Author: AIN Author

ಹುಬ್ಬಳ್ಳಿ:- ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿದ್ರೆ ಒಳ್ಳೆಯದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. https://ainlivenews.com/risk-of-cancer-from-obesity-explosive-information-revealed-in-the-survey/ ಪ್ರಧಾನಿ ಅವರನ್ನು ಪುಡಾರಿ ಎಂದು ಕರೆದಿರುವ ಸಿಎಂ ಗೆ ಟಾಂಗ್ ಕೊಟ್ಟ ಜೋಶಿ, ಓರ್ವ ಪ್ರಧಾನಿಗೆ ಪುಡಾರಿ ಇತ್ಯಾದಿಯಾಗಿ ಮಾತನಾಡುವುದು ಸರಿಯಲ್ಲ. ಖರ್ಗೆ ಅವರು ಗ್ಯಾರಂಟಿ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ಮಾತನಾಡಿದ್ದಾರೆ. ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಬಿಆರ್ ಪಾಟೀಲ್, ಮತ್ತಿತರರು ಹೇಳಿದ್ದಾರೆ. ನಿಮ್ಮ ಶಾಸಕರೇ ಹೇಳುತ್ತಿರುವಾಗ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಮಾತನಾಡಿದ್ದಾರೆ. ಸೌಜನ್ಯಯುತವಾಗಿ ಉತ್ತರ ಕೊಡಿ ಎಂದು ಕಿಡಿಕಾರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವಿಚಾರವಾಗಿ ಮಾತನಾಡಿ, ಖರ್ಗೆ ಅವರು ಅತ್ಯಂತ ಹಿರಿಯ ನಾಯಕರು. ರಾಜಕೀಯ ಭಿನ್ನಾಭಿಪ್ರಾಯ ಹೊರತುಪಡಿಸಿ, ಅವರೊಂದಿಗೆ ವೈಯಕ್ತಿಕ ಸಂಬಂಧ ಚೆನ್ನಾಗಿದೆ. ಅತ್ಯಂತ ಕಷ್ಟದಲ್ಲಿ ಬೆಳೆದು ಬಂದು, ಈ ಹಂತಕ್ಕೆ ಮುಟ್ಟಿದವರು. ಕಾಂಗ್ರೆಸ್ ಪಕ್ಷ ಮೊದಲು ಅಶೋಕ್ ಗೆಹ್ಲೋಟ್ ಅವರನ್ನ ಅಧ್ಯಕ್ಷರನ್ನ ಮಾಡಲು ಹೊರಟಿದ್ದರು.…

Read More

ಇಂದಿನ ಜೀವನ ಪದ್ಧತಿಯಲ್ಲಿ ಬೊಜ್ಜು ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಹೀಗಾಗಿ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ ಮತ್ತು ಕೆಲ ಆಹಾರದಿಂದ ಬೊಜ್ಜನ್ನು ನಿಯಂತ್ರಿಸಬಹುದಾಗಿದೆ. ಅದರಲ್ಲೂ ಈ ಬೊಜ್ಜಿನಿಂದ ಅಪಾಯಕಾರಿ ಕ್ಯಾನ್ಸರ್‌ ಬರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. https://ainlivenews.com/waqf-property-is-not-given-by-any-government-it-belongs-to-allah-zameer/ ಬೊಜ್ಜಿನಿಂದಾಗಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 20 ರಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದೆ. ಓಹಿಯೋ ಸ್ಟೇಟ್ ಯೂನಿವರ್ಸಿಟಿ ವೆಕ್ಸ್ಲರ್ ಮೆಡಿಕಲ್ ಸೆಂಟರ್ ನ ಸಂಶೋಧಕರ ಪ್ರಕಾರ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಅದರಲ್ಲಿಯೂ ಈ ರೋಗವು ವಯಸ್ಸಾದವರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅನೇಕ ಜನರು ನಂಬಿಕೊಂಡಿದ್ದಾರೆ. ಆದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಪ್ರಮಾಣವು ಪ್ರತಿವರ್ಷ ಶೇಕಡಾ 1 ರಷ್ಟು ಹೆಚ್ಚುತ್ತಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪ್ರಕರಣಗಳು ಸಾಮಾನ್ಯವಾಗುತ್ತಿವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಸಂಶೋಧಕರು ಈ ವರ್ಷ ಅಕ್ಟೋಬರ್ 4 ರಿಂದ 7 ರವರೆಗೆ…

Read More

ವಿಜಯಪುರ:-ದಾನಿಗಳಿಂದ ಬಂದಿರುವ ಆಸ್ತಿ ವಕ್ಫ್ ಆಸ್ತಿ ಆಗಿದ್ದು, ಇದು ಯಾವ ಸರ್ಕಾರವೂ ಕೊಟ್ಟಿಲ್ಲ ಎಂದು ಸಚಿವ ಜಮೀರ್ ಹೇಳಿದ್ದಾರೆ. https://ainlivenews.com/if-siddaramaiah-criticizes-modi-it-is-like-steam-to-the-sun-ct-ravi/ ಈ ಸಂಬಂಧ ಮಾತನಾಡಿದ ಅವರು, ವಕ್ಫ್ ಆಸ್ತಿ ಅಲ್ಲಾನ ಆಸ್ತಿ, ಇದು ದಾನಿಗಳಿಂದ ಬಂದಿದ್ದು ಎಂದರು. ವಕ್ಫ್ ಆಸ್ತಿಯನ್ನು ಅಲ್ಲಾನ ಆಸ್ತಿ ಅಂತೀವಿ. ಅದು ದಾನಿಗಳು ದಾನ ಮಾಡಿರುವ ಆಸ್ತಿ, ಯಾರೂ ಸರ್ಕಾರದಿಂದ ಕೊಟ್ಟಿರುವುದಲ್ಲ. ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಇಷ್ಟು ದಿನ ಮುಡಾದ ಬಗ್ಗೆ ಮಾತನಾಡಿದರು. ಅದರಲ್ಲಿ ಏನೂ ಎಲ್ಲ ಎಂದು ಗೊತ್ತಾದ ಮೇಲೆ ಈಗ ವಕ್ಫ್‌ನ್ನು ಹಿಡಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ಕಡೆ ಉಪಚುನಾವಣೆ ನಡೆಯಲಿದೆ. ಜೊತೆಗೆ ಮಹಾರಾಷ್ಟ್ರ ಚುನಾವಣೆ ಇದೆ. ಆದ್ದರಿಂದ ರಾಜಕೀಯ ಗಿಮಿಕ್‌ಗೋಸ್ಕರ ಸುಮ್ಮನೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

Read More

ಚಿಕ್ಕಮಗಳೂರು:- ಮೋದಿ ಅವರನ್ನು ಸಿದ್ದರಾಮಯ್ಯ ಟೀಕಿಸಿದ್ರೆ ಸೂರ್ಯನಿಗೆ ಉಗಿದಂತೆ ಎಂದು CT ರವಿ ಹೇಳಿದ್ದಾರೆ. https://ainlivenews.com/fatal-attack-on-bjp-worker-puneeth-died-without-treatment/ ಈ ಸಂಬಂಧ ಮಾತನಾಡಿದ ಅವರು,ವಕ್ಫ್ ನೋಟಿಫಿಕೇಶನ್ ಅನ್ನೋದೇ ಕಾನೂನು ಬಾಹಿರ. ಜಿಲ್ಲೆಯ ಡಿ.ಆರ್ ಪೊಲೀಸ್ ಗ್ರೌಂಡ್, ರತ್ನಗಿರಿಯ ಜಾಗವನ್ನು ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಹೊರಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಹಳ್ಳಿ-ಹಳ್ಳಿಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದು ಯಾರು? ಬಿಜೆಪಿಯವರೋ ಅಥವಾ ಸಚಿವ ಜಮೀರ್ ಅವರೋ? ಸಿದ್ದರಾಮಯ್ಯ ಈಗ ಸುಳ್ಳು ರಾಮಯ್ಯ ಆಗಿದ್ದಾರೆ. ಜಮೀರ್ ಅವರು ಸಿಎಂ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ಮಾಡ್ತಿದ್ದೇನೆ ಎಂದಿದ್ದಾರೆ. ಇವರು ಸುಮ್ಮನೆ ಬರ್ತಾರೆ, ಹೋಗ್ತಾರೆ ಎಂದು ಭಾವಿಸಬೇಡಿ ಎಂದು ಜಮೀರ್ ಮಾತನಾಡಿದ್ದ ವೀಡಿಯೋ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ, ಗ್ಯಾರಂಟಿ ವಿಚಾರವಾಗಿ ಮೋದಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯರ ವಿರುದ್ಧ ಸಹ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರೇ ನೀವು ಮೋದಿಯವರನ್ನ ಟೀಕೆ ಮಾಡಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತದೆ. ಅದನ್ನು ನೀವೇ ತೊಳೆದುಕೊಳ್ಳಬೇಕು ಎಂದು ಲೇವಡಿ…

Read More

ಬೆಂಗಳೂರು:- ಮೂರು ಜನರ ಗುಂಪೊಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಕೊನೆಗೂ ಹಲ್ಲೆಗೊಳಗಾದ ಪುನೀತ್ ಎಂಬಾತ ಚಿಕಿತ್ಸೆ ಪಲಿಸದೇ ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/kharge-seems-to-have-admitted-that-karnataka-congress-is-crazy-r-ashok/ ಪುನೀತ್ ಹಾಗೂ ಸ್ನೇಹಿತರು ಅಕ್ಟೋಬರ್ 26 ರಾಮನಗರದ ಜಕ್ಕೇನಹಳ್ಳಿಯಲ್ಲಿರುವ ಫಾರ್ಮ್​ಹೌಸ್​ಗೆ ಹೋಗಿದ್ದರು. ಅಂದು ರಾತ್ರಿ 10.30ರ ಸುಮಾರಿಗೆ ಮೂವರು ಏಕಾಏಕಿ ಫಾರ್ಮ್‌ಹೌಸ್‌ಗೆ ನುಗಿದ್ದಾರೆ. ಚಂದು, ನಾಗೇಶ್, ಮುರುಳಿ ಎನ್ನುವವರು ಏಕಾಏಕಿ ರೂಮಿಗೆ ಬಂದು ಸ್ವಿಮ್ಮಿಂಗ್ ಪೂಲ್​ನಲ್ಲಿ ಆಟವಾಡುತ್ತಿದ್ದ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ ಪುನೀತ್ ಸ್ನೇಹಿತರು ವಿಡಿಯೋ ಮಾಡದಂತೆ ಹೇಳಿದಾಗ ನಾವು ಲೋಕಲ್ ಹುಡುಗರು, ಇಲ್ಲಿ ನಮ್ಮದೇ ಹವಾ ಎಂದು ಮಾತನಾಡಿದ್ದಾರೆ. ನಾವು ಏನು ಬೇಕಾದರೂ ಮಾಡುತ್ತೇವೆ. ಇಲ್ಲಿಗೆ ಯಾರ ಪರ್ಮಿಷನ್ ತಗೊಂಡು ಬಂದಿದ್ದೀರಾ ಎಂದು ಹೆಣ್ಣು ಮಕ್ಕಳನ್ನು ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಯುವಕರನ್ನ ಹೊರಗೆ ಹೋಗಿ ಎಂದು ಯುವಕರು ಹೇಳುತ್ತಿದ್ದಂತೆ ಓರ್ವ ಹೊರಗಿಂದ ದೊಣ್ಣೆ ತಂದು ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆಗ ಹಲ್ಲೆ ಮಾಡುವುದನ್ನ ಪುನೀತ್ ವಿಡಿಯೋ…

Read More

ಬೆಂಗಳೂರು:-ಕರ್ನಾಟಕದ ಕಾಂಗ್ರೆಸ್ ನವ್ರು ಹುಚ್ಚರು ಎಂದು ಖರ್ಗೆ ಒಪ್ಪಿಕೊಂಡಂತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. https://ainlivenews.com/nikhil-who-sheds-tears-is-inherited-cpy/ ಈ ಸಂಬಂಧ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಅವೈಜ್ಞಾನಿಕವಾಗಿದ್ದು, ಸಧ್ಯದ ಪರಿಸ್ಥಿತಿ ನೋಡಿದ್ರೆ ಹೆಣ ಹೂಳಲು ಕಾಂಗ್ರೆಸ್‌ ಬಳಿ ದುಡ್ಡಿಲ್ಲ ಎಂದರು. ಗ್ಯಾರಂಟಿ ಯೋಜನೆಗಳು ಅವೈಜ್ಞಾನಿಕವಾಗಿವೆ. ಖರ್ಗೆಯವರೇ ಬಜೆಟ್ ನೋಡಿಕೊಂಡು ಗ್ಯಾರಂಟಿ ಘೋಷಿಸಬೇಕಿತ್ತು ಅಂದಿದ್ದಾರೆ. ಮಹಾರಾಷ್ಟ್ರದವರಿಗೂ ಹುಚ್ಚರ ಥರ ಐದಾರು ಗ್ಯಾರಂಟಿ ಘೋಷಿಸಬೇಡಿ ಅಂದಿದ್ದೇನೆ ಅಂತ ಖರ್ಗೆಯವರು ಹೇಳಿದ್ದಾರೆ. ಅಂದ್ರೆ ಕರ್ನಾಟಕದ ಕಾಂಗ್ರೆಸ್ ನವ್ರು ಹುಚ್ಚರು ಅಂತ ಆಯ್ತಲ್ಲ ಎಂದು ಲೇವಡಿ ಮಾಡಿದ್ದಾರೆ.

Read More

ರಾಮನಗರ:- ಕಣ್ಣೀರು ಹಾಕೋದು ನಿಖಿಲ್ ಗೆ ವಂಶಪಾರಂಪರ್ಯದಿಂದ ಬಂದಿದೆ ಎಂದು CP ಯೋಗೇಶ್ವರ್ ಹೇಳಿದ್ದಾರೆ. https://ainlivenews.com/blurred-vision-then-drink-this-natural-drink/ ಕುಮಾರಸ್ವಾಮಿಆಡಳಿತದ ಅದ್ವಾನದಿಂದ ಸಾವಿರಾರು ಜನ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸುವವರು ಯಾರು ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪ್ರಶ್ನಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಗೂ ಚನ್ನಪಟ್ಟಣಕ್ಕೂ ಏನು ಸಂಬಂಧ ಇಲ್ಲ. ಅವರು ಇಲ್ಲಿ ಕಣ್ಣೀರು ಹಾಕಲು ಕಾರಣವೇ ಇಲ್ಲ. ಕಣ್ಣೀರು ಹಾಕೋದು ಅವರ ವಂಶಪಾರಂಪರ್ಯವಾಗಿ ಬಂದಿದೆ ಎಂದರು ಯೋಗೇಶ್ವರ್ ಬಿಜೆಪಿಗೆ ಮೋಸ ಮಾಡಿದ್ದಾರೆಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ ಜನ ನನ್ನನ್ನು ಬೆಂಬಲಿಸುತ್ತಾರೆ. ಚುನಾವಣೆ ಅಂದಮೇಲೆ ಪ್ರಚಾರ-ಅಪಪ್ರಚಾರ ಸಾಮಾನ್ಯ. ನಾನು ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದೆ. ಕುಮಾರಸ್ವಾಮಿ ಮಗನನ್ನು ಪ್ರತಿಷ್ಠಾಪನೆ ಮಾಡಬೇಕಿತ್ತು. ಹಾಗಾಗಿ ಕೊನೆಯವರೆಗೂ ಆಟ ಆಡಿಸಿದರು. ವಂಶಪಾರಂಪರ್ಯ, ಕುಟುಂಬ ರಾಜಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ. ಇದು ಜೆಡಿಎಸ್‌ನವರಿಗೂ ಸಹ ಗೊತ್ತಿದೆ. ಸ್ಥಳೀಯ ಜೆಡಿಎಸ್‌ನವರು ಸಹ ನನಗೆ ಟಿಕೆಟ್ ಕೊಡಿ ಎಂದಿದ್ದರು. ಕೊನೆಗೂ ಕುಮಾರಸ್ವಾಮಿ ಅವರ ಪ್ಲ್ಯಾನ್ ಸಕ್ಸಸ್ ಮಾಡಿಕೊಂಡರು…

Read More

ಒಂದು ವೇಳೆ ನೀವು ನಿಮಗರಿಯದೇ ಆಗಾಗ ಕಣ್ಣುಜ್ಜಿಕೊಳ್ಳುತ್ತಾ ಮತ್ತು ಕಣ್ಣನ್ನು ಕಿರಿದಾಗಿಸಿಕೊಳ್ಳುತ್ತಾ ಮುಂದಿನ ದೃಶ್ಯವನ್ನು ಸ್ಪಷ್ಟವಾಗಿ ನೋಡಲು ಕಷ್ಟಪಡುತ್ತಿರುತ್ತೀರಾ? ಥಟ್ಟನೇ ನಿಮ್ಮ ದೃಷ್ಟಿ ಮಂಜಾಗತೊಡಗುತ್ತದೆಯೇ? ಅಥವಾ ದೃಷ್ಟಿ ಕೇಂದ್ರದಲ್ಲಿ ಚಿಕ್ಕ ವರ್ತುಲಗಳು ಮೂಡುತ್ತಿದ್ದು ಯಾವ ವಸ್ತುವನ್ನು ಗಮನವಿಟ್ಟು ನೋಡಬೇಕೋ ಆ ಭಾಗ ಕೊಂಚ ಮಬ್ಬು ಮಬ್ಬಾಗುತ್ತಿದೆಯೇ? ಇವೆಲ್ಲಾ ಮಬ್ಬುಗಣ್ಣಿನ ಲಕ್ಷಣಗಳಾಗಿವೆ. ಆದರೆ ಇವುಗಳಿಗೆ ಕಾರಣ ಮಾತ್ರ ಒಂದೇ ರೀತಿಯಲ್ಲಿರುವುದಿಲ್ಲ. https://ainlivenews.com/womens-desire-for-sex-increases-during-menstruation-heres-the-real-reason/ ನಿಮ್ಮ ದೃಷ್ಟಿ ಸುಧಾರಿಸಲು ಕೆಲವು ಸರಳ, ನೈಸರ್ಗಿಕ ಮಾರ್ಗಗಳಿವೆ. ಕೆಲವು ನೈಸರ್ಗಿಕ ಪಾನೀಯಗಳು ಇದಕ್ಕೆ ಸಹಾಯ ಮಾಡಬಹುದು. ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದರಲ್ಲಿ ಜಿಯಾಕ್ಸಾಂಥಿನ್ ಎಂಬ ಅಂಶವಿದೆ. ಇದು ಕಣ್ಣಿಗೆ ಒಳ್ಳೆಯದು. ಈ ಕಾರಣದಿಂದಾಗಿ, ನಿಂಬೆ ನೀರು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಎಂಬ ಪ್ರೊವಿಟಮಿನ್ ಕಣ್ಣುಗಳಿಗೆ ಪ್ರಯೋಜನಕಾರಿ. ಕ್ಯಾರೆಟ್ ಜ್ಯೂಸ್ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೃಷ್ಟಿ ಸುಧಾರಿಸುತ್ತದೆ…

Read More

ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯ ಲೈಂಗಿಕ ಬಯಕೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನಾವು ಮಾತ್ರವಲ್ಲ, ಅನೇಕ ಸಂಶೋಧನೆಗಳು ಸಹ ಇದನ್ನು ತೋರಿಸುತ್ತವೆ. ಇದು ಏಕೆ ಸಂಭವಿಸುತ್ತದೆ ಅನ್ನೋದರ ಬಗ್ಗೆ ತಿಳಿಯೋಣ. https://ainlivenews.com/pant-chennai-join-fix-dhoni-rishabh-met-for-this-reason/ ಋತುಚಕ್ರದ ಸಂದರ್ಭದಲ್ಲಿ ಅಂಡಾಶಯವು ಮೊಟ್ಟೆಯನ್ನು ಬಿಡುಗಡೆ ಮಾಡಲು ತಯಾರಾಗುವುದು ಮತ್ತು ಗರ್ಭಕೋಶದಲ್ಲಿ ಹೊಸ ಪದರವು ಬೆಳವಣಿಗೆ ಆಗುವುದು. ಈ ಸಂದರ್ಭದಲ್ಲಿ ಲೈಂಗಿಕ ಬಯಕೆ ಹೆಚ್ಚಾಗುವುದು. ಅದೇ ರೀತಿಯಲ್ಲಿ ಅಂಡೋತ್ಪತ್ತಿ ಸಂಭವಿಸುವಂತಹ ಸಂದರ್ಭದಲ್ಲಿ ಕೂಡ ಮಹಿಳೆಯರಲ್ಲಿ ಬಯಕೆಯು ಇರುವುದು. ಇದಕ್ಕೆ ಮಹಿಳೆಯರಲ್ಲಿ ಹಾರ್ಮೋನ್ ಗಳಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಕಾರಣ ಎಂದು ಅಧ್ಯಯನಗಳು ಕಂಡುಕೊಂಡಿವೆ. ಮಹಿಳೆಯರಲ್ಲಿ ಋತುಚಕ್ರದ ವೇಳೆ ಅತಿಯಾದ ಲೈಂಗಿಕ ಬಯಕೆಯು ಕಾಡುವುದು. ಹೀಗಾಗಿ ಸಂಗಾತಿ ಬಳಿಯಲ್ಲಿ ತಮ್ಮ ಬಯಕೆಯನ್ನು ಈಡೇರಿಸುವಂತೆ ಕೇಳಿಕೊಳ್ಳಬಹುದು. ಋತುಚಕ್ರದ ಫಾಲಿಕ್ಯೂಲರ್ ಹಂತದ ವೇಳೆ ಇದು ಅತಿಯಾಗಿ ಇರುವುದು. ಇದಕ್ಕೆ ಕಾರಣವೆಂದರೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಮಟ್ಟವು ಕಡಿಮೆ ಇರುವುದು. ಇದು ಋತುಚಕ್ರ ಮುಗಿದ ಬಳಿಕವೂ ಹೀಗೆ ಮುಂದುವರಿಯುವುದು. ಪ್ರೊಜೆಸ್ಟೆರಾನ್ ಅತಿಯಾಗಿದ್ದರೆ ಆಗ ಮಹಿಳೆಯರಲ್ಲಿ…

Read More

ಐಪಿಎಲ್ ರಿಟೆನ್ಷನ್​ ಪ್ರಕ್ರಿಯೆಗೂ ಮುನ್ನ ರಿಷಭ್ ಪಂತ್ ಹಾಗೂ ಮಹೇಂದ್ರ ಸಿಂಗ್ ಭೇಟಿಯಾಗಿದ್ದಾರೆ. ಇದನ್ನು ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಖಚಿತಪಡಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ದೊಡ್ಡ ಸುದ್ದಿಯೊಂದು ಹೊರಬೀಳಲಿದೆ ಎಂದು ಸುಳಿವು ನೀಡಿದ್ದಾರೆ. https://ainlivenews.com/dk-sivakumar-stumbles-women-spark-shakti-yojana-review-statement-damage-to-the-hand/ ಖಾಸಗಿ ಚಾನೆಲ್​ವೊಂದರ ಸಂವಾದದಲ್ಲಿ ಮಾತನಾಡಿದ ಸುರೇಶ್ ರೈನಾ, ನಾನು ಎಂಎಸ್ ಧೋನಿ ಅವರನ್ನು ಭೇಟಿಯಾದಾಗ, ರಿಷಬ್ ಪಂತ್ ಕೂಡ ಅಲ್ಲಿ ಹಾಜರಿದ್ದರು. ಅಲ್ಲದೆ ಇಬ್ಬರು ದೊಡ್ಡ ವಿಷಯವೊಂದರ ಬಗ್ಗೆ ಚರ್ಚಿಸಿದ್ದರು. ಹೀಗಾಗಿ ಏನೋ ದೊಡ್ಡ ಬದಲಾವಣೆಯಂತು ಆಗಲಿದೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ. ಈ ಬದಲಾವಣೆಯೊಂದಿಗೆ ಪ್ರಮುಖ ಆಟಗಾರೊಬ್ಬರು ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುರೇಶ್ ರೈನಾ ಸುಳಿವು ನೀಡಿದ್ದಾರೆ. ಅತ್ತ ಧೋನಿ-ಪಂತ್ ಭೇಟಿಯನ್ನು ಪ್ರಸ್ತಾಪಿಸಿ ಹೊಸ ಆಟಗಾರ ಸಿಎಸ್​ಕೆಗೆ ಬರಲಿದ್ದಾರೆ ಎಂದಿರುವ ಕಾರಣ, ರಿಷಭ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿಯೇ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.…

Read More