ಕೆ.ಆರ್.ಪುರ: ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬೆಂ.ಪೂ.ತಾಲ್ಲೂಕು ತಹಶಿಲ್ದಾರ್ ರಾಜೀವ್ ತಿಳಿಸಿದರು. https://ainlivenews.com/balachandra-jarakiholi-who-prayed-for-the-welfare-of-the-people-of-the-country/ ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಂತರ ಮಾತನಾಡಿದ ಅವರು ಬೇರೆ ಭಾಷೆಗಳಿಗಿಂತ ಕನ್ನಡ ಭಾಷೆ ತುಂಬಾನೇ ಶ್ರೀಮಂತ ಪ್ರಾಚೀನ. ಕನ್ನಡ ನುಡಿ ಆಡುವುದೇ ಒಂದು ರೀತಿಯ ಖುಷಿ. ಈ ಭಾಷೆಯಲ್ಲಿರುವಷ್ಟು ಪ್ರೌಢಿಮೆ, ಸಂಸ್ಕೃತಿ, ಮಹತ್ವ ಬೇರೆ ಯಾವ ಭಾಷೆಯಲ್ಲೂ ಸಿಗದು. ಹಾಗಾಗಿ, ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯ ಮತ್ತು ಇತಿಹಾಸ ಇದೆ. ಕನ್ನಡ ನಾಡು ಮತ್ತಷ್ಟು ಬಲಿಷ್ಠವಾಗಿಸೋಣ. ನಾಡು, ನುಡಿಗೆ ಧಕ್ಕೆ ಬಂದರೆ ಕನ್ನಡಿಗರೆಲ್ಲಾರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದುರು. ಎಲ್ಲಾ ಕಡೆ ಬಳಸುವುದರ ಮೂಲಕ…
Author: AIN Author
ತುಮಕೂರು:- ಹುಡುಗಿ ವಿಚಾರಕ್ಕೆ ಅಂಗಡಿಗೆ ನುಗ್ಗಿ ಹಲ್ಲೆ ನಡೆದಿದ್ದು, ಗೃಹ ಸಚಿವರ ತವರಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. https://ainlivenews.com/balachandra-jarakiholi-who-prayed-for-the-welfare-of-the-people-of-the-country/ ಹುಡುಗಿ ವಿಚಾರವಾಗಿಯೇ ಸದಾಶಿವನಗರದಲ್ಲಿನ ಸಮೋಸ ಸೆಂಟರ್‌ಗೆ ನುಗ್ಗಿ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ. 22 ವರ್ಷದ ಹಸೇನ್ ಎನ್ನುವವನು, ಇಸ್ಮಾಯಿಲ್ ನಗರದ ಆಯುಬ್ ಎಂಬುವನ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೋಳಗಾದ ಆಯುಬ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತಿಚೆಗೆ ಹುಡುಗಿ ವಿಚಾರಕ್ಕೆನೇ ಅದೇ ರಸ್ತೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮೇಲಿಂದ ಮೇಲೆ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದರಿಂದ ನಗರದ ಜನರಲ್ಲಿ ಭೀತಿ ಹೆಚ್ಚಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ನಗರದಲ್ಲಿ ಪೊಲೀಸರು ಎಚ್ಚೆತ್ತುಕೊಂಡಿಲ್ಲ, ಸಮರ್ಪಕವಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ತುಮಕೂರು ನಗರದಲ್ಲಿ ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗೋಕಾಕ: ದೀಪಾವಳಿ ಹಬ್ಬದ ಪ್ರಯುಕ್ತ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. https://ainlivenews.com/chamarajanagar-goods-auto-overturned-30-people-seriously-injured/ ನಾಡಿನ ಒಳಿತಿಗಾಗಿ ಅಮ್ಮ ಮಹಾಲಕ್ಷ್ಮಿ ದೇವಿಯು ಸಕಲರಿಗೆ ಸುಖ, ನೆಮ್ಮದಿ, ಶಕ್ತಿ, ಸಮೃದ್ಧಿ ನೀಡಿ ಕರುಣಿಸಲಿ. ಬೆಳಕಿನ ಹಬ್ಬ ದೀಪಾವಳಿಯು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಅವರು ಪ್ರಾರ್ಥಿಸಿದರು. ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತ್ಕರಿಸಿ ಗೌರವಿಸಿದರು. ಪ್ರತಿ ವರ್ಷವೂ ದೀಪಾವಳಿ ಹಬ್ಬದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಮಿತ್ರರೊಂದಿಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಗಣ್ಯ ಉದ್ಯಮಿಗಳಾದ ಜಯಶೀಲ ಶೆಟ್ಟಿ, ವಿಕ್ರಮ ಅಂಗಡಿ, ಸೈದಪ್ಪ ಗದಾಡಿ, ಬಸವರಾಜ ಕಲ್ಯಾಣಶೆಟ್ಟಿ, ರಾಜು ಅಂಡಗಿ, ಕಂದಾಯ ಅಧಿಕಾರಿ ನಿರಂಜನ ಬನ್ನಿಶೆಟ್ಟಿ, ಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಾಳೆ ದೀಪಾವಳಿ ಪಾಡ್ಯ ಪ್ರಯುಕ್ತ…
ಚಾಮರಾಜನಗರ:- ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸ್ಸು ಗ್ರಾಮಕ್ಕೆ ಹಿಂತಿರುಗುತ್ತಿದ್ದ ಭಕ್ತರಿದ್ದ ಗೂಡ್ಸ್ ಆಟೋವೊಂದು ಪಲ್ಟಿ ಹೊಡೆದು 30 ಮಂದಿ ಗಾಯ ಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹುಣಸೆಪಾಳ್ಯದ ಬಳಿ ನಡೆದಿದೆ. https://ainlivenews.com/accident-a-car-collided-with-those-who-were-standing-on-the-road-divider-two-spot-death/ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಿ.ಎಸ್ ದೊಡ್ಡಿ, ಒಡೆಯರಪಾಳ್ಯ , ಕರಿಯಪ್ಪನದೊಡ್ಡಿ ಗ್ರಾಮಸ್ಥರು ಹುಣಸೆಪಾಳ್ಯದ ಸಮೀಪದ ತಟ್ಟೆಕರೆ ಮಹದೇಶ್ವರ ದೇವಾಲಯಕ್ಕೆ ತೆರಳಿ ಅಮವಾಸೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ಹಿಂತಿರುಗುವಾಗ ವಾಹನ ಪಲ್ಟಿಯಾಗಿದ್ದು, ಮೂವತ್ತು ಮಂದಿಗೆ ಪೆಟ್ಟಾಗಿದೆ. ಗಾಯಗೊಂಡವರನ್ನು ಕೊಳ್ಳೇಗಾಲ ಮತ್ತು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲದೆ ವಾಹನ ಚಾಲಕ ನಾಗೇಂದ್ರಗೂ ಕೂಡ ಪೆಟ್ಟಾಗಿದೆ. ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಕೋಲಾರ – ರಸ್ತೆ ಬದಿಯಲ್ಲಿರುವ ಡಿವೈಡರ್ ಮೇಲೆ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಹೊರವಲಯದ ಪವನ್ ಕಾಲೇಜು ಬಳಿ ಈ ದುರಂತ ಸಂಭವಿಸಿದೆ. ಮೃತರನ್ನು ಉತ್ತರ ಭಾರತ ಮೂಲದ ಕಿರಣ್ ಹಾಗೂ ರಜನಿಸಿಂಗ್ ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಯಸ್ಸಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ. ನಮ್ಮ ವಯಸ್ಸು ಹೆಚ್ಚುತ್ತಿದ್ದಂತೆ ನಮ್ಮ ಚರ್ಮವು ಅದನ್ನು ಬಹಿರಂಗಪಡಿಸುತ್ತದೆ. ವಯಸ್ಸಾದಂತೆ ಚರ್ಮವು ಸುಕ್ಕುಗಟ್ಟಲು ಪ್ರಾರಂಭಿಸುತ್ತದೆ. ಮುಖದ ಮೇಲೆ ಕಲೆಗಳು, ಗೆರೆಗಳು ಮತ್ತು ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಆದರೆ ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ, ನೀವು ಎಷ್ಟೇ ವಯಸ್ಸಾದರೂ ಚಿಕ್ಕವರಾಗಿ ಕಾಣಿಸಬಹುದು. https://ainlivenews.com/govt-meena-mesha-for-implementation-of-internal-reservation-minister-narayanaswamy-lashed-out/ ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾನು ತುಂಬಾ ಸುಂದರವಾದ ಕಾಣಬೇಕು ಎಂಬ ಆಸೆಯಲ್ಲಿ ಇರ್ತಾರೆ. ಚರ್ಮವು ಕಾಂತಿಯುತವಾಗಿದ್ದರೆ, ಆಗ ಸೌಂದರ್ಯವು ಎದ್ದು ಕಾಣುವುದು. ಆದರೆ ಕೆಲವರಿಗೆ ಅಕಾಲಿಕವಾಗಿ ನೆರಿಗೆ, ಚರ್ಮ ಜೋತು ಬೀಳುವುದು, ಚರ್ಮದಲ್ಲಿ ಗೆರೆಗಳು ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಬರಬಹುದು. ಇದರಿಂದ ಮುಖದ ಸೌಂದರ್ಯವು ಕೆಡುವುದು ಮಾತ್ರವಲ್ಲದೆ, ಸಂಪೂರ್ಣ ದೇಹದ ಸೌಂದರ್ಯಕ್ಕೆ ಇದು ಹಾನಿ ಉಂಟು ಮಾಡುವುದು. ಒತ್ತಡದ ಜೀವನಶೈಲಿ, ಒತ್ತಡ, ನಿದ್ರೆಯಿಲ್ಲದೆ ಇರುವುದು ಮತ್ತು ಆಹಾರ ಕ್ರಮವು ಸರಿಯಾಗಿ ಇಲ್ಲದೆ ಇರುವ ಕಾರಣ ಚರ್ಮಕ್ಕೆ ಹಾನಿ ಆಗುವುದು ಮತ್ತು ನೆರಿಗೆಗಳು ಕಾಣಿಸಿಕೊಳ್ಳುವುದು. ಚರ್ಮವು ಯೌವನಯುತವಾಗಿ ಕಾಣಿಸಿಕೊಳ್ಳಲು ಕೆಲವು ಮನೆಯಲ್ಲೇ ತಯಾರಿಸಿದ ಫೇಶಿಯಲ್…
ಹೊಸಕೋಟೆ- ಒಳ ಮೀಸಲಾತಿಯನ್ನ ಸುಪ್ರಿಂಕೋರ್ಟ್ ರಾಜ್ಯ ಸರ್ಕಾರದ ವ್ಯಾಪ್ತಿಗೆ ತಂದಿದ್ರು ಜಾರಿ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು ರಾಜ್ಯ ಕಾಂಗ್ರೇಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಸುಳ್ಳು ಆಶ್ವಾಸನೆಗಳನ್ನ ಕೊಟ್ಟಿದೆ ಅಂತ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. https://ainlivenews.com/attention-whatsapp-users-do-you-also-know-about-this-trick-learn-here/#google_vignette ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿ ಮಾದ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಚುನಾವಣೆಗೂ ಮುನ್ನ ಒಳ ಮೀಸಲಾತಿಯನ್ನ ಜಾರಿಗೆ ತರ್ತಿವಿ ಪ್ರಣಾಳಿಕೆಯಲ್ಲಿ ಹಾಕ್ತೀವಿ ಅಂತ ಹೇಳಿದ್ರು. ಜೊತೆಗೆ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡ್ತೀವಿ ಅಂತ ಹೇಳಿದ್ರು ಆದ್ರೆ ಈವರೆಗೂ ಮಾಡಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಕೆಲ ಮೂರ್ಖ ಮಂತ್ರಿಗಳು ಗೃಹ ಸಚಿವರ ಮನೆಯಲ್ಲಿ ಸಭೆ ಸೇರಿ ದತ್ತಾಂಶ ಬಂದಿಲ್ಲ ಇಂಪೀರಿಕಲ್ ರಿಪೋರ್ಟ್ ಬಂದಿಲ್ಲ ಡೆಟಾ ಇಲ್ಲ ಅಂತ ಮೂರ್ಖ ಮಂತ್ರಿಗಳು ಚರ್ಚೆಯನ್ನ ಮಾಡ್ತಿದ್ದು ಸರ್ಕಾರದ ವಿರುದ್ದ ಶೋಷಿತ ವರ್ಗಕ್ಕೆ ಅನುಮಾನ ಬಂದಿದ್ದು ಇವರ ಮೇಲೆ ವಿಶ್ವಾಸ…
ಸ್ಮಾರ್ಟ್ ಫೋನ್ ಈಗ ಎಲ್ಲರ ಕೈಯಲ್ಲೂ ಇದ್ದೇ ಇದೆ. ಅದರಲ್ಲೂ ಸೋಶಿಯಲ್ ಉಪಯೋಗಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲಿ ವಾಟ್ಸಾಪ್ ಕೂಡ ಒಂದು. ಆದರೆ ವಾಟ್ಸಾಪ್ ಬಳಕೆದಾರರಿಗೆ ಕೆಲವೊಂದು ಅಪ್ಡೇಟ್ ಇನ್ನೂ ಕೂಡ ತಿಳಿದಿಲ್ಲ. https://ainlivenews.com/21-crore-salary-king-kohli-created-a-new-history/ ವಾಟ್ಸ್ಆ್ಯಪ್ ಅನೇಕ ಫೀಚರ್ಗಳನ್ನು ತರುವಲ್ಲಿ ಕೆಲಸ ಮಾಡುತ್ತಿದೆ. ವಾಟ್ಸ್ಆ್ಯಪ್ ಪರಸ್ಪರ ಸಂಪರ್ಕದಲ್ಲಿರಲು ಒಂದು ಉತ್ತಮ ಮಾಧ್ಯಮವಾಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಚಾಟ್ ಮಾತ್ರವಲ್ಲ ಫೋಟೋಗಳು, ವಿಡಿಯೋಗಳು ಮತ್ತು ಇತರ ಪ್ರಮುಖ ಫೈಲ್‌ಗಳನ್ನು ಹಂಚಿಕೊಳ್ಳಬಹುದು. ವಾಟ್ಸ್ಆ್ಯಪ್ ಈಗಂತು ಪ್ರತಿ ತಿಂಗಳು ಒಂದಲ್ಲ ಒಂದು ಅಪ್ಡೇಟ್ ನೀಡುತ್ತಲೇ ಇದೆ. ಇದರಿಂದ ಬಳಕೆದಾರರಿಗೆ ಯಾವ ಯಾವ ಫೀಚರ್ ಬಂದಿದೆ ಎಂಬ ಮಾಹಿತಿ ಇರುವುದಿಲ್ಲ. ಅದರಂತೆ ವಾಟ್ಸ್ಆ್ಯಪ್ ಚಾಟ್ನಲ್ಲಿ ಒಂದು ಅದ್ಭುತಾದ ಫೀಚರ್ ಇದ್ದು, ಇದನ್ನು ಹೆಚ್ಚಿನವರು ಬಳಸುತ್ತಿಲ್ಲ. ಶೇ. 90 ರಷ್ಟು ಮಂದಿಗೆ ಈ ಫೀಚರ್ ಬಗ್ಗೆಯೂ ತಿಳಿದಿಲ್ಲ. ಇದನ್ನು ನೀವು ಉಪಯೋಗಿಸಿದರೆ ನಿಮ್ಮ ಅರ್ಧ ಕೆಲಸ ಕಡಿಮೆ ಆಗುತ್ತಿದೆ ಇಂದು ನಿಮ್ಮ ವಾಟ್ಸ್ಆ್ಯಪ್ನಲ್ಲಿ ಲೆಕ್ಕವಿಲ್ಲದಷ್ಟು…
ನವದೆಹಲಿ:- ಗ್ಯಾರಂಟಿ ಕುರಿತು ಟೀಕಿಸಿದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ ಮಲ್ಲಿಕಾರ್ಜುನ ಖರ್ಗೆಗೆ ಲೆಹರ್ ಸಿಂಗ್ ಸಿರೋಯಾ ತಿರುಗೇಟು ಕೊಟ್ಟಿದ್ದಾರೆ. ಎಕ್ಸ್ನಲ್ಲಿ ಟ್ವಿಟ್ ಮಾಡಿದ ಲೆಹರ್ ಸಿಂಗ್ ಸಿರೋಯಾ “ಖರ್ಗೆ ಕುಟುಂಬ ನೇತೃತ್ವದ “ಸಿದ್ಧಾರ್ಥ ವಿಹಾರ ಟ್ರಸ್ಟ್” ವಿರುದ್ಧ ಕೇಳಿಬಂದಿರುವ ಭೂ ಕಬಳಿಕೆ ಆರೋಪದ ಬಗ್ಗೆ ಇನ್ನೂವರೆಗೂ ಮಾತನಾಡದ ಮಲ್ಲಿಕಾರ್ಜು ಖರ್ಗೆ ಅವರು ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದೆ” ಎಂದು ಮಲ್ಲಿಕಾರ್ಜು ಖರ್ಗೆ ವಿರುದ್ಧ ವ್ಯಂಗ್ಯವಾಡಿದರು. https://ainlivenews.com/if-the-congress-is-lured-there-will-be-no-more-hindu-temples-and-monasteries/ ಖರ್ಗೆ ಕುಟುಂಬ ನೇತೃತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಮಂಜೂರಾಗಿದ್ದ ಐದು ಎಕರೆ ಭೂಮಿಯನ್ನು ಸದ್ದಿಲ್ಲದೆ ಕೆಐಎಡಿಬಿ ವಾಪಸ್ ಮಾಡುವ ಮೂಲಕ ಪರೋಕ್ಷವಾಗಿ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು. ಕರ್ನಾಟಕ ಕಾಂಗ್ರೆಸ್ನಲ್ಲಿ ಮೂಡಿದ ಬಿರುಕಿಗೆ ತೇಪೆ ಹಚ್ಚುವ ಭರದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಗ್ಯಾರಂಟಿಯಿಂದ ಆಗುವ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಅಪರೂಪಕ್ಕೆ ಸತ್ಯವನ್ನು ಹೇಳಿದ್ದಾರೆ. ತೇಪೆ ಹಚ್ಚಲು ಹೋಗಿ ಪಕ್ಷಕ್ಕೆ ಇನ್ನಷ್ಟು ಹಾನಿಯುಂಟು ಮಾಡಿದೆ ಅಂತ ಮಲ್ಲಿಕಾರ್ಜುನ್ ಖರ್ಗೆ…
ಬೆಂಗಳೂರು :- ಒಂದು ವೇಳೆ ಕಾಂಗ್ರೆಸ್ ಆಮಿಷಕ್ಕೆ ಒಳಗಾದ್ರೆ ಮುಂದೆ ಹಿಂದೂಗಳ ದೇವಸ್ಥಾನ, ಮಠಗಳು ಉಳಿಯಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. https://ainlivenews.com/chief-minister-siddaramaiahs-tongue-is-good-joshi/ ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ ದೇವಸ್ಥಾನ, ಶೃಂಗೇರಿ ಮಠಗಳೂ ಉಳಿಯುವುದಿಲ್ಲ ಎಂದರು. ಈಗ ಉಚಿತ ಬಸ್ಸು ಇದೆ ಎಂದು ಶೃಂಗೇರಿ, ಧರ್ಮಸ್ಥಳ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡುತ್ತಾರೆ ಎಂದು ಕಾಂಗ್ರೆಸ್‌ಗೆ ಮತ ಹಾಕಿದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ಸೂ ಇರುವುದಿಲ್ಲ. ನೋಡಲು ಧರ್ಮಸ್ಥಳ ಶೃಂಗೇರಿಯೂ ಇರುವುದಿಲ್ಲ. ಅದು ವಕ್ಫ್ ಅಂತ ಹೇಳುತ್ತಾರೆ ಎಂದು ಕಿಡಿಕಾರಿದರು. ವಕ್ಫ್ ಸಭೆಯ ನಡಾವಳಿಯಲ್ಲಿ ಸಿಎಂ ಸೂಚನೆ ಎಂದೇ ಉಲ್ಲೇಖಿಸಲಾಗಿದೆ. ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದ್ಯಾ? ಯಾವ ಕಾನೂನಿನಲ್ಲಿ ಬಂದಿದೆ? ವಕ್ಫ್ ಕಾಯ್ದೆ, ಕಂದಾಯ ಕಾಯ್ದೆಯಡಿ ವಕ್ಫ್ ಅದಾಲತ್ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಈ ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ ಸರ್ಕಾರದ ಸಂಶೋಧನೆ. ಕೇಂದ್ರ ಸರ್ಕಾರ ವಕ್ಫ್ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ.…