್ಲಿ ಇಪ್ಪತ್ತು ಕೋಟಿಗೂ ಅಧಿಕ ಮೊತ್ತ ಪಡೆದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಹಾಗೆಯೇ ಈ 21 ಕೋಟಿ ರೂ.ನೊಂದಿಗೆ ವಿರಾಟ್ ಕೊಹ್ಲಿಯ ಒಟ್ಟು ಐಪಿಎಲ್ ಗಳಿಕೆಯು 200 ಕೋಟಿ ರೂ. ದಾಟಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಈಗಲೂ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಡೆಕ್ಕನ್…
ಬೆಂಗಳೂರು:- ದೇಶದ ಪ್ರಧಾನಿಯಾಗಿ “ಪುಡಾರಿ” ರೀತಿ ರೀತಿ ಸುಳ್ಳು ಹೇಳುವುದು ವಿಷಾದನೀಯ ಎಂದು ಹೇಳುವ ಮೂಲಕ PM ಮೋದಿಗೆ CM ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. https://ainlivenews.com/a-social-worker-came-back-empty-handed-for-the-golden-jubilee-award/ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಪ್ರಧಾನಿ ಮೋದಿಗೆ X ನಲ್ಲೇ ಟಾಂಗ್ ಕೊಟ್ಟಿರುವ ಸಿದ್ದು, ಈ ಮೇಲಿನ ಹೇಳಿಕೆಯನ್ನು ಉಲ್ಲೇಖ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದಿದ್ದಾರೆ. ಪ್ರಧಾನಿ ಮೋದಿ ಅವರೇ, ಇಂದು ಕನ್ನಡ ರಾಜ್ಯೋತ್ಸವದ ದಿನ. “ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಎಂದು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಕಾವ್ಯವನ್ನು ನಾಡಗೀತೆಯಾಗಿ ಸ್ವೀಕರಿಸಿರುವ ಕರ್ನಾಟಕ, ಭಾರತಕ್ಕೆ ತಾಯಿಯ ಸ್ಥಾನವನ್ನು ನೀಡಿದೆ. ಇದೇ ಪ್ರೀತಿ…
ಬೆಂಗಳೂರು:- ರಾಜ್ಯ ಸರ್ಕಾರದ ಎಡವಟ್ಟಿನಿಂದ ಸುವರ್ಣ ಮಹೋತ್ಸವ ಪ್ರಶಸ್ತಿಗಾಗಿ ಬಂದು ಸಮಾಜ ಸೇವಕರೋರ್ವರು ಬರಿಗೈಲಿ ವಾಪಸ್ ಆದ ಘಟನೆ ಜರುಗಿದೆ. https://ainlivenews.com/diwali-effect-air-pollution-has-increased-in-bangalore/ ಸುವರ್ಣ ಮಹೋತ್ಸವ ಪ್ರಶಸ್ತಿಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕರೊಬ್ಬರಿಗೆ ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು ಹೋಗಬೇಕು ಎನ್ನುವಷ್ಟರಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಮಂಗಳೂರಿನ ಸಮಾಜ ಸೇವಕ ಬಾಬು ಪಿಲಾರ್ ಅವಮಾನ ಮಾಡಿದ್ದಾರೆ. ಖುದ್ದು ಇಲಾಖೆ ಅಧಿಕಾರಿ ನೀಲಮ್ಮ ಎನ್ನುವರು ನಿಮ್ಮನ್ನು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಂಗಳೂರಿನಿಂದ ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾರೆ. ಅಲ್ಲದೇ ಕುಮಾರಕೃಪಾ ಅತಿಥಿ ಗೃಹದಲ್ಲಿ ಅತಿಥ್ಯ ನೀಡಿ ಕೊನೆ ಕ್ಷಣದಲ್ಲಿ ನೀವು ಅವರಲ್ಲ. ನಿಮಗೆ ಪ್ರಶಸ್ತಿ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಬಂದಿರುವ ಸಮಾಜ ಸೇವಕ ಬಾಬು ಪಿಲಾರ್ ಕಂಗಾಲಾಗಿದ್ದಾರೆ. ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಂಕೀರ್ಣ…
ಬೆಂಗಳೂರು:- ನಗರದಲ್ಲಿ ದೀಪಾವಳಿ ಸಂಭ್ರಮದ ಜೊತೆ ಪಟಾಕಿ, ಸದ್ದು ಜೋರಾಗಿದೆ. ಪಟಾಕಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ವಾಯುಮಾಲಿನ್ಯ ಬಹಳಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. https://ainlivenews.com/khaki-attack-on-adde-who-was-playing-ispeet-with-lakhs-of-lakhs-pepper-spray-on-the-police/ ಕಳೆದ ವಾರ 50ರ ಆಸುಪಾಸಿನಲ್ಲಿದ್ದಂತಹ ವಾಯು ಪ್ರಮಾಣ ಎರಡು-ಮೂರು ದಿನದಲ್ಲಿ 100ರ ಗಡಿ ದಾಟಿದ್ದು, ಕಳಪೆ ಗುಣಮಟ್ಟದ ಗಾಳಿಯನ್ನ ಹೊಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 50 ಎಕ್ಯೂ ಇದ್ದರೆ ಉತ್ತಮ ಗಾಳಿ ಎಂದರ್ಥ. 60 ರಿಂದ 80 ರ ಗಡಿಯಲ್ಲಿದ್ದರೆ ಸಾಧಾರಣ ಗುಣಮಟ್ಟದಲ್ಲಿದೆ. 100 ರಿಂದ 150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲದ ಗಾಳಿ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130ರ ಗಡಿ ದಾಟಿದೆ. ಇಂದಿನ ಗಾಳಿಯ ಗುಣಮಟ್ಟವಿದೆ ಜಯನಗರದಲ್ಲಿ – 124 ಎಕ್ಯೂ ಬಿಟಿಎಂ ಲೇಔಟ್ – 130 ಎಕ್ಯೂ ಬಾಪುಜಿನಗರ – 110 ಎಕ್ಯೂ ಸಿಲ್ಕ್ ಬೋರ್ಡ್- 97 ಎಕ್ಯೂ ಮಹದೇವಪುರ – 74 ಎಕ್ಯೂ…
ಬೆಂಗಳೂರು:- ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ನವಿಲುನಗರದ ಇಟ್ಟಿಗೆ ಗೂಡಿನಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಪೆಪ್ಪರ್ ಸ್ಪ್ರೇ ದಾಳಿ ಮಾಡಿರುವ ಘಟನೆ ಜರುಗಿದೆ. https://ainlivenews.com/today-is-the-last-day-for-hassanambe-darshan-2/ ರೌಡಿಶೀಟರ್ ಕ್ಯಾಟ್ ರಾಜನ ಸಹಚರರು ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಮಾಹಿತಿ ಮೇರೆಗೆ ಇಂದು ಸಂಜೆ ಎಸಿಪಿ ಚಂದನ್ & ಟೀಂ ದಾಳಿ ನಡೆಸಿತು. ಸುಮಾರು 30 ಜನ ಲಕ್ಷ ಲಕ್ಷ ಹಣ ಬಾಜಿ ಕಟ್ಟಿ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಸ್ಪೀಟ್ ಅಡ್ಡೆ ಮೇಲಿನ ದಾಳಿ ವೇಳೆ ಪೊಲೀಸರ ಮೇಲೆ ಆರೋಪಿಗಳು ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆ ಬಳಿಕ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಸ್ಥಳದಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಇಸ್ಪೀಟ್ ಆಡುತ್ತಿದ್ದ 13 ಆರೋಪಿಗಳನ್ನು ಬಂಧಿಸಲಾಗಿದೆ. 3.80 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ