ಬೆಳಗಾವಿ: 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಸಹ ಒಂದಾಗಿದೆ. ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ರಾಜ್ಯದ ಮನೆ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಇನ್ನೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಈ ಹಣದಿಂದ ಸಾಕಷ್ಟು ಪ್ರಯೋಜನವಾಗಿದೆ. ಈ ಹಿಂದೆ ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಖರೀದಿ ಮಾಡಿರೋದು, ಅಜ್ಜಿಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಸೊಸೆಗೆ ಅತ್ತೆಯೊಬ್ಬರು ಫ್ಯಾನ್ಸಿ ಅಂಗಡಿ ಹಾಕಿಕೊಟ್ಟಿರೋದು ಸೇರಿದಂತೆ ಇನ್ನಿತರ ಮಾದರಿ ಕಾರ್ಯಗಳನ್ನು ಮಾಡಿರುವುದು ನೀವು ಕೇಳಿರುತ್ತೀರಿ, https://ainlivenews.com/drink-nutmeg-saffron-milk-before-going-to-bed-at-night-see-the-magic-in-your-body/ ಇದೀಗಮಹಿಳೆಯೊಬ್ಬರು ಖಾರ ಪುಡಿ ಮಾಡುವ ಯಂತ್ರ ಖರಿದೀಸಿದ್ದಾರೆ. ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಖದೀಸಿದ ಯಂತ್ರವನ್ನು, ಆಕೆಯ ಕಿರು ಉದ್ದಿಮೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಿದ್ದಾರೆ. ಗೃಹ ಲಕ್ಷ್ಮಿ ಹಣದಲ್ಲಿ ಅನೇಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದ್ದಾರೆ. …
Author: AIN Author
ಆನೇಕಲ್:- ಜಗಳ ಬಿಡಿಸಲು ಹೋದವರ ಮೇಲೆ ಬಂದೂಕಿನಿಂದ ಫೈರಿಂಗ್ ನಡೆದಿರುವ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಜರುಗಿದೆ. https://ainlivenews.com/the-fire-that-broke-out-in-the-car-that-fell-into-the-ditch-the-driver-was-burnt-to-death/ ಡಬಲ್ ಬ್ಯಾರಲ್ ಬಂದೂಕಿನಿಂದ ಫೈರಿಂಗ್ ನಡೆದಿದೆ. ಜಗಳ ಬಿಡಿಸಲು ಹೋಗಿದ್ದ ಸಂಪಗಿಗೆ ಗುಂಡೇಟು ಬಿದ್ದಿದ್ದು, ಚಂದ್ರಶೇಖರ್ ಬಂದೂಕಿನಿಂದ ಗುಂಡು ಹಾರಿಸಿದ ಆರೋಪಿ ಎಂದು ಹೇಳಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿ ಹೊಸಕೋಟೆ ಗ್ರಾಮದಲ್ಲಿ ಘಟನೆ ಜರುಗಿದೆ. ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಸಿಡಿ ಹೊಸಕೋಟೆ ಗ್ರಾಮದ ಮುನಿರಾಜು ವೆಂಬು ಅವರ ಮಗನಾಗಿದ್ದು ತಂದೆ ಮಕ್ಕಳು ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ ಬಿಡಿಸಲು ಮುನಿರಾಜು ಅವರ ಅಣ್ಣನಾದ ಸಂಪಂಗಿ ಹಾಗೂ ಪತ್ನಿ ಬಂದಿದ್ದಾರೆ. ಬಂದು ಸಮಾಧಾನ ಮಾಡಲು ಬಂದಿದ್ದ ಚಂದ್ರಶೇಖರ್ ಸಂಪಂಗಿಯ ಮೇಲೆ ಫೈರಿಂಗ್ ಮಾಡಿದ್ದಾನೆ. ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ಚಿಕ್ಕಬಳ್ಳಾಪುರ:-ಹಳ್ಳಕ್ಕೆ ಬಿದ್ದ ಕಾರಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಕಾರಿನ ಸಮೇತ ಚಾಲಕ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೊಲಪಲ್ಲಿ ಗ್ರಾಮದಲ್ಲಿ ಜರುಗಿದೆ. https://ainlivenews.com/channapatna-bandeppa-khashempur-votes-for-nikhil-kumaraswamy/ ಚಾಲಕನನ್ನು 48 ವರ್ಷದ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಈತ ವ್ಯಾಪಾರ ಮುಗಿಸಿಕೊಂಡು ಒಮಿನಿ ಕಾರಿನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಸಮೇತ ಚಾಲಕ ಸುಟ್ಟು ಹೋಗಿದ್ದಾನೆ. ಮೃತ ದೇಹವನ್ನು ಚಿಂತಾಮಣಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಚಿಯಾ’ ಎಂಬ ಪದವು ಸ್ಪ್ಯಾನಿಷ್ ಪದ ʼಚಿಯಾನ್’ನಿಂದ ಬಂದಿದೆ, ಇದರರ್ಥ ಎಣ್ಣೆಯುಕ್ತ. ತೈಲದ ಅಂಶವು ಇದರಲ್ಲಿ ಜಾಸ್ತಿ. ಚಿಯಾ ಬೀಜಗಳನ್ನು ಕನ್ನಡದಲ್ಲಿ ಕಾಮಕಸ್ತೂರಿ ಎನ್ನುತ್ತೇವೆ. ಸೂಪರ್ ಫುಡ್‌ಗಳಲ್ಲಿ ಒಂದಾದ ಈ ಚಿಯಾ ಬೀಜಗಳ ಮೂಲ ಮೆಕ್ಸಿಕೋ. ಮೂಲದ ವೈಜ್ಞಾನಿಕ ಹೆಸರು ಸಾಲ್ವಿಯಾ ಹಿಸ್ಪಾನಿಕಾ. ಆಧುನಿಕ ಯುಗದಲ್ಲಿ ಅನಾರೋಗ್ಯಕರ ಆಹಾರ ಹಾಗೂ ವ್ಯಾಯಾಮವಿಲ್ಲದೆ ಇರುವ ಜೀವನದಿಂದಾಗಿ ಹಲವಾರು ರೀತಿಯ ದೈಹಿಕ ಅನಾರೋಗ್ಯಗಳು ಕಾಡುವುದು ಇದೆ. ಅದರಲ್ಲೂ ಮುಖ್ಯವಾಗಿ ಬೊಜ್ಜಿನ ಸಮಸ್ಯೆಯು ಪ್ರತಿಯೊಬ್ಬರನ್ನು ಕಾಡುತ್ತಲೇ ಇರುವುದು. ಇದನ್ನು ನಿವಾರಣೆ ಮಾಡಲು ಕೆಲವರು ಎಲ್ಲಾ ರೀತಿಯಿಂದಲೂ ತುಂಬಾ ಶ್ರಮ ವಹಿಸುವರು. ಆದರೆ ಕೆಲವೇ ದಿನ ಇದರಿಂದ ಬೇಸತ್ತು ಮತ್ತೆ ಹಳೆಯ ಆಹಾರ ಕ್ರಮ ಹಾಗೂ ಜೀವನಶೈಲಿಗೆ ಮರಳುವರು. ಹೀಗಾಗಿ ದೇಹದ ಬೊಜ್ಜು ಹಾಗೆ ಉಳಿಯುವುದು. ಕೆಲವೊಂದು ಆಹಾರಗಳಿಂದಲೂ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಬಹುದು. ಅಂತಹ ಒಂದು ಆಹಾರವೆಂದರೆ ಅದು ಚಿಯಾ ಬೀಜ. ಚಿಯಾ ಬೀಜಗಳು ವೇಗವಾಗಿ ತೂಕವನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಚಿಯಾ…
ಬೆಂಗಳೂರು: ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು ಎಲ್ಲಿರಿಘು ಗೊತ್ತಿರುವ ವಿಚಾರ. ಇದೀಗ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸರ್ಕಾರ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ನಿರ್ದಿಷ್ಟವಾಗಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಫೋನ್‌ಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಭದ್ರತಾ ಸಲಹೆ ನೀಡಿದ್ದು, ಸೈಬರ್ ದಾಳಿಗಳ ಸಾಧ್ಯತೆಯ ಬಗ್ಗೆ ಎಚ್ಚರಿಸಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ ಫೋನ್‌ಗಳ ಹಳೆಯ ಮತ್ತು ಹೊಸ ಮಾದರಿಗಳೆರಡರಲ್ಲೂ ಬಹು ಭದ್ರತಾ ದೋಷಗಳಿವೆ. Samsung ಫೋನ್ ಬಳಕೆದಾರರು ತಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅಥವಾ ಫರ್ಮ್‌ವೇರ್ ನ್ನು ತ್ವರಿತವಾಗಿ ನವೀಕರಿಸಬೇಕು ಎಂದು ಸರ್ಟ್-ಇನ್ ಎಚ್ಚರಿಸಿದೆ. ಸ್ಯಾಮ್ಸಂಗ್ ಉತ್ಪನ್ನಗಳಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿವೆ. ಇದು ಸೈಬರ್ ಆಕ್ರಮಣಕಾರರಿಗೆ ಬೈಪಾಸ್ ಮಾಡಲು, ಸೂಕ್ಷ್ಮ ಡೇಟಾಗಳನ್ನು ಕದಿಯಲು ಮತ್ತು ಆಪರೇಟಿಂಗ್ ವ್ಯವಸ್ಥೆಯಲ್ಲಿ ಮಾಲ್‌ವೇರ್ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ” ಎಂದು CERT ತನ್ನ ಸೂಚನೆಯಲ್ಲಿ ತಿಳಿಸಿದೆ. ವರದಿಯ ಪ್ರಕಾರ, ಸ್ಯಾಮ್‌ಸಂಗ್ ಮೊಬೈಲ್ ಆಂಡ್ರಾಯ್ಡ್ 11, 12, 13 ಮತ್ತು 14 ಆವೃತ್ತಿಗಳು ಅಪಾಯದಲ್ಲಿವೆ. ಸೈಬರ್…
ರೈತರ ಬದುಕು ಇನ್ನಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ರೈತಾಪಿ ವರ್ಗ ಕೂಡ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆ ಮೂಲಕ 60 ವರ್ಷ ತುಂಬಿದ ರೈತರು ಕೂಡ ನೌಕರರಂತೆ ಪಿಂಚಣಿ ಪಡೆಯಬಹುದಾಗಿದೆ . ರೈತರಿಗೂ ಕೂಡ ಪಿಂಚಣಿ ಸೌಲಭ್ಯ ನೀಡುವ ಮುಖ್ಯ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ. ಈಗಾಗಲೇ ಈ ಯೋಜನೆಯಡಿ 21 ಲಕ್ಷ ರೈತರು ಹೆಸರು ನೊಂದಾಯಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ ರೈತರು ತಿಂಗಳಿಗೆ 3000 ದಂತೆ ವರ್ಷಕ್ಕೆ 36 ಸಾವಿರ ಪಿಂಚಣಿ ಪಡೆಯಬಹುದಾಗಿದೆ. ರೈತರಿಗೆ ಖಚಿತ ಪಿಂಚಣಿ ಸಿಗಲಿದೆ ಪ್ರಧಾನಮಂತ್ರಿ ಕಿಸಾನ್ ಮಾಂದನ್ ಯೋಜನೆಯಡಿ ರೈತರಿಗೆ 60 ವರ್ಷಗಳ ನಂತರ ಪಿಂಚಣಿ ನೀಡಲಾಗುವುದು. ವಿಶೇಷವೆಂದರೆ ನೀವು ಪಿಎಂ ಕಿಸಾನ್‌ನಲ್ಲಿ ಖಾತೆದಾರರಾಗಿದ್ದರೆ, ನಿಮಗೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಪಿಎಂ ಕಿಸಾನ್ ಮನ್ಧನ್ ಯೋಜನೆಯಲ್ಲಿ ನಿಮ್ಮ ನೇರ ನೋಂದಣಿಯನ್ನು…
ಸೂರ್ಯೋದಯ: 06:19, ಸೂರ್ಯಾಸ್ತ : 05:39 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ:ತೃತೀಯ ನಕ್ಷತ್ರ: ಅನುರಾಧಾ ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 01:30ನಿಂದ 03:00 ತನಕ ಅಮೃತಕಾಲ: ರಾ .12:20 ನಿಂದ ರಾ .2:02 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ: ಗಂಡ ಹೆಂಡತಿ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ, ರಾಜಕಾರಣಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಅನಿವಾರ್ಯವಾಗಿ ಎದುರಿಸಿ, ರಾಜಕಾರಣಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ಶುಭದಾಯಕ,ಸಿರಿಧಾನ್ಯ ವ್ಯಾಪಾರಸ್ಥರಿಗೆ ಅಧಿಕ ಲಾಭ,ಬಾಡಿ ಮಸೇಜ್, ಮೇಕಪ್, ವೃತ್ತಿ ಹೊಂದಿದವರಿಗೆ ಧನ ಲಾಭ, ಅತ್ತೆ ಸೊಸೆ ಭಿನ್ನಾಭಿಪ್ರಾಯ ಶುರು, ಉಪನ್ಯಾಸಕರಿಗೆ ಸಿಹಿಸುದ್ದಿ, ಆಸ್ತಿ ಮಾರಾಟದ ಅಡಚಣೆ ನಿವಾರಣೆ, ಪಾಲುದಾರಿಕೆ ಸಮಸ್ಯೆಗಳ ಪರಿಹಾರ, ಪತಿ-ಪತ್ನಿ ಭಿನ್ನಾಭಿಪ್ರಾಯದಿಂದ ಮುಕ್ತಿ, ಮುಕ್ತ ಮನಸ್ಸಿನಿಂದ ಸಂಸಾರ ಭೋಗ,ವಿವಾಹ ಸಮಸ್ಯೆಗಳಿಗೆ…
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರು ತಮ್ಮ ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲಿಯೇ ಪೊಲೀಸರು, ಗುರುಪ್ರಸಾದ್ ಅವರ 2ನೇ ಪತ್ನಿ ಸುಮಿತ್ರಾ ಅವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸುಮಿತ್ರಾ ಅವರು ಗರ್ಭಿಣಿ ಆಗಿದ್ದು, ಮತ್ತಿಕೆರೆಯ ತವರುಮನೆಗೆ ತೆರಳಿದ್ದರು. ಹೀಗಾಗಿ ಕಳೆದ ಏಳೆಂಟು ದಿನಗಳಿಂದ ಗುರುಪ್ರಸಾದ್ ಒಬ್ಬರೇ ಮಾದನಾಯಕನಹಳ್ಳಿ ಫ್ಲಾಟ್‌ನಲ್ಲಿ ಇದ್ದರು. ಇದೀಗ ಗಂಡ ಆತ್ಮಹತ್ಯೆಗೆ ಮಾಡಿಕೊಂಡ ಬೆನ್ನಲ್ಲಿಯೇ ಸುಮಿತ್ರಾ ಅಪಾರ್ಟ್‌ಮೆಂಟ್ ಬಳಿ ಆಗಮಿಸಿದ್ದಾರೆ. ಇನ್ನೂ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಗಂಡನ ಸಾವಿನಲ್ಲಿ ತಮಗೆ ಯಾವುದೇ ಅನುಮಾನ ಇಲ್ಲ ಎಂದು ಸುಮಿತ್ರಾ ಹೇಳಿದ್ದಾರೆ. ದೂರಿನ ಪ್ರತಿಯಲ್ಲೇನಿದೆ ಗೊತ್ತಾ.? ನಾನು ಸುಮಾರು 4 ವರ್ಷದ ಹಿಂದೆ 2020 ರಲ್ಲಿ ನಿರ್ದೇಶಕ ಗುರುಪ್ರಸಾದ್ ಅವರನ್ನು ಮದುವೆಯಾಗಿದ್ದೆ. ನನಗೆ ಒಂದು ಹೆಣ್ಣು ಮಗುವಿದೆ. ಈ ಹಿಂದೆ ಗುರುಪ್ರಸಾದ್ ಅವರಿಗೆ ಆರತಿ ಎಂಬುವವರ ಜೊತೆಗೆ ಮದುವೆಯಾಗಿತ್ತು. ಸದರಿ ಅವರೊಂದಿಗಿನ ಮದುವೆ ವಿಚ್ಚೆಧನವಾಗಿರುತ್ತದೆ. ಅವರು ಚಲನಚಿತ್ರ ನಿರ್ದೇಶಕರಗಿದ್ದರಿಂದ ನಾನು ಮದುವೆಯಾದೆ. ನಾಲ್ಕು ವರ್ಷ ಜೊತೆಗೆ…
ಬೆಂಗಳೂರು: ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನೂ ಗುರುಪ್ರಸಾದ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗುರುಪ್ರಸಾದ್ ಪ್ರತಿಭಾನ್ವಿತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ರೀತಿಯಲ್ಲಿ ಕೆಲಸ ಮಾಡಿದ್ದ. ಮಠ ಸಿನಿಮಾ ಮಾಡುವ ಪ್ರತಿ ದೃಶ್ಯವನ್ನು ಅಭಿನಯಿಸಿ ತೋರಿಸಿದ್ದ. ಆದರೆ ಯಶಸ್ಸಿನ ಬಳಿಕ ಬೆಳೆಸಿಕೊಂಡ ಚಟಗಳೇ ಆತನಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. https://ainlivenews.com/what-is-the-minimum-balance-in-the-bank-account-if-not-how-much-is-the-penalty/ ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ. ತಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ಸಿನಿಮಾದಲ್ಲಿ ವಿಪರೀತ ಡಬಲ್ ಮೀನಿಂಗ್ ಡೈಲಾಗ್ ಹಾಕುತ್ತಿದ್ದ. ಡಬಲ್ ಮೀನಿಂಗ್ ಡೈಲಾಗ್ ಬಳಸಬೇಡ ಎಂದು ಸಲಹೆ ನೀಡಿದ್ದೆ. ಅದಕ್ಕೆ ಆತ ನನ್ನ ವಿರುದ್ಧವೇ ಅಪಪ್ರಚಾರ ಮಾಡಿ ಜಗ್ಗೇಶ್ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ. ಇದರಿಂದ ನನಗೆ ಅಂದು…
ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬ ದರ್ಶನೋತ್ಸವವು ಅಕ್ಟೋಬರ್ 24ರಿಂದ ಪ್ರಾರಂಭಗೊಂಡಿತ್ತು. ಹಾಸನಾಂಬ ದೇವಿ ದರ್ಶನಕ್ಕೆ ಬೇರೆ ಬೇರೆ ಭಾಗಗಳಿಂದ ಭಕ್ತರು ಬಾರದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಕಳೆದ 10 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬೆ ಉತ್ಸವಕ್ಕೆ ಇಂದು ಮಧ್ಯಾಹ್ನ 12:33ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ದೇವಾಲಯದ ಗರ್ಭಗುಡಿಯನ್ನು ಶಾಸಕ ಹೆಚ್.ಪಿ ಸ್ವರೂಪ್‍ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸಂಸದ ಶ್ರೇಯಸ್‍ಪಟೇಲ್, ಡಿಸಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿಯವರ ಸಮಾಕ್ಷಮದಲ್ಲಿ ಮುಚ್ಚಲಾಯಿತು. https://ainlivenews.com/what-is-the-minimum-balance-in-the-bank-account-if-not-how-much-is-the-penalty/ ಪ್ರತಿ ವರ್ಷದಂತೆ ವಿಶ್ವ ರೂಪ ದರ್ಶನದ ಬಳಿಕ ನೆರೆದಿದ್ದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದಕ್ಕೂ ಮುನ್ನ ಬೆಳಿಗ್ಗೆ ಸಾರ್ವಜನಿಕ ದರ್ಶನ ಬೇಗ ಬಂದ್ ಮಾಡಿದ್ದರಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದಿನ ವರ್ಷ 2025 ಅ.9 ರಿಂದ ಅ.23 ರವರೆಗೆ ಹಾಸನಾಂಬೆ ದರ್ಶನೋತ್ಸವ ನಿಗದಿಯಾಗಿದೆ. ಭಕ್ತರ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತೆ 1000ರೂ, 300ರೂ…