Author: AIN Author

ರಾಮನಗರ:- ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಚನ್ನಪಟ್ಟಣಣದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. https://ainlivenews.com/the-selection-of-mr-go-channabasappa-as-the-president-of-the-87th-kannada-sahitya-sammelna-is-commendable/ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಹಿನ್ನಡೆ ಅನುಭವಿಸಲಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಚನ್ನಪಟ್ಟಣ ಗೆಲುವಿಗಾಗಿ ಎರಡೂ ಕಡೆಯಿಂದ ಭರ್ಜರಿ ಪ್ರಚಾರ ನಡೆದಿತ್ತು. ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ಸಚಿವ ಜಮೀರ್‌ ಅಹ್ಮದ್‌ ವಾಗ್ದಾಳಿ ನಡೆಸಿದ್ದರು. ಇದು ಕಾಂಗ್ರೆಸ್‌ ಅಭ್ಯರ್ಥಿ ಹಿನ್ನಡೆಗೆ ಕಾರಣವಾಗಲಿದೆ ಎಂದೇ ವಿಶ್ಲೇಷಿಸಲಾಗಿತ್ತು ಸ್ವತಃ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರು ಹತಾಶೆಯಿಂದ ಮಾತನಾಡಿದ್ದರು. ಜಮೀರ್‌ ಹೇಳಿಕೆಯಿಂದ ಡ್ಯಾಮೇಜ್‌ ಆಗಿರುವ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.

Read More

ಮಂಡ್ಯ:- ಡಿ 20 ರಿಂದ 22 ರ ವರಗೆ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದು ಅಭಿನಂದನೀಯ ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. https://ainlivenews.com/talking-about-the-congress-government-bjp-has-no-ethics-shamanur/ ಇಂದು ನಡೆದ ಕ.ಸಾ.ಪ ಕಾರ್ಯಕಾರಿ ಸಮಿತಿಯಲ್ಲಿ ಸಭೆಯಲ್ಲಿ ಗೊ.ರು ಚ ಅವರನ್ನು ಅಯ್ಕೆ ಮಾಡಿರುವುದು ಸಂತಸ ತಂದಿದೆ ಇದು ಅರ್ಹತೆಗೆ ಸಲ್ಲುತ್ತಿರುವ ಗೌರವ ಎಂದು ಅವರು ಹೇಳಿದ್ದಾರೆ. ನಾಡು, ನುಡಿಗೆ ಗೊ.ರು.ಚ ಕೊಡುಗೆ ಅಪಾರ : ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿಯಲ್ಲಿ ಜನಿಸಿದ ಗೊ.ರು.ಚೆನ್ನಬಸಪ್ಪ ಅವರು ನಾಡು ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಪರಿಷತ್ತಿನ ಸಂಘಟನೆ ಬಲವರ್ಧನೆ ಗೆ ಗೊ.ರು ಚನ್ನಬಸಪ್ಪ ಅವರ ಪರಿಶ್ರಮ ಅಪಾರ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಗೊ.ರು.ಚ ಅವರು ಈ ಹಿಂದೆ ಕ.ಸಾ.ಪ ಅಧ್ಯಕ್ಷರಾಗಿ, ,ಕಾರ್ಯದರ್ಶಿಯಾಗಿ ಎಲ್ಲರೂ ಮುಚ್ಚುವಂತೆ ಕಾರ್ಯ…

Read More

ದಾವಣಗೆರೆ:- ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡೋ ನೈತಿಕತೆ ಬಿಜೆಪಿಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. https://ainlivenews.com/hindus-are-the-target-of-congress-bpl-card-should-be-canceled-for-it-yatnal/ ಈ ಸಂಬಂಧ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಈ ವೇಳೆ ಕೋವಿಡ್ ಕಾಲದಲ್ಲಿ ಯಂತ್ರೋಪಕರಣಗಳನ್ನು ಖರೀದಿ ಮಾಡದೇ ಹಣ ತಿಂದು ಹಾಕಿದ್ದಾರೆ. ಆಗ ಬಿಜೆಪಿ ಮಾಡಿದ ಅವ್ಯವಹಾರ ಈಗ ಬೆಳಕಿಗೆ ಬರುತ್ತಿವೆ ಎಂದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೋವಿಡ್ ಕಾಲದಲ್ಲಿ ಎಲ್ಲರಿಗೂ ಲಸಿಕೆ ಕೊಡಲು ಆಗಿಲ್ಲ. ನಾವು ನಮ್ಮ ಕುಟುಂಬದಿಂದ 6 ಕೋಟಿ ರೂ. ವೆಚ್ಚದಲ್ಲಿ ಕೋವಿಡ್ ಲಸಿಕೆ ವಿತರಿಸಿದ್ದೆವು. ಇದೇ ಕಾರಣಕ್ಕೆ 40% ಭ್ರಷ್ಟಚಾರ ಎಂದು ನಾವು ಬಿಜೆಪಿ ಸರ್ಕಾರವನ್ನ ಕರೆದಿದ್ದೆವು. ಈಗ ನಮ್ಮ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಯಾವ ನೈತಿಕತೆ ಇಲ್ಲಾ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Read More

ವಿಜಯಪುರ:- ಕಾಂಗ್ರೆಸ್ ಗೆ ಹಿಂದೂಗಳೇ ಟಾರ್ಗೆಟ್, ಅದಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. https://ainlivenews.com/crime-news-lawyer-attacked-with-machete-in-kochi-court-premises/ ಈ ಸಂಬಂಧ ಮಾತನಾಡಿದ ಅವರು, ಹಿಂದೂಗಳನ್ನು ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಹಿಂದೂಗಳ ರೇಷನ್ ಕಾರ್ಡ್ ರದ್ದು ಮಾಡುತ್ತಿದೆ. ಅವರನ್ನು ಟಾರ್ಗೆಟ್ ಮಾಡಿಯೇ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಇದೇ ವಿಷಯವಿಟ್ಟುಕೊಂಡು ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಸಿದ್ದರಾಮಯ್ಯ ಹಿಂದೂಗಳ ವೋಟು ಬೇಡ ಎಂದಿದ್ದಾರೆ. ಅದಕ್ಕೆ ಹಿಂದೂಗಳ ರೇಷನ್ ಕಡಿತವಾಗುತ್ತಿದೆ ಎಂದು ನನಗೂ ಮಾಹಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಪ್ರಸ್ತಾಪವಾಗುತ್ತಿದೆ. ರದ್ದಾದ ಗ್ರಾಹಕರ ಯಾದಿ ತೆಗೆದುಕೊಳ್ಳುತ್ತೇವೆ. ಇದನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಮಾಡುತ್ತೇವೆ. ಹಿಂದೂಗಳಿಗೆ ರೇಷನ್ ಕಾರ್ಡನಲ್ಲಿ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು. ಕಾಂಗ್ರೆಸ್ ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ನಾವು ಎತ್ತುತ್ತೇವೆ. ಮೊದಲು ಮಾಹಿತಿ…

Read More

ಬೆಂಗಳೂರು:- ಬೆಂಗಳೂರು ಹೊರ ವಲಯದ ಆನೇಕಲ್‌ ಗಡಿ ಹೊಸೂರಿನಲ್ಲಿ ಕೋರ್ಟ್‌ ಆವರಣದಲ್ಲೇ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜರುಗಿದೆ. https://ainlivenews.com/dasarahalli-illegal-buildings-clearance-operation/ ಕಣ್ಣನ್, ಕೋರ್ಟ್ ಆವರಣದಲ್ಲಿ ಹಲ್ಲೆಗೊಳಗಾದ ವಕೀಲ. ಆನಂದ್ ಎಂಬಾತ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಹೊಸೂರು ಒಂದೇ ಕಡೆ ಇದ್ದ ಜಾಗ. ಇಂತಹ ಸ್ಥಳದಲ್ಲೇ ವಕೀಲನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ವಕೀಲ ಕಣ್ಣನ್ ಮೇಲೆ ಹಲ್ಲೇ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.

Read More

ಬೆಂಗಳೂರು: ದಾಸರಹಳ್ಳಿ ವಲಯದ ಚೊಕ್ಕಸಂದ್ರ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ 6 ಅಂತಸ್ತುಗಳ ಕಟ್ಟಡ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. https://ainlivenews.com/the-school-teacher-who-refused-to-get-married-was-brutally-killed-by-the-perpetrator/ ವಲಯ ಆಯುಕ್ತರಾದ ಹೆಚ್.ಸಿ.ಗಿರೀಶ್ ರವರ ನೇತೃತ್ವದಲ್ಲಿ ಇಂದು ಚೊಕ್ಕಸಂದ್ರ ವಾರ್ಡ್-39ರ ವ್ಯಾಪ್ತಿಯ 3ನೇ ಅಡ್ಡರಸ್ತೆ, 2ನೇ ಮುಖ್ಯ ರಸ್ತೆ ರುಕ್ಮಿಣಿನಗರ, ನಾಗಸಂದ್ರ ಸ್ವತ್ತಿನ ಸಂಖ್ಯೆ: 1 & 2 ರಲ್ಲಿ ಕಟ್ಟಡ ಮಾಲೀಕರಾದ Mr.Joji Jacob S/O Jacob Thomas & Mrs.Sindhu ರವರು 40X70 ಸೈಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಹಡಿ + 5 ಅಂತಸ್ತು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಕಟ್ಟಡದ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದರೂ ಸಹ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ 6ನೇ ಮಹಡಿಯಲ್ಲಿ ನಿರ್ಮಿಸಿರುವಂತಹ ಎ.ಸಿ.ಸಿ ಶೀಟ್ ಪೆಂಟ್ ಹೌಸ್, ಪ್ಯಾರಪೆಟ್ ವಾಲ್ ಅನ್ನು ಮೂಲಕ ಯಂತ್ರೋಪಕರಣ ಗಳು ಹಾಗು ಸುಮಾರು 20…

Read More

ಚೆನ್ನೈ:- ತಮಿಳುನಾಡಿನ ತಂಜಾವೂರಿನಲ್ಲಿ ಮದುವೆಗೆ ನಿರಾಕರಿಸಿದ್ದಕ್ಕಾಗಿ ದುಷ್ಕರ್ಮಿಯೊಬ್ಬ ಶಾಲೆಯಲ್ಲೇ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಜರುಗಿದೆ. https://ainlivenews.com/another-shocking-news-for-the-people-bpl-cuts-workers-card/ ಮದನ್ ಎಂಬ ಆರೋಪಿಯಿಂದ 26 ವರ್ಷದ ರಮಣಿ ಎಂಬ ಶಿಕ್ಷಕನನ್ನು ಕೊಲೆ ಮಾಡಲಾಗಿದೆ. ಆತ ರಮಣಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ರಮಣಿಯವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಮಣಿ ಹಾಗೂ ಮದನ್‌ ಕುಟುಂಬ ಭೇಟಿಯಾಗಿ ಮದುವೆಯ ವಿಚಾರ ಚರ್ಚಿಸಿದ್ದರು. ಈ ವೇಳೆ ಮದುವೆ ಪ್ರಸ್ತಾಪವನ್ನು ರಮಣಿಯವರು ತಿರಸ್ಕರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಿಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಶಾಲೆಯ ಭೇಟಿಗೆ ತೆರಳಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

Read More

ಬೆಂಗಳೂರು:- ಬಿಪಿಎಲ್​ ಬೆನ್ನಲ್ಲೇ ಕಾರ್ಮಿಕರ ಕಾರ್ಡಿಗೂ ಕತ್ತರಿ ಹಾಕಿದ್ದು, ಬರೋಬ್ಬರಿ 2.46 ಲಕ್ಷ ಕಾರ್ಮಿಕರ ಕಾರ್ಡ್‌ ಅಮಾನತು ಮಾಡಲಾಗಿದೆ. https://ainlivenews.com/fire-accident-case-in-bike-showroom-owner-manager-andar/ ಬಿಪಿಎಲ್​ ಕಾರ್ಡ್​ ಗುದ್ದಾಟದ ಮಧ್ಯ ಸರ್ಕಾರದ ಕಣ್ಣು ಇದೀಗ ಕಾರ್ಮಿಕರ ಕಾರ್ಡಿನ ಮೇಲೆ ಬಿದ್ದಿದ್ದು, ಅನರ್ಹರು ಪಡೆದುಕೊಂಡಿರುವ ಕಾರ್ಮಿಕರ ಕಾರ್ಡ್​ಗಳನ್ನು ಗುರುತಿಸಿ ರದ್ದು ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 2,46,951 ಕಾರ್ಮಿಕ ಕಾರ್ಡಗಳು ನಕಲಿ ಎಂದು ಕಾರ್ಮಿಕ ಇಲಾಖೆ ಲಿಸ್ಟ್ ಮಾಡಿದ್ದು, ಇದೀಗ ಅವುಗಳನ್ನು ಸಹ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕಲ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಡ್​ ಪಡೆದುಕೊಂಡಿದ್ದಾರೆ. ಈ 38.42 ಲಕ್ಷ ಕಾರ್ಡ್​ಗಳ ಪೈಕಿ 2,46,951 ಕಾರ್ಡ್​ ನಕಲಿ ಎಂದು ಗೊತ್ತಾಗಿ ಅವುಗಳನ್ನು ರದ್ದು ಮಾಡಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಕಟ್ಟ ಕಾರ್ಮಿಕ ಕಾರ್ಡ್​ ರದ್ದಾಗಿರುವುದು ಹಾವೇರಿಯಲ್ಲಿ. ಜಿಲ್ಲೆಯಲ್ಲಿ ಒಟ್ಟು 1,69,180 ಕಾರ್ಡ್ ಗಳು ಅಮಾನತು ಮಾಡಲಾಗಿದೆ. ಕಾರ್ಮಿಕ ಕಾರ್ಡ್​ನಿಂದ ಮದುವೆ, ಮರಣ, ಹೆರಿಗೆ,…

Read More

ಬೆಂಗಳೂರು:- ನಗರದಲ್ಲಿ ಬೈಕ್ ಶೋರೂಂಗೆ ಬೆಂಕಿ ಅವಘಡ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋರೂಂ ಮಾಲೀಕ, ಮ್ಯಾನೇಜರ್ ರನ್ನು ಬಂಧಿಸಲಾಗಿದೆ. https://ainlivenews.com/22-lakh-bpl-card-canceled-in-karnataka-the-e-governance-department-revealed-shocking-statistics/ ನಗರದ ರಾಜ್‌ಕುಮಾರ್ ರಸ್ತೆಯ ಬಳಿ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಹೊತ್ತಿಕೊಂಡ ಘಟನೆಗೆ ಸಂಬಂಧಿಸಿದಂತೆ ಶೋರೂಂ ಮಾಲೀಕ ಹಾಗೂ ಮ್ಯಾನೇಜರ್‌ನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಮಾಲೀಕ ಪುನೀತ್ ಹಾಗೂ ಮ್ಯಾನೇಜರ್ ಯುವರಾಜ್ ಬಂಧಿತರು. ನ.19 ರಂದು ಸಂಜೆ 5:30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಓರ್ವ ಯುವತಿ ಸಜೀವ ದಹನಗೊಂಡಿದ್ದು, ಮೂವರು ಗಾಯಗೊಂಡಿದ್ದರು. ಶೋರೂಮ್‌ನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಎಂಬ ಯುವತಿ ಸಾವಿಗೀಡಾಗಿದ್ದಾಳೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

ಬೆಂಗಳೂರು:- ಕರ್ನಾಟಕದಲ್ಲಿ ಅನರ್ಹ ರೇಷನ್‌ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದು ಮಾಡಲಾಗುತ್ತಿದೆ. https://ainlivenews.com/do-you-know-the-price-of-1-liter-of-water-that-virat-kohli-drinks-do-you-just-call-me-king/ ಇದರ ಜೊತೆಯಲ್ಲೇ ಇದೀಗ ಕರ್ನಾಟಕ ಜನತೆಗೆ ಬಿಗ್ ಶಾಕಿಂಗ್ ಸುದ್ದಿ ಹೊರ ಬಿದ್ದಿದ್ದು, ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ದಾರರು ಇದ್ದಾರೆ ಎಂಬ ಸತ್ಯಸಂಗತಿ ಬಯಲಾಗಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲೇ ಆಹಾರ ಇಲಾಖೆಗೆ ಇ ಗವರ್ನೆನ್ಸ್​ ಇಲಾಖೆ ಮಾಹಿತಿ ಕೊಟ್ಟಿದೆ. ಇದೇ ಮಾಹಿತಿ ಇಟ್ಟುಕೊಂಡೇ 22 ಲಕ್ಷ ಅನರ್ಹ ಬಿಪಿಎಲ್​ ಕಾರ್ಡ್​​ಗಳ ರದ್ದಾಗಲಿದೆಯೇ ಎಂಬ ಅನುಮಾನ ಈಗ ಮೂಡಿದೆ. ಕಲಬುರಗಿ ಜಿಲ್ಲೆಯಲ್ಲೇ ಅತಿಗಹೆಚ್ಚು ಅನರ್ಹರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟಿರುವ ಮಾಹಿತಿ ಸಿಕ್ಕಿದೆ. ಕಲಬುರಗಿಯಲ್ಲಿ 78,058 ಮಂದಿ ಅನರ್ಹರಿಗೆ ಬಿಪಿಎಲ್ ಕಾರ್ಡ್​ ನೀಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 65,563 ಅನರ್ಹರ ಬಳಿ ಬಿಪಿಎಲ್ ಕಾರ್ಡ್​ ಇದೆ. ಬೆಂಗಳೂರು ಪೂರ್ವದಲ್ಲಿ 9,129 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಬೆಂಗಳೂರು ಉತ್ತರದಲ್ಲಿ 17,382…

Read More